ನಿಮ್ಮ ಮದುವೇಲಿ
ಏನ್ ಹಾಕ್ತೀರಾ ? ಚಿತ್ರಾನ್ನ ಇಲ್ಲ ಬಿರ್ಯಾನಿನ ?
-ಮದುವೆಯ ಲಗ್ನ ಪತ್ರಿಕೆ!
ಒಂದು ಕಾರ್ಡ್ ಗೆ
25 ರಿಂದ 50 ರೂಪಯಿಯವರೆಗೂ ಕೂಡ ಮಾಡಿಸುವವರಿದ್ದಾರೆ!
ಮದುವೆಯಾದ ಮರು
ದಿನವೇ ಹರಿದು ಹಾಕುವ ಆ ಕಾರ್ಡಿಗೆ ಯಾಕೆ ಅಷ್ಟು ಬೆಲೆ ಕೊಡಬೇಕು ?
-ಮದುವೆ ಊಟ!!
ನೀವು ಚಿತ್ರಾನ್ನ
ಹಾಕಿದ್ರೂ ಇಲ್ಲ ಬಿರ್ಯಾನಿ ಹಾಕಿದ್ರೂ ತಿನ್ನಕ್ಕೆ ನಾವು
ರೆಡಿ ...
ಹೌದು ಬರೋರಿಗೇನು
ಆಗಬೇಕು ...
ಇಷ್ಟ ಪಟ್ಟು
ಬರೋರಿಗೆ ಏನೇ ಹಾಕಿದ್ರೂ ಇಷ್ಟದಿಂದ ಊಟ ಮಾಡಿ ಹಾರೈಸಿ ಹೋಗುತ್ತಾರೆ...
ಒಂದು ಕೊರತೆ
ಹೇಳಲೇ ಬೇಕು ಅಂತ ಇರೋರು
ಲಾಡುನಲ್ಲಿ
ಉಪ್ಪಿಲ್ಲ ..ಕಾಫಿಯಲ್ಲಿ ಕಾರ ಇಲ್ಲ ಅಂದೇ ಅನ್ನುತ್ತಾರೆ!
ಅದ್ಧೂರಿಯ
ಮದುವೆಯ ಹೆಸರಿನಲ್ಲಿ
ಊಟದ ಎಳೆಯಲ್ಲಿ
ಹತ್ತು ರೀತಿಯ ಪಲ್ಯ, ನಾಲಕ್ಕೂ ರೀತಿಯ ಸಿಹಿ ತಿಂಡಿ ...
ಅನ್ನ ಸಾಂಬಾರ್..ಪಲಾವ್ ..ಬೋಂಡ.ಉಪ್ಪಿನಕಾಯಿ..ಮಜ್ಜಿಗೆ..
ಅಂತ ಎಲೆಯ ತುಂಬಾ
ತುಂಬಿಸಿದರೆ ಆಷ್ಟು ಜನಗಳ ಎದುರಿನಲ್ಲಿ
ಅವೆಲ್ಲ
ತಿನ್ನಬೇಕು ಎನ್ನುವವರೂ ಸಹ ಅದನ್ನ ತಿನ್ನುವುದಿಲ್ಲ!
ಅವೆಲ್ಲವನ್ನೂ
ಕಸಕ್ಕೆ ಹಾಕುವುದನ್ನ ಎಷ್ಟೋ ಮದುವೆಯಲ್ಲಿ ನಾವೆಲ್ಲಾ ಕಂಡಿದ್ದೀವಿ
ನಾವೇ ಎಷ್ಟೇ
ಮದುವೆಯ ಊಟದಲ್ಲಿ ಎಲೆಯಲ್ಲೇ ಎಷ್ಟೋ ತಿನಿಸುಗಳ ಹಾಗೆ ಒಂದು ಚೂರು ಮುಟ್ಟದೆ
ಬಿಟ್ಟು
ಬಂದಿದ್ದೀವಿ!
ಅದರ ಬದಲು ಆ
ಸಮಯದಲ್ಲಿ ಯಾವ ಆಹಾರ ಬೇಕು ಒಬ್ಬರಿಗೆ ಎಷ್ಟು ಬೇಕು ?
ಅನ್ನೋದರ
ಯೋಚನೆಯಲ್ಲಿ ಅಡಿಗೆ ಮಾಡಿಸುವುದು ಉತ್ತಮ!
-ನನ್ನ ಫ್ರೆಂಡ್/ಸಂಬಂಧಿಕ ..
ತುಂಬಾ
ಅದ್ಧೂರಿಯಾಗಿ ಮದುವೆಯಾಗಿದ್ದಾನೆ ಅದುದ್ದರಿಂದ
ನಾನೂ ಕೂಡ
ಅದ್ಧೂರಿಯಾಗಿ ಮದುವೆಯಾಗಬೇಕು
ಅಂತ ಬಯಸುವ
ಮುನ್ನ ಅವರ ವರಮಾನ ಏನು ಅನ್ನೋದರ ಕಡೆ ಒಂದು ಸಲ ಗಮನ ಕೊಡಿ….
ಅದು ನಮ್ಮ
ಕೈಯಲ್ಲಿ ಸಾಧ್ಯವೇ ಅನ್ನೋದು ನಿಮ್ಮ ಅರಿವಿಗೆ ತಲುಪಲಿ ..
ತುಂಬಾ
ಅದ್ಧೂರಿಯಾಗಿ ಸಾಲ ಮಾಡಿ ಮದುವೆಯಾಗೋದು...
ಆ ಸಾಲಕ್ಕೆ
ಬಡ್ಡಿ ...
ಕಟ್ಟುವುದಕ್ಕೆ
ಮನೆಗೆ ಬಂದ ಹೆಣ್ಣಿನ ಒಡವೆಗಳನ್ನು ಅಡ ಇಡೋದು ...
ಒಂದೊಂದು ಸಲ
ಒಡವೆಗಳನ್ನು ಮಾರಿಯೇ ಬಿಡೋದು!
ಇದೆಲ್ಲ ನಾವು
ತುಂಬಾ ಕಡೆ ಕಂಡಿದ್ದೀವಿ ....
ಯಾಕೆ ಇದೆಲ್ಲ ???
ಮದುವೆ ಅನ್ನೋದು
ಒಂದು ದಿನ!
ಬದುಕು ಅನ್ನೋದು
ಒಂದು ಸುಧೀರ್ಗ ಪಯಣ!
ಪ್ರತಿ ದಿನದ
ಬದುಕನ್ನ ನರಕವಾಗಿಸಿಕೊಂಡು ಒಂದು
ದಿನದ ಮದುವೆಯನ್ನ ಅದ್ಧೂರಿಯಾಗಿ ಮಾಡಿಕೊಳ್ಳಬೇಕ?
ಹಣ ಇದೆ ಅಂದರೆ
ಮಾಡಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ!
ಆದರೆ ಯಾರನ್ನೋ
ನೋಡಿ ನಾನೂ ಸಹ ಅವರ ಆಗೆಯೇ ಮದುವೆಯಾಗಬೇಕು ಅನ್ನೋದು
ಶುದ್ಧ ತಪ್ಪು.
-ಇನ್ನೂ ಮದುವೆಗೆ ಹೋಗು ನಾವುಗಳು ಮಾಡೋದು ಏನು ?
ಕೆಲವೊಂದು ಕಡೆ
ನೋಡಿ ಅವರಿಗೆ ಬರುವುದಕ್ಕೆ ಇಷ್ಟವಿರುವುದಿಲ್ಲ ...
ಮೊಯ್ಯಿ
ಹಾಕಿದ್ದಾರೆ ಅದನ್ನ ಹಾಕಿ ಹೋಗುವುದಕ್ಕೆ ಬಂದಿರುತ್ತಾರೆ ....
ಇನ್ನೂ ಸ್ವಲ್ಪ
ಜನ ಇದ್ದಾರೆ ಅವರು ಯಾವುದೋ ಉಡುಗೊರೆಗಳನ್ನ ತಂದು ಕೊಡುವುದು ವಾಡಿಕೆಯಾಗಿ
ಇಟ್ಟುಕೊಂಡಿರುತ್ತಾರೆ
....ಅದು ತಪ್ಪಲ್ಲ ಆದರೆ ?
ಅವರು
ಹೋಗುತ್ತಿರುವ ಮದುವೆ, ಬಡವರ/ಸಿರಿವಂತರ ಮದುವೆಯೇ ಅನ್ನೋದು ಅವರಿಗೆ
ತಿಳಿದಿರಬೇಕು
ಸಿರಿವಂತರ
ಮದುವೆಯೆಂದರೆ ಚಿಂತೆ ಇಲ್ಲ ಅವರು ಉಡುಗೊರೆಗಳನ್ನೇ ನೀಡಲಿ
ಆದರೆ ಒಂದು ಬಡವರ
ಮದುವೆಯೆಂದರೆ ಅಲ್ಲಿ ಯಾವುದೋ ಪ್ಲಾಸ್ಟಿಕ್ ...ಅಥವಾ ಪಾತ್ರಗಳನ್ನು ಕೊಡುವುದರ ಬದಲು ಆ
ವಸ್ತುವಿನ ಬೆಳೆಯನ್ನೇ ಅವರಿಗೆ ಮುಯ್ಯಾಗಿ ನೀಡಿದರೆ ಉತ್ತಮ!
ಅವರ ಯಾವುದೋ
ಒಂದು ಮದುವೆಯ ಖರ್ಚಿಗೆ ಅದು ಉಪಯೋಗವಾಗುತ್ತದೆ!
ಎಲ್ಲರೂ ಒಂದೇ
ರೀತಿಯ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮದುವೆ ಮನೆಯಲ್ಲಿ ಒಮ್ಮೆ ನೋಡಿ
ಅದನ್ನು ಒಂದೇ
ವಸ್ತು ತಾನೇ ನಿಮಗೆ ಯಾಕೆ ಎಲ್ಲ ಬೇಕು ಅಂತ
ಅಲ್ಲಿಯ
ಕೆಲವೊಂದು ವಸ್ತುಗಳನ್ನ ಬಂದ ಸಂಬಂಧಿಕರು ತೆಗೆದುಕೊಂಡು ಹೋಗುತ್ತಾರೆ!
ನಾವು
ಪ್ರೀತಿಯಿಂದ ನೀಡಿದ ವಸ್ತುಗಳು ಯಾರದೋ ಮನೆಯ ಸೇರುತ್ತವೆ!
ಅದರ ಬದಲು
ಹಣವಾಗಿಯೇ ಕೊಟ್ಟು ಬಿಡುವುದು ಉತ್ತಮ!
-ಅಲ್ಲಿಯ ಮದುವೆಯ ಮನೆಯಲ್ಲಿನ ಸಣ್ಣ ಪುಟ್ಟ ಕೆಲಸಗಳಲ್ಲಿ ತಮ್ಮ ಕೈಯಲ್ಲಿ ಆದ ಕೆಲಸವ ಮಾಡಿದರೆ ಅದು
ಅವರಿಗೂ
ನಿಮಗೂ ಇರುವ
ಬಾಂಧವ್ಯವನ್ನು ಹೆಚ್ಚಿಸುತ್ತದೆ!
-ನಿಮ್ಮನ್ನು
ಮದುವೆಗೆ ಆಹ್ವಾನಿಸಿರುವವರ ಮದುವೆ...
ಅವರಿಗೆ...
ಏಕೈಕ ಮಗ/ಮಗಳು ಅಂತಾದರೆ
ಕೆಲಸಗಳಿದ್ದರೂ ಸ್ವಲ್ಪ ಬಿಡುವು ಮಾಡಿಕೊಂಡು ಆ
ಮದುವೆಗೆ
ಹೋಗಿ ಬನ್ನಿ ಅದು ಅವರ ಬದುಕಿನುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ!
-ಒಂದು ವೇಳೆ
ಅವರ ಮನೆಯ ಕೊನೆಯ
ಮಗ/ಮಗಳ ಮದುವೆಯೆಂದರೆ
ಖಂಡಿತ ಯಾವುದೇ
ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ
ಮದುವೆಗಿಂತ
ಇನ್ನೂ ಯಾವ ಶುಭ ಕಾರ್ಯವೂ ದೊಡ್ಡದಲ್ಲ
ಅದು ಅವರ ಮನೆಯ
ಕೊನೆಯ ಮದುವೆ ಎಂದ ಮೇಲೆ ತಪ್ಪದೆ ಹೋಗಿ ಬನ್ನಿ!
-ಮದುವೆಯ ಮನೆ ಅಂದ ಮೇಲೆ ಅಲ್ಲಿಯ ಎಲ್ಲೆಲ್ಲಿಂದಲೋ
ಸಂಬಂಧಿಕರು ಬಂದಿರುತ್ತಾರೆ
ನಿಜ ಅವರ ಜೊತೆ
ಊಟದ ಸ್ಥಳದಲ್ಲೇ ಮಾತನಾಡುತ್ತ ಇರಬೇಡಿ ...
ಊಟವ
ಮುಗಿಸಿಕೊಂಡು ಹೊರಡೋಣ ಅನ್ನುವವರಿಗೆ ಅದು ತೊಂದರೆಯಾಗುತ್ತದೆ ಅನ್ನುವ ಅರಿವು ಇರಲಿ!
-ನೀವು
ಅವರ ಕರೆದೂ ಕೂಡ ಅವರು ನಿಮ್ಮ ಮದುವೆಗೆ ಬರಲಿಲ್ಲವೆಂದರೆ
ಮೊದಲು ಕಾರಣವೇನೆಂದು ಕೇಳಿ ಆ ಕಾರಣದಲ್ಲಿ ತಪ್ಪಿಲ್ಲದಿದ್ದರೆ
ಅವರ ಮನ್ನಿಸಿ ನೀವು ಅವರ ಮದುವೆಗೆ ಕರೆದಾಗ ಹೋಗಿ ಬನ್ನಿ!
ಮದುವೆ ಅನ್ನೋದು ಒಂದು ದಿನ!
ಬದುಕು ಅನ್ನೋದು ಪ್ರತಿ ಕ್ಷಣ !
ಬದುಕನ್ನ ಅದ್ಧೂರಿಯಾಗಿ ಬದುಕೋಣ!
-ಪ್ರಕಾಶ್ ಶ್ರೀನಿವಾಸ್
ಅತ್ಯಂತ ಸತ್ಯವಾದ ಮಾತು ಗೆಳೆಯ ನಿಜಕ್ಕೂ ನೀವು ವಾಸ್ತವದ ಕವಿ ಈ ವಿಚಾರಗಳ ಪರಿಚಯ ತುಂಬ ಜನಕ್ಕೆ ಗೊತ್ತಿರುವಂಥದ್ದೇ ಆದರೆ ಯಾರು ಅದಕ್ಕೆ ಅಷ್ಟು ಮಹತ್ವ ಕೊಟ್ಟು ಬರೆಯುವ ಯೋಚನೆ ಮಾಡುವುದಿಲ್ಲ ಆದರೆ ಒಂದು ಸಣ್ಣ ವಿಷಯಕ್ಕೂ ಅದರದ್ದೇ ಮಹತ್ವವಿದೆ ಅನ್ನುವುದರ ಪರಿಚಯ ತುಂಬ ಚೆನ್ನಾಗಿ ಮೂಡಿಸಿದ್ದೀರಿ. ನೀವಿಡುವ ಪ್ರತಿ ಪ್ರಯತ್ನವು ಯಶಸ್ಸಿನ ಹೆಜ್ಜೆಗಳಾಗಲಿ ಎಂದು ಹಾರೈಸುತ್ತೇನೆ.
ReplyDeletenice one,,,
ReplyDeletedeepa
SUPERB EXPLANATION BRO...ನಿಜ ನೀವು ಹೇಳಿರೋದು ಸತ್ಯ ವಾದ ಮಾತುಗಳು ...ಇದನ್ನು ಎಲ್ಲರೂ ಕಾರ್ಯ ರೂಪಕ್ಕೆ ತಂದರೆ ಒಳ್ಳೆಯದು ... :)
ReplyDeleteManjula Nagaraj : ಅದ್ಭುತ ಸಾಲುಗಳು ಗೆಳೆಯ ... ಮತ್ತು ಸತ್ಯವೂ ಕೂಡ ಹೌದು... ಮದುವೆಯ ಈ ಬಂಧ ಅನುರಾಗದ ಅನುಬಂಧವಾಗಿರಬೇಕೇ ವಿನಹ ವ್ಯಹಹಾರಿಕ ಸಂತೆಯಾಗಬಾರದು ಅಥವಾ ಆಡಂಬರದ ತೋರ್ಪಡಿಕೆ ಆಗಬಾರದು ..
ReplyDeletemaduve ge kodo gift bagge olle idea kotri :P nanu yeshto sari idra bagge discussion madtidde adduri nepadalli food waste madodu sarina ankotidde..anyway nice article Prakash srinivas :)
ReplyDeleteUsha
ninna maatu satya prakash.. tumba olleya vichara tilisiddiri.. bari odi summanaadare saaladu adannu naavu anusarisabeku.. ootakke kulitaaga yeshtu beko ashtu haakisi kollade.. idu hege maadiddare adu hegide antha yellavannu haakisikondu yaavudu chennagilla nange sertilla antha bittu bido swabaava kammi maadikollabeku.. yaarado maneya duddu annodu ondu kshana maretu adu anna adu ellade yeshto jana saayutiddare yemba yochane maadi dayavittu annavannu haalu maadabedi.. nimma yochaneya daari chennagide.. thanks..
ReplyDeletebiryanine akisbeku ., chitrane akisbeku annod before yeloke aagolla
ReplyDeletevaramanake takate aa vastavadali nadkondre aitu
yellru adbarvagi madve madoke aagolla
infact prati obba manusyanige avn avna limit yenu annodu gottirute., kailadre madoke hogtane.. illa andre illa alwa
idu avravara anisikege bittadu
ಮದುವೆ ಅನ್ನೋದು ಒಂದು ದಿನ!
ReplyDeleteಬದುಕು ಅನ್ನೋದು ಪ್ರತಿ ಕ್ಷಣ !
ಬದುಕನ್ನ ಅದ್ಧೂರಿಯಾಗಿ ಬದುಕೋಣ! meaningfull lines thumba chendhadha salugalu
good one -
ReplyDeleteAnuradha
ಬದುಕನ್ನ ಅದ್ಧೂರಿಯಾಗಿ ಬದುಕೋಣ! well said..:)tumba chenagide
ReplyDeleteKusuma