Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Saturday, 26 May 2012

ನನ್ನ ಕೆಲವು ಹನಿಗವನಗಳು!

pleas click read more..


ಮೌನ!
ತುಟಿಯ ಬಾಗಿಲು
ಮುಚ್ಚಿದರಿಂದ ಮನದೊಳಗಿದ್ದ 
ಅಷ್ಟೂ ಮಾತುಗಳು ಉಸಿರು ಕಟ್ಟಿ ಸತ್ತವು!


ಗೆಳೆತನ! 
ನಾನು
ಕಣ್ಣೀರಾಗಿರಲು ಇಷ್ಟ ಪಡುತ್ತೇನೆ....
ನಿನಗೆ ಕಷ್ಟ, ನೋವುಗಳು ಬಂದಾಗ
ಬಂದೇ ಬರುತ್ತೇನೆ..!

ಪ್ರೀತಿ!
ನೋಡುವಾಗ ನಗುವ
ತುಟಿಗಳಿಗಿಂತ
 ಕಾಣಬೇಕು ಎಂದು
ಕಣ್ಣೀರನ್ನು ಬಿಡುವ ಕಣ್ಣುಗಳಿಗೆ ಪ್ರೀತಿ ಅಧಿಕ!

ತಾಯಿತನ!
ಬೆಳೆಯುವಾಗ ತಿಳಿಯಲಿಲ್ಲ!
ಬೆಳೆಸುವಾಗ
ತಿಳಿಯುತ್ತಿದೆ! 

ನಿರೀಕ್ಷೆ! 
ಬದುಕಿಗೆ .... 
ನೆನ್ನೆ ಇದ್ದವರ
ನೆನಪುಗಳು   
ನಾಳೆ ಬರುವವರ
ನಿರೀಕ್ಷೆಗಳು! 
ದಿನಕ್ಕೆ ಇಂದ
ಹಾಗೆ, 
ಹಗಲಿರುಳು!! 


ನನಗೆ ನಾನೆ!
ಸುತ್ತಲೂ
ಪ್ರೇಮಿಗಳು!
ಯಾರೂ ಇಲ್ಲ
ನನ್ನನ್ನು ಪ್ರೀತಿಸಲು 
ಎಂದು ತಲೆ ಬಾಗಿ
ನಿಂತೆ!
ಕೆಳಗೆ ನೋಡಿದರೆ
ನನ್ನನ್ನೇ 
ಪ್ರೀತಿಸುತ್ತ
ಜೊತೆಯಲ್ಲೇ ಇದೆ ನನ್ನದೇ ನೆರಳು!

ಸ್ನೇಹ
ನಮ್ಮ ಕರುಳ
ಬಳ್ಳಿ 
ಬೇರೆ ಬೇರೆಯಾದರೂ 
ಸ್ನೇಹ ಎನ್ನುವ
ತಾಯಿಗೆ 
ಒಂದೇ ನಾವಿಬ್ಬರು!

ವಿಪರ್ಯಾಸ!
ಕಣ್ಣಿಗೆ
ಕಾಣುವವರೆಲ್ಲ
ಮನದೊಳಗೆ
ಹೋಗುವುದಿಲ್ಲ!
ಮನದೊಳಗೆ
ಇರುವವರೆಲ್ಲ
ಕಣ್ಣಿಗೆ ಕಾಣುವುದಿಲ್ಲ! 

ಪ್ರೀತಿ !
ಎರಡು ಮೀನುಗಳು
ಒಂದೇ ಗಾಳದಲ್ಲಿ!



ಉತ್ತರ!
ನಿನ್ನನ್ನು
ನೆನಪಿಸಿಕೊಳ್ಳಲು ಒಂದು ಕ್ಷಣ ಸಾಕು!
ನಿನ್ನನ್ನು
ಮರೆಯಲು ಒಂದು ಜನುಮ ಬೇಕು! 

ನೆನಪು!
ಕೆಲವು ಕಾಣಿಕೆ! ಕೆಲವು
ಕುಣಿಕೆ!!

ಅಗಲಿಕೆ!
ನೋಡುವಾಗ ನಗುವ
ತುಟಿಗಳಿಗಿಂತ!
ಕಾಣಬೇಕು ಎಂದು
ಬಯಸುವ ಕಣ್ಣುಗಳಿಗೆ ಪ್ರೀತಿ ಅಧಿಕ!

ನಿಯಮ! 
ಪ್ರೀತಿಸುವವರೇಲ್ಲ
ಕವಿತೆ ಬರೆಯಲೇ ಬೇಕು!
ಎಂದಿದ್ದರೆ ಈ
ಪ್ರಪಂಚದ ತುಂಬಾ ಕವಿಗಳೇ ತುಂಬಿರೋರು!

ನೆನಪು!
ಕೊನೆ ಇಲ್ಲದ
ಕೋಣೆ!
  
ಪ್ರಶ್ನೆ !
ಗೆಳತಿ! ನಿನ್ನ ಹೆಸರೇನು
ಭಾನುವಾರವೇ!?
ನಿನ್ನ ಮುಂದೆ
ನಿಂತಾಗೆಲ್ಲ ಮಾತುಗಳಿಗೆ ರಜೆ!!


ಕನಸು!
ಕಣ್ಣ ಮುಚ್ಚಿ...!
ಬರೆಯುವ ಕವಿತೆ



ಮನವಿ!

ಅಂದು  
ನಿನ್ನನ್ನು ಕಣ್ಣು ಮಿಟುಕಿಸದ ಹಾಗೆ 
ನೋಡುತ್ತಲೇ ಇರಬೇಕೆನ್ದಿದ್ದೆ!
ಇಂದು 
ಕಣ್ಣ ಮಿಟುಕಿಸುವ ಕ್ಷಣವಾದರೂ
ನಿನ್ನನ್ನು ಕಾಣಬೇಕು ಎಂದಿದ್ದೇನೆ!  

ಪ್ರಶ್ನೆ! 
ನನ್ನುಸಿರಿಗಿಂತ ನಿನ್ನನ್ನೇ ಪ್ರೀತಿಸುತ್ತಿದ್ದೆ ನಾನು!
ಆದರೆ 
ನನ್ನ ಉಸಿರು ನನ್ನನ್ನು ಅಗಲುವ ಮುನ್ನವೇ
ನೀನು ನನ್ನನ್ನು ಅಗಲಿದ್ದು ನ್ಯಾಯವೇ!


ಸಮಾಧಿ!
ನಾಸ್ತಿಕನೋ ಆಸ್ತಿಕನೋ
ಒಂದಲ್ಲ ಒಂದು ದಿನ ಭೇಟಿ
ಕೊಡಲೇ ಬೇಕಾದ ಸನ್ನಿಧಿ !

ಅಮ್ಮ!
ಮಗುವಿನ ಕಣ್ಣೀರಿನ 'ಹನಿಗಳನ್ನು'
ಅಂಗೈಯಲ್ಲಿ ಹಿಡಿದು 
''ಚಿಕ್ಕ ಚಿಕ್ಕ ಅಂದದ ''ಮುತ್ತು''
ಎಂದು ನಗುವ ಸುಂದರ ಮಗುವೆ 'ಅಮ್ಮ'!

ಪ್ರಿಯೆ! 
ನನ್ನನ್ನು ನೋಡಿ ನಿಮ್ಮ ಮನೆಯ ರಂಗೋಲಿ ಹೇಳುತ್ತಿದೆ !
ಏನನ್ನೋ ಗೀಚಿ ಕವಿತೆ ಎನ್ನುತ್ತಿಯ ನೀನು ...
ನೋಡು ಒಂದು ಕವಿತೆ ಬರೆದ ಗೀಚು ನಾನು! ...!!

ಅರಳುತ್ತಲೇ ಇರಲಿ
ನನ್ನ ಕಣ್ಣೀರಿನಿಂದಲೇ ನಿನ್ನ ಸಂತೋಷ ಎನ್ನುವ ಹೂಗಳು ಅರಳುತ್ತವೆ 
ಎನ್ನುವುದಾದರೆ ಅರಳುತ್ತಲೇ ಇರಲಿ, 
ನನ್ನ ಕಣ್ಣುಗಳಲ್ಲಿ ನೀರು ಇರುವವರೆಗೂ !

(ಪ್ರೀತಿ!)
ನಾ ನಿನ್ನನ್ನು ಬಿಟ್ಟು ಹೋದರೇನು 
ನೆನಪುಗಳನ್ನು ಕೊಟ್ಟು ಹೋಗುತ್ತೇನೆ!

ಇಲ್ಲ! 
ನಿನ್ನೊಳಗೆ ನನ್ನ ನೆನಪುಗಳು!
ನನ್ನೊಳಗೆ ನಿನ್ನ ಮಾತುಗಳು!
ಇರುವವರೆಗೂ ನಮಗೆ ಅಗಲಿಕೆ ಇಲ್ಲ! 

ನಾನೇ!
ಯುದ್ಧದ ನಿಯಮ ಒಂದೇ ಒಬ್ಬ ಸಾಯಬೇಕು 
ಮತ್ತೊಬ್ಬ ಬದುಕ ಬೇಕು !
ನಿನ್ನ ಪ್ರೀತಿ ಒಂದು ಯುದ್ಧವಾದರೆ ನಾನೇ ಸಾಯುತ್ತೇನೆ! 

ಸನ್ಮಾನ! 
ನಮಗೆ ಯಾರು ಸನ್ಮಾನ ಮಾಡಿದ್ದಾರೆ ಅನ್ನೋದಕ್ಕಿಂತ !
ನಾವು ಯಾರಿಗೂ ಅವಮಾನ ಮಾಡಿಲ್ಲ ಅನ್ನೋದೇ
ನಮಗೆ ನಾವೇ ಮಾಡಿಕೊಳ್ಳುವ ಸನ್ಮಾನ! 

ನಾನೇನು

ನನ್ನವಳನ್ನು ಕಂಡರೆ ಕಲ್ಲುಗಳೇ 
ಕವಿಗಳಾಗಿ ಬಿಡುತ್ತವೆ 
ಇನ್ನೂ ನಾನೇನು ಮಹಾ !!!

ಹೂ!
ಬಿಟ್ಟು ಹೋದವರಿಗಾಗಿ ಕಣ್ಣೀರನ್ನು ಹಾಕುವುದಕ್ಕಿಂತ
ಒಂದು ಗಿಡಕ್ಕೆ ನೀರನ್ನು ಹಾಕಿದರೆ 
ಅದು ನಿಮಗೆ ಹೂವನ್ನಾದರೂ ಕೊಡುವುದು !!!

ಅಮಾಯಕಿ !
ಗೆಳತಿ ನೀನು 
ಬೆಲೆಬಾಳುವ ವಸ್ತುಗಳಿಂದ ನಿನ್ನನ್ನು 
ಅಂದಗೊಳಿಸಿಕೊಳ್ಳಲು 
ಪ್ರಯತ್ನಿಸುತ್ತಿರುವೆ
ಆದರೆ ಆ ವಸ್ತುಗಳೇ 
ನಿನ್ನಿಂದ ತಮ್ಮನ್ನು 
ಅಂದಗೊಳಿಸಿಕೊಳ್ಳುತ್ತಿವೆ..!!

ನೆನಪು
ನಿದ್ರಿಸದ ಕಣ್ಣುಗಳಿಗೆ 
ಸಮಾದಾನ ಹೇಳುತ್ತಿವೆ 
ಎಂದೂ 
ನಿದ್ರಿಸದ ಅವಳ ನೆನಪುಗಳು..!!

ಗೆಳತಿ 
ಹುಡುಕಿ ಕೊಡು ನನ್ನನ್ನು 
ನಿನ್ನ ನೋಡಿದ
ಕ್ಷಣದಲ್ಲೇ ಕಾಣೆಯಾದೆ ನಾನು ...!!!

ನನ್ನವಳು!! 
ಒಂದು ಕವನ ಸಂಕಲನ..!! 
ತಿರುವಿ ಹಾಕಿದರೆ ಸಾಕು ಕೆಲವು ಕ್ಷಣ 
ನಾನು ಕದ್ದಿಯುತ್ತೆನೆ ಅಲ್ಲಿಂದ 
ಒಂದು ಸುಂದರ ಕವನ..!!

ಬೆರಳು !
ಕಣ್ಣೀರು ಬರಿಸುವ ಕಷ್ಟಗಳು ನಮಗೆ ಬೇಕು .!
ಆಗಲೇ ಆ ಕಣ್ಣೀರನ್ನು ಒರೆಸುವ ಬೆರಳು 
ಯಾವುದೆಂದು ನಮಗೆ ತಿಳಿಯುವುದು ...!!!

(ನನ್ನ ಮೊದಲ ನಗೆ ಹನಿ)
ನಿನಗಾಗಿ ಕಾಯುವ ಪ್ರತಿ ಕ್ಷಣ 
ಕೇಳುತ್ತದೆ ನನ್ನ ಮನ ...
ನೀನಿನ್ನೂ ನೋಡಿಲ್ಲವ 
ಅವಳ ತಂಗಿಯನ್ನ ..!!!

ಅಕ್ಕ!
ಎರಡನೆಯ ತಾಯಿ!
ತಂಗಿ!
ಮೊದಲನೆಯ ಮಗು!

ಕಾಮನಬಿಲ್ಲು!
ಚುಕ್ಕಿ ಇಡದೆ ಬಿಡಿಸಿದ ರಂಗೋಲಿ!
ನಕ್ಷತ್ರಗಳು!
ಚುಕ್ಕಿ ಇತ್ತೂ ಬಿಡಿಸಲು ಮರೆತ ರಂಗೋಲಿ!

ಪ್ರೀತಿ!
ಸ್ವರ್ಗಕ್ಕೂ ನರಕಕ್ಕೂ ಒಂದೇ ದಾರಿ! 



ನೆನಪು!
ಎಂದೂ ತೆರೆದು ನೋಡಲಾಗದ ಉಡುಗೊರೆ!



ಎಲ್ಲಿಯೋದೆ ಸಖಿ ...
ಗಾಳಿಯಲ್ಲಿ ನಿನ್ನ ನೆನಪುಗಳನ್ನು ಬೆರೆಸಿ..
ಒಮ್ಮೆ ಬಂದು ಹೇಳಿಕೊಟ್ಟೋಗು
ಹೇಗೆ ಬದುಕ ಬೇಕೆಂದು 
ಉಸಿರಾಡುವುದನ್ನು ನಿಲ್ಲಿಸಿ!



ಕವಿತೆ!
ನಿನ್ನ ಮುಂದೆ ಸತ್ತ ಪದಗಳ ಪುರ್ಜನ್ಮ!

ರಾತ್ರಿ!
ಊರೆಲ್ಲ ಮಲಗಲು ಹಾಸಿದೆ ಒಂದೇ ಹಾಸಿಗೆ! 

ಅಂಧನೊಬ್ಬ ನನ್ನನ್ನು 'ಕಂಡು'
ಅಂದವಾಗಿದ್ದೀಯ ಎಂದಾಗ 
ಮನಸು ರೆಕ್ಕೆ ಬಂದ ಹಕ್ಕಿಯಂತೆ ಹಾರಿತು!
ಆತನಿಗೆ ಕಾಣಿಸಿದ್ದು ನನ್ನ ಆಕಾರವಲ್ಲ 

ಅಂತರಾತ್ಮ ಎನ್ನುವ ಕಾರಣಕ್ಕಾಗಿ!

ನೀ ವಿಶ್ರಮಿಸಿ ಹೋದ 
ಈ ಮನದ ಕುರ್ಚಿಯೂ 
ಸದಾ ನಿನ್ನದೇ 
ಪರಿಮಳವ ಸೂಸುತ್ತಿದೆ
ವರುಷಗಳು ಕಳೆದರೂ 
ನಾ ಎಷ್ಟೇ ಕಣ್ಣೀರ ಬಿಟ್ಟು ತೊಳೆದರೂ




-ಪ್ರಕಾಶ್ ಶ್ರೀನಿವಾಸ್ 

7 comments:

  1. superrrrrrrrrrrrrrrrrrrrr gelayaaaaaaaaaaaaaaaaa

    ReplyDelete
  2. woooowwwwwww super geleyare shilpa gm

    ReplyDelete
  3. wow...super bro...ondakintha ondu superrrr kavanagalu...:) modle idanella oddidru ega mathomme otge nodtha irodhu thumba khushi agtha idhe...nice n colourful...

    ReplyDelete
  4. rashmi mohan


    wowwwwww superrrrrrrrrrr ....

    ReplyDelete
  5. ಸೂಪರ್ ಗೆಳೆಯ ನಿನ್ನ ಕವನಗಳು ಇನ್ನಷ್ಟು ಮುಂದುವರಿಸು...

    ReplyDelete