Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Monday, 15 February 2016

ಸ್ವಲ್ಪ ನೋವ್ ಕೊಡ್ತೀರಾ!?


ಮನುಷ್ಯನು ಸ್ವಾಭಾವಿಕವಾಗಿ ಸಂಘ ಜೀವಿ,
ಆತನ ಜೀವನದಲ್ಲಿ ದುಃಖ/ಖುಷಿ ಹಲವಾರು ಬಾರಿ ನಿರ್ಧಾರವಾಗುವುದು ಸಹ ಅವನೊಂದಿಗಿರುವ ಒಡನಾಡಿಗಲಿಂದಲೇ ಎಂದರೂ ತಪ್ಪಾಗಲಾರದು,
ಆದರೆ, ಕೆಲವರು ತಮ್ಮ ಸ್ನೇಹಿತರು/ಸಂಬಂಧಿಕರಿಂದಲೇ ಮಾನಸಿಕ ಹಿಂಸೆಗೆ ಒಳಗಾಗಿ ಬಿಡುತ್ತಾರೆ,
ಅದು ಹೇಗೆ ಎಂದರೆ?,

ಒಂದು ಚಲನಚಿತ್ರಕ್ಕೆ ಹೋಗುತ್ತೇವೆ, ಹೋದ ಕೂಡಲೇ ನಮಗೆ ಟಿಕೆಟ್ ಸಿಕ್ಕಿ ಬಿಡುತ್ತಾ? ಒಂದೊಂದು ಸಲ ಸಾಲಲ್ಲಿ ನಿಂತು ಒಂದೆರೆಡು ಗಂಟೆಗಳ ನಂತರ ಸಿಗುವುದುಂಟು, ಕೆಲವೊಮ್ಮೆ ಸಿಗದೆಯೇ ವಾಪಾಸ್ ಬರುವುದುಂಟು,
ಇಂದೆಲ್ಲಾ ನಾಳೆ ಡಿವಿಡಿಯಲ್ಲೋ, ಟಿವಿಯಲ್ಲೋ ನೋಡಬಹುದು ಎನ್ನುವ ಚಿತ್ರಕ್ಕೆ ಟಿಕೆಟ್ ಟೈಮ್ ಗೆ ಸಿಗುವುದಿಲ್ಲಾ ಎನ್ನುವಾಗ, ಇನ್ನು ಬದುಕಿನಲ್ಲಿ ಆಯಾ ಹಂತದಲ್ಲಿ ನಡೆಯಬೇಕಿರುವ ವಿಷಯಗಳು ಸಮಯಕ್ಕೆ ಸರಿಯಾಗಿ  ನಡೆದು ಬಿಡುತ್ತವ?
ಓದು, ಕೆಲಸ, ಮದುವೆ, ಮಗು, ಸ್ವಂತ ಮನೆ, ಹೀಗೆ ಪಟ್ಟಿದೊಡ್ಡದಿದೆ...

ಇವೆಲ್ಲವೂ ಕೆಲವೆಮ್ಮೆ ತಡವಾಗಿ ಅಥವಾ ಸಿಗದೆಯೂ ಉಳಿಯಬಹುದು,
ಅದು ಮದುವೆಯೋ, ಮಗುವೋ, ಯಾವುದೋ ಒಂದು ನಮಗೆ ಸಿಗದ ವಿಷಯವನ್ನು ನೆನಯುವಾಗ ಖಂಡಿತ ಅದು ನಮಗೆ ಹೇಳಿಕೊಳ್ಳಲಾಗದಂತಹ ನೋವನ್ನು ಕೊಡುತ್ತದೇ,
ಅದನ್ನೇ ಮತ್ತೆ ಮತ್ತೆ ಯೋಚಿಸುವ ಮೂಲಕ, ಮನೋರೋಗ, ಅಥವಾ ಮಾನಸಿಕ ಹಿಂಸೆಗೆ ಒಳಗಾಗಬಾರದು,
ಇದಕ್ಕೆ ನಾವೇನು ಮಾಡಬೇಕು?
ಮೊದಲು ನಮಗೆ ಸಿಗಬೇಕಾದ ವಿಷಯ
ಇಂದೆಲ್ಲಾ ನಾಳೆ ಸಿಕ್ಕೆ ಸಿಗುತ್ತೆ ತಡವಾಗಿಯಾದರೂ
ಎನ್ನುವ ನಂಬಿಕೆ ಇದ್ದರೆ,
ಉದಾಹರಣೆಗೆ: ಪರೀಕ್ಷೆಯಲ್ಲಿ ಮತ್ತೆ ಕಟ್ಟಿ ಪಾಸ್ ಆಗುತ್ತೇನೆ,
ಮದುವೆ ಇನ್ನು ನನಗೇನು ವಯಸ್ಸು ಆಗಿಲ್ಲಾ ಒಂದೆರೆಡು ವರುಷ ಬಿಟ್ಟು ಆದರೂ ಏನು ತೊಂದರೆ ಇಲ್ಲಾ ಇನ್ನು ಸ್ವಲ್ಪ ಸಮಯ ಕಳೆದರೂ ನಡೆಯುತ್ತೆ,
ಮಗು ಇಲ್ಲದಿದ್ದರೆ ಒಂದಲ್ಲ ಎರಡು ವೈದ್ಯರಿಗೆ ತೋರಿಸೋಣ,
ಹೀಗೆ ಇರುವ ವಿಷಯಗಳನ್ನು ಚಿಂತಿಸಿ ಚಿಂತಿಸಿ ಕುಗ್ಗುವ ಬದಲು,
ಏನು ಮಾಡಿದರೆ ಸರಿಯಾಗಬಹುದು ಎನ್ನುವ ಯೋಚನೆಯತ್ತ ಗಮನ ಕೊಡಬೇಕು, ಅದೆರೆಡೆಗೆ ಓಡಲಾಗದಿದ್ದರೂ ತೆವೆಳುತ್ತಾ ಹೋಗುವ ಪ್ರಯತ್ನವನ್ನಾದರೂ ಮಾಡಬೇಕು ಆಗಲೇ ಗೆಲುವಿನ ಹಾದಿ ಹತ್ತಿರವಾಗುವುದು,

ಇನ್ನೊಂದು ವಿಧ, ಇಲ್ಲ ನನಗೆ ಈ ವಿಷಯ ಬದುಕಿನಲ್ಲಿ ಸಿಗುವುದೇ ಇಲ್ಲಾ
ಎನ್ನುವುದು ದೃಡವಾಗಿ ತಿಳಿದಿದ್ದರೆ,
ಅಂದಿನಿಂದಲೇ ಆ ಆಸೆಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು,
ನಮ್ಮ ಅಸಹಾಯಕತೆಯನ್ನು ಯೋಚಿಸಿ ಯೋಚಿಸಿ ನಮಗೆ ನಾವೇ ನೋಯಿಸಿಕೊಳ್ಳುವ ಸಮಯವನ್ನು ಕಡಿತಗೊಳಿಸುತ್ತಾ ಹೋಗಬೇಕು,

ಆ ನೋವುಗಳನ್ನು ನಮ್ಮಿಂದ ಶಾಶ್ವತವಾಗಿ ತಳ್ಳಿ ಹಾಕಲಾಗದಿದ್ದರೂ,
ಕಡೇಪಕ್ಷ ಅವುಗಳನ್ನು ಮರೆತು ಇರುವಂತಹ ಕೆಲವು ಗಂಟೆಗಳನ್ನು ನಾವೇ ನಿರ್ಮಿಸಿಕೊಳ್ಳಬೇಕು,
ಮಾತ್ರೆ ಕಹಿ ಇರುತ್ತದೆ ಅದನ್ನು ನುಂಗಿದರೆ ಮಾತ್ರವೇ ರೋಗ ಗುಣವಾಗುವುದು,
ವಾಸ್ತವ ಅದಕ್ಕಿಂದಲೂ ಕಹಿ ಇರುತ್ತದೆ ಅದನ್ನು ನುಂಗಿಕೊಂಡು ನಡೆದಾಗಲೇ
ನೆಮ್ಮದಿಯನ್ನು ಕಾಣಲಾಗುವುದು.

 ನಮ್ಮೊಳಗೇ ಎಲ್ಲೋ ಹುದೂಗಿ ಹೋಗಿರುವ ಹವ್ಯಾಸಗಳಿಗೆ ಮತ್ತೆ ಜೀವ ಕೊಡಬೇಕು,
ನಮಗೆ ಇಷ್ಟ ಎನ್ನುವ ವಿಷಯಗಳನ್ನು ವಿಸ್ತರಿಸಬೇಕು,
ನಮ್ಮನ್ನು ನಾವೇ ಮನರಂಜನೆ ಪಡಿಸಿಕೊಳ್ಳುವ ಉತ್ತಮವಾದ ಮಾರ್ಗವನ್ನು ಹುಡುಕಿಕೊಂಡರೆ,
ನೋವುಗಳು ನಮ್ಮನ್ನು ಬಿಟ್ಟು ಹೋಗುವಾ ಮಾರ್ಗವನ್ನು ಕಂಡುಕೊಳ್ಳುತ್ತವೆ.
ಒಳ್ಳೆಯ ಕಾದಂಬರಿ ಓದುವುದು, ಸಿನಿಮಾ ನೋಡುವುದು ಹೀಗೆ
ಇಲ್ಲೂ ನಾವು ಎಚ್ಚರಿಕೆ ವಹಿಸಬೇಕು, ಅಪ್ಪಿತಪ್ಪಿಯೂ ಸಹ
ನಮ್ಮ ಬದುಕಿನಲ್ಲಿ ನಮಗೆ ನೋವನ್ನು ನೀಡುತ್ತಿರುವ ವಿಷಯದ ಕಥೆಯನ್ನು ಒಳಗೊಂಡಿದೆಯೇ ಎಂದು ತಿಳಿದುಕೊಂಡು ಓದುವುದೋ, ಬಿಡುವುದೋ ಎನ್ನುವ ನಿರ್ಧಾರಕ್ಕೆ ಬರಬೇಕು, ಇಲ್ಲದಿದ್ದರೆ ತಿಳಿಯಾಗಿರುವ ಕೊಳಕ್ಕೆ ಕಲ್ಲು ಬೀಸಿದಂತಾಗುತ್ತೆ.
ಇವೆಲ್ಲವೂ ಸ್ವಯಂನಿಯಂತ್ರಣದಿಂದ ಸಾಧಿಸುವಂತವು.
ಆದರೆ ಹೊರಗಿನ ದಾಳಿ?
ಸ್ನೇಹಿತರು/ಸಂಬಂಧಿಕರಿಂದ ತಿಳಿದೋ ತಿಳಿಯದೆಯೋ ನಮ್ಮ ಗಾಯದ ಮೇಲೆ ಖಾರದ ಪುಡಿಯನ್ನು ಎರಚುವುದನ್ನು ನಾವು ತಳ್ಳಿ ಹಾಕುವಂತಿಲ್ಲ,

ಅವರ ಮಾತು/ನಡವಳಿಕೆ ನಮಗೆ ನೋಯಿಸುತ್ತದೆ ಎಂದಾದರೆ ಅವರಿಂದಲೂ ನಾವು ದೂರ ಇರುವುದೇ ಉತ್ತಮ,
ಅದರಲ್ಲೂ ನಾವು ಸ್ಕೂಲ್/ಕಾಲೇಜಿನ ಸ್ನೇಹಿತರಿಂದ ಮೊದಲು ದೂರ ಇರಬೇಕು,
ಕಾರಣ ನಮ್ಮ ಬದುಕಿನಲ್ಲಿ ಯಾವ ಯಾವ ವಿಷಯಗಳಿಂದ ನಾವು ವಂಚಿತರಾಗಿದ್ದೀವಿ ಎನ್ನುವುದು,
ನಮ್ಮದೇ ವಯಸ್ಸಿನ ಸಮಕಾಲಿನ ಸ್ನೇಹಿತರ ಜೊತೆ ಮಾತನಾಡುವಾಗಲೇ ತಿಳಿಯುವುದು,
ಅವರ ಬದುಕಿನಲ್ಲಿ ಕೆಲಸ/ಮದುವೆ/ಮಗು ಎನ್ನುವ ಹಂತಗಳನ್ನು ತಲುಪಿರುತ್ತಾರೆ,
ನಾವೋ ಇನ್ನೂ ಮೊದಲ ಹಂತವನ್ನೇ ಮುಟ್ಟಿರುವುದಿಲ್ಲ,
ಇದೆಲ್ಲವೂ ಅವರನ್ನು ಮಾತನಾಡಿ ಹಿಂತಿರುಗುವಾಗ ನಮ್ಮ ನಮ್ಮೊಂದಿಗೆ
ಮೌನವಾಗಿ ಕಾಡುತ್ತವೆ.

ಆದುದರಿಂದ ಬಹಳ ದಿನಗಳ ಒಡನಾಡಿಗಳನ್ನು ಭೇಟಿಯಾಗುವುದನ್ನು ತಳ್ಳಿಹಾಕಿ, ಅವರ ಬದುಕಿನಲ್ಲಿ ಅವರ ಗಳಿಕೆಯನ್ನು ಹೆಗ್ಗಳಿಕೆಯಾಗಿ ಹೇಳಿಕೊಳ್ಳಬಹುದು, ಅದು ನಮಗೆ ನಮ್ಮ ಅಸಹಾಯಕತೆಯನ್ನು ನೆನಪಿಸಿ ನೋಯಿಸುತ್ತದೆ,
ಅವರು ನಮ್ಮನ್ನು ನೋಯಿಸುವ ಹಾಗೆ ಮಾತನಾಡುತ್ತಾರೆ ಎಂದು ತಿಳಿದೂ
ಅವರನ್ನು ಭೇಟಿಯಾಗಲು ಹೋಗುವುದು,
‘ಸ್ವಲ್ಪ ನೋವ್ ಕೊಡ್ತೀರಾ’ ಎಂದು ನಾವೇ ಕೇಳಿಕೊಳ್ಳುವುದಕ್ಕೆ ಸಮ.
ಸ್ನೇಹಿತರೆ ಬೇಡವೇ ಹಾಗಿದ್ದರೆ?
ಖಂಡಿತ ಬೇಕು, ಈಗೇನು ನೂರಾರು ಸಾಮಾಜಿಕ ತಾಣಗಳಿವೆ
ನಮ್ಮ ಸಿದ್ಧಾಂತಗಳಿಗೆ ಸೂಕ್ತ ಎನ್ನುವಂತಹ ಗೆಳೆಯರ ಜೊತೆಗೆ ಒಡನಾಟವಿಟ್ಟು ಕೊಂಡರೆ, ಹೊಸಬರೊಂದಿಗೆ ಹೊಸ ವಾತಾವರಣ ನಿರ್ಮಾಣವಾಗುತ್ತೆ
ನಮ್ಮ ಹಿಂದಿನ ಕಷ್ಟಗಳನ್ನು ತುಸು ಮರೆತಿರಬಹುದು.

ಇವೆಲ್ಲವನ್ನೂ ಮಾಡಬೇಕಾ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಏಳಬಹುದು,
ರಣರಂಗಕ್ಕೆ ಪ್ರವೇಶ ಮಾಡುವ ಯೋಧ ತನಗೆ ಯಾವ ದಿಕ್ಕಿನಿಂದ
ಬಾಣಗಳು ದಾಳಿ ಮಾಡುವುದೋ ಎಂದು ತಿಳಿಯದೆ
ಆದಷ್ಟು ತನ್ನ ದೇಹವನ್ನು ರಕ್ಷಿಸಿಕೊಳ್ಳುತ್ತಾನೆ,
ಹಾಗೆ ಬದುಕು ಎನ್ನುವ ರಣರಂಗವನ್ನು ನಿತ್ಯವೂ ಪ್ರೇವೆಶಿಸುವ ನಮಗೆ
ಯಾರ ಮಾತಿನ ಬಾಣ ಯಾವ ಸಮಯದಲ್ಲಿ ಘಾಸಿ ಮಾಡುತ್ತದೋ ಎಂದು ಹೇಳಲಾಗದು, 
ಆದುದರಿಂದ ಸದಾ ಎಚ್ಚರಿಕೆಯಿಂದ ಇರಬೇಕು,
ನಮ್ಮ ಖುಷಿಗಾಗಿ,  

-ಪ್ರಕಾಶ್ ಶ್ರೀನಿವಾಸ್ 

6 comments:

  1. ಒಳ್ಳೆಯ ಅರ್ಥಪೂರ್ಣ ಬರಹ, ಒಂಟಿಯಾಗಿ ನೋವು ಪಡ್ತಾ ಇರೋರು ಜೀವನದಲ್ಲಿ ಸಿಗಬೇಕಿದ್ದ ಅತ್ಯಮೂಲ್ಯವಾದದ್ದು ಸಿಗದೇ ಇದ್ದಾಗ ಖಂಡಿತ ನೋವು ಆಗುವುದು ಸಹಜ ಅದರಿಂದ ಹೇಗೆ ಹೊರ ಬರಬಹುದು ಅಂತ ಸರಳವಾಗಿ ತಿಳಿಸಿದ್ದಿರ...... ಪದ್ಮಶ್ರೀ

    ReplyDelete
  2. Superb geleya manadha maathu...
    Thank you too
    Anuradha

    ReplyDelete
  3. Superb thamma...nijawaada maathu...ista aithu nimma baraha. .
    Ashakka...

    ReplyDelete
  4. ನಿಜ,ತಿಳಿದೂ ತಿಳಿದೂ ನೆಂಟರೆಂಬ ನಂಟಿನಿಂದ ಬಳಿಗೆ ಹೋಗಿ ನೋವನುಭವಿಸುವುದಕ್ಕಿಂತ, ಸಮಾನ ಮನಸ್ಕರೊಡನೆ ಬೆರೆತು,ಹವ್ಯಾಸಗಳಲ್ಲಿ ಜನ ನೋವನ್ನು ಮರೆತು ಬಾಳುವುದು ಉತ್ತಮ.ತುಂಬಾ ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದಿರಿ. ಧನ್ಯವಾದಗಳು

    ReplyDelete
  5. ನಿಜ,ತಿಳಿದೂ ತಿಳಿದೂ ನೆಂಟರೆಂಬ ನಂಟಿನಿಂದ ಬಳಿಗೆ ಹೋಗಿ ನೋವನುಭವಿಸುವುದಕ್ಕಿಂತ, ಸಮಾನ ಮನಸ್ಕರೊಡನೆ ಬೆರೆತು,ಹವ್ಯಾಸಗಳಲ್ಲಿ ಜನ ನೋವನ್ನು ಮರೆತು ಬಾಳುವುದು ಉತ್ತಮ.ತುಂಬಾ ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದಿರಿ. ಧನ್ಯವಾದಗಳು

    ReplyDelete