Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday, 20 November 2012

ಕಳೆದೋದ ಪ್ರೀತಿ !



ಕಳೆದೋದ ಪ್ರೀತಿ ಯಾವತ್ತೂ ಕಣ್ಣ ಮುಂದೆ ಬರಬಾರ್ದು!
--------------------------------------------------------------
ಅವತ್ತು ಕಾಲೇಜಿಗೆ ಕೊನೆ ದಿನ ಇಷ್ಟು ದಿನ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದ ಪ್ರೀತಿನ ಆ ಹುಡುಗಿಯ ಮುಂದೆ ಹೇಳಿದ!
ಹೆಣ್  ಮುಂದೆ ನಿಂತ್ರೆ ನಾನ್ ಮಾತಡಲ್ಲ
ಕಾಗದದ ಮುಂದೆ ನನ್ ಪೆನ್ ಮಾತಡಲ್ಲ!
ಅದಕ್ಕೆ ಪ್ರೀತಿನ ಕವನವಾಗಿ
ಪತ್ರವಾಗಿ ಹೇಳದೆ ನಿಮ್ಮ ಮುಂದೆನೇ ಹೇಳೋಣ ಅಂತ ಇವತ್ತು ಧೈರ್ಯ ಮಾಡಿ ಬಂದಿದ್ದೀನಿ!
ನಾವು ಹೇಳಿಕೊಳ್ಳವಷ್ಟು ಸಿರಿವಂತ ಕುಟುಂಬ ಅಲ್ಲ!
ಅಪ್ಪ ತೀರಿಕೊಂಡ ಮೇಲೆ ಅಮ್ಮಾನೇ ಕಷ್ಟ ಪಟ್ಟು ಕೆಲ್ಸ ಮಾಡಿ ನನ್ನ

ಓದಿಸ್ತೀರೋದು 
ಕಷ್ಟದ ಸಾಗರದಲ್ಲಿ ನಿಮ್ಮ ಮೇಲೆ ಪ್ರೀತಿ ಬಂದ ಮೇಲೆಯೇ ಸ್ವಲ್ಪ ಸಂತಸ ಅನ್ನೋದು ನನ್ನೊಳಗೆ ಮೂಡಿದ್ದು,
ಇಷ್ಟು ದಿನ ನನ್ನ ಪ್ರೀತಿಯ ಕಲ್ಪನೆಯಲ್ಲೇ ಜೀವಿಸಿದೆ….
ಈಗ ಒಳ್ಳೆಯ ಕೆಲಸನ ಹುಡುಕಿ ಬದುಕಿನ ಅಡಿಪಾಯ ಬಲಪಡಿಸಿಕೊಂಡು ನೀವು ಒಪ್ಪಿದ್ರೆ ಮದುವೆಯಾಗಿ ನನ್ನ  ಬಾಳಸಂಗಾತಿ ಮಾಡ್ಕೊಳೋಣ ಅಂತಿದೀನಿ .
ಈಗ ನನ್ನೆಲ್ಲ ಮಾತ ನಿನ್ನ ಮುಂದೆ ಸುರಿದ್ದಿದ್ದೀನಿ..
ಉತ್ತರ ನಿಮಗೆ ಬಿಟ್ಟಿದ್ದು!
ತನ್ನ ಇಷ್ಟು ಮಧುರವಾಗಿ ನಿರ್ಮಲವಾಗಿ ಪ್ರೀತಿಸಿದ ಆ ಹುಡುಗನ
ಮಾತುಗಳ ಮೌನವಾಗಿ ಆಳಿಸುತ್ತಿದ್ದ ಆ ಹುಡುಗಿ!
ನನಗೆ ಏನ್ ಹೇಳಬೇಕೋ ಗೊತ್ತಾಗ್ತಾ ಇಲ್ಲ
ನಿಮ್ಮ ಪ್ರೀತಿಯ ಕಂಡು

ನಾನು ಈಗಾಗಲೇ ಒಬ್ಬರನ್ನ ಮೂರು ವರ್ಷದಿಂದ ಪ್ರೀತಿಸ್ತಾ
ಇದ್ದೀನಿ ಅವರು ನಮಗಿಂತ ಹಣಕಾಸಿನ ವಿಚಾರದಲ್ಲಿ ಕೆಳಗಿದ್ದಾರೆ
ಅದಕ್ಕೆ ನಮ್ಮ ಮನೇಲಿ ಒಪ್ಪಲ್ಲ ಅಂತ ನಮಗೆ ಚೆನ್ನಾಗಿ ಗೊತ್ತು
ನನ್ನ ಎಜುಕೇಶನ್ ಮುಗಿದ ಮೇಲೆ ನಮ್ಮ ಮದುವೆ...
ಆದರಿಂದಲೇ ನನಗೆ ಎಷ್ಟೋ ಲವ್ ಪ್ರಪೋಸ್ ಬಂದಾಗಲೂ
ಕಾಲೇಜಿನಲ್ಲಿ ನಾನು ನಿರಾಕರಿಸುತ್ತಿದ್ದೆ ...

ಅದನ್ನ ಕೇಳಿ ಆ ಹುಡುಗ ಒಂದು ಸಣ್ಣ !
ಮುಗುಳು ನಗೆಯೊಂದಿಗೆ!
ಹೌದಾ...
ಸರಿ ಬಿಡಿ ನನ್ನ ಬದುಕಿನಲ್ಲಿ ನಾನ್ ತುಂಬಾ ಇಷ್ಟ ಪಟ್ಟು ಎಷ್ಟೋ ವಿಷಯಗಳು ನನಗೆ  ಸಿಕ್ಕಿಲ್ಲ ಆ ಲಿಸ್ಟ್ ನಲ್ಲಿ ನಿಮ್ನ
ಮೊದಲಾಗಿ ಇಡ್ತೀನಿ!

ನಿಮ್ಮ ಪ್ರೀತಿಗೆ ಗೆಲುವು ಸಿಕ್ಕೆ ಸಿಗುತ್ತೆ
ನಿಮ್ನ ಕೈ ಹಿಡಿಯೋಕ್ಕೆ ಆ ಹುಡುಗ ಪುಣ್ಯ ಮಾಡಿದ್ರು.
ಆ ಹುಡುಗಿ,
ಥ್ಯಾಕ್ಸ್
ನನಗೆ ಒಂದು ಆಸೆ ನಿಮ್ಮ ಬದುಕಿನ ಬಗ್ಗೆ ಕೇಳಿದ ಮೇಲೆ
ನಿಮ್ನ ಒಳ್ಳೆಯ ಸ್ಥಿತಿಯಲ್ಲಿ ನೋಡಬೇಕು ಅಂತ ಬದುಕಿನಲ್ಲಿ!

ಖಂಡಿತ ನಿಮ್ಮ ಆಸೆನ ನಾನು ಮನಸಿನಲ್ಲಿ ಇಟ್ಕೋಳ್ತೀನಿ
ಅದರ ಕಡೆ ಗಮನ ಕೊಟ್ಟು ಮುಂದುವರಿತೀನಿ.
ನಿಮ್ಮ ಹತ್ರ ಕೊನೆಗೂ ನನ್ನ ಪ್ರೀತಿನ ಹೇಳಿದ್ನಲ್ಲ ಅನ್ನೋ ನೆಮ್ಮದಿ ಸಾಕು
ಬೆಸ್ಟ್ ಅಪ್ ಲಕ್ ನಾನ್ ಬರ್ತೀನಿ.
ಅಂತ ಹೊರಟ.
ಅಲ್ಲಿಗೆ ಕೊನೆ ಅವಳ ಮತ್ತೆ
ಎಂದು ಅವನು ನೋಡುವ ಪ್ರಯತ್ನ ಮಾಡಲೇ ಇಲ್ಲ!
ಎಲ್ಲೋ ಯಾರೋ ಫ್ರೆಂಡ್ ಹೇಳಿದ್ದು
ಆ ಹುಡುಗಿ ಪ್ರೀತಿಸಿದವನ್ನನ್ನೇ ಮದುವೆಯಾಗಿದ್ದಾಳೆ ಅಂತ,
ಅವ್ಳು ನೆಮ್ಮದಿಯಾಗಿರಲಿ ಎಂದು ಮನಸಿನಲ್ಲೆ ಅಂದು ಕೊಂಡು ಸುಮ್ಮನಾದ!
ಆ ಹುಡುಗನಿಗೆ ಐ.ಟಿ.ಯಲ್ಲಿ ಕೆಲಸ ಸಿಕ್ಕಿತು
ಕೈ ತುಂಬಾ ಸಂಬಳ 
ಹಣದ ವಿಷಯದಲ್ಲಿ ತುಂಬಾ ಸುಧಾರಿಸಿದ
ಮನೆಯಲ್ಲಿ ಅಮ್ಮ ಎಷ್ಟೇ ಕೇಳಿಕೊಂಡರೂ
ಮದುವೆಯಾಗುವುದಕ್ಕೆ ಒಪ್ಪದೆ ಒಂಟಿ ಬದುಕನ್ನೇ ಬದುಕುತ್ತಿದ್ದ
ಹೀಗೆ ಇರುವಾಗ ಒಂದು ದಿನ!
ಹೊಟೆಲಿನಲ್ಲಿ ಊಟ ಮಾಡುವಾಗ
ಕನ್ನಡಿಯಿಂದ ಹೊರಗೆ ನೋಡಿದರೆ
ರಸ್ತೆಯಲ್ಲಿ ಆ ಹುಡುಗಿ
ತನ್ನ ಮಗು ಹಾಗು ಗಂಡನ
ಜೊತೆ ಗಾಡಿಯ ಮೇಲಿದ್ದ ಹಣ್ಣುಗಳ ಖರೀದಿಸುತ್ತಿದ್ದಳು!
ಕೇಲವು ವರ್ಷಗಳ ಬಳಿಕ ಅವಳನ್ನ ನೋಡಿ
ಅವನ ಹೃದಯ ಬಡಿತ ಹೆಚ್ಚಾಗಿತ್ತು!
ತುಂಬಾ ಸಿರಿವಂತರ ಮಗಳು
ಈಗ ಯಾವುದೋ ಸಮಾನ್ಯವಾದ ಸೀರೆ
ಮೈಮೇಲೆ ಎಳ್ಳಷ್ಟು ಬಂಗಾರವಿಲ್ಲ.
ಅವಳ ಪತಿ ಬಣ್ಣ ಮಾಸಿದ ಹಳೆಯ ಗಾಡಿಯ ಜೊತೆ ನಿಂತಿದ್ದರು!
ಎಲ್ಲವನ್ನೂ ಕನ್ನಡಿಯ ಒಳಗೆಯಿಂದ ನೋಡಿ ಅವರು ಹೋದ ತಕ್ಷಣ ಊಟವ ಅರ್ಧದಲ್ಲೇ ಬಿಟ್ಟು
ತನ್ನ ಕಾರ್ ಸ್ಟಾರ್ಟ್ ಮಾಡಿ
ಸೀದಾ ಕಚೇರಿಗ ಬಂದು
ಕಂಪ್ಯೂಟರ್ ಮುಂದೆ ಕುಳಿತ!
ಇಷ್ಟು ದಿನ ಅವಳ ಮರೆತೆ ಎಂದು
ತನ್ನೊಳಗೆ ತನ್ನನ್ನೇ
ಮೋಸ ಮಾಡಿಕೊಂಡು  ರಾಜರೋಷವಾಗಿ ತಿರುಗುತ್ತಿದ್ದ ಅವನಿಗೆ
ಕೀಬೋರ್ಡ್  ಮೇಲೆ ಬಿದಿದ್ದ ಕಣ್ಣೀರಿನ ಹನಿಯೇ ಹೇಳುತ್ತಿತ್ತು ಅವಳು ಇನ್ನೂ
ಅವನೊಳಗೆ ಇದ್ದಾಳೆ ಎಂದು.................!
-ಪ್ರಕಾಶ್ ಶ್ರೀನಿವಾಸ್

10 comments:

  1. ಪ್ರಾಯದ ಮೇಲೆ ದಿಬ್ಬಣ ಹೊರಟು,ಜೀವನವಾ ಸುತ್ತೀ
    ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತೀ..!!!

    ಅಂತ ಪ್ರೀತಿಯ ನೆನಪುಗಳಿಗೆ ಸಾವು ಇರೋಲ್ಲ ಬೀಡಿ..!!!!

    ReplyDelete
  2. nice one....

    deepa

    ReplyDelete
  3. sad story :( try to give good and happy ending stories.... Renu...

    ReplyDelete
  4. ಪ್ರೀತಿ ಅನ್ನೋದೇ ಹಾಗೆ..ಯಾವಾಗ.. ಎಲ್ಲಿ...ಯಾರ ನಡುವೆ..ಯಾಕಾಗಿ ಹುಟ್ಟತ್ತೆ ಅಂತ ಹೇಳಕ್ಕಾಗಲ್ಲ..ನೀವಂತೂ ಪ್ರೀತೀನ ಅದ್ಭುತವಾಗಿ ವ್ಯಾಖ್ಯಾನಿಸುತ್ತೀರ..ಮುಂದುವರೆಸಿ ಸರ್...good luck

    ReplyDelete
  5. ಓದಿದ ಎಲ್ಲರಿಗೂ ಮನದಾಳದ ವಂದನೆಗಳು ಮಿತ್ರರೇ!

    ReplyDelete
  6. simply superb story..:) heart melting story...tumba ishta aytu prakash.:)
    Usha HM

    ReplyDelete
  7. nija.. namma preeti kaledu hogbahudu.. aadare nenampu yaavattu kaledu hogalla...

    ReplyDelete
  8. ಓದಿ ಅಭಿಪ್ರಾಯ ತಿಳಿಸಿದ ಮಿತ್ರರಿಗೆ ಧನ್ಯವಾದಗಳು!

    ReplyDelete