Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Thursday, 22 December 2016

ಪ್ರಜಿನ್
ಪುಸ್ತಕವನ್ನು ಹಿಡಿದು ಅದರಲ್ಲಿಯೇ ಮುಳುಗಿದ್ದ ಪ್ರಜಿನ್’ನನ್ನು ಎಚ್ಚರಿಸುವಂತೆ
ಸದ್ದು ಮಾಡಿದು ಕೆಳಗಿಟ್ಟಿದ್ದ ಮೊಬೈಲ್, ಯಾರೆಂದು ಸಹ ನೋಡದೆ
ಹಾಗೆ ಸ್ವಿಕರಿಸಿ ಕಿವಿಯಲ್ಲಿಟ್ಟು ,
ಹಲೋ ಯಾರು?

ನಾನೋ ಶಂಕರ ಮೈಸೂರ್ ನಿಂದ ಮಾತಾಡ್ತಾ ಇದ್ದೀನಿ..
ಎನ್ನುವ ಧ್ವನಿ ಕೇಳುತ್ತಿದ್ದಂತೆ ಕಾಲೇಜಿನ ಸ್ನೇಹಿತ ಚಿತ್ರಣ ಕಣ್ಣ ಮುಂದೆ ಹಾದು ಹೋಯ್ತು,

ಹೇಳೋ ಶಂಕ್ರು ಹೇಗಿದ್ದೀಯಾ, ಒಂದು ಕಾಲ್ ಮಾಡೋದು ಇಲ್ವಲ್ಲೋ?

ಬದುಕು ಏನ್ ಅಂತ ಗೊತ್ತಲ್ಲ ಪ್ರಜಿನ್ ಕಾಲೇಜ್ ನಲ್ಲಿ ನಮ್ಮದೇ ಜಗತ್ತು,
ಅಲ್ಲಿಂದ ಬಂದ ಮೇಲೆ ಈ ಜಗತ್ತಿನಲ್ಲಿ ನಮ್ಮದೊಂದು ನೆಲೆಕಂಡುಕೊಳ್ಳುವ ಅಷ್ಟರಲ್ಲಿ  ಸಾಕ್ ಸಾಕಾಗಿ ಹೋಗುತ್ತೆ...ನಿಂದೆ ಸೂಪರ್ ಕಾಲೇಜಿನ ದಿನಗಳಲ್ಲೇ ನಿನ್ನದೇ ಹವ್ಯಾಸದ ಹಾದಿಯಲ್ಲಿ ಹೋಗ್ತೀನಿ ಅಂತ ಇದ್ದೆ ಈಗ ,
ಹಾಗೆ ಹೋಗ್ತಾನೂ ಇದ್ದೀಯಾ, ನಿನ್ನ ಹಾಗೆಯೇ ಎಲ್ಲರಿಗೂ ಅವರಿಷ್ಟದಂತೆ
ಹೋಗಕ್ಕೆ ಎಲ್ಲಪ್ಪ ಈ ಲೈಫ್ ಬಿಡುತ್ತೆ,

ನನ್ನ ಕೂಡ ಸಂಪೂರ್ಣ ಬಿಟ್ಟಿಲ್ಲ ಕಣೋ ಏನೋ ನಮ್ಮ ತಂದೆಯನ್ನು ಕೇಳಿಕೊಂಡು, ಬದುಕಿನ ಸ್ವಲ್ಪ ಸಮಯವನ್ನಾದರೂ ನನ್ನ ಹವ್ಯಾಸ ಇಷ್ಟದಂತೆ ಬದುಕುತ್ತಾ ಇದ್ದೀನಿ, ಅದರೂ ಅವರು ಬೇಡಾ ಬೇಡಾ ಅಂತಾನೆ ಇರ್ತಾರೆ..

ನೋಡೋ ಪ್ರಜಿನ್ ಹೆತ್ತವರಿಗೆ ಅವರದೇ ಕನಸುಗಳು ಇರುತ್ತೆ,
ಅದರತ್ತಾ ಹೋಗಬೇಕು ಅಂತ ಯೋಚಿಸುತ್ತಾರೆ, ಸರಿ ಅದು ಸಾಧ್ಯವಿಲ್ವಾ?
ಮಕ್ಕಳಿನ ಇಷ್ಟದಂತೆಯೇ ಹೋಗಲಿ ಅಂತ ಬಿಡ್ತಾರೆ, ಆದರೆ ಅದು ಅಪಾಯದ ಹಾದಿಯಾಗಿರಬಾರದು ಅಷ್ಟೇ ಅಂತ ಭಾವಿಸುತ್ತಾರೆ, ಆದರೆ ನೀನು ಆಯ್ಕೆ ಮಾಡಿಕೊಂಡಿರುವ ಹಾದಿ ನಿನ್ನ ತಂದೆ ತಾಯಿ ಅಂತ ಅಲ್ಲಾ,
ಜಗತ್ತಿನ ಯಾವ ತಂದೆ ತಾಯಿ ಸಹ ಇಷ್ಟ ಪಡದಂತಹ ಹಾದಿ ಬಿಡಪ್ಪ...
ಆದರೂ ನಿಮ್ಮ ತಂದೆ ಇದಕ್ಕೆ ಒಪ್ಪಿದ್ದಾರೆ ಅಂದ್ರೆ ,
ಬಡವರ ಮನೆಯಲ್ಲಿ ಬಂಗಾರದಂತಹ ಬೆಳಕು ನೀನು ಹುಟ್ಟಿದ ಮೇಲಷ್ಟೇ ಬಂದಿದ್ದು ಅಂತ ನಿಮ್ಮ ತಂದೆ ನಮ್ಮ ಹತ್ರ ಹಲವಾರು ಬಾರಿ ಹೇಳಿದ್ದಾರೆ
ಅದಕ್ಕೆ ನಿನ್ನ ಆಸೆ ಏನೇ ಇದ್ದರೂ ಅದನ್ನು ಅವರು ನೇರವೇರಿಸುತ್ತಾರೆ...

ಅದು ನಿಜಾನೆ ಕಣೋ, ಭಾರತೀಯ ಹೆತ್ತವರು ತಮ್ಮ ಮಕ್ಕಳು ಫಿಲಂ ಸ್ಟಾರ್
ರಾಜಕಾರಣಿ ಆಗ್ತೀನಿ ಅಂದ್ರೇನೆ ಬಿಡಲ್ಲ..ಇನ್ನು ನನ್ನ ಆಯ್ಕೆಯನ್ನ ಒಪ್ಪಿ ಬಿಡ್ತಾರ, ಸರಿ ನಿನ್ ವಿಷ್ಯ ಇಲ್ದೆ ಕಾಲ್ ಮಾಡೋನು ಅಲ್ಲಾ...
ವಿಷಯಕ್ಕೆ ಬಾ ಏನ್ ಕಾಲ್ ಮಾಡಿದ್ದು.....

ನಿನಗೆ ಇಷ್ಟವಾಗುವ ವಿಷಯವೇ,
ನನ್ನ ಫ್ರೆಂಡ್ ನ ಫ್ರೆಂಡ್ ಗೆ ದೆವ್ವ ಹಿಡಿದಿದೆ,
ನೀನೆ ಬಂದು ನೋಡಿ, ಅದೇನ್ ಮಾಡೋದು, ಅಂತ ಒಂದು
ಒಳ್ಳೆಯ ಪರಿಹಾರ ಕೊಡಬೇಕು ಅದನ್ನೇ
ಹೇಳೋಣ ಅಂತ, ನಿಂಗೆ ಕಾಲ್ ಮಾಡ್ದೆ,

ಒಹ್ ಹೌದಾ, ಗಂಡಿಗೋ? ಹೆಣ್ಣಿಗೋ?

ಹುಡುಗಿಗೆ ಅಂತೆ, ಹೆಚ್ಚಿನ ಮಾಹಿತಿ ಕೇಳಲಿಲ್ಲ,
ಯಾರ ಹತ್ರ ತೋರಿಸಿದರೂ ಏನೂ ಪ್ರಯೋಜನ ಇಲ್ಲ ಅಂತ ಹೇಳ್ತಾ ಇದ್ದ,
ಆಗ ನಿನ್ನ ನೆನಪು ಆಯಿತು, ನೀನು ಸೈಕೊಲಾಜಿಕಲ್ ಜೊತೆಗೆ ನಿನ್ನದೇ ವಿಧಾನದಲ್ಲಿ ಟ್ರೀಟ್ ಮೆಂಟ್ ಕೊಡೋದು ಎಲ್ಲವನ್ನೂ ಅವನಿಗೆ ಹೇಳಿ,
ನಿನ್ನ ವಿಚಾರಿಸಿ ಮುಂದೆ ಹೇಳ್ತೀನಿ ಅಂತ ಹೇಳು ಕಳುಹಿಸಿದ್ದೀನಿ...

ಸರಿ ಕಣೋ ಶಂಕ್ರು, ನನಗೊಂದು ಎರಡ್ಮೂರು ದಿನದ ಕೆಲಸ ಇದೆ ಇಲ್ಲಿ,
ಅದನ್ನ ಮುಗಿಸಿಕೊಂಡು ಬರ್ತೀನಿ...

ಆಯಿತು ಮರೆಯಬೇಡ ಪ್ರಜಿನ್ ಕಾಯ್ತಾ ಇರ್ತೀನಿ ಬಾ...
ಟೇಕ್ ಕೇರ್,,
ಖಂಡಿತಾ ಮರೆಯಲ್ಲಾ ಟೆಕ್ ಕೇರ್....


ಪ್ರಜಿನ್ ತನ್ನ ಕೆಲಸಗಳನ್ನು ಮುಗಿಸಿಕೊಂಡು ಮೈಸೂರಿಗೆ ಹೊರಡಲು ಕಾತುರನಾದ, ಹೋಗುವ ಮುನ್ನ ತಂದೆಗೆ ವಿಷಯ ತಿಳಿಸಿ ಹೋಗೋಣ ಎಂದು, ಅವರ ಮುಂದೆ ನಿಂತು ವಿಷಯವನ್ನು ತಿಳಿಸಿದ..

ಮಗನ ಆ ಹವ್ಯಾಸದ ಮೇಲೆ ಅವರಿಗೆ ಮೊದಲಿನಿಂದಲೂ ಬೇಸರವಿತ್ತು,
ಆ ಬೇಸರದಲ್ಲೇ,
ಅಲ್ಲಪ್ಪಾ ನಾನು ಇದು ಬೇಡಪ ನಮಗೆ ಅಂದ್ರೂ ನೀನು ಕೇಳದೆ ಮತ್ತೆ ಮತ್ತೆ
ಈ ವಿಷಯದಲ್ಲಿ ತೊಡಗಿಸಿಕೊಳ್ಳುವುದು ನನಗ್ಯಾಕೋ ಬಹಳ ನೋವಾಗುತ್ತಪ್ಪಾ.. ನಾನು ನಿನ್ನ ಮನಸಿಗೆ ನೋವು ಮಾಡಬಾರದು ಅಂತ ಒಲ್ಲದ ಮನಸಿನಲ್ಲಿ ನಿನಗೆ ಒಪ್ಪಿಗೆಯನ್ನು ಕೊಟ್ಟು, ನೀ ಹೀಗೆ ಹೊರಟು ಮತ್ತೆ ವಾಪಾಸ್ ಬರುವವರೆಗೂ ಅದೆಷ್ಟು ಸಲ ನಿನಗೆ ಏನೂ ಆಗಬಾರದು ಅಂತ
ಮನಸಲ್ಲೇ ಪ್ರಾರ್ಥನೆ ಮಾಡಿರ್ತೀನಿ ಗೊತ್ತಾ, ನಿನ್ನ ಮತ್ತೆ ನೋಡುವವರೆಗೂ ನನ್ನ ಜೀವನ ನನ್ನ ಕೈಯಲ್ಲಿ ಇರಲ್ಲಪ್ಪಾ.... ಎನ್ನುತ್ತಾ ಕುರ್ಚಿಯ ಮೇಲೆ ಕುಳಿತರು..

ಅವರ ಭಾವನೆಯ ಅಳವನ್ನು ಅರಿತ ಪ್ರಜಿನ್ ಅವರ ಕೈಯನ್ನು ಹಿಡಿದುಕೊಂಡು ಮಂಡಿಯೂರಿ ಕುಳಿತು,

ಅಪ್ಪ ಪ್ಲೀಸ್ ನೀವು ನೊಂದ್ಕೋಬೇಡಿ, ನಿಮ್ಮ ಪ್ರೀತಿ ಎಂತದ್ದು ಅಂತ ಗೊತ್ತು
ನನ್ನ ಕಣ್ಣಲ್ಲಿ ನೀರು ಬರುವವ ಮುನ್ನವೇ ನಿಮ್ಮ ಕಣ್ಣಲ್ಲಿ ರಕ್ತ ಬಂದಿರುತ್ತೆ,
ನಾನು ಆಸೆ ಪಟ್ಟು ಬೇಕು ಅನ್ನೋದಕ್ಕೂ ಮೊದಲೇ ಅದನ್ನ ತಂದು ಕೊಟ್ಟಿದ್ದೀರಾ, ಅಮ್ಮನಿಲ್ಲದ ನೋವೆ ನನಗೆ ಇಲ್ಲದ ರೀತಿಯಲ್ಲಿ ನೀವೇ ತಾಯಿ ತಂದೆಯಾಗಿ ಸಾಕಿದ್ದೀರಾ, ನಿಮ್ಮ ಮಾತಿಗೆ ನಾನು ಗೌರವ ಕೊಟ್ಟೆ , ನನ್ನ ಇಷ್ಟದ ಈ ಕೆಲಸದಲ್ಲಿ ನಾನು ಸಂಪೂರ್ಣ ತೊಡಗಿಸಿಕೊಳ್ಳದೆ, ಎಲ್ಲೋ ಅಲ್ಲೊಂದು ಇಲ್ಲೊಂದು ಅಂತ ನನ್ನ ಹುಡುಕಿ ಬಂದ ಕೇಸ್ ಗಳನ್ನ ಡೀಲ್  ಮಾಡ್ತಾ ಇದ್ದೀನಿ. ನಿಮಗೆ ಗೊತ್ತು ನಾನು ಮಾಡ್ತಾ ಇರೋ ಬಿಸ್ನೆಸ್ ನಲ್ಲಿ ಲಕ್ಷ ಲಕ್ಷ ಅಂತ ಲಾಭ ತೇಗಿತೀನಿ..ಅದರೂ ನನಗೆ ಅದು ಖುಷಿ ಕೊಡಲ್ಲಪ್ಪ,
ಅದೇನೋ ಗೊತ್ತಿಲ್ಲ ನನ್ನೊಳಗೆ ಅದ್ಯಾವುದೋ ಹೇಳಕ್ಕೆ ಆಗದಂತಹ ಒಂದು ತುಡಿತ ಮತ್ತೆ ಮತ್ತೆ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತೆ,
ಇಲ್ಲಿ ಸಿಗುವ ಸಂತೋಷ ಬದುಕನ್ನು ಮತ್ತಷ್ಟು ಬದುಕಬೇಕು ಅನ್ನೋ ಭರವಸೆ ಮೂಡಿಸುತ್ತೆ.. ಎಂದೇಳಿ ಅವರ ಕೈ ಮೇಲೆ ಹಣೆಯಿಟ್ಟು ಒರಗಿದ....

ಮಗನ ಮನಸಿನ ಅಭಿಲಾಷೆಯನ್ನು ಅರಿತ ತಂದೆ,
ಅವನ ತಲೆಯನ್ನು ಸವರುತ್ತಾ..
ಪ್ರಜಿನ್ ನೀನು ನನಗೆ ಹೇಳಿ ನೀನೆ ಬೇಜಾರ್ ಮಾಡ್ಕೊಳೋದು ಸರಿನಾ..
ನೀನ್ ಹೀಗೆ ಕಳೆಗುಂದ ಬಾರದು ಅಂತಾನೆ ಆಲ್ವಾ ನಿನ್ನ ಆಸೆಗೆ ನಾನು ಎಂದಿಗೂ ಸಹ ಅಡ್ಡಿಯಾಗಿಲ್ಲ... ನನ್ನ ಹೆಂಡತಿ ತೀರಿಕೊಂಡ ಮೇಲೆ ನನಗೆ ಅಂತ ಇರೋದು ಈ ಜಗತ್ತಿನಲ್ಲಿ ನೀನ್ ಒಬ್ಬನೇ ಕಣೋ..
ಪ್ರೇತಾತ್ಮದ ಪ್ರಪಂಚ ಅನ್ನೋದು ಅತ್ಯಂತ ಅಪಾಯಕಾರಿ ಅಲ್ಲಿ ನೀನು ಕಾಲಿಟ್ಟು ಕಾದಾಡೋದು, ನನಗೆ ಭಯ ಎಲ್ಲಿ ನಿನಗೆ ಏನ್ ಆಗುತ್ತೋ ಅಂತ...

ತಂದೆಯ ಮುಖವನ್ನು ನೋಡುತ್ತಾ..
ಅಪ್ಪಾ ಅತರ ಯಾವುದೇ ಭಯವೂ ನಿಮಗೆ ಬೇಡ ಖಂಡಿತ ನನಗೆ ಏನೂ ಆಗಲ್ಲ. ಅಂತಹ ದೊಡ್ಡ ದೊಡ್ಡ ವಿಷಯಕ್ಕೆ ನಾನು ಯಾವತ್ತೂ ಕೈ ಹಾಕೋದೂ ಇಲ್ಲ ಅಂತ ನಿಮಗೆ ಮಾತು ಕೊಡ್ತೀನಿ...ಈಗ ನನ್ನ ಖುಷಿಯಿಂದ ಕಳುಹಿಸಿ ಕೊಡಿ..
ನಾನು ಕೆಲಸ ಮುಗಿಸಿಕೊಂಡು ಬೇಗಾ ನಿಮ್ಮ ಕೈತುತ್ತು ತಿನ್ನೋದಕ್ಕೆ ಓಡಿ ಬರುವೆ..

ಅವನು ಹಾಗೆ ಹೇಳುತ್ತಾ ಇದ್ದ ಹಾಗೆ ಹುಸಿನಗೆಯನ್ನು ಮುಖದಲ್ಲಿ ಮೂಡಿಸಿಕೊಂಡು,
ಆಯಿತು ನನ್ನ ಕಂದಾ ಹುಷಾರಾಗಿ ಹೋಗಿ ಬೇಗಾ ಬರಬೇಕು..
ಎಂದವರ ಕಾಲು ಮುಟ್ಟಿ ನಮಸ್ಕರಿಸಿಕೊಂಡು,

ಆಯ್ತಪ್ಪಾ
ಹಾಗೆ ನೀವು ಬಿಸ್ಸಿನೆಸ್ ಮೇಲೆ ಗಮನ ಕೊಡಿ ಏನಾದರೂ ಇದ್ರೆ ಕಾಲ್ ಮಾಡಿ.. ಎಂದು ತನ್ನ ಒಂಟಿಸೀಟಿನ ಬೈಕ್ ಮೇಲೆ ಕುಳಿತು ಸೈಡ್ ಗೆ ತನ್ನ ಸಲಕರಣೆಗಳನ್ನು ಹೊತ್ತು ಬ್ಯಾಗ್ ನೇತು ಹಾಕಿ, ತಲೆಗೊಂದು ಹ್ಯಾಟ್ ಹಾಕಿಕೊಂಡು, ಅವರಿಗೆ ಕೈ ಬಿಸಿ ಬರುತ್ತೇನೆ ಎಂದು ಹೇಳಿ ಹೊರಟ....

ಸೀದಾ ಅದಾಗಲೇ ಕೇಳಿ ಪಡೆದಿದ್ದ ಶಂಕರ ಆಫೀಸ್ ವಿಳಾಸಕ್ಕೆ ಬಂದ,
ಬಂದವನನ್ನು ಬರ ಮಾಡಿಕೊಂಡು, ಜೊತೆಯೇ ಮನೆಗೆ ಕರೆದುಕೊಂಡು ಹೋದ, ಪ್ರಜಿನ್ ಈಗ ನೀನು ರೆಸ್ಟ್ ತಗೋ ಊಟ ಮಾಡಿ ನಾಳೆ
ನನ್ನ ಫ್ರೆಂಡ್ ಆನಂದ್ ಬರ್ತಾನೆ ನಿನ್ನ ಕರ್ಕೊಂಡು ಹೋಗ್ತಾನೆ,
ಎಂದು ಹೇಳಿದ ಇಬ್ಬರೂ ಮಲಗಿದರು...
ಮಾರನೆಯ ದಿನ ಬಂದ ಆನಂದನಿಂಗೆ ಪರಿಚಯಿಸಿ,
ಇವನ ಜೊತೆ ಹೋಗು ಅವರ ಮನೆಗೆ ಕರ್ಕೊಂಡು ಹೋಗ್ತಾನೆ...
ಎಂದ ಶಂಕರನಿಂಗೆ,
 ಯಾಕೋ ನೀನು ಬರಲ್ವಾ?
ಇಲ್ಲ ಕಣೋ ನನಗೆ ಸ್ವಲ್ಪ ಕೆಲಸ ಇದೆ, ನಾನ್ ಬಂದು ಏನ್ ಯುಸ್ ಇಲ್ಲಾ
ಆನಂದ್ ಇದ್ರೆ ಸಾಕು..
ಆಯ್ತಪ್ಪಾ.. ಎಂದೇಳಿ ಅನಂದನ ಕಾರಿನಲ್ಲಿ  ಹೊರಟ..
ದಾರಿಯಲ್ಲಿ..
ನೀವು ಹೇಗೆ ಅವರಿಗೆ ಪರಿಚಯ ಆನಂದ್?
ಈಗ ನೀವು ನೋಡುವ ಹುಡುಗಿಯ ಹೆಸರು ಸ್ಮೀತಾ ಅಂತ
 ನನ್ನ ತಂಗಿ ಫ್ರೆಂಡ್,
ನಮ್ಮ ಮನೆಗೂ ಬರೋಳು ನನ್ನ ಅಣ್ಣ ಅಣ್ಣ ಅಂತಾನೆ ಕರೆಯುತ್ತಾ
ನಮ್ಮ ಮನೆಯಲ್ಲಿ ಒಂದು ಮಗಳಾಗಿ ಇದ್ಲು,
ಹಾಗೆ ಪರಿಚಯ...

ಅವರಿಗೆ ಯಾಕೆ ದೆವ್ವ ಹಿಡಿದಿದೆ ಅನ್ನೋ ಮಾಹಿತಿ ಗೊತ್ತಾ?

ನನಗೆ ಅಷ್ಟೇನೂ ಗೊತ್ತಿಲ್ಲಾ... ಏನೋ ಲವ್ ಫೈಲೂರ್ ಅಂತಾ ಇದ್ಲು ತಂಗಿ..
ಅವರಪ್ಪ ರಾಜರಾಮ್ ಅಂತ ದೊಡ್ಡ ಕೋಟ್ಯಧಿಪತಿಗಳು,
ಇವಳು ಒಬ್ಬಳೇ ಮಗಳು..
ತನಗೆ ತಿಳಿದ ವಿಷಯವನ್ನು ಹೇಳುತ್ತಾ ಸಾಗುತ್ತಿದ್ದ..
ಒಹ್ ಹೌದಾ ಓಕೆ ಓಕೆ.. ಎನ್ನುತ್ತಾ ಇದ್ದ ಹಾಗೆ.
ಕಾರು ಮನೆಯ ಮುಂದೆ ಬಂದು ನಿಂತಿತು...
ಕೆಳಗಿಳಿದು ಮನೆಯೊಳಗೇ ಬಂದರು,
ಸೋಫಾದಲ್ಲಿ ಪ್ರಜಿನ್ ಗಾಗಿ ಕಾಯುತ್ತಾ ಇದ್ದ ಸ್ಮೀತಾಳ  ತಂದೆ ತಾಯಿಯಾದ
ರಾಜರಾಮ್, ವಂದಿನಿ ಎದ್ದು ನಿಂತು ನಮಸ್ಕಾರ ಎಂದೇಳಿದರು,
ಅವರಿಗೆ ಪ್ರತಿ ನಮಸ್ಕಾರ ಮಾಡಿದ ಪ್ರಜಿನ್ ನನ್ನು ಸೋಫಾದಲ್ಲಿ ಕೂರಲು ಹೇಳಿ ಅವರು ಕುಳಿತರು.... ಆನಂದ್ ಇಬ್ಬರಿಗೂ ಒಬ್ಬರನೊಬ್ಬರನ್ನು ಪರಿಚಯಿಸಿದ.
ವಂದಿನಿ ಪ್ರಜಿನ್ ಗೆ ಕೈ ಮುಗಿದು.., ದಯವಿಟ್ಟು ನೀವೇ ನಮ್ಮ ಮಗಳನ್ನ ಉಳಿಸಿಕೊಡಬೇಕು ಎಷ್ಟು ಹಣವಾದರೂ ಚಿಂತೆ ಇಲ್ಲಾ, ಇರೋ ಒಬ್ಬಳು ಹೀಗಾದಳಲ್ಲ ಎಂದು ನಾವು ಕಣ್ಣೀರದಡ ದಿನಗಳಿಲ್ಲ.. ದೇವರು ದಿಂಡ್ರು, ಮಾಟ ಮಂತ್ರ ಅಂತ ಎಲ್ಲವನ್ನೂ ಮಾಡಿದ್ದು ಅಲ್ಲದೆ ಧರ್ಮದ ಹಂಗು ಇಲ್ಲದೆ ಎಲ್ಲಾ ದೇವರನ್ನೂ ಪೂಜಿಸಿ ಆಯಿತು ಯಾವುದೇ ಪ್ರಯೋಜನವಿಲ್ಲಾ,
ಎಲ್ಲವನ್ನೂ ಕೈ ಬಿಟ್ಟು ಹೇಗೋ ಮಗಳು ಬದುಕಿ ನಮ್ಮ ಜೊತೆ ಇದ್ದರೆ ಸಾಕು ಎಂದುಕೊಂಡು ಇದ್ದೋ, ಹೀಗೆ ಇವರು ನಿಮ್ಮ ಬಗ್ಗೆ ಹೇಳಿದ ಮೇಲೆ ಏನೋ ಭರವಸೆ ಮೂಡಿದೆ, ನೀವೂ ಕೈ ಬಿಟ್ರೆ, ಅಷ್ಟೇ ಸಾಯೋತನಕ
ನನ್ನ ಮಗಳೂ ಹೀಗೆಯೇ ಇರಬೇಕಾಗುತ್ತೆ..
ಎಂದವರಿಗೆ ಸಮಾಧಾನ ಪಡಿಸಿ.
ಮೊದಲು ಅವರಿಗೆ ಹೇಗೆ ಹೀಗಾಯಿತು ಎನ್ನುವುದನ್ನು ಸಂಪೂರ್ಣ ಹೇಳಿ..
ಎಂದ ಪ್ರಜಿನ್...
ರಾಜರಾಮ್ ಹೇಳಲು ಶುರು ಮಾಡಿದರು..
ಇನೇನು ಇರುತ್ತೆ ಸಾರ್. ಮಕ್ಕಳಿಗೆ ಇಷ್ಟವಾಗೋದು ಹೆತ್ತವರಿಗೆ ಕಷ್ಟವಾಗೋದು ಒಂದೇ ಅದುವೇ ಪ್ರೀತಿ,
ನನ್ನ ಮಗಳು ಸಾಗರ್ ಅನ್ನೋ ಹುಡುಗನ್ನ ಲವ್ ಮಾಡ್ತಾ ಇದ್ಲು,
ಅವನು ಜಾತಿಯಲ್ಲಿ, ಅಂತಸ್ತಿನಲ್ಲಿ ನಮಗೆ ಯಾವ ವಿಧದಲ್ಲೂ ಸರಿಸಮನಲ್ಲದವನಾಗಿದ್ದ, ನಾವು ಎಷ್ಟೇ ಅದಕ್ಕೆ ವಿರೋಧ ವ್ಯಕ್ತಪಡಿಸಿದರೂ,
ಅವಳ ಮನಸ್ಸು ಕೇಳುವ ಹಂತವನ್ನು ಮೀರಿತ್ತು,
ಅದೊಂದು ದಿನ ಎನ್ನುತ್ತಾ ತಾಯಿ ವಂದಿನಿ ಮುಂದುವರಿಸಿದರು,
ಅವಳು ಆ ಹುಡುಗನೊಂದಿಗೆ ಓಡಿ ಹೋಗುವ ಪ್ಲಾನ್ ಮಾಡಿರೋದು ನನಗೆ ತಿಳಿಯಿತು, ಅವತ್ತು ರಾತ್ರಿ ಹತ್ತು ಗಂಟೆಗೆ ಇವರು ಮನೆಗೆ ಬಂದರು ಇವರಿಗೂ ನಾನು ಆ ವಿಷಯ ತಿಳಿಸಿದೆ, ಅವಳನ್ನು ಕೊಂದೆ ಹಾಕಿ ಬಿಡ್ತೀನಿ ಎನ್ನುತ್ತಾ
ಬೀರು ನಲ್ಲಿ ಇದ್ದ ಗನ್ ತೆಗೆದುಕೊಂಡರು, ನಾನು ಅದನ್ನು ಕಿತ್ತು ಎಸೆದು,
ನಾವು ಇಷ್ಟು ವರ್ಷದ ಮಗಳನ್ನು ಸಾಕಿ ನಾವೇ ಕೊಲ್ಲಬೇಕಾ, ಬೇಡ ಎಂದೇ,
ಇವರು ಮತ್ತೇನು ಮಾಡೋದು ಎಂದಾಗ ನಾನೇ ಇವರಿಗೆ ಒಂದು ಯೋಚನೆ ಹೇಳಿದೆ. ಅದುವೇ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸುತ್ತೇ ಅನ್ನೋದು ನನಗೆ ಗೊತ್ತಿರಲಿಲ್ಲಾ ಸಾರ್, ಎನ್ನುತ್ತಾ ತಲೆಗೆ ಬಡಿದುಕೊಂಡು ಅಳಲು ಶುರು ಮಾಡಿದರು, ಅವರ ಹೆಗಲ ಮೇಲೆ ಕೈ ಹಾಕಿ ರಾಮ್ ಸಮಾಧಾನ ಪಡಿಸುತ್ತಾ,
ಅವರು ಹೇಳಿದರು,
ಅವತ್ತು ಒಂದು ಗಂಟೆ, ಎಲ್ಲರೂ ಮಲಗಿದ ಮೇಲೆ ನನ್ನ ಮಗಳು ಬ್ಯಾಗ್ ತಗೊಂಡು ಕೆಳಗೆ ಇಳಿದಳು, ಹಾಲ್ ಗೆ ಬಂದು,  ಲೈಟ್ ಹಾಕದೆ ಬಾಗಿಲು ತೆಗೆಯಲು ಮೆಲ್ಲನೆ ಬಂದು ನಿಂತಾಗ, ಲೈಟ್ ಆನ್ ಮಾಡಿದೋ, ಅವಳು ತಿರುಗಿ ನಮ್ಮ ಸ್ಥಿತಿಯನ್ನು ನೋಡಿ ಗಾಬರಿಯಲ್ಲಿ ಬ್ಯಾಗ್ ಕೆಳಗೆ ಬಿಟ್ಟು ಹಾಗೆ ನಿಂತಳು,
ನಾವಿಬ್ಬರೂ ಪೆಟ್ರೋಲ್ ಸುರಿದುಕೊಂಡು ನಿಂತಿದ್ದೋ..
ನಾನು ಅವಳ ಹತ್ತಿರಕ್ಕೆ ಬೆಂಕಿಪೊಟ್ಟಣ ಎಸೆದು, ತಗೋ ಯಾಕೆ
ಕತ್ತಲಲ್ಲಿ ಹೋಗ್ತೀ, ಇರೋ ಒಬ್ಬಳು ಮಗಳು ಹೋದ ಮೇಲೆ ನಮಗೆ ಕೊಳ್ಳಿ ಇಡಕ್ಕೆ ಯಾರಿದ್ದಾರಮ್ಮಾ? ನೀನೆ
ನಮಗೆ ಬೆಂಕಿ ಇಟ್ಟು ಆ ಬೆಳಕಿನಲ್ಲಿ ನಿನ್ನ ಬದುಕನ್ನು ನೀನು ಹುಡುಕಿಕೊ, ಎಂದೇ ಅವಳಿಂದ ಕಣ್ಣೀರನ್ನು ಬಿಟ್ಟರೆ ಬೇರೇನೂ  ಉತ್ತರವಿರಲಿಲ್ಲಾ,
ಹೆತ್ತವರನ್ನು ಅಂತಹ ಸ್ಥಿತಿಯಲ್ಲಿ ಬಿಟ್ಟು ಹೋಗುವಷ್ಟು ಅವಳು ಕಟುಕಳಲ್ಲ, ಅಲ್ಲೇ ನೆಲಕ್ಕೆ ಕುಸಿದು ಮತ್ತಷ್ಟು ಕಣ್ಣೀರಾದಳು,
ನಾನೇ ಹತ್ತಿರ ಹೋಗಿ ನಿನಗೆ ಆ ಕಷ್ಟವೂ ಬೇಡ ಮಗಳೇ ನೀನು ಹೋಗು,
ಹೇಗೋ ನೀನು ಹೋದ ಮೇಲೆ ದಿನವೂ ಅವರಿವರ ಮಾತಿನ ಕಿಡಿಯಲ್ಲಿ ಬೆಂದು ಸಾಯುವುದಕ್ಕಿಂತ,ನಾವೇ ಬೆಂಕಿ ಇಟ್ಟುಕೊಂಡು ಒಂದೇ ಸಲಕ್ಕೆ ಬೂದಿಯಾಗಿ ಬಿಡ್ತೀವಿ.ಎಂದು ವಂದಿನಿ ಎಂದಾಗ ಅವರ ಕಣ್ಣುಗಳು ತೇವಗೊಂಡವು..

ಅಲ್ಲೇ ಅಳುತ್ತಾ ಕುಳಿತಿದ್ದಳು ಸ್ಮಿತಾ, ಆಗ ಅವಳ ಮೊಬೈಲ್ ಬಡಿದುಕೊಂಡಿತು
ನಾನು ಯಾರೆಂದು ತೆಗೆದು ನೋಡಿದೆ, ಸಾಗರ್ ಎಂದು ಅವನ ಹೆಸರನ್ನು ತೋರಿಸುತ್ತಿತ್ತು ಅವತ್ತೇ ಅವನ ಹೆಸರು ನನಗೆ ತಿಳಿದಿದ್ದು,
ಅವಳು ಸ್ವೀಕರಿಸಲಿಲ್ಲಾ. ಕರೆ ಕಟ್ ಆಯಿತು..
ಅದಾದ ಹತ್ತು ನಿಮಿಷದ ನಂತರ ಮತ್ತೆ ಅವನಿಂದ ಕಾಲ್ ಬಂದಿತು...
ಇವರು ಹತ್ತಿರ ಬಂದು, ನೋಡು ಸ್ಮಿತಾ ನಿನಗೆ ನಾವು ಬೇಕಾ
ಅವನು ಬೇಕಾ ಈಗಲೇ ನಿರ್ಧರಿಸು, ಅವನೇ ಬೇಕು ಅಂದ್ರೆ ಇದೆ ನಮ್ಮ ಕೊನೆಯ ನಿರ್ಧಾರ..ರಿಂಗಾಯಿತಲ್ಲೇ ಇದ್ದ ಮೊಬೈಲ್ ಆನ್ ಮಾಡಿ ಸ್ಪೀಕರ್ ನಲ್ಲಿ ಹಾಕಿದೆ, ಅವಳ ಮುಂದಿಟ್ಟೆ,
ಹಲೋ ಸ್ಮಿತಾ ನಾನು ಸಾಗರ್, ಮನೆಯಿಂದ ಹೊರಟ?
ಅವಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲಾ,
ಮತ್ತೆ, ಸ್ಮಿತಾ ಹೇಳು ಎಲ್ಲರೂ ಮಲಗಿದ್ರ? ನೀನು ಮನೆಯಿಂದ ಹೊರಟ,
ಆಗ ನಾನೇ ಅವನಿಗೆ ಹೇಯ್ ಅವಳು ಬರಲ್ಲ ಕಣೋ,
ನೆನ್ನೆ ಮೊನ್ನೆ ಬಂದ ನಿನಗಿಂತ ಅವಳ ಹೆತ್ತವರೇ ಅವಳಿಗೆ ಹೆಚ್ಚು ಅಂತ ಇಲ್ಲೇ ಇದ್ದಾಳೆ, ಎಂದೇ, ಎಂದರು ರಾಮ್..

ಸ್ಮಿತಾ, ಸ್ಮಿತಾ,, ಎನ್ನುತ್ತಿದ್ದ
ಲೋ ಬೇವರ್ಸಿ, ಹೇಳ್ತಾ ಇಲ್ವಾ. ನನ್ನ ಕೈಯಲ್ಲಿ ನಿನ್ ಸಿಕ್ಕರೆ ನಿನ್ನ ಮಗನೆ
ಜೀವಂತ ಹೂತು ಬಿಡ್ತೀನಿ. ನಾನು ಮಾಡಿರುವ ಅಷ್ಟು ಹೆಸರನ್ನು ಮಣ್ಣು ಪಾಲಾಗಿಸಕ್ಕೆ ಬಂದಿದ್ದೀಯಾ? ಹೇಳೋ ಎಲ್ಲೋ ಇರೋದು ನೀನು?
ಅವಳು ಪ್ರೀತಿಸುತ್ತಾ ಇದ್ದಾಳೆ ಅಂತ ತಿಳಿದಾಗಲೇ ನಿನ್ನ ಕಥೆಯನ್ನು ಮುಗಿಸಬೇಕಿತ್ತು. ಎಂದು ಕೂಗಾಡಿದೆ..

ಅವನ ಧ್ವನಿಯಲ್ಲಿ ಆತಂಕ ಕಾಣಿಸಿಕೊಂಡಿತು,
ಸಾರ್ ನೋಡಿ ನನಗೆ ನಿಮ್ಮ ಹಣವೂ ಬೇಡಾ ಏನೂ ಬೇಡಾ ನನಗೆ ನನ್ನ ಸ್ಮಿತಾ ಬೇಕು,

ಏನು ನಿನ್ನ ಸ್ಮಿತಾ ನಾ.. ಹೆತ್ತು ಹೊತ್ತು ಸಾಕಿದ್ದು ನಾವು ನಿನ್ನ ಸ್ಮಿತಾ ನ.
ನನ್ನ ಕಣ್ಣ ಮುಂದೆ ಹೇಳಬೇಕಿತ್ತು ಅಲ್ಲೇ ನಿನ್ನ ಹೂತು ಬಿಡ್ತಾ ಇದ್ದೆ..
ಅವಳನ್ನ ಲವ್ ಮಾಡೋ ಹಾಗೆ ನಾಟಕ ಮಾಡಿ, ಆಮೇಲೆ ಅವಳಿಗೆ ಹಿಂಸೆಕೊಟ್ಟು, ಮನೆಯಿಂದ ಹಣ ತಗೊಂಡು ಬಾ ಅನ್ನೋದು. ನಿನ್ನ ಹಾಗೆ
ನಾಯಿಗಳನ್ನ ನಾನು ಎಷ್ಟು ನೋಡಿಲ್ಲಾ..
ಬೇಕು ಅಂದ್ರೆ ಹೇಳೋ ಹಣ ಬೇಕೂ ಅಂದ್ರೆ ಬೀಸಾಕ್ತೀನಿ ತಗೊಂಡು ಹೋಗ್ ಸಾಯಿ.

ಸರ್ ನೀವು ಎಲ್ಲಿ ಸಹಿ ಮಾಡು ಅಂದ್ರೂ ನಾವ್ ಮಾಡ್ತೀವಿ, ನಮಗೆ ನಿಮ್ಮ ಹಣ ಬೇಡವೇ ಬೇಡಾ... ಎಲ್ಲೋ ಹೋಗಿ ಬದುಕೊಳ್ತೀವಿ, ನಿಮ್ಮ ಕಾಲಿಗೆ ಬೀಳ್ತೀನಿ ನಮ್ನ ಬದುಕಕ್ಕೆ ಬಿಡಿ....

ಸರಿ ಕಣೋ ನಿನ್ನ ಮಾತನ್ನೇ ನಾನು ನಿಜಾ ಅಂತ ನಂಬ್ತೀನಿ.
ನಿಮ್ಮಿಂದ ಹೋಗುವ ನನ್ನ ಮರ್ಯಾದೆಗೆ ಏನ್ ಅಂತೀಯಾ?
ಅದನ್ನ ನಿನ್ನಿಂದ ಕೊಡಕ್ಕೆ ಆಗುತ್ತಾನೋ? ಬೊಗಳೋ?

ಸರ್ ನಿಮ್ಮ ಜೊತೆ ಮಾತಾಡಿ ಪ್ರಯೋಜನ ಇಲ್ಲಾ,
ಸ್ಮಿತಾ, ನೀನು ಮಾತಾಡು, ನಾನು ಪ್ರೀತಿಸಿದ್ದು ನಿನ್ನ ಮಾತ್ರ
ನೀನು ಈಗ ಉತ್ತರ ಕೊಡು. ಬೇಡ್ವಾ ನಾನು ನಿನಗೆ?
ಹೇಳೇ ಮಾತಾಡೆ, ಯಾಕ್ರೆ ಹೀಗೆ ಹೆತ್ತವರ ಕಣ್ಣೀರಿಗೆ ಹೆದರಿ
ಪ್ರೀತಿಸಿದವರನ್ನ ಸಾಯಿಸ್ತೀರಾ?
ಈಗ ನನ್ನ ಜೊತೆ ಬರ್ತೀಯೋ? ಇಲ್ವೋ?
ಎಂದು ಜೋರಾಗಿ ಕೇಳಿದ ಸಾಗರ ಪ್ರಶ್ನೆಗೆ,

ಅವಳು ಏನು ಹೇಳಬೇಕು ಎಂದೇ ತಿಳಿಯದೆ ಅಳುತ್ತಾ ಕುಳಿತಿದ್ದಳು,

ಹೇಳು ಸ್ಮಿತಾ ಮಾತಾಡು, ಭಾವನೆಗಳ ಜೊತೆ ಆಟ ಆಡಬೇಡ,
ಹೇಳು.... ಅವತ್ತೇ ನನ್ನ ಪ್ರೀತಿಯನ್ನ ನಿರಾಕರಿಸಿದ್ದರೆ ಇವತ್ತು ಯಾರಿಗೂ ನೋವು ಇರ್ತಾ ಇರ್ಲಿಲ್ಲಾ ಎಂದು ಅವನು ಗೋಗರೆದ.ಅವನ ಮಾತುಗಳಲ್ಲಿ ಅಗಾಧವಾದ ನೋವಿತ್ತು.
ಅವಳಲ್ಲಿ ಮೌನ ಮಾತ್ರವೇ ಉತ್ತರವಾಗಿತ್ತು,

ಲೋ ನನ್ನ ಮಗಳು ಬರಲ್ಲ ಕಣೋ ಅಷ್ಟೇ, ಇನ್ನೊಮ್ಮೆ ಅವಳಿಗೆ ಸಿಗೋದು ಪ್ರೇಮದ ನಾಟಕವಾಡಿ ಅವಳ ಮನಸನ್ನ ಕೆಡಿಸೊದು ಮಾಡಿದ್ರೆ ನಿನ್ನ ಮಾತ್ರವಲ್ಲ ನಿನ್ನ ಇಡೀ ಕುಟುಂಬಕ್ಕೆ ಒಂದು ಗತಿ ಕಾಣಿಸ್ತೀನಿ...

ಸಾರ್ ಅದೇ ಮಾತನ್ನ ಅವಳು ಹೇಳಲಿ,

ಹೇ ನಾನ್ ಹೇಳೋದು ಒಂದೇ ಅವಳು ಹೇಳೋದು ಒಂದೇ,

ಹೇಳು ಸ್ಮಿತಾ, ಹೇಳು, ಎನ್ನುತ್ತಾ ಇದ್ದ,
ಪ್ರಾಣ ಬಿಡಲು ಸಿದ್ಧವಿರುವ ತಂದೆ ತಾಯಿಯ ಮುಂದೆ
ನೀನೆ ಬೇಕು ನನಗೆ ಎಂದು ಹೇಗೆ ಹೇಳುವುದೆಂದು ಅವಳು ಮತ್ತಷ್ಟು ಕಣ್ಣೀರಾದಳು,

ಅವನ ಸಹನೆ ಕರಗಿತು, ಸರಿ ಸ್ಮಿತಾ,
ನಿನಗೆ ಹೆತ್ತವರೇ ಮುಖ್ಯ ಆಲ್ವಾ? ಅವರು ತೋರಿಸೋ ಗಂಡನ್ನ ಮದ್ವೆ ಮಾಡ್ಕೊಂಡು ಚೆನ್ನಾಗಿರು, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ
ನೀನೆ ಬೇಡ ಎಂದ ಮೇಲೆ ನಾನ್ಯಾಕೆ ಜೀವಂತ ಇರಬೇಕು, ನಿನ್ನ ಎದುರಿನಲ್ಲೇ ವಿಷ ಕುಡಿದು ಸಾಯೋ ಭಾಗ್ಯ ಸಿಗಲ್ಲ ಅನ್ನಿಸುತ್ತೆ, ಈಗ ಇಲ್ಲೇ ನಾನು ಸಾಯ್ತೀನಿ, ನೇಣು ಹಾಕಿಕೊಂಡು, ನೀನು ನಾನೇ ಬೇಕು ಅಂತ ಈಗ ಹೇಳದಿದ್ದರೆ ಎಂದ... ಅವಳಿಂದ ಒಂದು ಸಣ್ಣ ಸದ್ದು ಹೊರಡಲಿಲ್ಲ,
ಅವನು ಕಾದಾದ ಮೇಲೆ, ಸರಿ ನಾನು ಇನ್ಯಾವತ್ತು ನಿನಗೆ ಮುಖ ತೋರಿಸಲ್ಲ ಸ್ಮಿತಾ ಎನ್ನುತ್ತಾ, ಫ್ಯಾನ್ ಗೆ ಕಟ್ಟಿದ್ದ ಹಗ್ಗಕ್ಕೆ ಕೊರಳನ್ನು ಹೆಣೆದು,
ನಿಂತಿದ್ದ ಕುರ್ಚಿಯನ್ನು ಒದ್ದ, ಕುರ್ಚಿ ಬಿದ್ದ ಸದ್ದು ಕೇಳಿ,
ಅವಳ ಬಾಯನ್ನು ಬಲವಾಗಿ ಮುಚ್ಚಿದ್ದ ನಾವು ಗಾಬರಿಯಿಂದ ತೆಗೆದೋ,
ಅಲ್ಲಿನ ಶಾಂತತೆ ಅವನು ಸತ್ತ ಎನ್ನುವುದನ್ನು ಸಾರುತ್ತಿತ್ತು,

ಅಯ್ಯೋ ಅಯ್ಯೋ ಸಾಗರ ಸಾಗರ, ನಿನ್ನ ಸಾವಿಗೆ ನಾನೇ ಕಾರಣ ಆಗಿ ಬಿಟ್ನಲ್ಲೋ ನೀನು ನನಗೆ ಬೇಕು ಕಣೋ, ಪ್ಲೀಸ್ ಮಾತಾಡೋ, ಸಾಗರ ನಿನ್ ಇಲ್ದೆ ನಾನಿಂದ ಇರಕ್ಕಾಗಲ್ಲ ಕಣೋ ಪ್ಲೀಸ್ ಸಾಗರಾ ಮಾತಾಡೋ ಎನ್ನುತ್ತಾ ಅವಳು ಎದೆಯನ್ನು ಬಡಿದುಕೊಂಡು ಅಳತೊಡಗಿದಳು, ಅಳುತ್ತಾ ಅಳುತ್ತಾ ಹಾಗೆ ಮೂರ್ಚೆ ಹೋಗಿ ಕೆಳಗೆ ಮಲಗಿದಳು,

ಫೋನ್ ತೆಗೆದು ನಾವು ಹಲೋ ಹಲೋ ಎಂದೋ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲಾ, ನಮಗೂ ಭಯವಾಯಿತು.. ಏನ್ ಆಯ್ತೋ ಏನೋ ಎಂದು.. ಅವಳನ್ನು ರೂಂ ನಲ್ಲಿ ಮಲಗಿಸಿದೋ,
ಬೆಳಗ್ಗೆ ಅವಳಿಗೆ ಎಚ್ಚರಿಕೆಯಾಗಿ,
 ನಾನು ಸಾಗರನ್ನ ನೋಡಬೇಕು ಅವನಿಗೆ ಏನ್ ಆಯಿತು ಏನ್ ಆಯಿತು ಎಂದು ಕೇಳುತ್ತಲೇ ಇದ್ದಳು... ಕರೆದುಕೊಂಡು ಹೋಗಿ ಹೋಗಿ ಎಂದು ಒಂದೇ ಸಮನೆ ಹಠ ಮಾಡಿದಳು,

ಸರಿ ಎಂದು ಸಾಗರನಗೆ ಹೋಗೋಣ ಎಂದು
ನಾವು ಇವರು ಹೊರಗೆ ನಿಂತು ಮಾತಾಡಿಕೊಂಡೋ,
ಬೇಡ ಬೇಡ ಈಗ ನಾವು ಸಾಗರ್ ಮನೆಗೆ ಹೋಗೋದು ಇವಳು ಅವನ ಬಾಡಿನ ನೋಡಿ ಕಿರ್ಚಿಕೊಂಡು ಅಳೋದು ಅಲ್ಲಿಯವರಿಗೆ ನಾವೇ ಸಾವಿಗೆ ಕಾರಣ , ಅಂತ ತಿಳಿಯೋದು ಆಮೇಲೆ ಪೋಲಿಸ್ ಕೇಸ್ ಅದು ಇದು ಅಂತ ತಿರುಗಬೇಕಾಗುತ್ತೆ, ಅದೆಲ್ಲಾ ಬೇಡ ಬಾ, ಎಂದು ಅವಳ ರೂಂ ಗೆ ಕರೆದುಕೊಂಡು ಹೋದರು ರಾಮ್,

ನೋಡು ಸ್ಮಿತಾ ಸಾಗರನ ಅಡ್ರೆಸ್ ಗೊತ್ತಿರುವ ನಿನ್ನ ಫ್ರೆಂಡ್ ನ ಯಾರನ್ನಾದರೂ ಕರೆಸು ಅವರನ್ನ ಕಳುಹಿಸಿ ಏನಾಗಿದೆ ಅಂತ ತಿಳಿಯೋಣ,

ಯಾಕೆ ಬೇಡಾ ನಾವೇ ಹೋಗೋಣ ಅವನಿಗೆ ಏನ್ ಆಗಿದೆ ಅಂತ ತಿಳಿಯಬೇಕು ಅಪ್ಪಾ ಪ್ಲೀಸ್ ಇಲ್ಲಾ ಅನ್ನಬೇಡಿ ಎಂದು ಕೇಳಿದವಳಿಗೆ,
ನೋಡಮ್ಮ ನಿನಗೆ ಅವನ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ ಕರೆಸು ಇಲ್ಲಾ ಬಿಡು,
ಅವನ್ನ ಕಟ್ಕೊಂಡು ನಮಗೇನು ಅಗಬೇಕಿಲ್ಲಾ.. ಎಂದು ನಾವು ರೂಂ ಇಂದ ಹೊರ ನಡೆಯಲು ಮುಂದಾದಾಗ,
ಸರಿ ಸರಿ ತಗೋಳಿ ಇದುವೇ ನನ್ನ ಫ್ರೆಂಡ್ ರಘು ನಂಬರ್ ಅವನಿಗೆ ಅವನ ಮನೆ ಅಡ್ರೆಸ್ ಗೊತ್ತು , ಎಂದು ಕೊಟ್ಟ ನಂಬರಿಗೆ ಕರೆ ಮಾಡಿ ಕರೆಸಿ..

ಬಂದವನಿಗೆ, ಹೋಗಿ ಸಾಗರ ಮನೆಯನ್ನು ನೋಡಿಕೊಂಡು ಅಲ್ಲೇನು ಆಗಿದೆ ಅಂತ ತಿಳಿಸು, ಯಾವುದೇ ಅನುಮಾನವೂ ಬರದ ಹಾಗೆ ಹೋಗಿ ಬಾ,
ಎಂದು ಕಳುಹಿಸಿದೋ..
ಹೋದವನು ಒಂದೆರೆಡು ಗಂಟೆಗಳ ನಂತರ ಬಂದ, ಆತನ ಮುಖದಲ್ಲಿದ್ದ ನೋವಿನ ಛಾಯೆ, ಕಣ್ಣುಗಳಲ್ಲಿ ಕಂಬನಿ ಸುರಿಸಿದ ಕುರುಹು ಹೇಳುತ್ತಿತ್ತು
ಏನೋ ಅನಾಹುತವಾಗಿದೆ ಎಂದು...

ಸಾಗರ್ ನೇಣಿಗೆ ಶರಣಾಗಿದ್ದಾನೆ..
ಎನ್ನುವ ಅವನ ಮಾತುಗಳನ್ನು ಕೇಳುತ್ತಾ ಇದ್ದ ಹಾಗೆ
ನಮ್ಮಿಬ್ಬರ ಎದೆಯೊಳಗೂ ಜ್ವಾಲ ಮುಖಿ ಸಿಡಿದ ಅನುಭವ,
ಆ ಮಾತುಗಳು ಸ್ಮಿತಾಳಿಗೂ ಸಹ ಸಿಡಿಲು ಬಡಿದ ಹಾಗಾಗಿ,

ಅಯ್ಯೋ ಸಾಗಾರಾ....... ಎಂದು ಕಿರುಚಿಕೊಂಡಳು
ನನ್ನ ಪ್ರೀತಿಯೇ ನಿನ್ನ ಸಾವಿಗೆ ಕಾರಣವಾಯಿತ್ತಲ್ಲೋ,
ನನ್ನ ಬಿಟ್ಟು ಹೋಗಿ ಬಿಟ್ಟೆಯಾ ಸಾಗಾರಾ, ಎಂದು ತಲೆತಲೆಗೆ ಬಡಿದುಕೊಂಡು
ಕುಸಿದು ಕುಳಿತು ಅಳುತ್ತಿದ್ದ ಅವಳಿಗೆ ಸಂತೈಸಲು ನಮ್ಮಲ್ಲಿ ಮಾತುಗಳಿಲ್ಲದೆ ಸುಮ್ಮನೆ ನಿಂತೋ,

ಪೋಲಿಸ್ ಬಂದಿದ್ದಾರ?

ಹೌದು ಬಂದಿದ್ದರು, ಅವನ ರೂಂ ನಲ್ಲಿ ಡೆತ್ ನೋಟ್ ಸಹ ಸಿಕ್ಕಿತು,

ಹಣೆಯಲ್ಲಿ ಇಳಿಯುವ ಬೇವರಿನ ಹನಿಯನ್ನು ಒರೆಸಿಕೊಂಡು,
ಏನಿತ್ತು ಅದರಲ್ಲಿ ಎಂದು ಕೇಳಿದೋ...

ನನ್ನ ಸಾವಿಗೆ ನಾನೇ ಕಾರಣ ಜೀವನದಲ್ಲಿ ಕೆಲವರಿಗೆ ನಂಬಿ ಸಾಲ ಕೊಟ್ಟೆ,
ಅವರು ಅದನ್ನು ಹಿಂತಿರುಗಿಸಲು ಯೋಗ್ಯತೆ ಇಲ್ಲದವರು ಎಂದು ತಿಳಿಯದೆ,
ಅಂತಹವರ ಸಹವಾಸದಿಂದ ಮುಕ್ತಿ ಬಯಸಿ ಈ ನಿರ್ಧಾರಕ್ಕೆ ಬಂದೆ ಇದಕ್ಕೆ
ಸಂಪೂರ್ಣ ನಾನೇ ನಾನು ಮಾತ್ರವೇ ಕಾರಣ...

ಹೀಗೆ ಬರೆದಿತ್ತು ಎಂದಾಗ, ನಮಗೆ ಉಸಿರು ಬಂದ ಹಾಗಾಯಿತು,
ಅವನ ಪ್ರೀತಿಯ ಸೋಲನ್ನು ಮಾರ್ಮಿಕವಾಗಿ ಬರೆದಿದ್ದು,
ಸ್ಮಿತಾಳಿಗೆ ಅರ್ಥವಾಗಿ ಇಳಿಯುವ ಕಣ್ಣೀರು ಮತ್ತಷ್ಟು ಹೆಚ್ಚಾಯಿತು..

ಇದೆಲ್ಲಾ ಅದಾದ ಮೇಲೆ, ನಾನು ಅವಳ ಜೊತೆಯೇ ಇರುತ್ತಿದ್ದೆ ಎಲ್ಲಿ ಏನಾದ್ರೂ
ಅನಾಹುತ ಮಾಡಿಕೊಂಡು ಬಿಡುತ್ತಾಳೋ ಎಂದು, ಹೀಗೆ ಒಂದು ತಿಂಗಳು ಕಳೆಯಿತು, ಅವತ್ತು ಅವಳು, ನಾನು ಸಾಗರನ ಮನೆಗೆ ಹೋಗಬೇಕು ನಾನು ಮಾಡಿದ ತಪ್ಪಿಗೆ ಅವನ ಫೋಟೋ ಮುಂದೆ ನಿಂತು ಕ್ಷಮೆ ಕೇಳಬೇಕು, ದಯವಿಟ್ಟು ನನ್ನ ಬಿಡಿ, ಎಂದು ಕೇಳಿಕೊಂಡಳು, ಅವಳನ್ನು ಒಬ್ಬಳನ್ನೇ ಹೋಗಲು ಬಿಡುವುದು ಸರಿಯಿಲ್ಲವೆಂದು, ನಾವು ಬರುತ್ತೇವೆ ಆದರೆ ಒಂದು ಕಂಡಿಶನ್, ನೀವು ಯಾವುದೇ ಕಾರಣಕ್ಕೂ ನಾನೇ ಅವನ ಲವರ್ ಅಂತ ಅಲ್ಲಿ ಯಾರಿಗೂ ಹೇಳಬಾರದು, ಸುಮ್ನೆ ಫ್ರೆಂಡ್ ಅಂತ ನೋಡಕ್ಕೆ ಬಂದೋ ಅಂತೀವಿ, ಎಂದೋ ಅದಕ್ಕೂ ಅವಳು ಒಪ್ಪಿದಳು, ಅವತ್ತು ಕರೆಸಿದ್ದ ಅವಳ ಫ್ರೆಂಡ್ ರಘುನನ್ನು ಕರೆದುಕೊಂಡು ಜೊತೆಗೆ ನಾವೂ ಹೋದೋ...
ವಠರಾದಲ್ಲೊಂದು ಸಣ್ಣದಾದ ಮನೆ... ಒಳಗೆ ಹೋಗುತ್ತಾ ಇದ್ದ ಹಾಗೆ ಹಾಲ್ ನಲ್ಲಿ ಸಾಗರ ಫೋಟೋ ಇಟ್ಟು, ದೀಪ ಬೆಳಗಿ ಹೂ ಹಾಕಿದ್ದರು,
ಅದರ ಮುಂದೆಯೇ ಮಂಡಿಯೂರಿ ಕುಳಿತು ಅಳಲು ಶುರು ಮಾಡಿದಳು ಸ್ಮಿತಾ,
ನಮ್ಮ ಸದ್ದನ್ನು ಕೇಳಿ ಅಡುಗೆಮನೆಯಿಂದ ಒಂದು ಹುಡುಗಿ ಹೊರ ಬಂತು,
ಅವಳನ್ನು ತೋರಿಸಿ ಇವರು, ಸಾಗರನ ತಂಗಿ ಎಂದು ನಮಗೆ ಹೇಳಿ,
ಇವರು ಸಾಗರನ ಫ್ರೆಂಡ್ ಸ್ಮಿತಾ ಅಂತ ಇವರು ಅವರ ತಂದೆ ತಾಯಿ ಎಂದು
ನಮ್ಮನ್ನು ಅವಳಿಗೆ ಪರಿಚಯಿಸಿದ ರಘು...
ನಮ್ಮನ್ನು ಕುಳಿತುಕೊಳ್ಳಲು ಹೇಳಿ ಕಾಫೀ ತರುತ್ತೇನೆಂದು ಆ ಹುಡುಗಿ ಒಳ ಹೋದಳು, ತಂದಿಟ್ಟ ಕಾಫೀಯನ್ನು ಹೆಸರಿಗಷ್ಟೇ ಬಾಯಿಗಿಟ್ಟು,
ನಾವು ಹೊರಡಲು ಮೇಲೆದ್ದೋ, ಒಂದು ನಿಮಿಷ ಇರಿ ನಮ್ಮ ಅಮ್ಮ ಇಲ್ಲೇ ಹೋಗಿದ್ದಾರೆ ಬಂದು ಬಿಡುತ್ತಾರೆ ಎಂದಾಗ, ಇಲ್ಲ ಇರಲಿ ಇನ್ನೊಮ್ಮೆ ಬಂದು ನೋಡುತ್ತೇವೆ ಎಂದರೂ ಇಲ್ಲಾ ಇರಿ ನೋಡಿಕೊಂಡು ಹೋಗಿ ಎನ್ನುವಾಗ,
 ಸರಿ ಎಂದು ಕುಳಿತೋ, ಒಂದೆರೆಡು ನಿಮಿಷದಲ್ಲಿ ಅವರಮ್ಮ ಅಲ್ಲಿಗೆ ಬಂದರು,
ಫೋಟೋ ಮುಂದೆ ಅಳುತ್ತಿದ್ದ ಸ್ಮಿತಾಳ ನೋಡುತ್ತಾ ಒಳ ಹೋದರು,
ಅವರ ಹಿಂದೆಯೇ ಅವರ ಮಗಳು ಹೋದರು,
ಐದು ನಿಮಿಷವಾದರೂ ಅವರಿಬ್ಬರೂ ಹೊರ ಬರಲಿಲ್ಲಾ,
ಸರಿ ಹೊರೋಡೋಣ ಎನ್ನುತ್ತಾ ಫೋಟೋ ಮುಂದೆಯೇ ಕುಳಿತಿದ್ದ ಅವಳನ್ನು ಹಿಡಿದು ಎಬ್ಬಿಸಿಕೊಂಡು ಎದ್ದೋ, ಒಳಗಿನಿಂದ ಇರಿ, ಎನ್ನುವ ಮಾತು ಕೇಳಿ ತಿರುಗಿದೋ, ಅವರಮ್ಮ ಹೊರ ಬಂದು ಸ್ವಲ್ಪ ನನ್ನ ಮಗನ ರೂಂ ಗೆ ಬನ್ನಿ, ಎಂದರು, ನಾನು ಇವರು ಸ್ಮಿತಾ ರಘು ಹೋದೋ,
ರೂಂ ಫುಲ್ ಸ್ಮಿತಾಳ ಫೋಟೋವನ್ನು ಅಂಟಿಸಿಕೊಂಡಿದ್ದ ಸಾಗರ,
ನನ್ನ ಮಗ ಸತ್ತೋದ ಇನ್ನೂ ಅವನು ಬರಲ್ಲಾ, ನಿಮ್ಮ ಮೇಲೆ ಕೂಗಾಡಿ
ಪೋಲಿಸ್ ಅದು ಇದು ಅಂತ ಏನ್ ಮಾಡಿದ್ರೂ ಅಷ್ಟೇ, ನಮಗೆ ಅವನ ನೆನಪೇ ಸಾಕು, ನಿಮ್ಮ ಮಗಳ ನೆನಪು ಬೇಡ ಎನ್ನುತ್ತಾ, ಎರಡು ಕವರ್ ನಲ್ಲಿ
ಅವನಿಗೆ ಸ್ಮಿತಾ ಕೊಟ್ಟಿದ್ದ ಎಲ್ಲಾ ಉಡುಗೊರೆಗಳನ್ನೂ ತುಂಬಿ ಕೊಟ್ಟು,
ಹೋಗಿ ಎಂದು ಕೈ ಮುಗಿದರು,
ನನ್ನ ಕ್ಷಮಿಸಿ ಬಿಡಿಮಾ ಎಂದು ಅವರ ಕಾಲಿಗೆರೆಗಿದ ಸ್ಮಿತಾಳನ್ನು,
ನೀನ್ ಯಾಕಮ್ಮ ಕ್ಷಮೆ ಕೇಳ್ತೀ, ನನ್ನ ಮಗನ ಸಾವಿಗೆ ನೀ ಕಾರನಳಲ್ಲ,
ಬಿಡು ಅವನ ವಿಧಿ ಮುಗಿತು... ನೀ ಹೊರಡು ಎಂದರು ತುಂಬಿದ ಕಣ್ಣುಗಳನ್ನು ಸೆರಗಿನಲ್ಲಿ ಒರಸಿಕೊಂಡು...
ಅವರಿಗೆ ಪ್ರತಿ ಮಾತಾಡಲು ನಮ್ಮ ಪಾಪ ಪ್ರಜ್ಞೆ ಬಿಡಲಿಲ್ಲಾ,
ನಾವು ಉಡುಗೊರೆಗಳನ್ನು ತೆಗೆದುಕೊಂಡು ನಾವು ಬಂದುಬಿಟ್ಟೋ...

ಅಂದಿನಿಂದ ಸ್ಮಿತಳಲ್ಲಿ ಒಂದೊಂದೇ ಬದಲಾವಣೆಗಳು ಕಾಣಿಸಿಕೊಂಡಿತು,
ನಾವೇ ಸ್ನೇಹಿತರ ಜೊತೆ ಮಾತಾಡಿ ಬಾ ಎಂದು ಹೇಳಿದರೂ ಅವಳು room ಬಿಟ್ಟು, ಕದಲುತ್ತಿರಲಿಲ್ಲ, ಎಷ್ಟೇ ಬಲವಂತ ಮಾಡಿದರೂ ಅವರು ಮೊದಲಿನಂತೆ ಊಟ ಮಾಡುತ್ತಿರಲಿಲ್ಲಾ, ಒತ್ತಾಯವಾಗಿ ಮಾಡಿಸಿದರೂ ಉಗಿದು ಬಿಡ್ತಾ ಇದ್ಲು,  ಅವಳಲ್ಲೇ ಏನೇನೋ ಮಾತಾಡಿಕೊಳ್ಳುತ್ತಿದ್ದಳು,
ಹೀಗೆ ಒಂದು ತಿಂಗಳು ಕಳೆಯಿತು, ಅದೊಂದು ದಿನ.
ಅಮ್ಮಾ ಸಾಗರಾ ನನ್ನ ಕರಿತಾ ಇದ್ದಾನಮ್ಮ, ನಾನು ಹೋಗ್ತೀನಮ್ಮಾ,
ಅಂದ್ಲು ನನಗೆ ಗಾಬರಿಯಾಯಿತು, ಹೇಯ್ ಸುಮ್ನೆ ಇರು ಆಗೆಲ್ಲಾ ಅನ್ನಬಾರದು ಅಂದೇ, ಇಲ್ಲಮ್ಮಾ ಬಾ ಸ್ಮಿತಾ ಬಾ ಸ್ಮಿತಾ ಅಂತ ಅವನ ದನಿ ನನಗೆ ಕೇಳಿಸುತ್ತೆ, ಮಹಡಿಯ ಮೇಲೆ ಹೋದ್ರೆ ಇಲ್ಲಿದ್ದೇ ಬಿದ್ದು ಬಿಡು ಸ್ಮಿತಾ ಅನ್ನುತ್ತೆ,
ಫ್ಯಾನ್ ನೋಡ್ತಾ ಇದ್ರೂ ನೀನು ನನ್ನ ಹಾಗೆ ನೇಣು ಹಾಕಿಕೊಂಡು ಬಂದು ಬಿಡುತ್ತೆ ಸ್ಮಿತಾ ಅನ್ನೋ ದನಿ ಕೇಳಿಸುತ್ತಮ್ಮಾ, ನಾ ಹೋಗ್ತೀ ನಾ ಹೋಗ್ತೀನಿ..
ಹೀಗೆ ಹೇಳ್ತಾನೆ ಇರೋಳು ನಾವು ಬೇಡಾ ಬೇಡಾ ಅಂದ್ರು, ಮಗಳಿಗೆ ಏನೋ ಮಾನಸಿಕ ಆಘಾತವಾಗಿದೆ ಎಂದು ಮೊದಮೊದಲು ಸುಮ್ಮನಿದ್ದೋ, ಅವತ್ತೊಂದು ರಾತ್ರಿಯಲ್ಲಿ ಅವಳಿಗೆ ಊಟ ತೆಗೆದುಕೊಂಡು ಹೋದೆ, ಲೈಟ್ ಆಫ್ ಆಗಿತ್ತು, ಆನ್ ಮಾಡಿದ್ರೆ ಅವಳು ಮಂಚದ ಮೇಲೆ ಕೂದಲು ಬಿಟ್ಟುಕೊಂಡು ಕುಳಿತಿದ್ದಳು, ‘ಯಾಕೆ ಲೈಟ್ ಹಾಕಿದ್ದು ಆರ್ಸು’ ಎಂದು ಗಡಸಾದ ದನಿಯಲ್ಲಿ ಹೇಳಿದ್ರು ನನಗೆ ವಿಚತ್ರ ಎನ್ನಿಸಿ ಹತ್ತಿರ ಹೋದೆ, ಹೋಗೆ ಹೊರಗೆ ಅನ್ನೋ ಗಂಡಸಿನ ದನಿ ಅದು, ಹತ್ತರ ಹೋಗುತ್ತಾ ಇದ್ದ ಹಾಗೆ
ಹೋಗೆ ಹೊರಗೆ ಎಂದು ಅವಳು ನನ್ನ ನೋಡಿದ್ಲು ಅವಳ ಕಣ್ಣುಗಳು ಕೆಂಪಾಗಿತ್ತು, ಮುಖದಲ್ಲಿ ಕೊಲ್ಲುವ ಅಕ್ರೋಶವಿತ್ತು, ಅದನ್ನು ನೋಡಿದ ನಾ ಅಲ್ಲೇ ನಡುಗಿ ಬಿಟ್ಟೆ, ಅದರೂ ಅವಳ ಪಕ್ಕ ಕುಳಿತೆ, ಅವಳ ಹಣೆಯಿಂದ ಬೇವರಿನ ಹನಿಗಳು ಇಳಿಯುತ್ತಿತ್ತು, ಯಾಕಮ್ಮ ಇಷ್ಟು ಬೆವತ್ತಿದ್ದೀಯಾ ಎಂದು ಫ್ಯಾನ್ ಹಾಕಿದೆ. ಪವರ್ ಇದ್ದರೂ ಅದು ತಿರುಗಲಿಲ್ಲಾ,
ಊಟ ಮಾಡಿಸಕ್ಕೆ ಹೋದೆ ಬೇಡಾ ಅಂತ ಹೇಳಲಿಲ್ಲಾ ಎಂದು ಕೂಗಾಡಿ ತಟ್ಟೆಯನ್ನು ಕಿತ್ತು ಎಸೆದು ಬಿಟ್ಟಳು, ಅಲ್ಲಿಂದ ಬಂದು ಇವರಿಗೆ ತಿಳಿಸಿ ಇವರನ್ನು ಕರೆದುಕೊಂಡು ಹೋದೆ, ಅವರು ಸಹ ಯಾಕಮ್ಮ ಏನ್ ಆಯಿತು ಅಂತ ಹತ್ತಿರ ಹೋಗಿ ನೋಡಿ, ಬೆವತ್ತಿದ್ದ ಅವಳಿಗೆ ಫ್ಯಾನ್ ಹಾಕಲು ಮುಂದಾದರು ನಾನು ಹಾಕಿದೆ ಆದರೂ ಅದು ಆನ್ ಅಗಲಿಲ್ಲಾ ಎಂದೇ,
ಸರಿ  ಅಂತ ಕಿಟಕಿ ತೆರೆದರು, ಅವಳು ಹೋಗೆ ಹೊರಗಿ ಎಂದ ಕೂಡಲೇ ತೆಗೆದಿದ್ದ ಕಿಟಕಿ ದಡರ್ ಎಂದು ಮುಚ್ಚಿಕೊಂಡಿತು,
ಇವರು ಅವಳ ಭುಜವನ್ನು ಹಿಡಿದು, ಏನಮ್ಮ ಆಯಿತು ಸ್ಮಿತಾ ಎಂದಾಗ ಹೇಯ್ ಎತ್ತೋ ಕೈ ನಾನು ಸ್ಮಿತಾ ಅಲ್ಲಾ ಸಾಗರ್ ಅನ್ನೋ ಗಂಡಿನ ದನಿಯಲ್ಲಿ ಹೇಳಿದ್ಲು, ನಾನು ಹತ್ತಿರ ಹೋಗಿ ಸುಧಾರಿಸಿಕೋ ಸ್ಮಿತಾ, ಎಂದು ಕೈ ಹಿಡಿದೇ ಇಬ್ಬರನ್ನೂ ಹಿಡಿದು ನೂಕಿದಳು,
ನಿಮ್ಮ ಕಣ್ಣ ಮುಂದೆಯೇ ನಿನ್ನ ಮಗಳನ್ನ ಅನುಅನುವಾಗಿ ಹಿಂಸಿಸಿ ಅವಳನ್ನು ಕರೆದುಕೊಂಡು ಹೋಗ್ತೀನಿ, ಒಂದೇ ಸಲಕ್ಕೆ ಅವಳನ್ನು ಇಲ್ಲಿಂದ ಕರ್ಕೊಂಡು ಹೋಗಕ್ಕೆ ನನ್ನಿಂದ ಸಾಧ್ಯ, ಆದರೆ ಸಾವಿನ ನೋವು ಏನು ಅಂತ ನಿಮಗೆ ತಿಳಿಯಬೇಕು ಅದನ್ನ ತಿಳಿಸಿಯೇ  ಹೋಗೋದು,
ಹೋಗಿ ಹೊರಗೆ ಇವತ್ತಿನಿಂದ ಆರಂಭ.....
ಎಂದು ಕಿರುಚಿದಳು, ನಾವು ಹೊರ ಬರುತ್ತಾ ಇದ್ದ ಹಾಗೆ ಲೈಟ್ ಆಫ್ ಆಗಿ,
ಬಾಗಿಲು ಮುಚ್ಚಿಕೊಂಡಿತು, ಅಂದಿನಿಂದ ನಮ್ಮ ಮಗಳು ನಮ್ಮ ಮಗಳಾಗಿಲ್ಲ,
ಎಂದು ಕಣ್ಣಿರು ಒರಸಿಕೊಂಡ ವಂದಿನಿಯನ್ನು, ರಾಮ್ ಸಮಾಧಾನ ಪಡಿಸಿದರು,
ಕೆಳಗೆ ಬಿದ್ದ ಮುತ್ತುಗಳನ್ನು ಹೆಕ್ಕಿಕೊಳ್ಳುವ ಹಾಗೆ,
ಒಂದೊಂದು ಮಾತನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದ ಪ್ರಜಿನ್....

ಎರಡು ನಿಮಿಷಗಳ ನಂತರ ಬನ್ನಿ ಮೇಲೆ ನಮ್ಮ ಮಗಳ ರೂಂ ಇದೆ ಎಂದು
ಒಳಗಿನಿಂದ ಇರುವ ಮೆಟ್ಟಿಲ ಮೂಲಕ ಕರೆದುಕೊಂಡು ಹೋದರು,
ಹೋಗುವ ಮುನ್ನ ಅಲ್ಲೇ ಸಣ್ಣದಾದ ಸ್ಟೋರ್ ರೂಂ ತೆರೆದು,
ನೋಡಿ ಪ್ರಜಿನ್, ಅವಳ ರೂಂ ನಲ್ಲಿದ್ದ ಕಂಪ್ಯೂಟರ್, ಲ್ಯಾಪ್ ಟಾಪ್, ಮುಸಿಕ್ ಸಿಸ್ಟಮ್, ಅವಳ ಮೊಬೈಲ್ ಗೋಡೆ ಗಡಿಯಾರದಿಂದ ಎಲ್ಲವನ್ನು ಹೇಗೆ ಪುಡಿ ಪುಡಿ ಮಾಡಿ ಹಾಕಿದ್ದಾಳೆ ಎಂದು, ಎನ್ನುತ್ತಾ ತೋರಿಸಿದ್ದನ್ನು ನೋಡಿ,
ಮುಂದೆ ನಡೆದರು...
ಅವಳ ಕೋಣೆಯ ಬಾಗಿಲು ತೆರೆಯುತ್ತಾ ಇದ್ದ ಹಾಗೆ, ಕತ್ತಲಾಗಿದ್ದ ಕೋಣೆಗೆ ಬೆಳಕನ್ನು ಆನ್ ಮಾಡಿದ, ರಾಮ್ ನನ್ನು ನೋಡಿ ಯಾರು ಯಾರು
ಎನ್ನುವ ಧ್ವನಿ ಮಂಚದ ಮೇಲೆ ಮಲಗಿದ್ದ ಹುಡುಗಿಯಿಂದ ಬಂದಿತು,
ಆ ದನಿಯಲ್ಲಿ ಮಂಪರು ಇತ್ತು, ಅವನು ಹತ್ತಿರ ಹೋದ..
ಅವಳಿಗೆ ಅರವಳಿಕೆ ಕೊಟ್ಟಿದ್ದೇವೆ, ಅಮಾವಾಸ್ಯೆ ದಿನಗಳಲ್ಲಿ ಅವಳನ್ನ ಕಂಟ್ರೋಲ್ ಮಾಡೋದು ಕಷ್ಟ, ಅಂತ ಹೀಗೆ ಮಾಡ್ತೀವಿ.
ಎಂದರು ಅವಳ ತಂದೆ, ಪ್ರಜಿನ್ ಅವಳನ್ನು ಗಮನಸಿದ, ಸೊರಗಿದ ದೇಹ,
ಕಳೆಗುಂದಿದ ಮುಖ, ತೋಳಿನ ಮೇಲಿದ್ದ ಹಚ್ಚೆಯನ್ನು ನೋಡುತ್ತಾ ಇರುವುದನ್ನು ಗಮನಿಸಿದ ರಾಮ್,
ಅದು ಸಣ್ಣದಾದ ಪಾಟ್ ಒಳಗೆ ಇರುವ ಗಿಡ,
ಮೂರು ಹೂ ಬಿಟ್ಟಿದೆ ಒಂದು ಅವಳು ಇನ್ನೆರೆಡು ನಾವಿಬ್ಬರು, ಅಂತ
ಅವಳು ಹೇಳೋಳು, ಎಂದರು.
ಅದನ್ನು ಕೇಳಿಸಿಕೊಂಡು ಅವಳ ಕಣ್ಣರೆಪ್ಪನ್ನು ಸರಿಸಿ ನೋಡಿ,
ಗೋಡೆಯ ಮೇಲೆಲ್ಲಾ ನನ್ನ ಸಾಗರ್ ನನ್ನ ಸಾಗರ್ ಎಂದು ಲಿಪ್’ಸ್ಟಿಕ್ ನಲ್ಲಿ ಬರೆದಿದ್ದನ್ನು ಕಾಣುತ್ತಾ..
ಸರಿ ಬನ್ನಿ ಹೋಗೋಣ ಎಂದು ಕೆಳಗಿಳಿದ....
 ಅಷ್ಟರಲ್ಲಿ ವಂದಿನಿ ಎಲ್ಲರಿಗೂ ಟೀ ತಂದಿಟ್ಟರು...
ಅದನ್ನು ತೆಗೆದುಕೊಂಡು ಮಾತಾಡದೆ, ತನ್ನೊಳಗೆ ಏನೋ ಯೋಚಿಸುತ್ತಾ
ಚಹಾ ಸೇವಿಸುತ್ತಿದ್ದ...

ಏನ್ ಅನ್ನಿಸುತ್ತೆ ಸಾರ್, ನನ್ನ ಮಗಳು ಮೊದಲಿನ ಹಾಗೆ ಆಗುತ್ತಾಳ
ಎಂದು ರಾಮ್ ಮಾತಾಡಿಸಿದರು....
ಇಲ್ಲಿಯವರೆಗೂ ಎಲ್ಲವನ್ನೂ ನೋಡಿ ಆಯ್ತು, ಹೀಗಿರೋದು ನಿಮ್ಮದೊಂದು ಮಾತಿನ ಮೇಲಷ್ಟೇ ನಿಮ್ಮ ಬಗ್ಗೆ ನಿಮ್ಮ ಸ್ನೇಹಿತ ಬಹಳ ಹೇಳಿದ್ರು,
ಅವರು ಹಲವಾರು ಪ್ರೇತಾತ್ಮಗಳ ಕೇಸ್ ಗಳನ್ನೂ ಡೀಲ್ ಮಾಡಿದ್ದಾರೆ ಎಂದಾಗ ಎಲ್ಲೋ ಸಣ್ಣದೊಂದು ನಂಬಿಕೆ ಮೊಳಕೆ ಇಟ್ಟಿತ್ತು.
ಈಗ ನೀವು ಹೀಗೆ ಏನನ್ನು ಹೇಳದೆ ಇರುವುದು ಯಾಕೋ ಎದೆಯೊಳಗೆ ಆತಂಕವನ್ನು ಎರಚುತ್ತಿದೆ...
ಎಂದವರಿಗೆ...

ಸ್ಮಿತಾ ರೂಂ ನಲ್ಲಿ ಫ್ಯಾನ್ ಯಾಕೆ ಬಿಚ್ಚಿದ್ದೀರಿ?
ಎಂದ ಪ್ರಜಿನ್....

ಕತ್ತಲಲ್ಲಿಗೆ ಕೈ ತೋರಿಸಿ, ಸಾಗರ್ ನನ್ನ ಕರಿತಾ ಇದ್ದಾನೆ ನೋಡಿ ನೋಡಿ ಅನ್ನೋಳು,
ಅವಳು ಅನಾಹುತ ಮಾಡಿಕೊಳ್ಳಬಾರದು ಅಂತ,
ಒಮ್ಮೆ ನಾನು ಜೊತೆ ಮಲಗಿದ್ದಾಳೆ ಅವಳು ವೆಲ್ ನಲ್ಲಿ
ನೇಣು ಬಿಗಿದುಕೊಳ್ಳಲು ನೋಡಿದಳು, ಅಂದಿನಿಂದ ಭಯವಾಗಿ ಹಾಗೆ ಮಾಡಿದೋ ಎಂದರು ಅವಳ ತಾಯಿ...


ಕುಡಿದ ಮುಗಿಸಿದ ಟೀ ಕಪ್ ಅನ್ನು ಕೆಳಗಿಟ್ಟು,
ಸರಿ ನಾಳೆ ನನ್ನ ಟ್ರೀಟ್ ಮೆಂಟ್ ಶುರು ಮಾಡ್ತೀನಿ,
ಅವಳಿಗೆ ನನ್ನಿಂದ cure ಆಗುತ್ತೆ ಅನ್ನೋದಾದ್ರೆ ಮಾತ್ರವೇ ಆಗುತ್ತೆ ಅಂತೀನಿ
ಇಲ್ಲದಿದ್ದರೆ ಆಗಲ್ಲ ಅಂತ ಹೇಳುವೆ ಎಂದ...

ಹಾಗೆ ಅಗಲಿ ಪ್ರಜಿನ್ ಎಂದರು ರಾಮ್..

ನಾಳೆಯೂ ನಾನು ಬರಕ್ಕೆ ಆಗಲ್ಲಾ, ಇನ್ಮೇಲೆ ಇವರೊಬ್ಬರೇ ಬಂದರೂ ಸಾಕು ಆಲ್ವಾ ಅಂಕಲ್ ಎಂದು ಕೇಳಿದ ಆನಂದ್,
ಆಗುತ್ತಪ್ಪಾ.. ಎಂದು ಅವನಿಗೆ ಹೇಳಿ ಪ್ರಜಿನ್ ನನ್ನು ನೋಡುತ್ತಾ,
ಅಲ್ಲಿಂದ ಬಂದು ಹೋಗೋದು ದೂರವಾಗುತ್ತೆ,
ಇಲ್ಲೇ ಪಕ್ಕದಲ್ಲೇ ನನ್ನ ಗೆಳೆಯನ ಮನೆ ಇದೆ ಅಲ್ಲೊಂದು ರೂಮ್ ಖಾಲಿ ಇದೆ ನೀವು ಅಲ್ಲೇ ಉಳಿದುಕೊಳ್ಳಿ, ನಿಮಗೆ ಊಟ ನಮ್ಮ ಮನೆಯಿಂದಲೇ ಬರುತ್ತೆ,

ಹಾಗೆ ಅಗಲಿ ಎಂದು, ಸರಿ ನಾವಿನ್ನೂ ಹೊರಡುತ್ತೇವೆ,
ಎಂದೇಳಿ ಹೊರಟು,
ಮಾರನೆಯ ದಿನ ತನ್ನ ಬೈಕ್ ನೊಂದಿಗೆ ಬಂದು  ಬ್ಯಾಗ್
ಹಾಲ್ ನಲ್ಲಿಟ್ಟು ಸ್ಮಿತಾಳ ರೂಂ ಗೆ ಹೋದ...

ಈ ಬಾರಿ ಎಚ್ಚರವಾಗಿ ಇದ್ದ ಅವಳು ಹೊಸ ಮುಖ್ಯವನ್ನು ನೋಡುತ್ತಾ ಇದ್ದ ಹಾಗೆ, ಯಾರೋ ನೀನು? ಯಾರೋ ನೀನು? ಎಂದವಳ ಹತ್ರಕ್ಕೆ ಹೋಗಿ ಶಾಂತಚಿತ್ತದಿಂದ ಅವಳೆದುರು ನಿಂತ, ಹೋಗೋ ಹೊರಗೆ ಎಂದು ಅವನನ್ನು ಹೊಡೆಯಲು ಎದ್ದಳು ನಿಲ್ಲಲ್ಲೂ ಸಹ ಶಕ್ತಿ ಇಲ್ಲದ ಹಾಗೆ ಮಂಚದ ಮೇಲೆ ಕುಸಿದು ಕುಳಿತಳು.. ಅವನು ಅವಳ ಪಕ್ಕ ಕೂತ,
ಹೊಡೆಯಲು ಎತ್ತಿದ ಅವಳ ಕೈಯನ್ನು ಹಿಡಿದುಕೊಂಡು
ಮಂಚದ ಮೇಲೆ ಊರಿದ,ಬಿಡಿಸಿಕೊಳ್ಳಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ..ಸುಮ್ಮನಾಗಿ ಕೂತಳು..

ಈಗ ನನಗೆ ಹೇಳು ಯಾರು ನೀನು? ಎಂದು ಕೇಳಿದರೂ ಸುಮ್ಮನೆ ಇದ್ದಳು,
ಆಕ್ರೋಶದಿಂದ ಕಣ್ಣುಗಳನ್ನು ಅಗಲಿಸಿ ಮತ್ತದೇ ಪ್ರಶ್ನೆ ಮಾಡಿದ..
ಆಗಲೂ ಉತ್ತರವಿಲ್ಲಾ, ಯಾರೋ ನೀನು ಬೊಗಳು ಎಂದೊಡನೆ,
ನಾನೇ ಸಾಗಾರ..ಎಂದು ಹೇಳಿದ ಅವಳ ದೇಹದಲ್ಲಿ ಶಕ್ತಿ ಬಂದಂತೆ
ಕೈಯನ್ನು ಎಳೆದುಕೊಂಡಳು, ನಾನೇ ನಾನೇ ಸಾಗರ್ ಎನ್ನುವ ಅವಳ ದನಿ ಗಂಡಸಿನ ದನಿಯಂತೆ ಗಡಸಾಗಿತ್ತು...
ಇವಳ ಮೇಲ್ಯಾಕೆ ಬಂದೆ?

ಇವಳು ನನ್ನ ಪ್ರೇಯಸಿ ಇವಳನ್ನ ಕರ್ಕೊಂಡು ಹೋಗಕ್ಕೆ ಬಂದೆ...

ಸತ್ತಿರೋ ನಿನಗೆ ಬದುಕಿರೋ ಇವಳು ಸಿಗಲ್ಲಾ, ಬಿಟ್ಟು ತೊಲಗು,
ಇವಳನ್ನ ಸಾಯಿಸಿಯೇ ಕರ್ಕೊಂಡು ಹೋಗ್ತೀನಿ...
ಎಂದು ಹೇಳಿದ ದನಿಯಲ್ಲಿ ದೃಡತೆ ಬಲವಾಗಿತ್ತು...

ತಪ್ಪು ಸಾಗರ್ ತಪ್ಪು, ನಿನ್ನ ಆಟ ಇನ್ನು ನಡೆಯಲ್ಲಾ,
ಪ್ರೇತಾತ್ಮಗಳಿಗೆ ನಾನು ಪ್ರೇತಾತ್ಮ, ಹೇಳ್ತಾ ಇದ್ದೀನಿ ಇಲ್ಲಿಂದ ತೊಲಗಿ ಬಿಡು,
ಅದುವೇ ನಿನಗೆ ಒಳ್ಳೆಯದು, ಇಲ್ಲದಿದ್ದರೆ..........

ಅಲ್ಲಿಯವರೆಗೂ ತಲೆಬಾಗಿದ್ದ ಸ್ಮಿತಾ ಮೇಲೆತ್ತಿ,
ಏನೋ ಮಾಡ್ತೀಯಾ ಏನ್ ಮಾಡ್ತೀಯಾ?
ಎಂದು ಕಣ್ಣುಗಳಲ್ಲಿ ಕೋಪವನ್ನು ಅಡಗಿಸಿಟ್ಟುಕೊಂಡು ನೋಡಿದಳು,
ಏನ್ ಮಾಡ್ತೀನಾ? ಮಾಡೋದು ನೋಡುವಂತೆ, ನೋಡುವಂತೆ..
ಎಂದೇಳುತ್ತಾ, ಹೊಡೆಯಲು ಎತ್ತಿದ ಅವಳ ಎರಡು ಕೈಗಳನ್ನು ತನ್ನ ಒಂದೇ ಕೈಯಲ್ಲಿ  ಹಿಡಿದು ಇನ್ನೊಂದು ಕೈಯನ್ನು ಅವಳ ಹಣೆಯ ಮೇಲೆ ಇಟ್ಟು,
ನಿದ್ರಿಸು ದುಷ್ಟ ಶಕ್ತಿಯೇ ನಿದ್ರಿಸು... ಎಂದು ಒತ್ತಿದ.. ಅವಳು ಹಾಗೆ ಮೂರ್ಚೆ ಹೋದಳು.....
ಕೋಣೆಯ ಬಾಗಿಲು ಹಾಕಿಕೊಂಡು, ಅಲ್ಲಿಂದ ಹೊರಗೆ ಬಂದಾ...
ಅಲ್ಲೇ ನಿಂತಿದ್ದ ಅವಳ ಹೆತ್ತವರು, ಏನಾಯ್ತು? ಎಂದರು,
ಅವಳು ಮಲಗಿದ್ದಾಳೆ ಕೆಳಗೆ ಬನ್ನಿ ಎಂದು,
ಹಾಲ್ ನಲ್ಲಿ... ನಿಮ್ಮ ಮಗಳು ಮಾನಸಿಕವಾಗಿ ಬಹಳ ನೊಂದಿದ್ದಾಳೆ,
ಅವನ ಸಾವಿಗೆ ನಾನೇ ಕಾರಣನಾದೆ ಅನ್ನೋ ಯಾವುದೋ ಕೂಗು ಅವಳೊಳಗೆ ಕೇಳಿಸುತ್ತಾ ಇದೆ, ಅದಕ್ಕೆ ಅವಳೂ ಸಾಯಬೇಕು ಅನ್ನೋ ನಿರ್ಧಾರ ಮಾಡಿದ್ದಾಳೆ..

ಈಗ ಏನ್ ಮಾಡೋದು ಸರ್?
ನನ್ನ ಸಾರ್ ಅನ್ನಬೇಡಿ ಪ್ರಜಿನ್ ಅನ್ನಿ ಸಾಕು..
ಅವಳಿಗೆ ಬರೀ ಸೈಕಲಾಜಿಕಲ್ ಟ್ರೀಟ್ಮೆಂಟ್ ಸಾಕು ಅಂತಾನೆ ತಿಳಿದಿದ್ದೆ, ಅವಳ ಸುತ್ತಲೂ ಯಾವುದೋ ಅಮಾನುಷವಾದ ಶಕ್ತಿಯ ಸೂಚನೆಯೂ ಇರುವ ಹಾಗಿದೆ, ಅದನ್ನೂ ಪರಿಶೀಲಿಸಿ ಬಿಡೋಣ.. ನಾಳೆ ಬರ್ತೀನಿ ಎಂದವನಿಗೆ ಅವನಿಗಾಗಿ ಸಿದ್ಧ ಮಾಡಿದ ರೂಂ ನಲಿ ಬಳಿ ತಂದು ಬಿಟ್ಟು ಹೋದರು ರಾಮ್..

ಮಾರನೆಯ ದಿನ ಬಂದು, ತನ್ನ ಬ್ಯಾಗ್ ನೊಂದಿಗೆ,
ನೀವೂ ಬನ್ನಿ
ಈ ಯಂತ್ರದಲ್ಲಿ ನಗೆಟಿವ್ ಎನರ್ಜಿ ಮನೆಯಲ್ಲಿ ಇದ್ದರೆ ಸದ್ದು ಮಾಡಿ
ತೋರಿಸುತ್ತೆ ಎನ್ನುತ್ತಾ ಅವಳ ರೂಂ ಗೆ ಹೋದ......
ದೊಡ್ಡದಾದ ಅವಳ ರೂಂ ನೊಳಗೆ ಮೂವರೂ ಪ್ರವೇಶಿಸಿದರು,
ಕೈಯಲ್ಲಿ ಹಿಡಿದಿದ್ದ ಯಂತ್ರವನ್ನು ಸುತ್ತಲೂ ತೋರಿಸಿ ನೋಡುತ್ತಿದ್ದ,
ಯಂತ್ರದಿಂದ ಯಾವುದೇ ಸೂಚನೆಯೂ ಸಿಗಲಿಲ್ಲಾ..
ಹಾಗೆ ಸ್ಮಿತಾಳ ಹತ್ತಿರಕ್ಕೆ ಬರುತ್ತಾ ಇದ್ದ ಹಾಗೆ...
ಯಂತ್ರದಿಂದ ಸದ್ದು ಹೊರ ಹೊಮ್ಮತೊಡಗಿತು....
ಅಲ್ಲೇ ನಿಂತಿದ್ದ ಅವಳ ಹೆತ್ತವರ ಹಣೆಯಲ್ಲಿ ಭಯದ ಬೇವರಿನ ಹನಿಗಳು ಮೂಡಿದವು....ಇನ್ನೂ ಹತ್ತಿರಕ್ಕೆ ಬಂದ ಮುಳ್ಳು ಮೇಲೇಳಲು ಶುರು ಮಾಡಿತು...ಸದ್ದು ಜೋರಾಯಿತು...
ಕೂದಲು ಇಳಿಬಿಟ್ಟುಕೊಂಡು ಕುಳಿತಿದ್ದ ಸ್ಮಿತಾ..ಹೂ ಹೂ ಎನ್ನುವ ವಿಚಿತ್ರವಾಗಿ ಸದ್ದು ಮಾಡುತ್ತಾ ತಲೆಯನ್ನು ಅತ್ತಿತ್ತಾ ಮೆಲ್ಲನೆ ಆಡಿಸುತ್ತಿದ್ದಳು...
ಅವನು ಯಂತ್ರದಿಂದ ದೃಷ್ಟಿಯನ್ನು ಹೆತ್ತವರತ್ತಾ ನೋಡಿ,
ಇಲ್ಲಿ ಅಮಾನುಷವಾದ ಶಕ್ತಿಯ ಸುಳಿವಿದೆ... ಎಂದು
ಜೇಬಿನಲ್ಲಿ ಕೈ ಹಾಕಿ ಒಂದು ಸಣ್ಣದಾದ ಬಾಟಲನ್ನು ತೆಗೆದುಕೊಂಡು ಹಣೆಗೆ ಒತ್ತಿ ಹಿಡಿದು ಯಾವುದೋ ಮಂತ್ರವನ್ನು ತನ್ನೊಳಗೆ ಗುನುಗಿಕೊಂಡು,
ಈ ಪವಿತ್ರವಾದ ಜಲವನ್ನು ಸಹಿಸುವ ಶಕ್ತಿ ಯಾವ ದುಷ್ಟ ಶಕ್ತಿಗೂ ಇಲ್ಲಾ.. ಎಂದೇಳಿ.. ಅದನ್ನು ಸ್ಮಿತಾಳ, ಕಾಲ್ ಮೇಲೆ ಎರಚಿದ....
ಆ ಹನಿಗಳು ಅವಳ ಚರ್ಮವನ್ನು ಸ್ಪರ್ಶಿಸುತ್ತಾ ಇದ್ದ ಹಾಗೆ...
ಕೆಂಡ ಬಿದ್ದವಳಂತೆ...ಕಿರುಚಿಕೊಂಡು.. ಅಮ್ಮಾ ಉರಿ..
ಉರಿ.. ಎಂದು ಗೋಳಾಡಿದಳು... ಅವಳ ಹತ್ತಿರ ಹೋಗಲು ಮುಂದಾದ ಇಬ್ಬರನ್ನು ತಡೆದು.. ಬೇಡಾ ಮುಟ್ಟಬೇಡಿ ಈಗ ಎಂದ...
ಬನ್ನಿ ಇಲ್ಲಿ ಎಂದು.. ಅಲ್ಲಿದ್ದ ಒಂದು ಸೆಲ್ಫ್ ಮೇಲೆ, ಗಣೇಶನ ಪುಟ್ಟದಾದ ವಿಗ್ರಹವನ್ನಿಟ್ಟು, ಇದು ಅತ್ಯಂತ ಪವರ್ ಪುಲ್ ಗಣೇಶ...
ಇದು ಇಲ್ಲೇ ಇರಲಿ ಎಂದವನಿಗೆ.. ಬೇಡ ಪ್ರಜಿನ್ ಅವಳು ಒಡೆದು ಹಾಕಿ ಬಿಡ್ತಾಳೆ, ನಾನು ಇದನ್ನು ಪೂಜೆ ಮನೆಯಲ್ಲಿ ಇಟ್ಟುಕೊಂಡು ಪೂಜಿಸುವೆ. ಎಂದ ವಂದನಿಗೆ.. ನೀವಿಬ್ಬರೂ ಅದರ ಮುಂದೆ ನಿಂತು ಪ್ರಾರ್ಥಿಸಿ. ಅದನ್ನು ಮುಟ್ಟಿ ನಮಸ್ಕರಿಸಿ ಎಂದ..
ಇಬ್ಬರೂ ಹಾಗೆ ಮಾಡಿದ್ರು.. ನೋಡಿದ್ರಾ.. ನಿಮ್ಮಷ್ಟು ಸುಲಭವಾಗಿ
ಇದನ್ನು ಪ್ರೇತಾತ್ಮ ಆವರಿಸಿರುವ ಯಾರಿಂದಲೂ ಮುಟ್ಟಕ್ಕೆ ಅಗಲ್ಲಾ..
ಬನ್ನಿ ಹೋಗೋಣ ಎಂದಾಗ..ಗೋಳಾಡುತ್ತಿರುವ,
ಮಗಳನ್ನು ನೋಡಿಕೊಂಡೆ ಅವರಿಬ್ಬರೂ ಹೊರ ಹೋದರು....

ಕೆಳಗೆ ಬಂದು..
ಸರಿ ನಾಳೆಯಿಂದ ನನ್ನ ಟ್ರೀಟ್ ಮೆಂಟ್ ಶುರು ಅವರಿಬ್ಬರಿಗೂ...!
ನಂಬೋಣ.. ಒಳ್ಳೆಯದೇ ಆಗುತ್ತೆ , ಮೊದಲಿನಂತೆ ನಿಮ್ಮ ಮಗಳು ಸಿಗುತ್ತಾಳೆ
ಎಂದು.. 
ನೀವೇ ನಮಗೆ ಈಗಿರುವ ಒಂದೇ ಒಂದು ನಂಬಿಕೆ, ಕತ್ತಲಿನ ಕಡಲಿನಲ್ಲಿ
ಇನೇನು ಮುಳುಗುತ್ತೇವೆ ಎಂದುಕೊಂಡವರಿಗೆ ಸಣ್ಣ ಹಣತೆಯ ಬೆಳಕಿನ ಆಸರೆ ಸಿಕ್ಕ ಹಾಗೆ ಆಗಿದೆ, ಎಷ್ಟು ಹಣ ಬೇಕಿದ್ದರೂ ಖರ್ಚು ಅಗಲಿ.

ಎಲ್ಲಿಗೆ ಬೇಕಿದ್ದರೂ ಹೋಗೋಣ.... ಎಂದು ಕಣ್ಣೀರು ಒರಸಿಕೊಂಡರು,

ವಂದಿನಿ....

ನನ್ನಿಂದ ಆದ ಎಲ್ಲವನ್ನು ನಾನು ಪ್ರಾಮಾಣಿಕವಾಗಿ ಮಾಡ್ತೀನಿ.
ನೀವು ನಿಶ್ಚಂತೆಯಾಗಿರಿ.. ನಾನು ಬರ್ತೀನಿ.....

ಮಾರನೆಯ ದಿನ ಎಂದಿನಂತೆ ಬಂದು,
ವಂದಿನಿ ಕೊಟ್ಟ ತಿಂಡಿ ತಿಂದು,
ಸ್ಮಿತಾಳ ರೂಂಗೆ ಹೋದ...
ಅವಳು ಎಂದಿನಂತೆ ಅವನನ್ನು ನೋಡುತ್ತಾ ಇದ್ದ ಹಾಗೆ
ತನ್ನ ವಿರೋಧವನ್ನು ವ್ಯಕ್ತಪಡಿಸಿದಳು..
ಅದರೂ ಅವಳ ಪಕ್ಕ ಕೂತು...

ನೋಡು ನಾನು ನಿನಗೆ ಯಾವುದೇ ರೀತಿಯ ಹಿಂಸೆ ಕೊಡುವ ಉದ್ದೇಶದಿಂದ ಬಂದಿಲ್ಲಾ, ನಿನ್ನ ಜೊತೆ ಮಾತಾಡೋಣ ಅಂತ ಬಂದಿದ್ದೀನಿ,
ನಿನ್ನ ಮಾತುಗಳನ್ನ ಕೇಳಿ ನನ್ನಿಂದ ಆದ ಸಹಾಯ ನಿನಗೆ ಮಾಡೋಣ ಅಂತ,

ನನಗೆ ಬೇಕಿರೋ ಸಹಾಯ ಅಂದ್ರೆ ನಾನು ನನ್ನ ಸಾಗರನ ಜೊತೆ
ಹೋಗಬೇಕು ಅಷ್ಟೇ. ಎಂದವಳಿಗೆ...

ಸರಿ ನಾನು ಸಹಾಯ ಮಾಡ್ತೀನಿ ಅಂತ ನಿಂಗೆ ಮಾತು ಕೊಡ್ತೀನಿ,
ಆದರೆ ಅದಕ್ಕೂ ಮುನ್ನ ನಿನ್ನ ಪ್ರೀತಿಯ ಬಗ್ಗೆ ನನಗೆ ಹೇಳು,
ಹೇಗೆ ಶುರುವಾಯಿತು, ಯಾಕೆ ಹೀಗಾಯಿತು ಅಂತ..

ಅವಳ ಐದು ನಿಮಿಷದ ಮೌನವನ್ನು ಮುರಿದು,
ಸರಿ ಹೇಳ್ತೀನಿ, ಎಂದೊಡನೆ, ಇಲ್ಲಾ ನಾನು ಹೇಳ್ತೀನಿ
ಎಂದಿತು ಗಂಡಸಿನ ದನಿಯಲ್ಲಿ ಅವಳೊಳಗಿನ ಆತ್ಮ.....

ಇಲ್ಲಾ ನಾನ್ ಹೇಳ್ತೀನಿ ಎಂದು ಹೆಣ್ಣಿನ ದನಿ,
ಇಲ್ಲಾ ನಾನ್ ಹೇಳ್ತೀನಿ ಎಂದು ಗಂಡಿನ ದನಿ..

ಸರಿ ಸರಿ ಕಿತ್ತಾಟ ಬೇಡಾ ಸ್ಮಿತಾ ಅವರೇ ಹೇಳಲಿ..ನೀನ್ ಸುಮ್ನೆ ಇರು ಎಂದ ಪ್ರಜಿನ್..

ಸಾಗರ ತನ್ನ ಪ್ರೀತಿಯ ಕಥೆಯನ್ನು ಹೇಳಲು ಆರಂಭಿಸಿದ...
ಸ್ಮಿತಾ ಕಾಲೇಜಿನಲ್ಲಿ ಇವಳಿಗೆ ಫ್ರೆಂಡ್ ಆದ ಸೌಮ್ಯ ಅಂತ ಒಂದು ಹುಡುಗಿ ಇದ್ಲು, ಒಂದು ದಿನ ಇವರಿಬ್ಬರೂ ಬರುವಾಗ,
ನಾನು ತಡೆದು, ಸೌಮ್ಯಳನ್ನು ಕರೆದುಕೊಂಡು ಹೋಗಿ ನನ್ನ ಪ್ರೀತಿಯನ್ನು ಹೇಳಿದೆ, ಅವಳು ಅದನ್ನು ಒಪ್ಪದೇ ಅಲ್ಲಿಂದ ಹೊರಟು ಹೋದ್ಲು,
ಒಂದು ಸಲ ಸ್ಮಿತಾ ಒಬ್ಬಳೇ ಸಿಕ್ಕಿದ್ಲು,
ಆಗ
ಇವಳ ಮುಂದೆ ನಿಂತು,
ಸ್ಮಿತಾ ನಾನು ನಿನ್ನ ಫ್ರೆಂಡ್ ಸೌಮ್ಯನ ತುಂಬಾ ಲವ್ ಮಾಡ್ತಾ ಇದ್ದೀನಿ,
ಅದಕ್ಕೆ ನೀನೆ ಹೆಲ್ಪ್ ಮಾಡಬೇಕು, ಎಂದು ಕೇಳಿದಕ್ಕೆ,
ಅದಕ್ಕೆ ನಾನು ಎನ್ನುತ್ತಾ ಸ್ಮಿತಾಳ ದನಿಯಲ್ಲಿ ಕಥೆ ಮುಂದುವರೆಯಿತು,
ನನ್ನಿಂದ ನಿಮಗೆ ಹೇಗೆ ಹೆಲ್ಪ್ ಮಾಡಕ್ಕೆ ಆಗುತ್ತೆ?
ಸಾಗರ ದನಿಯಲ್ಲಿ,
ನಾನು ಅವಳಿಗಾಗಿ ಬರೆಯುವ ಪ್ರೇಮಪತ್ರ, ಕವನಗಳನ್ನ ನೀವು ನನ್ನ ಪರವಾಗಿ ಅವಳಿಗೆ ತಲುಪಿಸಬೇಕು.
ಕಾರಣ ನಾನೇ ಕೊಡೋಣ ಅಂದ್ರೆ ಅವಳು ದಿನಾ ಬರುವ ದಾರಿಯಲ್ಲಿ ಬರದೆ
ಬೇರೆ ದಾರಿಯಿಂದ ಹೋಗ್ತಾ ಇದ್ದಾಳೆ ಕಾಲೇಜ್ ಗೆ, ಅದಕ್ಕೆ...
ಅವಳನ್ನಾ ನಾನು ತುಂಬಾ ಲವ್ ಮಾಡ್ತೀನಿ ಕಣ್ರೀ,
ನಿಮ್ಮಿಂದ ಆಗುವ ಈ ಋಣವನ್ನ ನಾನು ಈ ಜನ್ಮದಲ್ಲಿ ಮರೆಯಲ್ಲಾ..
ಹುಟ್ಟೋ ಮಕ್ಕಳಿಗೆ ನಿಮ್ಮದೇ ಹೆಸರಿಡುವೆ,
ಎಂದು ಕೈ ಮುಗಿದು ಕೇಳಿಕೊಂಡೆ,
ಸರಿ ನಿಮ್ನ ನೋಡಿದ್ರೂ ಪಾಪ ಅನ್ನಿಸುತ್ತೆ ನಾನು ಹೆಲ್ಪ್ ಮಾಡ್ತೀನಿ ಅಂದ್ಲು,
ಅವತ್ತಿನಿಂದ ನಾನು ಕೊಡುವ ಪ್ರೇಮಪತ್ರ, ಅವಳಿಗಾಗಿ ಬರೆಯುವ ಕವನಗಳನ್ನ ಎಲ್ಲವನ್ನೂ ತಗೊಂಡು ಹೋಗಿ ಕೊಡುವ ಕೆಲಸ ಇವಳದಾಗಿತ್ತು,
ಅದನ್ನು ಓದಿ ಸೌಮ್ಯಳಿಗೆ ಪ್ರೀತಿ ಬರದೆ ಕೋಪವೇ ಹೆಚ್ಚಾಗುತ್ತಾ ಇತ್ತು,
ಹರಿದು ಹಾಕೊಳು, ಅವನ ಹತ್ರ ತಗೋಬೇಡ ಅನ್ನೋಳು,
ಹೀಗೆ ಒಂದೆರೆಡು ತಿಂಗಳು ಉರುಳಿತು,
ಅದೊಂದು ದಿನ ಸೌಮ್ಯ ಬಂದು,
ಇನ್ಮೇಲೆ ನಿನಗೆ ಯಾವುದೇ ತೊಂದರೆ ಇರಲ್ಲಾ ಸ್ಮಿತಾ, ಅವನಿಗೆ ಸರಿಯಾಗಿ ಮೊಕ್ಕೆ ಉಗಿದು ಬಂದಿದ್ದೀನಿ, ಮತ್ತೆ ನನ್ನ ಎದುರು ಬರುವ ಕೆಲಸ ಅವನು ಮಾಡಲ್ಲ..

ಯಾಕೆ ಏನ್ ಮಾಡ್ದೆ?
ಇವತ್ತು ಕಾಲೇಜ್ ಎದುರು ಇರುವ ಪಾರ್ಕ್ ನಲ್ಲಿ ಸಿಕ್ಕಿದ್ದ,
ಮತ್ತೆ ಬಂದು ಪ್ರೀತಿ ಮಣ್ಣು ಮಸಿ ಅಂದಾ, ಎಲ್ಲಿತ್ತೋ ಕೋಪ ಸರಿಯಾಗಿ ಜಾಡಿಸಿದ್ದೀನಿ, ಇನ್ನು ನನ್ನ ಕಡೆ ತಲೆ ಸಹ ಹಾಕಲ್ಲ ಬಿಡು.
ಎಂದೇಳಿ ಹೋದಳು,

ಯಾಕೋ ನನಗೆ ಬೇಜಾರ್ ಆಯಿತು, ನಾನು ಹೋಗಿ ಸಾಗರನ್ನ ನೋಡ್ದೆ,
ಮರಕ್ಕೆ ಒರಗಿಕೊಂಡು ಮುಖನ ಸಪ್ಪೆ ಮಾಡ್ಕೊಂಡು ಬೇಜಾರ್ ನಲ್ಲಿದ್ರು,
ನಾನೇ ಹೋಗಿ ಹತ್ತಿರ ಕೂತು ಮಾತಾಡಿಸಿದೆ,
ಮನಸಿಗೆ ನೋವು ಮಾಡ್ಕೋಬೇಡಿ ಸಾಗರ್,
ಕಲ್ಲು ಹೃದಯದಲ್ಲಿ ಹೂ ಅರಳಲ್ಲಾ, ನಿಮ್ಮ ಪ್ರಯತ್ನ ವ್ಯರ್ಥವಾಯಿತಷ್ಟೇ,
ಅವರೇನು ಮಾತಾಡಲಿಲ್ಲ,
ಆದ್ರೆ ಒಂದು ಮಾತು ಹೇಳ್ತೀನಿ, ನಿಮ್ಮ ಪ್ರೇಮಪತ್ರ, ಕವನಗಳನ್ನ ಓದುವಾಗ ಅಬ್ಬಾ ಹೀಗೂ ಒಬ್ಬ ಹುಡುಗ ಒಂದು ಹುಡುಗಿಯನ್ನ ಪ್ರೀತಿಸಕ್ಕೆ ಸಾಧ್ಯನ ಅನ್ನಿಸಿತು, ಯಾವ ಮಾತಿಗೂ ಅವನಲ್ಲಿ ಪ್ರತಿಕ್ರಿಯೆ ಇರಲಿಲ್ಲಾ,
ಮುಖದ ಛಾಯೆಯೂ ಬದಲಾಗಲಿಲ್ಲ,

ನೀವು ಹೀಗೆ ಇದ್ರೆ ಹೇಗೆ ಹೇಳಿ? ನಿಜಾ ಹೇಳ್ಲಾ,
ನಾನೇ ಎಷ್ಟೋ ಸಲ ಅವಳಿಗೆ ಕೊಡುವ ಮುನ್ನವೇ ಓದಿ ಕೊಡ್ತಾ ಇದ್ದೆ, ನಾನೇ ಮುಂದೆ ಪ್ರೀತಿಸಿದರೆ ನಿಮ್ಮಂತಹ ಕವಿಯನ್ನೇ ಪ್ರೀತಿಸಬೇಕು ಅನ್ನಿಸಿ ಬಿಟ್ಟಿದೆ,

ನಿಜಾ ನಿಮಗೆ ಇಷ್ಟಾ ಆಯ್ತಾ? ಎಂದು ಸಪ್ಪೆ ಮೊರೆ ಹಾಕಿಕೊಂಡು ಕೇಳಿದ,

ಅಯ್ಯೋ ಇಷ್ಟಾನ ಅದಕ್ಕೆ ಮೇಲೆ, ಅನ್ನಿ,
ಅವಳ ಬಗ್ಗೆ ನೀವು ಬರೆಯುವ ಒಂದೊಂದು ಕವನಕ್ಕೂ ನಾನೇ ಓದಿ ಚಪ್ಪಾಳೆ ತಟ್ಟಿದ್ದೀನಿ,

ನಿಮ್ಮೀ ಮಾತು ಖುಷಿ ಆಯಿತು ಆದ್ರೆ ಅವಳಿಗೆ ಒಂದು ಚೂರು ಪ್ರೀತಿ ಬರಲಿಲ್ಲಾ ಅನ್ನೋ ನೋವು, ಎದೆಗೆ ಇರಿಯುತ್ತಿದೆ..

ನೋಡಿ ಸಾಗರ್,
ಅಂಧರ ಮುಂದೆ ಆಭರಣ ಇಟ್ಟು, ಬೆಲೆ ಕೇಳೋನು ನಿಜವಾದ ಅಂಧ,
ಹಾಗೆ ಭಾವನೆಯೇ ಇಲ್ಲದ ಅವಳಿಗೆ ನಿಮ್ಮ ಪ್ರೀತಿಯನ್ನ ಹೇಳೋದು,
ನನ್ನ ಹಾಗೆ ಭಾವನೆಗಳಿಂದ ಬಾಳುವ ಹುಡುಗಿಗೆ ಹೋಗಿ ನಿಮ್ಮ ಪ್ರೇಮಪತ್ರ,ಕವನಗಳನ್ನ ತೋರಿಸಿ ನಿಮ್ಮನ್ನು ಪ್ರೀತಿಸದಿದ್ದರೆ ಕೇಳಿ,

ನೀವು ಹೇಳೋದು ಸತ್ಯ, ಸತ್ಯವಾದ ಮಾತು ಸ್ಮಿತಾ,
ನಾನೂ ಸಹ ಅದನ್ನೇ ಮಾಡಿದ್ದು....

ನನಗೇನೂ ಅರ್ಥವಾಗದೆ, ಏನ್ ಹೇಳ್ತಾ ಇದ್ದೀರಾ?

ಅಂದ್ರೆ ನಾನು ಪ್ರೀತಿಸುತ್ತಾ ಇರೋದು ನಿಮ್ನ,
ಸೌಮ್ಯನ ಅಲ್ಲಾ...!

ಏನ್ ಪ್ರೇಮಪತ್ರ-ಕವನಗಳು ನನಗೆ ಇಷ್ಟ ಆಯಿತು ಅಂತ ಹೇಳಿದ ಕೂಡಲೇ,
ನಿನಗೆ ಬರೆದಿದ್ದು ಅಂತ ಹೂ ಇಡ್ತಾ ಇದ್ದೀರಾ ಕಿವಿಗೆ?
ಎಂದು ಕೇಳಿದೆ,

ನಿಜಾನೆ ಸ್ಮಿತಾ ಅವರು ಹೇಳ್ತಾ ಇರೋದು ಎಂದು
ಹಿಂದಿನಿಂದ ಬಂದ ಸೌಮ್ಯ ಹೇಳಿದ್ಲು,
ನಾನು ಅರ್ಥವೇ ಆಗದೆ ಅವಳ ಮುಖವನ್ನು ನೋಡಿದೆ,
ಹೌದು ಅವತ್ತು ಅವರು ನನ್ನ ಸೈಡ್ ಗೆ ಕರೆದುಕೊಂಡು ಹೋಗಿ ಹೇಳಿದ್ದು,
ನಾನು ನಿಮ್ಮ ಫ್ರೆಂಡ್ ನ ಲವ್ ಮಾಡ್ತಾ ಇದ್ದೀನಿ ಅದಕ್ಕೆ ನೀವು ಹೆಲ್ಪ್ ಮಾಡಬೇಕು ಅಂತ, ಆಗ ನಾನು ಹೇಗೆ ನಾನು ಹೆಲ್ಪ್ ಮಾಡಕ್ಕೆ ಆಗುತ್ತೆ ಅಂದೇ, ಅದಕ್ಕವರು,

ನಾನು ನಿಮಗೆ ಪ್ರೊಪೋಸ್ ಮಾಡ್ತೀನಿ ಅದನ್ನ ನೀವು ನಿರಾಕರಿಸಬೇಕು?

ಇದೇನ್ರೀ ವಿಚಿತ್ರಾ.. ಇದು ಹೇಗೆ ಹೆಲ್ಪ್ ಆಗುತ್ತೆ,

ಆಗುತ್ತೆ ಕೇಳಿ,
ಆಗ ನಿಮಗೆ ನಾನು ಆಗಾಗ, ಪ್ರೇಮಪತ್ರ-ಕವನಗಳನ್ನ ಕೊಟ್ಟು ಕಳುಹಿಸುತ್ತಾ ಇರ್ತೀನಿ, ನೀವು ಅದನ್ನ ಕೆಲವನ್ನಾದರೂ ಸ್ಮಿತಾ ಓದುವ ಹಾಗೆ ಮಾಡಬೇಕು,

ಅದನ್ನಾ ನೀವೇ ನೇರವಾಗಿ ಕೊಡಬಹುದು ಆಲ್ವಾ?

ಕೊಡಬಹುದು, ಆದ್ರೆ ಕೊಟ್ಟಾಗ ಅವಳಿಗೆ ಕೋಪ ಬಂದು ಓದದೆ ಹರಿದು ಹಾಕಬಹುದು, ಕೊಟ್ಟಿದ್ದಾರೆ ಓದಲೇ ಬೇಕು ಎನ್ನುವ ಬಲವಂತದಿದ್ದ ಓದಬಹುದು? ಒಂದು ವೇಳೆ ಅವಳನ್ನು ಒಂದೇ ಪ್ರೇಮಪತ್ರದಲ್ಲಿ ಮೆಚ್ಚುಸುವಷ್ಟು ಶಕ್ತಿ ನನ್ನಲ್ಲಿ ಇಲ್ಲದೆಯೂ ಇರಬಹುದು,
ಅದಕ್ಕೆ ಅಂತ ತಗೋಳಿ ಈ ಪ್ರೇಮಪತ್ರ ಓದಿ ಅಂತ ಇನ್ನೊಂದು ಬರೆದು ಕೊಡಕ್ಕೂ ಆಗಲ್ಲಾ ಆಲ್ವಾ,
ಅದಕ್ಕೆ ಅವಳಿಗೆ ತಿಳಿಯದ ಹಾಗೆ ಅವಳ ಹೃದಯದಲ್ಲಿ ನನ್ನ ಮೇಲೆ ಪ್ರೀತಿಯನ್ನು  ನನ್ನ ಭಾವನೆಗೆ ಹುಟ್ಟಿಸಕ್ಕೆ ಸಾಧ್ಯನ ಅಂತ ನೋಡಬೇಕು,
ಒಂದು ವೇಳೆ ಅದಾಗದಿದ್ದರೆ
ಇದರಿಂದ ನನ್ನನ್ನು ನಿರಾಕರಿಸಿ ಬಿಟ್ಟಳು ಅಂತ ನನಗೂ,
ಅವನಿಗೆ ಅವಮಾನ ಮಾಡಿದೋ ಅಂತ ಅವಳಿಗೂ
ಇಬ್ಬರಿಗೂ ಯಾವುದೇ ಮನಸಿಗೆ ನೋವಿಲ್ಲಾ,
ಯಾವುದೇ ಒತ್ತಾಯವಿಲ್ಲದೆ ಅವಳಲ್ಲಿ ನನ್ನ ಮೇಲೆ ಹುಟ್ಟುವುದೇ ನಿಜವಾದ ಪ್ರೀತಿ ಅನ್ನೋದು ನನ್ನ ಭಾವನೆ, ಇದಕ್ಕೆ ನಿಮ್ಮ ಸಹಾಯ ಬೇಕು ಅಂದಿದ್ದು..
ಪ್ರೀತಿಯನ್ನು ಉಳಿಸಿಕೊಳ್ಳಬೇಕು ಅದೇ ಕ್ಷಣ, ಪ್ರೀತಿಸುವ ಹುಡುಗಿಯ ಮನಸಿಗೆ ಎಲ್ಲಿಯೂ ನೋವಾಗಬಾರದು ಅನ್ನೋ ಅವರ ಆ ಆಲೋಚನೆ ನನಗೆ ಹಿಡಿಸಿತು ಅದಕ್ಕೆ ಈ ವಿಷಯಕ್ಕೆ ನಾನು ಒಪ್ಪಿದೆ ಸ್ಮಿತಾ,
ಎಂದಳು ಸೌಮ್ಯ,

ನಾನು ಆಶ್ಚರ್ಯದಿಂದ ಅಂದ್ರೆ ನೀವು ಇಷ್ಟು ದಿನ ಬರೆದ ಪ್ರೇಮಪತ್ರ-ಕವನ ಎಲ್ಲಾ ನನಗಾ? ಎಂದು ಕೇಳಿದಕ್ಕೆ,
ಅವನು ಮುಗುಳುನಗೆಯನ್ನು ಮುಖದಲ್ಲಿ ಹೊತ್ತು ಹೌದು ಎನ್ನುವಂತೆ ತಲೆಯಾಡಿಸಿದ...
ನಿಜಾ ನನಗೆ ಮಾತುಗಳೇ ಇಲ್ಲಾ ಆ ಸಂತೋಷವನ್ನು ಹೇಳಲು,
ಆಗಸವೇ ಒಂದು ಹಕ್ಕಿಗೆ ಸಿಕ್ಕಷ್ಟು ಖುಷಿಯಾಯಿತು,
ಅಲ್ಲಿಯವರೆಗೂ ನನಗೂ ಕೆಲವು ಹುಡುಗರು ಪ್ರೊಪೋಸ್ ಮಾಡಿದ್ದರು,
ಕೆಲವರು ನಾನು ಹೋಗುವ ಕಡೆಯಲ್ಲಾ ಬಂದು ಪೀಡಿಸುತ್ತಲೂ ಇದ್ದರು,
ಒಬ್ಬನಂತೂ ನನ್ನ ಮುಂದೆಯೇ ಅವನ ಕೈ ಕುಯ್ದುಕೊಂಡು, ತೋಳಿನ ಮೇಲೆ ನನ್ನ ಹೆಸರಿನ ಮೊದಲ ಅಕ್ಷರ ‘ಸೀ’ಯನ್ನು ಹಾಕಿಕೊಂಡು ಬಂದು ಪ್ರೊಪೋಸ್ ಮಾಡಿದ್ದ ಯಾಕೋ ನನಗೆ ಅದೆಲ್ಲಾ ಹಿಂಸೆ ಅನ್ನಿಸಿತು,
ಆದರೆ ಸಾಗರ ಪ್ರೀತಿ ಹಗುರವಾಗಿತ್ತು,
ಪ್ರೀತಿಸುವ ಹುಡುಗಿಗೆ ತಿಳಿಯದೆ ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದು
ಹೊಸದಾಗಿತ್ತು....

ಅಂದಿನಿಂದ ನಮ್ಮ ಪ್ರೀತಿಯ ಪಯಣ ಶುರುವಾಯಿತು,
ಯಾವುದೇ ಆತಂಕ ಅಂಜಿಕೆ ಇಲ್ಲದೆ, ನಮ್ಮದೇ ಜಗತ್ತು ಅಂತ ಇದ್ದೋ,
ಯಾವಾಗ ಕಾಲೇಜಿನ ದಿನಗಳು ಮುಗಿಯುವುದು ಹತ್ತಿರ ಬಂದಿತೋ, ಆಗಲೇ
ಹೆದರಿಕೆ ಎದುರಾಗಿದ್ದು....
ಯಾರದೋ ಮೂಲಕ ನಾನು ಪ್ರೀತಿಸುವ ವಿಷಯ ಅಪ್ಪನಿಗೆ ತಿಳಿಯಿತು,
ಅವರು ಹೇಗಾದ್ರೂ ಮಾಡಿ ಸಾಗರನ್ನು ಪತ್ತೆ ಹಚ್ಚಿ ಅವನಿಗೆ ಒಡೆದುಬಡಿದು ಕಳುಹಿಸಬೇಕು, ಅಥವಾ ಪ್ರಾಣವನ್ನೇ ತೆಗೆದು ಬಿಡಬೇಕು ಎಂದು ಯೋಚಿಸಿದ್ದರು, ಅದಕ್ಕಾಗಿಯೇ ನಾನು ಅವನ ವಿಳಾಸ, ಅವನ ಒಂದು ಫೋಟೋ ಸಹ ನನ್ನ ಮೊಬೈಲ್ ನಲ್ಲಿ ಇಟ್ಟುಕೊಳ್ಳದೆ ಎಲ್ಲವನ್ನೂ ಅಳಿಸಿ ಹಾಕಿದ್ದೆ, ಒಂದು ದಿನ ಸರಿ ನಾವು ಎಲ್ಲಿಯಾದರೂ ಓಡಿ ಹೋಗಿ ಬದುಕಿಕೊಳ್ಳೋಣ, ಎಂದು ಯೋಚಿಸಿ ನಿರ್ಧರಿಸಿದೋ,
ಆದರೆ ಅದುವೇ ನಮ್ಮ ಪ್ರೀತಿಗೆ ಫುಲ್ ಸ್ಟಾಪ್ ಆಯಿತು,
ಆದರೆ ನಾನು ಸ್ಮಿತಾಳನ್ನ ಕರ್ಕೊಂಡು ಹೋಗದೆ ಬಿಡಲ್ಲಾ..
ಎಂದು ಅವಳೊಳಗಿದ್ದ ಸಾಗರ ಆರ್ಭಟಿಸಿದ...
ಸ್ಮಿತಾಳನ್ನು ಸಮಾಧಾನ ಪಡಿಸಿ ಮಲಗಿಸಿ ಹೊರ ಬಂದ ಪ್ರಜಿನ್...

ಹೀಗೆ ಒಂದು ದಿನ ಸ್ಮಿತಾಳ ಹೆತ್ತವರನ್ನು ಕರೆದು..
ನಿಮ್ಮೊಂದಿಗೆ ಮಾತಾಡಬೇಕು ಎಂದು ಕೂರಿಸಿ,
ಹೇಳಿ ಪ್ರಜಿನ್ ಎಂದವರಿಗೆ....

ನಾನು ಮಾತಾಡಿಸಿದ ಹಾಗೆ, ಎರಡು ವಿಷಯ ತಿಳಿಯಿತು,
ಒಂದು, ನಿಮ್ಮ ಮಗಳ ತಪ್ಪಿನಿಂದಲೇ ಸಾಗರ ಸಾವಾಯಿತೆಂದು
ಅವಳಲ್ಲಿ ಆಳವಾಗಿ ಬೇರೂರಿದೆ,
ಅದಕ್ಕೆ ಪರಿಹಾರ ತಾನೂ ಅವನಿಗಾಗಿ ಸಾಯೋದು...
ಎರಡು, ಇವಳಿಗಾಗಿ ಪ್ರಾಣವನ್ನೇ ಕೊಟ್ಟೆ, ಇವಳನ್ನು ಇಷ್ಟು ಪ್ರೀತಿಸುವ ನನ್ನನ್ನು ಬಿಟ್ಟರೆ ಈ ಜಗತ್ತಿನಲ್ಲಿ ಇವಳಿಗಾಗಿ ಯಾರಿದ್ದಾರೆ,
ಅವಳ ಹೆತ್ತವರೋ ಸ್ವಾರ್ಥಿಗಳು, ಅವರಿಗೆ ಅವರದೇ ಹಣ ಮರ್ಯಾದೆ ಮುಖ್ಯ, ಇವಳ ಸಂತೋಷ ನೆಮ್ಮದಿ ಅವರಿಗೆ ಬೇಕಿಲ್ಲಾ,
ಅವರ ಜೊತೆ ಇವಳನ್ನು ಬಿಡುವ ಬದಲು ನಾನೇ ಕರೆದುಕೊಂಡು, ಹೋಗುತ್ತೇನೆ, ಎನ್ನುವ ಸಾಗರನ ಆತ್ಮ....


ಒಹ್ ಈಗ ನಾವೇನು ಮಾಡಬೇಕು ?

ಹೇಳ್ತೀನಿ, ಈಗ ನಾವು ಬಹಳ ನಾಜೂಕಾಗಿ ಪಗಡೆ ನಡೆಸಬೇಕು,
ಅದು ಹೇಗೆ ಅಂದ್ರೆ, ಸ್ಮಿತಾ ಅನ್ಕೊಂಡು ಇರೋದು ಸುಳ್ಳು ಅಂತ ನಿರೂಪಿಸಕ್ಕೆ
ಸಾಗರನನ್ನ ಜೀವಂತ ಕಣ್ಣ ಮುಂದೆ ತಂದು ನಿಲ್ಲಿಸಕ್ಕೆ ನಮ್ಮಿಂದ ಸಾಧ್ಯವಿಲ್ಲಾ,
ಅದಕ್ಕೆ ಸಾಗರನ ಅನ್ನಿಸಿಕೆ ತಪ್ಪು ಅಂತ ಮಾಡಬೇಕು,
ಅದು ಹೇಗೆ ಅಂದ್ರೆ, ಅವಳನ್ನು ಪ್ರೀತಿಸುವ ಮದುವೆ ಆಗಲು ಸಿದ್ಧವಿರುವ ಒಬ್ಬ ಹುಡುಗನನ್ನು ತಂದು ನಿಲ್ಲಿಸಬೇಕು, ಅದು ನಿಮ್ಮಿಂದ ಆಗುತ್ತಾ?
ಅದಾದ ಮೇಲೆ ಉಳಿದಿದ್ದು ನಾನು ಏನು ಮಾಡಬೇಕು ಅಂತ ಹೇಳುವೆ?

ಪ್ರಜಿನ ಮಾತುಗಳು ಅವರಿಬ್ಬರಿಗೂ ಸರಿ ಅನ್ನಿಸಿತು,
ಅಗಲಿ ನನ್ನೆಲ್ಲಾ ಅಸ್ತಿಯನ್ನ ಕೊಟ್ಟಾದರೂ ಸರಿ,
ಒಂದು ವರನನ್ನು ಹುಡುಗಿ ತಂದು ನಿಮ್ಮ ಎದುರು ನಿಲ್ಲಿಸುವೆ,
ಎಂದರು ರಾಜಾರಾಮ್...

ಅದನ್ನ ಆದಷ್ಟು ಬೇಗಾ ಮಾಡಿ, ಹಾಗೆ ಇನ್ನೊಂದು ಮಾತು,
ಈ ವಿಷಯ ಅವಳಿಗೆ ಯಾವುದೇ ಕಾರಣಕ್ಕೂ ತಿಳಿಯದಂತೆ ನೋಡಿಕೊಳ್ಳಿ,


ಖಂಡಿತ ಅವಳಿಗೆ ತಿಳಿಯದಂತೆಯೇ ಮಾಡ್ತೀವಿ..
ಎಂದು ಹೇಳಿ, ಗೆಳೆಯರಿಗೆ, ಸಂಬಂಧಿಕರಿಗೆ, ಮದ್ವೆಗೆ ಸಂಬಂಧ ನೋಡುವ
ಅಂತರ್ಜಾಲದಲ್ಲಿ ಹೀಗೆ ಎಲ್ಲೆಡೆಯೂ ವರನಿಗಾಗಿ ಹುಡುಕಾಟ ನಡೆಸಿದರು,
ಎರಡು ತಿಂಗಳಾದರೂ ಯಾವುದೇ ಗಂಡೂ ಸಹ ಮುಂದೆ ಬರಲಿಲ್ಲಾ,
ಹಣದ ಆಸೆಗೆ ಒಪ್ಪಿ ಬಂದರೂ, ದೆವ್ವ ಹಿಡಿದಿರುವುದು, ನೋಡಲು
ಒರಗಿ ಸೊರಗಿ ಚೆನ್ನಾಗಿಲ್ಲದೆ ಇರುವುದರಿಂದ ಕೆಲವರು ಹಿಂದೆ ಸರಿದರು..

ಪ್ರಜಿನ್ ಮುಂದೆ ಬಂದು,
ಎಲ್ಲಾ ಕಡೆ ಹುಡುಕಿದೆ, ಇರೋ ಅಸ್ತಿಯಲ್ಲವನ್ನು ಕೊಡ್ತೀನಿ ಅಂತಾನೂ ಹೇಳಿದೆ,
ಯಾರೂ ಮುಂದೆ ಬರಲಿಲ್ಲಾ, ಎಂದು ರಾಜಾರಾಮ್ ತಲೆ ಬಾಗಿ ನಿಂತರು...

ಅವನು ಯೋಚಿಸುತ್ತಾ ಇದ್ದಾಗ ಒಂದು ವಿಷಯ ಹೊಳೆಯಿತು,
ಸರ್, ಕೆಲವು ದಿನಗಳ ಹಿಂದೆ ನಿಮ್ಮ ಮಗಳನ್ನ ಅವಳ ಪ್ರೀತಿಯ ಬಗ್ಗೆ ಕೇಳುವಾಗ, ಅವಳಿಗೆ ಪ್ರೊಪೋಸ್ ಮಾಡಿದವರ ಬಗ್ಗೆ ಹೇಳಿದ್ಲು,
ಆಗಾ, ಒಬ್ಬ ಹುಡುಗ ತನಗಾಗಿ, ಕೈ ಕುಯ್ದುಕೊಂಡು, ತೋಳಿನ ಮೇಲೆ ಅವಳ  ಹೆಸರಿನ ಮೊದಲ ಅಕ್ಷರ  ‘ಸೀ’ಯನ್ನು ಹಚ್ಚೆ ಹಾಕಿಸಿಕೊಂಡಿದ್ದಾಗಿಯು
ತನಗೆ ಇಷ್ಟವಾಗದ ಕಾರಣ ನಿರಾಕರಿಸಿದ್ದಾಗಿಯೂ ಹೇಳಿದ್ಲು,


ಒಹ್ ಹೌದಾ? ಅವನ ಹೆಸರು ಎಲ್ಲಿರೋದು ಏನಾದ್ರೂ ಹೇಳಿದ್ಲ? ಪ್ರಜಿನ್?

ಇಲ್ಲಾ ಸರ್, ಅದರ ಬಗ್ಗೆ ಅವಳ ಫ್ರೆಂಡ್ ಸೌಮ್ಯನ ಕೇಳಿದ್ರೆ ತಿಳಿಯಬಹುದು?

ಒಹ್ ಆ ಹುಡುಗಿನ ಅವತ್ತು ನಿಮ್ಮನ್ನು ಕರ್ಕೊಂಡು ಬಂದ್ನಲ್ಲ ಆನಂದ್ ಅಂತ ಅವನ ತಂಗಿಯೇ ಸೌಮ್ಯ.. ನಾವು ಈಗಲೇ ಹೋಗಿ ವಿಚಾರಿಸುತ್ತೇವೆ,
ಎಂದು ಗಂಡ ಹೆಂಡತಿ ಹೊರಟರು...

 ಸಂಜೆ ಐದಾಗಿತ್ತು...
ಸೌಮ್ಯ ಆಗಷ್ಟೇ ಕೆಲಸದಿಂದ ಬಂದಿದ್ದಳು, ಮನೆ ಬಾಗಿಲಲ್ಲಿ ಸ್ಮಿತಾಳ ಹೆತ್ತವರನ್ನು ಕಂಡು, ಬನ್ನಿ ಬನ್ನಿ ಎನ್ನುತ್ತಾ ಕರೆದು ಕೂರಿಸಿದಳು...
ಇರಿ ಕಾಫೀ ಮಾಡಿಕೊಂಡು ಬರ್ತೀನಿ ಎಂದವಳಿಗೆ,
ಅದೆಲ್ಲಾ ಬೇಡಾಮ ನಿನ್ನೊಂದಿಗೆ ಸ್ವಲ್ಪ ಮಾತಾಡಬೇಕು ಅಂತ ಬಂದೋ...

ಹೇಳಿ ಅಂಕಲ್ ಏನ್ ವಿಷಯ?
ಸ್ಮಿತಾಳ ಬಗ್ಗೆ ನಿನಗೆ ಗೊತ್ತಿರೋದೆ ಅಲ್ವಾಮ,
ಈಗ ಅವಳನ್ನು ನೋಡ್ತಾ ಇರೋರು, ಅವಳನ್ನು ಪ್ರೀತಿಸುವ ಹುಡುಗನ್ನ ತಂದು ನಿಲ್ಲಿಸಿ, ಅವಳನ್ನು ಗುಣಪಡಿಸಕ್ಕೆ ಅಂತ ಹೇಳಿದ್ದಾರೆ, ಅದಕ್ಕೆ ಅದ್ಯಾರೋ ಹುಡುಗ, ಕೈ ಕುಯ್ದುಕೊಂಡು, ತೋಳಿನ ಮೇಲೆ ಸೀ ಎಂದು ಹಚ್ಚೆ ಹಾಕಿಸಿಕೊಂಡು, ಅವಳಿಗೆ ಲವ್ ಪ್ರೊಪೋಸ್ ಮಾಡಿದನಂತಲ್ಲ,
ಅವನು ಯಾರು? ಅವನ ಅಡ್ರೆಸ್? ಗೊತ್ತಾಮ ನಿನಗೆ?

ಅವಳಿಗೆ ತುಂಬಾ ಹುಡುಗರು ಲವ್ ಲೆಟರ್ ಕೊಟ್ರು,
ಪ್ರೊಪೋಸ್ ಮಾಡಿದ್ರು, ಅದರಲ್ಲಿ ಹಾಗೆ ಮಾಡಿದ್ದು ,
ಎಂದು ಎರಡು ನಿಮಿಷ ಯೋಚಿಸಿ, ಹಾ ನೆನಪಾಯಿತು,
ಸತೀಶ್, ಅಂತ ಅವನ ಹೆಸರು ಅಂಕಲ್...
ಅವನ ವಿಳಾಸ ಗೊತ್ತಿಲ್ಲಾ, ಆದ್ರೆ ಅವನು ನಮ್ಮ ಕಾಲ್ ಇಂದ ಮುಂದೆ ಹೋದ್ರೆ ಒಂದು ಬೇಕರಿ ಸಿಗುತ್ತೆ ನೋಡಿ ಅಲ್ಲೇ ಕೆಲಸ ಮಾಡ್ತಾ ಇದ್ದ..

ಇಷ್ಟು ಸಾಕಮ್ಮ, ತುಂಬಾ ಹೆಲ್ಪ್ ಆಯಿತು ನಾವಿನ್ನು ಬರ್ತೀವಿ ಎಂದೇಳಿ,
ಬೇಕರಿಯ ಮುಂದೆ ಬಂದು ಕಾರು ನಿಂತಿತು...
ಒಳಗೆ ಹೋಗಿ.. ಸರ್ ನಮಸ್ಕಾರ ನನ್ನ ಹೆಸರು ರಾಜಾರಾಮ್ ಅಂತ,
ನಿಮ್ಮ ಅಂಗಡಿಯಲ್ಲಿ ಸತೀಶ್ ಅಂತ ಒಬ್ಬ ಹುಡುಗ ಕೆಲ್ಸ ಮಾಡ್ತಾ ಇದ್ನಂತಲ್ಲ, ಅವನು ಇದ್ದರೆ ಕರೆಸ್ತೀರಾ?

ಇಲ್ಲಾ ಸರ್ ಅವನು ಕೆಲಸ ಬಿಟ್ಟು ಒಂದೆರೆಡು ವರ್ಷವೇ ಆಯಿತು...
ಅವನ ವಿಳಾಸ ಗೊತ್ತಾ?

ಇರಿ, ಲೋ ಬಾಬು, ಬಾರೋ ಇಲ್ಲಿ, ಇವರಿಗೆ ಸತೀಶನ ಮನೆ ತೋರಿಸಿ ಬಾರೋ. ಎಂದು ಒಬ್ಬ ಹುಡುಗನನ್ನು ಕಳುಹಿಸಿದರು..

ಮುಂದೆ ಹೋಗುತ್ತಿದ್ದ ಅವನ ಬೈಕ್ ಹಿಂದೆ ಕಾರ್ ಹೋಗುತ್ತಿತ್ತು..
ಒಂದು ಮನೆಯ ಮುಂದೆ ನಿಂತಾ.. ಕಾರ್ನಿಂದ ಇಳಿದವರಿಗೆ..
ಇದೆ ಸತೀಶನ ಮನೆ ಎಂದು ತೋರಿಸಿ. ತನಗೆ ಕೆಲಸವಿದೆ ಎಂದು ಆತ ಹೊರಟ...
ಮುಚ್ಚಿದ್ದ ಬಾಗಿಲ ಮುಂದೆ ನಿಂತು ಕರೆಘಂಟೆ ಬಾರಿಸಿದರು..
ಬಾಗಿಲು ತೆರೆದ ಹೆಂಗಸಿಗೆ ನಮಸ್ಕಾರ ಹೇಳಿ,
ಸತೀಶ್ ಅಂತ ಇದ್ದಾರ? ಎಂದು ಕೇಳಿದ ರಾಮ್ ಗೆ...

ಬನ್ನಿ ಒಳಗೆ ಎಂದು ಕರೆದು, ಇಲ್ಲಾ ಅವನು ನನ್ನ ಮಗಾನೆ ಕೆಲ್ಸಕ್ಕೆ ಹೋಗಿದ್ದಾನೆ. ಏನ್ ವಿಷಯ?

ಅವರನ್ನ ಹುಡುಕಿಕೊಂಡು ಬಂದಿದ್ದೀವಿ? ಅವರನ್ನ ಸ್ವಲ್ಪ ಕರೆಸ್ತೀರಾ?

ಯಾಕೆ ನನ್ನ ಮಗನಿಂದ...ಏನಾದ್ರೂ?

ಏನೂ ಅಗಿಲ್ಲಮ್ಮಾ, ಗಾಬರಿ ಆಗಬೇಡಿ.. ಅವರೊಂದಿಗೆ ಮಾತಾಡಬೇಕಿತ್ತು .
ಅಗಲಿ ಎಂದು ಕರೆ ಮಾಡಿ ಅವನನ್ನು ಬರ ಹೇಳಿದರು..

ಐದಿನೈದು ನಿಮಿಷದ ನಂತರ... ಒಬ್ಬ ಹುಡುಗ ಬಂದ...
ಇವನೇ ಸತೀಶ್ ಎಂದು ಅವರಮ್ಮ ಪರಿಚಯಿಸಿದರು,
ಬಂದವರು ಯಾರೆಂದು ತಿಳಿಯದೇ..
ಅವರಿಗೆ ನಮಸ್ಕಾರ ಹೇಳಿ ನಿಂತ..

ನನ್ನ ಹೆಸರು ರಾಜಾರಾಂ ಅಂತ, ಸ್ಮಿತಾಳ ತಂದೆ,
ಅವಳು ಕಾಲೇಜ್ ನಲ್ಲಿ ಓದುವಾಗ ನೀವೇ ಆಲ್ವಾ ನನ್ನ ಮಗಳಿಗೆ ಲವ್ ಪ್ರೊಪೋಸ್ ಮಾಡಿದ್ದು? ಎಂದು ಹೇಳಿದ ಅವರ ಮಾತು ಕೇಳಿ..

ಏನೋ ಸತೀಶ ಇದೆಲ್ಲಾ?
ಏನೂ ಭಯ ಬೇಡಮ್ಮ ನಾವೇನು ಗಲಾಟೆ ಮಾಡಕ್ಕೆ ಬಂದಿಲ್ಲಾ..
ಸತೀಶನಿಗೂ ಎಂದೋ ಮಾಡಿದ್ದು ಈಗ್ಯಾಕೆ ಬಂದಿದ್ದಾರೆ ಎಂದು ತಿಳಿಯದೆ,
ಹೌದು ಸರ್.. ನಾನೇ ಎಂದ...

ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ನನ್ನ ಮಗಳು ಸಾಗರ್ ಅನ್ನೋ ಹುಡುಗನ್ನ ಲವ್ ಮಾಡ್ತಾ ಇದ್ಲು, ಅವನು ಅಪಘಾತದಲ್ಲಿ ತೀರಿಕೊಂಡ ಮೇಲೆ,
ಇವಳಿಗೆ ಮಾನಸಿಕ ಖಿನ್ನತೆಗೆ ಒಳಗಾಗಿ ಒಂದು ರೀತಿಯ ಮಾನಸಿಕ ಅಸ್ವಸ್ಥೆ, ಆಗಿದ್ದಾಳೆ, ಈಗ ಅವಳನ್ನು ನೋಡ್ತಾ ಇರೋ ವೈದ್ಯರು, ಅವಳನ್ನು ಪ್ರೀತಿಸಿದ ಹುಡುಗನ್ನ ತಂದು ನಿಲ್ಲಿಸಿದರೆ ಮಾತ್ರ ಅವಳನ್ನು ಗುಣಪಡಿಸಲು ಸಾಧ್ಯ ಎಂದಿದ್ದಾರೆ, ಅದಕ್ಕೆ ನಿಮ್ಮನ್ನ ಹುಡುಕಿ ಬಂದೋ, ಈಗ ನೀವು ನಮ್ಮೊಂದಿಗೆ ಬಂದು ಅದಕ್ಕೆ ಸಹಕರಿಸಬೇಕು, ಎಂದು ಕಂಬನಿ ತುಂಬಿದ ಕಣ್ಣುಗಳಲ್ಲಿ ಹೆತ್ತವರು ಅವನ ಮುಂದೆ ನಿಂತ ದೃಶ್ಯವನ್ನು ನೋಡಿ,
ಸತೀಶ್ ನ ಅಮ್ಮನಿಗೂ ಕರುಳು ಹಿಂಡಿದಂತೆ ಆಯಿತು...

ಏನ್ ಹೇಳಬೇಕು ಎಂದು ತಿಳಿಯದೆ ನಿಂತಿದ್ದ ಸತೀಶನಿಗೆ,
ಸರಿ ಅನ್ನೋ ಸತೀಶ.. ಹೆತ್ತವರ ಸಂಕಟಕ್ಕೆ ನಮ್ಮಿಂದ ಆದ ಸಹಾಯ ಮಾಡಬೇಕಪ್ಪ... ಎಂದ ತಾಯಿಯನ್ನು ಒಮ್ಮೆ ನೋಡಿ...

ಸರಿ ಸರ್ ಆಯಿತು ಎಂದ...

ತುಂಬಾ ಸಂತೋಷ ಪ.. ನಾಳೆ ನಾನು ಕಾರು ಕಳುಹಿಸ್ತೀನಿ..
ಕೆಲಸದ ಚಿಂತೆ ಮಾಡಬೇಡ ನಿನಗೆ ಅದರಲ್ಲಿ ಬರೋ ಸಂಬಳ ನಾನು ಕೊಡ್ತೀನಿ, ನೀನು ನಮ್ಮೊಂದಿಗೆ ಇದ್ದು ನಮ್ಮ ವೈದ್ಯರು ಹೇಳುವ ಮಾತಂತೆ ನಡೆದ್ರೆ ಸಾಕು.. ಎಂದು ಹೇಳಿ ಸತೀಶ್ ಮತ್ತು ಅವನ ತಾಯಿಗೆ ಕೈ ಮುಗಿದು, ನಾವಿನ್ನು ಬರುತ್ತೇವೆ ಎಂದು ಹೊರಟರು..

ಮಾರನೆಯ ದಿನ ಸತೀಶ ಹೇಳಿದಂತೆ ಬಂದ.. ಅವನನ್ನು
ತಂದು ಪ್ರಜಿನ್’ನನ ಮುಂದೆ ನಿಲ್ಲಿಸಿದರು... 
ಅವನ ತೋಳಿನಲ್ಲಿ ಇದ್ದ ಸೀ ಹಚ್ಚೆಯನ್ನು ನೋಡಿ ತನ್ನೆದುರು ಕೂರಿಸಿಕೊಂಡು,
ಸ್ಮಿತಾಳ ಸ್ಥಿತಿಯನ್ನು ಒಂದೂ ಬಿಡದೆ ಎಲ್ಲವನ್ನೂ ಅವನ ಮುಂದಿಟ್ಟ,
ಮಾನಸಿಕ ಅಸ್ವಸ್ಥೆ ಎಂದು ಮಾತ್ರವೇ ಹೇಳಿದ್ದರು, ಏನಪ್ಪಾ ಪ್ರೇತಾತ್ಮ ದೆವ್ವ ಅಂತಾ ಎಲ್ಲಾ ಹೇಳ್ತಾ ಇದ್ದಾರೆ. ಅವನೊಳಗೆ ಎದ್ದ ಹೆದರಿಕೆಯನ್ನು ಮುಖದಲ್ಲಿ ಗಮನಿಸಿ..

ನೋಡಿ ನಿಮಗೆ ಯಾವುದೇ ಭಯವೂ ಬೇಡ ನಾನಿದ್ದೀನಿ,
ನಿಮಗೇನೂ ಆಗಕ್ಕೆ ನಾನು ಬಿಡೋದು ಇಲ್ಲಾ ಎನ್ನುವ ಭರವಸೆಯನ್ನು ಕೊಟ್ಟ,
ನಾನ್ ಹೇಳೋ ಹಾಗೆ ಮಾಡಿದ್ರೆ ಸಾಕು ,
ನಿಮಗೆ ಇನ್ನೂ ಸ್ಮಿತಾಳ ಮೇಲೆ ಪ್ರೀತಿ ಇದೆಯಾ?

ಇದೆ ಸಾರ್, ಅವಳನ್ನು ಮತ್ತೆ ಮತ್ತೆ ನೋಡುವಾಗ ಮನಸಿಗೆ ಬಹಳ ನೋವಾಗುತ್ತೆ ಅಂತಾನೆ, ಬೇಕರಿ ಕೆಲಸವನ್ನೂ ಸಹ ಬಿಟ್ಟು ಬೇರೆ ಕಡೆ ದೂರದಲ್ಲಿ ಕೆಲಸಕ್ಕೆ ಸೇರಿದೆ..

ಸರಿ ಈಗ ಅವಳು ನಿಮ್ಮನ್ನ ಒಂದು ವೇಳೆ ಒಪ್ಪಿದ್ರೆ ಮದ್ವೆ ಆಗ್ತೀರಾ?

ಅವಳ ಹೆತ್ತವರನ್ನು ಒಮ್ಮೆ ನೋಡಿ,
ಆಗ್ತೀನಿ ಸಾರ್ ಅವಳ ಜೊತೆ ಇನ್ನೂ ನಾನು ಮಾನಸಿಕವಾಗಿ ಬಾಳ್ತಾನೆ ಇದ್ದೀನಿ...

ಗುಡ್, ಈಗ ನಾನು ಹೇಳೋ ವಿಷಯ ಕೇಳಿ, ಇನ್ನು ಮುಂದೆ ಅವಳಿಗೆ ಊಟ,
ನೀವೇ ಕೊಡಬೇಕು, ಸಾಗರ್ ಹೇಗೆ ಅವಳೊಂದಿಗೆ ಇದ್ದನೋ ಅದನ್ನು ನಾನು ವಿಚಾರಿಸಿ ಹೇಳುವೆ ಹಾಗೆ ನೀವಿರಬೇಕು...
ನನ್ನನ್ನು ಕೇಳದೆ ಏನೂ ಮಾಡೋ ಹಾಗಿಲ್ಲಾ...

ಆಯಿತು ಸಾರ್ ನೀವು ಹೇಳೋ ಹಾಗೆ ಕೇಳ್ತೀನಿ..
ಎಂದವನಿಗೆ ಬನ್ನಿ ಅವಳ ರೂಂ ಗೆ ಹೋಗೋಣ ಎಂದು ಕರೆದುಕೊಂಡು ಹೋದ...

ಬಾಗಿಲು ತೆರೆದು ಲೈಟ್ ಹಾಕುತ್ತಾ ಇದ್ದ ಹಾಗೆ ಪ್ರಜಿನ್’ನೊಂದಿಗೆ ಸತೀಶನನ್ನು ನೋಡಿ, ನೀನು ಯಾಕೋ ಇಲ್ಲಿಗೆ ಬಂದೆ ಹೋಗೋ ಹೊರಗೆ ಎಂದು ಸಾಗರನ ದನಿ ಕೇಳಿ, ಸತೀಶ್ ನಿಂತಲ್ಲೇ ನಡುಗಿ ಬಿಟ್ಟ..
ಅವನನ್ನು ಕಂಡು ಕಣ್ಣಿನಲ್ಲೇ ಏನೂ ಆಗಲ್ಲಾ ಬಾ ಒಳಗೆ ಎನ್ನುವ ಕಣ್ ಸನ್ನೆ ಮಾಡಿ ತಂದು ನಿಲ್ಲಿಸಿದ....
ಅವನ ಮೇಲೆ ತಲೆ ದಿಂಬನ್ನು ಎಸೆದಳು..

ನೋಡು ಸ್ಮಿತಾ ಇವನ ಬಗ್ಗೆ ನಿನಗೆನ್ ಹೇಳೋದು ಬೇಡ,
ಅವನು ಈಗಲೂ ನಿನ್ನ ಮೊದಲಿನಂತೆ ಪ್ರೀತಿಸುತ್ತಾ ಇದ್ದಾನೆ..
ಈಗ ನಿನ್ನ ಜೊತೆಯೇ ಇದ್ದು ನೋಡಿಕೊಳ್ಳೋಕ್ಕೆ ಬಂದಿದ್ದಾನೆ..

ಅವನೇನ್ ನನ್ನ ನೋಡ್ಕೊಳೋದು ನನಗೇನ್ ಅಪ್ಪ ಅಮ್ಮಾ ಇಲ್ವಾ..
ಹೋಗೋ ಹೊರಗೆ. ನೀನೂ ಹೋಗೋ ಹೊರಗೆ ಎಂದು ಇಬ್ಬರಿಗೂ ಹೇಳಿ ಕಿರುಚಿದ ಸ್ಮಿತಾಳಿಗೆ...ಏನು ಪ್ರತಿಯುತ್ತರ ನೀಡದೆ..
ಸತೀಶನನ್ನು ಕರೆದುಕೊಂಡು ಹೊರ ಬಂದ..

ಇದಕ್ಕೆಲ್ಲಾ ಏನ್ ಹೆದರೋದು ಬೇಡಾ, ಒಂದು ವಾರ ಅಷ್ಟೇ..
ಆಮೇಲೆ ಸಾರ್?
ಅದುವೇ ನಿನಗೆ ಅಭ್ಯಾಸವಾಗಿ ಬಿಡುತ್ತೆ....
ಎಂದೇಳಿದ ಪ್ರಜಿನ್.....

ಅವತ್ತಿನಿಂದ ಸ್ಮಿತಾಳ ನೋಡಿಕೊಳ್ಳುವ ಜವಾಬ್ದಾರಿ ಸತೀಶನದಾಯಿತು,
ಅವಳು ಕೈಗೆ ಸಿಗುವುದನ್ನು ತೆಗೆದು ಹೊಡೆಯೋಳು, ಗಾಯಗೊಳಿಸಿದರೂ,
ಅವನು ಯಾವುದಕ್ಕೂ ಹೆದರದೆ, ಬೇಸರಿಸಿಕೊಳ್ಳದೆ ನೋಡಿಕೊಳ್ಳುತ್ತಿದ್ದ...
ಪ್ರಜಿನ್ ಆ ಪ್ರೇತಾತ್ಮವನ್ನು ಹೇಗೆ ಬಂಧಿಸಬೇಕು ಎನ್ನುವ ದಿಕ್ಕಿನಲ್ಲಿ ಯೋಚಿಸುತ್ತಿದ್ದ, ಅದಕ್ಕಾಗಿ ಸಾಗರನ ಮನೆಗೆ ಹೋಗಿ ವಿಚಾರಿಸಿ,
ಅವನು ಅದರತ್ತಾ ಹೆಜ್ಜೆ ಇಡುತ್ತಿದ್ದ....

ಅದೊಂದು ದಿನ.
ಸ್ಮಿತಾಳ roomಗೆ ಸತೀಶನನ್ನು ಪ್ರಜಿನ್ ಕರೆದುಕೊಂಡು ಬಂದು.
ನೀನು ಯಾಕೆ ಸತೀಶನನ್ನು ಮದುವೆ ಆಗಬಾರದು ಎನ್ನುವ ಪ್ರಜಿನ್ಗೆ,
ಅವಳು ನನ್ನೊಳು, ಯಾರ್ಗೂ ಬಿಟ್ಟು ಕೊಡೊ ಮಾತಿಲ್ಲಾ, ಎಂದು ಅರಚಿತು ಅವಳೊಳಗಿನ ಸಾಗರ ಆತ್ಮ..
ಕೂಗಾಡ ಬೇಡ, ನಿನ್ನ ಕೂಗಾಟಕ್ಕೆ ಇಲ್ಲಿ ನಾನು ಹೆದರಲ್ಲಾ,
ಈ ಜನ್ಮದಲ್ಲಿ ನೀನು ಅವಳೊಂದಿಗೆ ಬಾಳಕ್ಕೆ ಆಗಲ್ಲಾ, ಮುಂದಿನ ಜನ್ಮದ್ದು ಗ್ಯಾರಂಟಿ ಇಲ್ಲಾ, ಸುಮ್ನೆ ನಡುವೆ ಇಬ್ಬರಿಗೂ ಹಿಂಸೆ,
ನಿನಗೆ ನಾನೇ ಒಂದು ಮಾರ್ಗ ಹೇಳ್ತೀನಿ..
ಅದಕ್ಕೆ ನೀನು ಒಪ್ಪಿದ್ರೆ, ಈ ಜನ್ಮದಲ್ಲೇ ಅವಳೊಂದಿಗೆ ಬಾಳಬಹದು?

ಆಸೆಯಿಂದ ಕಣ್ಣುಗಳನ್ನು ಅಗಲಿಸಿ,
ಏನದು? ಏನು? ಎಂದ ಗಡಸಾಗಿ..

ಹೇಳ್ತೀನಿ ಕೇಳು...ನೀನು ಸ್ಮಿತಾ ದೇಹದಲ್ಲೇ ಇದ್ದರೆ
ಅವಳೊಂದಿಗೆ ಹೇಗೆ ಬಾಳ್ತೀ? ನೀನು ಸತೀಶನ ದೇಹದಲ್ಲಿ ಸೇರಿಕೋ?

ಈ ಮಾತು ಕೇಳಿ ಗರಬಡಿದಂತೆ ಪದರಿಗುಟ್ಟಿ ಹೋದ ಸತೀಶ್,
ಸಾರ್ ಏನ್ ಹೇಳ್ತಾ ಇದ್ದೀರಾ? ಎಂದವನಿಗೆ, ಸುಮ್ನೆ ಇರು ಎಂದೇಳಿ.

ಏನ್ ಹೇಳ್ತೀಯಾ ಸಾಗರಾ?

ಸ್ಮಿತಾ ತಲೆ ತಗ್ಗಿಸಿಕೊಂಡು ಕುಳಿತಿದ್ದವಳು, ಕೆಲವು ನಿಮಿಷಗಳ ನಂತರ,
ಆಯಿತು ಎನ್ನುವ ದನಿ ಹೊರಡಿತು...

ಆದರೆ ಅದಕೊಂದು ನಿಭಂದನೆ?

ಏನು ಎಂದಳು ಗಂಭೀರವಾಗಿ?

ಒಂದೇ ಒಂದು ವರ್ಷವಷ್ಟೇ ಅವನ ದೇಹದಲ್ಲಿ ಇರಬೇಕು ಆಮೇಲೆ,
ನಿನ್ನ ಮೊದಲ ವರ್ಷದ ತಿಥಿ ನಡೆಯುವಾಗ ನೀನು ಅವನನ್ನು ಬಿಟ್ಟು ಪ್ರಕೃತಿಯಲ್ಲಿ ಲೀನವಾಗಿ ಬಿಡಬೇಕು....

ಆಗಲ್ಲಾ ಆಗಲ್ಲಾ....

ಆಗಲ್ಲಾ ಅಂದ್ರೆ, ನೀನು ಸ್ಮಿತಾ ಜೊತೆ ಇರೋದಕ್ಕೆ ನಾನು ಬಿಡಲ್ಲಾ,
ಇನ್ನೂ ನನ್ನ ಟ್ರೀಟ್ಮೆಂಟ್ ನ ಇನ್ನೊಂದು ಲೆವೆಲ್ ಗೆ ಹೋಗಿಲ್ಲಾ,
ಹೋದೆ ಅನ್ಕೋ, ನಿನ್ನ ಸ್ಮಿತಾ ದೇಹ ರಣ ರಣವಾಗಿ ಹಿಂಸಿಸಿ ಬಿಡ್ತೀನಿ,
ನೀನ್ ಅವಳನ್ನ ಸಾಯಿಸೋದು ಅಲ್ಲಾ ನಾನ್ ಕೊಡೊ ಹಿಂಸೆಗೆ ಅವಳೇ ಪ್ರಾಣ ಕಳ್ಕೊಂಡು ಬಿಡಬೇಕು ಹಾಗೆ ಇರುತ್ತೆ, ನೋಡ್ತೀಯಾ ನೋಡ್ತೀಯಾ,
ಎಂದು ಆರ್ಭಟಿಸುತ್ತ ಟೇಬಲ್ ಮೇಲೆ ಕೈಯಿಂದ ಬಡಿದ ಸದ್ದಿಗೆ,
ಸತೀಶನೆ ಹೆದರಿ ಬಿಟ್ಟ,

ಅವಳು ಬೇರೆ ದಾರಿ ಇಲ್ಲದೆ, ಹೂ ಹೂ ಎಂದು ಗುನುಗಿ,
ಅವಳೊಂದಿಗೆ ಈ ಜನ್ಮದಲ್ಲಿ ಒಂದು ದಿನವಾದರೂ ಬದುಕುವ ಅವಕಾಶ ಸಿಕ್ಕರೆ ಸಾಕು, ಎನ್ನುವ ಸಾಗರನ ದನಿ ಕೇಳುತ್ತಾ ಇದ್ದ ಹಾಗೆ.

thats good, ಬಾ ಸತೀಶ್...ಅಲ್ಲಿಂದ ಕೆಳಗೆ ಬಂದು,

ವಂದಿನಿ, ರಾಜಾರಾಮ್ ಮುಂದೆ, ನಿಮ್ಮ ಮಗಳು ಮದ್ವೆಗೆ ಒಪ್ಪಿದ್ದಾಳೆ,
ಆದಷ್ಟು ಈ ಹುಣ್ಣಿಮೆ ಕಳೆಯುವ ಮುನ್ನ ಮದ್ವೆ ಮಾಡ್ಬೇಕು ಇನ್ನೂ ಇಪ್ಪತೈದು ದಿನ ಇದೆ, ನಿಮಗೆ ಒಪ್ಪಿಗೆನಾ? ಸತೀಶ?

ಗಂಡಹೆಂಡತಿ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡು,
ಅವಳ ಬದುಕು ನರಳಿ ನರಳಿಯೇ ಕೊನೆ ಆಗುತ್ತೆ ಅಂತ ಭಾವಿಸಿದ್ದೋ,
ಹೇಗೋ ಅವಳ ಬದುಕಿನಲ್ಲೂ ಮದ್ವೆ ಗಂಡ ಮಕ್ಕಳು ಅನ್ನೋ ಸಂಬಂಧ,
ಬರುತ್ತೆ ಅಂದ್ರೆ ನಾವು ಬೇಡ ಅಂತೀವಾ?
ಸತೀಶನಿಗೆ ಕೈ ಮುಗಿದು, ನಿನ್ನಿಂದ ನಮ್ಮ ಮಗಳು ನಮಗೆ ಸಿಗೋ ಹಾಗೆ
ಆಯಿತು ನಿನಗೆ ಕೋಟಿ ಥ್ಯಾಂಕ್ಸ್ ಹೇಳಿದ್ರು ಕಡಿಮೇನೆ ಪ..
ಎಂದವರ ಕಣ್ಣುಗಳು ತೇವಗೊಂಡಿತ್ತು,
ಸತೀಶನ ಹೃದಯವೂ ಏನು ಹೇಳುವ ಸ್ಥಿತಿಯಲ್ಲಿ ಇಲ್ಲದ ಮರಗಿತು..
ಈ ಮದ್ವೆಗೆ ನಮ್ಮ ಸಂಪೂರ್ಣ ಒಪ್ಪಿಗೆ ಇದೆ ಪ ...

ಸರಿ ಆದಷ್ಟು ಬೇಗಾ ಎಲ್ಲವನ್ನೂ ಸಿದ್ಧ ಮಾಡಿಕೊಳ್ಳಿ,
ನಾನು ಅಷ್ಟರಲ್ಲಿ ಅದನ್ನು ಹೇಗೆ ಓಡಿಸಬೇಕು ,
ಅದಕ್ಕೇನು ಮಾಡಬೇಕೋ ಅದನ್ನೆಲ್ಲಾ ಮಾಡಿಕೊಳ್ತೀನಿ,
ಎಂದು ಮುಗಿಸಿದ ಪ್ರಜಿನ್..
ಅಲ್ಲಿಂದ ಹತ್ತು ದಿನಕ್ಕೆ ಸ್ಮಿತಾಳ ಮದುವೆ ಯಾವುದೇ ಅಡ್ಡಿ ಇಲ್ಲದೆ ನಡೆಯಿತು,
ಅದರೂ ಅವಳ ಮುಖದಲ್ಲಿ ಎಳ್ಳಷ್ಟು ಸಂತೋಷ ಕಂಡು ಬರಲಿಲ್ಲಾ..
ಮನದೊಳಗೆ ಏನೋ ವೇದನೆಯ ಛಾಯೆ ಮುಖದಲ್ಲಿ ತುಂಬಿತ್ತು...
ಎರಡು ದಿನದ..
ಅವರಿಬ್ಬರನ್ನು ಕರೆದು ಹೆತ್ತವರ ಸಮ್ಮುಖದಲ್ಲಿ..
ಸತೀಶನ ಕೊರಳಿಗೆ ಒಂದು ಡಾಲರ್ ಹಾಕಿ,
ಇದು ಸದಾ ನಿಮ್ಮೊಂದಿಗೆ ಇರಲಿ ಯಾವುದೇ ಕಾರಣಕ್ಕೂ ತೆಗೆಯಬೇಡಿ,
ಆಮೇಲೆ ಅತ್ಯಂತ ಕೆಟ್ಟ ಪರಿಣಾಮನ ಎದುರಿಸಬೇಕಾಗುತ್ತೆ...
ಎಂದ ಪ್ರಜಿನ್...

ಒಂದು ವಾರದ ನಂತರ ಒಂದು ದಿನ..
ನವದಂಪತಿಗಳನ್ನು ಕರೆದು, ಈಗ ನಾವು ಒಂದು ಮುಖ್ಯವಾದ
ಪೂಜೆ ಮಾಡಬೇಕು ಅದಕ್ಕಾಗಿ ಸಾಗರನ ಸಮಾಧಿಗೆ ಹತ್ರ ಹೋಗೋದು ಇದೆ
ಹೊರಡಿ ಎಂದ ಪ್ರಜಿನ್ ನ ಮಾತಿಗೆ...
ಹೌದಪ್ಪ ಪ್ರಜಿನ್ ಏನ್ ಹೇಳಿದ್ರು ಹಾಗೆ ಮಾಡಿ,
ಇಷ್ಟು ದಿನ ಇಲ್ಲದ ಕಲೆ ನನ್ನ ಮಗಳ ಮುಖದಲ್ಲಿ ಈಗಷ್ಟೇ ಮೂಡುವ ಹಾಗಿದೆ,
ಅದು ಹಾಗೆ ಶಾಶ್ವತವಾಗಿ ಉಳಿಯಬೇಕು ಅನ್ನೋದೇ ನಮ್ಮಿಬ್ಬರ ಆಸೆ,
ಎಂದರು ಅವಳ ಹೆತ್ತವರು...

ಸರಿ ಮ ನಾವು ಹೊರಡುತ್ತೇವೆ...
ಎಂದು ಮೂವರು ಸ್ಮಶಾನದ ಕಡೆ ಹೊರಟರು....
ಹೋಗುವ ದಾರಿಯಲ್ಲಿ ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಪ್ರಜಿನ್ ಖರೀದಿಸಿದ,

 ಸಮಾಧಿ ಮುಂದೆ ಬಂದು,
ಇದೆ ಸಾಗರನ ಸಮಾಧಿ. ಎಂದ ಮರುಕ್ಷಣ ಹಾಗೆ ಅದರ ಮುಂದೆ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಕುಸಿದು ಕುಳಿತಳು,
ಪ್ರಜಿನ್ ಹೇಳಿದಂತೆ ಎಲ್ಲಾ ವಿಧಿವಿಧಾನಗಳನ್ನೂ ಮಾಡಿ,
ಭಾರದ ಮನಸಿನೊಂದಿಗೆ ಸತೀಶನ ಹೆಗಲಿಗೆ ಒರಗಿಕೊಂಡು ಹೆಜ್ಜೆ ಇಡುತ್ತಿದ್ದ..
ಸ್ಮಿತಾಳನ್ನು ನೋಡಿ...
ಒಂದು ನಿಮಿಷ..ನಿನಗೊಂದು ಮುಖ್ಯವಾದ ವಿಷಯ ತಿಳಿಸಬೇಕು?
ಎಂದ ಪ್ರಜಿನ್..

ಅವರಿಬ್ಬರೂ ಹಿಂತಿರುಗಿ ನೋಡಿ ನಿಂತರು..
ಏನ್ ಹೇಳಿ ಎಂದ ಸ್ಮಿತಾಳಿಗೆ...

ಮದ್ವೆ ಆಗಿ ಇನ್ನೂ ಅರಿಶಿನದ ದಾರವೂ ಆರಿಲ್ಲಾ,
ಈಗ ಹೇಗೆ ಹೇಳೋದು ಅಂತಾನೆ ಗೊತ್ತಾಗುತ್ತಾ ಇಲ್ಲಾ..

ಏನ್ ವಿಷಯ ಇದ್ದರೂ ಹೇಳಿ.ಸಾರ್
ನೀವ್ ಹೇಳೋದರಲ್ಲಿ ಖಂಡಿತ ನಮ್ಮ ಒಳ್ಳೆಯದೇ ಅಡಗಿರುತ್ತೆ ಎಂದ ಸತೀಶ್..

ಸರಿ ಪ ಹೇಳ್ತೀನಿ... ಹೇಗೆ ತಡೆದುಕೊಳ್ಳುತೀರೋ ಅದು ನಿಮಗೆ ಬಿಟ್ಟಿದ್ದು...
ಸ್ಮಿತಾ..ನಿನ್ನ ಪ್ರಿಯತಮ ಸತ್ತಿಲ್ಲಾ..ಇನ್ನೂ ಬದುಕಿದ್ದಾನೆ..!!!!

ಏನ್ ಹೇಳ್ತಾ ಇದ್ದೀರಾ? ಎಂದ ಸ್ಮಿತಾಳ ಜೊತೆಗೆ ಸತೀಶನ ಮುಖದಲ್ಲೂ
ಆಶ್ಚರ್ಯದ ಗುರುತು ಎದ್ದು ಕಾಣುತ್ತಿತ್ತು...

ಅವರನ್ನು ಇಲ್ಲಿಗೆ ಕರೆಸಿದ್ದೀನಿ...

ಎಲ್ಲಿ ಸಾರ್? ಎಂದ ಸ್ಮಿತಾಗೆ..

ಇಲ್ಲಿದ್ದಾರೆ ನೋಡಿ.. ಎಂದ ಪ್ರಜಿನನ ತೋರು ಬೆರಳು ತೋರಿಸುವ ದಿಕ್ಕು,
ಸತೀಶನ ಕಡೆಗಿತ್ತು.......

ಅವನನ್ನು ನೋಡಿ ಇವನು ಸಾಗರಾನ?

ಖಂಡಿತ ಇಲ್ಲಾ...ನಿನ್ನ ಪ್ರಿಯತಮ...
 ನಿನ್ನ ಕಥೆಯಲ್ಲಿ ಸಾಗರನ ಹೆಸರಿನಲ್ಲಿ ಬರುವ ಪ್ರಿಯತಮ...
ನೀನು ಸತ್ತವನನ್ನೇ ನಿನ್ನ ಪ್ರಿಯತಮ ಎಂದು ಎಲ್ಲರನ್ನು ನಂಬಿಸಿದ
ಸಾಗರ ನಿನಗೆ ಯಾರೆಂದೇ ಗೊತ್ತಿಲ್ಲಾ..
ಪ್ರೇತಾತ್ಮ ಅನ್ನೋದೆಲ್ಲಾ ನೀವಿಬ್ಬರೂ ಹೆಣದ ಸುಂದರ ನಾಟಕ...

ಇಲ್ಲಾ ಪ್ರಜಿನ್ ನೀವು ತಪ್ಪಾಗಿ ತಿಳಿದಿದ್ದೀರಾ..
ಸಾಗರನನ್ನೇ ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದು..

ಒಹ್ ಹೋದಾ.. ಹಾಗಿದ್ರೆ ನಿನ್ನ ತೋಳಿನ ಹಚ್ಚೆಯಲ್ಲಿ ಫಾಟ್ ಒಳಗಿರುವ ಗಿಡದ ಅರ್ಥವೇನು.. ಅದಕ್ಕೆ ನಿಮ್ಮ ಅಮ್ಮ ಕೊಟ್ಟ ಅರ್ಥ ನೀನು ಅವರಿಗೆ ಹೇಳಿದ ಸುಳ್ಳು, ಆ ಸಣ್ಣ ಗಿಡಕ್ಕೆ ಅಚ್ಚಕನ್ನಡದಲ್ಲಿ ಸಸಿ ಅಂತಾರೆ..
ಸ ಅಂದ್ರೆ ಸತೀಶ ಸೀ ಅಂದ್ರೆ ಸ್ಮಿತಾ?i think im ರೈಟ್?
ಹುಚ್ಚರನ್ನ ಹತ್ತಿರದಿಂದ ನೋಡಿಲ್ಲದವರ ಮುಂದೆ ಹುಚ್ ಹುಚ್ಚಾಗಿ ಆಡಿದ್ರೆ,
ಅವರು ಹುಚ್ಚು ಅಂತ ಅನ್ಕೊಬಹುದು, ಆದ್ರೆ
ನೂರಾರು ಹುಚ್ಚರಿಗೆ ಹುಚ್ಚು ಬಿಡಿಸುವ ಹುಚ್ಚಾಸ್ಪತ್ರೆಯ ವೈದ್ಯರ ಮುಂದೆ
ಹುಚ್ ಹುಚ್ಚಾಗಿ ಆಡಿದ್ರೆ, ಹುಚ್ಚು ಅನ್ಕೊಳಕ್ಕೆ ಅವರಿಗೇನು ಹುಚ್ಚಾ?

ಅವತ್ತು ನಿಮ್ಮ ಯಂತ್ರದಿಂದ ಕೂಡ ಸದ್ದಾಯಿತು? ಅದಕ್ಕೇನ್ ಅಂತೀರಾ?

ಹೌದು ಸದ್ದಾಯಿತು ಆದ್ರೆ ಅದು, ‘ನೆಗಟಿವ್ ಎನರ್ಜಿ’ ಅಂತ ಅಲ್ಲಾ
ಅಲ್ಲಿ mobile ನಿಂದ ಬರುವ frequency ಇದೆ ಅಂತಾ ಸದ್ದಾಗಿದ್ದು,
ಕೂಡಲೇ ನೀನು ಹೂ ಹೂ ಅಂತ ದೆವ್ವ ಬಂದ ರೀತಿ ಗುನುಗುತ್ತಿದ್ದ,
ನಾನು ಆಗ ನಿನ್ನ ಮೇಲೊಂದು ಪವಿತ್ರವಾದ ಜಲವನ್ನು ಎರಚಿದ ಅದು
ಬಿದ್ದ ಮರುಕ್ಷಣ ಆಸಿಡ್ ಬಿದ್ದ ಹಾಗೆ ಆಕ್ಟಿಂಗ್ ಮಾಡಿದೆ,
ಅದು ಪವಿತ್ರವಾದ ಜಲವಲ್ಲ ಬಿಸ್ಲೇರಿ ವಾಟರ್!
ಅದಾದ ಮೇಲೆ ನಿನ್ನ ಕೋಣೆಯೊಳಗೆ ಒಂದು ಪವರ್ ಫುಲ್ ಗಣೇಶನ ವಿಗ್ರಹ ಇಟ್ಟೆ, ಹೌದು ಅದು ಪವರ್ ಪುಲ್ ಗಣೇಶ ಕಾರಣ ಆಗಷ್ಟೇ ಅದಕ್ಕೆ ಫುಲ್ ಚಾರ್ಜ್ ಮಾಡಿದ್ದೆ, ಆಗಲೇ ಆಲ್ವಾ ಅದು ಕೊನೆಯಲ್ಲಿ ಏನೇ ಸದ್ದಾದರೂ ಅದನ್ನು ನಲವತ್ತೆಂಟು ಗಂಟೆಗಳ ಕಾಲ ರೆಕಾರ್ಡ್ ಮಾಡಕ್ಕೆ ಸಾಧ್ಯ..
ಅವತ್ತೊಂದು ರಾತ್ರಿ ಎರಡು ಗಂಟೆ ಇರಬೇಕು ಆಗ ನೀನ್ ಯಾರ್ಗೋ ಕಾಲ್ ಮಾಡಿ, ಈಗ ಬಂದಿರೋನು ಮಾಮೂಲಿ ದೆವ್ವ ಬಿಡಿಸೋ ಪೂಜಾರಿಯ ಹಾಗೆ ಕಾಂತಾ ಇಲ್ಲಾ, ನಾವು ಹುಷಾರ್ ಆಗಿರಬೇಕು ಅಂತ ಮಾತಾಡಿದ್ದು ಅದರಲ್ಲಿ ರೆಕಾರ್ಡ್ ಆಗಿತ್ತು, ಅದನ್ನು ನೀನು ಮುಟ್ಟಿಯೂ ಸಹ ಇರಲಿಲ್ಲಾ, ಎಲ್ಲಿ ಮುಟ್ಟಿದ್ರೆ ನಿನ್ನ ಮೇಲೆ ಯಾವುದೇ ಪ್ರೇತಾತ್ಮ ಇಲ್ಲಾ ಅಂತ ಸಾಬೀತು ಮಾಡಿದ ಹಾಗೆ ಆಗುತ್ತೆ ಅಂತ.
ಹಾಗೆ ನೀನು ಸಾಗರ ಎಂದು ತೋರಿಸಿದ ಮನೆಗೆ ಹೋಗಿದ್ದೆ. ಅವರು ಮನೆ ಖಾಲಿ ಮಾಡಿದ್ರು, ಆಗಲೇ ಗೊತ್ತಾಗಿದ್ದು ಸಾಗರ ಸತ್ತಿದ್ದು ವಿಷ ಕುಡಿದು
ನೇಣು ಹಾಕಿಕೊಂಡು ಅಲ್ಲಾ ಅದು ಅವನ ಲವ್ ಫೈಲೂರ್ ವಿಷಯದಲ್ಲೇ
ಅದೂ ಸಹ ಇಲ್ಲಿ ಸತ್ತಿಲ್ಲಾ, ಸತ್ತಿದ್ದು ಹುಬ್ಬಳಿಯಲಿ...
ಅಮೇಲೊಂದು ವಿಷಯ ಸತ್ತ ಸಾಗರನ ತಂಗಿ ನಿನ್ನ ಹತ್ತನೇ ಕ್ಲಾಸ್ ನಲ್ಲಿ ಜೊತೆ ಓದಿದ ಹುಡುಗಿ.. ಸಾಕಾ ಇನ್ನೂ ಬೇಕಾ..
ಎನ್ನುವಾಗ ಅವರಿಬ್ಬರೂ ತಲೆ ಬಾಗಿ ನಿಂತಿದ್ದರು..

ದೆವ್ವ ಬಿಡಿಸಕ್ಕೆ ಬರ್ತಾರೆ ಅಂದ ಕೂಡ್ಲೇ
ಯಾರೋ ಹಣೆಯಲ್ಲಿ ಸಿಗ್ನಲ್ ಲೈಟ್ ಗಾತ್ರದ ರೆಡ್ ಬೊಟ್ಟು ಇಟ್ಕೊಂಡು,
ಪಂಚೆ ಉಟ್ಟು ,ಕೈಯಲ್ಲಿ ಬೇವಿನ ಕಡ್ಡಿ ಇಟ್ಕೊಂಡು ಬರ್ತಾರೆ ಅನ್ಕೊಂಡ್ರ?
ಪ್ರಜಿನ್ ಪ್ರೇತಾತ್ಮಗಳ ಜೊತೆಯಲ್ಲಿಯೇ ಪ್ರಾಕ್ಟಿಕಲಾಗಿ ಡೀಲ್ ಮಾಡೋನು.
ನನ್ನಿಂದ ಯಾವ ಶಕ್ತಿಯೂ ತಪ್ಪಿಸಿಕೊಳ್ಳಕ್ಕೆ ಆಗಲ್ಲಾ..
ಹೇಳಿ ಯಾಕೆ ಹೀಗೆ ಮಾಡಿದ್ದು..

ಅವರಿಗೆ ಒಪ್ಪುವ ದಾರಿ ಬಿಟ್ಟು ಬೇರೆ ಮಾರ್ಗವಿರಲಿಲ್ಲಾ..
ಹೌದು ಪ್ರಜಿನ್,
ನಿಜಾ ಸಾರ್ ನೀವು ಹೇಳಿದ್ದು..
ನಮ್ಮ ಪ್ರೀತಿಯನ್ನ ಉಳಿಸಿಕೊಳ್ಳಕ್ಕೆ ನಮಗೆ ಬೇರೆ ದಾರಿ ಇರಲಿಲ್ಲಾ.
ಎಲ್ಲೇ ಹೋಗಿ ಬದುಕಿದರೂ ಇವರ ತಂದೆ ಖಂಡಿತ ಬಿಡಲ್ಲ ,
ಸರಿ ಇಬ್ಬರೂ ಸೇರಿ ಸಾಯೋಣ ಎಂದು ನಿರ್ಧರಿಸಿದೋ,
ಆದರೆ ಸಾಯುವವರೆಗೂ ಹೋಗುವ ಮುನ್ನ ಬದುಕುವ ಎಲ್ಲಾ ಪ್ರಯತ್ನವನ್ನು ಮಾಡೋಣ ಎಂದೇ ಈ ಐಡಿಯಾ ಮಾಡಿದೋ..
ಹಾಗೆ ನಮ್ಮವರನ್ನೇ ಒಬ್ಬರನ್ನು ಮಂತ್ರವಾದಿಯಾಗಿ ಒಳಗೆ ಕಳುಹಿಸಬೇಕು ಅಂತ ಯೋಚಿಸಿದ್ದೆ ಅದಕ್ಕೆ ಸರಿಯಾಗಿ ನಟನೆ ಮಾಡುವ ಯಾರೂ ಸಿಗಲಿಲ್ಲಾ,
ಅಷ್ಟರಲ್ಲಿ ನೀವು ಬಂದ್ರಿ...

ಅವತ್ತು ನಾವಿಬ್ಬರೂ ಓಡಿಹೋಗುವ ಪ್ಲಾನ್ ನ ಅಮ್ಮ ಕೇಳಿಸಿಕೊಂಡಿಲ್ಲ,
ಅವರು ಕೇಳಿಸಿಕೊಳ್ಳಬೇಕು ಅಂತಾನೆ ನಾನು ಮಾತಾಡಿದ್ದು...

ನನಗೆ ಬಂದ ದಿನದಲ್ಲಿ ತಿಳೀತು, ಅದರೂ ಮಾನಸಿಕವಾಗಿ ಏನಾದ್ರೂ ತೊಂದರೆನಾ ಅಂತನೂ ಟೆಸ್ಟ್ ಮಾಡ್ದೆ, ಆಮೇಲೆ ಸಂಪೂರ್ಣ ನಾಟಕ ಅಂತ ತಿಳಿದ ಮೇಲೆ ನಿಮ್ಮ ದಾರಿಯಲ್ಲೇ ನಾನು ಹೋಗಕ್ಕೆ ಶುರು ಮಾಡ್ದೆ,
ನಿಮ್ಮ ಪ್ರೀತಿಗಾಗಿ ಇಷ್ಟೆಲ್ಲಾ ಕಷ್ಟ ಪಡ್ತಾ ಇದ್ದೀರಾ ಅಂತಾನೂ ತಿಳೀತು,
ಅದಕ್ಕೆ ನಾನು ಸಹಾಯ ಮಾಡ್ದೆ..

ಎಂದು ಅವನು ಹೇಳಿ ಮುಗಿಸಿದಾಗ ಅವರಿಬ್ಬರೂ ಅವನ ಕಾಲಿಗೆ ಬಿದ್ದು.
ನಿಮ್ಮಿಂದ ಇವತ್ತು ನಾವಿಬ್ಬರೂ ಜೀವಂತ ಇದ್ದೀವಿ...
ಎಂದಾಗ ಇಬ್ಬರನ್ನು ಎಬ್ಬಿಸಿ.. ಪ್ರೀತಿಗೆ ಗೆಲುವಾಯಿತ್ತಲ್ಲ ಸಾಕು ಬನ್ನಿ ಹೋಗೋಣ.. ಎಂದು ಹೊರಡುವಾಗ.
ಸರ್ ಅದರೂ ಕೊನೆವರೆಗೂ ನಮ್ಮ ನಾಟಕ ನಂಬಿದ ಹಾಗೆಯೇ ಇದ್ರಿ
ಮೊನ್ನೆ ಕೊಡ ಒಂದು ಡಾಲರ್ ಹಾಕಿದ್ರಿ..
ಅದೆಲ್ಲಾ ಸ್ಮಿತಾಳ ಹೆತ್ತವರಿಗೆ ಅನುಮಾನ ಬರಬಾರದು ಅಂತ ಹಾಕಿದ್ದು.

ಸೂಪರ್ ಸಾರ್ ನೀವು..ಸರಿ ಬನ್ನಿ..


ಒಂದೆರೆಡು ವಾರ ಹೆಸರಿಗೆ ಇದ್ದು..ಒಂದು ದಿನ..
ಸ್ಮಿತಾಳ ಹೆತ್ತವರ ಮುಂದೆ..
ಸರಿ ಸಾರ್ ನನ್ನ ಕೆಲಸ ಮುಗಿದ ಹಾಗೆ ನಾನಿನ್ನು ಹೊರಡುವ ಸಮಯ ಬಂದಿದೆ. ಎಂದ ಪ್ರಜಿನ್ ಗೆ ಕೈ ಮುಗಿದು,  ನಮ್ಮ ಫಾಲಿಗೆ ಬಂದ ದೇವರಪ್ಪ ನೀನು, ನಿನ್ನ ಸಹಾಯ ಈ ಜನ್ಮದಲ್ಲಿ ಮರೆಯಲ್ಲಾ..
ಇರಲಿ ಸಾರ್ ನನ್ನ ಕೆಲಸ ನಾ ಮಾಡಿದೆ..
ಎಂದವನಿಗೆ ಆರು ಲಕ್ಷದ ಚೆಕ್ ನೀಡಿ..
ನಿನ್ ಮಾಡಿದ ಉಪಕಾರಕ್ಕೆ ಎಷ್ಟು ಕೊಟ್ಟರೂ ಕಡಿಮೆಯೇ ಎಂದು
ಅವನ ಕೈಗೆ ನೀಡಿದರು...
ಅದನ್ನು ತೆಗೆದುಕೊಂಡು ತನ್ನ ಬೈಕ್ ಹತ್ತಿ ಕುಳಿತಾ..
ಅವರಿಗೆ ನಮಸ್ಕಾರ ಹೇಳಿ ಮೇಲೆ ನೋಡಿದರೆ ಮಹಡಿಯ ಮೇಲೆ
ನವ  ಜೋಡಿಗಳು ಕೈ ಮುಗಿದು ತಮ್ಮ ಕೃತಜ್ಞತೆಯನ್ನು ತೋರಿದವರಿಗೆ
ಹೆಬ್ಬರಳನ್ನು ಎತ್ತಿ ಗೆಲುವಿನ ಚಿನ್ಹೆ ತೋರಿಸಿ..
ಅಲ್ಲಿಂದ ಹೊರಟ..

ಬಂದ ಹಣದಲ್ಲಿ ಶಂಕರನಿಗೂ ಒಂದಿಷ್ಟು ನೀಡಿ
ಅಲ್ಲೇ ಒಂದೆರೆಡು ವಾರ ಸುಂದರ ನಗರಿ ಮೈಸೂರನ್ನು ಸುತ್ತಾಡಿ.
ಸರಿ ಇನ್ನು ತವರೂರಿನತ್ತಾ ಹೊರಡೋಣ ಎಂದು ನಿರ್ಧರಿಸಿ ಮಲಗಿದ..

ಪ್ರಜಿನ್ ಕಥೆಯ ಎರಡನೇ ಭಾಗ: 'ಕೆಂಪಾ' ವನ್ನು ಓದಲು ಇಲ್ಲಿ (cllick) ಮಾಡಿ

15 comments:

 1. Shaila Bharadvaj

  Super... Loved it

  ReplyDelete
 2. ಅಬ್ಬಬ್ಬ! ಸಕ್ಕತ್ ಟ್ವಿಸ್ಟ್ ಸ್ಟೋರಿ :) ಬಹಳ ಚೆನ್ನಾಗಿ ಬರೆದಿದ್ದೀರಿ ಎಲ್ಲಿಯೂ ಬೋರ್ ಆಗಲಿಲ್ಲ ಒಂದೇ ಸಮನೆ ಓದಿಸಿ ಕೊಂಡು ಹೋಗುತ್ತದೆ. ಸಕ್ಕತ್ ಥ್ರಿಲ್ಲರ್ ಸ್ಟೋರಿ. ಬಹಳ ದಿನಗಳ ನಂತರ ಮತ್ತೊಂದು ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕೆಂಪಗಾಗಿ ಕಾಯುವೆ. ಹೀಗೆ ಮುಂದುವರೆಸಿ ನಿಮ್ಮಲಿರುವ ಕಥೆಗಾರನನ್ನ ಕಥೆಗಳ ಬರೆಯುವ ಮೂಲಕ........ ಪದ್ಮ ಪ್ರಿಯ

  ReplyDelete
 3. Hema Suresh:

  Antu odid aytu super agittu yen twist yen idea fantastic geleya
  ******
  Bega ondu chance sigali song bariyoke kathe bariyoke ninge .....

  ReplyDelete
 4. Wow super.. yendinante hosa shailiya Kate nammannu konetanaka bidade kutuhaladalli kondoyyutte.. nimma innu hosa hosa kategalu hechu barli anta kaayuve...

  ReplyDelete
 5. Dear thamma,
  Thumba interesting aagidhe �� ista aithu..Climax anthu suuuperb ��

  ReplyDelete
 6. Wow superrrrrr.. :)

  ReplyDelete
 7. ಮಂಜುನಾಥ್ ಮಂಜು:

  ಯಪ್ಪ ಸೂಪರ್ ಸರ್
  ಮೊದಲಿಗೆ ಇಷ್ಟು ದೊಡ್ಡ ಕಥೆಯನ್ನು ಅಷ್ಟೇ ಬೇಗ ಬರೆದು ಮುಗಿಸಿರುವ ನಿಮಗೆ ಅಭಿನಂದನೆಗಳು ಅದು ನಿಮ್ಮಲ್ಲಿರುವ ಸಾಮರ್ಥ್ಯ ಕೂಡ

  ಅದಕ್ಕೆ ಗಣೇಶಯ್ಯನವರ ಬುಕ್ ಜಾಸ್ತಿ ಓದ್ಬಾರ್ದು ಅನೋದು. ಅಂದ್ರೆ ಕಥೆಯಲ್ಲಿ ಟ್ವಿಸ್ಟು ಗಳು ಸಕ್ಕತ್ ಇವೆ ಮುಖ್ಯವಾಗಿ ಕಥೆಯಲ್ಲಿ ಹೊಸತನವಿದೆ.

  ಆಮೇಲೆ ಸ್ಮಿತ ಮತ್ತು ದೆವ್ವ ಒಟ್ಟಿಗೆ ಕಥೆ ಹೇಳೋದು ಅದ್ಬುತ ಮತ್ತು ಹೊಸದಾಗಿದೆ ಸರ್

  ಕಥೆಯಲ್ಲಿ ಬರುವ ಲವ್ ಸ್ಟೋರಿ ಕೂಡ ಸೊಗಸಾಗಿದೆ.
  ಒಟ್ಟಿನಲ್ಲಿ ಇದು ಬರೀ ಓದುವ ಕಥೆಯಲ್ಲ ಒಂದು ಸಿನಿಮಾಗೆ ಬೇಕಿರುವ ಎಲ್ಲಾ ಅಂಶಗಳು ಇದರಲ್ಲಿದೆ.

  ಕಥೆ ಮುಂದುವರಿಯುವುದು ಅಂತ ತಿಳಿದು ಮತಷ್ಟು ಖುಶಿ ಆಯ್ತು *ಕೆಂಪಾ*

  ReplyDelete
 8. "ಪ್ರಜಿನ್" ಹೆಸರೇ ವಿಭಿನ್ನವಾಗಿದೆ ಅದರ ಜೊತೆಗೆ ಪ್ರೇತಾತ್ಮಗಳ ಜೊತೆ ಪಯಣ ಎನ್ನುವ ಅಡಿಬರಹ ಮತ್ತಷ್ಟು ಮನಸೆಳೆಯುತ್ತದೆ. ದೆವ್ವಗಳ ಕಥೆಗಳನ್ನು ಪ್ರೀತಿಸುವವರಿಗಂತೂ ಮನರಂಜನೆಗೆ ಮೋಸವಿಲ್ಲ, ಎಲ್ಲಿಯೂ ನೀರಸವೆನಿಸದೆ ಆರಂಭದಿಂದ ಅಂತ್ಯದವರಿಗೂ ಕುತೂಹಲವನ್ನು ಉಳಿಸಿಕೊಂಡು ಓದುವಂತೆ ಬರೆದಿದ್ದೀರಿ. ಭಯಾನಕ ಪ್ರೇಮಕಥೆ ಎಂದೆನಿಸಿದರೂ ಓದುಗರ ಊಹೆ ಸುಳ್ಳಾಗುವಂತೆ ವಿಭಿನ್ನ ರೀತಿಯಲ್ಲಿ ಕಥೆ ಅಂತ್ಯ ಮಾಡಿದ್ದೀರಿ. ನಿಜಕ್ಕೂ ಬಹಳ ಇಷ್ಟವಾಯ್ತು. ಪ್ರೇತಾತ್ಮಗಳ ಮುಂದಿನ ಹಾದಿ "ಕೆಂಪಾ"ಗಾಗಿ ಕಾಯುತ್ತ ಮುಂದಿನ ಕಥೆ ಮತ್ತಷ್ಟು ರೋಚಕವಾಗಿ ಬರಲೆಂದು ಹಾರೈಸುತ್ತೇನೆ. ಶುಭಾವಗಲಿ ನಿಮಗೆ :)

  ReplyDelete
 9. "ಹುಚ್ಚರನ್ನ ಹತ್ತಿರದಿಂದ ನೋಡಿಲ್ಲದವರ ಮುಂದೆ ಹುಚ್ ಹುಚ್ಚಾಗಿ ಆಡಿದ್ರೆ,
  ಅವರು ಹುಚ್ಚು ಅಂತ ಅನ್ಕೊಬಹುದು, ಆದ್ರೆ
  ನೂರಾರು ಹುಚ್ಚರಿಗೆ ಹುಚ್ಚು ಬಿಡಿಸುವ ಹುಚ್ಚಾಸ್ಪತ್ರೆಯ ವೈದ್ಯರ ಮುಂದೆ
  ಹುಚ್ ಹುಚ್ಚಾಗಿ ಆಡಿದ್ರೆ, ಹುಚ್ಚು ಅನ್ಕೊಳಕ್ಕೆ ಅವರಿಗೇನು ಹುಚ್ಚಾ?"
  >>>​ಈ ಡೈಲಾಗ್ ನ ಪದೇ ಪದೇ ಓದಿ ನಕ್ಕಿದ್ದೀನಿ :D :D :D

  ಏನೇ ಆದ್ರೂ ನೀನು ಬರೆಯೋ ಕಥೆ ಓದಕ್ಕೆ ಸಕ್ಕತ್ ಮಜಾ !!!

  Waiting for another flick .....................

  ReplyDelete
 10. ಯಪ್ಪೋ ಏನಪ್ಪಾ ಇಷ್ಟು ದೊಡ್ಡದಿದೆ ಅಂತ ಅನುಮಾನದಲ್ಲೇ ಓದೋಕೆ ಶುರು ಮಾಡಿದೆ,ಕೊನೇವರ್ಗೂ ತಲೆ ಮೇಲೆತ್ತಲಿಲ್ಲ,ಗಣೇಶಯ್ಯನವರ ಛಾಯೆಯಲ್ಲೇ ಕಥೆ ಮುಂದುವರೆದರೂ ನಿಮ್ಮ ಪೆನ್ಚಳಕ ಸಕತ್,ಕೆಲವೊಂದು ಕಾಗುಣಿತ ದೋಷಗಳು ಇದ್ರೂ ಪ್ರಜೀನ್ ಅನ್ನೋ ಅಪರೂಪದ ಕಥೆ ಮುಂದೆ ಕಾಣಲಿಲ್ಲ,ಕೆಂಪನಿಗೆ ಕಾಯುತ್ತಾ.....

  ReplyDelete
 11. ಯಪ್ಪೋ ಏನಪ್ಪಾ ಇಷ್ಟು ದೊಡ್ಡದಿದೆ ಅಂತ ಅನುಮಾನದಲ್ಲೇ ಓದೋಕೆ ಶುರು ಮಾಡಿದೆ,ಕೊನೇವರ್ಗೂ ತಲೆ ಮೇಲೆತ್ತಲಿಲ್ಲ,ಗಣೇಶಯ್ಯನವರ ಛಾಯೆಯಲ್ಲೇ ಕಥೆ ಮುಂದುವರೆದರೂ ನಿಮ್ಮ ಪೆನ್ಚಳಕ ಸಕತ್,ಕೆಲವೊಂದು ಕಾಗುಣಿತ ದೋಷಗಳು ಇದ್ರೂ ಪ್ರಜೀನ್ ಅನ್ನೋ ಅಪರೂಪದ ಕಥೆ ಮುಂದೆ ಕಾಣಲಿಲ್ಲ,ಕೆಂಪನಿಗೆ ಕಾಯುತ್ತಾ.....

  ReplyDelete
 12. Kempa also super and interesting story

  ReplyDelete
 13. Shwetha Hoolimath
  "ಪ್ರಜಿನ್" ಹೆಸರೇ ವಿಭಿನ್ನವಾಗಿದೆ ಅದರ ಜೊತೆಗೆ ಪ್ರೇತಾತ್ಮಗಳ ಜೊತೆ ಪಯಣ ಎನ್ನುವ ಅಡಿಬರಹ(tagline) ಮತ್ತಷ್ಟು ಮನಸೆಳೆಯುತ್ತದೆ. ದೆವ್ವಗಳ ಕಥೆಗಳನ್ನು ಪ್ರೀತಿಸುವವರಿಗಂತೂ ಮನರಂಜನೆಗೆ ಮೋಸವಿಲ್ಲ, ಎಲ್ಲಿಯೂ ನೀರಸವೆನಿಸದೆ ಆರಂಭದಿಂದ ಅಂತ್ಯದವರಿಗೂ ಕುತೂಹಲವನ್ನು ಉಳಿಸಿಕೊಂಡು ಓದುವಂತೆ ಬರೆದಿದ್ದೀರಿ. ಭಯಾನಕ ಪ್ರೇಮಕಥೆ ಎಂದೆನಿಸಿದರೂ ಓದುಗರ ಊಹೆ ಸುಳ್ಳಾಗುವಂತೆ ವಿಭಿನ್ನ ರೀತಿಯಲ್ಲಿ ಕಥೆ ಅಂತ್ಯ ಮಾಡಿದ್ದೀರಿ. ನಿಜಕ್ಕೂ ಬಹಳ ಇಷ್ಟವಾಯ್ತು. ಪ್ರೇತಾತ್ಮಗಳ ಮುಂದಿನ ಹಾದಿ "ಕೆಂಪಾ"ಗಾಗಿ ಕಾಯುತ್ತ ಮುಂದಿನ ಕಥೆ ಮತ್ತಷ್ಟು ರೋಚಕವಾಗಿ ಬರಲೆಂದು ಹಾರೈಸುತ್ತೇನೆ. ಶುಭಾವಗಲಿ ನಿಮಗೆ :)

  ReplyDelete
 14. Sowmya Prasanna
  ಅಬ್ಬಬ್ಬಾ! ನಿಮ್ಮ ಈ ಕಥೆ ಓದಿದ ನಂತರ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಿ ಹೊರಗೆ ಬಂದಂಗಾಯ್ತು ....ತುಂಬಾ ಸೊಗಸಾದ, ಅಚ್ಚುಕಟ್ಟಾದ, ಹೊಸತನದ ಮತ್ತು ವಿಭಿನ್ನ ಶೈಲಿಯ ಕಥೆ .....ತುಂಬಾ ಇಷ್ಟ ಆಯ್ತು .....ಕಥೆಯ ಯಾವ ಪಾತ್ರಗಳಿಗೂ ವೇದನೆ ಮತ್ತು ನೋವಾಗದಂತೆ ಪ್ರೇಮಿಗಳನ್ನು ಒಂದು ಮಾಡುವ "ಪ್ರಜಿನ್" ಪಾತ್ರ ತುಂಬಾ ಗಮನ ಸೆಳೆಯುತ್ತೆ....ತುಂಬಾ ಇಷ್ಟ ಆಯ್ತು ........

  ReplyDelete
 15. Amit Patil Algur
  ಸಖ್ಖತ್ತಾಗಿದೆ ಕಥೆ.. 'ಪ್ರಜಿನ್'ಹೆಸರೇ ಕುತೂಹಲ ಕೆರಳಿಸಿತು. ದೊಡ್ಡ ಕಥೆಯಾದರೂ ಎಲ್ಲಿಯೂ ಬೋರ್ ಹೊಡಿಸಲಿಲ್ಲ. ಓದುಗನ ಉಹೆಯನ್ನು ಕ್ಷಣ ಕ್ಷಣಕ್ಕೂ ಸುಳ್ಳು ಮಾಡಿ ಕೊನೆಯವರೆಗೂ ಬಿಗಿಯಾಗಿ ಹಿಡಿದಿಟ್ಟಿದ್ದಿರಾ. ಅದ್ಭುತ ಕಥೆ.. ಮಂಜು ಸರ್ ಹೇಳಿದ ಹಾಗೆ ಕಥೆಯನ್ನು ಹಾರರ್ ಥ್ರಿಲ್ಲರ್ ಸಿನೆಮಾ ಮಾಡಲು ಅರ್ಹವಾಗಿದೆ.

  ReplyDelete