Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday, 6 February 2013

ಜೋಕರ್.....!



ಆ ಊರಿಗೆ ಒಂದು ಸರ್ಕಸ್ ಕಂಪನಿ ಬಂದಿತ್ತು.
ಅವರ ಪ್ರದರ್ಶನಕ್ಕೆ ಒಂದು ಜಾಗಕ್ಕಾಗಿ ಹುಡುಕಾಟ 
ನಡೆಸುವಾಗ ಸಿಕ್ಕಿದ್ದು ಆ ಊರ ಜಮೀನುದಾರರ ಖಾಲಿ ಜಾಗ ...
ಅಲ್ಲೇ ಗುಡಾರ ಕಟ್ಟಿ ಊರೆಲ್ಲಾ ಪ್ರದರ್ಶನದ ಸಮಯದ ಚೀಟಿ ಹಂಚಿ,
ಪ್ರದರ್ಶನಕ್ಕೆ ಸಿದ್ಧರಾದರು ....
ಅವರ ಸರ್ಕಸ್ ಎಲ್ಲರಿಗೂ ಇಷ್ಟವಾಗಲು ಶುರುವಾಯಿತು.
ಅದರಲ್ಲೂ ಆ ಸರ್ಕಸ್ ನಲ್ಲಿದ್ದ ಒಬ್ಬ ಜೋಕರ್ ..
ಅವನಿಗೆ ಆ ಊರಿನ ಎಲ್ಲರೂ ಅಭಿಮಾನಿಗಳಾಗ ತೊಡಗಿದರು
ಅವನ ಹಾಸ್ಯದ ಮೋಡಿ ಹಾಗೆ ಇತ್ತು .
ಪ್ರತಿ ಬಾರಿಯೂ ಸರ್ಕಸ್ ಶುರುವಾಗಿ
ಸರಿಯಾಗಿ ಅರ್ಧ ಘಂಟೆಯ ನಂತರ ಅವನ ದರ್ಶನ.
ಅವನಿಗೆ ಅವನದೇ  ಆದ ವಿಚಿತ್ರ ಶೈಲಿಯ ನರ್ತನ,
ಅವನ  ಭಾವ..
ಹಾಗೂ ಸಂಭಾಷಣೆಯ ಮೂಲಕ ಎಲ್ಲರ ಗಮನ
ಅವನೆಡೆ ಸೆಳೆಯುತ್ತಿದ್ದ .
ಅವನಿಂದ ಆ ಸರ್ಕಸ್ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು.
ಆ ಜೋಕರ್ ನ ಬಗ್ಗೆ ಊರಿನ ಜನ ಮಾತನಾಡಲು ಶುರು ಮಾಡಿದರು.
ಅವನ ಹಾಸ್ಯದಿಂದ ತಮ್ಮೆಲ್ಲಾ  ನೋವುಗಳು ಕ್ಷಣ
ಮಾತ್ರವಾದರೂ ಮರೆಸುತ್ತಾನೆ.
ಎಂದು ಅವನಿಗೆ ಹೊಗಳಿಕೆಯ ಹಾರಗಳ ಅರ್ಪಣೆ.
ಆ ಮಾತುಗಳು ಊರ ಜಮೀನುದಾರನ ಕಿವಿಗೂ ಬಿತ್ತು.
ಆತನಿಗೆ ಒಬ್ಬಳೇ ಮಗಳು ಅವಳ ಬದುಕಿನಲ್ಲಿ ಕೂಡ ಯಾಕೋ ನೋವು ತುಂಬಿತ್ತು.
ಅವಳಿಗೆಂದು ನೋಡಿದ ನಿಶ್ಚಯವಾಗಿದ್ದ ವರನ ಅಕಾಲಿಕ ಮರಣ,
ಅವಳನ್ನು ಮನೆಯೊಳಗೇ ಇರುವಂತೆ ಮಾಡಿತು.
ಅವಳ ಮುಖದಲ್ಲಿ ಮತ್ತೆ ಮಂದಹಾಸ ಕಾಣಬೇಕು ಎಂದು
ಆ ಸರ್ಕಸ್ ಗೆ ಅವಳನ್ನು ಕರೆದುಕೊಂಡು ಹೋದರು  .
ಪ್ರದರ್ಶನ ಶುರುವಾಯಿತು ಹುಲಿ ಸಿಂಹ  ....
ಗಿಳಿ ಎಲ್ಲವೂ ಹೇಳುವುದನ್ನ  ಮಾಡುತ್ತಿದ್ದುವು ...
ಆ ಜಮೀನುದಾರ ಹಾಗೆ ಮೆಲ್ಲಗೆ ಅವಳ
ನೋಡಿದರೆ ಮುಖದಲ್ಲಿ ಯಾವುದೇ ಬದಲಾವಣೆ ಇಲ್ಲ...
ಅರ್ಧಘಂಟೆ ಕಳೆದ ನಂತರ ಸಿಡಿ ಮದ್ದಿನ ಸದ್ದಿನೊಂದಿಗೆ ಬಂದ ಆ ಜೋಕರ್!
ಜನಗಳಲ್ಲಿ ನಗೆಯ ಹೊನಲು ..
ಎಲ್ಲರೂ ಚಪ್ಪಾಳೆಯೊಂದಿಗೆ ಅವನ ಬರ ಮಾಡಿಕೊಂಡರು ...
ಹೀಗೆ ಹಾಗೆ ಅಂತ ಅವನ ಒಂದೊಂದು ನಗೆಯ ಬಾಣಗಳ ಬಿಡುತ್ತಲೇ ಇದ್ದ.
ಅಲ್ಲಿದ್ದ ಅವಳ ಮುಖದಲ್ಲಿ ಮೆಲ್ಲನೆ ನಗೆಯ ಮೊಗ್ಗು ಅರಳಲು ಆರಂಭಿಸಿತು.
ಅದ ಕಂಡ ಆ ತಂದೆಯ ಖುಷಿಗೆ ಎಲ್ಲೆಯು  ಇರಲಿಲ್ಲ.
ಅವಳು ಬಿದ್ದು ಬಿದ್ದು ನಗುತ್ತಿದ್ದಳು.
ಅವನ ಒಂದೊಂದು ನಗುವಿನ ಚಿನಕುರುಳಿಗೂ..
ಸರ್ಕಸ್ ಮುಗಿಯುತ್ತಿದ್ದ೦ತೆ ಮನೆಗೆ ಬಂದು
ಬರೀ ಆ ಜೋಕರ್ ನ ಬಗ್ಗೆಯೇ ಮಾತು,
ಅವಳು ಇದೇ  ಮೊದಲ ಬಾರಿಗೆ ಮನ ಬಿಚ್ಚಿ
ಮಾತನಾಡಿದ್ದು ಅವಳ ಹೆತ್ತವರಲ್ಲಿ ಏನೋ ನೆಮ್ಮದಿ ...
ಆ ಜೋಕರ್ ಗಾಗಿಯೇ ಪ್ರತಿ ದಿನವೂ
ಸರ್ಕಸ್ ಗೆ ಅವಳ ಹಾಜರಿ .
ಹೀಗೆ ಅವನ ಮೇಲೆ ಇದ್ದ ಅಭಿಮಾನದ ಬೀಜ ಪ್ರೀತಿಯ ಸಸಿ ಬಿಡಲು ಶುರುವಾಯಿತು...
ಆದರೆ ಅವನ ನೋಡಿ ಮಾತನಾಡಲು ಅವಳಿಗೆ ಭಯ.
ದೂರದಿಂದಲೇ ಅವನ ಪ್ರದರ್ಶನ ಕಂಡು ಖುಷಿ ಪಡುತ್ತಿದ್ದಳು..
ಹೀಗೆ ಎರಡು ವಾರ ಉರುಳಿದವು ..
ಅದೊಂದು ದಿನ ..
ಸರ್ಕಸ್ ಗೆ ಶುರುವಾಗಿ ಎಲ್ಲರೂ ನೋಡುತ್ತಾ
ಇದ್ದಾಗ ಅವಳಿಗೆ ಇನ್ನೂ ಅರ್ಧ ಘಂಟೆಯಲ್ಲಿ
ಅವನು ಬರುತ್ತಾನೆ ಹಾಗಾಗಿ ಈಗ ಅಲ್ಲಿ ಅವನೊಬ್ಬನೇ
ಇರಬಹುದು ಎಂದು ಸರ್ಕಸ್ ನ ಹಿಂದಿನ ಗುಡಾರದ ಕಡೆಗೆ
ಮೆಲ್ಲನೆ ಹೆಜ್ಜೆ ಹಾಕುತ್ತ ಬಂದರೆ ಅವನು 
ತನ್ನ ಕೋಣೆಯಲ್ಲಿ  ಜೋಕರ್ ಮುಖವಾಡ ಧರಿಸಿ ಸಿದ್ಧನಾಗುತ್ತಿದ್ದ .
ಅಲ್ಲಿಗೆ ಬಂದ ಅವಳು...
ನಾನು ನಿಮ್ಮ ದೊಡ್ಡ ಅಭಿಮಾನಿ,

ಇರಲಿ ನೀವೆಲ್ಲ ಇಲ್ಲಿ  ಬರಬಾರದು ದಯವಿಟ್ಟು ಹೊರಟು ಹೋಗಿ ..

ನಾನು ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು.

ಏನ್ ವಿಷಯ ಬೇಗ ಹೇಳಿ ಹೊರಡಿ.

ನಾನು ನಿಮ್ಮನ್ನ ತುಂಬಾ ಪ್ರೀತಿಸ್ತಾ ಇದ್ದೀನಿ" ..
(ನಗುವಿನ ಮುಖವಾಡ ಹಿಂದೆಯೇ ಮೆಲ್ಲನೆ ನಕ್ಕು)
ನೋಡಿ ನಗಿಸುವ ಮನಸಿನೊಳಗೆ ನಗಲಾರದಷ್ಟು ನೋವಿರುತ್ತೆ ..
ಮುಖಕ್ಕೆ ಮುಖವಾಡ ಹಾಕಬಹುದು
ಬದುಕಿಗೆ ಯಾವುದೇ ಮುಖವಾಡ ಇಲ್ಲ.
ನನಗೆ ಒಂದೇ ಕೆಲಸ..
ನಗಿಸುವುದು ಅದ ತಪ್ಪೇ ಇಲ್ಲದ೦ತೆ  ತಪ್ಪದೆ ಮಾಡುತ್ತಿದ್ದೇನೆ
ದಯವಿಟ್ಟು ಕ್ಷಮಿಸಿ ಬಿಡಿ ನಾ ನಿಮ್ಮ ಪ್ರೀತಿಯ ನಿರಾಕರಿಸುವುದಕ್ಕೆ ...

ನನ್ನ ಬದುಕಿನಲ್ಲಿ ನೋವುಗಳೇ ತುಂಬಿತ್ತು ನೀವೇ ಮೊದಲ ಬಾರಿಗೆ
ನಗುವಾಗಿ ಬಂದಿದ್ದು ನಿಮ್ಮನ್ನು ಕೇವಲ ಅರ್ಧ ಘಂಟೆ
ನೋಡುವಾಗಲೇ ನಗುವ ನಾ ಇನ್ನೂ ನಿಮ್ಮೊಂದಿಗೆ ಜೀವನ ಪೂರ್ತಿ ಇದ್ದರೆ......
ಮನೆಯ ಕತ್ತಲಿನೊಳಗೆ ಕಳೆದು ಹೋಗಿದ್ದ ನನಗೆ ನೀವೇ ಬೆಳಕಾಗಿದ್ದು ...

ನಿಮ್ಮ ಮಾತು ಕೇಳಕ್ಕೆ ಚೆನ್ನಾಗಿದೆ ಆದರೆ ವಾಸ್ತವ ಬೇರೆ ಇದೆ ....
ಸರ್ಕಸ್ ನಲ್ಲಿ ನೋಡಿದ್ದೀರಾ ಹುಲಿ ಗಿಳಿ ಕೋತಿ ...
ನಾಯಿಗೂ ಜೋಡಿ ಇರುತ್ತೆ ಆದರೆ
ಅದರಲ್ಲಿ ಬಾರೋ ಜೋಕರ್ ಮಾತ್ರ ಒಬ್ಬನೇ ಇರ್ತಾನೆ
ಅವನಿಗೆ ಯಾವುದೇ ಜೋಡಿ ಇರಲ್ಲ ...
ಹೇಳಿಕೊಳ್ಳುವ ಹಾಗೆ ಓದು ನನ್ನಲ್ಲಿ ಇಲ್ಲ ,
ನಾನು ಸಿರಿವಂತನೂ ಅಲ್ಲ.ಇರುವುದು ಅಮ್ಮ ಮಾತ್ರ,
ಅವಳಿಗೆ ದಿನದ ದುಡಿಮೆಯಲ್ಲಿ ಎರಡು ಹೊತ್ತು
ಗಂಜಿ ಕಷ್ಟಗಳ ಜೊತೆಯಲ್ಲೇ ಬದುಕು ಅನ್ನುವಾಗ ಮತ್ತೊಂದು ಕಷ್ಟ ಹೀಗೆ
ಇದೆ ನನ್ನ ಬದುಕು ..


ಯಾಕೆ ಹಾಗೆ ಹೇಳ್ತೀರಾ....
ನಿಮಗೇನ್ ಆಗಿದೆ ಹೇಳಿ 

ಬೇಡ ಸುಮ್ಮನೆ ದಯವಿಟ್ಟು ಹೊರಟು  ಬಿಡಿ ಕಾರಣ ನನ್ನ ನೋವುಗಳು ನಿಮಗೆ ನಾಳೆ ನನ್ನ ಹಾಸ್ಯವನ್ನು ಕೂಡ ಅಳಿಸುವ ಹಾಗೆ ಮಾಡುತ್ತೆ .

ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದೇನೆ
ದಯವಿಟ್ಟು ಹೇಳಿ ಹೇಳಿ ....
(ಅವಳು ಏನೇ ಮಾಡಿದರೂ ಅವನ ಮಾತಿನಿಂದ ಸಮಾಧಾನ ಪಡಿಸಲು ಆಗಲಿಲ್ಲ .
ಕೊನೆಗೆ ಅವನ ಬದುಕಿನ ಮತ್ತೊಂದು ಮುಖ ಅವಳಿಗೆ ತೋರಿಸಿದ.
ಮೆಲ್ಲನೆ ನಗುತ್ತಿದ್ದ ಆ ಜೋಕರ್ ಮುಖವಾಡ ಕಳಚಿದ ಒಳಗೆ ಅರ್ಧ ಬೆಂದು ಹೋದ ಮುಖ!!
ಅದ ಕಂಡು ಅವಳಿಗೆ ದಿಗ್ಭ್ರಮೆ!!
ಮಾತುಗಳೇ ಹೊರಡಲಿಲ್ಲ ಹಾಗೆ ಕಲ್ಲಿನ ಥರ ನಿಂತು ಬಿಟ್ಟಳು)
(ಕಣ್ಣೀರ ಒರಸಿಕೊಂಡು)
ಇದು ಹೇಗೆ ಆಯಿತು ನಿಮಗೆ ?

ಕೆಲವು ವರುಷಗಳ ಹಿಂದೆ ನಾವು ಒಂದು ಊರಿನಲ್ಲಿ ಸರ್ಕಸ್ ಹಾಕಿದ್ದು ,
ಅಲ್ಲಿ ಒಂದು ದಿನ ರಾತ್ರಿ ಇದ್ದಕ್ಕಿದ್ದ ಹಾಗೆ ನಮ್ಮ ಪಕ್ಷಿಗಳು ಇರುವ ಕೋಣೆಗೆ ಬೆಂಕಿ ಬಿತ್ತು.
ಆ ಮೂಕ ಜೀವಗಳ ಕಾಪಾಡಲು
ಹೋಗಿ ನನ್ನ ಮುಖ ಅರ್ಧ ಸುಟ್ಟು  ಹೋಯಿತು!
ನಾನೇನು ಜೋಕರ್ ಅಲ್ಲ,ಈ ಸರ್ಕಸ್ ನಿರ್ವಾಹಕರಲ್ಲಿ ಒಬ್ಬ
ನನ್ನ  ಮುಖ ಹೀಗೆ ಆದ ಮೇಲೆ
ಎಲ್ಲರೂ ನನ್ನ ಒಂದು ರೀತಿಯ ಅನುಕಂಪದಿಂದ ನೋಡಲು ಶುರು ಮಾಡಿದ್ದು ,
ನನಗೆ ತೀರ ನೋವು  ನೀಡುತ್ತಿತ್ತು .
ಅದೊಂದು ದಿನ ನಮ್ಮ ಸರ್ಕಸ್ ನ ಜೋಕರ್ ಕೆಲಸ ಮಾಡೋ ಹುಡುಗ ಕೆಲಸ ಬಿಟ್ಟು ಹೋದಾಗ ಆ ನಗುವಿನ 'ಮುಖವಾಡ' ನಾನೇ ಧರಿಸಿದೆ ಅಂದಿನಿಂದ ಎಲ್ಲರನ್ನೂ ನಗಿಸುತ್ತಾ ಬರುತ್ತಿದ್ದೇನೆ ...

ಎಲ್ಲವನ್ನೂ ಹೇಳಿ ಮುಗಿಸಿದ..
ಅವಳಿಗೆ ಅವನ ಮೇಲಿದ್ದ ಆಕರ್ಷಣೆ ಕ್ರಮೇಣ ಕಮ್ಮಿಯಾಯಿತು...
ಅವಳು ಏನೂ ಹೇಳದೆ ಹೊರಟು ಹೋದಳು..
ಲೋ ಜೋಕರ್ ...ಬಾರೋ ...
ಅವನ ಕಾಯಕದ ಕರೆ ಬರುತ್ತಿದಂತೆ ಕೆಳಗಿಟ್ಟ ಮುಖವಾಡ ಕೈಗೆ ಎತ್ತಿಕೊಂಡು ಹೊರಟ ..
ಎಂದಿನಂತೆ ಎಲ್ಲರನ್ನೂ ರಂಜಿಸಿ ..
ಸರ್ಕಸ್ ಮುಗಿಸಿಕೊಂಡು ತನ್ನ 
ಕೋಣೆಯೊಳಗೆ ಬಂದು ಕನ್ನಡಿಯ ಮುಂದೆ ನಿಂತು ಮೆಲ್ಲನೆ ಆ ಮುಖವಾಡ ಕಳಚಿದರೆ
ಅವನ 'ನಿಜವಾದ' ಮುಖದಲ್ಲಿ ವೇದನೆಯ ಛಾಯೆ ಕಾಣುತ್ತಿತ್ತು ....
ಅವಳು ಆತನನ್ನು  ನಿರಕಾರಿಸಿರುವುದಕ್ಕೆ ಅಲ್ಲ..
ಇನ್ನೂ ತನ್ನಿಂದ ಅವಳನ್ನು ನಗಿಸುವುದಕ್ಕೆ ಆಗುವುದಿಲ್ಲವಲ್ಲ ಎಂದು!!

-ಪ್ರಕಾಶ್ ಶ್ರೀನಿವಾಸ್ 

TIP:easy2comment Anonymous ಅಂತ select ಮಾಡಿ 
ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ!

13 comments:

  1. ''ಯಾರು ನಗುವನ್ನು ಹಂಚುತ್ತಾರೋ ಅವರ ಮನಸ್ಸಲ್ಲಿ ಬಹಳ ನೋವು ಇರುತ್ತೆ'' !!! ಒಂದು ನಿಜ ಜೀವನಕ್ಕೆ ಹಿಡಿದ ಕನ್ನಡಿ.. ಸರಳ ನಿರೂಪಣೆ ಇಷ್ಟವಾಯಿತು. ಶುಭವಾಗಲಿ.. :)

    ReplyDelete
  2. ಯಾವಾಗ್ಲೂ ನಗುವುದಕ್ಕೆ ಇಸ್ತಪದುವವರು ತುಂಬಾ ನೋವನ್ನ ನೋಡಿರ್ತಾರೆ ಅಲ್ವ ವೆರಿ ನೈಸ್ ಕಾನ್ಸೆಪ್ಟ್ - Anuradha

    ReplyDelete
  3. ಜೋಕೆರ್ !!!! ಕಥೆ ಸೂಪರ್ ಆಗಿದೆ ...ತುಂಬಾ ಇಷ್ಟ ಆಯಿತು ... ಅವನು ಮುಖವಾಡ ಕಳಚಿದಾಗ ಅವಳ ನಿಜವಾದ ಮುಖವಾಡ ಗೊತ್ತಾಯೆತು!!!!

    ReplyDelete
  4. ಕಥೆ ತುಂಬಾ ಚೆನ್ನಾಗಿದೆ.. ಆದರೆ ಕೊನೆಯಲ್ಲಿ ಓದಿ ತುಂಬಾ ಬೇಜಾರಾಯ್ತು ಅವಳು ಅವನನ್ನು ನಿರಕರಿಸಬರದಗಿತ್ತು ಕೊನೆಗೂ ಅವಳ ನಿಜವಾದ ಭಾವ ಏನು ಎನ್ನುವುದು ಅವನ ನಿಜ ಮುಖ ನೋಡಿದ ಮೇಲೆ ತಿಳಿಯಿತಲ್ಲ

    ReplyDelete
  5. ಮನ ಕಲಕುವ ಜೋಕರ್ ಕತೆ ತುಂಬಾ ಸೊಗಸಾಗಿ ಬಂದಿದೆ ಪ್ರಕಾಶ್.. ನಗುವಿನ ಹಿಂದಿನ ನೋವುಗಳು ಬೇರೆಯವರಿಗೆ ತಿಳಿಯುವುದು ತುಂಬಾ ಕಷ್ಟ.. ತಿಳಿಯದೆ ಇರುವುದೇ ತುಂಬಾ ಒಳ್ಳೆಯದು ಅಲ್ವ.. ನಮ್ಮ ನೋವನ್ನು ಮರೆತು ನಗಿಸುವುದೇ ನಮಗೂ ಖುಷಿ... ತುಂಬಾ ಚೆನ್ನಾಗಿದೆ ಪ್ರಕಾಶ್

    ReplyDelete
  6. ತುಂಬಾ ಚೆನ್ನಾಗಿದೆ.. ನಗಿಸುವವರ ಹಿಂದಿನ ನೋವನ್ನು ತೆರೆದಿಟ್ಟಿದ್ದೀರಾ.

    ReplyDelete
  7. ಎಲ್ಲರಿಗು ಪ್ರೀತಿ ಕೊಟ್ಟವನಿಗೆ ಪ್ರೀತಿಯ ಕೊರತೆ
    ಎಲ್ಲರ ಕಷ್ಟ ನುಂಗುವವನಿಗೆ ತನ್ನ ಕಷ್ಟಕ್ಕೆ ಒಂಟಿ ವ್ಯಥೆ
    ಎಲ್ಲರ ನೋವಿಗೆ ಸ್ಪಂದಿಸುವವನಿಗೆ ತನ್ನದೇ ನೋವಿನ ಕಥೆ
    ಎಲ್ಲರ ನಕ್ಕು ನಗಿಸುವವನಿಗೆ ತನ್ನೊಳಗೆ ಕಣ್ಣಿರ ಕಡಲೆ
    ಲೋಕ ನೋಡುವ ಮುಖದೊಳಗೆ ಒಂದು ಮುಖ ಮೂಕ ರೋಧಕ
    ಚೆನ್ನಾಗಿದೆ ಪ್ರಕಾಶ್ ಕಥೆ ಜೋಕಾರ್, ಬದುಕಿನಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜೋಕರಗಳೇ ಅಲ್ಲವೇ
    ತನ್ನೊಳಗಿನ ನೋವನ್ನು ಮರೆತು ಇತರರಿಗಾಗಿ ಬದುಕು ಇದೆ ಬದುಕು

    ReplyDelete
  8. rashmi mohan superrrrrrrrrr

    ReplyDelete
  9. ಮೆಚ್ಚುಗೆಯ ಮಳೆಗೈದ ಎಲ್ಲರಿಗೂ ವಂದನೆಗಳು ಗೆಳೆಯರೇ!

    ReplyDelete
  10. ವಾಸ್ತವದ ಕಿರುಗನ್ನಡಿ ಈ ಕಥೆ,
    ಯಾರಿಗೂ ಗೊತ್ತಿರದ ಒಬ್ಬನ ವ್ಯಥೆ ... :(

    ನಿಮ್ಮ ಬರಹಗಳಿಗೆ ನನ್ನದೊಂದು ಸಲಾಮ್ ಪ್ರಕಾಶ್ ಅವರೇ .......

    ReplyDelete