Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 8 June 2012

ಗೆಳೆಯರು ಮತ್ತು ಸಂಬಂಧಿಕರು!


ಗೆಳೆಯರು ಮತ್ತು ಸಂಬಂಧಿಕರು!
ನಮಗೆಲ್ಲ ತುಂಬಾ ಇಷ್ಟ ಆಗೋದು ಯಾವಾಗಲೂ ಗೆಳೆಯರೇ!
ಸಂಬಂಧಿಕರು ಯಾರಿಗೂ ಅಷ್ಟು ಬೇಗ ಇಷ್ಟ ಆಗುವುದಿಲ್ಲ ....
ಕಾರಣ ಸ್ನೇಹಿತರಲ್ಲಿ ಆಯ್ಕೆಯ ಸ್ವತಂತ್ರ ಇದೆ..
ನಮ್ಮ ವಿಷಯವನ್ನು ನಮಗೆ
ಆಗದ ಗೆಳೆಯರು ಸ್ವಲ್ಪ ಜನಕ್ಕೆ ಮಾತ್ರ ಹೇಳುವುದಕ್ಕೆ ಸಧ್ಯ ಅದೇ
ಸಂಬಂಧಿಕರು ನಮಗೆ ಗೊತ್ತಿರೋ ಎಲ್ಲ ಸಂಬಂಧಿಕರೂ
ಅವರಿಗೆ ಗೊತ್ತಿರುತ್ತೆ ನಮ್ಮ ಬಗ್ಗೆ ಇಲ್ಲದ ಸಲ್ಲದ ಮಾತೆಲ್ಲ ಎಲ್ಲರಿಗೂ ಹೇಳಿರುತ್ತಾರೆ ....
ಇದು ಸಹ ತುಂಬಾ ಜನಕ್ಕೆ ಸಂಬಂಧಿಕರನ್ನ ದೂರ ಇಡಲು ಒಂದು ಕಾರಣ .
ನಮಗೆ ಒಬ್ಬ ಗೆಳೆಯ ಇಷ್ಟ ಆಗಲಿಲ್ಲ ಅಂದರೆ
ಅವನ್ನು ನಾವು ನಮ್ಮೆಲ್ಲ ವಿಷಯದಿಂದಲೂ ದೂರ ಮಾಡಬಹುದು,
ಅದೇ ಸಂಬಂಧಿಕರನ್ನ ಹಾಗೆ ಮಾಡಲು ಆಗುವುದಿಲ್ಲ '
ಯಾವುದೋ ಮದುವೆ ಅತವ ಯಾವುದೋ ಸಮಾರಂಭದಲ್ಲಿ ನೋಡಲೇ ಬೇಕೇ.
ನನ್ನ ಕೆಲವು ಗೆಳೆಯರನ್ನು ಕೇಳಿದ್ದೀನಿ,
ನಿಮಗೆ ತುಂಬಾ ಇಷ್ಯವಾದ ಸಂಬಂಧಿಕರು ಯಾರು ಅಂತ ಅವರು ನನ್ನ ಮಾಮ ಇಷ್ಟ..
ನನ್ನ ಚಿಕ್ಕಪ್ಪ ಇಷ್ಟ ಅಂತಾರೆ ಯಾಕೆ ಅಂತ ಕೇಳಿದರೆ

ಅವನು ತುಂಬಾ FRIENDLY ಆಗಿರ್ತಾರೆ!!
ಚೆನ್ನಾಗಿ ಮಾತನಾಡಿಸುತ್ತಾರೆ ಅನ್ನೋದು ಅವರ ಉತ್ತರ!
ಇನ್ನೂ ಕೆಲವರಿಗೆ ಕೇಳಿದ್ದೀನಿ ನಿಮಗೆ ಯಾಕೆ ಗೆಳೆಯರು ಇಷ್ಟ ಅಂತ ಅವರು
ನನಗೆ ಏನಾದರೂ ಒಂದು ಸಣ್ಣ ತೊಂದರೆ ಅಂದರೂ ಅವರು ಬಂದು ಸಹಾಯ ಮಾಡುತ್ತಾರೆ ..

ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು ...
ಸಂಬಂಧಿಕರೊಳಗೆ
ಇಷ್ಟ ಆಗೋ ಹಾಗೆ ಒಬ್ಬ 'ಗೆಳೆಯ' ಇದ್ದರೆ ನಮಗೆ ಇಷ್ಟ ಆಗುತ್ತೆ !
ಗೆಳೆಯರೊಳಗೆ ನಮಗೆ ಸಹಾಯ ಮಾಡುವ ಹಾಗೆ ಒಬ್ಬ 'ಸಂಬಂಧಿಕ' ಇದ್ದರೆ ನಮಗೆ ಇಷ್ಟ ಆಗುತ್ತೆ!

ನಾವು ಎಷ್ಟೇ ಸಂಬಂಧಿಕರನ್ನು ದೂರ ಮಾಡಿ ಬಿಡುತ್ತೇವೆ ಕಾರಣ
ಸಣ್ಣದೆ ಇದ್ದರೂ ಮತ್ತೆ ಹೋಗಿ ಮಾತಾಡಿಸಕ್ಕೆ ನಮ್ಮ EGO ಬಿಡಲ್ಲ ..

ನಾನು ನನ್ನ ಒಬ್ಬ ಫ್ರೆಂಡ್ ಹತ್ರ
ಕೇಳಿದ ಯಾಕೋ ನಿಮಗೂ ನಿಮ್ಮ ದೊಡ್ದಪಗೂ ಆಗಲ್ಲ ಅಂತ ?
ಅವನು ಅದೆಲ್ಲ ನನಗೆ ಗೊತ್ತಿಲ್ಲ
ನಮ್ಮ ಅಪ್ಪ ಹೇಳಿದ್ದಾರೆ 20ವರುಷದಿಂದ ಅವರಿಗೂ ನಮಗೂ ಆಗಲ್ಲ ಅಂತ ಅದಕ್ಕೆ ನಾವು ಅವರ ಜೊತೆ ಮಾತಾಡಲ್ಲ ಅಂತಾನೆ ...
ಕಾರಣ ಏನು ಅಂತಾನೆ ಗೊತ್ತಿಲ್ಲ !!
ಇದು ಹೀಗ ತಲೆ ತಲೆ ಮಾರಿಗೆ ಮುಂದುವರೆಯುತ್ತೆ ...
ಸಣ್ಣ ಸಣ್ಣ ಕಾರಣಕೆಲ್ಲ ದೂರ ಆಗಿರೋ ಸಂಬಂಧಗಳನ್ನ ನೋಡಿದ್ದೀನಿ
ಲಗ್ನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ,
ಮದುವೆಯಲ್ಲಿ ಮೊದಲ ಪಂದಿಯಲ್ಲೇ ಊಟ ಹಾಕಿಲ್ಲ ಅಂತೆಲ್ಲ..
ಹೋದ ವರುಷ ಮಂಡ್ಯದಲ್ಲಿ
ಬಾಡೂಟದಲ್ಲಿ ಯಾರಿಗೂ ಸರಿಗೆ ಮಾಂಸ ಹಾಕಿಲ್ಲ ಅಂತ
ಎರಡು ಮನೆಯವರು ರಕ್ತ ಬರುವ ಹಾಗೆ ಹೊಡೆದಾಡಿ ಪೇಪರ್ ನಲ್ಲಿ ಎಲ್ಲ ಬಂತು .
ಅಂದು ಅದೆಲ್ಲ ದೊಡ್ಡ ಘಟನೆಗಳು
ಅನಿಸುತ್ತದ ಕಾಲ ಕಳೆದ ಹಾಗೆ ಅದೆಲ್ಲ ನಗು ತರಿಸುವ ಒಂದು ವಿಷಯವಾಗುತ್ತೆ!...
ಸಣ್ಣ ಪುಟ್ಟ ಜಗಳದಿಂದ ದೂರ ಆದ ಸಂಬಂಧಿಕರನ್ನು
ನಾವೇ ನಮ್ಮ EGO ಬಿಟ್ಟು 
ಮದುವೆಯಲ್ಲೋ ಇನ್ಯಾವುದೋ ಸಮಾರಂಭದಲ್ಲೋ ಮಾತಾಡಿಸೋಣ .

ಒಂದು ಊರಿನಲ್ಲಿ ಒಬ್ಬ ಕುರಿ ಕಾಯುವ ವ್ಯಕ್ತಿ
ಮುಂಜಾನೆ ನೂರು ಕುರಿಗಳೊಂದಿಗೆ ಅವುಗಳ ಮೇಯಿಸಲು
ಹೊರಟರೆ ....
ಆ ಕುರಿಗಳಲ್ಲಿ ಕೆಲವು ಅವನ ಮಾತುಗಳ ಕೇಳುತ್ತವೆ
ಕೆಲವು ಕೇಳುವುದಿಲ್ಲ ....
ಒಂದು ಇನ್ನೆಲ್ಲೋ ಇನ್ನೊಂದು ಇನ್ನೆಲ್ಲೋ ....
ಹೋಗುತ್ತೆ...
ಅದರೂ ಅವನಿಗೆ ಅವುಗಳ ಹೇಗೆ ದಾರಿಗೆ ತರಬೇಕು ಅನ್ನೋ ಜ್ಞಾನ ಇರುತ್ತೆ 
ಸಂಜೆಯಾಗುತ್ತಿದಂತೆ ಆ ನೂರು ಕುರಿಗಳಲ್ಲಿ ಒಂದೂ ಕಳೆಯದೆ
ಎಲ್ಲವನ್ನೂ ತಂದು ಮನೆಗೆ ಸೇರಿಸುತ್ತಾನೆ!

ನಾವೇ ಆ ಕುರಿ ಕಾಯುವ ವ್ಯಕ್ತಿ!

ಆ ಕುರಿಗಳೇ

ಸ್ನೇಹಿತರು..ಸಂಬಂಧಿಕರು!

ಸಂಬಂಧಿಕರನ್ನ ನಿಭಾಯಿಸಿದೋ ಸಹ ಒಂದು ಕಲೆ ಅದನ್ನ ತಿಳಿದರೆ
ನಾಳೆ ಗೆಳೆಯರನ್ನ ಇನ್ನೂ ಸುಲಭವಾಗಿ ನಿಭಾಯಿಸಬಹುದು!

4 comments:

  1. sir nanage swlpa blogger bage details heli .nema kathe kavana thumba chanagide ,nanu blogger create madidini adare munde swlpa idea beku adake if you have time please guide me

    ReplyDelete
    Replies
    1. ನಮಸ್ತೆ! ಸರ್
      ಬ್ಲಾಗರ್ ಅನ್ನೋದು ಈ ಸಾಮಾಜಿಕ ತಾಣಗಳು (ಫಾಸೆಬೂಕ್ ,ಆರ್ಕುಟ್ಹಾಗೂ ಇತರೆ )
      ಎಲ್ಲ ಬರುವ ಮೊದಲು ಎಲ್ಲರಿಗೂ ಇದ್ದ ಒಂದು ಮಾಧ್ಯಮ!
      ಆಮೇಲೆ ಈ ಸಾಮಾಜಿಕ ತಾಣಗಳು ಬಂದ ಮೇಲೆ
      ಈ ಬ್ಲಾಗ್ ಅನ್ನೋ ವಿಷಯದ ಮೇಲೆ ಜನರಿಗೆ ಆಸಕ್ತಿ ಕಮ್ಮಿಯಾಗುತ್ತ ಬಂದಿದೆ,
      ಬ್ಲಾಗರ್ ಅನ್ನೋದು ,
      ಉದಾರಣೆಗೆ :ನಾನು ಒಬ್ಬ ಬರಹಗಾರ ನನ್ನ ಎಲ್ಲ ಬರಹಗಳನ್ನೂ ಒಂದೇ ಸಾಲಿನಲ್ಲಿ ಇಡುವುದಕ್ಕೆ ಒಳ್ಳೆಯ ವೇದಿಕೆ ಈ ಬ್ಲಾಗ್!
      ಹಾಗೆ ಪೋಟೋಗ್ರಪೆರ್
      ಹೀಗೆ ಎಲ್ಲರೂ ಅವರಿಗೆ ತಿಳಿದ ವಿಷಯಗಳು ಹಾಗೂ ಅವರು ಹೇಳಬಯಸುವ ವಿಷಯಗಳು,
      ಹಾಗೂ ಅವರ ಸ್ವಂತ ವಿಷಯಗಳನ್ನ ಹೇಳುವುದಕ್ಕೆ ಬಳಸುತ್ತಾರೆ!

      Delete
  2. nice article .....

    ReplyDelete