Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Monday 3 August 2020

ವೈರಸ್ ಗಳ ಕುರಿತಾದ ಚಿತ್ರಗಳು

Image may contain: 4 people, text that says 'AM LEGEND ARNOLD ABIGAIL SCHWARZENEGGER BRESLIN MAGGIE "TERRIFYING" "EXCITING ANDSCARY" "EXHILARATING "NON-STOP THRILL RIDE" COMINGSOON TRAINDUSA SANG-NO'


ಇವತ್ತು ಕೊರೊನ ವೈರಸ್ ಜಗತ್ತನ್ನು ಬೆಚ್ಚಿ ಬೀಳಿಸಿ, ಜನ ಸಂದಣಿ ಇರುವ ಪ್ರದೇಶಗಳೆಲ್ಲ ಜನರಿಲ್ಲದೆ ಖಾಲಿ ಹೊಡೆಯುವಂತೆ ಮಾಡಿದೆ. ಇವತ್ತು ಕಣ್ಣ ಮುಂದೆ ನೋಡುತ್ತಿರುವ ಇಂಥ ವಿಷಯವನ್ನೇ ಹಾಲಿವುಡ್ ನಲ್ಲಿ ಅದೆಷ್ಟೋ ಚಿತ್ರಗಳ ಕಥಾವಸ್ತುವಾಗಿಸಿಕೊಂಡು ಕಣ್ಣ ಮುಂದೆ ಆ ಚಿತ್ರಣವನ್ನು ತೋರಿಸಿದ್ದಾರೆ ಅಂತ ಚಿತ್ರಗಳಲ್ಲಿ ನನಗೆ ಇಷ್ಟವಾದ ಮೂರು ಚಿತ್ರಗಳಿವು,

I am legend
----------
ವಿಲ್ ಸ್ಮಿತ್ ಅಭಿನಯದ ಚಿತ್ರದಲ್ಲೂ ವೈರಸ್ ದಾಳಿಯಿಂದಾಗಿ ಇಡೀ ನ್ಯೂ ಯಾರ್ಕ್ ಸ್ಮಶಾನವಾಗಿರುತ್ತದೆ, ಊರಿನಲ್ಲಿ ಒಬ್ಬರೂ ಇರುವುದಿಲ್ಲ ಎಲ್ಲೋ ಆ ವೈರಸ್ ನ ಅತಿಯಾದ ದಾಳಿಗೆ ಒಳಗಾಗಿ ಮೃಗಗಳಾಗಿ ಪರಿವರ್ತನೆಗೊಂಡಿರುವ ಮನುಷ್ಯರು ಒಂದಿಷ್ಟು ಬೆಳಕು ಇಲ್ಲದಂತ ಜಾಗದಲ್ಲಿ ವಾಸಿಸುತ್ತಿರುತ್ತಾರೆ, ಮನುಷ್ಯರನ್ನೂ ಅಥವಾ ಇನ್ಯಾವುದೇ ಪ್ರಾಣಿಗಳನ್ನು ರಾತ್ರಿಯಲ್ಲಿ ಬೇಟೆ ಆಡಿ ಬದುಕುತ್ತಿರುತ್ತಾರೆ. ಅಂತ ಪ್ರದೇಶದಲ್ಲಿ ನಾಯಕ ಮತ್ತು ಆತನ ನಾಯಿ ಇಬ್ಬರೇ ವಾಸಿಸುತ್ತಿರುತ್ತಾರೆ, ಬೆಳಗಾದರೆ ಇಡೀ ಊರನ್ನು ಸುತ್ತಿ ಯಾರಾದರೂ ಮನುಷ್ಯರು ಎಲ್ಲಿಯಾದರೂ ಬದುಕಿದ್ದೀರಾ? ಬದುಕಿದ್ದರೆ ಹೇಳಿ ನಾನು ಕಾಪಾಡುತ್ತೇನೆ ಎಂದು ಕೂಗುತ್ತಾ ತಿರುಗುವುದು, ಸಂಜೆಯಾಗುತ್ತಾ ಇದ್ದ ಹಾಗೆ ಮನೆಗೆ ಬಂದು ಬಂದ ಸುಳಿವನ್ನು ಅಳಿಸಿ, ಮನೆಯನ್ನು ಕಬ್ಬಿಣದ ಬಾಗಿಲಿನಿಂದ ಸುತ್ತಲೂ ಬಂಧಿಸಿ ಒಳಗೆ ಸೇರಿಕೊಳ್ಳುವುದು ಇದೆ ವಾಡಿಕೆ, ಈಗಿರುವಾಗ ಮುಂದೆ ಏನು ನಡೆಯುತ್ತೆ ಅನ್ನೋದನ್ನು ಕ್ಷಣಕ್ಷಣಕ್ಕೂ ಅಷ್ಟೇ ರೋಚಕವಾಗಿ ತೋರಿಸಿದ್ದಾರೆ. ಮೊದಲ ದೃಶ್ಯದಲ್ಲಿ ಇಡೀ ನ್ಯೂ ಯಾರ್ಕ್ ನ ಯಾರೂ ಇಲ್ಲದ ಪಾಳುಬಿದ್ದ ಜಾಗದಂತೆ ತೋರಿಸುವಾಗ ನೋಡುಗರಿಗೆ ಸಣ್ಣಗೆ ಭಯ ಶುರುವಾಗುತ್ತೆ.

maggie
------
zombies ಫಿಲಂಸ್ ನೋಡಿರುವವರಿಗೆ ಈ ಚಿತ್ರ ಒಂದು ವಿಶೇಷವಾದ ಫೀಲ್ ಕೊಡುತ್ತೆ, ವೈರಸ್ ದಾಳಿಗೆ ಒಳಗಾಗಿರುವ ನಗರದಳೋಗೆ ಪ್ರವೇಶಿಸಿದ ಕಾರಣ ಆಕೆಗೂ ವೈರಸ್ ಅಟ್ಯಾಕ್ ಆಗಿರುತ್ತದೆ, ಅವಳನ್ನು ಪೊಲೀಸರು ಬೇರೆ ದಾರಿ ಇಲ್ಲದ ಕೊಲ್ಲಲು ನಿರ್ಧರಿಸುವಾಗ ಅಲ್ಲಿಗೆ ಬರುವ ಆಕೆಯ ತಂದೆ ಅವಳನ್ನು ತಾನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಮನೆಗೆ ಕರೆದುಕೊಂಡು ಬರುತ್ತಾರೆ, ದೇಹಕ್ಕೆ ಸೇರಿರುವ ವೈರಸ್ ದಿನೇದಿನೇ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುತ್ತಾ ಇರುವಾಗ ಕಣ್ಣ ಮುಂದೆಯೇ ಮಗಳು ವಿಚಿತ್ರವಾಗಿ ವರ್ತಿಸಕ್ಕೆ ಶುರು ಮಾಡುತ್ತಾಳೆ, ತಂದೆಯ ಪಾತ್ರದಲ್ಲಿ ಅರ್ನಾಲ್ಡ್ ನಿಜಕ್ಕೂ ಒಳ್ಳೆಯ ಅಭಿನಯ ನೀಡಿದ್ದಾರೆ, ಮನೆಯಲ್ಲಿ ಇಟ್ಟುಕೊಂಡು ನೋಡಿಕೊಳ್ಳುತ್ತಾ ಇರುವಾಗ ಕ್ರಮೇಣ ಅವಳ ಮುಖದ ಚಹರೆ, ಚರ್ಮದ ಕಾಂತಿ ಎಲ್ಲವೂ ವಿಕಾರವಾಗುತ್ತದೆ. ಇದರ ನಡುವೆ ಆಗಾಗ ಮನೆಗೆ ಬಂದು ಅವಳು ಮೀತಿಮೀರಿ ವರ್ತಿಸಿ ಯಾರಿಗಾದರೂ ಕಚ್ಚಿದರೆ ಕಷ್ಟ ಹಾಗಾಗಿ ಅವಳನ್ನು ಕೊಲ್ಲಲು ಬರುವ ಪೊಲೀಸರು, ಅವರಿಗೆ ಇಲ್ಲ ನನ್ನ ಮನಗಳಿಂದ ಏನು ಆಗಲ್ಲ ಎಂದು ಹೇಳಿ ಕಳುಹಿಸುವ ತಂದೆ. ಮಗಳಲ್ಲಿ ಆಗುವ ಬದಲಾವಣೆಗಳನ್ನು ಕಂಡು ಸ್ವತಃ ಅವಳ ತಾಯಿ ಸಹ ಹೆದರಿ ದೂರ ಸರಿಯುತ್ತಾ, ಮಗಳನ್ನು ಸರ್ಕಾರಕ್ಕೆ ಒಪ್ಪಿಸೋಣ ಎಂದು ಗಂಡನಿಗೆ ಹೇಳುತ್ತಾರೆ, ಆದರೆ ಮಗಳನ್ನು ಕೊಲ್ಲಲು ಒಪ್ಪಿಗೆ ನೀಡಲು ತಂದೆ ಒಪ್ಪುವುದೇ ಇಲ್ಲ, ಹೀಗಿರುವಾಗ ಒರಗಿನಿಂದ ಬಂದ ಮಗಳು ಅಮ್ಮಾ ಏನಮ್ಮ ಇವತ್ತು ಘಂ ಅಂತ ಇದೆ ಅಡುಗೆ ವಾಸನೆ, ನಾನು ಹೋಗಿ ರೆಡಿಯಾಗಿ ಬರುತ್ತೇನೆ ಊಟ ಮಾಡೋಣ ಎಂದು ಹೊರ ಹೋಗುತ್ತಾಳೆ. ಅದನ್ನು ಕೇಳಿಸಿಕೊಂಡು ಗರಬಡಿದ ಹಾಗೆ ನಿಂತಿರುವ ತಾಯಿ ಒಮ್ಮೆ ಅಡುಗೆ ಮನೆಯತ್ತ ತಿರುಗಿ ನೋಡಿದರೆ ಅಲ್ಲೇನೂ ಅಡುಗೆ ಮಾಡಿಯೇ ಇಲ್ಲ! ಮಗಳಿಗೆ ಮನುಷ್ಯರ ದೇಹದ ವಾಸನೆಯೇ ಊಟದ ವಾಸನೆಯಾಗಿ ಪರಿವರ್ತನೆಯಾಗಿರುವುದನ್ನು ಅರಿತವರೆ ಮನೆಯಿಂದ ಹೊರ ಹೋಗುತ್ತಾರೆ. ಈಗ ಮನೆಯಲ್ಲಿ ಅಪ್ಪ ಮಗಳು ಇಬ್ಬರೇ ಮಗಳಿಗೆ ವೈರಸ್ ನ ಪ್ರಭಾವ ಎಲ್ಲೆಯನ್ನು ಮೀರಿ ನಿಂತಿದೆ..... ಮುಂದೆ ಏನಾಗುತ್ತೆ, zombies ಫಿಲಂಸ್ ನಲ್ಲಿ ಇಂಥದೊಂದು ಭಾವನಾತ್ಮಕತೆಯಿಂದ ಕೂಡಿದ ಕಥೆಯನ್ನು ನಾನು ಕಂಡಿಲ್ಲಾ...

Train To Busan
--------------
ಊರಿಗೆ ಊರೇ ವೈರಸ್ ದಾಳಿಗೆ ಒಳಗಾಗಿದೆ ಇದರ ಬಗ್ಗೆ ಅರಿವೇ ಇಲ್ಲದೆ ಟ್ರೈನ್ ನಲ್ಲಿ ಕೂತಿರುವ ಜನರು, ಕ್ರಮೇಣ ಆ ವೈರಸ್ ದಾಳಿಗೆ ಒಳಗಾಗಿರುವ ಜನರು ಆ ಟ್ರೈನ್ ನತ್ತಾ ಬಂದು ಆ ಟ್ರೈನ್ ಒಳಗೂ ಒಂದೊಂದೇ ಬೋಗಿಯ ಜನರು ಮೃಗಗಳಾಗಿ ಬದಲಾಗ ತೊಡಗುತ್ತಾರೆ, ಇದಕ್ಕೆಲ್ಲಾ ಯಾರೂ ಕಾರಣ, ವೈರಸ್ ಅನ್ನೋದು ಹೇಗೆ ಶುರುವಾಯಿತು ಅದರ ಹಿಂದಿನ ಮಾಫಿಯಾ ಏನು ಅನ್ನೋದೆಲ್ಲಾ ಅಚ್ಚುಕಟ್ಟಾಗಿ ತೆರೆಯಲ್ಲಿ ತೋರಿಸಿದ್ದಾರೆ zombies ಫಿಲಂಸ್ ನಲ್ಲಿ ಇದೂ ಸಹ ಬೆಸ್ಟ್ ಸ್ಥಾನ ಪಡೆಯುತ್ತೆ ....

No comments:

Post a Comment