Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday, 21 November 2012

ನಾನು ನೋಡಕ್ಕೆ ಚೆನ್ನಾಗಿಲ್ಲ!


ಅವಳು ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಹುಡುಗಿ!
ಹೆಸರು ಮಾನಸ ....
ಎಲ್ಲ ಹುಡುಗಿಯರಂತೆ ಅವಳಿಗೂ ನೂರಾರು ಕನಸುಗಳಿದ್ದವು
ಚಂದ್ರನಿಲ್ಲದ ಇರುಳಿನಂತೆ ....
ಕನ್ನಡಿಯ ಮುಂದೆಯೇ ಕಾಲ ಕಳೆಯುವ ಹುಡುಗಿರ ಹಾಗೆ ಅವಳು ಕೂಡ
ಅಂದವ ತುಂಬಾ ಇಷ್ಟ ಪಡುತ್ತಿದ್ದಳು ..
ಆದರೆ ಅವಳು ಹೇಳಿಕೊಳ್ಳುವಷ್ಟು ಸುಂದರವಾಗಿರಲಿಲ್ಲವೆಂಬ ಕೊರಗು ಅವಳಲ್ಲಿತ್ತು
ದೂರದರ್ಶನದಲ್ಲಿ ತೋರಿಸುವ ಸೌಂದರ್ಯ ವರ್ಧಕಗಳ ತಂದು ದಿನವೂ ಉಪಯೋಗಿಸುತ್ತಿದ್ದಳು.
ಅವು ಯಾವುದೇ ರೀತಿಯೂ ಅವಳ ಸೌಂದರ್ಯವನ್ನು ಹೆಚ್ಚಿಸಲಿಲ್ಲ!
ಅಲ್ಲಿಗೆ ಅವಳಿಗೆ ಅಂದದ ಮೇಲಿದ್ದ ವ್ಯಾಮೋಹ ಕಡಿಮೆಯಾಗ ತೊಡಗಿತು ...
ಮುಖವನ್ನು ಶೃಂಗರಿಸಿಕೊಳ್ಳುವ.  ಬದಲು ತನ್ನೊಳಗಿನ ಒಳ್ಳೆಯ ಹವ್ಯಾಸಗಳನ್ನ ಶೃಂಗರಿಸಿಕೊಳ್ಳೋಣ ಎನ್ನುವ ಕಡೆ ಮನಸ್ಸು ಬದಲಾಯಿಸಿದಳು..
ಶಾಲಾ ದಿನಗಳಿಂದಲೂ .... ಸಣ್ಣ ಪುಟ್ಟ ಕವಿತೆಗಳ ಬರೆಯುವುದು ..
ಭಾವ ಗೀತೆಗಳ ಹಾಡುವುದು
ಹಾಗೆ ಬಿಡುವಿದ್ದಾಗ ರೇಖಾ ಚಿತ್ರಗಳ ಬಿಡಿಸುವುದು ಮಾಡುತ್ತಿದ್ದ ಅವಳು
ಕಾಲೇಜಿನ ಮೆಟ್ಟಿಲು ಹತ್ತಿದ ಮೇಲೆ ಅವೆಲ್ಲವನ್ನೂ ಅಟ್ಟದ ಮೇಲಿಟ್ಟ ವಸ್ತುವಿನ ಹಾಗೆ
ಮನದೊಳಗೆಯೇ ಇಟ್ಟು ಬಿಟ್ಟಳು.. ಇನ್ನೂ ಅವುಗಳ ಧೂಳೊಡೆದು
ಶೃಂಗರಿಸಬೇಕು ಎನ್ನುವ ಪಣ ತೊಟ್ಟು ..
ಒಂದೊಂದಾಗಿ ಕಲಿಯಲು ಶುರು ಮಾಡಿದಳು
ಒಳ್ಳೆಯ ಹೆಸರಂತ ಕವಿಗಳ ಪುಸ್ತಕ ಓದುವುದು...
ಶಾಸ್ತ್ರಿಯ ಸಂಗೀತ ಕಲಿಯುವುದು ...
ಸುಮ್ಮನೆ ಇದ್ದಾಗ ಬಿಳಿಯ ಹಾಳೆಯ ಮೇಲೆ ಚಿತ್ರ ಬಿಡಿಸುವುದು
ಇದೆಲ್ಲದರ ಮಧ್ಯೆ ಅವಳ ಓದು ......
ಇವುಗಳಲ್ಲೇ ನಡುವೆಯೇ ಕಳೆದು ಹೋದ ಅವಳು
ಅಂದ ಎನ್ನುವ ವಸ್ತುವ ಹುಡುಕುವುದಕ್ಕೆ ಹೋಗಲೇ ಇಲ್ಲ!
ಹಣೆಗೆ ಕುಂಕುಮ ಇಡಲು ಹಾಗೂ ತಲೆಯ ಬಾಚಲು ಮಾತ್ರವೇ
ಕನ್ನಡಿಯ ಮುಂದೆ ನಿಲ್ಲುತ್ತಿದ್ದಳು
ಇಷ್ಟವಿಲ್ಲದ ಮನಸಿನಿಂದ ನೋಡುವಾಗೆಲ್ಲ ಅವಳ ತುಟಿಗಳು ಉಚ್ಚರಿಸುವ ಮಾತುಗಳು
'ನಾನು ನೋಡಕ್ಕೆ ಚೆನ್ನಾಗಿಲ್ಲ!'
ಅವಳು ನೋಡಲು ಸುಂದರವಾಗಿಲ್ಲವೆಂದು ಯಾವ ಹುಡುಗರೂ ಅವಳನ್ನು
ಮಾತನಾಡಿಸುತ್ತಿರಲಿಲ್ಲ ...
ಸೋಲ್ಪವೇ ಗೆಳತಿಯರು ಅವಳಯೊಂದಿಗೆ ಇದ್ದರು ...
ಕಪ್ಪನೆ ಇದ್ದ ಅವಳ ಪ್ರೀತಿಯ ಮೋಡದಲ್ಲಿ
ಶಶಿಯ ಹಾಗೆ ಬಂದವನೇ ರಾಹುಲ್!
ಮೇಲ್ವರ್ಗದ ಕುಟುಂಬಕ್ಕೆ ಸೇರಿದ ಹುಡುಗ
ನೋಡಲು ಚಂದಿರನ ಹಾಗೆ ಬಲು ಸುಂದರ!
ಅವನ ಬಗ್ಗೆಯೇ ಮಾತು,
 ಹುಡುಗಿರ ಮಧ್ಯೆ
ಅದರಿಂದಲೇ ಅವನ ಮೇಲೆ ಮಾನಸಳಿಗೆ ಒಂದು ರೀತಿಯ ಆಕರ್ಷಣೆ ಹುಟ್ಟಿತ್ತು!
ಇಷ್ಟು ದಿನ ಅವಳ ಕವಿತೆ,ಹಾಡು,ಚಿತ್ರದಲ್ಲಿ,
ಕಲ್ಪನೆ ತುಂಬಿದ್ದ ಜಾಗದಲ್ಲಿ  ...
ಕ್ರಮೇಣ ಅಲ್ಲಿ ರಾಹುಲನ ಬಿಂಬ ಕಾಣಿಸಲಾರಂಭಿಸಿತು...
ಅವಳಿಗೆ ಚೆನ್ನಾಗಿತ್ತು ಗೊತ್ತಿತ್ತು
ಆತ ತನಗೆಂದೂ ಎಟುಕದ ನಕ್ಷತ್ರವೆಂದು ....
ಅವನು ಬಂದ ಮೇಲೆಯೇ ತನ್ನ ಕವಿತೆ,ಹಾಡು,ಚಿತ್ರಗಳೆಲ್ಲವೂ
ಮತ್ತಷ್ಟು ಸುಂದರವಾದವು ...
ಅದುದ್ದರಿಂದ ಅವನ ಮನದಲ್ಲಿಯೇ ಪ್ರೀತಿಸಲು ಆರಂಭಿಸಿದಳು ...
ಮಾನಸಳಿಗೂ ಹೆಣ್ಣು ಮಕ್ಕಳಿಗೆಯೇ ಇರುವಂತಹ ಕರುಣೆ ..ಕನಿಕರ ಜಾಸ್ತಿ!
ಯಾರೇ ಹಸಿವು ಎಂದರೂ ತನ್ನ ಆಹಾರವ ನೀಡುತ್ತಿದ್ದಳು..
ಕಾಲೇಜಿಗೆ ಬರುವ ದಾರಿಯಲ್ಲಿ ಆಸಹಾಯಕರು ...
ವೃದ್ದರನ್ನು ಕಂಡರೆ ಅವರಿಗೆ ಸಹಾಯ ಮಾಡುವ ಗುಣ ಅವಳಲ್ಲಿ ಧಾರಾಳವಾಗಿತ್ತು!
ಹೀಗೆ ದಿನಗಳ ಚಕ್ರ ಸುತ್ತುತ್ತಿತ್ತು ...
ಅದೊಂದು ದಿನ ಮಾನಸಳ ಸಂತಸಕ್ಕೆ ಗಡಿಯೇ ಇಲ್ಲದಂತ ಸನ್ನಿವೇಶ!
ಮಧ್ಯಾಹ್ನದ ಊಟದ ಸಮಯ, ಊಟದ ನಂತರ ಒಬ್ಬಳೇ
ಮರದಡಿಯಲ್ಲಿ  ಕೂತು ಕವಿತೆಗಳ ಬರೆಯುತ್ತಿದ್ದಳು….
ಯಾರೋ ಒಂದು ಹುಡುಗ ಅವಳ ಮುಂದೆ ಬಂದು ನಿಂತ
ತಲೆ ಬಾಗಿಸಿ ಬರೆಯುತ್ತಿದ್ದವಳು ಹಾಗೆ ಮೆಲ್ಲಗೆ ತಲೆ ಎತ್ತಿ ನೋಡಿದರೆ ಅದು ರಾಹುಲ್!
ಹಾಯ್ ಮಾನಸ ?
ನಾವು ಒಂದೇ ಕಾಲೇಜು ,
ಬಟ್ ನನ್ನ ಇಷ್ಟು ದಿನ ನೀವು ಒಂದು ಸಲಾನೂ ಮಾತಾಡಿಸಿಲ್ಲ ?
ಯಾಕೆ ?
ಮಾತಡಿಸಬಾರದು ಅಂತ ಏನೂ ಇಲ್ಲ
ನಾನು ತುಂಬಾ ಬೇಗ ಹುಡುಗರ ಜೊತೆ ಮಾತಾಡಲ್ಲ ಅಷ್ಟೇ..
ಸರಿ ರೀ ನಾನೇ ಮಾತಡಿಸ್ತೀನಿ 
ನನ್ನ ನಿಮ್ಮ ಫ್ರೆಂಡ್ ಅಂತ ತಿಳ್ಕೊಲ್ತೀರ ?
(ಮಾನಸಗೆ ಹೃದಯದೊಳಗೆ ನೂರಾರು ಚಿಟ್ಟೆಗಳ ಹಾರಾಟದ ಸಂತಸ)
ಖಂಡಿತ .....
ಅಲ್ಲಿಯಿಂದ ಅವರ ಗೆಳತನ ಶುರುವಾಯಿತು
ಅವರು ಒಟ್ಟಿಗೆ ಓದಿಕೊಳ್ಳುತ್ತಿದ್ದರು ...
ಅವನು ಬರೆದ ನೋಟ್ ಇವಳು
ಇವಳು ಬರೆದ ನೋಟ್ ಅವನು ನೋಡಿ ಬರೆದು ಕೊಳ್ಳುತ್ತಿದ್ದರು
ಮನಸುಗಳು ಬದಲಾಯಿಸಿಕೊಳ್ಳದಿದ್ದರೂ ತಮ್ಮ ತಮ್ಮ ಪುಸ್ತಕಗಳ ಬದಲಾಯಿಸಿಕೊಳ್ಳುತ್ತಿದ್ದರು.....
ಇನೇನು ಕಾಲೇಜು ಜೀವನಕ್ಕೆ ವಿದಾಯ ಹೇಳುವ ದಿನಗಳು ಹತ್ತಿರ ಬಂದಿತು !
ಮಾನಸ ತನ್ನೊಳಗೆ ಅಂದು ಕೊಂಡಳು ತನ್ನ ಪ್ರೀತಿಯ ಅವನಿಗೆ ಹೇಳಲೇ ಬೇಕು
ಎಂದು ಒಂದು ಸುಂದರ ಕವನ ಬರೆದು ಅವನಿಗೆ ಕೊಡಲು ಹೊರಟಳು!
ಆದರೆ ಅಲ್ಲಿಯ  ಸನ್ನಿವೇಶ ಅವಳ ಆಸೆಯ ಹೂವಿಗೆ ಬೆಂಕಿಯ ಮಾಲೆಯ ಹಾಕಿದಂತಿತ್ತು
ಅಲ್ಲಿ ರಾಹುಲನಿಗೆ ಒಂದು ಹುಡುಗಿ ತನ್ನ ಪ್ರೀತಿಯ ಹೇಳುತ್ತಿದ್ದಳು!
ಅಂದನ್ನು ಕಂಡು ಮಾನಸ ಅಲ್ಲೇ ಒಂದು ಮರದಡಿ ಬಚ್ಚಿಟ್ಟುಕೊಂಡರೂ
ಅವರಿಬ್ಬರ ಮಾತು ಅವಳ ಕಿವಿಗಳ ತಲುಪುತ್ತಿತ್ತು!

ರಾಹುಲ್ ನಾನು ನಿಮ್ನ ತುಂಬಾ ಪ್ರೀತಿಸ್ತಾ ಇದ್ದೀನಿ ..
ಸಾರೀ ನಾನು ನಿನ್ನ ಯಾವತ್ತೂ ಆ ಭಾವನೆಯಿಂದ ನೋಡಿಲ್ಲಾ 
ನನಗೆ ಇದುವರೆಗೂ ಎಷ್ಟೋ ಜನ ಹುಡುಗರು ಪ್ರೇಮಪತ್ರ ಕೊಟ್ಟಿದ್ದಾರೆ ..
ನಾನು ಯಾರನ್ನೂ ಪ್ರೀತಿಸಿಲ್ಲ ಬಟ್ ನನಗೆ ನೀವು ತುಂಬಾನೇ ಇಷ್ಟ ಆಗಿದ್ದೀರಾ?
ಸಾರೀ ನನಗೆ ಇಷ್ಟ ಇಲ್ಲ 
ನನ್ನ ಅಂದಕ್ಕೆ ಹುಡುಗರು ಸಾಲಲ್ಲಿ ನಿಲ್ತಾರೆ ಯಾಕೆ ನಾನು ನಿಮಗೆ ಇಷ್ಟ ಆಗಲಿಲ್ಲ ?
ನೋಡು ಆ ಸಾಲಲ್ಲಿ ಈ ರಾಹುಲ್ ಇರಲ್ಲ ಅನ್ನೋದು ನೆನಪಿರಲಿ!
ನಿನ್ನ ಯಾವತ್ತಾದ್ರೂ ಕನ್ನಡಿಯಲ್ಲಿ ನೋಡಿದ್ದೀಯ ?
ನನಗೆ ನೀನು ಒಂದು ಚೂರು ಚೆನ್ನಾಗಿ ಕಂಡಿಲ್ಲ !!
ಸಾರೀ ಎಂದು ಹೇಳಿ ಅಲ್ಲಿಂದ ಹೊರಟೆ ಹೋದ!!
ರಾಹುಲ್ ನಿರಕಾರಿಸಿದ ಹುಡುಗಿ ನೋಡಲು ತುಂಬಾ ಸುಂದರವಾಗಿದ್ದಳು,
ಎಷ್ಟೋ ಹುಡುಗರ ಪ್ರೇಮಪತ್ರ ಅವಳು ಹರಿದು ಹಾಕಿರೋದನ್ನ ನಾನೇ ಕಣ್ಣಾರೆ ನೋಡಿದ್ದೀನಿ
ಅವಳ ಪ್ರೀತಿಯನ್ನೇ ಅವನು ಬೇಡ ಎಂದ ಇನ್ನು ನಾನು ?
ನೋಡುವುದಕ್ಕೆ ಚೆನ್ನಾಗಿಲ್ಲ  ನನ್ನ ಎಲ್ಲಿ ಒಪ್ಪುತ್ತಾನೆ ಎಂದು
ಸುಮ್ಮನೆ ಒಂದು ಮರದಡಿಯಲ್ಲಿ ಕುಲ್ಲಿತು ಯೋಚಿಸುತ್ತಿದ್ದಳು!
ಅಲ್ಲಿಗೆ ಬಂದ ರಾಹುಲ್!
ಹಾಯ್ ಮಾನಸ ನಿನ್ನ ಹುಡುಕ್ತಾ ಇದ್ದೀನಿ ಆಗಿನಿಂದ...
ಎಲ್ಲಿ ಕಾಣಲೇ ಇಲ್ಲ ...
ಯಾಕೆ ರಾಹುಲ್ ?
ಏನಿಲ್ಲ ನಿನ್ನ ಹತ್ರ ತಗೊಂಡ ಈ ಬುಕ್ ವಾಪಾಸ್ ಕೊಡಕ್ಕೆ ಅಷ್ಟೇ ತಗೋ!
ಯಾಕೋ ಇವತ್ತು ಫುಲ್ ತಲೆ ಕೆಟ್ಟೋಗಿದೆ ಮಾನಸ ....
ಯಾಕೆ ಏನ್ ಆಯಿತು ರಾಹುಲ್ ?
ನಿನಗೆ ಗೊತ್ತಲ್ಲ ಆ ನಮ್ಮ ಕಾಲೇಜಿನ ಸುರಸುಂದರಿ!
ಅವಳು ನನ್ನ ಲವ್ ಮಾಡ್ತಾ ಇದ್ದಾಳಂತೆ
ಅವಳ ಅಂದಕ್ಕೆ ನಾನು ಲವ್ ಮಾಡಬೇಕಂತೆ
ಅಲ್ಲ ಅವಳು ಎಷ್ಟು ಜನ ಹುಡುಗರು ತುಂಬಾ ಪ್ರೀತಿಯಿಂದ ಬರೆದ ಪ್ರೇಮಪತ್ರನ
ತೆಗೆದು ಕೂಡ ನೋಡದೆ ಆ ಹುಡುಗರ ಮುಂದೆಯೇ ಹರಿದು ಹಾಕಿರೋದನ್ನ ನಾನೇ ಎಷ್ಟೋ ಸಲ ನೋಡಿದ್ದೀನಿ
ಪ್ರೀತಿಸುವವರನ್ನೇ ನೋಯಿಸುವ ಅವಳಿಗೆ ,
ಇನ್ನೂ ದ್ವೇಷಿಸುವವರನ್ನ ಏನ್ ಮಾಡಕ್ಕೂ ಮನಸು ಬರಲ್ಲ!
ಮನಸ್ಸು ಇಲ್ಲದ ಸೌಂದರ್ಯ ಅನ್ನೋದು ಪರಿಮಳವಿಲ್ಲದ ಹೂವಿನಂತೆ 
ಅಂತಹ ಅಂದವೆ ನನಗೆ ಬೇಡಾ ...
ಸರಿ ಮಾನಸ ತಗೋ ಬುಕ್ ನಾನು ನಾಳೆ ಸಿಕ್ತೀನಿ !
ಎಂದು ಹೊರಟ  ......
ಮಾನಸ ಮನೆಗೆ ಬಂದು ಮನೆಯ ಕೆಲಸವೆಲ್ಲ ಮಾಡಿ ಅವಳ ಕೋಣೆಗೆ ಬಂದಳು!
ಎಷ್ಟೇ ಪ್ರಯತ್ನಿಸಿದರೂ ನನ್ನಿಂದ ಮುಖದಲ್ಲಿ ಅಂದವ ಪಡೆಯಲು ಆಗಲಿಲ್ಲ!
ಹಾಗೆ ಪ್ರೀತಿಯೂ ಸಹ ತನ್ನ ಪಾಲಿಗಿಲ್ಲ!
ಹೇಗೆ ಅಂದವ ಬಿಟ್ಟು ಬೇರೆ ವಿಚಾರಗಳ ಮೇಲೆ ಗಮನ ಕೊಟ್ಟೆನೋ
ಹಾಗೆಯೇ ಈ ಪ್ರೀತಿಯ ಬಿಟ್ಟು ಮುಂದಿನ ಜೀವನದಲ್ಲಿ ಓದಿದ ನಂತರ ಒಳ್ಳೆಯ ಕೆಲಸ ಸೇರಿ
ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎನ್ನುವ ಧ್ಯೇಯದಿಂದ ...
ರಾಹುಲ್ ಕೊಟ್ಟ ಪುಸ್ತಕವ ತೆರೆದರು ಮಧ್ಯದಲ್ಲಿ
ಒಂದು ಕಾಗದ ಸಿಕ್ಕಿತು!

ಹಾಯ್!
ಮಾನಸ ನಿನ್ನ ಜೊತೆ ನೀರವಾಗಿ ಮಾತನಾಡಲು ಆಗದ ವಿಷಯಗಳನ್ನು
ಕಾಗದದ ಮೂಲಕ ಹೇಳಬೇಕು ಎಂದು ಈ ಕಾಗದವನ್ನು ಬರೆಯುತ್ತಿದ್ದೇನೆ
ನಾನು ನಿನ್ನ ಜೊತೆ ಸ್ನೇಹ ಬೆಳಸಲು ಕಾರಣ
ನನಗೆ ನೀನು ಮೊದಲೇ ತುಂಬಾ ಇಷ್ಟ ಆಗಿದ್ದೆ!
ಅದೊಂದು ದಿನ ನನ್ನ ಗೆಳೆಯನಿಗೆ ಅವನ ಪ್ರೇಯಸಿ
ಒಂದು ಕವಿತೆ ಬರೆದಿದ್ದಳು
ಅದನ್ನು ಅವನು ನನಗೆ ತೋರಿಸಿದ ..
ಆ ಕವಿತೆಯ ಓದುತ್ತಿದ್ದರೆ ಏನೋ ಒಂದು
ರೀತಿಯ ಹೊಸ ಭಾವನೆಯ ಚಿಗುರು ನನ್ನೊಳಗೆ!
ತುಂಬಾ ಚೆನ್ನಾಗಿದೆ ಕವಿತೆ ಎಂದು ಅವನಿಗೆ ಹೇಳಿ ಕಳುಹಿಸಿದೆ
ಆದರೆ ನನಗೆ ಚೆನ್ನಾಗಿ ಗೊತ್ತಿತ್ತು
ಅದು ಅವನ ಪ್ರೇಯಸಿ ಬರೆದ ಕವಿತೆಯಲ್ಲ
ಕಾರಣ ಅವಳು ನನಗೆ ಸ್ನೇಹಿತೆ ..
ಅವಳನ್ನ ಹೋಗಿ ವಿಚಾರಿಸಿದ ಆಗ ತಿಳಿದ ವಿಷಯವೇ
ಅದು ನೀನು ಅವಳಿಗೆ ಬರೆದು ಕೊಟ್ಟ ಕವನವೆಂದು .....
ಅಂದಿನಿಂದ ನಿನ್ನೆಲ್ಲ ಕವನಗಳನ್ನ ಹುಡುಗಿರ ಬಳಿ ಕೇಳಿ ನಾನು ಓದುತ್ತಿದ್ದೆ...
ಅದೊಂದು ದಿನ ಮರದಡಿಯಲ್ಲಿ ನೀನು ಶಾಸ್ತ್ರಿಯ ಸಂಗೀತ ಅಭ್ಯಾಸ ಮಾಡುವಾಗ
ಆದೆ ಮೊದಲ ಬಾರಿಗೆ ನಿನ್ನ ದನಿ ಕೇಳಿದ್ದು ...
ನಿಜಕ್ಕೂ ನನ್ನನ್ನೇ ನಾನೇ ಮರೆತ ದಿನವದು!

ಇನ್ನೊಬ್ಬರಿಗೆ ಸಹಾಯ ಮಾಡುವ ಆ ನಿನ್ನ ಗುಣ ನನ್ನ ತುಂಬಾ ಆಕರ್ಷಿಸಿತು ....
ನನ್ನ ಬದುಕಿನಲ್ಲಿ ಮರೆಯಲಾರದ ಆ ದಿನ!
ನಾನು ಅರ್ಧದಿನ ರಜೆ ಹಾಕಿ ನನ್ನ ಫ್ರೆಂಡ್ ನ ಮನೆಯಲಿದ್ದೆ ....
ಅಂದು ನೀನು ಕಾಲೇಜು ಮುಗಿಸಿಕೊಂಡು ನಿಮ್ಮ ಮನೆಗೆ  ಹೋಗುವ ದಾರಿಯಲ್ಲೇ ನನ್ನ ಫ್ರೆಂಡ್ ಮನೆ
ಅವನ ಮನೆಯ ಎದುರಿನ ರಸ್ತೆಯ ಬದಿಯಲಿ ಕಾಲು ಊನವಾಗಿ  ಆಸಹಾಯಕ ಸ್ಥಿತಿಯಲ್ಲಿ!
ಒಬ್ಬ ವೃದ್ದ ಅಲ್ಲಿ ನಡೆದಾದುವವರನ್ನ ಬಿಕ್ಷೆ ಬೇಡುತ್ತಿದ್ದ ...
ಎಲ್ಲರೂ ಅವನಿಗೆ ತಮ್ಮ ಕೈಯಲ್ಲಿ ಆದ ಹಣ ನೀಡುತ್ತಿದ್ದರು!
ನೀನು ಆದೆ ಬದಿಯಲ್ಲೇ ನಡೆದು ಬರುತ್ತಿದ್ದಾಗ ನಾನು ಎದುರು ಮನೆಯ ಮಹಡಿಯಿಂದ
ನಿನ್ನನ್ನು ಗಮನಿಸುತ್ತಿದ್ದೆ ...
ನಿನ್ನ ಅವರ ಮುಂದೆ ಒಂದು ಕ್ಷಣ ನಿಂತು ನಂತರ
ಅವರು 'ಬೆಳಗ್ಗೆ ಇಂದ ಊಟ ಮಾಡಿಲ್ಲಮ್ಮ' ಎಂದು ಎಷ್ಟೇ ಬೇಡಿಕೊಂಡರೂ ಕಿವಿಗೆ ಬೀಳದಂತೆ ಹೊರಟೇ ಹೋದೆ!
ಇದು ನನ್ನ ತುಂಬಾ ಕಾಡಿತು ..
ನಾನೇ ಅಷ್ಟು ಬೇಗ ಒಬ್ಬರ ಮೇಲೆ ಕರುಣೆ ತೋರಿಸುವವನಲ್ಲ
ನನಗೆ ಅವರ ನೆರಳಾಟ ನೋಡಲಾಗದೆ..
ನೂರು ರೂಪಾಯಿ ನೋಟ ಅವರ ಮುಂದೆ ಇದ್ದ
ಬಟ್ಟೆಯ ಮೇಲೆ ಇಟ್ಟು ಬಂದಿದ್ದೆ ಆದರೆ ನೀನು ಹಾಗೆ ಹೋಗಿದ್ದು
ನನಗೆ ಆಶ್ಚರ್ಯವಾಗಿತ್ತು .
ಹಾಗೆ ಯೋಚಿಸುತ್ತ ನಿಂತಿದ್ದಾಗ
ನೀ ಮತ್ತೆ ಬಂದೆ ....
ಬ್ಯಾಗಿನಿಂದ ಊಟದ ಪೊಟ್ಟಣವ ತೆಗೆದು ಅದ ತೆರೆದು ಅವರ ಕೈಗೆ ಕೊಟ್ಟು
ನಂತರ ನಿನ್ನ ನೀರಿನ ಬಾಟಿಲನ್ನು ಅವರಿಗೆ ನೀಡಿ ಹೋದೆ!
ಆಗಲೇ ತಿಳಿದದ್ದು ನೀನು ಊಟ ತರಲೆಂದೇ ಹೋಗಿದ್ದು ಅಂತ ......
ನಿನ್ನ ಗುಣದ ಮುಂದೆ ಅವರ ಮುಂದೆ ನಾ ಇಟ್ಟಿದ್ದ
ಆ ನೂರರ ನೋಟು ನನ್ನ ಕಣ್ಣಿಗೆ ಬರೀ ಕಾಗದವಾಗಿ ಕಂಡಿತು!
ನಿನ್ನ ಮೇಲಿದ್ದ ಪ್ರೀತಿಯ ಬೀಜ ಅಂದೇ ಮರವಾಗಿದ್ದು!
ಹೀಗೆ ನನಗೆ ನಿನ್ನೊಳಗಿನ ಅಷ್ಟು ವಿಷಯಗಳು ಇಷ್ಟವಾಗಿದೆ 
ಮಾನಸ ಇನ್ನು ನಿನ್ನ ಉತ್ತರದ ಮೇಲಷ್ಟೇ ಎಲ್ಲವೂ ಅಡಗಿದೆ 
- ಇಂತಿ ರಾಹುಲ್!

ಹೀಗೆ ರಾಹುಲ್ ಅವಳೊಳಗಿದ್ದ  ಒಂದೊಂದೇ ವಿಷಯವನ್ನು
ಕಾಗದದ ಮೂಲಕ ಹೇಳುತ್ತಿದಂತೆ ಅವಳ
ಮೇಲೆಯೇ ಅವಳಿಗೆ ಪ್ರೀತಿ ಹುಟ್ಟಿತ್ತು ...
ತನ್ನ ಇಷ್ಟೆಲ್ಲಾ  ಕದ್ದು ಮುಚ್ಚಿ ನೋಡಿ ನೋಡಿ
ಪ್ರೀತಿಸುವವಷ್ಟು ತಾನು ಚೆಲುವೆಯೇ? ಎಂದು
ಒಮ್ಮೆ ಅಲ್ಲಿ ಇದ್ದ  ಕನ್ನಡಿಯ ನೋಡಿದ ಕೂಡಲೇ
ಅವಳ ಕಣ್ಣುಗಳ ನಂಬಲೇ ಆಗಲಿಲ್ಲ ಅವಳು
ದೇವತೆಯ ಹಾಗೆ ಕಾಣುತ್ತಿದ್ದಳು !


-ಪ್ರಕಾಶ್ ಶ್ರೀನಿವಾಸ್

23 comments:

  1. ನಾನು ಚೆನ್ನಾಗಿಲ್ಲ ಅಂತ ಸುಮ್ಮನೆ ಕೂತಿದ್ರೆ ಆಗಲ್ಲ ಅದನ್ನ ಮರ್ಯೋಕೆ ಪ್ರಯತ್ನ ಪಟ್ಟಿದ್ದು ಇಷ್ಟ ಆಯಿತು ಸಂಗೀತ ಸಾಹಿತ್ಯ ಕ್ಕೆ ಎಲ್ಲ ನೋವನ್ನು ಮರೆಸೋ ಶಕ್ತಿ ಇದೆ.ಇದು ನನ್ನ ವಯಕ್ತಿಕ ಅಭಿಪ್ರಾಯ ....
    ಒಟ್ನಲ್ಲಿ ಸೂಪರ್ ಕತೆ !!!!!!!

    ReplyDelete
  2. Newver decide any thing at the first sight, wait for the reaction, the situationneedsreaction, but the situations itself directs the action, reaction may the second but that promotes the action.

    ReplyDelete
  3. thumba chennaghidhe kathe bro... ''Beauty lies in the eyes of beholder''anno gaadhe maathu nenpaithu ee nimma kathe odhi...ista aithu...

    ReplyDelete
  4. ದೀಪಿಕ ಮೈಸೂರ್ತುಂ
    ಬಾ ಚೆನ್ನಾಗಿದೆ... :)
    ಅಂದ - ಚೆಂದದಿಂದ ಪ್ರೀತಿ ಬರಲ್ಲ.. ಸಹಜ ಮನಸ್ಸಿನ ಪರಿಶುದ್ಧ ಭಾವನೆಯೇ ಪ್ರೀತಿ..

    ReplyDelete
  5. ಇದು ನಿಜವಾದ ಕತೆಯೆ ಅಥವಾ ನಿಮ್ಮ ಕಲ್ಪನೆಯ

    ReplyDelete
  6. really awesome story Srinivas :) keep going :) Renu...

    ReplyDelete
  7. tumba tumba chennagide prakash.. yella beralu onde reeti eralla.. aadru tanna andakintha tannallidda olletana,pratibhe hecchina anda koduttade anno vichara tumba chennagi helidira.. kate mana muttuttade prakash.. ennu kategalannu oduva bhagya namage kodi..

    ReplyDelete
  8. ಮೆಚ್ಚಿದ ಎಲ್ಲ ಮನಗಳಿಗೂ ಧನ್ಯವಾದಗಳು.........

    ReplyDelete
  9. bahala chennagide... tumba ishta aaythu...

    ReplyDelete
  10. howdu putta anda anodu mukadalli eralla mansalli eruthe adu guna dalli eruthe antha nenna e kavithe yalii spastavage ellidiya nenna e kavanake nanna namanagallu intti daisy

    ReplyDelete
  11. Kathe thumbaa chennagidhe. Inspiring... :-) Way to go Prakash avare, Expecting many more such articles from you... Swetha

    ReplyDelete
  12. ಕಥೆ ತುಂಬಾ ಚೆನ್ನಾಗಿದೆ... ಪ್ರೇಮಕ್ಕೆ ರೂಪವಿಲ್ಲ... ಕೆಲವರು ಗುಣವನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ

    ReplyDelete
  13. Preethige akarshane mukhya, anda alla...
    Nimma kathe akarshithavagide... thumba chennagi barithira...
    Thanku Praksh... :)
    Kavya G Rai...

    ReplyDelete
  14. Kathe thumba chennagidhe bahya soundharya kala kramena alisi hogonthadhu adhare manasina soundhrya shashwathavadhadhu preethiyali manasina soudhrya mukya annodhana nimma katheyali thumba chennagi bardhidhira

    PRIYA

    ReplyDelete
  15. ಓದಿದ ಎಲ್ಲರಿಗೂ ಮನದಾಳದ ವಂದನೆಗಳು ಮಿತ್ರರೇ!

    ReplyDelete
  16. wow..fantastic story...prakash.:) roopadallu prema kurupadallu prema anta ea kathe prove madtide.yavdanna nam jeevanadalli badalaysoke sadhyane ilvo adra bagge yeshtu yochne madidru adu waste of time.olle badalavanegalna belsokolode uttama.roopakinta guna mukhya..i really enjoyed your while reading your story..:)

    Usha HM

    ReplyDelete
  17. ಸೌಂದರ್ಯ ದೇಹದಲ್ಲ ಮನಸ್ಸಿದ್ದು ಎಂದು ಸಾರಿದ ಉತ್ತಮ ಕಥೆ..
    ಚೆನ್ನಾಗಿದೆ ಪ್ರಕಾಶ್ ಜೀ..

    ReplyDelete
  18. tumba chennagide..

    ReplyDelete
  19. soundaryada bagge kalagi torisuvudara jote namma havyasada melu gamanaittu adannu poshisidare namma kale beleyodara jote, nammanna nijavaglu preetisoru namage sigtare anta tumba chenagi helidira

    ReplyDelete
  20. ಓದಿ ಅಭಿಪ್ರಾಯ ತಿಳಿಸಿದ ಮಿತ್ರರಿಗೆ ಧನ್ಯವಾದಗಳು!

    ReplyDelete
  21. Kathe tuba chennagide yavag yaru manasinlle muduttaro gottagodilla. Bahya sowndarakkinta antharanga sundar anodu gottagutte. Nenmma enodu katha sankalanake kayutteruva nemma abhimani.

    ReplyDelete