ಆತನೊಬ್ಬ
ಪ್ರಸಿದ್ಧ ಕಥೆಗಾರ!
ತನ್ನ ಒಂದೊಂದು
ಕಥೆಯ ಮೂಲಕ ಜನರ ಮನಸಿನಲ್ಲಿ
ಒಂದು ಭಧ್ರವಾದ
ನೆಲೆ ಕಂಡುಕೊಂಡಿದ್ದ
ಅವನ ಪ್ರತಿಯೊಂದು
ಕಥೆ, ಪುಸ್ತಕ ರೂಪದಲ್ಲಿ
ಬಿಡುಗಡೆಯಾಗುವುದನ್ನೇ
ಜನ ಕಾತುರದಿಂದ ಕಾಯುತ್ತಿದ್ದರು
ಪುಸ್ತಕ ಹೊರ ಬಂದ
ಕೆಲವೇ ತಿಂಗಳಿನಲ್ಲೇ ಎಲ್ಲ ಪುಸ್ತಕಗಳು
ಮಾರಾಟವಾಗುತ್ತಿತ್ತು............
ಕಥೆಗಳಲ್ಲಿ ಎಲ್ಲವೂ ನಿಜವಾದ ಘಟನೆಗಳಿಗೆ
ಸಂಬಂಧ ಪಟ್ಟವರ
ಹೇಳಿಕೆಗಳೇ ...
ಆದುದರಿಂದ ಅವನ
ಕಥೆ ನೈಜವಾಗಿ ಮೂಡುತ್ತಿತ್ತು!
ಧರ್ಮ ಬಿಟ್ಟು
ಧರ್ಮ ಪ್ರೀತಿಸಿ ಮನೆಯಿಂದ ಓಡಿ ಬಂದು
ಮದುವೆಯಾಗಿ ಈಗ ಪ್ರತಿದಿನವೂ ಭಯದಲ್ಲೇ
ಜೀವಿಸುವ ಪ್ರೇಮಿಗಳ ಕಥೆ..........
ಸಾವಿನ
ದಿನಗಳನ್ನು ಎಣಿಸುತಿರುವ ಮರಣ ದಂಡನೆಯ ಖೈಧಿಗಳು..
ಅವರವರ ನೋಟಗಳಲ್ಲಿನ ಸರಿ,ತಪ್ಪುಗಳ
ಹೇಳಿಕೆಗಳನ್ನು
ಆದರಿಸಿದ ಕಥೆಗಳು...
ಹೀಗೆ ಆತ ಜನರ ಮನದಲ್ಲಿ ಕಥೆಗಾರನಾಗಿ ತನ್ನದೇ ಜಾಪು ಮೂಡಿಸಿದ್ದ!
ದಿನಗಳು ಉರುಳಿದವು ಆತನಿಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ
ಯಾರೂ ಇದುವರೆಗೂ ಬರೆಯದ ಒಂದು ಕಥೆ ಬರೆಯಬೇಕು ಎನ್ನಿಸಿತು ?
ಅದು ಹೇಗೆ ?
ಜನ ಅದನ್ನೂ ಇಲ್ಲಿಯವರೆಗೂ ಎಲ್ಲಿಯೂ ಕೇಳಿರಬಾರದು
ಹಾಗೆ ಅದು ಸತ್ಯ ಘಟನೆಯೂ ಆಗಿರಬೇಕು ...
ಹೇಗೆ ಸಾಧ್ಯ ಎಂದು ಯೋಚಿಸುತ್ತ ಇದ್ದವನಿಗೆ
ಹೊಳೆದದ್ದು .........
ಆತ್ಮಗಳ ಹೇಳಿಕೆಯ ಕೇಳಿ ಯಾಕೆ ಒಂದು ಕಥೆ ಬರೆಯಬಾರದು
ಅನ್ನಿಸಿತು ....
ಸತ್ತವರ ಆತ್ಮಗಳ ಇರುವಿಕೆಯನ್ನು ಹೇಗೆ ಪತ್ತೆ ಹಚ್ಚುವುದು?
ಅದರೊಂದಿಗೆ ಹೇಗೆ ಮಾತನಾಡುವುದು
ಹೀಗೆ ನಾನಾ ಪ್ರೆಶ್ನೆಗಳು .......
ಮೊದಲು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ
ಅಮೇರಿಕಾದಲ್ಲಿ ಆತ್ಮಗಳ ಚಲನವಲನಗಳ ಪತ್ತೆ ಮಾಡಲು ಸಾಧನಗಳು
ಸಿಗುತ್ತವೆ ಅದನ್ನೇ ಅಲ್ಲಿಯ ಕೆಲವು ಮಾಂತ್ರಿಕರು ಉಪಯೋಗಿಸುತ್ತಿದ್ದಾರೆ
ಎನ್ನುವ ಮಾಹಿತಿ ಸಿಕ್ಕ ಕೂಡಲೇ ಅಮೆರಿಕದಲ್ಲಿದ್ದ
ತನ್ನ ಗೆಳೆಯನಿಗೆ ಕರೆ ಮಾಡಿ .....
ಹಾಯ್ ಪಿಟರ್:
ನನಗೆ ಆತ್ಮಗಳ ಇರುವಿಕೆ ತೋರಿಸುವ ಸಾಧನಗಳು ಬೇಕಿತ್ತು ?
ಹೇಯ್ ಏನ್ ಕೇಳ್ತಾ ಇದ್ದೀಯ ನೀನು ?
ಅದು ತುಂಬಾ ಡೇಂಜರ್ ಕಣೋ ....
ಲೋ ನನಗೆ ಬೇಕು ನನ್ನ ಮುಂದಿನ ಕಥೆ ಒಂದು ಆತ್ಮನೇ ಹೇಳಬೇಕು ಆದರ ಕಥೇನ ಅದನ್ನ ನಾನು
ಬರೆಯಬೇಕು...
ಅಲ್ಲ ಕಣೋ ನಲವತ್ತು ವರ್ಷ ಆದ್ರೂ
ಇನ್ನೂ ಮದುವೆ ಆಗ್ದೆ ಏನೋ ದೆವ್ವ ಭೂತ ಅಂತ ಇದ್ದೀಯ ?
ಹೇಯ್ ಅದೆಲ್ಲ ಬೇಡ ಕಣೋ ಈಗ ನಾನ್ ಹೇಳಿದ್ದು ಆಗುತ್ತಾ ಆಗಲ್ವ ?
ನಿನ್ ಹಠ ಎಲ್ಲಿ ಬಿಡ್ತೀಯ ಹೇಳು
ನಿನ್ ಕೇಳಿದ್ದು ಇನ್ನೂ ಒನ್ ವೀಕ್ ನಲ್ಲಿ ನಿಮ್ಮ ಮನೇಲಿ ಇರುತ್ತೆ ಸಾಕ !
ಅದು ಸರಿ ನಾನು ಇನ್ನೊಂದು ಸಲ ಕಾಲ್ ಮಾಡ್ತೀನಿ ಹೇಳಿದ್ದು
ನೆನಪಿರಲಿ ....
ಎಂದೇಳಿ ಫೋನ್ ಇಟ್ಟು
ಪಕ್ಕದಲ್ಲಿದ್ದ ಗ್ರಂಥಾಲಯಕ್ಕೆ ಕೆಲವು ಮಾಟ ಮಂತ್ರದ ಪುಸ್ತಕಗಳನ್ನ ಓದಲು ಶುರು ಮಾಡಿದ!
ಒಂದು ವಾರಗಳ ನಂತರ ಅಮೇರಿಕಯಿಂದ ಒಂದು ಪಾರ್ಸಲ್ ಬಂದಿತು
ಅದರಲ್ಲಿ ಕೆಲವೊಂದು ಸಾಧನಗಳು ಅದನ್ನು ಉಪಯೋಗಿಸುವ
ವಿಧಾನ ಸೂಚಿಸುವ ಪುಸ್ತಕ ಎಲ್ಲ ಇದ್ದವು
....
ಅದರಲ್ಲಿ ದಿಕ್ಸೂಚಿ ಎಂತಹ ಒಂದು ಯಂತ್ರ ಅದು ತನ್ನ ಅಕ್ಕಪಕ್ಕದಲ್ಲಿ
ಯಾವ ದಿಕ್ಕಿನಲ್ಲಿ ಆತ್ಮಗಳ ಓಡಾಟವಿದೆ ಎಂದು ಅದರೊಳಗಿನ ಒಂದು ಮುಳ್ಳು ತೋರಿಸಲೆಂದಿತ್ತು
!
ಎಲ್ಲ ಸಿದ್ಧತೆಗಳ ಮಾಡಿಕೊಂಡು...
ಸ್ಮಶಾನ...ಹೆದ್ದಾರಿಯಲ್ಲಿ ಅಪಘಾತ ನಡೆದ ಸ್ಥಳಗಳಲ್ಲಿ ಆತ್ಮಗಳು ಇವೆಯೇ
ಎಂದು ಹುಡುಕಾಟ ನಡೆಸಿದ ಎಲ್ಲಿಯೂ ಅವನ
ಮನಸಿಗೆ ಒಪ್ಪುವ ಹಾಗೆ ಸುಳಿವು ಸಿಗಲಿಲ್ಲ ..
ತನಗೆ ಪರಿಚಯವಿದ್ದ ಎಲ್ಲ ಗೆಳೆಯರಿಗೂ
ತಾನು ಮುಂದಿನ ಕಥೆಗಾಗಿ ಒಂದು ಆತ್ಮದ ಹುಡುಕಾಟದಲ್ಲಿದ್ದೀನಿ
ನಿಮಗೆ ಏನಾದರೂ ಎಲ್ಲಿಯಾದರೂ ದೆವ್ವ ಭೂತಗಳ ಬಗ್ಗೆ ಕಥೆಗಳು ಕೇಳಿದರೆ
ಕೂಡಲೇ ನನಗೆ ತಿಳಿಸಿ ....
ಎಂದು ಎಲ್ಲರಿಗೂ ಸಂದೇಶ ಕಳುಹಿಸಿದ........
ಕೊನೆಗೂ ಅವನ ಹುಡುಕಾಟಕ್ಕೆ ಒಂದು ಮಾಹಿತಿ ಸಿಕ್ಕೆ ಬಿಟ್ಟಿತ್ತು!
ಅವನ ಮೇಲ್ ಬಾಕ್ಸ್ ಗೆ ಒಂದು ಮೇಲ್ .....
ಗೆಳೆಯ ನೀನು
ಹುಡುಕುತ್ತಾ ಇರುವ ಮುಂದಿನ ಕಥೆಯ
ವಿಷಯಕ್ಕೆನಿನಗೆ ಬೇಕಾಗಿರುವ ಒಂದು ಸ್ಥಳ ಸಿಕ್ಕಿದೆ.
ನನಗೆ ತಿಳಿದಿರುವ ಹಳ್ಳಿಯಲ್ಲಿ ಪಾಳು ಬಿದ್ದ ಒಂದು ಮನೆಯಿದೆ
ಅಲ್ಲಿನ ಜನ ಆ
ಮನೆಯ ಬಳಿ ಹೋಗುವುದಕ್ಕೆ ಹೆದರುತ್ತಾರೆ...
ನೀನು ಅಲ್ಲಿಗೆ ಒಮ್ಮೆ
ಭೇಟಿ ಕೊಡು
ನಿನ್ನ ಕಥೆಗೆ ಅದು ಉಪಯೋಗವಾದರೂ ಆಗಬಹುದು....
ಆದರೆ ದಯವಿಟ್ಟು ತುಂಬಾ ಹುಷಾರಾಗಿರು ಆತ್ಮಗಳ ಜೊತೆ ಆಟ
ಯಾವತ್ತೂ ಒಳ್ಳೆಯದಲ್ಲ...
ಇದೆ ಆ ಹಳ್ಳಿಗೆ ಹೋಗುವ ವಿಳಾಸ....
ನಿನ್ನ ಅಮೂಲ್ಯವಾದ ಸಹಾಯಕ್ಕಾಗಿ
ನನ್ನ ಮನದಾಳದ ಧನ್ಯವಾದಗಳು ಗೆಳೆಯ!
ಎಂದು ಅವನಿಗೆ ಉತ್ತರಿಸಿ ಆ ವಿಳಾಸದ ಜಾಗಕ್ಕೆ ಕೂಡಲೇ ಹೊರಟ...
ಸೀದಾ ಆ ಪಾಳು ಬಿದ್ದ ಮನೆಯ ಬಳಿಯೇ ಬಂದು ನಿಂತ!
ಆ ಮನೆಯಿಂದ ಕೆಲವೇ ದೂರದಲ್ಲಿ
ಕುರಿಗಳ ಮೇಯಿಸುತ್ತಾ ಇದ್ದ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ!
ನಮಸ್ತೆ ..
ನಾನು ಒಬ್ಬ ಕಥೆಗಾರ..
ನಿಮ್ಮ ಊರಿನಲ್ಲಿ ಇರುವ ಈ ಮನೆಯ ಬಗ್ಗೆ ನನ್ನ ಗೆಳೆಯರೊಬ್ಬರು
ಹೇಳಿದರು ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೀನಿ
ಈ ಮನೆಯ ಬಗ್ಗೆ ನಿಮಗೆ ತಿಳಿದ ಮಾಹಿತಿಯನ್ನ
ನನಗೆ ಹೇಳಿದರೆ ಅದು ನನಗೆ ತುಂಬಾ ಉಪಕಾರವಾಗುತ್ತದೆ...
ಸ್ವಾಮಿ..
ಅಲ್ಲ ಹೋಗಿ ಹೋಗಿ ಈ ಮನೆಯ ವಿಷಯ ಯಾಕ್ರೀ ಬೇಕು
ನಿಮ್ಗೆ ಬ್ಯಾಡ ಬುದ್ದಿ ಸುಮ್ಕೆ ಹೊಂಟ್ ಬುಡಿ ...
ಸ್ಯಾನೆ ಅಪಾಯ ಅಯ್ತೆ ...
ದಯವಿಟ್ಟು ಹಾಗೆ ಹೇಳ್ಬೇಡಿ ....
ತುಂಬಾ ದೂರದಿಂದ ಬಂದಿದ್ದೀನಿ
ತುಂಬಾನೇ ಅಲೆದಾಡಿದ್ದೀನಿ
ನಿಮ್ಮ ಅಣ್ಣನ ಹಾಗೆ ನನ್ನ ಅನ್ಕೊಳಿ...
ನಿಮ್ನ ನೋಡಿದ್ರೆ ನಂಗೆ
ಬೇಸರ ಆಗುತ್ತೆ ಪಾಪ ಅಷ್ಟು ದೂರದಿಂದ ಬಂದಿದ್ದೀನಿ
ಅಂತ ಇದ್ದೀರಿ ಬೇರೆ ..
ಸರಿ ಬುದ್ದಿ ನಾನ್ ಹೇಳ್ತೀನಿ
ಆ ಮನೆ ಈ ಊರಿನ ಶಂಕರಣ್ಣನ ಮನೆ ...
ಅವರಿಗೆ ಒಂದೇ ಹೆಣ್ಣು ಮಗು
ಅವರ ಹೆಂಡತಿಗೆ ಯಾವ್ದೋ ಖಾಯಿಲೆ ಬಂದು
ಹಾಸಿಗೆ ಹಿಡಿದೋರು ಅಂಗೆ ಹೋಗ್ ಬುಟ್ರು ..
ಆಗ ಆ ಹೆಣ್ಣು ಮಗುಗೆ ಏಳು ವರ್ಷ ...
ಮೂರು ವರ್ಷ ಆ ಹೆಣ್ಣು ಮಗು ಹಾಗೂ ಶಂಕ್ರಣ್ಣ ನೆ ಇದ್ರು...
ಅವರಿಗೆ ಒಬ್ಬರೇ ಅಣ್ಣ ..ಅವರ ಮಾತಿಗೆ ಶಂಕ್ರಣ್ಣ ತುಂಬಾ ಬೆಲೆ ಕೊಡೋರು
ಅವರು...
ಲೋ ಶಂಕ್ರ ಎಷ್ಟು ದಿಸ ಅಂತ ಈ ಒಂಟಿ ಬಾಳ್ವೆ ಮಾಡ್ತೀಯ
ನಿನ್ನ ನೋಡಿಕೊಳ್ಳಕ್ಕೆ ಇಲ್ಲಾಂದ್ರು
ನಿನ್ನ ಮಗಳನ್ನ ನೋಡಿಕೊಳ್ಳಕ್ಕೆ ಒಬ್ಬಾಕೆ ಬ್ಯಾಡ್ವ?
ಅಣ್ಣ ಬರೋಳು ನನ್ನ ಮಗಳನ್ನ ಚೆನ್ನಾಗಿ ನೋಡಿಕೊಳ್ತಾಳೆ
ಅಂತ ಹೇಗಣ್ಣ ನಂಬೋದು ...
ಏನು ಬ್ಯಾಡ ನನ್ನ ಮಗಳು ಮಲ್ಲಿನ ನಾನೇ
ಸಾಕ್ತೀನಿ ತಾಯಿ, ತಂದೆಯಾಗಿ
ನೋಡು ಶಂಕ್ರ ಹೊರಗಿನಿಂದ ಬರೋ ಹೆಣ್ಣು
ನಿನ್ನ ಮಗಳನ್ನ
ನೋಡ್ಕೊಳಲ್ಲ ಅಂತ ಹೇಳಬಹುದು ಆದ್ರೆ
ನಮ್ಮ ಸಂಬಂಧದಿಂದಲೇ ನಾವು ತರೋ ಹೆಣ್ಣು ಖಂಡಿತ ಚೆನ್ನಾಗಿ ನೋಡ್ಕೊಳ್ತಾಳೆ..
ಬ್ಯಾಡ ಅಂದೇ ನನ್ನ ಮಾತಿಗೆ ಬೆಲೆ ಕೊಟ್ಟು ಮದುವೆಗೆ ಹ್ಮ್ಮ್ ಅನ್ನು..
ಸರಿ ಕಣಣ್ಣ ನಿನ್ ಮಾತಿನ ಹಾಗೆ ಆಗ್ಲಿ ..
ಅಂತ ಗಿರಿಜಾ ಅನ್ನೋ ಅವರ ಹತ್ತಿರದ ಸಂಬಂಧಿಯೊಬ್ಬರ
ಮಗಳನ್ನ ನಮ್ಮ ಶಂಕ್ರಣ್ಣ ಮದುವೆ ಆದರು
ಬುದ್ದಿ ..
ಆ ಹೆಣ್ಣು ಮನೆಗೆ ಕಾಲ್ ಇಟ್ಟಿದ್ದೆ..
(ಒಂದು ಕ್ಷಣ ಆತ ಮೌನವಾಗಿ
ಕಣ್ಣಂಚಿನ ಕಣ್ಣೀರ ಒರಸಿಕೊಂಡು)
ಆ ಮನೆ ಅಂಗೆ ನಂದಗೋಕುಲ ಆಯಿತು.
ಮಲತಾಯಿ ದೋರಣೆ ...ಮಲತಾಯಿ ಧೋರಣೆ ...
ಅಂತ ತುಂಬಾ ಕೇಳಿದ್ದೀವಿ ಆದ್ರೆ ಒಂದು ಮಲತಾಯಿ ಹೆತ್ತವ್ವನನ್ನೇ
ಮೀರಿಸೋಷ್ಟು ಪಿರುತಿಯಾ ಕೊಡ್ತಾಳೆ ಅಂತ ಆಯವ್ವನ್ನ ನೋಡಿದ ಮೇಲೆ
ನಮ್ಗೆ ತಿಳಿದಿದ್ದು ಮಲ್ಲಿಗಾಗಿಯೇ ಅವಳಿಗೆ ಅಂತ ಮಕ್ಕಳು ಬ್ಯಾಡ ಅಂದವಳು ಆಕೆ..
ಮಲ್ಲಿನೆ ನನ್ನ ಸ್ವಂತ ಮಗಳು ಅಂತ ಸಾಕ್ತಾ ಇದ್ಳು
ಆದ್ರೆ ಯಾರ್ ಕಣ್ ಬಿತ್ತೋ ಬುದ್ದಿ
ಆ ಮಲ್ಲಿಗೆ ಅದ್ಯಾವ್ದೋ ಖಾಯಿಲೆ ಬಂತು ನೋಡಿ
ಚೆನ್ನಾಗಿ ಗುಂಡ್ ಗುಂಡಗೆ ಇದ್ದ ಮಲ್ಲಿ ಸ್ಯಾನೆ ಸೊರಗಕ್ಕೆ ಶುರು ಮಾಡಿದ್ಲು
ಅವಳ ದೇಹದಿಂದ ಮೂಳೆಗಳು ಕಾಣುತಿತ್ತು ಅಂದ್ರೆ ನೋಡ್ರಲ ...
ಅಷ್ಟು ಸಣ್ಣಗೆ ಆದ್ಲು.
ಆಯವ್ವ ಗಿರಿಜಾ ನ ಬಗ್ಗೆ ಹೇಳಲೇ ಬೇಕು ...ಸ್ವಾಮಿ
ಆ ಮಲ್ಲಿನ ತಗೊಂಡು ಹತ್ತದೆ ಇರೋ ಆಸ್ಪತ್ರೆ ಇಲ್ಲ..
ಮಾಡ್ದೆ ಇರೋ ದೇವರಿಲ್ಲ..
ಆದರು ಮಲ್ಲಿ ಖಾಯಿಲೆ ವಾಸಿಯಾಗಲೇ ಇಲ್ಲ...
ಹೀಗೆ ಇರುವಾಗ ಅದ್ಯಾರ್ ಏನ್ ಮಾಡಿದರೋ
ನಾನ್ ಕಾಣೆ ...
ಅವರ ಮನೆಗೆ ಬೆಂಕಿ ಬಿದ್ದು ಮಲ್ಲಿ.ಶಂಕ್ರಣ್ಣ,ಗಿರಿಜಕ್ಕ
ಎಲ್ಲರೂ ಜೀವಂತ ದಹನ ಆದ್ರು....
ಯಾಕೋ ಈಗ ಗ್ಯಪ್ತಿ ಮಾಡ್ಕೊಂಡ್ರು
ಕಣ್ಣೀರು ಬರುತ್ತೋ ....
ಆದಾದ ಮೇಲೆ ಆ ಉರಿದು ಬೂದಿಯಾದ ಮನೆಯ ಯಾರೂ ಸರಿ ಮಾಡಲಿಲ್ಲ
ಅದು ಹಾಗೆ ಉಳಿದು ಬಿಟ್ಟಿತು ಈದೀಗ ಆ ಘಟನೆ ನಡೆದು ಹತ್ತು ವರ್ಷ ಆಯ್ತು...
ಆ ಮನೆಯಲ್ಲಿ ರಾತ್ರಿಯಾದರೆ ಮಲ್ಲಿಯ ಅಳುವಿನ ಸದ್ದು ಕೇಳುತ್ತೆ
ಅದನ್ನ ಕೇಳಿ ಆ ಮನೆಯ ಒಳಗೆ ಹೋದವರು ಯಾರೂ ವಾಪಾಸ್ ಬರಕಿಲ್ಲ ...
ಕೆಲವು ಜನಗಳು ಸತ್ತ ನಂತರ ಆ ಮನೆಯ ಕಡೆ ನಾವು ಕುರಿಗಳನ್ನ ಕೂಡ ಬಿಡಕಿಲ್ಲ
ಸಂಜೆ ಆರು ಆಗುತ್ತಾ ಇದ್ದಂತೆ ಯಾರೂ ಆ
ಕಡೆ ಹೋಗೋದಿಲ್ಲ...
ಯಾಕೆ ಆ ಮನೆಗೆ ಬೆಂಕಿ ಬಿತ್ತು?
ಅದು ಸಹಜವೇ ಇಲ್ಲ ಯಾರೋ ಬೇಕು ಅಂತ ಮಾಡಿದ್ದ?
ಶಂಕ್ರಣ್ಣ ಮತ್ತೆ ಪಕ್ಕದ ಹೊಲದ ರಂಗಣ್ಣನ ಜೊತೆ ಜಗಳ ಆಗಿತ್ತು
ಜನ ಎಲ್ಲ ರಾತ್ರಿ ಶಂಕ್ರಣ್ಣನ ಮನೆಗೆ ಬೆಂಕಿ ಇಟ್ಟಿರಬೇಕು ಅಂತ
ಮಾತನಾಡಿಕೊಳ್ತಾರೆ....
ಯಾವ್ದು ದಿಟವೋ ?
ಯಾವ್ದು ಸುಳ್ಳು ?
ಗೊತ್ತಿಲ್ಲ ಬುದ್ದಿ .......
(ಎಲ್ಲವನ್ನೂ
ಶಾಂತಚಿತ್ತವಾಗಿ ಕೇಳಿದ ನಂತರ!)
ನಿಜಕ್ಕೂ ನಿಮ್ಮಿಂದ ನನಗೆ ತುಂಬಾ ಉಪಯೋಗವಾಗುವ ಮಾಹಿತಿಗಳು ಸಿಕ್ಕಿದೆ
ತಗೋಳಿ ಇದನ್ನ ಇಟ್ಕೋಳಿ..
(ಎಂದು
ಸಾವಿರದ ನೋಟ ಕೊಟ್ಟ)
ಬ್ಯಾಡ ಸ್ವಾಮಿ ನನಗೆ ಹಣ ..
ದಯವಿಟ್ಟು ಅಪಾಯನ ಮೈ ಮೇಲೆ ಎಲ್ಕೋ ಬ್ಯಾಡಿ ಅಷ್ಟೇ
ನಾನ್ ಬರ್ತೀನಿ ಸಂಜೆ ನಾಲಕ್ಕು ಆಯ್ತು
ನೀವ್ ಕೂಡ ಸ್ಯಾನೆ ಹೊತ್ತು ಇರ್ಬ್ಯಾಡಿ ..
ಎಂದು ಹೇಳಿ ಆತ ಹೊರಟು ಹೋದ ...
ರಾತ್ರಿಯಾಗುವುದನ್ನೇ ಕಾದು
ಹೇಗಾದರೂ ಮಾಡಿ ಆ ಮೂರು ಜನರ ಸಾವಿಗೆ ಏನು ಕಾರಣ?
ಅನ್ನೋದನ್ನ ಪತ್ತೆ ಹಚ್ಚಲೇ ಬೇಕು ಅಂತ ಅಲ್ಲೇ ಕಾಯುತ್ತ ಕುಳಿತ ಒಂದು ಮರದಡಿಯಲ್ಲಿ ....
ಸಮಯ ರಾತ್ರಿ ಹತ್ತುವರೆ!
ತನ್ನ ಜೊತೆ ತಂದಿದ್ದ ಆ ಆತ್ಮಗಳ
ಇರುವಿಕೆ ತೋರಿಸುವ ಸಾಧನಗಳನ್ನ
ತೆಗೆದು ಬಳಿ ಇಟ್ಟುಕೊಂಡ...
ಆ ಯಂತ್ರದಿಂದ ಯಾವುದೇ ಸೂಚನೆ ಬರುತ್ತಿರಲಿಲ್ಲ .....
ಒಂದು ರೇಡಿಯೋ ತೆಗೆದು ಎರಡು ಸ್ಟೇಷನ್ ಮಧ್ಯೆ ಟ್ಯೂನ್ ಮಾಡಿದಾಗ
ಮೆಲ್ಲನೆ ಗರ್.........ಎನ್ನುವ ಶಬ್ದ ಬರುತ್ತಿತ್ತು..
ಹಾಗೆ ಅದನ್ನ ತಲೆಯ ಪಕ್ಕದಲ್ಲೇ ಇಟ್ಟುಕೊಂಡು ತುಂಬಾ ದೂರದಿಂದ ಬಂದಿದ್ದರಿಂದ
ಆಯಾಸವಾಗಿತ್ತು ತನ್ನೊಂದಿಗೆ ತಂದಿದ್ದ ಬಿಸ್ಕತ್ ತಿಂದು ಹಾಗೆ ಕಣ್ಣ ಮುಚ್ಚಿದ!
ಸಮಯ ಮಧ್ಯ ರಾತ್ರಿ ಒಂದು!
ಅವನ ಸುತ್ತಲು ಏನೂ ಕಾಣದಷ್ಟು ಕತ್ತಲು ಆವರಿಸಿತು!
ಗರ್ ಎನ್ನುತ್ತಿದ್ದ ರೇಡಿಯೋ ಯಾಕೋ ಏರುಪೇರಿನೊಂದಿಗೆ
ಗರ್.ಗರ್.ಗರ್. ಎನ್ನುತ್ತಾ ಸದ್ದು ಮಾಡ ತೊಡಗಿತು!
ಅದನ್ನ ಕೇಳಿ ಎಚ್ಚರಗೊಂಡು ಪಕ್ಕದಲ್ಲೇ ಇದ್ದ ಆ ಯಂತ್ರವನ್ನು ಆನ್ ಮಾಡಿದ .
ಅದು ಆತ್ಮ ಆ ಮನೆಯೊಳಗೇ ಇದೆ ಎನ್ನುವ ಸೂಚನೆಯ ಒಳಗಿದ್ದ ಮುಳ್ಳಿನ ಮೂಲಕ
ಸೂಚಿಸುತ್ತಿತ್ತು!
ಕೂಡಲೇ ಎದ್ದು ಒಂದು ರೀತಿಯ ಭಯದಲ್ಲೇ ಆ ಮನೆಯ ಒಳಗೆ ಹೋದ
ತುಂಬಾ ಪ್ರಕಾಶಮಯವಾದ ಬೆಳಕ ಉಪಯೋಗಿಸ ಕೂಡದು
ಎಂದು ಆ ಯಂತ್ರದೊಂದಿಗೆ ಬಂದಿದ್ದ
ಪುಸ್ತಕದಲ್ಲಿತ್ತು ..
ಅದರಿಂದ .....
ಸ್ವಲ್ಪವೇ ಬೆಳಕ ಚೆಲ್ಲುವ ಒಂದು ಸಣ್ಣ ಟಾರ್ಚ್ ಇಡಿದು ಎಲ್ಲ ಕಡೆ ನೋಡಿದ
ಯಾತ್ರ ಆ ಮನೆಯ ಕೋಣೆಯಲ್ಲಿ ಏನೋ ಒಂದು ರೀತಿಯ ನಗೆಟಿವ್ ಎನರ್ಜಿ ಇದೆ ಎನ್ನುತ್ತಿತ್ತು
ಮೆಲ್ಲಗೆ ಆ ಕೋಣೆಯ ಪ್ರವೇಶಿಸಿದ..
ಒಂದು ಮೂಲೆಯಿಂದ ಮಗು ಅಳುವ ಸದ್ದು ಕೇಳಿ
ಅಲ್ಲಿ ಹೋದರೆ ಅಲ್ಲಿ ಒಂದು ಹೆಣ್ಣು ಮಗುವಿನ ಆಕೃತಿ ...
ಅದು ಮಲ್ಲಿಯೇ ಇರಬೇಕು ಎಂದು ಅದನ್ನ ಮಾತನಾಡಿಸಿದ ....
ಯಾರಮ್ಮ ನೀನು ಯಾಕೆ ಅಳ್ತಾ ಇದ್ದೀಯ ?
ಏನ್ ಆಯ್ತು ನಿಂಗೆ ?
ಸಾರ ನಂಗೆ ಮೈಯೆಲ್ಲಾ ಸುಟ್ಟಿದೆ ಅದು ತುಂಬಾನೇ ಉರಿತ ಇದೆ ....
ಹೌದಾ...
ನಿನ್ನ ಹೆಸರು ಮಲ್ಲಿನ ?
ಹೌದು ಸಾರ .....
ನಿಂಗೆ ಹೇಗೆ ಮೈಗೆಲ್ಲ ಗಾಯ ಆಯ್ತು ಅಂತ ನನಗೆ ಹೇಳ್ತೀಯ ...
ಹೇಳ್ತೀನಿ....
ನಮ್ಮ ಅಪ್ಪಯ್ಯ ನ ಹೆಸರು ಶಂಕ್ರಣ್ಣ ಅಂತ..
ನನಗೆ ಮೊದಲನೇ ಅಮ್ಮ ಇಲ್ಲ ಅವರು ಖಾಯಿಲೆ ಬಂದು ತೀರ್ಕೊಂಡ್ರು...
ಆಮೇಲೆ ಅಪ್ಪಯ್ಯ ಎರಡನೆಯ ಮದ್ವೆ ಆಗಿ
ಗಿರಿಜಮ್ಮ ಅಂತ ನನಗೆ ಚಿಕ್ಕಮ್ಮ ಬಂದ್ರು...
ಅವತ್ತು ಅವರು ನಮ್ಮ ಮನೆಗೆ ಮದ್ವೆ ಆಗಿ ಬಂದ ಮೊದಲೆಯ ದಿನ!
ಅವರ ಕೋಣೆಗೆ ಹಾಲು ಹಿಡಿದು ಹೋದವರು
ಕೆಲವು ಕ್ಷಣಗಳ ನಂತರ ..
ಹೊರಗೆ ಬಂದು ಆ ಹಾಲನ್ನ ನನಗೆ ಕೊಟ್ರು....
ನಾನು ಕೇಳಿದೆ ಯಾಕೆ ಚಿಕ್ಕವ್ವ ಅಂತ ..
ಅವರು ಇನ್ನೂ ನಮಗೆ ನೀನೆ ಎಲ್ಲ ಮಲ್ಲಿ ಅಂತ ನಗ್ತಾ ಹೇಳಿದ್ರು ....
ಆಮೇಲೆ ನನ್ನ ಚಿಕ್ಕವ್ವ ತುಂಬಾನೇ ಚೆನ್ನಾಗಿ ನೋಡಿಕೊಳ್ಳೋರು
ದಿನ ಹಣ್ಣು , ಹಾಲು
ಎಲ್ಲ ಕೊಡೋರು ...
ನನಗೆ ಅಮ್ಮ ಇಲ್ಲ ಅನ್ನೋ ಕೊರಗೆ ಇರ್ತಾ ಇರ್ಲಿಲ್ಲ..
ಅಮೇಕೆ ಏನ್ ಆಯ್ತೋ ಗೊತ್ತಿಲ್ಲ ಸಾರ
ನನಗೆ ಸ್ಯಾನೆ ಮೈ ಹುಷಾರು ತಪ್ಪಿತು ....
ಪಾಪ ಚಿಕ್ಕವ್ವಾನೆ ನನ್ನ ಎಲ್ಲ ಡಾಕ್ಟರ್ ಗೆ ತೋರಿಸ್ದ್ರು
ಆದ್ರೂ ನನಗೆ ವಾಸಿಯಾಗಲಿಲ್ಲ ...
ನನ್ನ ಮೇಲೆ ಪ್ರಾಣನೆ ಮಡಗಿದ್ದ ಅಪ್ಪಯ
ನನ್ನ ನೋಡಕ್ಕೆ ಆಗ್ದೆ ಸ್ಯಾನೆ ಕುಡಿಯಕ್ಕೆ ಶುರು ಮಾಡಿದ್ರು
ಅದೊಂದು ದಿನ ರಾತ್ರಿ ಅಪ್ಪಯ್ಯ ಕುಡಿದು ಮನೆಗೆ ಬಂದ್ರು .....
ನನಗೆ ಆಗ ತಾನೇ ಚಿಕ್ಕವ್ವ ಹಾಲು ಕೊಟ್ಟು ಪಕ್ಕನೆ ಕುಲಿತ್ತಿದ್ರು
ಅಪ್ಪಯ್ಯ ಬಂದು .....
ಹೇಯ್ ನಂಗೆ ಒಂದು ಲೋಟ ಕೊಡೆ ....
ಅಂದ್ರ ಅದಕ್ಕೆ ಚಿಕ್ಕವ್ವ
ನೀನ್ ಸ್ಯಾನೆ ಈಗಲೇ ಕುಡಿದಿದ್ದೀಯ
ಸುಮ್ಕೆ ಹೋಗ್ ಮಲ್ಕೋ ಬುಡು ಅದ್ರು......
ನನ್ನ ಮೊಗಿನ ನೋಡಿದ್ರೆ ಹೊಟ್ಟೆ ಉರಿತೈತೆ ಕಣೆ
ನಾನ್ ಕೈಯಲ್ಲಿ ಆಗಕಿಲ್ಲ ಲೋಟ ಕೊಡು ..
ನಾನ್ ಲೋಟ ಕೊಡಕಿಲ್ಲ ಅಂದ್ರೆ ಕೊಡಕಿಲ್ಲ ....
ನಾನ್ ತಗೊಳ್ತೀನಿ ಅಂತ ಅಪ್ಪಯ್ಯ ಅಡಿಗೆ ಮನೆಗೆ ಹೋದ್ರು...
ಎರಡು ನಿಮಿಷಗಳ ನಂತರ ಹೊರಗೆ ಬಂದವರೇ
ಚಿಕ್ಕವ್ವನ ಬೆನ್ನಿಗೆ ಎಗ್ಗರಿಸಿ ಒದ್ದೆ ಬುಟ್ರು ...
ಹೇಯ್ ಯಾಕೆ ಏನ್ ಆಗಿದೆ ನಿಂಗೆ ?
(ಚಿಕ್ಕವ್ವನ
ಪ್ರಶ್ನೆಗೆ ಏನ್ ಆಗಿದೆಯ ಏನ್ ಇದು ಏನೇ ಇದು ?
ಒಂದ್ ಬಾಟಲಿಯ ತೋರಿಸಿ ಕೇಳ್ತಾ ಇದ್ರು...
ಆ ಬಾಟಲಿಯ ನೋಡಿದ ಕೂಡಲೇ ಚಿಕ್ಕವ್ವ ಹೆದರಿಕೊಂಡು )
ಅದು ಏನೂ ಇಲ್ಲಾರೀ
ಅದನ್ನ ಸುಮ್ಕೆ ಇಟ್ಟಿವಿನಿ ಅಟೆಯ...
ಯಾರ್ಗೆ ಹೇಳ್ತಾ ಇದ್ದೀಯ
ಇದು ಗಿಡಕ್ಕೆ ಹಾಕೋ ವಿಷ .....
ಇದನ್ನ ಗಿಡಗಳಿಗೆ ಹಾಕಿದ ಮೇಲೆ ಕೈ ಸರಿಗೆ ತೊಳೆಯದೇ ಊಟ
ಮಾಡಿದ್ರೂ ವಿಷಾ ಚುರ್ ಚೂರೇ ದೇಹನ ಸೇರಿ ಅವರಿಗೆ ಒಂದು ರೀತಿಯ ಗುಣವಾಗದ ಖಾಯಿಲೆ
ಬಂದಿದ್ದು
ಸತ್ತಿರೋದನ್ನ ನಾನೇ ಕಣ್ಣಾರೆ ನೋಡಿದ್ದೀನಿ..
ಅಂದ್ರೆ ನನ್ನ ಮಗಳಿಗೆ ಇಷ್ಟು ದಿನ ನಿನ್ ಕೊಡ್ತಾ ಇದ್ದ ಹಾಲಲ್ಲಿ
ಇದನ್ನ ಚೂರ್ ಚೂರೇ ಹಾಕಿ ಕೊಡ್ತಾ ಇದ್ದೆ ಅಲ್ವ ?
(ಅಂತ
ನನಗೆ ಕೊಟ್ಟ ಹಾಲಿನ ಲೋಟ ಮೂಸಿ ನೋಡಿ )
ನೋಡು ಇದ್ರಲ್ಲಿ ವಾಸ್ನೆ ಬರ್ತಾ ಇದೆ..
ನಿಜ ಬೊಗಳು ......ಅಂತ
ಹೊಡಿತಾನೆ ಇದ್ರು ...
ಹೌದು ನಾನೇ ಮಾಡಿದ್ದು ..........!!!
ಹೇಳೇ ಯಾಕೆ ಹೀಗೆ ಮಾಡ್ದೆ ?
ಮತ್ತೆ ಯಾವಳೋ ಹೆತ್ತ ಈ ಪೀಡೆನ ನೋಡ್ಕೊಳಕ್ಕ
ನಾನ್ ಬಂದಿರೋದು,
ನಂಗೆ ಅಂತ ಒಂದು ಮಗು ಬೇಕು ಅನ್ನೋ ಆಸೆ ನನಗೆ ಇರಲ್ವಾ ?
ಅವತ್ತು ಮೊದಲ ರಾತ್ರಿಲಿ ಹಾಲು ಕೊಟ್ಟ ಕೂಡಲೇ ಏನ್ ಅಂದ್ರೆ
ನಮ್ಮ ಮಧ್ಯೆ ಏನೂ ಬೇಡ ನಮಗೆ ಮಲ್ಲಿನೆ
ಎಲ್ಲ ಅಂತ ಹೇಳಿದ್ರಿ ಅವತ್ತೇ ನಿರ್ಧಾರ ಮಾಡ್ದೆ
ಈ ದರಿದ್ರನ ತೊಲಗಿಸ ಬೇಕು ಅಂತ
ಅದಕ್ಕೆ ಗಿಡಕ್ಕೆ ಹಾಕೋ ಈ ವಿಷಾನ ಸ್ವಲ್ಪ ಸ್ವಲ್ಪಾನೆ
ಹಾಲಲ್ಲಿ ಬೆರಸಿ ಕುಡಿಸ್ತ ಬಂದೆ...
ಇವಳನ್ನ ಹಾಗೆ ಸಾಯಿಸಿದ್ರೆ ಊರಿನ ಜನ ನನ್ನ
ಸಾಯೋವರೆಗೂ
ಮಲತಾಯಿ ಬುದ್ಧಿ ನ ಕೊನೆಗೂ ತೋರಿಸಿ ಬಿಟ್ಲು
ಅಂತ ಶಾಪ ಹಾಕ್ತಾರೆ,
ಆಮೇಲೆ ಈ ಊರಲ್ಲೇ ಇರಕ್ಕೆ ಆಗಲ್ಲ
ಅದಕ್ಕೆ ಯಾರಿಗೂ ಯಾಕೆ
ನಿಮಗೂ ಅನುಮಾನ ಬರದೆ ಇರೋ ಹಾಗೆ
ಈ ವಿಷಯಕ್ಕೆ ಒಂದು ಗತಿ ಕಾಣಿಸಬೇಕು ಅಂತ ಮಾಡ್ದೆ...
ಜನ ಎಲ್ಲ ಅವರವ್ವನಿಗೆ ಬಂದ ಖಾಯಿಲೆ ಈಗ ಮಗಳಿಗೂ
ಬಂದಿದೆ ಅಂತ ಮಾತಾಡಕ್ಕೆ ಶುರು ಮಾಡಿದ್ರು .....
ನನಗೂ ಅದೇ ಬೇಕಿತ್ತು .
ಆದ್ರೆ ಈ ವಿಷಯ ನಿಮಗೆ ತಿಳಿತದೆ ಅಂತ ಯಾವತ್ತೂ ಅನ್ಕೊಂಡಿರಲಿಲ್ಲ.
ಹೌದಾ....
ನಿನ್ನ ಬಿಡಲ್ಲ ಕಣೆ ನಿನ್ನ ಬಿಡಲ್ಲ!
ಇದೆ ಊರಿನ ಜನ ನಿನ್ನ ಮುಖಕ್ಕೆ ಉಗಿಬೇಕು ಎಲ್ರೂ ನಿಂಗೆ ಚಪ್ಪಲಿಲಿ ಹೊಡಿಬೇಕು ಹಾಗೆ
ಮಾಡ್ತೀನಿ ಬೆಳಗಾಗಲಿ ನಿಂಗೆ ಇದೆ ಮಾರಿ ಹಬ್ಬ!
(ಅಂತ
ಹೇಳಿ ನನ್ನ ಅಪ್ಪಯ್ಯನ ಜೊತೆಯಲ್ಲಿ ಕೋಣೆಯಲ್ಲಿ ಮಲಗಿಸಿಕೊಂಡ್ರು
ಅಪ್ಪಯ್ಯ ಚಿಕ್ಕವನ್ನ ಮೇಲೆ ಸ್ಯಾನೆ ನಂಬಿಕೆ ಇಟ್ಟಿದ್ರು
ಅವಳು ಮೋಸ ಮಾಡಿದಳಲ್ಲ ಅಂತ ಹೇಳುತ್ತಲೇ ಇನ್ನೂ
ಕುಡಿದು ಮಲಗಿದರು ....
ಚಿಕ್ಕವ್ವ ಸ್ಯಾನೆ ಹೊತ್ತು ಅಳ್ತಾನೆ ಇರೋದು ಸದ್ದು ನನಗೆ ಕೇಳಿಸ್ತಾನೆ ಇತ್ತು
ಆಮೇಲೆ ನಾನು ಮಲಗಿ ಬಿಟ್ಟೆ ಮಧ್ಯ ರಾತ್ರಿ
ಯಾಕೋ ಬಟ್ಟೆಯಲ್ಲ ಒದ್ದೆ ಎದ್ದು ನೋಡಿದರೆ
ನಮ್ಮ ಕೋಣೆಯ ತುಂಬಾ ಸಿಮೆ ಎಣ್ಣೆ )
ನಾನು ಹೆದರಿಕೊಂಡು ಎದ್ದು ನೋಡಿದ್ರೆ ಕಿಟಕಿಯಿಂದ
ಚಿಕ್ಕವ್ವ ಸಿಮೆ ಎಣ್ಣೆ ಸುರಿತಾ ಇದ್ರು ..
ನಾನು ಹತ್ತಿರ ಹೋಗಿ ನೋಡಿದೆ ಅವರ ಮುಖದಲ್ಲಿ
ತುಂಬಾ ಆಕ್ರೋಶವಿತ್ತು...
ಚಿಕ್ಕವ್ವ ಬೇಡ ಏನು ಮಾಡಬ್ಯಾಡಿ ...
ಅಂತ ಕೈ ಮುಗಿದು ಕೇಳ್ಕೊಂಡೆ ..
ನೀನು ನಿಮ್ಮ ಅಪ್ಪಯ್ಯ ನನ್ನ ಈ ಊರಿನ ಜನರ
ಮುಂದೆ ನಿಲ್ಲಿಸಕ್ಕೆ ಯೋಚನೆ ಮಾಡಿದ್ದೀರಾ...
ನನ್ನ ಬಗ್ಗೆ ಜನ ತಪ್ಪಾಗಿ ಮಾತಾಡಕ್ಕೆ
ನಾನ್ ಯಾವತ್ತೂ ಬಿಡಕಿಲ್ಲ
ನೀವು ಇದ್ರೆ ತಾನೇ .....
ನಾನು ಕೂಡಲೇ ಅಪ್ಪಯ್ಯನ್ನ ಎಬ್ಬಿಸಕ್ಕೆ ನೋಡ್ದೆ
ಅವರು ತುಂಬಾ ಕುಡಿದು ಮಲಗಿದರಿಂದ ಏಳಲಿಲ್ಲ ..
ಚಿಕ್ಕವ್ವ ಕೊನೆಗೂ ....
ಬೆಂಕಿ ಕಡ್ಡಿ ಗೀರಿ ನಮ್ಮ ಕೋಣೆಯ ಒಳಗೆ
ಹಾಕಿದರು
ಹಾಸಿಗೆ ಎಲ್ಲವೂ ಸೀಮೆಎಣ್ಣೆಯಲ್ಲಿ ನೆನೆದಿದ್ದ ಕಾರಣ
ಬೇಗ ಬೆಂಕಿ ಹತ್ತಿಕೊಂಡಿತು .....
ನನ್ನ ಮೈಯೆಲ್ಲಾ ಬೆಂಕಿ ..
ನನಗೆ ಉರಿ ತಡಿಯಕ್ಕೆ ಆಗ್ತಾ ಇಲ್ಲ
ನಾನು ಬಾಗಿಲ ಹತ್ತಿರ ಹೋದ ಬಾಗಿಲಿಗೆ
ಬೆಂಕಿ ತಾಗಿ ಅದು ಹತ್ತಿಕೊಂಡಿತು ...
ಕೆಲವೇ ಕ್ಷಣದಲ್ಲಿ ಅಪ್ಪಯ್ಯನ್ನ ಕೂಡ ಬೆಂಕಿ
ಬಿಡಲಿಲ್ಲ ..
ಅವರು ಬೆಂಕಿ ಉರಿತಲೇ ಸೀದಾ ಬಂದು
ಚಿಕ್ಕವ್ವನ್ನ ಹಿಡಿದುಕೊಂಡ್ರು.....
ನಾವು ಮೂರು ಜನ ಅಲ್ಲೇ ಸುಟ್ಟು ಬೂದಿಯಾದೋ ಸಾರ..
ಈಗ್ಲೂ ನಮ್ ಚಿಕ್ಕವ್ವ ಹೊಡಿತಾರೆ
ನನ್ನ ಅಳು ಸದ್ದನ್ನ ಕೇಳಿ ಯಾರಾದ್ರೂ ಬಂದು
ಯಾಕೆ ಅಳ್ತಾ ಇದ್ದೀಯ ಅಂತ ಕೇಳ್ದಾಗ
ನಾನು ಎಲ್ಲಾನೂ ಹೇಳಿ ಬಿಡ್ತೀನಿ ಅವರನ್ನೂ
ನಮ್ಮ ಚಿಕ್ಕವ್ವ ಸುಮ್ಕೆ ಬಿಡಕಿಲ್ಲ!
ಈಗ ನಿಮ್ಮ ಚಿಕ್ಕವ್ವ ಎಲ್ಲಿದ್ದಾರೆ ???
ನಿಮ್ ಹಿಂದೆ .................................!!
abbba maiella jum antata aithu astralli kate mugide hoitu che ...
ReplyDeleteotnalli olle reetiyalli kate henedidderi shubhavagali
ಅದ್ಭುತವಾದ ಕಥೆ ಗೆಳೆಯ ಕಥೆ ಓದುತ್ತ ಅದರೊಳಗೆ ಲೀನವಾಗಬೇಕು ಹಾಗಿದೆ ಕಥೆ ಆ ಕೊನೆ ಪದ ನಿಮ್ಮಿಂದೆ ಅನ್ನೋದೇ ತುಂಬ ಭಯ ಹುಟ್ಟಿಸೋದು
ReplyDeleteಒಂದು ಪುಟ್ಟ ಹಾರರ್ ಥ್ರಿಲ್ಲರ್ ಸಿನಿಮಾ ನೋಡಿದ ಅನುಭವ. ತುಂಬಾ ಚೆನ್ನಾಗಿದೆ ಪ್ರಕಾಶ್ :)
ReplyDeletewonderfull story
ReplyDeleteromanchanavagide sir
ReplyDeleteಸರ್ ನಿಜವಾಗಲು ಇದೇ ಮೊದಲ ಸಲ ಕತೆ ಒದಿ ಹೆದರಿಂದು
ReplyDeleteಅದರಲ್ಲಿ ಲಾಸ್ಟ ಲೈನ್ ತುಂಬಾ ಚೇನ್ನಾಗಿದೆ ಆಲೈನ್ಗೆ ಬಹಳ ಹೆದರಿಂದು
ಕಥೆ ತುಂಬಾ ಡಿಫರೆಂಟ್ ಆಗಿ ಚೆನ್ನಾಗಿ ಇದೆ ..ಇದನ್ನು ಓದುತ್ತ ಹಾಗೆ ಇದರಲ್ಲೇ ಎಷ್ಟು ತಲ್ಲೀನ ಆಗ್ಬಿಟ್ಟೆ ಅಂದ್ರೆ ಲಾಸ್ಟ ಲೈನ್ ನಲ್ಲಿ ''ನಿಮ್ಮಿಂದೆ '' ಅಂತ ಓದಿ ನಾನೇ ಹಿಂದೆ ನೋಡ್ಬಿಟ್ಟೆ ... super punch word... ನಿಮಗೆ ಶುಭವಾಗಲಿ ತಮ್ಮ ... :)
ReplyDeleteಕಥೆಯ ಮೆಚ್ಚಿ ಮಾತನಾಡಿದ ಅಷ್ಟೂ ಮನಗಳಿಗೂ ನನ್ನ ವಂದನೆಗಳು
ReplyDeleteನಿಮ್ಮೆಲ್ಲರ ಪ್ರೋತ್ಸಾಹ ..ಸಲಹೆ ಸೂಚನೆಗಳು ಸದಾ ಇರಲಿ!
abba maiyella jum annutte ......... yendige koneyagutto ee mala tayi dorane ...... eshto jana makkalu ee reeti mala tayi doraneyinda naraluttiddare ... Nanu nodidini .... tumba bejarugattappa enu ariyada makkala melyakinta dorane ..... mala tayi anta yochane mado hennu yaake taanu sattare tanna swanta magu kuda innobbara mala magu aagutte aaga adu ee tara novanubhivisutte anta yochane madabaardu... :(
ReplyDelete: Manjula Nagaraj : abba maiyella jum annutte ......... yendige koneyagutto ee mala tayi dorane ...... eshto jana makkalu ee reeti mala tayi doraneyinda naraluttiddare ... Nanu nodidini .... tumba bejarugattappa enu ariyada makkala melyakinta dorane ..... mala tayi anta yochane mado hennu yaake taanu sattare tanna swanta magu kuda innobbara mala magu aagutte aaga adu ee tara novanubhivisutte anta yochane madabaardu... :(
ReplyDeleteಅಬ್ಬ ಪ್ರಕಾಶ್ ಕತೆಯ ಕೊನೆ ಸಾಲು ಮುಗಿದ ತಕ್ಷಣ ನನ್ನ ಹಿಂದೆ ಒಮ್ಮೆ ತಿರುಗಿ ನೋಡಿದೆ.. ತುಂಬಾ ಭಯಾನಕವಾದ ಅಂತ್ಯ.. ಮನ ಕರಗುವ ಕತೆ.. ತುಂಬಾ ಚೆನ್ನಾಗಿದೆ ಪ್ರಕಾಶ್.. ಮುಂದಿನ ಕತೆಗೆ ಕಾತುರದಿಂದ ಕಾಯುತಿದ್ದೇವೆ..
ReplyDeletechennaagide prakasha avare! khushi aaytu kathe odi! bareetaa iri!
ReplyDeleteNaveen Alwys Frank:
ReplyDeletestory amazing geleya.... no words to say superbbbbb
Soumya Dhanaraju :
ReplyDeleteನಿಮ್ಮಿಂದೆ .................................!!...
super kanri prakash
Rajesh Thalwagalmath :
ReplyDeleteabbaaaa......
kathe ooduvaaga naneshtu katheyalli talleena nagidde.....
eshtu bhya beetha naagidde......
innu neevu kathe bariyobekiddare adeshtu katheyalli leenaragiddiri annodu thiliyithu........
katheya koneya pada....
koneya photo anthu nannanu bhayada koopakke thalluvanithu.....
anyways super story from super writer
Simha Chetu :
ReplyDeleteadbutha kathegara annokina..
jeevanada saralateyanna
helo vida idyalla adu atyadbutha...
story amazing geleya.....superrrrrrrrrrrrrr
ReplyDeletethumba oLle niroopaNe....mathe aparichitha nodo haag idhe.....and wonderful imagination.....grand development of the story line.....malathayi bagge idakkinthlu krooravaada kalpane sadhyane illa.....tho ella malathayi nU haagiralla...avara sthana pavithra vadaddu...thaayiginthalU javabdhaariyutha vadaddu.....ottalli neenu film director post ge enadru apply madiddiya...?...hangidre....yu hv a gr8 future in dat field....ALL THE BEST!!! gud luck...:)
ReplyDeleteಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗೆಳೆಯ....ಕಥೆಯ ಕೊನೆಯ ಮಾತು ನಿಮ್ಮಿಂದೆ...........!! ಓದುವಾಗ ಮೈಯೆಲ್ಲ ಜುಮ್ ಎಂದಿತು .....ಕಥೆಗಾರ ಮಲಾ ತಾಯೀಯ ಕಪಿ ಮುಷ್ಟಿಯಲ್ಲಿರುವ ಮಲ್ಲಿಯ ಆತ್ಮವನ್ನು ಬಿಡುಗಡೆಗೊಳಿಸಿ ಮಲ್ಲಿಯ ಆತ್ಮಕ್ಕೆ ಶಾಂತಿ ಒದಗಿಸುವಂತೆ ಮಾಡಿದ್ದರೆ ಚೆನ್ನಾಗಿತ್ತು........
ReplyDeleteಅದ್ಭುತ ಕಥೆ !
ReplyDeleteಕಥೆಯ ಮೆಚ್ಚಿದ ಸರ್ವರಿಗೂ ನನ್ನ ವಂದನೆಗಳು
ReplyDeleteನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೆ ಇರಲಿ!
ಪ್ರೀತಿ ಕವಿತೆಗಳಿಂದ ಆತ್ಮದ ಕಥೆ.
ReplyDeleteಅಬ್ಬಾ ...ಚೆನ್ನಾಗಿ ಹೆದ್ರಿಸಿದಿರಿ :)
ಆತ್ಮಗಳ ಕಥೆ ಬಹಳ ಅದ್ಭುತವಾಗಿ ಮೂಡಿ ಬ೦ದಿದೆ ಗೆಳೆಯ. ನಿಮ್ಮ ಕೊನೆಯ ಸಾಲಿನ ಸಸ್ಪೆನ್ಸ್ ಕೂಡಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ.
ReplyDeleteKeep it up.......all the best geleya.
nice story prakashvare..
ReplyDeletethanks
deepa.
ಓದಿ ಅಭಿಪ್ರಾಯ ತಿಳಿಸಿದ ಮಿತ್ರರಿಗೆ ಧನ್ಯವಾದಗಳು!
ReplyDeleteಕಥೆ ತುಂಬಾ ಚೆನ್ನಾಗಿದೆ. ಕಥೆ ಮುಗಿಯಿತು ಎಂಬ ಬರಹ ನೋಡಿದಾಗ ಅಯ್ಯೋ ಮುಗಿಯಿತಾ ಎಂದು ಅನ್ನಿಸುತ್ತದೆ. ತುಂಬಾ ಕಾಡುತ್ತಿದೆ. ಮತ್ತೆ ಮತ್ತೆ ಆ ಸಣ್ಣ ಮಗಳ ಬಗ್ಗೆ ಅಯ್ಯೋ ಅನ್ನಿಸುತ್ತದೆ. ಉಮಾ, ಚಿತ್ರದುಗ
ReplyDeleteಧನ್ಯವಾದಗಳು ಉಮಾ ಅವರೇ
ReplyDeletethumba chennagide ri interesting agi ide gud heege kathegalanna barithiri... :)
ReplyDeletechennagide sir, sahitya dalliya nimma payana channagi moodibarali ...(y)
ReplyDeleteಭಯಾನಕ ಕಥೆ...ಅಬ್ಬಾ...ಈ ಕಥೇನ ರಾತ್ರಿ ಏನಾದ್ರೂ ಓದ್ತಿದ್ರೆ....
ReplyDeleteತುಂಬಾ ಚೆನ್ನಾಗಿದೆ...ಮುಂದಿನ ಕಥೆಗಾಗಿ ಕಾತರದ ಕಾಯುವಿಕೆಯೊಂದಿಗೆ....
ಲತಾ ಆಚಾರ್ಯ.
Sakatagide Friend Nimma E Story oduta oduta Bhaya agoythu Story matra super film madbowdu alwa??
ReplyDeleteನಿಮ್ ಹಿಂದೆ ಇದಾರೆ.....
ReplyDeleteಕಥೆಗಾರನ ಕಥೆಗೆ ಅಲ್ಪವಿರಾಮವೇ......
Onedhu Thriller, suspence Film nodidha anubava vaythu thumba chennagidhe kathe # PADMA PRIYA
ReplyDeleteThumbha Chennagidhe Friend ondu Suspence & Horror Movie tara Ide........@Rajeshwar Satya
ReplyDeleteಮೆಚ್ಚಿದ ಮನಗಳಿಗೆ ವಂದನೆಗಳು ಮಿತ್ರರೇ ..
ReplyDeleteನಿಮ್ಮ ಪ್ರೋತ್ಸಾಹ ಸಲಹೆ ಸೂಚನೆ ಹೀಗೇ ಇರಲಿ ಎಂದು ಕೇಳಿಕೊಳ್ಳುತ್ತೇನೆ .
ಸರ್ ಮುಂದೆ ಏನಾಗುತ್ತ ಕಥೆ ನಿಜಾವಾಗ್ಲು ಅದ್ಬುತ
ReplyDeleteಧನ್ಯವಾದಗಳು ಸರ್,
Deleteಕಥೆ ಅಷ್ಟೇ ಅಲ್ಲಿಗೆ ಮುಗಿಯಿತು......