ಅವ್ರು ನಂಗೆ
ಹೀಗೆ ನೋವು ಮಾಡ್ತಾರೆ ಅಂತ
ನಾನು ಯಾವತ್ತೂ
ಅನ್ಕೊಂಡು ಇರ್ಲಿಲ್ಲ ......
ಈ ಮಾತನ್ನು
ಬದುಕಿನಲ್ಲಿ
ಒಬ್ಬರು ಹೇಳದ
ಸಾಗಿದ್ದಾರೆ ಅಂದ್ರೆ ಅವರು ಖಂಡಿತ ಭಾಗ್ಯಶಾಲಿಗಳೇ
ಆದರೆ ಇದು ನಡೆಯದ
ಸಂಗತಿ!
ನೋವು ಪಡೆಯಲೇ
ಬೇಕು ಆಗಲೇ ನಗುವಿನ ಅರ್ಥ ತಿಳಿಯುವುದು!
ಸರಿ ಈಗ ನೋವು ಅದ
ಮೇಲೆ ನಾವು ಏನ್ ಮಾಡಬೇಕು ?
ನಾವು ಬಹುಪಾಲು ಮಾಡೋದು ಏನು
ಆ ನೋವಿನಲ್ಲೇ
ಕಾಲ ಕಳೆಯೋದು!
ನಾವು
ರಸ್ತೆಯಲ್ಲಿ ಬರುವಾಗ ಕಾಲಿಗೆ ಮುಳ್ಳು ಚುಚ್ಚುತ್ತೆ ..
ಆಗ ಏನ್
ಮಾಡ್ತೀವಿ ಆ
ಮುಳ್ಳನ್ನು ಅಲ್ಲೇ ತೆಗೆಯುತ್ತೇವೆ
ಇಲ್ಲ ಮನೆಗೆ ಬಂದು ತೆಗೆಯುತ್ತೇವೆ ,
ಹೌದು ಅದರ ನೋವು
ಸ್ವಲ್ಪ ಸಮಯ ಇದ್ದೆ ಇರುತ್ತೆ..
ಅದಕ್ಕೆ ಏನ್
ಮಾಡಬೇಕು ಏನಾದರೂ ಮೂಲಾಮು
ಹಚ್ಚಬೇಕು ...
ಅದನ್ನ ಬಿಟ್ಟು ಆ
ಮುಳ್ಳನ್ನ ತೆಗೆದು
ಅದು ಹೇಗೆ
ಚುಚ್ಚಿತು ಅಂತ ಮೈಯೆಲ್ಲಾ
ಚುಚ್ಚಿ
ನೋಡಿಕೊಂಡರೆ ಸರಿ ನ?
ಹಾಗೆ ನೋವು ಆದಾಗ
ನೋವುವುದಕ್ಕಿಂತ
ಅದನ್ನೇ ಮತ್ತೆ
ಮತ್ತೆ ನೆನದು
ನೋವು ಮಾಡಿಕೊಳ್ಳುವುದೇ
ಅಧಿಕ!
ಹೀಗೆ ಮಾಡುವುದರಿಂದ ನಮಗೆ ನೋವು ಮಾಡಿ ಒಂದು ಸಲ ಗೆದ್ದ ಅವರು
ಮತ್ತೆ ಮತ್ತೆ ಗೆಲ್ಲುವುದಕ್ಕೆ ನಾವೇ ಅವಕಾಶ ಮಾಡಿಕೊಡುತ್ತೇವೆ!
ನಮ್ಮ ಸಮಯವನ್ನು ಅವರಿಗೆ
ಮೀಸಲಿಡುತ್ತೇವೆ!
ಇದರ ಬದಲು ಆ ನೋವಿಗೆ ಕಾರಣವೇನು ?
ಮತ್ತೆ ಆ ನೋವು ಬದುಕಿನಲ್ಲಿ ಬರಬಾರದು
ಅದಕ್ಕೆ ಏನು ಮಾಡಬೇಕು ಹೀಗೆ ಯೋಚಿಸಬೇಕು.
ಒಂದು ವೇಳೆ ನಾವು ತುಂಬಾ ನಂಬಿದ್ದ ವ್ಯಕ್ತಿಗಳು
ನಮಗೆ ಮೋಸ ಮಾಡಿ ಬಿಟ್ಟರು ಅಂದುಕೊಳ್ಳೋಣ ..
ಇದರಿಂದ ನಮಗೇನು ನಷ್ಟವಿಲ್ಲ..
ಬದುಕಿನಲ್ಲಿ ಒಬ್ಬರನ್ನ ಅತಿಯಾಗಿ ನಂಬುವುದರಿಂದ
ಒಂದು:
ಅವರು ನಮ್ಮ ನಂಬಿಕೆಯನ್ನು ಉಳಿಸಿಕೊಂಡರೆ
ಒಬ್ಬ ನಂಬಿಕೆಗೆ ಅರ್ಹ ವ್ಯಕ್ತಿ ಸಿಗುತ್ತಾರೆ ...
ಎರಡು:
ಅವರು ಮೋಸ ಮಾಡಿದರೆ
ಬದುಕಿನಲ್ಲಿ ಇನ್ನೂ ಯಾರನ್ನೂ ಅತಿಯಾಗಿ
ನಂಬಬಾರದು ಅನ್ನೋ ಪಾಠ ಕಲಿಯುತ್ತೇವೆ!
ಹೇಗೆ ನೋಡಿದರೂ ನಮಗೆ ಲಾಭ!
ನಿಮಗೆ ಇಷ್ಟದ ವ್ಯಕ್ತಿಯೊಂದಿಗೆ ,
ಇಲ್ಲ ನಿಮ್ಮನ್ನು ಇಷ್ಟ ಪಡುವ ವ್ಯಕ್ತಿಯೊಂದಿಗೆ
ಮನದ ನೋವಿನ ವಿಷಯ ಹೇಳಬೇಕು
ಅಂತ ಅನ್ನಿಸಿದರೆ ಹೇಳಿ
ಇಲ್ಲದಿದ್ದರೆ ಸುಮ್ಮನೆ ಏನಾದರೂ
ಮಾತನಾಡಿ ಒಬ್ಬರೇ ಇದ್ದಷ್ಟು
ಕಣ್ಣೀರಿನಿಂದ ನೋವಿನ ಸಸಿ
ಮತ್ತಷ್ಟು ಬೆಳೆಯುವ ಅಪಾಯವಿದೆ ..
ಮತ್ತೊಂದು ವಿಧದ ನೋವು!
ನಾಲಕ್ಕು ಜನರ ಮುಂದೆ ನಮ್ಮ ನೂನ್ಯತೆಯನ್ನು ಬೇಕು ಅಂತಲೇ ಎತ್ತಿ ಹೇಳಿ
ನಮಗೆ ಅವಮಾನ ಮಾಡಿ ನೋವು ಕೊಡುವುದು!
(ನಾಲಕ್ಕು ಜನರ ಮಧ್ಯದಲ್ಲಿ ಹೇಗೆ
ಮಾತನಾಡುವುದು!
ಅಂಗ್ಲ ಭಾಷೆಯ ಜ್ಞಾನ ಇಲ್ಲದೆ ಇರುವುದು .. ಇನ್ನೂ ಹಲವು)
ಬಟ್ಟೆ ಹರಿದು ಹೋಗಿರುತ್ತೆ..
ಹಾಗೆ ಅದನ್ನು ನಾವು ಧರಿಸಿ ಹೊರಗೆ ಹೋಗುವುದಿಲ್ಲ!
ಹೋದರೆ ನೋಡುವ ಜನ ಹೇಳೇ ಹೇಳುತ್ತಾರೆ!
ಅದಕ್ಕೆ ನಾವು ಏನು ಮಾಡುತ್ತೇವೆ?
ಅದನ್ನು ಎಸೆದು ಹೊಸ ಬಟ್ಟೆಯ ಖರೀದಿಸುತ್ತೇವೆ..
ಆದರೆ
ಬದುಕೇ ಒಂದು ಬಟ್ಟೆಯಾದರೆ ?
ಹೇಗೆ ಎಸೆಯೋದು ...ಹೊಸದು ಖರೀದಿಸೋದು ?
ಹಾಗಾಗಿ ಬಿಡುವಿನ ಸಮಯದಲ್ಲಿ
ನೋವಿನ ಕ್ಷಣಗಳನ್ನೇ ನೆನದು ಸಮಯ ವ್ಯರ್ಥ ಮಾಡುವ ಬದಲಾಗಿ
ಬಟ್ಟೆಯನ್ನು ಹೋಲಿದು ಕೊಳ್ಳೋಣ ....
ನಮ್ಮ ನೂನ್ಯತೆಗಳ ಸ್ವಲ್ಪ ಸ್ವಲ್ಪವೇ
ಸರಿ ಪಡಿಸಿಕೊಳ್ಳುತ್ತ ಸಾಗೋಣ!
ನಿರಂತರ ಪ್ರಯತ್ನ ಎಂತಹ ಕೆಲಸವನ್ನೂ
ಸುಲಭವಾಗಿಸುತ್ತದೆ!
ಒಮ್ಮೆ ಪ್ರಯತ್ನಿಸಿ ಸೋತರೂ
ಮತ್ತೆ ಪ್ರಯತ್ನಿಸುತ್ತಲೇ ಇರಬೇಕು!
ಇಲ್ಲಿ ಅವರು ಹಾಗೆ ಸಾಧನೆ ಮಾಡಿದರು ಇವರು ಹೀಗೆ ಸಾಧನೆ ಮಾಡಿದರು
ಅನ್ನೋ ಉದಾಹರಣೆಗಳ ನನಗೆ ನೀಡುವುದಕ್ಕೆ ಇಷ್ಟವಿಲ್ಲ!
ಕಾರಣ ಬದುಕು ಅನ್ನೋದು ಒಬ್ಬೊಬ್ಬರಿಗೆ
ಒಂದೊಂದು ರೀತಿಯಲ್ಲಿ ವಿಭಿನ್ನವಾಗಿರುತ್ತದೆ
ಅವರವರ ಬದುಕಿನ ಎಲ್ಲೆಯಲ್ಲಿ ಅವರು
ಸಾಧಿಸಬೇಕು!
ಬದುಕಿನಲ್ಲಿ ಎಲ್ಲರಿಗೂ ಬಂದೆ ಬರುವ ಒಂದು ರೀತಿಯ ಅಘಾತವೇ
ಈ ನೋವುಗಳು ...
ಅದನ್ನು ಹೇಗೆ ಎದುರಿಸಬೇಕು
ನೋವುಗಳನ್ನೇ ಹೇಗೆ ಹೆದರಿಸಬೇಕು!
ಅನ್ನೋ ಮನೋಬಲವಿರಲಿ!
-ಪ್ರಕಾಶ್ ಶ್ರೀನಿವಾಸ್
wow supprb sir
ReplyDeleteನಿಜವಾದ ಮಾತು ಗೆಳೆಯ ನೋವನ್ನು ನುಂಗಿ ನಗುವುದು ಕಷ್ಟವೇ ಇರಬಹುದು ಆದರೆ ಮನಸ್ಸಿನಂತೆ ಮಹಾದೇವ ಅನ್ನೋ ಗಾದೇನೆ ಇದೆಯಲ್ಲ ನಾವು ಮನಸ್ಸು ಮಾಡಿದರೆ ಅದಕ್ಕಿಂತ ದೊಡ್ಡದು ಏನು ಇಲ್ಲ. ನೋವಿನಲ್ಲೂ ನಗುವುದನ್ನು ತುಂಬ ಅರ್ಥಬದ್ಧವಾಗಿ ಹೇಳಿದ್ದೀರಿ. ತುಂಬ ಚೆನ್ನಾಗಿದೆ ಗೆಳೆಯ
ReplyDeleteTumba chennagi vivarisiddeeri... dhanyavaadagalu...
ReplyDeletehale batteyannu eseyuva badalu holidukollona emba maathu tumba ishtavaayitu....
ತುಂಬ ಚೆನ್ನಾಗಿದೆ ನಿಮ್ಮ ಆಲೋಚನೆಗಳು, ಧನ್ಯವಾದಗಳು ಸರ್.
ReplyDeleteNice Thanks :) matthadhe kanninnalli neeridharu jothe nugu idhe Praksh :) thanks
ReplyDeleteಬದುಕಿನಲ್ಲಿ ಎಲ್ಲರಿಗೂ ಬಂದೆ ಬರುವ ಒಂದು ರೀತಿಯ ಅಘಾತವೇ
ReplyDeleteಈ ನೋವುಗಳು ...
ಅದನ್ನು ಹೇಗೆ ಎದುರಿಸಬೇಕು
ನೋವುಗಳನ್ನೇ ಹೇಗೆ ಹೆದರಿಸಬೇಕು!
ಅನ್ನೋ ಮನೋಬಲವಿರಲಿ!....nanage tumbaa istavaada bhaavanegalu....
superb as always...ತಮ್ಮಾ ,,,ತುಂಬಾ ಚೆನ್ನಾಗಿ ವಿವರಿಸಿದ್ದೀರ,,ಇಷ್ಟ ಆಯಿತು ಜೊತೆಗೆ ಮನಸ್ಸಿಗೆ ಸಮಾದಾನ ಕೂಡ ಆಯಿತು ... :)
ReplyDeleteಮೆಚ್ಚಿದ ಎಲ್ಲ ಮನಗಳಿಗೂ
ReplyDeleteಮನದಾಳದ ವಂದನೆಗಳು
ನಿಮ್ಮೆಲ್ಲರ ಮಾತುಗಳು ಮತ್ತಷ್ಟು ಬರೆಯುವ ಸ್ಫೂರ್ತಿ ನೀಡಿದೆ!
wowww awesome pa ......
ReplyDeletetumba hidisitu nimma lekhana nonda manasugalige samadana kodutade ashtu chennagide... :)
ReplyDeleteಕಟು ಸತ್ಯ
ReplyDeletetumba tumba channagide gelaya..........nija geleya nim maathu.............novu erorige ee nim maathu hestu samadana madutthe gotha geleya.......ee nim kavana odhi novella marethu ogutthe, aastu channagide nim kavana geleya......nija helthini geleya naanu kooda yardru bejar maadidre aadanne nenaskondu nenaskondu halthidde..........but en munde halalla geleya......thanku so much geleya, entha kavana galu ennu hecchu hechhu barieiri geleya.........
ReplyDeletenija nimma matthu frnd neevu erorige idra bele gotagutte,idu nanage tumbha suit agute frnd yakendre nanu koda eradaru novu madidre tumbha feel madikoltane.....tnx for this upload....
ReplyDeleteಮೆಚ್ಚುಗೆಯ ಮಳೆಗೈದ ಎಲ್ಲರಿಗೂ ವಂದನೆಗಳು ಗೆಳೆಯರೇ!
ReplyDeleteಅದ್ಬುತವಾಗಿದೆ..ನೋವಿನಲ್ಲಿರುವವರಿಗೆ ಒಳ್ಳೆ ಸಾಂತ್ವನ ನೀಡಿದ್ದಿರಿ. ಉತ್ತಮವಾದ ಲೇಖನ ಪ್ರಕಾಶ್.
ReplyDeleteನಿಮ್ಮ facebook ಗೆಳತಿ
ಉಷಾ