ಸಂದೇಶ(ಮೆಸೇಜ್)!
ಬದುಕಿನ ಒಂದು ಅವಿಭಾಜ ಅಂಗವಾಗಿದೆ
ಇಂದು ಮೊಬೈಲ್ ನಲ್ಲಿ ಏನಲ್ಲ ಇದ್ದರೂ
ಕ್ಯಾಮೆರಾ.ಮ್ಯಪ್.ರೇಡಿಯೋ,ಟಿ.ವಿ.ಆಟಗಳು,ಹಾಡುಗಳು,ಇಂಟರ್ನೆಟ್..
ಎಲ್ಲವನ್ನೂ ಮೀರಿಸುವ ಒಂದು ವಿಷಯ ಅಂದರೆ ಅದು ಮೆಸೇಜ್!
ಸಂತೆಯಲ್ಲಿ ಇದ್ದರೂ ನಮ್ಮವರ ಜೊತೆ ಸದ್ದೇ ಮಾಡದೆ ಮಾತನಾಡಿಸಬಹುದು..
ಮನದೊಳಗಿನ ಪಿಸುಮಾತುಗಳನ್ನು ಅವರಿಗೆ ಮಾತ್ರ ಕೇಳುವ ಹಾಗೆ ಹೇಳಬಹುದು!
ಶತಮಾನಗಳ ಹಿಂದೆ ಮೇಘಸಂದೇಶವನ್ನು ಈಗ ಮೊಬೈಲ್ ಸಂದೇಶ!
ಅಂಜೆ ಅಣ್ಣನ ಸೈಕಲ್ ನ ಬೆಲ್ಲಿನ ಸದ್ದು ಇಲ್ಲ!
ಆ ಹಳೆಯ ಪತ್ರಗಳ ರಾಶಿ ಇಲ್ಲ!
ಎಂದೋ ಯಾರೋ ಕೈಯಲ್ಲೋ ಅಮ್ಮ ಬರಸಿ
ಕಳುಹಿಸಿದ ಪತ್ರದ ನೆನಪು, ಆ ಪ್ರೀತಿಯ ಮಾತುಗಳು!
ಇಂದೆಲ್ಲ ಮೆಸೇಜ್ ನೋಡು ನೋಡಿದಮೇಲೆ ಅಳಿಸು !
ಆದರೂ ಎಲ್ಲ ನಮ್ಮ ಬದುಕಿನ ಒಂದು ಮುಖ್ಯವಾದ ವಿಷಯಗಳಲ್ಲಿ
ಮೆಸೇಜ್ ಕೂಡ ಒಂದು ,
ನಮ್ಮ ಮಾತನ್ನು ನಾವು ಬೇಗ ನಮ್ಮ ಮನಸಿಗೆ ಹತ್ತಿರದವರಿಗೆ ತಿಳಿಸಬಹುದು!
ಎಷ್ಟೇ ಪ್ರೀಮಿಗಳು ..
ತಾವು ಪ್ರೀತಿಸುವವರ ಒಂದೇ ಒಂದು ಮೆಸೇಜ್ ಗಾಗಿ ಕಾಯುವವರಿದ್ದಾರೆ!
ಎಷ್ಟೇ ಗೆಳೆಯರು..
ಎದುರಲ್ಲಿ ಕ್ಷಮೆ ಕೇಳದೆ ಮನೆಗೆ ಬಂದ ಮೇಲೆ 'ಸಾರೀ ಮಗ'
ಅಂತ ಒಂದು ಮೆಸೇಜ್ ಕಳಿಸಿದವರಿದ್ದಾರೆ!
ಎಷ್ಟೇ ಸಂಬಂಧಗಳ ನೋವು,ನಲಿವಿನ ವೇದಿಕೆ ಮೆಸೇಜ್ ಗಳು!
ಊಟ ಮಾಡುತ್ತಾ,
ಊಟ ಆಯ್ತಾ ? ಅಂತ
ಒಂದು ಮೆಸೇಜ್!
ಸುತ್ತಲೂ ಜನ ಇದ್ದರೂ ಕದ್ದು ಮುಚ್ಚಿ ಒಂದು ಮೆಸೇಜ್ .
ಎಲ್ಲದಕ್ಕೂ,ಎಲ್ಲ
ಸಮಯದಲ್ಲೂ ಕಾಲ್ ಮಾಡುವುದಕ್ಕೆ ಆಗುವುದಿಲ್ಲ ...
ಹಾಗಾಗಿ
ಒಂದು ಮೆಸೇಜ್ ಅದು ಅವರಿಗೆ ಬಿಡುವು ಆದಾಗ ನೋಡಲಿ ಅಂತ!
ಜಾಸ್ತಿ ಮೆಸೇಜ್ ಮಾಡುವವರು ಜಾಸ್ತಿ ಸುಳ್ಳು ಹೇಳುವ ಸಂಬವ ಇದೆ!
ಕಾರಣ ಒಬ್ಬರನ್ನ ಎದುರುಗಡೆ ನಿಲ್ಲಿಸಿ ನಾವು ಪ್ರಶ್ನೆ ಕೇಳಿದರೆ
ಅವರಿಗೆ ಉತ್ತರಿಸುವುದಕ್ಕೆ ಯಾವುದೇ ಸಮಯವಿರುದಿಲ್ಲ,
ಆದರೆ.
ಮೆಸೇಜ್ ನಲ್ಲಿ ಕೇಳಿದರೆ ಅವರಿಗೆ ತುಂಬಾ ಸಮಯವಿರುತ್ತದೆ
ಹಾಗಾಗಿ ಅವರು ಸತ್ಯವನ್ನು ಮರೆಮಾಚಬಹುದು.!
ಬೆಳಗ್ಗೆ ಎದ್ದ ಕೂಡಲೇ ಗೆಳೆಯರಿಗೆ,ಪ್ರೀತಿಸುವವರಿಗೆ ಒಂದು
ಗುಡ್ ಮಾರ್ನಿಂಗ್,ಹಾಗೂ
ಮಲಗುವ ಮುನ್ನ ಗುಡ್ ನೈಟ್ ಮೆಸೇಜ್!
ನಾವು ಸಣ್ಣವರಿದ್ದಾಗ ನಮಗೆ ಹೇಳುತ್ತಿದ್ದರು ,
ಗುಡ್ ಮಾರ್ನಿಂಗ್ ,ಗುಡ್
ನೈಟ್, ಹೇಳಬೇಕು ಆ ಪಾಠನ
ಈಗಲೂ ಮುಂದುವರಿಸಿಕೊಂಡು ಬರಲು ಕಾರಣ ಮೆಸೇಜ್!
ಎರಡು ತಿಂಗಳಿಗೆ ಒಂದೇ ಗ್ಯಾಸ್ ಸಿಲಿಂಡರ್ ,
ಅಂತ ಮನೆಯವರು ತಲೆ ಕೆಡಿಸಿಕೊಳ್ಳುತ್ತಿದ್ದರೆ,
ಮನೆಯಲ್ಲಿದ್ದ ಯುವಕರು ದಿನಕ್ಕೆ ಬರೀ ನೂರೆ ಮೆಸೇಜ್ ಕಳಿಸುವುದಕ್ಕೆ
ಆಗೋದು ಅಂತ ತಲೆ ಕೆಡಿಸಿಕೊಂಡಿದ್ದರು ..
ನೂರು ಮೆಸೇಜ್ ನ ಮೀತಿ ಇದ್ದಾಗ ತಮ್ಮವರಿಗೆ ಕಳಿಸಲು
ಮೆಸೇಜ್ ಗಳು ಬೇಕು
ಅಂತ ಯಾರಿಗೂ ಗುಡ್ ಮಾರ್ನಿಂಗ್ ,ನೈಟ್ ಗಳನ್ನೂ ಹೇಳಲು ಮರೆತಿದ್ದರು!
ಮತ್ತೆ ಆ ನೂರು ಮೆಸೇಜ್ ಗಳ ಮೀತಿಯನ್ನು ಎಲ್ಲ ನೆಟ್ವರ್ಕ್ ನವರು
ವಾಪಾಸ್ ಪಡೆಯಲು ಕಾರಣ ಅದೇ ಮೆಸೇಜ್ ಪ್ರೀಮಿಗಳು!
ಎಷ್ಟೇ ಪ್ರೇಮಿಗಳ ಭಾಷೆ ಈ ಮೆಸೇಜ್!
ಒಂದು ಖಾಲಿ ಮೆಸೇಜ್ ಕೂಡ ನಮ್ಮ
ಒಂದು ಸಣ್ಣ ನಗುವಿಗೆ ಕಾರಣವಾಗುತ್ತೆ
ಅದು ನಾವು ಪ್ರೀತಿಸುವವರ ಮೆಸೇಜ್ ಆಗಿದ್ದರೆ!
ಲಂಗ್ನ ಪತ್ರಿಕೆಗಳನ್ನು ಮನೆಗೆ ಬಂದು ಕೊಡುತ್ತಿದ್ದ ಕಾಲ ಹೋಗಿ
ಸೆಲೆಕ್ಟ್ ಆಲ್ ಅಂತ ಮಾಡಿ ಒಂದು ಮೆಸೇಜ್!
ಮೊದಲಲ್ಲ ಹೆಣ್ಣನ್ನು ನೋಡಿ ಮನೆಗೆ ಹೋಗಿ ಪಾತ್ರ ಹಾಕುತ್ತೇವೆ
ಅನ್ನುತ್ತ ಇದ್ದವರೆಲ್ಲ ಈಗ ಮನೆಗೆ ಹೋಗಿ ಮೆಸೇಜ್ ಮಾಡ್ತೀವಿ ಅನ್ನೋ ಕಾಲ ಆಗಿದೆ!
ಗಾಂಧಿ ಹೇಳುತ್ತಾ ಇದ್ದರು!
ನಮ್ಮ ಬದುಕೇ ಒಂದು ''ಮೆಸೇಜ್'' ಆಗಬೇಕು
ಅಂತ!
ಈಗ ತುಂಬಾ ಜನ ಮೆಸೇಜ್ ಇಲ್ಲದೆ 'ಬದುಕೇ' ಇಲ್ಲ ಅಂತಾರೆ!
''ಮೆಸೇಜ್''
ಪ್ರೇಮಿಗಳ ಪಾಲಿಗೆ ಪ್ರೇಮ ಮಾತ್ರ!
ಗೆಳೆಯರ ಪಾಲಿಗೆ ಆಪ್ತಮಿತ್ರ!
ಹೆತ್ತವರಿಗೆ
ದೂರದಲ್ಲಿರುವ ಮಕ್ಕಳನ್ನು ಹತ್ತಿರದಲ್ಲಿ ತೋರಿಸುವ ಜಾದುಗಾರ!
:) yessssssssssssss lovely.....supper...
ReplyDeleteThnku soooo much jyo!
ReplyDeleteondu olle msg
ReplyDelete