Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday 15 July 2020

ತ್ರೀ ಥ್ರಿಲ್ಲರ್



Other Me (Greek)
--------------------
2016 ಗ್ರೀಕ್ ಭಾಷೆಯಲ್ಲಿ ಬಿಡುಗಡೆಯಾದ ಕ್ರೈಂ ಥ್ರಿಲ್ ಫಿಲಂ. ಈ ಚಿತ್ರವನ್ನು ಚಿತ್ರ ಮಂದಿರದಿಂದ ತೆಗೆಯುವಂತೆ ಈ ಚಿತ್ರದ ನಿರ್ದೇಶಕನೇ ಕೇಳಿಕೊಂಡು ತೆಗಿಸಿದ ಘಟನೆ ನಡೆದಿದೆ. ಮೊದಲಿಗೆ ಚಿತ್ರದ ಎಳೆ ಏನೆಂದು ಹೇಳೋದಾದರೆ. ಊರಿನಲ್ಲಿ ನಡೆಯುವ ಸರಣಿ ಕೊಲೆಗಳು ಆ ಸರಣಿ ಹಂತಕನ ಸುಳಿವೇ ಸಿಗದೇ ಪರದಾಡುವ ಪೊಲೀಸರಿಗೆ ಕ್ರಿಮಿನಾಲಾಜಿಕಲ್ ಲೆಕ್ಚರ್ ಆದ ನಾಯಕ ಸಹಾಯಕ್ಕೆ ಬರುತ್ತಾನೆ (ಈ ಎಳೆ ಎಲ್ಲೋ ನೋಡಿದ ಹಾಗೆ ಅನ್ನಿಸಿದರೆ ಈ ಎಳೆಯನ್ನೇ Anjaam Pathiraa ಎನ್ನುವ ಮಲೆಯಾಳಂ ಫಿಲಂ ನಲ್ಲಿ ಬಳಸಿಕೊಂಡಿದ್ದರು ಅದೂ ಸಹ ಒಳ್ಳೆಯ ಥ್ರಿಲರ್ ಫಿಲಂ) ಹೀಗೆ ಸಹಾಯಕ್ಕೆ ಬರುವ ನಾಯಕನಿಗೆ ಹಂತಕ ಒಬ್ಬ ಸೈಕೋ ಕಿಲ್ಲರ್ ಇರಬಹುದು ಆತ ಒಬ್ಬೊಬ್ಬರನ್ನು ಬರ್ಬರವಾಗಿ ಕೊಲ್ಲುವ ವಿಧಾನ ನೋಡಿದರೆ ಆತನೊಳಗೆ ಇರುವ ಆ ಕೋಪ ಕಾಣುತ್ತೆ ಜೊತೆಗೆ ಪ್ರತಿಯೊಂದು ಕೊಲೆಯ ನಂತರ ಆತ ಅಲ್ಲೊಂದು ವಾಕ್ಯ ಸಂಖ್ಯೆ ಬಿಟ್ಟು ಹೋಗುತ್ತಿದ್ದಾನೆ ಅದು ಏನನ್ನೋ ಸೂಚಿಸುತ್ತಾ ಇದೆ ಅದನ್ನ ನಾವು ಪತ್ತೆ ಹಚ್ಚಿದರೆ ಹಂತಕನ ಹತ್ತಿರಕ್ಕೆ ನಾವು ಹೋಗಬಹುದು ಎನ್ನುತ್ತಾರೆ, ಅದರಂತೆಯೇ ಒಂದೊಂದು ಕೊಲೆ ನಡೆಯುವಾಗಲೂ ಸಿಗುವ ಒಂದೊಂದೇ ಸುಳಿವನ್ನು ಹೆಣೆಯುತ್ತಾ ಹಂತಕ ಹತ್ತಿರಕ್ಕೆ ಹೇಗೆ ನಾಯಕ ಹೋಗಿ ಇಲ್ಳುತ್ತಾನೆ ಎನ್ನುವುದನ್ನು ಸ್ವಾರಸ್ಯಕರವಾಗಿ ತೋರಿಸಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಓಡುತ್ತಿರುವಾಗ. ಈ ಫಿಲಂ ನಲ್ಲಿ ಬರುವಂತೆಯೇ ೫೨ರ ವೃದ್ಧನ ಕೊಲೆ ಆ ಊರಿನಲ್ಲಿ ನಡೆಯುತ್ತೆ. ಅದಾದ ಕೆಲವೇ ದಿನದಲ್ಲಿ ಅಂಥದ್ದೇ ಇನ್ನೊಂದು ಕೊಲೆ ಅದು ಸಹ ಅಷ್ಟೇ ಬರ್ಬರವಾಗಿ ಟಾಕ್ಸಿ ಚಾಲಕನನ್ನು ಕೊಲ್ಲಲಾಗಿದೆ. ಪೊಲೀಸರು ಕೂಡಲೇ ಈ ಚಿತ್ರದ ನಿರ್ದೇಶಕನನ್ನು ಸಂಪರ್ಕಿಸುತ್ತಾರೆ. ನಿಮ್ಮ ಚಿತ್ರವನ್ನೇ ಸ್ಪೂರ್ತಿಯಾಗಿ ಪಡೆದು ಒಬ್ಬ ಹೀಗೆ ಒಂದೊಂದೇ ಕೊಲೆಯನ್ನು ನೀವು ತೋರಿಸಿದಂತೆಯೇ ಮಾಡುತ್ತಿದ್ದಾನೆ, ಎನ್ನುವಾಗ ನಿರ್ದೇಶಕನಿಗೂ ಶಾಕ್, ಕೊನೆಗೆ ನಿರ್ದೇಶಕನಿಗೆ ಒಂದು ವಿಷಯ ನೆನಪಾಗುತ್ತೆ. ಸರ್ ನಾವು ಚಿತ್ರ ಬಿಡುಗಡೆಯಾಗುವ ಮುನ್ನ ಪ್ರೀಮಿಯರ್ ಷೋ ಇಟ್ಟಿದ್ದೋ ಅದನ್ನು ನೋಡಲು ಬಂದಿದ್ದ ಒಬ್ಬ ಪತ್ರಕರ್ತ ನನ್ನನ್ನು ಪತ್ರಿಕಾಗೋಷ್ಠಿಯಲ್ಲಿ ನೀವು ಈ ಚಿತ್ರವನ್ನು ಯಾವುದಾದರೂ ನೈಜಘಟನೆಯನ್ನು ನೋಡಿ ಸ್ಪೂರ್ತಿ ಪಡೆದು ತೆಗೆದಿದ್ದ ಅಥವಾ ನಿಮ್ಮ ಕಲ್ಪನೆಯೇ ಎಂದು ಒಂದು ರೀತಿಯ ವಿಭಿನ್ನವಾದ ದೊರಣೆಯಲ್ಲಿ ಕೇಳಿದ ನಾವು ಇಲ್ಲ ಇದೆಲ್ಲಾ ಸಂಪೂರ್ಣ ನಮ್ಮ ಕಲ್ಪನೆ ಎಂದೋ ಆತ ಅದನ್ನು ಕೇಳಿದೊಡನೆ ಅಲ್ಲಿಂದ ಎದ್ದು ಹೊರಟು ಹೋದ. ತಗೊಳ್ಳಿ ಇದರಲ್ಲಿ ಆ ಸಂದರ್ಶನದ ವಿಡಿಯೋ ಇದೆ ಎಂದು ನೀಡುತ್ತಾರೆ. ಪೊಲೀಸರಿಗೆ ಹಂತಕ ಇದೆ ಎತ್ತರ ಇದೆ ಬಣ್ಣ ಎನ್ನುವ ಸುಳಿವು ಸಿಕ್ಕಿರುತ್ತದೆ ಈ ವಿಡಿಯೋದಲ್ಲಿ ಇರುವ ವ್ಯಕ್ತಿಯನ್ನು ನೋಡುವಾಗ ಅವನಿಗೆ ಹೋಲಿಕೆಯೂ ಆಗುತ್ತೆ. ಕೊನೆಗೆ ಆತನನ್ನು ಬಂಧಿಸುತ್ತಾರೆ. ಈ ಕಾರಣದಿಂದಲೇ ಈ ಚಿತ್ರವನ್ನು ಚಿತ್ರ ಮಂದಿರಗಳಲ್ಲಿ ಮುಂದುವರಿಸಲು ಮನಸಿಲ್ಲದೇ ನಿರ್ದೇಶಕನೇ ನಿಲ್ಲಿಸುವಂತೆ ಕೇಳಿಕೊಳ್ಳುತ್ತಾನೆ

Sleep Tight (Spanish) 
---------------------
2011ರಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಸೈಕೋ ಥ್ರಿಲರ್ ಕಥೆಯನ್ನು ಒಳಗೊಂದು ಬಿಡುಗಡೆಯಾದ ಚಿತ್ರವಿದು. ಚಿತ್ರದ ನಾಯಕನಿಗೆ ಒಂಟಿತನ ಈಗಾಗಲೇ ನಲವತ್ತರ ಮೇಲಾಗಿದೆ ತನ್ನೊಂದಿಗೆ ಯಾರೂ ಇಲ್ಲಾ, ಅಮ್ಮನಿಗೂ ಸಂಪೂರ್ಣ ಹಾಸಿಗೆಯೆ ಜೀವನ. ನನಗೆ ಸಂತೋಷವಿಲ್ಲ ದಿನ ಎದ್ದೇಳಲು ಒಂದು ಪ್ರೇರಣೆ ಇಲ್ಲಾ ಮುಖದಲ್ಲಿ ನಿಜವಾದ ನಗುವಿಲ್ಲಾ. ಅದೇ ರೊಟೀನ್ ಬದುಕು ಇವತ್ತು ಏನು ಮಾಡಿದೆನೋ ಅದೇ ನಾಳೆ, ಹೀಗೆ ಸಾಗುವ ಜೀವನದಿಂದ ಆತನ ವರ್ತನೆ ಬದಲಾಗುತ್ತದೆ. ತಾನು ಸಂತೋಷದಿಂದಿಲ್ಲ ಹಾಗಾಗಿ ತನ್ನ ಸುತ್ತಲೂ ಇರುವವರು ನಗಬಾರದು. ಸಂತೋಷದಿಂದ ಇರಬಾರದು ಅನ್ನೋ ಸ್ವಭಾವ. ಇಂಥ ಮನಸ್ಥಿತಿಯ ವ್ಯಕ್ತಿ ಕೆಲಸ ಮಾಡೋದು ಲಾಡ್ಜ್ ನಲ್ಲಿ ಮ್ಯಾನೇಜರ್ ಆಗಿ ಸಂಪೂರ್ಣ ಜವಾಬ್ದಾರಿ ಆತನದೇ. ಇನ್ನು ಅಲ್ಲಿರುವವರಿಗೆ ಸಂತೋಷದಿಂದ ಇರಲು ಬಿಡುತ್ತಾನ? ಅವನ ಮುಂದೆ
ನನಗೆ ಹೂಗಳನ್ನು ಬೆಳಸೋದು ಅಂದ್ರೆ ಇಷ್ಟವೆಂದರೆ ಆ ಹೂವಿನ ಗೀಡ ಬಾಡುತ್ತೆ. ನಾಯಿ ಸಾಕೋದು ಸಂತೋಷ ಕೊಡುತ್ತೆ ಅಂದ್ರೆ ಆ ನಾಯಿ ಸಾಯಿಯುತ್ತೆ. ಈ ಚಿತ್ರದ ಆರಂಭದ ದೃಶ್ಯದಲ್ಲಿ ನಾನು ಮೇಲೆ ಆತನ ಬಗ್ಗೆ ಹೇಳಿದನೆಲ್ಲಾ ಆತನೇ ಮಾತಾಡಿಕೊಂಡು ಮಹಡಿಯ ಮೇಲೆ ಅರ್ಧರಾತ್ರಿಯಲ್ಲಿ ಬಂದು ನಿಲ್ಲುತ್ತಾನೆ. ಅದಾದ ಬಳಿಕ ಆತನೊಂದಿಗೆ ಮಲಗಿರುವ ನಾಯಕಿಗೆ ಡಿಸ್ಟರ್ಬ್ ಆಗದಂತೆ ಎದ್ದು ಸಿದ್ಧವಾಗಿ ಕೆಲಸಕ್ಕೆ ಹೋಗುತ್ತಾನೆ. ಅದೇ ಮ್ಯಾನೇಜರ್ ಅಲ್ವ ಸೊ ರಿಸೆಪ್ಶನ್ ನಲ್ಲಿ ಬಂದು ನಿಲ್ಲುತ್ತಾನೆ. ಬೆಳಗ್ಗೆ ಕೆಲಸಕ್ಕೆ ಸಿದ್ಧವಾಗಿ ಹೊರಡುವ ನಾಯಕಿ ಬಂದು ಆತನಿಗೆ ಗುಡ್ ಮಾರ್ನಿಂಗ್ ಹೇಳಿ ಹೊರಡುತ್ತಾಳೆ, ನೋಡುವ ನಮಗೆ ಅರೆ ಇವಳು ಜೊತೆಯಲ್ಲಿಯೇ ಮಲಗಿದ್ದಳು ಮತ್ಯಾಕೆ ಯಾರೋ ಅಪರಿಚಿತನಿಗೆ ಹೇಳುವಂತೆ ಹೇಳಿ ಹೋಗುತ್ತಿದ್ದಾಳಲ್ಲ ಎನ್ನಿಸುತ್ತದೆ. ರಾತ್ರಿ ಕೆಲಸವೆಲ್ಲಾ ಮುಗಿಸಿಕೊಂಡು ಬಂದು ಒಬ್ಬಳೇ ಉಳಿದುಕೊಂಡಿರುವ ತನ್ನ ಕೊನೆಗೆ ಸೇರಿ ಊಟ ಮಾಡಿ ಬೆಡ್ ಮೇಲೆ ಮಲಗಿ ಗಾಢ ನಿದ್ರೆಗೆ ಜಾರುತ್ತಾಳೆ ಆಗ ಅಲ್ಲೇ ಅವಳ ಬೆಡ್ ಕೆಳಗೆಯೇ ಅವಳಿಗೂ ಮೊದಲೇ ಬಂದು ಮಲಗಿರುವ ಆತ ಕಣ್ಣು ಬಿಡುತ್ತಾನೆ. ಅವಳು ಮಲಗಿದ್ಲಾ ಎಂದು ನೋಡಿಕೊಂಡು ಮೆಲ್ಲನೆ ಮೇಲೆ ಎದ್ದೇಳಿ, ಆಕೆಗೆ ಮೂರ್ಚೆ ತಪ್ಪುವ ಮದ್ದನ್ನು ಮೂಗಿಗೆ ತಾಕಿಸಿ ಅವಳು ಜ್ಞಾನ ತಪ್ಪಿದೊಡನೆ ಅವಳ ಜೊತೆಗೆ ಮಲಗುತ್ತಾನೆ ಆತನಿಗೆ ಅದೇನೋ ಥ್ರಿಲ್. ಅವಳೊಂದಿಗೆ ಮಲಗಿರುತ್ತಾನೆ ಅಷ್ಟೇ ಅವನಿಗೆ ಮತ್ಯಾವ ಕೆಟ್ಟ ಭಾವನೆಯೂ ಇರುವುದಿಲ್ಲ ಆಕೆಗೆ ಎಚ್ಚರ ಬರುವ ಮುನ್ನ ಎದ್ದೇಳಲು ಅಲಾರಂ ಇಟ್ಟಿರುತ್ತಾನೆ ಅದು ಸದ್ದು ಮಾಡಿದ ಕೂಡಲೇ. ಎದ್ದು ಅವಳದೇ ಬಾತ್ರೂಂ ನಲ್ಲಿ ಸಿದ್ಧವಾಗಿ ಅವಳದೇ ಹಲ್ಲುಜ್ಜುವ ಬ್ರೇಶ್ ನಲ್ಲಿ ಬ್ರೇಶ್ ಮಾಡುತ್ತಾನೆ ಇನೇನು ಹೊರಡಬೇಕು ಎನ್ನುವಾಗ ಬ್ರೇಶ್ ಇಟ್ಟ ಜಾಗದಲ್ಲಿ ಮತ್ತೆ ಬಂದು ಅದನ್ನು ಮೊದಲು ಹೇಗಿತ್ತೋ ಹಾಗೆ ಇಟ್ಟು ಹೋಗುತ್ತಾನೆ. ಹೀಗೆ ಸಾಗುವಾಗ ನಡೆಯುವ ಒಂದೊಂದು ವಿಷಯವೂ ಸಕ್ಕತ್ ಥ್ರಿಲ್ ಅನ್ನಿಸುತ್ತೆ. ಸಹಜವಾಗಿ ಇಲ್ಲಿಯವರೆಗೂ ನೋಡಿರುವ ಅಷ್ಟೂ ಸೈಕೋ ಕಿಲ್ಲರ್ ಕ್ಲೈಮಾಕ್ಸ್ ನ ಈ ಚಿತ್ರದ ಕ್ಲೈಮಾಕ್ಸ್ ಗಾಳಿಗೆ ತೂರುತ್ತೆ... ಕ್ಲೈಮಾಕ್ಸ್ ಮಾತ್ರ ಬೇರೆ ಲೆವೆಲ್ ನಲ್ಲಿದೆ ಒಂದು ಕ್ಷಣ ನೋಡುವ ನಮಗೆ ಅಬ್ಬಾ ಅನ್ನಿಸುತ್ತೆ....


The Five (Korean)
---------------------
2013ರಲ್ಲಿ ಸೌತ್ ಕೊರಿಯನ್ ಸೈಕೋ ಥ್ರಿಲರ್ ಆಗಿ ಬಿಡುಗಡೆಯಾದ ಚಿತ್ರವಿದು. ಥ್ರಿಲರ್ ನ ಮಟ್ಟಕ್ಕೆ ಕೊರಿಯನ್ ಫಿಲಂಸ್ ವಿಶೇಷವಾದ ನೋಟದಿಂದ ಕೂಡಿರುತ್ತೆ. ತನ್ನ ಕಣ್ಣ ಮುಂದೆಯೇ ಬರ್ಬರವಾಗಿ ಮಗಳು ಮತ್ತು ಗಂಡನನ್ನು ಹೊಡೆದು ಕೊಲ್ಲುವ ಸೈಕೋ ಕಿಲ್ಲರ್ ಇಂದ ಅವರನ್ನು ಕಾಪಾಡಲು ಹೋಗುವಾಗ ಆಕೆಯನ್ನು ಚೆನ್ನಾಗಿ ಹೊಡೆದು ಸಾಯಿಸಲು ಯತ್ನಿಸುವಾಗ ಪೋಲಿಸ್ ಬಂದರು ಎಂದು ಅಲ್ಲಿಂದ ಬಿಟ್ಟು ಹೋಗುತ್ತಾನೆ. ಆ ಹೋರಾಟದಲ್ಲಿ ಬೆನ್ನ ಮೂಲೆ ಮುರಿತದಿಂದ ಇನ್ನು ಜೀವನದುದ್ದಕ್ಕೂ ವೀಲ್ ಚೆರ್ ನಲ್ಲಿಯೇ ಬದುಕಬೇಕು ಎನ್ನವ ಸ್ಥಿತಿಗೆ ತಲುಪುವ ನಾಯಕಿ. ನನ್ನ ಮಗಳಿಗೂ, ಗಂಡನಿಗೂ ಆದ ನೋವನ್ನು ನಾನು ಅವನಿಗೆ ಕೊಡಬೇಕು ಅವನನ್ನು ಹಾಗೆಯೇ ಸಾಯಿಸಬೇಕು ಎಂದು ನಿರ್ಧರಿಸುತ್ತಾಳೆ. ಅವಳ ಪರಿಸ್ಥಿತಿ ಆಗಿರುವಾಗ ಅವಳು ಅದು ಹೇಗೆ ಸೈಕೋ ಕಿಲ್ಲರ್ ನನ್ನು ಪತ್ತೆ ಹಚ್ಚುತ್ತಾಳೆ ಶಿಕ್ಷಿಸುತ್ತಾಳೆ ಅನ್ನೋದನ್ನು ರೋಚಕದೊಂದಿಗೆ ಅಷ್ಟೇ ಭಾವನಾತ್ಮಕತೆಯಿಂದ ಹೆಣೆದಿದ್ದಾರೆ ಅದಕ್ಕಾಗಿ ಆಕೆ ಮಾಡುವ ಪ್ಲಾನ್ಸ್, ಆ ಪ್ಲಾನ್ ಗಾಗಿ ಆಕೆ ನೀಡುವ ಬೆಲೆ. ಕೊನೆಯಲ್ಲಿ ಬರುವ ಸೈಕೋ ಕಿಲ್ಲರ್ ಜೊತೆ ಆಕೆ ನಡೆಸುವ ಹೋರಾಟ ಎಲ್ಲವೂ ಅಚ್ಚುಕಟ್ಟಾಗಿದೆ.. ಥ್ರಿಲ್ಲರ್ ಪ್ರಿಯರು ನೋಡಿ ಎಂಜಾಯ್ ಮಾಡಬಹುದು.

No comments:

Post a Comment