Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday, 30 October 2012

ನನಗೆ ಅಂತ ಯಾರೂ ಇಲ್ವಾ ?



ನನಗೆ ಅಂತ ಯಾರೂ ಇಲ್ವಾ ?
----------------------------------
ಈ ಪ್ರಶ್ನೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ
ಒಂದಲ್ಲ ಒಂದು ಸಲ ಬುದ್ಧಿ ಕೇಳೆ ಕೇಳುತ್ತದೆ ....
ಉತ್ತರ ?
ಕೊಡುವುದು ಆ ಸಮಯದಲ್ಲಿ ಸ್ವಲ್ಪ ಕಷ್ಟವೇ!
ಕಾರಣ ನಾವು ತುಂಬಾ ಪ್ರೀತಿಸಿದ (ಹಚ್ಚಿಕೊಂಡಿದ್ದ)
ವ್ಯಕ್ತಿ ನಮ್ಮಿಂದ ದೂರ ಆದಮೇಲೆ ...
ಇಲ್ಲ ನಮ್ಮ ಭಾವನೆಗಳಿಗೆ ಒಂದು ಸರಿಯಾದ
ಸ್ಪಂದನೆ ಸಿಗದೇ ಇದ್ದಾಗ ...
ಮೂಡೋ ಪ್ರಶ್ನೆಯೇ ಅದು ...
ನನ್ನನ್ನು ನೋಡಿ ಯಾರಾದರು (ನನಗೆ ಅಂತ ಯಾರೂ ಇಲ್ವಾ?)
ಎಂದು ಕೇಳಿದರೆ ....
ನಾನು ಅವರಿಗೆ ಕೇಳೋ ಪ್ರಶ್ನೆ ?
ನಿಮಗೆ ಅಂತ ನೀವು ಇದ್ದೀರಾ ?
ಉತ್ತರ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲವ ?
ಎಂದಾದರೂ ನಿಮಗೆ ಇಷ್ಟದ ಹವ್ಯಾಸವನ್ನು 
ಮುಂದುವರಿಸಿದ್ದೀರ?
ಮೊದಲು ನಮಗೆ ನಾವೇ ಇರಬೇಕು 
ನಮಗೆ ಇಷ್ಟದ ಕೆಲಸಗಳನ್ನು ಇಷ್ಟ ಪಟ್ಟು ಮಾಡುತ್ತಿರಬೇಕು
ಪ್ರತಿಯೊಬ್ಬರಲ್ಲೂ ಒಂದೊಂದು ಹವ್ಯಾಸ ಇರುತ್ತದೆ ...
ಹಾಡುಗಾರಿಕೆ...ಚಿತ್ರ ಬಿಡಿಸುವುದು...ತೋಟಗಾರಿಕೆ...ಬರವಣಿಗೆ...
 ಇನ್ನೂ ಹಲವು ……..
ಹಾಡಿನ ಮೊದಲ ಸಾಲುಗಳನ್ನು ಮಾತ್ರ ಹಾಡುವ ನೀವು
ಆ ಹಾಡಿನ ಎಲ್ಲ ಸಾಲುಗಳನ್ನು ಬರೆದಿಟ್ಟು ಕೊಂಡು
ಒಂದು ಸಲ ಒಬ್ಬರೇ ಪೂರ್ತಿ ಹಾಡನ್ನು ಹಾಡಿ...
ತುಂಬಾ ಇಷ್ಟ ಪಟ್ಟು ಕವಿತೆಗಳ ಓದುವ ನೀವು
ಒಂದು ಸಲ ಕವಿತೆ ಬರೆಯಲು ಯಾಕೆ ಪ್ರಯತ್ನಿಸಬಾರದು ?
ಹೀಗೆ ಒಳಗಿರುವ ಒಳ್ಳೆಯ ಆರೋಗ್ಯಕರ ಹವ್ಯಾಸಗಳನ್ನ ಬೆಳೆಸಿಕೊಳ್ಳಬೇಕು
ನಾನು ಈ ಮಾತನ್ನ ಹೇಳುವಾಗ ಅವರ ಉತ್ತರ ?
ಇಲ್ಲ ಅದೆಲ್ಲ ನನಗೆ ಬರಲ್ಲ !!
ಬರಲ್ಲ ಅನ್ನೋದು ಸರಿಯಾದ ಉತ್ತರವಲ್ಲ 
ನಾನು ಪ್ರಯತ್ನಿಸಿ ನೋಡಿಲ್ಲ ಅನ್ನೋದು ಸರಿಯಾದ ಉತ್ತರ...
ಇದು ಮೊದ ಮೊದಲು ಸ್ವಲ್ಪ ಕಷ್ಟವೇ ...ಒಬ್ಬರನ್ನು ಅಗಲಿದ ಸಮಯದಲ್ಲಿ
ಆದ್ರೆ ಆ ನೋವನ್ನು ನಮ್ಮದೇ ಕೆಲಸಗಳಲ್ಲಿ
ಮರೆಯಲು ಪ್ರಯತ್ನಿಸಬೇಕು ,
ಅದನ್ನು 
ಬಿಟ್ಟು ಮತ್ತೆ ಮತ್ತೊಂದು ಜೀವದ ಆಸರೆ ಬಯಸಿದರೆ ಅದೂ ಸಹ 
ನೋವಿನಲ್ಲೇ ಅಂತ್ಯವಾಗುತ್ತೆ ಒಂದು ದಿನ .
ಆಗಿದ್ರೆ ನಾವು ಯಾರ ಜೊತೆ ಕೂಡ  ಮಾತನಾಡುವುದು ?
ಹಾಗೂ ಸ್ನೇಹ ಬೆಳಸುವುದು ತಪ್ಪ
ಅನ್ನೋ ಪ್ರಶ್ನೆ ನಿಮ್ಮಲ್ಲಿ ಏಳಬಹುದು !
ಮಾತನಾಡಬೇಕು..ಸ್ನೇಹವನ್ನು ಬೆಳಸಬೇಕು !
ಆದ್ರೆ ಅದು ನಿಮ್ಮ ಜೊತೆ  ನಿಮಗೇ ಬೇಸರವಾದ ಸಮಯದಲ್ಲಿ
ಆ ಸಮಯವನ್ನು ಕಳೆಯಲು ಮಾತನಾಡುವುದು 
ಸ್ನೇಹ ಬೆಳಸುವುದು ತಪ್ಪಲ್ಲ...
ಆದರೆ  ಆ ವ್ಯಕ್ತಿಗಳು ಅಗಲಿದ ಮೇಲೆ 
ನಿಮ್ಮ ಜೊತೆ ಮಾತನಾಡುವುದು ನಿಮ್ಮ ಮೇಲೆ ನೀವೇ ಬೇಸರ ಮಾಡಿಕೊಳ್ಳುವುದು ದೊಡ್ಡ ತಪ್ಪು ....
ಯಾರಿಗೂ ನಮ್ಮ ಜೊತೆ ಸದಾ ಇರಲು ಆಗದು 
ನಾವು ಅವರು ಸದಾ ಜೊತೆ ಇರಬೇಕು ಎಂದು ಬಯಸುವುದು ಸಹ 
ತಪ್ಪು ಪ್ರತಿಯೊಬ್ಬರಿಗೂ ತನ್ನದೇ ಆದ ಬದುಕಿರುತ್ತದೆ ...
ಆ ಬದುಕಿನಲ್ಲಿ ಅವರಿಗೆ ಅವರದೇ ಆದ ಕೆಲಸಗಳು ..
ಗುರಿಗಳು ಇರುತ್ತವೆ .....
ನಮಗೆ ಅವರು ಇಷ್ಟ ಎನ್ನುವ ಒಂದೇ ಕಾರಣಕ್ಕೆ 
ಅವರಿಗೆ ನಾವೇ ಒಂದು ತೊಂದರೆ ಆಗಬಾರದು .....
ಒಂದೊಂದು ಸಲ 
ನಾವು ತುಂಬಾ ಹಚ್ಚಿಕೊಂಡ ವ್ಯಕ್ತಿಯೇ 
ನಮ್ಮನ್ನು ದೂರ ಮಾಡುತ್ತಾರೆ ...
ಅದಕ್ಕೆ ಕಾರಣಗಳು .....
ಅವರಿಗೆ 
ಕೆಲಸದ ಒತ್ತಡಗಳು ಜಾಸ್ತಿಯಾಗಿರಬೇಕು...!
ನಮ್ಮದೇ ಏನೋ ತಪ್ಪಿರಬೇಕು....!
ನಮಗಿಂತ ಬೆಸ್ಟ್ ಅನ್ನೋ ವ್ಯಕ್ತಿ ಅವರ ಬದುಕಿನಲ್ಲಿ ಬಂದಿರಬಹುದು ...
ಇಲ್ಲ ಅವರು ಸಮಯ ಕಳೆಯಲು ನಮ್ಮ ಜೊತೆ ಸ್ನೇಹ ಬೆಳಸಿದ್ದನ್ನು 
ನಾವೇ ಅರಿಯದೆ ..ಅವರನ್ನು ತುಂಬಾ ಹಚ್ಚಿಕೊಂಡಿರಬೇಕು...
ಹೀಗೆ ಹಲವರು ಕಾರಣಗಳು...
ಆದುದ್ದರಿಂದ ನಮ್ಮ ಜೊತೆ ನಾವೇ ಸದಾ ಇರುವುದು 
ಹಾಗಾಗಿ ನಮ್ಮನ್ನು ನಾವೇ ನಮಗೆ ಇಷ್ಟವಾಗುವ ಹಾಗೆ 
ಇಟ್ಟು ಕೊಳ್ಳೋಣ....
ನಮಗೆ ಇಷ್ಟವಾಗುವವರ ಹಿಂದೆಯೇ ಮನಸು ಹೋಗುತ್ತಿರುತ್ತದೆ
ನಮನ್ನು ಇಷ್ಟ ಪಡುವವರು ನಮ್ಮ ಹಿಂದೆಯೇ ಇದ್ದರೂ 
ಅದು ನಮಗೆ ಕಾಣುವುದಿಲ್ಲ ..
ಅವರು ನಮ್ಮ ಒಂದು ಮಾತಿಗಾಗಿ ದಿನಗಟ್ಟಲೆ ಕಾದಿರುತ್ತಾರೆ..
ಒಂದು ಸಲ ನಮನ್ನು ಇಷ್ಟ ಪಡುವವರ ಜೊತೆ ಮಾತನಾಡಿದರೆ
ನಮಗೆ ನಾವೇ ಇಷ್ಟವಾಗುತ್ತೇವೆ ....
ನಮಗೆ ಇರಬೇಕಾದ ಮೂರು ವಿಷಯಗಳು!
Self-confidence.!
Self-control.!
Self-motivation.!
ನಮಗೆ ಬೇಡವಾದ ಒಂದು ವಿಷಯ!
Selfish.!!

ಇಷ್ಟ ಪಡುವವರು ನಮ್ಮೊಂದಿಗೆ ಇರಲೇಬೇಕು 
ಅವರಿಗೆ ನಾವೇ ತುಂಬಾ ಇಷ್ಟವಾಗಬೇಕು !
ಅವರೊಂದಿಗೆ ಯಾರೋ ಮಾತನಾಡುವಾಗ ಮನದೊಳಗೆ ತಳಮಳ!
ಹೀಗೆ ಹಲವಾರು ತೊಂದರೆಗಳಿಗೆ selfish ಕಾರಣವಾಗುತ್ತದೆ...

ಬಹಳ ದಿನಗಳಿಂದ ಒಡನಾಟ ಇಟ್ಟುಕೊಂಡಿದ್ದ ವ್ಯಕ್ತಿಗಳ 
ಒಂದು ಸಣ್ಣ changes ಕೂಡ ನಾವು ಅರಿಯಬಲ್ಲೆವು ...
ಅವರಿಗೆ ನಮ್ಮ ಜೊತೆ ಇರಲು ಇಷ್ಟವಿಲ್ಲ!
ಅಥವಾ,
ನಮಗೆಂದೇ ಸಮಯ ಕೊಡಲು  ಅವರಿಗೆ ಆಗುತ್ತಿಲ್ಲ ಎಂದು ತಿಳಿದ ಕೂಡಲೇ ,
ನಾವೇ ಅರಿತು ಮೆಲ್ಲಗೆ ಆ ಸಂಬಂಧದಿಂದ ಹೊರಬರಬೇಕು!
ನಾವು ಅಲ್ಲೇ ಇದ್ದು ಅವರ ನಡೆವಳಿಕೆಯಿಂದ Hurt ಆಗಿ ಅಂತರ ಬಳಸಿಕೊಳ್ಳುವುದಕ್ಕಿಂತ !
ಅರಿತು ದೂರವಿರುವುದೇ ಮೇಲು!

ನಮ್ಮ ಬದುಕೇ ಒಂದು ರೈಲಿನ ಪಯಣ!
ಇಲ್ಲಿ ಎಲ್ಲ ಸಂಬಂಧಗಳು ಕೇವಲ ಜೊತೆ ಪ್ರಯಾಣಿಸುವ ಪ್ರಯಾಣಿಕರು!
ಅವರ ಜೊತೆ ನಾವು ಕೊನೆಯವರೆಗೂ ಪ್ರಯಾಣಿಸಬೇಕು ಎಂದು ಬಯಸುವುದು ತಪ್ಪು!
ನಮ್ಮ STOP ಬಂದೆ ಬರುತ್ತದೆ ನಾವು ಇಳಿಯಲೇ ಬೇಕು!

ಒಂದು ಸಣ್ಣ ಉದಾಹರಣೆ:
ನಮ್ಮ ಕುಟುಂಬದಲ್ಲಿ ...ಹಾಗೂ ಸ್ನೇಹಿತರಲ್ಲಿ ....
ಯಾರಿಗೂ ಸಾಹಿತ್ಯದ ಅಭಿರುಚಿ ಇಲ್ಲ ...
ಯಾರೂ ಸಹ ನನ್ನ ಒಂದು ಕವಿತೆಯನ್ನು ಕೂಡ
ಕಿವಿ ಕೊಟ್ಟು ಕೇಳುವುದೂ ಇಲ್ಲ!
ನನ್ನ ಕವಿತೆಗಳನ್ನು ಓದಲು ಯಾರೂ ಇಲ್ಲ ಅಂತ
ನಾನು ಎಂದೂ ಸಹ ಬರೆಯುವುದನ್ನು ನಿಲ್ಲಿಸಲಿಲ್ಲ..
ಬರೆಯುವುದು ನನಗೆ ಇಷ್ಟ ....
ನನಗೆ ಖುಷಿ ಕೊಡುತ್ತೆ ನನ್ನ ಕವಿತೆಗಳು ಅದರಿಂದ
ನಿರಂತರವಾಗಿ ಬರೆಯುತ್ತ ಇರುತ್ತೇನೆ .........
ಮುಂದೆ ಅದು ಕವಿತೆಯೇ ಅಲ್ಲ .. (ಇಲ್ಲಿಯವರೆಗೂ ಯಾರೂ ಹೇಳಲಿಲ್ಲ)
ನಿಮಗೆ ಕವಿತೆ ಬರೆಯುವುದಕ್ಕೆ ಬರುವುದಿಲ್ಲ 
ಎಂದು ಯಾರಾದರೂ ನನ್ನನ್ನು ನೋಡಿ ಹೇಳಿದರೆ 
ನಾನು ನಗುತ್ತ ಉತ್ತರಿಸುತ್ತೇನೆ .....

ಇಷ್ಟ ಆಗೋ ಕೆಲಸ ಮಾಡಕ್ಕೆ ಯಾಕೆ ಬೇಕು 
ಕೋರ್ಸು ಇದ್ರೆ ಸಾಕು
ಅದನ್ನ ಅನುಭವಿಸಿ  ಮಾಡೋ ಮನಸು!...

ನನಗೆ ಅಂತ ಯಾರೂ ಇಲ್ವಾ?
ಎಂದು ನೀವು ಕೇಳುವಾಗ!
ನಾನ್ ಇದ್ದೀನಿ!
ಎಂದು ನಿಮ್ಮ ಮನಸೇ ಹೇಳಬೇಕು ಹಾಗೆ ಮಾಡಿ!
-ಪ್ರಕಾಶ್ ಶ್ರೀನಿವಾಸ್ 

21 comments:

  1. thumba Chenagide sir...

    ReplyDelete
  2. thumba chennagi bardidderi !!!!!!!

    nangantho enoo add madoke gotagtha illa gottadaga khandita madthini ....

    ReplyDelete
  3. nice lines ,,,,,,,

    deepa

    ReplyDelete
  4. ತುಂಬ ಚೆಂದ ಇದೆ ಗೆಳೆಯ ಎಷ್ಟೋ ಜನ ಬೇಸರ ಜಿಗುಪ್ಸೆಗಳಲ್ಲೇ ಕಾಲ ಕಳೆಯುತ್ತಾ ಅವರೊಳಗಿರುವ ಪ್ರತಿಭೆಯನ್ನೇ ಮರೆತು ಬಿಡ್ತಾರೆ. ಪ್ರತಿಯೊಂದರ ಅಂತ್ಯವೂ ಮತ್ತೊಂದರ ಆರಂಭ ಎಂಬುದನ್ನು ಅರಿತು ಬದುಕಿದರೆ ಜೀವನ ನಿಜಕ್ಕೂ ಅದ್ಭುತ.

    ReplyDelete
  5. thumba chennagidhe bro ... :) hmm neevu heliddella nija ...ista aithu ...

    ReplyDelete
  6. ನಿಮ್ಮ ಲೇಖನ ತುಂಬಾ ತುಂಬಾ ಚೆನ್ನಾಗಿದೆ ಸರ್. ಪ್ರತಿ ಪದಗಳು ಮನಸ್ಸಿನ ಭಾವನೆಗೆ ಹತ್ತಿರವಾಗಿವೆ... ನಿಮ್ಮ ಪ್ರತಿ ಪದಗಳನ್ನು (ಸ್ಪೂರ್ತಿದಾಯಕ ಮಾತುಗಳು) ಅಳವಡಿಸಿಕೊಂಡರೆ ಎಷ್ಟೋ ಜನರಿಗೆ ಬೇಸರ ಎಂಬ ಪದವೇ ಮರೆತು ಹೋಗಬಹುದು ಅನ್ನುವಷ್ಟರ ಮಟ್ಟಿಗೆ ನಿಮ್ಮ ಲೇಖನ ಚೆನ್ನಾಗಿದೆ... ಪ್ರಸ್ತುತ ಕಾಲಕ್ಕೆ ನಿಮ್ಮ ಲೇಖನ ಬಹಳ ಉಪಯುಕ್ತವಾಗಿದೆ.

    ReplyDelete
  7. ಬಿ.ಎ.ಅಶೋಕ3:43 pm, October 30, 2012

    ಚೆನ್ನಾಗಿದೆ ಲೇಖನ... ಮೊದಲು ನಮ್ಮನ್ನು ನಾವು ಪ್ರೀತಿಸಬೇಕು ..ಗೌರವಿಸಬೇಕು.. ನಮ್ಮ ಮನಸ್ಸಿಗೆ ಹಿತವಾಗುವ ಕೆಲಸಗಳನ್ನು ಮಾಡಬೇಕು ಎಂಬುದನ್ನು ಚೆನ್ನಾಗಿ ಹೇಳಿರುವೆ ಗೆಳೆಯ... ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನಿನ್ನ ಲೇಖನ ಸಹಕಾರಿ :)
    -ಬಿ.ಎ.ಅಶೋಕ

    ReplyDelete
  8. ದಾರಿಗುಂಟ ಸಾಗುವಾಗ ಎಲ್ಲೊ ಒಂದು ಕಡೆ ಕೆಂಪಾದ ಗುಲಾಬಿಯೊಂದು ಸಿಕ್ಕಂತ ಅನುಭವ ನಿನ್ನ ಬರಹ.
    ಹೆಕ್ಕಿ ಜೊತೆಗಿಟ್ಟುಕೊಂಡರೆ ನನ್ನದು, ಬೇಸರಿಸಿ ಬದಿಗೆ ಸರಿಸಿದರೆ ಬೇರೆಯವರದು;
    ನಾನಂತೂ ಮುಡಿಯೇರಿಸಿಕೊಂಡಿದ್ದೇನೆ...ಇಷ್ಟಪಟ್ಟು

    ReplyDelete
  9. ಲೇಖನವ ಮೆಚ್ಚಿದ ಅಷ್ಟು ಮನಗಳಿಗೆ ಮನದಾಳದ ವಂದನೆಗಳು!
    ನಿಮ್ಮೆಲ್ಲರ ಪ್ರೋತ್ಸಾಹ ..ಸಲಹೆ ಸೂಚನೆಗಳು ಸದಾ ಇರಲಿ! ಧನ್ಯವಾದ!

    ReplyDelete
  10. nimma lekhana tumba chennagide pratyondu salinallu manasina bhavaneyannu chennagi chitrisiddira odi tumba khushi aytu... :):) nimma mattashtu lekhanagalu moodi barli all the very best.. :)

    ReplyDelete
  11. prathiyobba manushyanu ariyabekadha sangathiyanu thumba chennagi artha madisidhiri nim lekana thumba chennagi baredhidhira

    ReplyDelete
  12. ಪ್ರೀತಿಯಿಂದ ಧನ್ಯವಾದಗಳು ಗೆಳೆಯರೇ!

    ReplyDelete
  13. yentha sundara manadaalada maatugalu prakash.. tumba khushi aagtide idu nodi.. howdu namage naave erodu konevaregu.. tumba chennagi baredidiya.. superrrrrrrrr

    ReplyDelete
  14. Manjula Nagaraj : Well said Praksh... namma namma manodaourbalyakke naanve kaarana horatu beryaaralla.. so aagiruvaga namma manasanna gatti madkondu nintre jeevanada yaava kshanadallu ee prashne kaadolla... akasmath kaadidru adakke uttara nimma saadhane aagirutte... neevu tappitasthana sthanadalli nillo sandharbhane barolla... But ondantu nija manushyananna kevala yaradru bittodaga ontitana kaadutte annodakkinta namma manasu mind kaali iddaga adaralli ee tarada naana prashnegala dhoolu tumbikollodu sahaja... nimma vasthuvina javabdari nimde aagirutte.

    ReplyDelete
  15. Manjula Nagaraj : Pratiyobba manushyanigu ondalla ondu age nalli ee kaado dodda yaksha prashne ee Ontitana... Adara modala munsoochane ne ee prashne ... Nange antha yaaroo ilwa ????????

    ReplyDelete
  16. Thnku Ruthu!

    Manju...Thnku sooooo much super ide comnts yes manasina maate adu!
    ellaroo ondalla ondu sala kelale beku!

    ReplyDelete
  17. thanks Prakash n true too god bless you - Anuradha

    ReplyDelete
  18. Nice one. Nimma lifenalli adna alavadisikondu ade thoughts na thumba chenag share madidira

    ReplyDelete
  19. ವಾಹ್... ಗೆಳೆಯ ಧನಾತ್ಮಕ ಬರವಣಿಗೆಗೆ ನಾನಿಲ್ಲಿ ಮರುಳಾಗಿ ಹೋದೆ. ಅದೆಷ್ಟು ಸುಂದರವಾಗಿ ವಿವರಿಸಿದ್ದೀರಿ. ಎಶ್ತೋ ಸಲ ನನ್ನನ್ನು ಕಾಡಿದ ಪ್ರಶ್ನೆ ಅದು ನನಗೆ ಅಂತ ಯಾರಿಲ್ವ ಎಂದು.. ಉತ್ತರವೂ ಸಿಕ್ಕಿತ್ತು ನನಗೆ ನಾನೊಬ್ಬಳೇ ಎಂದು.. ನಿಜಕ್ಕೂ ತುಂಬಾ ಹಿಡಿಸಿತು ನಿಮ್ಮ ಲೇಖನ

    ReplyDelete