Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Saturday 4 July 2020

ಸಿನಿಮಾ ಜಗತ್ತು



ಕುರ್ಚಿಯ ತುದಿಗೆ ತರುವಂಥ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ
ಕೊರಿಯನ್ ಚಿತ್ರಗಳು ಒಳ್ಳೆಯ ಆಯ್ಕೆಯಾಗಿರುತ್ತವೆ. ಈಗಾಗಲೇ ಕೊರಿಯನ್ ಫಿಲಂಸ್ ನೋಡುವವರು ಬಹುಶ ಈ ಸಿನಿಮಾಗಳನ್ನು ನೋಡಿರುತ್ತಾರೆ, ಹೊಸದಾಗಿ ಕೊರಿಯನ್ ಭಾಷೆಯ ಫಿಲಂಸ್ ನೋಡಬೇಕು ಎಂದು ಇರುವವರಿಗೆ ಇದೊಂದು ಒಳ್ಳೆಯ ಸ್ಟಾರ್ ಆಗಿರುತ್ತದೆ. ಬೇಸಿಕ್ ಇಂಗ್ಲಿಷ್ ತಿಳಿದರೂ ಸಾಕು ಸಬ್ ಟೈಟಲ್ ಇಂಗ್ಲಿಷ್ ನಲ್ಲಿದೆ ಅರಾಂಸೆ ಅರ್ಥವಾಗುತ್ತೆ.

-----------------
21ವರ್ಷದ ನಾಯಕ ತನ್ನ ತಂದೆ ತಾಯಿ ಅಣ್ಣನೊಂದಿಗೆ ಹೊಸ ಮನೆಗೆ ಕಾರಿನಲ್ಲಿ ಹೊರಡುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಚೆಂದದ ಮನೆ, ಬಹಳಷ್ಟು ಪ್ರೀತಿಸುವ ಹೆತ್ತವರು,ಅಣ್ಣ, ಹೀಗಿರುವಾಗ, ಅದೊಂದು ಮಳೆ ಸುರಿಯುವ ರಾತ್ರಿ ಸಹೋದರರಿಬ್ಬರೂ ಸಹ ಕೊಡೆ ಹಿಡಿದುಕೊಂಡು, ಒಂದಿಷ್ಟು ದೂರ ಹೋಗಿ ಬರೋಣ ಎಂದು ಹೊರಡುತ್ತಾರೆ, ಎತ್ತರದಿಂದ ವಿದ್ಯುತ್ ದೀಪಗಳ ಬೆಳಕು ಮಾತ್ರವೇ ಕಾಣುವ ಸಿಟಿಯ ಚಿತ್ರಣ ಅದೆಷ್ಟು ಚೆಂದ ಎಂದು ನೋಡುತ್ತಾ ಇರುವಾಗ ಅಣ್ಣನಿಗೆ ಫೈಲ್ ಬೇಕಿತ್ತು ಎಂದು ತಂದೆ ಕಾಲ್ ಮಾಡಿ ಕೇಳುವಾಗ ಇರೀ ಬಂದೆ ಎಂದು ನೀ ಇಲ್ಲೇ ಇರು ಅಪ್ಪನಿಗೆ ಫೈಲ್ ಕೊಟ್ಟು ಬರುತ್ತೇನೆ ಎಂದು ಅಣ್ಣ ಹೊರಡುತ್ತಾನೆ, ಅವನೊಂದು ಹತ್ತಿಪ್ಪತ್ತು ಹೆಜ್ಜೆ ಇಡುತ್ತಾ ಇದ್ದ ಹಾಗೆ ಎಲ್ಲಿಂದಲೋ ಕಾರಿನಲ್ಲಿ ವೇಗವಾಗಿ ಬಂದ ನಾಲ್ವರು ಅವನನ್ನು
ಹೊಡೆದು ಕಾರಿನೊಳಗೆ ಎಳೆದು ಹಾಕಿಕೊಳ್ಳಲು ಯತ್ನಿಸುತ್ತಾರೆ, ಅದನ್ನು ನೋಡಿ ಓಡಿ ಬರುವ ತಮ್ಮನ ಕೈಗೆ ಅವರು ಸಿಗುವ ಮೊದಲೇ ಕಾರಿನೊಳಗೆ ಎಳೆದು ಹಾಕಿಕೊಂಡು ಅಲ್ಲಿಂದ ಹೊರಡುತ್ತಾರೆ ಕಣ್ಣ ಮುಂದೆಯೇ ಅಣ್ಣನ ಅಪಹರಣ ನಡೆಯುತ್ತೆ. ಕಾರಿನ ನಂಬರ್ ನೋಡುತ್ತಾನೆ, ದೂರು ನೀಡಿದರೂ ಅಣ್ಣನ ಸುಳಿವೇ ಸಿಗುತ್ತಿಲ್ಲಾ, ಆ ನಂಬರಿನಲ್ಲಿ ಯಾವುದೇ ಕಾರು ನೊಂದಾಣಿಕೆ ಆಗಿಲ್ಲ ಎನ್ನುವ ಉತ್ತರ. ಹೀಗೆ ಸಾಗುವಾಗ 19ದಿನಗಳ ನಂತರ ಅಣ್ಣ ಮನೆಗೆ ಬರುತ್ತಾನೆ. ಆತನಿಗೆ ತನ್ನನ್ನು ಎಳೆದುಕೊಂಡು ಹೋಗಿದ್ದು ಅಷ್ಟೇ ನೆನಪಿರೋದು ಅದಾದ ಮೇಲಿನ ಘಟನೆಗಳು ನೆನೆಪಿನಲ್ಲಿಲ್ಲಾ. ಸರಿ ಹೇಗೋ ಜೀವಂತ ಬಂದನಲ್ಲಾ ಅಷ್ಟೇ ಸಾಕು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಒಂದೊಂದು ದಿನವೂ ಸಾಗುತ್ತೆ. ತಮ್ಮನ ಅರಿವಿಗೆ ಮೆಲ್ಲನೆ ತೋಚುತ್ತೆ ತನ್ನೊಂದಿಗೆ ಇರೋದು ನನ್ನ ಅಣ್ಣನೆ ಅಲ್ಲಾ!. ಆತ ಬೇರೆ ಯಾರೋ ನನ್ನ ಅಣ್ಣನ ರೂಪದಲ್ಲಿದ್ದಾನೆ, ನನ್ನ ಅಣ್ಣನ್ನ ಹಿಂದಿನ ಯಾವುದೇ ವಿಷಯಗಳು ಇವನ್ನಲ್ಲಿ ಕಾಣುತ್ತಿಲ್ಲ ಇದನ್ನು ಪತ್ತೆ ಹಚ್ಚಲೇ ಬೇಕು ಎಂದು ಒಂದೇ ಕೋಣೆಯಲ್ಲಿ ಮಲಗಿದ್ದರೂ ಸಹ ನಿದ್ರಿಸಿದಂತೆ ನಟಿಸಿ ಮಲಗಿರುತ್ತಾನೆ. ಆಗ ಕೋಣೆಯ ಬಾಗಿಲು ತೆರೆದ ಸದ್ದಾಗುತ್ತೆ ಮೆಲ್ಲನೆ ಕಣ್ಣು ಬಿಟ್ಟು ನೋಡಿದರೆ ಮುಂದಿರುವ ಬೆಡ್ ನ ಮೇಲೆ ಅಣ್ಣನಿಲ್ಲಾ! ಕಥೆ ಇಲ್ಲಿಂದ ರೋಚಕವಾಗಿ ಸಾಗುತ್ತೆ ಸರಿಯಾಗಿ ಅರ್ಧ ಗಂಟೆಗೆ ಒಂದು ಟ್ವಿಸ್ಟ್.. ಉಳಿದಿದ್ದನ್ನು ದೃಶ್ಯಗಳಲ್ಲಿ ನೋಡಿ ಎಂಜಾಯ್ ಮಾಡಿ...


------------------
ನಾವು ನೆಮ್ಮದಿಯಾಗಿ ಸಂತೋಷವಾಗಿ ಬದುಕುತ್ತಾ ಇರುವ ಮನೆಯೊಳಗೇ ನಾವು ಮಾತ್ರವಿಲ್ಲ ನಮ್ಮೊಂದಿಗೆ ಇನ್ಯಾರೋ ಇದ್ದಾರೆ! ಅದು ಯಾರು ಯಾಕಿದ್ದಾರೆ? ಎನ್ನುವುದರೊಂದಿಗೆ ಕಥೆ ಆರಂಭವಾಗುತ್ತದೆ.ಶ್ರೀಮಂತ ಕುಟುಂಬ ಹೆಂಡತಿ ಇಬ್ಬರು ಮುದ್ದಾದ ಮಕ್ಕಳು. ಹೀಗಿರುವಾಗ ನಾಯಕನಿಗೊಂದು ಕರೆ, ನಿಮ್ಮ ಅಣ್ಣ ಎಲ್ಲೋ ಕಳೆದು ಹೋಗಿದ್ದಾರೆ ತುಂಬಾ ದಿನದಿಂದ ಅವರಿದ್ದ ಕೋಣೆಗೆ ಬಂದಿಲ್ಲಾ ಎಂದು. ತಾಯಿಯ ಮರಣದ ನಂತರ ಯಾವುದೇ ಸಂಬಂಧವೂ ಬೇಡ ಎಂದು ಎಲ್ಲರಿಂದಲೂ ದೂರವಿದ್ದೋ ಈಗ ಅಣ್ಣ ಕಾಣೆ ಆಗಿದ್ದಾನೆ ಎನ್ನುವ ಸುದ್ದಿ. ಸರಿ ಒಮ್ಮೆ ಹೋಗಿ ವಿಚಾರಿಸಿ ಬರೋಣ ಎಂದು ಕುಟುಂಬದೊಂದಿಗೆ ತನ್ನ ಆಡಿ ಕಾರಿನಲ್ಲಿ ಹೊರಡುತ್ತಾನೆ. ಕ್ಷಣಕ್ಕೊಮ್ಮೆ ಕೈ ತೊಳೆಯುವ ಅತ್ಯಂತ ಕ್ಲೀನ್ ಆಗಿರಬೇಕು ಎಂದು ಬಯಸುವ ನಾಯಕ ಅವರಣ್ಣನ ಕೋಣೆ ಒಳಗೆ ಹೋಗುತ್ತಾ ಇದ್ದ ಹಾಗೆ ಮೂಗಿಗೆ ಬಡಿಯುವ ಕೊಳತೆ ವಾಸೆ. ಮನೆಯಲ್ಲಿ ಒಂದಿಷ್ಟೂ ಶುದ್ಧವಾಗಿರದ ಜಾಗ. ಎಲ್ಲಿ ನೋಡಿದರೂ ಕಸ. ಆ ಅಪಾರ್ಟ್ಮೆಂಟ್ ಬಡವರಿರುವ ಜಾಗ. ಕೋಣೆಯಾ ಒಳಗಿಂದ ಹೊರ ಬಂದು ಎಲ್ಲರ ಮನೆಗೂ ಹೋಗಿ ವಿಚಾರಿಸುತ್ತಾನೆ. ಆ ಮನೆಯಲ್ಲಿ ಇದ್ದವರನ್ನು ನೋಡಿದ್ದೀರಾ? ಅಲ್ಲಿ ನನ್ನ ಸಹೋದರ ಇದ್ದರು. ಹೀಗೆ ಕೇಳುವಾಗ ಒಬ್ಬರೂ ಆತನಿಗೆ ಸರಿಯಾಗಿ ಉತ್ತರಿಸುವುದಿಲ್ಲಾ ಮುಖಕ್ಕೆ ಹೊಡೆದ ಹಾಗೆ ಬಾಗಿಲು ಬಡಿಯುತ್ತಾರೆ. ಹೀಗೆ ಪ್ರತಿ ಮನೆಯ ಕಾಲಿಂಗ್ ಬೆಲ್ ನ ಕಡೆ ನೋಡುವಾಗ ಅಲ್ಲೇನೆ ಬರೆದಿರುವುದನ್ನು ನೋಡುತ್ತಾನೆ. ಅದೇನು ಅಂದ್ರೆ ಆ ಮನೆಯೊಳಗೇ ಎಷ್ಟು ಜನರಿದ್ದಾರೆ ಅದರಲ್ಲಿ ಎಷ್ಟು ಗಂಡು ಎಷ್ಟು ಹೆಣ್ಣು ಎಂದು ಬರೆದಿರುತ್ತಾರೆ, a ಚಿಹ್ನೆಗಳನ್ನು ನೋಡುತ್ತಾ ಹೊರ ಬರುತ್ತಾನೆ. ಹೀಗೆ ಬೀದಿಗೆ ಬರುವಾಗ ಅಲ್ಲಿರುವ ಒಬ್ಬರು ಆ ಕುಟುಂಬವನ್ನು ಕರೆದುಕೊಂಡು ಹೋಗಿ ಕಾಫಿ ಮಾಡಿ ಕೊಡುತ್ತಾರೆ. ಏನು ವಿಷಯ ಎಂದು ಕೇಳುವಾಗ ಹೀಗೆ ನಾವು ನಮ್ಮ ಅಣ್ಣನ್ನ ಹುಡುಕಿಕೊಂಡು ಬಂದೋ ಅವರು ಇಲ್ಲೇ ಇರೋದು ಎಂದು ಆ ಅಪಾರ್ಟ್ಮೆಂಟ್ ನ ಕೋಣೆಯ ಸಂಖೆ ಹೇಳುತ್ತಾ ಇದ್ದ ಹಾಗೆ ಕೊಟ್ಟ ಕಾಫಿಯನ್ನು ಕಿತ್ತುಕೊಂಡು ಮೊದಲು ಇಲ್ಲಿಂದ ಹೊರಡಿ ಎಂದು ಎಲ್ಲರನ್ನೂ ಹೊರಗೆ ತಳ್ಳಿ ಮನೆ ಬಾಗಿಲು ಹಾಕಿಕೊಳ್ಳುತ್ತಾರೆ. ಯಾಕೆ ಏನಾಯಿತು ಎಂದು ಕೇಳುವಾಗ. ನಿಮ್ಮ ಅಣ್ಣನಿಗೆ ಎಲ್ಲವನ್ನೂ ನಿಲ್ಲಿಸಕ್ಕೆ ಹೇಳಿ ಅವನಿಂದ ನನ್ನ ಮಕ್ಕಳು ಹೆದರಿ ಮೂತ್ರ ಮಾಡಿಕೊಳ್ಳುತ್ತವೆ, ಪ್ರತಿ ರಾತ್ರಿಯೂ ನನಗೆ ನಿದ್ದೆ ಇಲ್ಲ ಇದ್ರಿಂದ ಸುಮ್ನೆ ಇರಕ್ಕೆ ಹೇಳಿ ನಿಲ್ಲಿಸಕ್ಕೆ ಹೇಳಿ ಎನ್ನುತ್ತಾ ಹೋಗಿ ಹೋಗಿ ಎಂದು ಕಿರುಚುತ್ತಾರೆ. ಸರಿ ಎಂದು ಮನೆಯತ್ತಾ ಆತ ಅಲ್ಲೇ ಇದ್ದು ಸ್ವಲ್ಪ ಹುಡುಕಾಡಿ ಅಲ್ಲಿಂದ ಮನೆಗೆ ಬರುತ್ತಾನೆ ತನ್ನ ಮನೆಯ ಕಾಲಿಂಗ್ ಬೆಲ್ಲಿನ ಕೆಳಗೂ ಅಲ್ಲಿ ಬರೆದಿದ್ದ ಹಾಗೆಯೇ ಬರೆದಿದೆ! ಆತನಿಗೆ ಶಾಕ್ ಎಲ್ಲರಾ ಮನೆಯನ್ನು ಒಮ್ಮೆ ಹೋಗಿ ಹೋಗಿ ನೋಡುತ್ತಾರೆ ಎಲ್ಲರ ಮನೆಯ ಮುಂದೆಯೂ ಹಾಗೆ ಬರೆದಿದೆ. ಅಂದ್ರೆ ನಾವ್ ಇಲ್ಲದಿದ್ದಾಗ ಇಲ್ಯಾರೋ ಬಂದಿದ್ದಾರೆ.. ಕಥೆ ಇನ್ನೂ ಸ್ಪೀಡ್ ತೆಗೆದುಕೊಳ್ಳುತ್ತೇ. ಊಹಿಸಕ್ಕೆ ಆಗದಂಥ ಟ್ವಿಸ್ಟ್ ಇದೆ.

ಎರಡೂ ಚಿತ್ರಗಳನ್ನು ಮನೆಮಂದಿಯೊಂದಿಗೆ ಅರಾಂಸೆ ನೋಡಬಹುದು.

No comments:

Post a Comment