Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday 30 June 2020

ಜೂಲಿಯನ್ ಅಸ್ಸಾಂಜೆ

Julian Assange fathered two children with lawyer in embassy ...


ಜಗತ್ತಿನಲ್ಲೊಂದು ದೊಡ್ಡ ವ್ಯವಸ್ಥೆ ಇದೆ. ಅದರ ಅಡಿಯಲ್ಲಿಯೇ ಪ್ರಜೆಗಳು ಬಾಳುತ್ತಾರೆ. ಒಬ್ಬ ಜನ ಸಾಮಾನ್ಯ ಮಾಡುವ ಚಟುವಟಿಕೆಗಳು, ಸರ್ಕಾರದ ಕಣ್ಣಿಗೆ ಕಾಣಿಸುತ್ತೆ, ಸರ್ಕಾರದ ಕಣ್ಣು ಅವರು ನಮಗೆ ನೀಡಿರುವ ಹಲವಾರು ಸರ್ಕಾರಿ ದಾಖಲೆಗಳ ಮೂಲಕ ನಾವು ಮಾಡುವ ಪ್ರತಿಯೊಂದು ವ್ಯವಹಾರದ ದಾಖಲೆ ಅವರಿಗೆ ಸೇರುತ್ತಾ ಇರುತ್ತೆ. ನಾವೇನಾದರೂ ದೇಶ ದ್ರೋಹ ಅಂತಹ ಚಟುವಟಿಕೆಯಲ್ಲಿ ಭಾಗಿಯಾದರೂ ಸಹ ಅದು ಸರ್ಕಾರದ ಕಣ್ಣಿಗೆ ಬಿದ್ದೆ ಬೀಳುತ್ತೆ. ಅದಕ್ಕೆ ನಮಗೆ ಶಿಕ್ಷೆಯೂ ಆಗುತ್ತೆ. ಇದು ಯಾವುದೇ ಸರ್ಕಾರವಿರಲಿ ಬದಲಾವಣೆ ಆಗುವುದಿಲ್ಲಾ. ಆದರೆ ಆ ಸರ್ಕಾರಗಳೇ ಮಾಡುವ ಪ್ರಜಾ ದ್ರೋಹಕ್ಕೆ? ದೇಶ ದ್ರೋಹಕ್ಕೆ ನ್ಯಾಯ ಕೇಳೋರು ಯಾರು? ಅದಕ್ಕಾಗಿಯೇ ಪಕ್ಷಗಳು ಇವೆ ಎಂದು ನಿರಾಳವಾಗುವವೇನು? ಅವರ ಮೇಲೊಂದಿಷ್ಟು ಹಗರಣದ ಆರೋಪ ಇವರು, ಇವರ ಮೆಲ್ಲೊಂದಿಷ್ಟು ಹಗರಣಗಳ ಆರೋಪ ಅವರು ಹೊರೆಸುತ್ತಾರೆ. ಅಧಿಕಾರಕ್ಕೆ ಬಂದು ಯಾರನ್ನೂ ಬಂಧಿಸಿದ, ಯಾರಿಂದಲೂ ಕದ್ದಿದ್ದಾರೆ ಎನ್ನುವ ಹಣವನ್ನು ವಶ ಪಡಿಸಿಕೊಳ್ಳದೆ, ಹೇಗೋ ನಮ್ಮನ್ನು ಮರೆಸಿ ಇವರು ಒಂದಿಷ್ಟು ಮಾಡ್ಕೊಂಡು ಸುಮ್ನಾಗ್ತಾರೆ. ಅವರ ವಿರುದ್ಧ ಒಬ್ಬ ಸಾಮಾನ್ಯ ಪ್ರಜೆಯಿಂದ ನ್ಯಾಯ ಕೇಳಲು ಸಾಧ್ಯವೇ? ಅವರು ಮಾಡಿರುವ ತಪ್ಪನ್ನು ಜಾಗತಿಕವಾಗಿ ತೋರಿಸಿ ಬೆತ್ತಲಾಗಿಸಲು ಸಾಧ್ಯವೇ? ಇದೆಲ್ಲಾ ಪ್ರಶ್ನೆಯಾಗಿಯೇ ಇದ್ದಾಗಲೇ ತುಳಿಯಲ್ಪಟ್ಟವರ ಧ್ವನಿಯಾಗಿ ಬಂದವನೇ ಜೂಲಿಯನ್ ಅಸ್ಸಾಂಜೆ! ಆತ ಹುಟ್ಟಿದ್ದು 3 July 1971,ಆಸ್ಟ್ರೇಲಿಯಾದಲ್ಲಿ. ತಾಯಿ ಉಡುಗೊರೆಯಾಗಿ ನೀಡಿದ ಕಂಪ್ಯೂಟರ್ ನಲ್ಲಿ, ಮೊದಮೊದಲು ಎಲ್ಲ ಮಕ್ಕಳಂತೆ ಗೇಮ್ಸ್ ಆಡಿಕೊಂಡು ಕಾಲ ಕಳೆಯುತ್ತಾ ಇದ್ದವನಿಗೆ. ಹ್ಯಾಕಿಂಗ್ ಮೇಲೆ ಆಸಕ್ತಿ ಹುಟ್ಟುತ್ತದೆ. ಅದಾದ ನಂತರ ಹ್ಯಾಕಿಂಗ್ ಕುರಿತು ಓದಲು ಶುರು ಮಾಡುತ್ತಾನೆ. ಕೋಡಿಂಗ್, ಪ್ರೋಗ್ರಾಮಿಂಗ್ ಎಲ್ಲವನ್ನೂ ಒಂದೊಂದೇ ಕಲಿತ. ಕಲಿತು ಅದನ್ನು ತನ್ನ ಸ್ವಾರ್ಥಕ್ಕೆ ಬಳಸದೆ, ಒಳ್ಳೆಯ ರೀತಿಯಲ್ಲಿ ಬಳಸಬೇಕು ಎಂದು ನಿರ್ಧರಿಸಿಯೇ. ಮೆನ್ದಕ್ಷ್ ಎನ್ನುವ ಹೆಸರಿನಲ್ಲಿ, ಸರ್ಕಾರದ ನಾನಾ ವೆಬ್ ಸೈಟ್ಗಳನ್ನು ಹ್ಯಾಕ್ ಮಾಡಿ ಅದರ ಮಾಹಿತಿಯನ್ನು ಶೇಖರಿಸಿದ ಕಾರಕಕ್ಕಾಗಿ ಆತನನ್ನು ಬಂಧಿಸುತ್ತಾರೆ ಆಗ ಆತನಿಗೆ ಹದಿನಾರು ವರ್ಷದ ಪ್ರಾಯ. ತಪ್ಪನ್ನು ಒಪ್ಪಿಕೊಂಡಿದ್ದು. ಒಳ್ಳೆಯ ನಡತೆಯ ಕಾರಣಕ್ಕಾಗಿ ಅಪರಾಧದೊಂದಿಗೆ ಐದು ವರ್ಷಗಳ ಸೆರೆವಾಸದ ಬಳಿಕ ೧೯೯೧ರಲ್ಲಿ ಬಿಡುಗಡೆಯಾಗುತ್ತಾನೆ. ಹತ್ತು ವರ್ಷಗಳ ಕಾಲ ಯಾವುದೇ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳದೆ. ೨೦೦೬ರಲ್ಲಿ ವಿಕಿಲೀಕ್ಸ್ ಎನ್ನುವ ಒಂದು ನೋನ್ ಪ್ರಾಫಿಟ್ ವೆಬ್ ಸೈಟ್ ಆರಂಭಿಸುತ್ತಾರೆ. ಅದಕ್ಕೆ ಭೇಟಿ ಕೊಡುವವರು ತಮ್ಮ ಬಳಿ ಯಾವುದಾದರೂ ಮಹತ್ವದ ದಾಖಲೆಗಳಿದ್ದರೆ. ಅದನ್ನು ಅಸ್ಸಾಂಜೆ ಗೆ ನೀಡಬಹುದು. ನೀಡುವವರ ಮಾಹಿತಿ ಕ್ಷಣ ಮಾತ್ರದಲ್ಲಿ ಅಳಿಸಿ ಹೋಗುವಂತೆ ಪ್ರೋಗ್ರಾಮ್ ಮಾಡಲ್ಪಟ್ಟಿರುತ್ತೆ. ಇದು ಹೇಗೆ ಕೆಲಸ ಮಾಡುತ್ತೆ ಎಂದರೆ ಕನ್ನಡದಲ್ಲಿ ವಿಷ್ಣುವರ್ಧನ್ ಅವರ ಅಭಿನಯದಲ್ಲಿ ವಿಷ್ಣುಸೇನ ಎನ್ನುವ ಒಂದು ಚಿತ್ರ ಬಂದಿತ್ತು. ತಪ್ಪು ಮಾಡುವವರ ಮಾಹಿತಿಯನ್ನು ಅದೇ ಆಫೀಸ್ ನಲ್ಲಿರುವ ಒಬ್ಬರು ನಾಯಕನಿಗೆ ನೀಡುತ್ತಾರೆ ನಾಯಕ ಆ ತಪ್ಪು ಮಾಡಿರುವವರಿಗೆ ಶಿಕ್ಷೆ ನೀಡುತ್ತಾನೆ. ಹೀಗೆಯೇ ಜೂಲಿಯನ್ ಅಸ್ಸಂಜೆ ಸಹ ಕಾರ್ಯನಿರ್ವಹಿಸುತ್ತಿದ್ದ. ಅವನ ವಿಕಿಲೀಕ್ಸ್ ನಲ್ಲಿ ಒಂದೊಂದು ಪ್ರಕಟಣೆ ಹೊರ ಬರುವಾಗಲೂ ಜಾಗತಿಕ ನಾಯಕರಲ್ಲಿ ಅದು ತಲ್ಲಣ ಸೃಷ್ಟಿಸುತ್ತಿತ್ತು. ಅವನ ವೆಬ್ ಸೈಟ್ ಹೇಗಾದರೂ ಮಾಡಿ ಬ್ಲಾಕ್ ಮಾಡಬೇಕು ಎಂದು ನಿರ್ಧರಿಸಿದವರಿಗೆ ಅಲ್ಲೂ ನಿರಾಶೆ ಕಾದಿತ್ತು. ಜೂಲಿಯನ್ ಎಲ್ಲಿಯೂ ಕದ್ದು ಪ್ರಕಟಿಸುತ್ತಾ ಇಲ್ಲ. ಯಾರೋ ನೀಡುವುದನ್ನು ಅವರು ಪ್ರಕಟಿಸುತ್ತಾರೆ ಹಾಗಾಗಿ ಅದನ್ನು ಬ್ಲಾಕ್ ಮಾಡಲು ಸಾಧ್ಯವಿಲ್ಲ ಎನ್ನುವ ಉತ್ತರ ಕೇಳಿ ಅಮೆರಿಕಾದಂತಹ ಅಮೇರಿಕ ಕೈಯಿಂದಲೇ ಏನೂ ಮಾಡಲು ಆಗಲಿಲ್ಲ.


ಉಳಿದಿರೋದು ಹೇಗಾದರೂ ಅವನ ಮೇಲೊಂದಿಷ್ಟು ಸುಳ್ಳಿನ ಆರೋಪಗಳನ್ನು ಹೊರಸಿ ಬಂಧಿಸಬೇಕು ಎಂದು ನಿರ್ಧರಿಸಿ ಅದಕ್ಕೆ ಪ್ರಯತ್ನ ಪಟ್ಟರು. ಹೀಗಿರುವಾಗ, ಅಮೇರಿಕಾದ ಸೈನ್ಯದಲ್ಲಿ army intelligence analyst ಆಗಿ ಕೆಲಸ ಮಾಡುವ ಜೆಲ್ಸಿ ಮೆನಾಗ್ ಎನ್ನುವ ಲೇಡಿಯ ಕಣ್ಣಿಗೆ ಅಮೇರಿಕ ಸೈನ್ಯ ಇರಾಕ್ ನಲ್ಲಿ ನಡೆಸಿದ ಒಂದು ಪೈಶ್ಚಾಚಿಕ ಕೃತ್ಯವೆಸಗಿದ ವೀಡಿಯೊ ದೃಶ್ಯವನ್ನು ಕಂಡು. ಇಂಥದೊಂದು ಅನ್ಯಾಯವನ್ನು ಜಗತ್ತಿಗೆ ಹೇಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆ ವೀಡಿಯೊ ದಾಖಲೆಯನ್ನು ತೆಗೆದುಕೊಂಡು. ಹೆಸರಾಂತ ಮಾಧ್ಯಮಗಳನ್ನು ಸಂಪರ್ಕಿಸುತ್ತಾರೆ. ಅಮೇರಿಕಾದ ವಿಷಯಕ್ಕೆ ಕೈ ಹಾಕುವ ತಾಕತ್ತು ಯಾರಿಗಿದೆ? ಹಾಗಾಗಿ ಎಲ್ಲರೂ ನಮ್ಮಿಂದಾಗದು ಎಂದು ಕೈಚೆಲ್ಲಿದಾಗ. ಆಗ ಅವರಿಗೆ ನೆನಪಾದವರೇ ಜೂಲಿಯನ್ ಅಸ್ಸಾಂಜೆ. ಆ ದಾಖಲೆಗಳನ್ನು ಅಸ್ಸಾಂಜ್ಗೆ ಕಳುಹಿಸುತ್ತಾರೆ. ಅದನ್ನು ನೋಡಿದ ಅಸ್ಸಾಂಜೆ ತಮ್ಮ ವಿಕಿಲೀಕ್ಸ್ ನಲ್ಲಿ ಪ್ರಕಟಿಸುತ್ತಾರೆ. ಇಡೀ ಜಗತ್ತಿನ ಮುಂದೆ ಅಮೇರಿಕ ಬೆತ್ತಲಾಗಿಸಿದ ವೀಡಿಯೊ ಅದು. ಇದೆ ಆ ವೀಡಿಯೊ (https://youtu.be/itt2XYfxQs4) ಇರಾಕ್ ನಲ್ಲಿ ಗಸ್ತು ತಿರುಗುತ್ತಿದ್ದ ಅಮೇರಿಕಾಗೆ ಸೇರಿದ ಹೆಲಿಕಾಪ್ಟರ್ ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ. ರಸ್ತೆಯಲ್ಲಿ ಬರುವ ಅಮಾಯಕ ಜನರನ್ನು ನೋಡಿದೊಡನೆ ಪೈಲೆಟ್ ಇಲ್ಲಿ ಒಂದಿಷ್ಟು ಜನರು ಬರುತ್ತಿದ್ದಾರೆ ಏನ್ ಮಾಡ್ಲಿ ಎಂದು ಕೇಳುತ್ತಾನೆ. ಆ ಕಡೆಯಿಂದ ಶೂಟ್ ಮಾಡು ಎನ್ನುವ ಸಂದೇಶ ಬರುತ್ತದೆ. ಕೂಡಲೇ ಶೂಟ್ ಮಾಡುತ್ತಲೇ ಇರುತ್ತಾನೆ. ನಂತರ ಏನಾಗುತ್ತೆ ನೀವೇ ನೋಡಿ. ಈ ವೀಡಿಯೊವನ್ನು ನೋಡಿದ ಮೇಲೆ ಆಮೇಲೆ ಅಮೇರಿಕ ಸುಮ್ಮನಿರುತ್ತಾ?

ಇಲ್ಲಿಂದ ಜೂಲಿಯನ್ ಗೆ ನಿಜವಾದ ಹೋರಾಟದ ಅನುಭವ ಆಗುತ್ತೆ....


ಜಗತ್ತಿನ ದೊಡ್ಡಣ್ಣ ಎಂದು ಮೆರೆಯುವ ಅಮೇರಿಕಾದ ಮೇಲೆ ಅಂಥದೊಂದು ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ, ಜಾಗತಿಕವಾಗಿ ಅಮೇರಿಕಾದ ಬಣ್ಣವನ್ನು ಬಯಲು ಮಾಡಿದ ಜೂಲಿಯನ್ ಅಸ್ಸಾಂಜೆ. ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ಅಮೇರಿಕಾದ ಮುಂದೆ ತೊಡೆ ತಟ್ಟಲು ಹೆದರುವಾಗ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಬುಡಕ್ಕೆ ಕೈ ಹಾಕಿದನಲ್ಲ ಎಂದು ಎಂದು ಕುದ್ದುಹೋದ ಅಮೇರಿಕ ಅವನ ಮೇಲೆ ಏಕ್ದಂ ಮುಗಿಸುವ ಕೆಲಸ ಮಾಡಲಿಲ್ಲ ಕಾರಣ ಜಗತ್ತಿನ ಕಣ್ಣಿಗೆ ತನ್ನ ಮೇಲಿದೆ ಎಂದು ಅದಕ್ಕೆ ಚೆನ್ನಾಗಿ ಮನವರಿಕೆಯಾಗಿತ್ತು. ಹಾಗಾಗಿ ಅತ್ಯಂತ ನಾಚೂಕಾಗಿಯೇ ಅದನ್ನು ನಿಭಾಯಿಸಲು ಮುಂದಾದರು. ಮೊದಲಿ ರಹಸ್ಯ ದಾಖಲೆಗಳನ್ನು ಕದ್ದು ಸಾಗಿಸಿದ ಆರೋಪದ ಮೇಲೆ ಜೆಲ್ಸಿ ಮೆನಾಗ್ ಅವರನ್ನು ಬಂಧಿಸಲಾಯಿತು. ಹಾಗೆ ಜೂಲಿಯನ್ ಅಸ್ಸಾಂಜೆ ಮೇಲೂ ಅರೆಸ್ಟ್ ವಾರಂಟ್ ಜಾರಿ ಮಾಡಲಾಯಿತು. ಜುಲಿಯನ್ ನ ಬಂಧಿಸಿ ಕೋರ್ಟ್ ಗೆ ಒಪ್ಪಿಸಿದರು. ಕೋರ್ಟ್ ಇಂದ ಜಾಮೀನ್ ಪಡೆದು ಹೊರ ಬಂದ ಜೂಲಿಯನ್. ಇನ್ನು ನಾನು ಇವರಿಗೆ ಸಿಕ್ಕರೆ ಖಂಡಿತ ನನ್ನನ್ನು ಜೀವಂತ ಇವರು ಹೊರ ಕಳುಹಿಸುವುದಿಲ್ಲ ಎನ್ನಿಸ ತೊಡಗಿತು. ಕಾರಣ ಈಗಾಗಲೇ ಜೂಲಿಯನ್ ಗೆ ಸಹಾಯ ಮಾಡಿದವರನ್ನು ಹಿಡಿದು ಚಿತ್ರಹಿಂಸೆ ನೀಡುತ್ತಿರುವ ಮಾಹಿತಿ ಅಸ್ಸಾಂಜೆ ಅವರ ಕಿವಿಗೆ ಬಿದ್ದಿರುತ್ತದೆ. ಹೀಗಿರುವಾಗ ದೇಶವನ್ನು ತೋರೆಯುವುದೇ ಉತ್ತಮ ಮಾರ್ಗ ಎಂದು ಯೋಚಿಸಿದ ಜೂಲಿಯನ್. ಜೇನಿವ ಒಪ್ಪಂದದ ಪ್ರಕಾರ ಯಾವುದೇ ದೇಶದ ಬಳಿ ಬೇಕಿದ್ದರೂ ತಾನು ಸಹಾಯ ಕೇಳಬಹುದು. ನನಗೆ ಜೀವಕ್ಕೆ ಅಪಾಯವಿದೆ ಸಹಾಯ ಮಾಡಿ ಎಂದು ನಾನಾ ದೇಶಗಳಿಗೆ ಭಾರತವನ್ನೂ ಸೇರಿಸಿ, ಮನವಿಯನ್ನು ಕಳುಹಿಸುತ್ತಾರೆ. ಎಲ್ಲರೂ ಅಮೆರಿಕಾದಂತಹ ದೇಶವನ್ನು ಎದುರು ಹಾಕಿಕೊಳ್ಳಲು ಇಷ್ಟವಿಲ್ಲದೆ. ಆ ಮನವಿಯನ್ನು ತಿರಸ್ಕರಿಸುತ್ತಾರೆ. ಒಂದು ಒಂದು ದೇಶ ಮಾತ್ರವೇ ಆತನಿಗೆ ಸಹಾಯ ಮಾಡಲು ಮುಂದಾಗುತ್ತದೆ ಅದುವೇ ಏಕ್ವಿಡರ್. ಆದರೆ ಆತ ಅದಾಗಲೇ ಬ್ರಿಟನ್ ನಲ್ಲಿದ್ದ ಅಲ್ಲಿ ಆತನಿಗೆ ಸಹಾಯ ಸಿಗದು. ಹಾಗಾಗಿ ಏಕ್ವಿಡರ್ ನ ರಾಯಭಾರಿ ಕಛೇರಿಯಲ್ಲಿಯೇ ಬಂದು ಉಳಿದುಕೊಳ್ಳುವಂತೆ ಸಲಹೆ ನೀಡುತ್ತಾರೆ.

ಒಂದು ದೇಶದ ರಾಯಭಾರಿ ಕಛೇರಿಯ ಒಳಗೆ ಯಾವ ದೇಶದ ಪೋಲಿಸ್ ಮಿಲಟರಿಗೂ ಅಪ್ಪಣೆ ಇಲ್ಲದೆ ಒಳ ಪ್ರವೇಶಿಸಲು ಸಾಧ್ಯವಿಲ್ಲ ಹಾಗಾಗಿ. ದೇಶದ ರಾಯಭಾರಿ ಕಛೇರಿಯ ಒಳ ಪ್ರವೇಶಿಸುವ ಅಸ್ಸಾಂಜೆ ಅಲ್ಲಿರುವ ಸಣ್ಣದೊಂದು ಕೋಣೆಯಲ್ಲಿ ಉಳಿದುಕೊಳ್ಳುತ್ತಾನೆ. ಆಗಲೂ ಆತ ಸುಮ್ಮನೆ ಕೂರುವುದಿಲ್ಲ. ಮತ್ತೆ ಅಮೇರಿಕಾದ ಚುನಾವಣೆಯ ಸಮಯದಲ್ಲಿಯೇ. ಅಮೇರಿಕ ಸರ್ಕಾರ ಹೇಗೆ ಜಗತ್ತಿನ ನಾನಾ ದೇಶಗಳ ಪ್ರಧಾನಿಗಳ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಕೆ ಮಾಡುತ್ತಿದೆ ಎನ್ನುವ ದಾಖಲೆಗಳನ್ನು ಬಿಡುಗಡೆಗೊಳಿಸುತ್ತಾನೆ. ಮತ್ತೊಮ್ಮೆ ಪೇಚಿಗೆ ಸಿಲುಕುತ್ತದೆ ಅಮೇರಿಕ. ಈ ಬಾರಿ ಹೌದು ನಾವು ಆ ತಪ್ಪು ಮಾಡಿದ್ದೇವೆ ಎಂದು ಹಿಲ್ಲರಿ ಕ್ಲಿಂಟನ್ ಕ್ಷಮೆ ಸಹ ಕೇಳುತ್ತಾರೆ. ಇದೂ ಸಹ ಅಮೇರಿಕಾದ ಚುನಾವಣೆಯಲ್ಲಿ ಹಿಲ್ಲರಿಗೆ ಹಿನ್ನಡೆ ಆಗಲು ಒಂದು ಕಾರಣವಾಗುತ್ತದೆ.

ಇದರ ಜೊತೆಗೆ ಟ್ವಿನ್ ಟವರ್ ದಾಳಿ ಕುರಿತಾದ ದಾಖಲೆಗಳು, ಇರಾಕ್ ನಲ್ಲಿ ಹೇಗೆ ಅಮೇರಿಕ ಅಮಾಯಕ ಜನರನ್ನು ಕೊಂದಿದೆ ಎನ್ನುವ ದಾಖಲೆಗಳನ್ನು ಬಿಡುಗಡೆ ಮಾಡುತ್ತಾ ಅಮೇರಿಕಾಗೆ ದೊಡ್ಡ ಹೊಡೆದ ನೀಡುತ್ತಲೇ ಇರುತ್ತಾನೆ.

ದೇಶಗಳ ರಹಸ್ಯವನ್ನು ಮಾತ್ರವಲ್ಲದೆ ಆಳುವ ವರ್ಗಗಳ ಮತ್ತು ಹಣವಂತರ ರಹಸ್ಯಗಳನ್ನು ಅಸ್ಸಾಂಜೆ ಬಿಡುಗಡೆ ಮಾಡಿದ್ದಾನೆ. ಹೆಸರಾಂತ ಸಿನಿಮಾ ನಿರ್ಮಾಣ ಸಂಸ್ಥೆ ಸೋನಿ ಪಿಚ್ಚರ್ಸ್. ತಮ್ಮದೊಂದು ಚಿತ್ರದಲ್ಲಿ ಕೆಲಸ ಮಾಡುವಂತೆ ಟೈಟಾನಿಕ್ ಖ್ಯಾತಿಯ Leonardo DiCaprioರನ್ನು ಸಂಪರ್ಕಿಸಿರುತ್ತದೆ. ಈಗ ಬೇರೆ ಪ್ರಾಜೆಕ್ಟ್ ಮಾಡುತ್ತಿರುವ ಕಾರಣ ಅದನ್ನು ಅವರು ನಿರಾಕರಿಸುತ್ತಾರೆ. ಇದಕ್ಕೆ ಕೋಪಗೊಂಡ ಸೋನಿ ಪಿಚ್ಚರ್ಸ್ ಆತನ ಬಗ್ಗೆ ಕೀಳುಮಟ್ಟದ ಮಾತುಗಳನ್ನು ಆಡಿರುತ್ತದೆ. ಅದರ emails ಅಸ್ಸಾಂಜೆ ಬಿಡುಗಡೆ ಮಾಡುತ್ತಾನೆ. ಆ ತಿಂಗಳು ಸೋನಿ ಪಿಚ್ಚರ್ಸ್ ನ ಶೇರ್ ಬಹಳ

ಕುಸಿತವನ್ನು ಕಾಣುತ್ತೆ. ಸೋನಿ ಪಿಚ್ಚರ್ಸ್ ಆಡಿರುವ ಮಾತುಗಳನ್ನು, ಜಗತ್ತಿನ ನಾನಾ ಭಾಗದ ಜನರು ಕಟುವಾಗಿ ಖಂಡಿಸುತ್ತಾರೆ. ಇದರ ಜೊತೆಗೆ ತನಗೆ ರಕ್ಷಣೆ ನೀಡಿರುವ ಏಕ್ವಿಡರ್ ದೇಶದಲ್ಲಿ ದೊಡ್ಡದೊಂದು ರಾಜಕೀಯ ಬದಲಾವಣೆ ಆಗುತ್ತದೆ. ಹೊಸದಾಗಿ ಪ್ರಧಾನಿಯಾದವರ ಕೆಲವು ರಹಸ್ಯಗಳನ್ನು ಸಹ ಅದೇ ಅಸ್ಸಾಂಜೆ ಬಿಡುಗಡೆ ಮಾಡುತ್ತಾನೆ. ತನ್ನ ರಕ್ಷಣೆಗಾಗಿಯೂ ಸಹ ಆತ ತನ್ನ ಕೆಲಸದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ತನ್ನ ಜೀವ ಹೋದರು ಚಿಂತೆ ಇಲ್ಲ. ತಾನು ವಹಿಸಿರುವ ಕೆಲಸವೇನು. ಜನರಿಗೆ ಸತ್ಯವನ್ನು ತಲುಪಿಸುವುದು. ಅದನ್ನು ನನ್ನ ಸ್ವಾರ್ಥಕ್ಕಾಗಿ ನಾನು ಒಂದನ್ನು ಮರೆಮಾಚಿದರೆ ನಾಳೆ ಇನ್ನೊಂದು ವಿಷಯಕ್ಕೆ ಇನ್ನೊಂದು ಸತ್ಯವನ್ನು ಮುಚ್ಚಿಡಬೇಕಾಗುತ್ತದೆ ಎಂದು.

ತನಗೆ ರಕ್ಷಣೆ ನೀಡಿರುವ ದೇಶದ ಹೊಸ ಪ್ರಧಾನಿ ಮಾಡಿರುವ ಹಲವಾರು ಹಗರಣಗಳನ್ನು. ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುತ್ತಾನೆ. ಇದರಿಂದ ಕೋಪಕೊಂಡ ಏಕ್ವಿಡರ್ ನ ಹೊಸ ಪ್ರಧಾನಿ ತನ್ನ ದೇಶ ನೀಡಿದ್ದ ರಕ್ಷಣೆಯನ್ನು ವಾಪಾಸ್ ಪಡೆಯುತ್ತಾರೆ. ಬ್ರಿಟನ್ ಅಥವಾ ಯುಕೆ ಪೋಲಿಸರು ಧಾರಾಳವಾಗಿ ತನ್ನ ದೇಶದ ರಾಯಭಾರಿ ಕಛೇರಿಗೆ ನುಗ್ಗಿ ಅಸ್ಸಾಂಜೆಯನ್ನು ಬಂಧಿಸಬಹುದು ಎನ್ನುವ ಪ್ರಕಟಣೆಯನ್ನು ಹೊರಡಿಸುತ್ತೆ. ಕೂಡಲೇ ಬ್ರಿಟನ್ ಪೋಲಿಸ್ ರಾಯಭಾರಿಯ ಕಛೇರಿಯನ್ನು ಸುತ್ತಿವರಿಯುತ್ತಾರೆ.


ಹೊರಗೆ ಎಲ್ಲೂ ಓಡಾಡಲು ಅವಕಾಶವಿಲ್ಲದೆ.

2009 ರಿಂದ 2019 ತನಕೆ ತನಗೆ ನೀಡಿದ್ದ ಎರಡು ಸಣ್ಣ ಕೋಣೆಗಳಲ್ಲಿ ಮಾತ್ರವೇ ಇದ್ದ ಕಾರಣ, ಅಸ್ಸಾಂಜೆ ಅವರ ಮುಖದಲ್ಲಿ ಸಾಕಷ್ಟು ಬದಲಾವಣೆ ಕಾಣಿಸುತ್ತೆ. ದೈಹಿಕವಾಗಿ, ಮಾನಸಿಕವಾಗಿಯೂ ಅಸ್ಸಾಂಜೆ ಕುಸಿದಿರುತ್ತಾರೆ.


2016ರಲ್ಲಿಯೇ ಅವರು ಬ್ರಿಟನ್ ನ ಕೇಳಿಕೊಂಡಿರುತ್ತಾರೆ, ನನಗೆ ದೈಹಿಕವಾಗಿ ಬಹಳ ತೊಂದರೆಗಳು ಆಗುತ್ತಿದೆ. ಒಬ್ಬನೇ ಒಂದೇ ಕೋಣೆಯಲ್ಲಿ ಇರುವುದು ಮಾನಸಿಕವಾಗಿಯೂ ನನ್ನಿಂದ ಸಾಧ್ಯವಾಗುತ್ತಿಲ್ಲ. ನೀವು ಅಪ್ಪಣೆ ಕೊಟ್ಟರೆ ನಾನು ರಾಯಭಾರಿಯ ಕಚೇರಿಯಿಂದ ಸುತ್ತ ಮುತ್ತ ವಾಕಿಂಗ್ ಮಾಡಲು ಮುಂದಾಗುತ್ತೇನೆ ಎನ್ನುವ ಮನವಿ ಇಡುತ್ತಾರೆ. ಆದರೆ ಅದಕ್ಕೆ ಒಪ್ಪಿಗೆ ಸಿಗುವುದಿಲ್ಲ. ನೀವು ಅಲ್ಲಿಂದ ತುಸು ಹೊರ ಬಂದರೂ ಸಹ ನಿಮ್ಮನ್ನು ಬಂಧಿಸುತ್ತೇವೆ ಎನ್ನುವ ಉತ್ತರವಷ್ಟೇ ಅವರಿಗೆ ಸಿಗುತ್ತದೆ.


ಈಗ ಆತನನ್ನು ಬ್ರಿಟನ್ ಬಂಧಿಸಿದೆ. ಅಮೇರಿಕಾಗೆ ಅವರನ್ನು ಒಪ್ಪಿಸುವ ಸಾಧ್ಯತೆಯೂ ಇದೆ.


ಏಕ್ವಿಡರ್ ಆತನಿಗೆ ನೀಡಿದ್ದ ರಕ್ಷಣೆಯನ್ನು ಹಿಂಪಡೆದ ಮರು ಗಳಿಗೆ ಏಕ್ವಿಡರ್ ದೇಶದ ಸರ್ಕಾರದ ಮೇಲೆ ಇಲ್ಲಿಯತನಕ ನಾಲಕ್ಕು ಕೋಟಿ ಸೈಬರ್ ದಾಳಿಗಳು ನಡೆದಿದೆ. ಸರ್ಕಾರದ ವೆಬ್ಸೈಟ್ ಗಳನ್ನು ಹ್ಯಾಕ್ ಮಾಡಿದ್ದಾರೆ. ನೀವು ಒಂದು ವಿಕಿಲೀಕ್ಸ್ ನ ಮುಚ್ಚಬಹುದು, ನಾವು ನೂರು ತೆರೆಯುತ್ತೇವೆ.


ನೀವು ಒಬ್ಬ ಅಸ್ಸಾಂಜೆಯನ್ನು ಬಂಧಿಸಬಹುದು ನಾವು ಸಾವಿರ ಅಸ್ಸಾಂಜೆ ಇದ್ದೀವಿ. ಆತನಿಗೆ ಏನಾದರೂ ಜೀವಕ್ಕೆ ಅಪಾಯವಾದರೂ ಇಡೀ ಜಗತ್ತು ತಲ್ಲಣವಾಗಬೇಕು ಹಾಗೆ ಇಡೀ ಜಗತ್ತಿನ ನಾನಾ ದೇಶಗಳ ರಹಸ್ಯಗಳು ಮರುಕ್ಷಣವೇ ನೆಟ್ ನಲ್ಲಿ ಪೋಸ್ಟ್ ಆಗುತ್ತದೆ ಎನ್ನುವ ಎಚ್ಚರಿಕೆಯನ್ನು ಜಗತ್ತಿನ ಬಲಿಷ್ಠವಾದ ಹ್ಯಾಕರ್ಸ್ ನೀಡಿದ್ದಾರೆ.


ಮುಂದೇನಾಗುತ್ತದೋ ಕಾದು ನೋಡಬೇಕು.

ಜೂಲಿಯನ್ ಅಸ್ಸಾಂಜೆ ಅಂತಹವರು ಬಹಳ ವಿರಳ. ಒಳ್ಳೆಯ ಜೀವನ ಕೈತುಂಬಾ ಸಂಬಳ. ಇದೆಲ್ಲವನ್ನೂ ಬಿಟ್ಟು ತುಳಿಯಲ್ಪಟ್ಟವರ ಧ್ವನಿಯಾಗಿ. ಸತ್ಯಕ್ಕೆ ಸಾಥಾಗಿ ನಿಲ್ಲುವುದು, ಜಗತ್ತಿನ ಬಲಿಷ್ಠ ರಾಷ್ಟ್ರ, ಸಿರಿವಂತರನ್ನೇ ಎದುರು ಹಾಕಿಕೊಳ್ಳುವ,


ಆತನ ಗುಣ ಯಾವ ಹೀರೋಗೂ ಕಡಿಮೆ ಅಲ್ಲ. ಅಸ್ಸಾಂಜೆ ಬಿಡುಗಡೆಯಾಗಲಿ. ಎಂದು ನಾವೂ ಬಯಸೋಣ.

No comments:

Post a Comment