Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Saturday, 3 March 2012

ಮೊದಲ ಪ್ರಯತ್ನ..!

                 ಪ್ರೀತಿಯ ಬಗ್ಗೆ ಒಂದು ಪ್ರೀತಿಯ ಕಥೆ!




ಹಾಯ್ ಕವನ !
ಹೇಗಿದ್ದೀಯ?
ನಾನು ಯಾರು ಅಂತ ನಿನಗೆ ನೆನಪಿದೆಯ  ?
ನೆನಪು ಇರುತ್ತೆ, ಮರೆಯಲಿಕ್ಕೆ ಆಗದ೦ತ ಸ್ನೇಹ ನಮ್ಮದು. 
ನೀನು ನನ್ನನ್ನು ನೋಡಿ 7 ವರುಷಗಳಾದವು.
ನಾಳೆ ಸಿಕ್ಕೇ ಸಿಗುತ್ತೇನೆ ಎಂದು ಹೇಳಿ ಮತ್ತೆ ಎಂದೂ 
ನಿನ್ನ ಕೈಗೆ ನಾನು ಸಿಗಲೇ ಇಲ್ಲ ಕವನ ,
ಇಂದು ಮತ್ತೆ ನಿನಗೆ ಸಿಗುತ್ತಿದ್ದೇನೆ, ಅಕ್ಷರಗಳ ರೂಪದಲ್ಲಿ!
ಮೊದಲು  ನಾನು ನಿನಗೆ ಸಿಗದಿದ್ದಕ್ಕೆ ಕ್ಷಮೆ ಕೇಳುತ್ತೇನೆ. 
ಕವನ , ನಾನು ನಿನ್ನ ತುಂಬಾ ಪ್ರೀತಿಸುತ್ತಿದ್ದೆ ಕಣೆ!
ಹೌದು ಇದು ನಿನಗೆ ಅಚ್ಚರಿಯಾಗಬಹುದು, ಆದರೆ ಇದೆ ನಿಜ!
ನನ್ನ ಪ್ರೀತಿಯನ್ನು ಮಗುವಿನ ರೀತಿಯಲ್ಲಿ  ನನ್ನ ಮನಸ್ಸಿನಲ್ಲಿ 
ಹೊತ್ತಿದ್ದೇನೆ
ಆ ಮಗು ಹೊರಬರುವ ಮೊದಲೇ ಮಣ್ಣಿನಲ್ಲಿ ಹೂತಿದ್ದೇನೆ
ಕಂಡ ಕನಸುಗಳನ್ನು  ನಿನ್ನ ಮುಂದೆ ಹೇಳಲಾಗದೆ ಸೋ ತಿದ್ದೇನೆ !
ನೀನು ನಮ್ಮ ಮನೆಯಿಂದ ಮೂರನೇ ಬೀದಿಯಲ್ಲಿದ್ದೆ 
 ನಮ್ಮ ಮತ್ತು ನಿಮ್ಮಮನೆಯವರು ತುಂಬಾ ಪರಿಚಿತರು!
ನಮ್ಮ ಮನೆಗೆ ನೀನು ಆಗಾಗ ಬರುತ್ತಿದ್ದೆ 
ನಿನ್ನ ನಿರ್ಮಲವಾದ ಮನಸ್ಸು ನನಗೆ ತುಂಬಾ ಹಿಡಿಸತೊಡಗಿತು 
ಕಾಣದ ಕನಸುಗಳನ್ನು  ಮನಸ್ಸು ಕಾಣ ತೊಡಗಿತು .
ನಿನ್ನ ಮಾತೇ ಹಾಗೆ ಕವನ, ಅದು ಎಂತಹವರನ್ನೂ
ಮೋಡಿ ಮಾಡುತ್ತಿತ್ತು !
ಮನಸ್ಸಿನಲ್ಲಿ ಒಂದು ಹೊರಗೊಂದು ಇಲ್ಲದ ನಿನ್ನ ನಿರ್ಮಲವಾದ ಸ್ನೇಹವೇ ಒಂದು ಅದ್ಭುತ !
ನಾನು ನಿನ್ನನ್ನು ಪ್ರೀತಿಸುತ್ತಿದ್ದ ವಿಷಯವನ್ನು ನಿನಗೆ ಹೇಳಬೇಕು 
ಎಂದು ಎಷ್ಟೋ ಸಲ ಮನಸ್ಸಿನಲ್ಲೇ ಅಂದು ಕೊಂಡಿದ್ದೆ !
ಹೇಳಲಿಲ್ಲ !
ಮೊದಲು ನನ್ನನ್ನು ನಿನಗೆ ಅರ್ಥ ಮಾಡಿಸಿ ನಂತರ ನನ್ನ ಪ್ರೀತಿಯನ್ನು ನಿನಗೆ ಹೇಳಬೇಕು
ಎಂದು ನಿರ್ಧರಿಸಿದ್ದೆ ಹಾಗಾಗಿ ಹೇಗೋ ನಿನ್ನ ಸ್ನೇಹ ಸಂಪಾದಿಸಿದೆ!!

============================ಪುಟ2================================
ನನ್ನ ಗೆಳೆತನ ನಿನಗೆ ತುಂಬಾ ಇಷ್ಟವಾಗಲು ಆರಂಭಿಸಿತು 
ನಿನ್ನ ಒಂದೊಂದು ಖುಷಿಯ ,ಹಾಗೂ ನೋವಿನ ಕ್ಷಣಗಳನ್ನು
ನನ್ನ ಜೊತೆ ಹಂಚಿಕೊಳ್ಳುತ್ತಿದ್ದೆ !
ಆಗ ತಾನೇ ಮೊಬೈಲ್ ಅಂಬೆಗಾಲು ಇಡುತ್ತಿತ್ತು ,
ಒಳ ಬರುವ ಕರೆಗೆ 2ರೂಪಾಯಿ  
ಹೊರ ಹೋಗುವ ಕರೆಗೆ 6ರೂಪಾಯಿ  
ನೆನಪಿದೆ !
ನನ್ನ ಬಳಿ ನನ್ನ ಮಿತ್ರನ ಒಂದು ಮೊಬೈಲ್ ಇತ್ತು 
ಅದಕ್ಕೆ ನೀನು ಅಂಗಡಿಗೆ ಬಂದಾಗೆಲ್ಲ ಒಂದು ರುಪಾಯಿ 
coin ಬೂತಿನಿಂದ  ಕಾಲ್ ಮಾಡುತ್ತಿದೆ,!
ಇಂದು  ನನ್ನದೇ ಮೊಬೈಲ್ ಇದೆ 
ಆದರೆ ನಿನ್ನ ಕರೆ ಇಲ್ಲ.!
ನಮ್ಮ ಗೆಳೆತನದ ಮಧ್ಯೆ ನನ್ನ ಪ್ರೀತಿ ಸಿಕ್ಕಿಲ್ಲ 
ನನ್ನ ಪ್ರೀತಿಯಿಂದ ನಮ್ಮ ಗೆಳೆತನ  ಆರಂಭವಾಗಿದ್ದು !
ನಿನ್ನ ಜೊತೆ ಇದ್ದ ದಿನಗಳು ನನ್ನ ಹೃದಯದ ದಿನಚರಿಯಲ್ಲಿ 
ಎಂದೂ ಅಳಿಸಲಾಗದ ದಿನಗಳು ಕವನ. !
ಕಣ್ಣುಗಳಲ್ಲಿ ಕವಿತೆ ಬರಲಿಲ್ಲ ಕೈ ಬೆರಳ ಹಿಡಿದು 
ನಾವು ನಡೆಯಲಿಲ್ಲ ಹೃದಯವೆಂಬ  ಕಾಗದದ ಮೇಲೆ 
ನನ್ನ ಪ್ರೀತಿ ಹಾಗೆ ಅಕ್ಷರವಾಗಿ ಉಳಿದು ಬಿಟ್ಟಿತ್ತು..!
ನಿನ್ನನ್ನು ನೋಡಲೆಂದೇ ಬೆಳಗ್ಗೆ 5ಘಂಟೆಗೆ ಎದ್ದು 
ದೇವರ ಮೇಲೆ ನಂಬಿಕೆ ಇಲ್ಲದ್ದಿದ್ದರೂ 
ನಿನ್ನನ್ನು ದೇವಸ್ಥಾನದಲ್ಲಿ ಕಾಣುತ್ತಿದ್ದೆ . 
ಅಮ್ಮನಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿ
ನೀನ್ನ  ಜೊತೆ ಹೆಜ್ಜೆ ಹಾಕಲೆಂದೇ ದಿನಸಿ ಅಂಗಡಿಗೆ ನಾನೂ ಬರುತ್ತಿದ್ದೆ!
ನಾವು ಆಗಾಗ ನೋಡುತ್ತಿದ್ದೇವಲ್ಲ ಆ ನಮ್ಮ ಮನೆಯ
ಹತ್ತಿರದ ಗವಿ ಗಂಗಾಧರ  ದೇವಸ್ಥಾನದಲ್ಲಿ ಬೆಟ್ಟದ ಮೇಲೆ ನೆನಪಿಗೆ ಬಂತ. !
ನಾನು ಮೊದ ಮೊದಲು ಬರೆದ ಕವನಗಳನ್ನು ನಿನಗೆ ತೋರಿಸುತ್ತಿದ್ದೆ
ಅದನ್ನೆಲ್ಲಾ ನೋಡಿ ಯಾರಿಗೆ ಇದೆಲ್ಲ ಎಂದು ನೀನು ಪ್ರತಿ ಬಾರಿಯೂ 
ಒಂದು ಸಣ್ಣ ನಗುವಿನೊಂದಿಗೆ
 ಕೇಳುವಾಗ,
ಅದು ನಿನಗೆ ನಿನಗೆ ಎಂದು ಹೇಳಬೇಕು ಎಂದು
ಮನಸ್ಸು ಹೇಳುತ್ತಿತ್ತು ಕವನ  ನಿನಗೆ ಕೇಳದ ಹಾಗೆ.! 
ನೀನು ನನ್ನ ಮನಸ್ಸಿನೊಳಗೆ ಬಂದ ಮೊದಲ ಪ್ರೀತಿಯ ಮಳೆ  !
ನಿನ್ನನ್ನು ನನ್ನ ಜೀವ ಇರುವವರೆಗೂ ಎಂದೂ ಮರೆಲಾಗದು !
ನಿನ್ನ ನೆನಪುಗಳನ್ನು ಬೇಡವೆಂದು ಮನಸ್ಸಿನೊಳಗೆ ಬಚ್ಚಿಟ್ಟರೂ
ಅದು ನಾ ಬಿಡುವ ಕಣ್ಣೀರಿಗೆ ಮರವಾಗಿ ಬೆಳೆಯುತ್ತಿದೆ !
ನನ್ನ ಬದುಕಿನಲ್ಲಿ ನಾನು ಎಂದೂ ಮರೆಲಾಗದ
ನನ್ನ ಹುಟ್ಟು ಹಬ್ಬ ಅಂದು .....
============================ಪುಟ3================================
ನನಗೆ ಹೇಳಿದ್ದೆ ನಿನ್ನ ಹುಟ್ಟು ಹಬ್ಬಕ್ಕೆ ನಾನು 
ನಿಮ್ಮ ಮನೆಗೆ ಬಂದೆ  ಬರುತ್ತೇನೆ ಎಂದು
ಪ್ರತಿಯೊಬ್ಬರೂ ತಮ್ಮ ಹುಟ್ಟಿದ ದಿನದಂದು 
ಎಷ್ಟೇ ಜನ ವಿಶ್ ಮಾಡಿದರೂ 
ತಾವು ಪ್ರೀತಿಸುವವರ ಒಂದು ವಿಶ್ ಗಾಗಿ ಕಾಯುತ್ತಿರುತ್ತಾರೆ.
ನಾನೂ ಹಾಗೆ ನಿನ್ನ ವಿಶ್ ಗಾಗಿ ಕಾಯುತ್ತಿದ್ದೆ.
ನಿನ್ನನ್ನು ಎದುರಲ್ಲಿ ನೋಡುತ್ತೇನೆ ಎಂದು 
"ಎದುರು" ನೋಡುತ್ತಾ ಇದ್ದೆ.
ನನಗೆ ಎದುರಲ್ಲಿ  ಸಿಕ್ಕಿದ್ದು  ನಿರಾಸೆ ಮಾತ್ರ.
ನಿನಗಾಗಿ ನಿನ್ನ ಇಷ್ಟದ ಅಷ್ಟೂ ಸಿಹಿ ತಿಂಡಿಗಳನ್ನು  
ತಂದು ಕಾಯುತ್ತಿದ್ದೆ!
ಗೇಟಿನ ಸದ್ದು ಕೇಳುವಾಗೆಲ್ಲ ನೀನೆ ಬಂದೆ ಎಂದು ಮಗುವಿನ
ಹಾಗೆ ಹೋಗಿ  ಬಂದು ನೋಡುತ್ತಿದ್ದೆ.....
ನೀ ಬರಲಿಲ್ಲ! !

ಕೊನೆಗೆ ಒಲ್ಲದ ಮನಸ್ಸಿನಿಂದ,
ನೀನು ಇಲ್ಲದೆ ನನ್ನ ಹುಟ್ಟುಹಬ್ಬ ಆಚರಿಸಿದೆ,
ಜೊತೆ ಇದ್ದ ನನ್ನ ಸ್ನೇಹಿತರಿಗಾಗಿ.
ಕತ್ತರಿಸಿದ  ಕೇಕ್ ನನ್ನ ಸ್ನೇಹಿತರು ತಿನ್ನಿಸುವಾಗ
ಸಿಹಿಯಾಗುವ ಬದಲು ನಿನ್ನ ನೆನಪಲ್ಲಿ ಬಂದ ಕಣ್ಣೀರು ಬೆರೆತು ಉಪ್ಪಾಗಬೇಕೆ?
ಆ ದಿನ ನೀನು ಬಂದಿದ್ದರೆ ನನ್ನ 
ಬದುಕಿನಲ್ಲಿ ಒಂದು ಸವಿಯಾದ ದಿನವಾಗುತ್ತಿತ್ತು.!!

ನಮ್ಮ ಗೆಳೆತನ  ಈಗಷ್ಟೆ ಶುರುವಾಗಿದೆ 
ಎನ್ನುವಷ್ಟರಲ್ಲಿ ಎರಡು ವರುಷವಾಗಿತ್ತು .
ನಾನು ನಿನಗೆ ಕ್ರಮೇಣ ಇಷ್ಟವಾಗುತ್ತಿದ್ದೆ.
ನನ್ನ ಗುಣ,ಸ್ನೇಹ,ಸ್ವಭಾವ ಮತ್ತು ನಮ್ಮ ಮನೆಯವರು ಎಲ್ಲವೂ 
ನಿನಗೆ ತುಂಬಾ ಇಷ್ಟವಾಗಿತ್ತು
ನನ್ನ ಪ್ರೀತಿಯನ್ನು ಹೇಗಾದರೂ ಧೈರ್ಯ ಮಾಡಿ 
ನಿನಗೆ ಹೇಳಬೇಕು ಎಂದುಕೊಂಡೆ ! 
ಆದರೆ .........
ನೀನು ಒಪ್ಪದಿದ್ದರೆ ಎಂದು ಹೆದರಿ ಬೆವತ ಕ್ಷಣಗಳೇ ಅಧಿಕ, 
ನನ್ನ ಪ್ರೀತಿಯನ್ನು ನಿನಗೆ ಹೇಗೆ ಹೇಳಬೇಕು ಎಂದು ತಿಳಿಯದೆ 
ಒದ್ದಾಡುತ್ತಿದ್ದೆ.
ಸರಿ ಒಂದು ಕವನದ ರೂಪದಲ್ಲಿ ಹೇಳೋಣ ಅಂತ ನಿರ್ಧರಿಸಿದೆ.
ಹೇಗೋ ಅಲ್ಲಿ, ಇಲ್ಲಿ ಎಂದು ಮನದ ಕೋಣೆಯಲ್ಲಿ ಇದ್ದ ಅಷ್ಟೂ  
ಪದಗಳನ್ನೂ ಸೇರಿಸಿ ನಿನಗಾಗಿ ಒಂದು ಕವನವನ್ನು 
ಪ್ರೇಮ ಪತ್ರವಾಗಿ ಬರೆದು  ಬಿಟ್ಟೆ.!!
ನಾವಿಬ್ಬರೂ ಸಿಗುತ್ತಿದ್ದ ಅದೇ ದೇವಸ್ಥಾನದ
ಬೆಟ್ಟದಲ್ಲಿ ನಿನಗಾಗಿ ಕಾಯುತ್ತಿದ್ದೆ. 
ಮನದಲ್ಲಿ ಏನೋ ಖುಷಿ ಏನೋ ಆತಂಕ. 
ನೀ ಒಪ್ಪಿದರೆ? ಒಪ್ಪದಿದ್ದರೆ?
ಎಲ್ಲಾ ಪ್ರಶ್ನೆಗಳೂ ಕಾಡುತ್ತಿತ್ತು. 
ಅದಾಗಲೇ ಎದುರಾಗಿದ್ದು 
ನಾ ಕನಸಿನಲ್ಲೂ ಬಯಸದ ಒಂದು ತಿರುವು.........!
============================ಪುಟ4================================
ದೇವಸ್ಥಾನದ ಬೆಟ್ಟದಲ್ಲಿ ಮೇಲೆ ನಿನಗೂ ಮೊದಲೇ ಬಂದು ಕಾಯುತ್ತಿದ್ದೆ. 
ಆಗಲೇ ……
ನನ್ನ ಬಾಲ್ಯದ ಗೆಳೆಯ ಸುರೇಶ ದೇವಸ್ಥಾನದಲ್ಲಿ  ಸಿಕ್ಕಿದ್ದು .
ನನ್ನ ಪ್ರತಿಯೊಂದು ಕಷ್ಟದಲ್ಲೂ ಜೊತೆ ಇದ್ದವನು,
ಅವನು ನಮ್ಮ ಮನೆಯ ಪಕ್ಕದಲ್ಲೇ ಇದ್ದ. 
ನಾಲಕ್ಕು ವರುಷಗಳ ಹಿಂದೆ ಅವನ ತಂದೆ ತೀರಿಕೊಂಡ
ಮೇಲೆ ಸಂಸಾರದ ಜವಾಬ್ದಾರಿ ಎಲ್ಲ ಅವನ ಮೇಲೆ ಬಿತ್ತು,
ನಂತರ ಅವರು  ಮೂರು  ವರುಷಗಳ ಹಿಂದೆಯೇ 
ಮನೆ  ಖಾಲಿ ಮಾಡಿ ಬೇರೆ ಕಡೆ ಮನೆ ಮಾಡಿದ್ದರು.  
ಅವನು ಅವನ ಕೆಲಸ ಅಂತ busy ಆದ.
ನಮ್ಮ ಏರಿಯ ಕಡೆ ಬರುತ್ತಿರಲಿಲ್ಲ.
ಹಾಗಾಗಿ ಅವನ ಜೊತೆಗಿನ ನನ್ನ ಗೆಳೆತ ನಿನಗೆ ತಿಳಿದಿರಲಿಲ್ಲ.
ನಾವು ಬಿಡುವು ಸಿಕ್ಕಾಗೆಲ್ಲ ಭೇಟಿಯಾಗಿ ಮಾತನಾಡುತ್ತ ಇದ್ದೆವು.
ಅವನನ್ನು ನೋಡಿದ ಕೊಡಲೇ ,
ಏನೋ ಅವನಿಗೆ ನನ್ನ ಪ್ರೀತಿಯ ವಿಷಯ ತಿಳಿಸಬೇಕು ಅನ್ನಿಸಿತು.
ಕಾರಣ. 
ಕವನ ನಮ್ಮ ಇಬ್ಬರ ಜಾತಿ, ಭಾಷೆ ಬೇರೆ ಬೇರೆಯಾಗಿತ್ತು.
ನೀನು ನನ್ನ ಪ್ರೀತಿಗೆ ಒಪ್ಪಿದ್ದರೆ,ನಾಳೆ ಖಂಡಿತ ನನ್ನ ಗೆಳೆಯನ ಬಿಟ್ಟರೆ ನನಗೆ 
ಬೇರೆ ಯಾರೂ ಇರಲಿಲ್ಲ ಸಹಾಯ ಮಾಡಲು.
ಹಾಗಾಗಿ,
ಇಂದು ನನ್ನ ಬದುಕಿನ ಒಂದು ಮಹತ್ವವಾದ ದಿನ
ನನ್ನ ಮೊದಲ ಪ್ರೀತಿಯನ್ನು ಅರಳಿಸುವ ದಿನ,
ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತಿದ್ದೇನೆ ,
ನಿನ್ನ ಜೊತೆಗಿನ  ಗೆಳೆತನ ಮಾಡಿದ್ದು ,
ನಿನ್ನ ನೋಡಲೆಂದು ನಾ ಘಂಟೆಯ ಲೆಕ್ಕದಲ್ಲಿ ಕಾದದ್ದು.
ನಗುವಿನ ಕ್ಷಣಗಳು. ಮನದಲ್ಲಿದ್ದ ಆತಂಕ,
ನೀನು ಸಿಗುತ್ತಿಯ ಅನ್ನೋ ನಂಬಿಕೆ,
ಪ್ರತಿಯೊಂದನ್ನೂ ಹೇಳಿದೆ ….

ನಾನು ಅವನನ್ನು ಅಂದು ಕೇಳಿದ ಮಾತುಗಳು
ಇನ್ನೂ ನನ್ನ ಹೃದಯದ ಒಳಗೆ ಕೇಳುತ್ತಿದೆ.

ಹೇಳು ಸುರೇಶ್ ನನ್ನ ಪ್ರೀತಿ ನನಗೆ ಸಿಗುತ್ತೆ ಅಲ್ವ?
ನನ್ನ ಕವನ ಒಪ್ಪುತ್ತಾಳೆ ಅಲ್ವ?
ಏನೋ ಗೊತ್ತಿಲ್ಲ ಕಣೋ ಅವಳನ್ನ ನೋಡಿದ ಮೇಲೆ 
ಬೇರೆ ಯಾವ ಹೆಣ್ಣೂ ನನಗೆ ಬೇಡ ಅನ್ನಿಸುತ್ತೆ 
ಮನದೊಳಗೆ ಪೂರ್ತಿ ಅವಳೇ ತುಂಬಿದ್ದಾಳೆ !
ನಿನಗೆ ಗೊತ್ತಿಲ್ಲ ಕಣೋ ಸುರೇಶ್ ಎಷ್ಟೋ ಆಸೆಗಳು ಇದೆ 
ಅದಕ್ಕೆ ಒಂದು ಒಳ್ಳೆಯ ಕೆಲಸಕ್ಕೂ ನಾನು ಅಪ್ಲಿಕೇಶನ್ ಹಾಕಿದ್ದೀನಿ .
ಎಲ್ಲ ನಾನು ಅಂದು ಕೊಂಡ ಹಾಗೆ ಆದ್ರೆ ಅವಳನ್ನ ರಾಣಿ ತರ
ನೋಡ್ಕೊಳ್ತೀನಿ ಕಣೋ !
ಸಣ್ಣ ಮನೆ 
ನಮ್ಮದೇ ಪ್ರಪಂಚ ಅಲ್ಲಿ ನಾನೇ ರಾಜ ಅವಳೇ ರಾಣಿ!
ನಿನಗೆ ಗೊತ್ತಲ್ಲ . ನಾನು ಎಂದೂ ಸಹ ಯಾವ ಹುಡುಗಿರ ಹಿಂದೆ ಹೋದವನಲ್ಲ !
ನನಗೆ ಯಾವುದೇ ಕೆಟ್ಟ ಅಭ್ಯಾಸಗಳೂ ಇಲ್ಲ ಇದೆಲ್ಲ ನನ್ನ ಕವನ
ನನ್ನ ಇಷ್ಟ ಪಡಕ್ಕೆ ಕಾರಣಗಳು ಕಣೋ ಅವಳು ನನಗೆ ಸಿಗಬೇಕು ಅನ್ನೋದೇ
 ನನ್ನ ಲೈಫ್ ನಲ್ಲಿ ಒಂದೇ ಆಸೆ ನನಗೆ! 

ಎಲ್ಲವನ್ನೂ ಕೇಳಿದ ಅವನು ಒಂದು ಮಾತೂ ಆಡದೆ ಕೆಲವು ಕ್ಷಣಗಳು ಮೌನವಾಗಿ ಬಿಟ್ಟ...!
ನಂತರ 
ಅವನು ಹೇಳಿದ ಒಂದೊಂದು ಮಾತು ನಿಜಕ್ಕೂ ನನಗೆ ನಂಬಲು ಆಗಲಿಲ್ಲ........!!!
============================ಪುಟ5================================ 
ಆಗಲೇ ನನಗೆ ತಿಳಿದಿದ್ದು ನಿನಗೆ ಮೊದಲೇ ಹರ್ಷ ಎನ್ನುವ ಹುಡುಗನ ಜೊತೆ ಪ್ರೀತಿಯಾಗಿತ್ತು ಎಂದು .
{ನನ್ನ ಮೊದಲ ಪ್ರೀತಿ}
ಪ್ರೀತಿಯ ಮಳೆ ಹನಿಯೇ ಎಲ್ಲಿ ಬಿದ್ದೆ ನೀನು 
ಕಣ್ಣಲ್ಲಿ ಕಾಣುವ ಮುನ್ನ
ಮಣ್ಣಲ್ಲಿ ಮರೆಯಾದೆ  ನೀನು!

ಸಾವಿರಾರು ಆಸೆಗಳೊಡನೆ ಭೂಮಿಗೆ ಬರುವ ಮಳೆ ಹನಿ 
ಕಲ್ಲ ಮೇಲೆ ಬಿದ್ದು ಸಾಯುವ ಹಾಗೆ ನನ್ನ ಅಷ್ಟೂ ಆಸೆಗಳು ಅಲ್ಲಿ  ಸತ್ತು ಹೋದವು .
ಅಲ್ಲಿಂದ ದಾರಿಯೂದ್ದಕ್ಕೂ ಕಣ್ಣೀರಿಟ್ಟು  ಬಂದು ಮನೆ ಸೇರಿದೆ.
ಮಾರನೆಯ ದಿನ ಸುರೇಶನನ್ನು ಅವನ ಮನೆಯಲ್ಲಿ ಭೇಟಿಯಾದೆ.
ನಿನ್ನ ಪ್ರೀತಿಯ ಬಗ್ಗೆ ಮತ್ತಷ್ಟು ವಿಷಯಗಳನ್ನು ಕೇಳಿ ತಿಳಿದು ಕೊಂಡೆ.
ಸುರೇಶನಿಗೆ ಹೇಗೆ ನಿನ್ನ ಪ್ರೀತಿಯ ವಿಷಯ ಗೊತ್ತು ಎಂದು ಕೇಳಿದೆ,
ಅವನು ನೀನು ಪ್ರೀತಿಸುವ ಹುಡುಗ ಹರ್ಷನ ಆಪ್ತ ಮಿತ್ರ
ಎಂದು ಆಗಲೇ ನನಗೆ ತಿಳಿದಿದ್ದು .
ಸುರೇಶ ಹೇಳಿದ ಅವನೂ ನಿನಗೆ ಗೊತ್ತೆಂದು,
ನೀನು ಹರ್ಷನನ್ನ ಭೇಟಿಯಾಗಿ ಮಾತನಾಡಿಸುವಾಗೆಲ್ಲ ಅವನು ಜೊತೆ ಇರುತ್ತಿದ್ದ ಎಂದು.

ನಿನ್ನ ಪ್ರೀತಿ 8ವರುಷಗಳ  ಒಂದು ನಿಜವಾದ ಪ್ರೀತಿ.
ಹರ್ಷ ನಿನ್ನನ್ನು ತುಂಬಾ  ಪ್ರೀತಿಸುತ್ತಿದದ್ದು.
ನೀವು ಅವರು ಬೇರೆ ಬೇರೆ ಜಾತಿ ಹಾಗೂ ಭಾಷೆ.
ನಿಮ್ಮ ಮನೆಯಲಿ ನಿಮ್ಮ ಪ್ರೀತಿಯ ವಿಷಯ
ತಿಳಿದು ನಿಮ್ಮ ಅಣ್ಣ ಹಾಗೂ ಅವನ ಗೆಳೆಯರು ಸೇರಿ
ನೀನು ಪ್ರೀತಿಸುವ ಹುಡುಗನಿಗೆ ಹೊಡೆದದ್ದು,
ಮತ್ತು ನಿನ್ನ ಕೈಯಲ್ಲಿ ಆ ಹುಡುಗನನ್ನು
ಮತ್ತೆ ಎಂದೂ ನೋಡಬಾರದು 
ಹಾಗೂ ಮಾತನಾಡಬಾರದು ಎಂದು ಆಣೆ ಮಾಡಿಸಿದ್ದು,
ಆದರೆ
ನೀನು ನಿನ್ನ ಪ್ರೀತಿಗಾಗಿ ಆ ಆಣೆಯನ್ನೂ
ಮೀರಿ ಹರ್ಷನನ್ನು ಮಾತನಾಡಿಸುತ್ತಿದ್ದುದ್ದು 
ಹೇಗಾದರೂ ಮಾಡಿ ನಿಮ್ಮ ಮನೆಯಲ್ಲಿ ಒಪ್ಪಿಸಿಯೇ
ನಿಮ್ಮ ಮದುವೆ ಆಗಬೇಕು ಎಂದು 
ನೀವಿಬ್ಬರು ನಿರ್ಧರಿಸಿದ್ದು ಎಲ್ಲವೂ ನನಗೆ ತಿಳಿಯಿತು .

ಸುರೇಶನಿಗೆ ಮತ್ತೆ ಸಿಗುತ್ತೆನೆಂದು  ಹೇಳಿ ಅಲ್ಲಿಂದ ಬಂದು ,
ಒಬ್ಬನೇ ಆ ಬೆಟ್ಟದ ಮೇಲೆ ಕುಳಿತು ಎಲ್ಲವನ್ನೂ ಯೋಚಿಸುತ್ತಿದ್ದೆ 
ನಿನ್ನಿಂದ ದೂರ ಆಗಬೇಕು ಎಂದಿದ್ದೆ 
ಆದರೆ …………..
============================ಪುಟ6================================  
ನೀನು ಅದಾಗಲೇ  ನನ್ನನ್ನು ತುಂಬಾ ಹಚ್ಚಿಕೊಂಡಿದ್ದೆ 
ಪ್ರೇಮಿಯಾಗಿ ನಿನ್ನ ಜೊತೆ ಇರಲಾಗಲಿಲ್ಲ ಒಂದು ನಿಜವಾದ ಗೆಳೆಯನಾಗಿ 
ಆದರೂ  ನಿನ್ನ ಜೊತೆ ಇರಬೇಕು ಎಂದು ನಿರ್ಧರಿಸಿ ,
ನನ್ನ ಪ್ರೀತಿ ಗೆಲ್ಲಲಿಲ್ಲ 
ನಿನ್ನ ಪ್ರೀತಿಯಲ್ಲಿನ ತೊಂದರೆಗಳನ್ನು ಒಂದೊಂದಾಗಿ ಸರಿ  ಮಾಡಿ
ನೀನು ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸುತ್ತ ಜೀವಿಸುತ್ತಿದ್ದ  
ಆ ಪ್ರೀತಿಯನ್ನು  ಗೆಲ್ಲಿಸ ಬೇಕು ಎಂದು ತೀರ್ಮಾನಿಸಿದೆ!


ಎಲ್ಲ ಗೆಳೆಯರೂ ತಮ್ಮ ಸ್ನೇಹಿತರು ಪ್ರೀತಿ ಮಾಡುತ್ತಿದ್ದರೆ
ಅವರಿಗೆ ಮದುವೆ ಮಾಡಿಸುತ್ತಾರೆ ಅಷ್ಟೇ,
ಆ ಹುಡುಗ/ಹುಡುಗಿಯಾ ಹಾಗೂ ಅವರ ಮನೆಯವರ  ಬಗ್ಗೆ ವಿಚಾರಿಸುವುದಿಲ್ಲ 
ಅದೇ  ತಂದೆ ತಾಯಿ ಎಲ್ಲವನ್ನೂ ನೋಡಿ ಮದುವೆ ಮಾಡಿಸುತ್ತಾರೆ ಅದೇ  
ಗೆಳೆಯರಿಗೂ, ತಂದೆ ತಾಯಿಗೂ, ಇರುವ ವ್ಯತ್ಯಾಸ !

ನಾನು ಮೊದಲು ಆ ಹುಡುಗನ ಬಗ್ಗೆ ವಿಚಾರಿಸಲು ಶುರು ಮಾಡಿದೆ 
ಕಾರಣ ನೀನು ಹೂವಿನಂತವಳು , 
ನನಗೆ ಗೊತ್ತು ನಿನಗೆ ಒಂದು ಸಣ್ಣ ಮೋಸವಾದರೂ 
ನಿನ್ನ ಕೈಯಲ್ಲಿ ಅದನ್ನು ತಡೆದು ಕೊಳ್ಳುವುದಕ್ಕೆ ಆಗುವುದಿಲ್ಲ !

ಸುರೇಶನನ್ನು ಕೇಳಿದೆ ಹರ್ಷನ ಮನೆ ಎಲ್ಲಿ ಇರೋದು ಎಂದು ...

ಸುರೇಶ ಹೇಳುತ್ತಿದ್ದ ಯಾಕೆ ಇದೆಲ್ಲ ನಿನಗೆ ಅವಳು ನಿನಗೆ ಸಿಗಲಿಲ್ಲ 
ಅಂದ ಮೇಲೆ ಅವರು ಏನ್ ಆದರೆ ನಿನಗೇನು ?

ಇಲ್ಲ ಸುರೇಶ್ ಮೊದಲ ಪ್ರೀತಿ ಸಿಗಲ್ಲ ಅಂದ್ರೆ ಅದರ ನೋವು ಏನು ಅಂತ ನನಗೆ ಗೊತ್ತಾಗಿದೆ ಕಣೋ 
ಒಂದು ವಯಸ್ಸಿನಲ್ಲಿ ಪ್ರೀತಿ  ಮಾಡ್ತಿವಿ ಅದು  ಅದ್ರು ಆಕರ್ಷಣೆ ಆಗಿರುತ್ತೆ ಬೇಗ ಮರೆತು ಬಿಡ್ತಿವಿ ಬಟ್ ಅದೇ  
ಆ ವಯಸ್ಸನ್ನ ದಾಟಿ  ಬಂದ ಮೇಲೆ ನಮ್ಮೊಳಗೇ ನಮಗೆ ಬರುತ್ತಲ್ಲ ಅದೇ ಪ್ರೀತಿ!
ಈ ಮನಸ್ಸೆಂಬ ತೋಟದಲ್ಲಿ ಅರಳಿದ ಮೊದಲ ಹೂ ಆ ಮೊದಲ ಪ್ರೀತಿ ಅನ್ನೋದು 
ಅದು ಯಾವತ್ತೂ ಬಾಡಲ್ಲ ಕಣೋ !

ಕೊನೆಗೆ ಸುರೇಶ್ ಹರ್ಷನ ವಿಳಾಸ ಕೊಟ್ಟ! !
ಹರ್ಷನ ಗುಣ ಸ್ವಭಾವ ಎಲ್ಲವನ್ನೂ ವಿಚಾರಿಸುತ್ತಾ ಹೋದೆ 

ಹರ್ಷನಿಗೆ ಒಂದು ಕೆಟ್ಟ ಅಭ್ಯಾಸವೂ ಇಲ್ಲ !
ಎಲ್ಲರೂ ಒಳ್ಳೆಯ ಸ್ನೇಹಿತರು  ಅವನ ಜೊತೆ !
ಅವರ ಅಮ್ಮ ಸ್ವಲ್ಪ ಗಾಟಿ,
ಅದು ಮಾತಿನಲ್ಲಿ ಅಷ್ಟೇ ಮನಸ್ಸಿನಲ್ಲಿ ಒಳ್ಳೆಯವರೇ !
ಅವರ ಅಕ್ಕ ನಿನ್ನನ್ನು ಅವರ ಗೆಳತಿಯ ಹಾಗೆ ನೋಡಿಕೊಳ್ಳುತ್ತಾರೆ 
ಅಂತ ಸ್ವಭಾವ ಅವರದು ಎಷ್ಟೇ ಅದರೂ,
ನಿನ್ನ ಆಯ್ಕೆ ಅಲ್ಲವೇ ತುಂಬಾ ಸುಂದರವಾದ ಹುಡುಗ ಮನಸ್ಸು ಹಾಗೆ !
ಆಗಲೇ
ನನಗೆ ತಿಳಿದು ಬಂದ  ಒಂದು ವಿಷಯ ಏನು ಅಂದರೆ……..
============================ಪುಟ7================================
ಹರ್ಷನಿಗೆ ಹೇಳಿ ಕೊಳ್ಳುವ ಹಾಗೆ ಒಂದು ಕೆಲಸ ಇಲ್ಲ 
ನಿಮ್ಮ ತಂದೆಗೆ ಅದೇ  ಒಂದು ಸಣ್ಣ ಬೇಜಾರು !
ಅದರಿಂದ  ಅವನನ್ನು ನಿಮ್ಮ ಮನೆಯಲ್ಲಿ ಒಪ್ಪಲಿಲ್ಲ 
ಆದರೆ ,
ಒಂದು ನಿನಗೆ ಗೊತ್ತಿಲ್ಲ ಕವನ ! 
ನನ್ನ ಗೆಳೆಯನಿಗೆ ಸಿಕ್ಕಿದ್ದ ಒಂದು ಒಳ್ಳೆಯ ಕೆಲಸವನ್ನು 
ಹರ್ಷನಿಗೆ ಕೊಡಿಸಿದ್ದು ನಾನು!
ನನ್ನ ಗೆಳೆಯನಿಗೆ ಕೆಲವು ತಿಂಗಳ ನಂತರ 
ನಾನು ಒಂದು ಕೆಲಸ ಕೊಡಿಸಿದೆ !

ಹರ್ಷ ಒಳ್ಳೆಯ ಕೆಲಸಕ್ಕೆ ಸೇರಿದ ಮೇಲೆಯೇ 
ನಿಮ್ಮ ತಂದೆಗೆ  ಇಷ್ಟವಾಗಿದ್ದು!

ಒಂದು ದಿನ ನನಗೆ ನೀನೆ ನಿನ್ನ ಪ್ರೀತಿ ವಿಷಯವನ್ನೂ
ಮೊದಲ  ಬಾರಿಗೆ ನನ್ನ ಮುಂದೆ ಹೇಳಿದೆ..

ನಾನು ಏನೂ ಗೊತ್ತಿಲ್ಲದವನ ಹಾಗೆ  ಕೇಳುತ್ತಿದ್ದೆ ….
ಆಗೆಲ್ಲ ನಿನ್ನ ಪ್ರೀತಿ ನಿನಗೆ ಸಿಗುತ್ತಾ ಅಂತೆಲ್ಲ ತುಂಬಾ ನೊಂದು ಮಾತನಾಡುತ್ತಿದ್ದೆ!
ಎಷ್ಟೋ ಸಲ ನೀನು ನನ್ನ ಕೈ ಹಿಡಿದು ಕಣ್ಣೀರಿಟ್ಟ ಕ್ಷಣಗಳು ಇದೆ!....
ನಾನು ..
ಏನು ಆಗಲ್ಲ ಕಣೆ ನಿನ್ನ ಪ್ರೀತಿ ನಿನಗೆ ಸಿಗುತ್ತೆ ನಿಜವಾದ ಪ್ರೀತಿಗೆ ಎಂದೂ ಸೋಲಿಲ್ಲ
ಅಂತೆಲ್ಲ ಹೇಳಿ ಸಮಾದಾನ ಮಾಡುತ್ತಿದ್ದೆ.

ನಿನಗೆ ಗೊತ್ತಿಲ್ಲ ಕವನ ನಾವು ಪ್ರೀತಿಸುವವರು  ನಮ್ಮ ಮುಂದೆಯೇ 
ಅವರು  ಪ್ರೀತಿಸುತ್ತಿರುವವರ ಬಗ್ಗೆ ಹೇಳಿ,
ನಮ್ಮ  ಕೈ ಹಿಡಿದು ಅಳುವ ಕ್ಷಣ ಅದು ನಿಜಕ್ಕೂ  ನರಕಯಾತನೆ .!

ಆಗೆಲ್ಲ ಎಷ್ಟು ಮನಸ್ಸಿಗೆ ನೋವಾಗುತ್ತಿತ್ತು ಗೊತ್ತ !
ನೀ ಹೊರಗೆ ಅಳುತ್ತಿದ್ದೆ ಆ ಕ್ಷಣ ನಾನು ಒಳಗೆ ಅಳುತ್ತಿದ್ದೆ !!!

ಇಷ್ಟೆಲ್ಲಾ ತೊಂದರೆಗಳ ಮಧ್ಯೆ ನಿನ್ನನ್ನು ಇನ್ನೂ ಆತಂಕಕ್ಕೆ ಒಳಗಾಗುವ ಹಾಗೆ 
ಒಂದು ಘಟನೆ ನಡದೇ ಹೋಯಿತು,
ನಿನ್ನ ಬದುಕಿನಲ್ಲಿ  ತುಂಬಾ ಭಯ ಪಟ್ಟ ಆ ಘಟನೆ...........!

ನಿನಗೆ ನಿಮ್ಮ ಮನೆಯಲ್ಲಿ ಮದುವೆ ಮಾಡಿಸಬೇಕು ಎಂದು 
ಹುಡುಗನನ್ನು ಹುಡುಕುತ್ತಿದ್ದರು ಆಗಲೇ 
ನಿನ್ನನ್ನು ನೋಡುವುದಕ್ಕೆ ಒಂದು ಹುಡುಗ ಬಂದದ್ದು
ಅವನಿಗೆ ನಿನ್ನನ್ನು ನೋಡಿದ ತಕ್ಷಣ ಇಷ್ಟವಾಗಿ ಬಿಟ್ಟಿತು !
ಆ ಹುಡುಗನ ಹೆಸರು Dr.ರಾಹುಲ್ 
ಮೊದಲೇ ರಾಹುಲ್  doctor ಆಗಿರೋದರಿಂದ
ನಿಮ್ಮ ಅಮ್ಮ ಹಠ ಮಾಡಕ್ಕೆ ಶುರು ಮಾಡಿದ್ರು 
ನೀನು ಅವನ್ನನ್ನೇ ಮದುವೆ ಆಗಬೇಕು ಎಂದು! 
============================ಪುಟ8================================
ನಿಮ್ಮ ಮನೆಯಲ್ಲಿ ನಿನ್ನ ಮಾತು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ 
ಮದುವೆ ಮಾಡಲೇ ಬೇಕು ಎಂದು ನಿರ್ಧರಿಸಿ ಬಿಟ್ಟರು !
ನೀನು ನನಗೆ ಆ ವಿಷಯ ಹೇಳಿದ ತಕ್ಷಣ
ಹೇಗೋ ರಾಹುಲ್ ಅನ್ನು ಹಿಡಿದೇ!
ನಾನು ನೋಡಿದ ಕೆಲವೇ ಕೆಲವು Gentalmanಗಳಲ್ಲಿ
ರಾಹುಲ್ ಕೂಡ ಒಬ್ಬರು! ಅವರನ್ನು ಪರಿಚಯ ಮಾಡಿಕೊಂಡು ..
ನಾನು ನೀವು ಹೆಣ್ಣು ನೋಡಿದ್ದೀರಲ್ಲ ಕವನ ಅಂತ ಅವರ ಗೆಳೆಯ ಅಂತ ಹೇಳಿ,
ನಂತರ ನಾವು coffe dayನಲ್ಲಿ ...
ನಿನ್ನ ಪ್ರೀತಿಯ ವಿಷಯವ ಹೇಳುತ್ತಾ ಹೋದೆ ಒಂದೊಂದಾಗಿ ಅವರಿಗೆ 
{ಆದರೆ ಎಲ್ಲೂ ಸಹ ನೀನು ಪ್ರೀತಿಸುವ ಹುಡುಗನ ಹೆಸರು ಹೇಳಲಿಲ್ಲ}
ಎಲ್ಲವನ್ನೂ ಒಮ್ಮೆ ಶಾಂತ ಚಿತ್ತದಿಂದ ಕೇಳಿ!

ರಾಹುಲ್ ಹೇಳಿದ ಮಾತುಗಳಿವು!
ನನಗೂ ಕವನ ಇಷ್ಟ .
but ಅವರ ಜೊತೆ life long ನೆಮ್ಮದಿಯಾಗಿರಬೇಕು 
ಅಂತಾನೆ ನಾನೂ ಸಹ ಬಯಸೋದು 
ಅದು ಆಗೋದಿಲ್ಲ ಅನ್ನುವಾಗ ಅವರ lifeಗೆ ನಾನು ಅಡ್ಡ ಬರಲ್ಲ ..
ಚೆನ್ನಾಗಿರಲಿ ನೀವು ಅವರ friend ಪರವಾಗಿಲ್ಲ ಈ ಕಾಲದಲ್ಲಿ 
friendಗಾಗಿ ಇಷ್ಟೆಲ್ಲಾ Help, great ನೀವು ....
ಎಂದು ಹೇಳಿ ಅವರು ಹೊರಟು ಹೋದರು.

ನಂತರ ನಿಮ್ಮ ಮನೆಗೆ ಬಂದು ನನಗೆ ಇನ್ನೂ ಎರಡು ವರುಷ ಮದುವೆ
ಬೇಡ ಅನಿಸುತ್ತೆ ನಾನು ಸ್ವಲ್ಪ ನನ್ನ doctor practice ಕಡೆ ಗಮನ ಕೊಡಬೇಕು 
ದಯವಿಟ್ಟು ಕ್ಷಮಿಸಿ ಬಿಡಿ ಅಂತ  ಹೇಳಿಸಿದ್ದೂ ಸಹ ನಾನೇ !
ನಿನಗೆ  ನೆನಪಿದೆಯ ಸದಾ ಕೇಳುತ್ತಿದ್ದೆ

ಯಾಕೆ ರಾಹುಲ್ ದಿಡೀರೆಂದು ಮದುವೆ ಬೇಡ ಅಂದರು ಅಂತ ?

ಇದೇ ಸರಿಯಾದ ಸಮಯ ಎಂದು ನೀನು !
ನೀನು ಪ್ರೀತಿಸುವ ಹುಡುಗನೊಂದಿಗೆ  ಮದುವೆ ಮಾಡಿಸಿ ಎಂದು ನಿಮ್ಮ 
ಅಮ್ಮ ಮತ್ತು ಅಣ್ಣನಲ್ಲಿ  ಎಷ್ಟೋ ಕೇಳಿ ಕೊಂಡೆ ಆದರೆ ಅವರು ಒಪ್ಪಲೇ ಇಲ್ಲ. !
ಈಗ ನಿನಗೆ ಇರುವುದೊಂದೇ ಮಾರ್ಗ ನಿಮ್ಮ ತಂದೆ ಅವರ ಬಳಿ ಹೋಗಿ 
ನೀನು ಹೇಗೋ ಧೈರ್ಯದಿಂದ 

ನೀನು ನಿಮ್ಮ ಅಪ್ಪನ ಬಳಿ ಮಾತಾಡಿದ್ದು ಅವರು 

ನಿನ್ನ ಮಾತುಗಳನ್ನು ಕೇಳಿ !
ನೋಡಮ್ಮ ನಾವು ಹೆತ್ತವರು ಮಕ್ಕಳು ನೂರಾರು ಕಾಲ ಚೆನ್ನಾಗಿ ಬದುಕಲಿ ಅಂತಾನೆ 
ಡಾಕ್ಟರ್,ಇಂಜಿನಿಯರ್ ಅಂತಹ ಒಳ್ಳೆಯ ಗಂಡುಗಳನ್ನು ನೋಡಿ 
ತುಂಬಾ ಖರ್ಚು ಮಾಡಿ ನಿಮಗೆ ಮದುವೆ ಮಾಡಿಸುವುದು!
ಆದರೆ ನಿಮಗೆ ಅದು ಕೊನೆವರೆಗೂ ನೆಮ್ಮದಿ ಕೊಡಲ್ಲ ಅಂದ ಮೇಲೆ 
ಯಾಕೆ ಅದು ?
ನೀನು ಮನಸ್ಸು ಮಾಡಿದ್ದರೆ ಮನೆ ಬಿಟ್ಟು ಹೋಗಿ ಮದುವೆ ಆಗಬಹುದಿತ್ತು,
ಆದರೆ ನೀನು ಮಾಡಲಿಲ್ಲ ಎಲ್ಲಿ ನಮ್ಮ ಮರ್ಯಾದೆ ಹೋಗುತ್ತೋ ಅಂತ 
ನಿನ್ನ ಮನಸ್ಸಿಗೂ ನಾವು ಗೌರವ ಕೊಡಬೇಕು,
ನನಗೆ ಇರೋದು ನಿಮ್ಮಣ್ಣ, ನೀನು ..
ನಿಮ್ಮ ಸುಖವೇ ನನಗೆ ಮುಖ್ಯ,
ನಿಮ್ಮ ಸುಖಕ್ಕಿಂತ 
ನಿಮ್ಮ ಅಮ್ಮ ಜಾತಿ, ಹಣ ಅಂತಸ್ತು ಅನ್ನೋದನ್ನೇ ನೋಡುತ್ತಾ ಇರುತ್ತಾಳೆ..
ನಿಮ್ಮಿಬ್ಬರ ಮದುವೆ ನಾನೇ ಮುಂದೆ ನಿಂತು ಮಾಡಿಸುತ್ತೇನೆ,
ನೀನು ಹರ್ಷನಿಗೆ ವಿಷಯ ತಿಳಿಸು ನಿಮ್ಮ ಮದುವೆ ನಾಳೆ 
ಒಂದು ದೇವಸ್ಥಾನದಲ್ಲಿ simple ಆಗಿ ಮಾಡ್ತೀನಿ …………..

ಮಾರನೆಯ ದಿನ ಬೆಳಗ್ಗೆ
ನಿಮ್ಮಿಬ್ಬರ ಸ್ನೇಹಿತರು ಹಾಗೂ ನಿನ್ನ ತಂದೆಯ ಮುಂದೆ 
ದೇವಸ್ಥಾನದಲ್ಲಿ ನಿನ್ನ ಮದುವೆ ಎಂದು ನಿರ್ಧಾರವಾಗಿತ್ತು !
ಅಂದು 
ನನ್ನನ್ನು ನೋಡಲು ನೀನು ಆ ಬೆಟ್ಟಕ್ಕೆ ಬಂದೆ 
ಆಗ ಸಮಯ ಸಂಜೆ 5ಘಂಟೆ  ....................
============================ಪುಟ9================================

ನಿನ್ನ ಜೊತೆ ಆಡಿದ ಲಕ್ಷಾಂತರ ಮಾತುಗಳಲ್ಲಿ
ನನಗೆ ಈಗಲೂ ಮತ್ತೆ ಮತ್ತೆ  ಕೇಳಬೇಕೆನ್ನಿಸುವ ಮಾತುಗಳಿವು....!!

ನನ್ನ ಕಷ್ಟನ  ನಿನ್ನ ಜೊತೆ share ಮಾಡ್ಕೊಂಡ್ರೆ ನನಗೆ ಎಷ್ಟೋ Relief ಸಿಕ್ತ ಇತ್ತು ...
ನನ್ನ ಎಲ್ಲ ಕಷ್ಟದಲ್ಲೂ ನನ್ನ ಜೊತೇನೆ ಒಂದು ನೆರಳಾಗಿ ಇದ್ದೆ ಕಣೋ ನೀನು.
ನಾಳೆ ನನ್ನ ಬದುಕಿನ ಒಂದು ಅತ್ಯಂತ ಸಂತೋಷದ ಕ್ಷಣ ಆಗಲೂ ನೀನು ನನ್ನ ಜೊತೆ ಇರಬೇಕು.
ಸಿಕ್ತಾನೋ ಇಲ್ವೋ ಅಂತ ತುಂಬಾ ಭಯ ಪಟ್ಟಿದ್ದ ನನ್ನ ಹರ್ಷ ನನಗೆ ಸಿಕ್ಕಿದ್ದಾನೆ!
ಏನೋ ಗೊತ್ತಿಲ್ಲ ಕಣೋ ನೀನು ನನ್ನ friend ಅದಮೇಲೆ,
ನನ್ನ Lifeನಲ್ಲಿ ಇದ್ದ ಅಷ್ಟೂ problems
ಎಲ್ಲ ಒಂದೊಂದಾಗಿ ಸರಿ  ಹೋಯಿತು..
ನೀನು ನನಗೆ very lucky friend ಕಣೋ …….

ನಾನು luckyನ!!!  ಕವನ! 
ಕೇಳಕ್ಕೆ ತುಂಬಾ ಖುಷಿ ಆಗುತ್ತೆ,
ನಾನು ಹುಟ್ಟಿದ ಮೇಲೆ ನಮ್ಮ ಮನೆಗೆ ದರಿದ್ರ ಬಂತು ಅಂತ 
ನಮ್ಮ ಸಂಬಂಧಿಕರು ಎಲ್ಲ ಹೇಳ್ತಾ ಇರ್ತಾರೆ!
ನಾನು ಹುಟ್ಟಿದ ಕೆಲವು ವರ್ಷಗಳ ನಂತರ ನನ್ನ ತಂದೆ ತೀರಿಕೊಂಡ್ರು,
ಆಮೇಲೆ ಕಿತ್ತು ತಿನ್ನೋ ಬಡತನ ..
ಹೇಗೋ ನಾವು ದೊಡ್ಡವರು ಆಗುತ್ತ ಇದ್ದ ಹಾಗೆ ಸ್ವಲ್ಪ ಸುಧಾರಿಸಿದ್ದೆವು ...
ನೆರೆ-ಹೊರೆ, ಸ೦ಬ೦ಧಿಕರು ಮತ್ತು ಕೆಲವು ಗೆಳೆಯರು 
ಕೂಡ ನನ್ನ ಮಾತನಾಡಿಸಲಿಕ್ಕೂ ಭಯ ಪಡೋರು,
ಎಲ್ಲಿ ನಾನು ಅವರನ್ನ help ಕೇಳ್ತಿನೋ ಅಂತ ನನ್ನ ಪರಿಸ್ಥಿತಿ ಹಾಗಿತ್ತು .....
ಆದರೆ life ನಲ್ಲಿ ಯಾವತ್ತೂ ಯಾರನ್ನೂ ನಾನು ಇದುವರೆಗೂ help ಕೇಳಿಲ್ಲ! 
ನೀನೆ ನನ್ನ ಮೊದಲ ದೊಡ್ಡ ಮನೆತನದ ಹುಡುಗಿ ನನ್ನ friend ಆಗಿರೋದು!
ಒಂದು ಖುಷಿ ಏನು ಅಂದರೆ  ನನ್ನ ದರಿದ್ರ ನಿನಗೂ ಅಂಟಲಿಲ್ಲ
ಈಗ ನಿನ್ನ ಮಾತು ಕೇಳಿ ಎಲ್ಲಾನೂ ನೆನಪಾಯಿತು ..
life ನಲ್ಲಿ 1st ಸಲ ನನಗೆ ಒಬ್ಬರು lucky ಅಂತ ಹೇಳಿದ್ದು!
ಓಹ್ ಕವನ ಯಾಕ್ ಅಳ್ತಾ ಇದ್ದೀಯ? ಓಹ್ sorry ಕಣೆ ..
ನನ್ನ ನೋವನೆಲ್ಲ ನಿಂಗೆ ಹೇಳಿ ಬೇಜಾರ್ ಮಾಡ್ದೆ ಅನಿಸುತ್ತೆ.....

ಇಲ್ಲ ಕಣೋ ನೋಡು ಒಂದು ದಿನ ಬರುತ್ತೆ ,
ನಿನಗೆ ಯಾರು ಪರಿಚಯನೇ ಇರಲ್ಲ ಅವರೆಲ್ಲ ನಿನ್ನ ತುಂಬಾ ಇಷ್ಟ ಪಡ್ತಾರೆ ,
ಅವರ ಮನೆಯ ಮಗ ಅನ್ನೋ ಹಾಗೆ ಪ್ರೀತಿಸ್ತಾರೆ ಕಣೋ ನೋಡು ಬೇಕಾದರೆ ....
ನೀನು ಅಷ್ಟು ಚೆನ್ನಾಗಿ ಕವಿತೆ ಬರಿತ್ತಿಯ  ಕಣೋ.
ಹೇಯ್ ನೀನು ಒಂದು ಹುಡುಗಿನ ತುಂಬಾ love ಮಾಡ್ತಾ ಇದ್ದೆ ಅಲ್ವ .
ಯಾರೋ ಅದು ನನಗೆ ಇನ್ನೂ ಹೇಳಿಲ್ಲ ಅಲ್ವ?
ಇರ್ಲಿ ಕಣೋ ಅಷ್ಟೇನ ನಮ್ friendship?.

ಹೇಯ್ ಆ ರೀತಿ ಏನೂ ಇಲ್ಲ ,
ಆ ಹುಡುಗಿಗೆ ಇನ್ನೂ ನಾನು ಪ್ರೀತಿಸ್ತ ಇರೋದೇ ಗೊತ್ತಿಲ್ಲ ಕಣೆ ..
ಒಂದು ದಿನ ನಾನು ಆ ಹುಡುಗಿಗೆ ನನ್ನ ಪ್ರೀತಿನ ಹೇಳಿದ ಮೇಲೆ
ನಿನಗೆ ಹೇಳ್ತೀನಿ ಆಯ್ತಾ sure ...

ನಿನ್ನ ಖಂಡಿತ ಆ ಹುಡುಗಿ ಒಪ್ತಾಳೆ ಕಣೋ 
ನಿನ್ನ ಹಾಗೆ ಒಂದು ಒಳ್ಳೆ ಹುಡುಗ ಸಿಗೋದಕ್ಕೆ ಪುಣ್ಯ ಮಾಡಿರಬೇಕು ALL THE BEST ...
ಸರಿ  ಕಣೋ time   ಆಯಿತು,  ನಾಳೆ ಮದುವೆಗೆ  miss   ಮಾಡಬೇಡ.  ?ಆಯ್ತಾ 

"ಖಂಡಿತ, ನಾನೇ ಕಣೆ ನಾಳೆ ನಿಮ್ಮೆಲ್ಲರಿಗೂ
ಮೊದಲೇ ಆ ದೇವಸ್ಥಾನದಲ್ಲಿ ಇರೋದು ನೋಡು "

ಎಂದು  ನಾನು ಹೇಳಿದ್ದು ಮತ್ತೆ ನಿನಗೆ ಎಂದೂ 
ಸಿಗದೇ ಹೋದದ್ದು !
ಎಲ್ಲವೂ ವಿಧಿಯ ನಿಯಮದಂತೆ ನಡೆದಿದೆ..........!
============================ಪುಟ10==============================

ಕ್ಷಮೆ ಕೋರುತ್ತೇನೆ ಗೆಳತಿ !ಕ್ಷಮಿಸಿ ಬಿಡು!
ನಾನು ನಿನ್ನ ಬದುಕಿನಲ್ಲಿ ಬಂದ ಮೇಲೆ 
ನಿನ್ನನ್ನು ಹರ್ಷನ ಜೊತೆ ನಾನು ಎಂದೂ ನೋಡಿಲ್ಲ ,
ನೋಡುವ ಸಮಯ ಬಂದಾಗೆಲ್ಲ ಅಲ್ಲಿ ನಾನು ಇರುತ್ತಿರಲಿಲ್ಲ. !
ಇನ್ನೂ ಹರ್ಷ ನಿನಗೆ ತಾಳಿ ಕಟ್ಟುವುದನ್ನು 
ನೋಡುವ ಧೈರ್ಯ ನನಗೆ ಇಲ್ಲ ಕಣೆ. !
ನನ್ನ ಮನದೊಳಗೆ ನಿನ್ನ ರೂಪ ಚ್ಚಾಗಿದೆ 
ನಿನ್ನನ್ನು ತಾಳಿಯ ಜೊತೆ ನೋಡಿ ಆ ರೂಪಾನ 
update ಮಾಡುವುದಕ್ಕೆ  ನನಗೆ ಇಷ್ಟವಿಲ್ಲ ,
ಹಾಗಾಗಿ
ಮತ್ತೆ ನಿನ್ನನ್ನು ಎಂದೂ ನೋಡಬಾರದು ಎಂದು ನಿರ್ಧರಿಸಿ ಬಿಟ್ಟೆ !
ನಿನ್ನ ಮದುವೆಗೆ ಬರದೆ ಹೇಗೆ ತಪ್ಪಿಸಿಕೊಳ್ಳಬೇಕು ಏನು ಯೋಚಿಸುತ್ತ ಕೂತಿರುವಾಗ 
ನನ್ನ ಗೆಳೆಯ ಮೈಸೂರಿನಿಂದ ಕರೆ ಮಾಡಿದ ಅವನ 
ತಂದೆಗೆ ಮೈ ಹುಷಾರಿಲ್ಲ ಮನೇಲಿ ಅಣ್ಣನೂ ಇಲ್ಲ
ಇಂತಹ ಸಮಯದಲ್ಲಿ ನೀನು ನನ್ನ ಜೊತೆ ಇದ್ದರೆ 
ನನಗೆ ಸ್ವಲ್ಪ ನೆಮ್ಮದಿ ಆಗುತ್ತೆ ಕಣೋ ಬಾ ಎಂದು ಕೇಳಿಕೊಂಡ.
ನನಗೂ ಇಲ್ಲಿ ಇರಲು ಇಷ್ಟ ವಿರಲಿಲ್ಲ !
ಹಾಗಾಗಿ ರಾತ್ರಿ 10ಘಂಟೆಗೆ ಮೈಸೂರಿನ ಕಡೆ ಹೊರಟೆ!

ಬೆಳಗ್ಗೆ ಸುರೇಶ ನನಗೆ ಕಾಲ್ ಮಾಡಿದ್ದ.
ಕವನ ಮದುವೆ ತುಂಬಾ ಚೆನ್ನಾಗಿ ಆಯಿತು ಕಣೋ .
ಅವಳ life ನಲ್ಲಿ ನಾನು ಯಾವತ್ತೂ ಅಷ್ಟು ಖುಷಿಯಾಗಿದ್ದು 
ನೋಡಿಲ್ಲ ಅಷ್ಟು ಖುಷಿಯಾಗಿದ್ದಳು ಇವತ್ತು ...

ಅವನ ಮಾತು ಕೇಳಿ ನನಗೆ ಕಣ್ಣೀರಿನೊಂದಿಗೆ ನಗು! .
ನನ್ನ ಗೆಳೆಯನ Roomನಲ್ಲಿ ಒಬ್ಬನೇ ಅಳುತ್ತ ಕೂತಿದ್ದೆ..
ಅಷ್ಟೇ ಇವತ್ತಿಗೆ ನನ್ನ ಕವನಗೂ ನನಗೂ ಇಂದ ಸ್ನೇಹ ಅನ್ನೋ ಸಂಬಂಧ ಕೂಡ ಕಳೆದು ಹೋಯಿತು...
ನಿನ್ನ ನೆನಪುಗಳು ಮಾತ್ರ ಎಂದೂ ನನ್ನಿಂದ ಕಳೆದು ಹೋಗದು.! 
ಮತ್ತೆ ಅಲ್ಲೇ ಕೆಲವು ವರುಷಗಳ ಕಾಲ ನನ್ನ ಗೆಳೆಯನ ಜೊತೆಯಲ್ಲೇ ಅವನ bekari ನ ನೋಡಿಕೊಳ್ಳುತ್ತಾ ಅಲ್ಲೇ ಇದ್ದೆ
ಇಲ್ಲಿ ಬಂದರೆ ಮತ್ತೆ ನಿನ್ನ ನೆನಪುಗಳು ಕಾಡುತ್ತೆ ಅಂತ,
ಮನಸ್ಸಿಗೂ  ಒಂದು ಬದಲಾವಣೆ ಬೇಕಿತ್ತು.
ನಿನ್ನ ಪ್ರೀತಿಯನ್ನು ಗೆಲ್ಲಿಸುವ ಸಲುವಾಗಿ ತುಂಬಾ  ಹೋರಾಡಿದ್ದು ...
ಮನಸ್ಸು ದೇಹ ದಣಿದಿತ್ತು ...
ಹಾಗಾಗಿ ಇಲ್ಲೇ ಕೆಲಸದ ಮೇಲೆ ಗಮನ ಕೊಡುತ್ತ ಇದ್ದು ವಿಶ್ರಾಂತಿ ಪಡೆಯುತ್ತಿದ್ದೆ.
ನಂತರವಷ್ಟೇ ನಾನು ಬೆಂಗಳೂರಿಗೆ ಬಂದದ್ದು ......



ನನ್ನ ಕವನಾಳಿಗೆ ಇನ್ನೂ ಮದುವೆ ಆಗಿಲ್ಲ  ಅನ್ನೋ ನಂಬಿಕೆಯಲ್ಲೇ
ಬದುಕು ಸಾಗಿಸುತ್ತಿದ್ದೇನೆ....! 

ನಿನಗೆ ಗೊತ್ತ!
"ಯಾರಿಗೂ ತಿಳಿಯದ ಹಾಗೆ ನಿನ್ನನ್ನು ಪ್ರೀತಿಸುತ್ತಿದ್ದೆ
ಕೊನೆಗೆ ಅದು ನಿನಗೂ ತಿಳಿಯಲಿಲ್ಲ" !

ನಾವು ಭೇಟಿ ಆಗುತ್ತಿದ ಆ ಬೆಟ್ಟದಲ್ಲಿ ಈಗಲೂ  
ಒಂದೊಂದು ಸಲ  ಕೂರುತ್ತೇನೆ  ನಿನ್ನ ಬರುವಿಕೆಗಾಗಿ !

ಹುಡುಕಿದರೂ ಸಿಗುವುದಿಲ್ಲ ಎನ್ನುವುದನ್ನು
ಇನ್ನೂ ಹುಡುಕುತ್ತ ಇದ್ದೇನೆ ನಾನು! 
ಪ್ರೀತಿ ಇದ್ದೂ ಹೇಳದ ಈ ಹುಚ್ಚನ ಮಾತು ಒಮ್ಮೆ ಕೇಳುವೆಯ!
ನೀನು ತಾರೆ ಎಂದು  ತಿಳಿದರೂ  ನಿನ್ನನ್ನೇ ಬಯಸುತ್ತಿದೆ ಈ ಹೃದಯ!
ಬಿಸಿ ಇಲ್ಲದ ಬೆಂಕಿಯಲ್ಲಿ ಬೇಯುತಿದೆ  ಮನಸು..
ಬಿಸಿಯ ಕಣ್ಣೀರಿನಲ್ಲೇ  ಕರಗಿದೆ ಕನಸು!
ರಾತ್ರಿಗಳನ್ನು ತಿಂದು ಬದುಕುತ್ತಿದೆ ನಿನ್ನ ನೆನಪು! 

ಅಲ್ಲಿನ ದೇವಸ್ಥಾನದ ಘಂಟೆಯ ನಾದಕ್ಕಿಂತ 
ಬೆಟ್ಟದ ಮೇಲೆಲ್ಲಾ ತುಂಬಿದೆ ನಿನ್ನ ಗೆಜ್ಜೆಯ ಸಂಗೀತ 

ನಿಮ್ಮತಂದೆ  ಗಾಂಧಿ ಬಜಾರ್ ನಲ್ಲಿ ಸಿಕ್ಕಿದರು  ಎಲ್ಲ ಹೇಳಿದರು 
ಈಗ ನೀನು ದೇವನಹಳ್ಳಿಯಲ್ಲಿ ಇದ್ದೀಯ ಅಂತ ಗೊತ್ತಾಯಿತು !
ನೀನು ಚೆನ್ನಾಗಿದ್ದಿಯಂತೆ, ನಿನಗೆ ಗಂಡು ಮಗು ಆಗಿದಿಯಂತೆ, 
ನಿಮ್ಮ ಅಮ್ಮ ಎಲ್ಲಾನೂ ಮರೆತು ಒಂದಾಗಿದ್ದರಂತೆ ನಿಮ್ ಮನೆಗೆ ಬಂದು ಹೋಗ್ತಾರಂತೆ.!

ಕವನ, ನೀನು ಮದುವೆಗೆ ಬರ್ಲಿಲ್ಲ ಅಂತ ತುಂಬಾ ಕೋಪ ಮಾಡ್ಕೊಂಡು ಇದ್ದಾಳೆ
ನೀನಾಗಿ  ಅವಳನ್ನ ಮಾತನಾಡಿಸುವವರೆಗೂ ಅವಳು ಮಾತಾಡಲ್ಲ ಅಂತ ಹೇಳ್ತಾ ಇದ್ಲು ....
(ನಿಮ್ಮ ತಂದೆಯ ಮಾತು ಕೇಳಿ ನನ್ನ ಒಳ ಮನಸ್ಸು ಒಳಗೊಳಗೆ ನಾನು ಬಯಸಿದ್ದು ಕೂಡ ಅದೇ ಅಂತ ಇತ್ತು )

ನಾನು ಪಟ್ಟ  ಅಷ್ಟೂ ಕಷ್ಟ ಸಾರ್ಥಕವಾಯಿತು ಆ ಖುಷಿ ಸಾಕು !

ಅಂದು ಕಣ್ಣೀರೂ ಸಹ ಸುಖವಾಗಿತ್ತು
ಒರೆಸಲು ನೀ ಜೊತೆ ಇದ್ದುದ್ದರಿಂದ !
ಇಂದು ನಗುವೂ ಸಹ ಕಷ್ಟವೇ ಆಗಿದೆ
ಜೊತೆ ಸೇರಿ ನಗಲು ನೀ ಇಲ್ಲದಿರುವುದರಿಂದ !

ಇಂತಿ ನಿನ್ನ ಇಂದು, ಎಂದೆಂದೂ  ಪ್ರೀತಿಸುತ್ತಿರುವ ಹುಡುಗ!


ಮುಕ್ತಾಯ...............!
=====================ಪ್ರೀತಿಯ ಎಲ್ಲರಿಗೂ ನನ್ನ ನಮನಗಳು=====================

ನನ್ನ ಮೊದಲ ಪ್ರಯತ್ನವನ್ನು ನಿಮ್ಮ ಮುಂದೆ ಇಟ್ಟಿದ್ದೆ !
ತಪ್ಪುಗಳಿದ್ದರೂ ಮೆಚ್ಚಿ ಪ್ರೋತ್ಸಾಹಿಸಿದ 
ಅಷ್ಟೂ ಮನಸ್ಸಿಗೂ ನನ್ನ ವಂದನೆಗಳು!

ಈಗಿನ ಕಾಲದಲ್ಲಿ ನಿಜವಾದ ಪ್ರೀತಿ ಇಲ್ಲ 
ಎಲ್ಲವೂ ಸ್ವಾರ್ಥ .....
ಒಳಗೊಂದು ಹೊರಗೊಂದು ವೇಷದ, ಮೋಸದ ಪ್ರೀತಿ!.
ಎನ್ನುವಾಗ ನನಗೆ ಈ ಕಥೆಯನ್ನು ಬರೆಯಬೇಕು ಎನ್ನಿಸಿತು,  
ತಾನು ಪ್ರೀತಿಸುವ ಮನಸ್ಸು ಸದಾ ನಗುತ್ತಿರಲಿ ,
ಎಂದು ಬಯಸುವ ಒಂದು ಸುಂದರ ಮನಸ್ಸಿನ ಕಥೆ ಇದು!
ನಾನು ಬರೆದ ಈ ಕಥೆಯ ನಾಯಕನಿಗೆ ಎಲ್ಲೂ ಸಹ ನಾನು ಒಂದು ಹೆಸರು ಇಡಲಿಲ್ಲ 
ಕಾರಣ ಪ್ರತಿಯೊಬ್ಬ ನಿಜವಾದ ಪ್ರೇಮಿಯೂ  ಸಹ  ನನ್ನ ಕಥೆಯ ನಾಯಕ!!.
ನಾನು ಪ್ರೀತಿಸುತ್ತ ಇದ್ದೀನಿ ..ನೀನು ಪ್ರೀತಿಸಬೇಕು!?
ನೋಡು ನನ್ನ ಪ್ರೀತಿ ಎಷ್ಟು ನಿಜವಾಗಿದೆ ಅಂತೆಲ್ಲ ಹೇಳದ,
ತಾನು ಪ್ರೀತಿಸುವ ಹುಡುಗಿಯ ಪ್ರೀತಿಯನ್ನು ಗೆಲ್ಲಿಸಿ 
ಅವಳ ಬದುಕಿನಲ್ಲಿ ಒಂದು ನಗುವನ್ನು ಅರಳಿಸಿ 
ನೋಡುವ ಆ ಪ್ರೀತಿಯೇ ನಿಜವಾದ ಪ್ರೀತಿ!
ಪ್ರೀತಿ ಏನನ್ನೂ ಬಯಸ ಬಾರದು  ಅಂತಾರೆ ಆದರೆ ಅದು ತಪ್ಪು ?
ಪ್ರೀತಿ ಒಂದನ್ನ ಮಾತ್ರ ಬಯಸ ಬೇಕು ಅದೇ ನಾವು ಪ್ರೀತಿಸುವವರ ನಗು!
ನಾವು ಪ್ರೀತಿಸುವವರಿಗೆ ಇನ್ನೇನು ಇಷ್ಟ ಎಂದು ತಿಳಿದುಕೊಳ್ಳುವ ಬದಲು
ಏನೇನು ಇಷ್ಟ ಇಲ್ಲ ಅಂತ ತಿಳಿದುಕೊಳ್ಳಬೇಕು,
ಅವರಿಗೆ ನಾವೇ ಇಷ್ಟ ಇಲ್ಲ ಅಂದ ಮೇಲೆ ಅಲ್ಲಿ ನಾವೇ ಇರಕೂಡದು!!.

ಈಗಲೂ ನನ್ನ ಕಥೆಯಲ್ಲಿ ಬರುವ ಹಾಗೆ ಎಷ್ಟೋ ಜನ ಇದ್ದಾರೆ..

ಕತ್ತಲೆಯ ರಾತ್ರಿಗಳಿಗೆ ಗೊತ್ತು ಎಷ್ಟೋ ಹೃದಯಗಳ ಕಳೆದೋದ ಪ್ರೀತಿಯ ವಿಷಯ,
ಬೆತ್ತಲೆಯ ಕಾಗದಗಳಿಗೆ ತಿಳಿದಿರುವುದು ತಾವು  ಹೊತ್ತಿರುವ ಕವಿತೆಯ ಹಿಂದಿನ ವ್ಯಥೆಯ! 
ಜೋಡಿಯಾಗಿರುವ ಭಾವ ಚಿತ್ರಗಳು ಹೇಳಬಲ್ಲದು ಆ ಚಿತ್ರದೊಳಗಿನ ಭಾವನೆಯ! 
ಯಾವುದೇ ಗಡಿಯಾರ ಮತ್ತೆ ತರದು ಬದುಕಿನಲ್ಲಿ ಬಂದ ಆ ಮರೆಯಲಾಗದ ಸಮಯ!

ನಾನು ಬರೆದ ಪ್ರೀತಿಯ ದಿನಚರಿಯನ್ನು 
ಸೋಮವಾರ ಮತ್ತು ಗುರುವಾರ .
ಪ್ರಕಟವಾದಾಗ ತಪ್ಪದೆ ತಿರುವಿ ಹಾಕಿ 
ನಿಮ್ಮ ಬೆರಳ ಗುರುತನ್ನೂ(comments) ಬಿಟ್ಟು ಹೋದ,
ಎಲ್ಲ ಪ್ರೀತಿಯ ಗೆಳೆಯರಿಗೂ ತಲೆ ಬಾಗಿ ನಮಿಸುತ್ತೇನೆ.!
ಮತ್ತೊಂದು  ಕಥೆಯೊಂದಿಗೆ ಮತ್ತೆ ಸಿಗುತ್ತೇನೆ 
ಇಂತಿ ನಿಮ್ಮ ಪ್ರೀತಿಯ  ಎಂದೂ ನಿಮ್ಮವ -ಪ್ರಕಾಶ್ ಶ್ರೀನಿವಾಸ್

TIP:easy2comment
Anonymous ಅಂತ select ಮಾಡಿ ನಿಮ್ಮ ಹೆಸರು ಕೊಟ್ಟು  ಕಾಮೆಂಟ್  ಮಾಡಿ!

178 comments:

  1. ತುಂಬಾ ಧನ್ಯವಾದಗಳು ದೀಪು :)

    ReplyDelete
  2. vry nice prakash...:)title superb idhe... all the best...:)

    ReplyDelete
  3. Thnku so much Akka :) title cradit nanna frnd ananya ge hogabeku :) :)

    ReplyDelete
  4. ಕವನಳೊಂದಿಗೆ ಏಳು ವರ್ಷಗಳ ನಂತರದ ಭೇಟಿ ಸೊಗಸಾಗಿದೆ...ಶುಭವಾಗಲಿ ನಿಮ್ಮ ಪಯಣಕ್ಕೆ.

    ReplyDelete
  5. aha... sogasda.. padagala milanadondige prakashana payana.. adhuthavagide.. nimma prayanada jothe jotheyagi naviddeve..... monduvaresi.. kathuraragiddeve... kavanala kavanavannu.. kanalu....

    ReplyDelete
  6. ಜಲನಯನ
    ತುಂಬಾ ಧನ್ಯವಾದಗಳು ನಿಮ್ಮ ಸ್ಪೂರ್ತಿಯ ಮಾತಿಗೆ :)
    ನಿಮ್ಮ ಪ್ರೋತ್ಸಾಹ ಸದಾ ಇರಲಿ :)

    ReplyDelete
  7. SHASHIKIRAN:
    really tumbaa kushi aytu nimma maatugalu thnku so much :) :)

    ReplyDelete
  8. gelaya nimma payanakke all the best and e kathe nimma nija jeevanadde anta anista ede gelaya nija na.....:))

    ReplyDelete
  9. ತುಂಬ ಚೆನ್ನಾಗಿದೆ ಪ್ರಕಾಶ್..ಸೂಪರ್

    ReplyDelete
  10. ತುಂಬಾ ಧನ್ಯವಾದಗಳು ಮಹೇಶ್.ಶ್ರೀಯಾನ್.....

    ReplyDelete
  11. nimma kathege yaru spoorthi geleya :)

    ReplyDelete
  12. Geleya nanna life nalli naanu nodida ondu nijavaada ghataneya
    sanna ele nanna ee kathege spoorti geleya! thnx :)

    ReplyDelete
  13. Geleya thumba chennagi moodi barthide.. heege.. mundhuvaresu.. ninna baravanigeya kavanayaana...
    shubhavaagali.. ninnee prayathna...:-)

    ReplyDelete
  14. Hema... Thnku so much :)
    illa gelati idaralli baruva hero nu saha kavi annodakke nimage haage anisutte ashe ee kathege ondu nijavaada ghataneya sanna ele ashte spoorti innoo ellannoo nanna kalpane!!

    ReplyDelete
  15. thumba chennagi bartha idhe kathe ...:) next yenu anno suspence!!!! gud going...:))

    ReplyDelete
  16. yavudanne aagali avakasha sikkaga balasikolbeku ...... illandre odedu hoda muttu & kaledu hoda samaya & vyaktha padisalagada Bhavanegalu marali baaradu geleya......... samayakkagada artha saviraviddaru vyartha.........

    Story is nice...... all the best......

    ReplyDelete
  17. ನಿಜ ಮಂಜು ಧನ್ಯವಾದಗಳು!!
    ಕಳೆದು ಹೋದ ಕಾಲದ ನೆನಪುಗಳೇ ನಮ್ಮನ್ನು ತುಂಬಾ ಕಾಡೋದು!
    ಎಷ್ಟೇ ವರುಶಗಳೂ ಕಳೆದರೂ ಆ ನೆನಪುಗಳು ನಮ್ಮ ಹಿಂದೆಯೇ ಬರುತ್ತಲೇ ಇರುತ್ತದೆ!

    ReplyDelete
  18. ಚೆನ್ನಾಗಿ ಬರೆದಿದ್ದೀರಿ.
    ನಿಮ್ಮ ಹನಿಗವನಗಳು ತುಂಬಾ ಇಷ್ಟವಾಯಿತು.
    ಬರೆಯುತ್ತಿರಿ
    ಸ್ವರ್ಣಾ

    ReplyDelete
    Replies
    1. ತುಂಬಾ ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳು ಮತ್ತಷ್ಟು ಬರೆಯು ಸ್ಫೂರ್ತಿ ನೀಡಿದೆ! ಸ್ವರ್ಣಾ !

      Delete
  19. thumba sogasaagide geleya. nimma prayathnakke yashassu sigali endu ashisuttene.

    ReplyDelete
  20. ತುಂಬಾ ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳು ಮತ್ತಷ್ಟು ಬರೆಯು ಸ್ಫೂರ್ತಿ ನೀಡಿದೆ! ಸ್ವರ್ಣಾ !

    ReplyDelete
  21. ತುಂಬು ಹೃದಯದ ಧನ್ಯವಾದಗಳು ಗೆಳತಿ Yashaswini :)

    ReplyDelete
  22. enu sir nim jivanadalondu intha sangathi idra

    one request; nima sangathi name:sent madi

    nima modala kavite yavadu pls sent my profile

    ReplyDelete
    Replies
    1. sir nimma name haaki cmt maadi plz....

      ಇದು ನನ್ನ ಜೀವನದಲ್ಲಿ ನಡೆದ ಒಂದು ನಿಜವಾದ ಘಟನೆಯ
      ಸಣ್ಣ ಎಳೆಯನ್ನು ಇಟ್ಟು!
      ನನ್ನ ಕಲ್ಪನೆಗಳನ್ನ ತುಂಬಿ ಬರೆದಿದ್ದೀನಿ !
      ನಿಮಗೆ ನನ್ನದೇ ಸ್ವಂತ ಕಥೆ ಅನಿಸಿದರೆ ಖುಷಿನೇ ನನಗೆ

      Delete
  23. thumba chennaghidhe prakash...:) ivathina part anthu superb...sakath curiousity agtha idhe,,eagerly waiting fr monday...:)

    ReplyDelete
  24. Ananya Kaushik S8:47 am, March 18, 2012

    Vry Nyc...da...:) olle twist thandhe Story oLage...yu made it vry INTERESTING....:) All d Best....!!!...Prakash Srinivas...:)

    ReplyDelete
  25. sir very good super rock it we will be waiting for next thing great work

    ReplyDelete
  26. sir super rocking continue

    ReplyDelete
  27. ತುಂಬಾ ಸೊಗಸಾಗಿದೆ.. ಪ್ರಕಾಶ್ .. :)
    ಆದರೆ ಒಂದೇ ಸಾರಿ ಓದಿದರೆ ಅಷ್ಟು ಮನಸೆಳೆಯಿತು .. ಇದನ್ನು ಮತ್ತೊಮ್ಮೆ ಬಿಡುವಿನ ಸಮಯದಲ್ಲಿ ಓದಿ ವಿಚಾರ ಮಾಡಿ ಕೆಲವು ಅನಿಸಿಕೆಗಳನ್ನು ನಿಮಗೆ ತಿಳಿಸುವ ಆಲೋಚನೆ ಇದೆ.. :)

    ReplyDelete
    Replies
    1. || ಪ್ರಶಾಂತ್ ಖಟಾವಕರ್ |
      ಧನ್ಯವಾದಗಳು ಸರ್ :)
      ಕಥೆ ಪೂರ್ತಿ ಅದ ಮೇಲೆ ನಾನೇ ನಿಮಗೆ ಒಮ್ಮೆ ತೋರಿಸಿ ನಿಮ್ಮ ಅನಿಸಿಕೆ
      ಕೇಳಬೇಕು ಅಂತ ಇದ್ದೆ ನೀವೂ ಸಹ ಒಳ್ಳೆ ಕಥೆಗಾರರು ಹಾಗಾಗಿ !
      ನಿಮ್ಮ ಅನಿಸಿಕೆ ನನಗೆ ತುಂಬಾ ಮುಖ್ಯ ಸರ್ ..
      ಒಮ್ಮೆ ಎಲ್ಲವನ್ನೂ ಓದಿ ನಿಮ್ಮ ಮಾತನ್ನು ಹೇಳಿ :)
      ವಂದನೆಗಳು !

      Delete
  28. || ಪ್ರಶಾಂತ್ ಖಟಾವಕರ್ |
    ಧನ್ಯವಾದಗಳು ಸರ್ :)
    ಕಥೆ ಪೂರ್ತಿ ಅದ ಮೇಲೆ ನಾನೇ ನಿಮಗೆ ಒಮ್ಮೆ ತೋರಿಸಿ ನಿಮ್ಮ ಅನಿಸಿಕೆ
    ಕೇಳಬೇಕು ಅಂತ ಇದ್ದೆ ನೀವೂ ಸಹ ಒಳ್ಳೆ ಕಥೆಗಾರರು ಹಾಗಾಗಿ !
    ನಿಮ್ಮ ಅನಿಸಿಕೆ ನನಗೆ ತುಂಬಾ ಮುಖ್ಯ ಸರ್ ..
    ಒಮ್ಮೆ ಎಲ್ಲವನ್ನೂ ಓದಿ ನಿಮ್ಮ ಮಾತನ್ನು ಹೇಳಿ :)
    ವಂದನೆಗಳು !

    ReplyDelete
  29. ತುಂಬಾ ಚೆನ್ನಾಗಿ ಬರ್ತಾ ಇದೆ ... :) vry gud...:)ಇಷ್ಟ ಆಯಿತು ..:)

    ReplyDelete
  30. Geleya.. thumba.. chennagi.. henitidiya.. haage.. munduvaresu...:-) good luck...

    ReplyDelete
  31. ತುಂಬಾ ಧನ್ಯವಾದಗಳು ಅಕ್ಕ :)
    ಧನ್ಯವಾದಗಳು ಗೆಳೆಯ ಚಂದ್ರು :)

    ReplyDelete
  32. ನಾನು ಮೊದಲು ಆ ಹುಡುಗನ ಬಗ್ಗೆ ವಿಚಾರಿಸಲು ಶುರು ಮಾಡಿದೆ
    ಕಾರಣ ನೀನು ಹೂವಿನಂತವಳು ಕವನ,
    ನನಗೆ ಗೊತ್ತು ನಿನಗೆ ಒಂದು ಸಣ್ಣ ಮೋಸವಾದರೂ
    ನಿನ್ನ ಕೈಯಲ್ಲಿ ಅದನ್ನು ತಡೆದು ಕೊಳ್ಳುವುದಕ್ಕೆ ಆಗುವುದಿಲ್ಲ !
    eshtu olle bhavane...hagu sahrudayada premi kano neenu...kavana thumba adrushtavanthe...:)

    ReplyDelete
  33. ಥ್ಯಾಂಕ್ಸ್ ಅನನ್ಯ :) ಕವನ adrushtavanthe ಅವಳು ಸಿಗದ ಆ ಹುಡುಗ!

    ReplyDelete
  34. yaradhru obbaraadhru lucky alva....aah hudgan oLLe mansige innobLu oLLe hudgeene sigthaLe biDu dont worry....

    ReplyDelete
  35. ಅವನು ಅಷ್ಟು ಮಾಡಿ ಆ ಕವನಳ ಬದುಕು ಸುಂದರವಾಗಿ ಇದ್ದರೆ ಅಷ್ಟೇ ಸಾಕು!
    ತನ್ನ ಪ್ರೀತಿ ಸಿಗಲಿಲ್ಲ ಅಂದರೂ ಅವಳ ಪ್ರೀತಿಗಾಗಿ ಅಷ್ಟೆಲ್ಲ ಮಾಡ್ತಾ ಇದ್ದಾನೆ!
    ಮುಂದೆ ವಿಧಿಯ ಆಟ ಏನೋ ?!!!

    ReplyDelete
  36. superb n touching ithu ivathina part ... thumba ista aithu prakash...:)

    ReplyDelete
  37. tumba channagide...kathe hodutidare munde henagutto, heni ediyo, yavaga barutto yemba kutuhala tumba barutte. e kathe hodutiddare kannalli niru barutte geleya....nimma payana ege sagali gelaya.....

    ReplyDelete
    Replies
    1. ನಿಮ್ಮ ಮಾತುಗಳು ನಿಜಕ್ಕೂ ಒಂದು ರೀತಿಯ ಸ್ಫೂರ್ತಿ ನೀಡಿದೆ!
      ನಿಮ್ಮ ಹೆಸರು ತಿಳಿಯಲಿಲ್ಲ ಅದರೂ ನಿಮಗೆ ನನ್ನ ವಂಧನೆಗಳು!

      Delete
  38. nange nin poetry thumbaaaaaaa ishta :)

    ReplyDelete
  39. guru nandu same stry..
    sridhar

    ReplyDelete
  40. nice lines.... simply superb

    ReplyDelete
  41. hey ashoooo kushi aytu nanna blog varegooo bandu nodi ninna maatu helidakke :) :)
    thnku :)

    ReplyDelete
  42. gud going prakash...chennaghidhe story,,,adre weeknalli only twice thumba kadme aithu ansathe...:) :)

    ReplyDelete
  43. thnku so much akka :) idu sanna story haagaagi only two times naanu onde time haakbeku anta ide mundays maatra bt nan frnd helidru illa two times best anta so :)

    ReplyDelete
  44. SIR THUMBA THUMBA SUPER CONTINUE........

    ReplyDelete
  45. Raghu Nayak: SIR SUPER CONTINUE IT.............

    ReplyDelete
  46. Replies
    1. Naveen

      tumba channagide geleya....e kathe hodutiddare kutuhala tumba barutte... waiting for next part......

      Delete
  47. waiting for page of 8 ..!

    ReplyDelete
  48. Replies
    1. Matthe matthe odabeku anustha ide geleya

      really superbb

      Delete
    2. Chennagi idhe... idhu bari hudugarige aste alla hudugiyarigu anvayasatthe wish you good luck - Anu

      Delete
  49. ಆತ್ಮೀಯ ಮಿತ್ರ ಪ್ರಕಾಶ್...

    ಬೆಟ್ಟದಿಂದ ಧುಮ್ಮಿಕ್ಕಿ ಬಯಲು ಸೀಮೆಯಲ್ಲಿ ಜುಳು-ಜುಳನೆ ಮಂದಗಮನೆಯಾಗಿ ಹರಿಯುತ್ತಿರುವ ತೊರೆಯಂತೆ
    ಅತ್ಯಂತ ನವಿರಾಗಿ ನಿರೂಪಿಸಿದ್ದೀರಿ, ಯುಗಳ ಜೋಡಿ ಪಕ್ಕದಲ್ಲಿಯೇ ಕುಳಿತು ಪಿಸು-ಮಾತಿನಲ್ಲಿ ಪ್ರೀತಿಯನ್ನು ಪಸರಿಸುವಂತೆ ಅತ್ಯಂತ ಸರಳವಾಗಿ ಭಾವನೆಗಳನ್ನು ಅಕ್ಷರಗಳಿಗೆ ಇಳಿಸಿದ್ದೀರಿ....

    ಅಭಿನಂದನೆಗಳು...

    ReplyDelete
  50. ಸರ್ ತುಂಬು ಹೃದಯದ ಧನ್ಯವಾದಗಳು
    ನಿಮ್ಮ ಮೆಚ್ಚುಗೆಯಾ ನುಡಿಗಳು
    ನಿಜಕ್ಕೂ ಒಳ್ಳೆಯ ಸ್ಫೂರ್ತಿ ನೀಡಿದೆ ಇದು ನನ್ನ ಮೊದಲ
    ಪ್ರಯತ್ನ ನಿಮ್ಮ ಮಾರ್ಗದರ್ಶನ ನನಗೆ ತುಂಬಾ ಅಗತ್ಯ ..

    ReplyDelete
  51. ಇದೊಂದು ದ್ರಶ್ಯ ಕಾವ್ಯ ದಂತಿತ್ತು , ಉತ್ತಮವಾಗಿದೆ ನನ್ನ ಅನಿಸಿಕೆಯಂತೆ ಇದರಲ್ಲಿ ಸ್ವಲ್ಪ ಅನುಭವದ ಲೆಫವಿದೆಯೋ ಅನ್ನಿಸುವಂತಿತ್ತು ----- ಇಲ್ಲದೆ ಇದ್ದರೆ, ಅದೊಂದು ಅದ್ಭುತ ಪ್ರೇಮ ಚಿಂತನೆ ಎಂದಷ್ಟೇ.......... ನಿಮ್ಮ ಮುಂದಿನ ಪುಟದ ನಿರೀಕ್ಷೆಯಲ್ಲಿ

    ReplyDelete
  52. Karthik Prasad
    ನಿಮ್ಮ ಮೆಚ್ಚುಗೆ ಮುತ್ತಿನ ಹಾರವಾಗಿದೆ ...
    ತುಂಬಾ ಧನ್ಯವಾದಗಳು ಸುಂದರವಾಗಿ ವರ್ಣಿಸಿದಕ್ಕೆ
    ನನ್ನ ಕಥೆಯನ್ನು !ವಂಧನೆಗಳು

    ReplyDelete
  53. its realy super continue brother

    ReplyDelete
  54. realy nice brthr,,,, heege tumba kathe baredu dhodda vyakti agbeku brthr ,,,,,,

    ReplyDelete
  55. sharee shetty.........
    thnku soooooooo much putta ninna muddaada maatu tumba hidisitu .......sis...

    ReplyDelete
  56. ಗೆಳಯ ನಿನ್ನ ಕಥೆ ಓದಿದ ಮೇಲೆ ನನ್ನ ಕಣ್ಣು ತೇವ ಆಗಿದ್ದು ಗೊತ್ತಾಗಲೇ ಇಲ್ಲ ಇದು ಕಥೆ ಅಂತ ನಂಬೋದೇ ಸ್ವಲ್ಪ ಕಷ್ಟ.ನಾನು ಅದೇ ಗವಿಗಂಗಧರೆಶ್ವರ ಬೆಟ್ಟದ ಮೇಲೆ ತುಂಬ ದಿನ ನನ್ನ ಪ್ರೀತಿಗೋಸ್ಕರ ಕಾದಿದಿನಿ. ಗೆಳಯ ಪೂರ್ತಿ ಕಥೆ ಮುಗಿದ ಮೇಲೆ ಏಳು ಗೆಳಯ. ನಿನಗೆ ಒಳ್ಳೆ ಭವಿಷ್ಯ ಇದೆ ನೀನು ಎತ್ತರಕ್ಕೆ ಬೆಳಿಯಾ ಬೇಕು ಗೆಳೆಯ ಅದೇ ನನ್ನ ಆಶೆ ಎಲ್ಲಾ ಒಳ್ಳೆಯದಾಗಲಿ ಗೆಳೆಯ.................

    ReplyDelete
    Replies
    1. ನಿಮ್ಮ ನಿರ್ಮಲವಾದ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು ಗೆಳೆಯ!
      ನಿಮ್ಮ ಮಾತುಗಳು ಯಾಕೋ ಮನದೊಳಗಿನ ಒಂದು ಸ್ಪೂರ್ತಿಯಾಗಿದೆ
      ಕಾರಣ ಇದು ಸಾಮಾನ್ಯವಾದ ಒಂದು ಸಣ್ಣ ಕಥೆ ನಿಮ್ಮ ನುಡಿಗಳು
      ನನಗೆ ಮತ್ತಷ್ಟು ಬರೆಯುವ ಸ್ಪೂರ್ತಿಯ ನೀಡಿದೆ! ವಂದನೆಗಳು ...........

      Delete
  57. ರಾಮಚಂದ್ರ ನುಗ್ಗಹಳ್ಳಿ ಕೊಪ್ಪಲು..
    ನಿಮ್ಮ ನಿರ್ಮಲವಾದ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು ಗೆಳೆಯ!
    ನಿಮ್ಮ ಮಾತುಗಳು ಯಾಕೋ ಮನದೊಳಗಿನ ಒಂದು ಸ್ಪೂರ್ತಿಯಾಗಿದೆ
    ಕಾರಣ ಇದು ಸಾಮಾನ್ಯವಾದ ಒಂದು ಸಣ್ಣ ಕಥೆ ನಿಮ್ಮ ನುಡಿಗಳು
    ನನಗೆ ಮತ್ತಷ್ಟು ಬರೆಯುವ ಸ್ಪೂರ್ತಿಯ ನೀಡಿದೆ! ವಂದನೆಗಳು

    ReplyDelete
  58. ivathina part anthu thumba touching ithu prakash...manassige thumba ista aithu...next yenu anno curiosity thumba agtha idhe...

    ReplyDelete
  59. ಕಥೆ ಅದ್ಬುತ
    ಕಥೆಯಲ್ಲಿ ಬರುವ ಕವನಳ ವ್ಯಕ್ತಿತ್ವ ಅದ್ಬುತ
    ಕವನಳನ್ನು ಹಂಬಲಿಸುವ ನಾಯಕ ಅದ್ಬುತ ....

    ReplyDelete
  60. no nice brthr keep it up, heege munduvareyali al the best

    ReplyDelete
  61. Shilpa Shree
    ಈ ಪ್ರೀತಿ ಒಂಥರಾ ಕಚಗುಳಿ.......
    ಯಾರಿಗೆ ಯಾವಾಗ ಎಲ್ಲಿ ಯಾರ ಮೇಲೆ ಹುಟ್ಟುತ್ತೋ ಗೊತ್ತಿಲ್ಲಾ ಆದರೂ ಹುಟ್ಟುತ್ತೇ..
    100 ಕ್ಕೆ ಎಲ್ಲೋ 10% ಜನರಿಗೆ ಈ ಪ್ರೀತಿ ಒಲಿಯುವುದು...
    ಪ್ರೀತಿ ಬಂದಾಗ ಮಗು ತರಹ ಾಗ್ಬಿಟ್ತವಿ.....
    ತದ ನಂಥರ ಗೊತ್ತಾಗೋದು ಒಳಗೆ ಏನೆನೆಲ್ಲಾ ಇದೆ,ಅಂಥಾ ನಿಮ್ಮ ಜೀವನದ ೀ ಸಾಲುಗಳ ಕವನಳ ನೆನಪು ಮಾತ್ರ ನಿಮ್ಮ ಜೊತೆಲಿ ,,,,,
    ಆದರೆ ಕವಿತೆ ಮಾತ್ರ ನಮ್ಮ ಜೊತೆಯಲ್ಲಿ ಗೆಳೆಯರೆ ಪ್ರೀತಿ ಅನ್ನೋ ಮೊದಲ ಸಿಂಚನನೇ ಆಗೇ...ಮರಿಯೊಕ್ಖಾಗಲ್ಲಾ....
    ಬಿಡೋಕು ಆಗಲ್ಲಾ....ತುಂಬಾ ಕುತೂಹಲವಾಗಿದೆ..ಮುಂದಿನ ಸಂಚಿಕೆ ಬೇಗ ಬರಲಿ.........

    ReplyDelete
  62. suni......
    ತುಂಬು ಹೃದಯದ ಧನ್ಯವಾದಗಳು ......

    ReplyDelete
  63. Shilpa Shree .......
    ನಿಮ್ಮ ಮನದಾಳದ ಮಾತಿಗೆ ನನ್ನ ನಮನಗಳು!
    ತುಂಬಾ ಚೆನ್ನಾಗಿ ಹೇಳಿದ್ದಿರ ಪ್ರೀತಿಯ ಬಗ್ಗೆ!

    ReplyDelete
  64. SOWMYASHRI...

    evattina katteyalli tumba feel ede geleya....kavana helida hege evvattu yellara manadalli nivu edira geleya.....nivu nijavaglu lakki person geleya....

    ReplyDelete
  65. ಅವರು realy ನಾಯಕ ಸರ್ ನಿಜವಾದ ಸೂಪರ್ ಕಥೆ ಆ ಸಂದರ್ಭದಲ್ಲಿ ತನ್ನ ಪ್ರೀತಿಯ ಹೇಳಲ್ಪಡುವುದಿಲ್ಲ

    ReplyDelete
  66. Raghu nayak
    ತುಂಬು ಹೃದಯದ ಧನ್ಯವಾದಗಳು ......

    ReplyDelete
  67. ಇನ್ನು ಒಳ್ಳೆ ಕಥೆಗಳು,ಕವಿತೆಗಳು ನಿನ್ನಿಂದ ಹೊರಹೊಮ್ಮಲಿ ಗೆಳಯ

    ReplyDelete
  68. ಸರ್ ನಿಮ್ಮ ಸ್ನೇಹಿತರಿಗೆ ನಿಜವಾಗಿಯೂ ಮಹಾನ್ ಮಾನವ...ಯಾವುದೇ ಪದಗಳನ್ನು ಎರಡು ಅವನ ಬಗ್ಗೆ ಹೇಳಲು realy u make our eyes get wet super story super works

    ReplyDelete
  69. ಪ್ರಕಾಶ್ ಕೊನೆಯ ಪುಟದಲ್ಲಿ ನಿಮ್ಮ ಪ್ರಬುದ್ದತೆ ಅರ್ಥ ವಾಗುತ್ತದೆ , ಪ್ರೀತಿಸುವ ಹೃದಯಗಳಿಗೆ ಸರಿಯಾಗಿ ನಾಟಬಲ್ಲದು ನಿಮ್ಮ ಸಾಲು. ಮನಸ್ಸೊಂದು ಮರ್ಕಟ , ಮನಸ್ಸಿನ ಹಿಡಿತವಿದ್ದರೆ ಈ ಪ್ರೀತಿ ಪ್ರೇಮಗಳ ಹೆಸರಲ್ಲಿ ನಡೆಯುವ ನೋವನ್ನು ತಡೆಯಬಹುದು ಅನ್ನುವುದು ನನ್ನ ನಂಬಿಕೆ ------ ನಿಮ್ಮದೇ ಸ್ಟೈಲ್ ಇದೆಯಲ್ಲ ಅದನ್ನ ಉಳಿಸಿಕೊಳ್ಳಿ ------- ನಿಮ್ಮೊಳಗಿನ ಸಾಹಿತಿಗೆ ಮತ್ತೊಮ್ಮೆ ನಮನ .

    ReplyDelete
  70. ಕಥೆ ತುಂಬಾನೇ ಚೆನ್ನಾಗಿದೆ ..... ಕೊನೆಯ ಪುಟ ತುಂಬಾನೇ ಇಷ್ಟ ಆಯ್ತು ........ ಒಳ್ಳೆಯ ಪ್ರಯತ್ನ ಪತ್ರಿಕಾ ಪ್ರಕಟಣೆಗೆ ಪ್ರಯತ್ನಿಸಿ .......... ಪ್ರತಿಬೆ ಸದಾ ಬೆಲೆ ಇದೆ ......... ಪ್ರೀತಿಲಿ ಸ್ವಲ್ಪ ಸ್ವಾರ್ಥ ಸ್ವಲ್ಪ ನಿಸ್ವಾರ್ಥ ಎರಡು ಇರ್ಬೇಕು ........ ಸ್ವಾರ್ಥ ಜಾಸ್ತಿ ಆದ್ರೆ ನಮ್ಮ ಜೊತೆ ಇರೋರು ದೂರ ಹೋಗ್ತಾರೆ ...... ನಿಸ್ವಾರ್ಥ ಜಾಸ್ತಿ ಆದ್ರೆ ನಮ್ಮ ಜೊತೆ ಇರೋರನ್ನ ಬೇರೆ ಯಾರೋ ಹಾರುಸ್ಕೊಂದೊಗ್ತಾರೆ ..........

    ಮಂಜುಳ ನಾಗರಾಜ್

    ReplyDelete
  71. ರಾಮಚಂದ್ರ ನುಗ್ಗಹಳ್ಳಿ ಕೊಪ್ಪಲು......
    ಧನ್ಯವಾದಗಳು ಗೆಳೆಯ!

    ReplyDelete
  72. Kiran Prasad ..........
    prakash super nana love story kuda hege agidea frd nija ninu helida astu mathu athya geleya ....... novina prathi hanthavanu meeri nithidane mathedndu halldanthe .........
    geleya nanu nina abimani yagideane eentha oleya story helida ninge nana danyavadagalu .....
    mathe yavaga mathodu story barithiya?

    ReplyDelete
  73. karthik.......
    ಗೆಳೆಯ ನಿಮ್ಮ ಮಾತುಗಳು ನಿಜಕೂ ಒಂದು ಖುಷಿಯ ನೀಡಿದೆ
    ನಾನು ಬರೆದ ವಿಷಯವನ್ನು ಸರಿಯಾಗಿ ಅರ್ಥಹಿಸಿದ್ದಿರ ...
    ನಿಮ್ಮ ಪ್ರೀತಿಯ ನುಡಿಗಳಿಗೆ ನನ್ನ ನಮನ ಗೆಳೆಯ!

    ReplyDelete
  74. ಮಂಜು
    ತುಂಬು ಹೃದಯದ ಧನ್ಯವಾದಗಳು ಗೆಳತಿ!
    ನಿಮ್ಮ ಮಾತುಗಳು ನಿಜ ಗೆಳತಿ ...
    ಪ್ರೀತಿಯ ಒಂದು ರೀತಿಯ ಮಾಯೆ!
    ಕೆಲವರಿಗೆ ಕೈಗೆ ಸಿಗದ ಛಾಯೆ!

    ReplyDelete
  75. Kiran Prasad ....
    Thnku Thnku so much ..
    bega mattondu katheyondige baruva prayatna maaduve geleya!

    ReplyDelete
  76. Banu Cool ............
    wat to comment here...!!!
    i just want to say hats off to such a love which is still alive in (some)boys hearts...!!

    ReplyDelete
  77. ಶಿಲ್ಪ ಶ್ರೀ.....
    ಪ್ರೀತಿ ಮದುರ ತ್ಯಾಗ ಅಮರ....
    ಗೆಳೆಯರೇ ನಿಮ್ಮ ಈ ಕತೆಯಲ್ಲಿನ ಒಳ ಭಾವನೆಗಳಿಗೆ ಬೆಲೆ ಕಟ್ಟಕ್ಕೆ ಆಗಲ್ಲಾ...
    ಕಣ್ನಲಿಗಳು ತುಂಬಿ ಬರುತ್ತವೆ..ಕಾಲ ಮಿಂಚಿದೆ ಇರುವುದನ್ನು ಬಿಟ್ಟು ಇಲ್ಲದಿರುವುದರ ಕಡೆ ಸಾಗಿದೆ ಪಯಣ
    ನನ್ನ ಜೊತೆ ಇನ್ಯಾವುದೋ ಪಯಣ ಸಾಗಲೇಬೇಕಾಗಿದೆ. ಸಾಗುವ ದಾರಿಯಲಿ ಸಿಹಿ ನೆನಪುಗಳು ಮಾತ್ರ ನಮ್ಮ ಜೊತೆಯಲಿ
    ಒಟ್ಟಾರೆ ತುಂಬು ಹೃದಯದ ಶುಭಾಷಯಗಳು ನಿಮ್ಮ ಮನದ ಪಿಸುಗುಡುತಿದೆ.........
    ಮತ್ತೇ ಬರಲಿ ಎಂದು ಆಶಿಸುತ್ತೇನೆ....

    ReplyDelete
  78. sowmyashri...


    yenatha helali geleya.....nimma prithina hogalala. ella nimma thyagana hogalala...aantha nirmala vaada prithina henu antha helali...prithiso yella huduga hudugiyarige entha manasu eddare yav prithinu sollodilla geleya....ege nivu ennu hechhu hechhu kathe yanu bareyiri geleya.....endarinda nadru prithige bele barbahudu...geleya....

    ReplyDelete
  79. Tumba chennagide.. nijawada preeti andre ide tane? Supeeeeeeeeeeeeeer

    ReplyDelete
    Replies
    1. ಕತ್ತಲೆಯ ರಾತ್ರಿಗಳಿಗೆ ಗೊತ್ತು ಎಷ್ಟೋ ಹೃದಯಗಳ ಕಳೆದೋದ ಪ್ರೀತಿಯ ವಿಷಯ,
      ಬೆತ್ತಲೆಯ ಕಾಗದಗಳಿಗೆ ತಿಳಿದಿರುವುದು ತಾವು ಹೊತ್ತಿರುವ ಕವಿತೆಯ ಹಿಂದಿನ ವ್ಯಥೆಯ!
      ಜೋಡಿಯಾಗಿರುವ ಭಾವ ಚಿತ್ರಗಳು ಹೇಳಬಲ್ಲದು ಆ ಚಿತ್ರದೊಳಗಿನ ಭಾವನೆಯ!
      ಯಾವುದೇ ಗಡಿಯಾರ ಮತ್ತೆ ತರದು ಬದುಕಿನಲ್ಲಿ ಬಂದ ಆ ಮರೆಯಲಾಗದ ಸಮಯ! ee salugalu tumba chenagide gelaya neev helida mathu nija gelaya preetisidavara naguvannu neeriksisodu ,avara preetige jeevanakke ondu geluvu avara nagu.

      Delete
  80. ಗೆಳೆಯ ಪ್ರಕಾಶ್ ಶ್ರೀನಿವಾಸ ಗೆ ಪ್ರೀತಿಯ ಅಭಿನಂದನೆಗಳು. ಅಧ್ಬುತವಾದ ನಿರೂಪಣೆ ಮನಮುಟ್ಟುವ ಕಥೆ, ಇದು ಖಂಡಿತ ಊಹೆಯಲ್ಲ ನಿಮ್ಮ ಬದುಕಿನ ಒಂದು ಭಾಗವನ್ನು ನಮ್ಮ ಮುಂದಿಟ್ಟಿದ್ದೀರ ಎಂಬುದು, ಕಥೆ ಓದುತ್ತಾ ಓದುತ್ತಾ ಭಾವುಕತೆಯಲ್ಲಿ ತಿಳಿಯುತ್ತದೆ. ನನ್ನ ಕೆವವು ಸಲಹೆಗಳಿವೆ, ದಯವಿಟ್ಟು ಬೇಸರಪಡದಿರಿ,

    ೧. ಫಾಂಟ್ ಇನ್ನು ಚಿಕ್ಕದು ಮಾಡಿ, ೯ ಭಾಗವಾಗಿರೋ ಕಥೆಯನ್ನು ೨ ಭಾಗವಾಗಿ ವಿಂಗಡಿಸಬಹುದಿತ್ತೇನೋ
    ೨. ಈ ಕಥೆಯನ್ನು ಪ್ರಶಾಂತ್ ಜಿ ಹೇಳಿದಂತೆ, ಭಾಗ ಭಾಗವಾಗಿ ಓದುವುದಕ್ಕಿಂತ ಒಂದೇ ಸಮ ಓದಿದಾಗ ಹೆಚ್ಚು ಚೆನ್ನಾಗಿರುತ್ತದೆ
    ೩. ನಿಮ್ಮ ಕಥೆಯ ನಾಯಕನಂತಹ ಪಾತ್ರಗಳು ಈಗಿನ ಕಾಲದಲ್ಲಿ ಸಿನಿಮಾಗಷ್ಟೇ ಸೀಮಿತ
    ೪. ತನ್ನ ಹುಡುಗಿಯನ್ನು ಯಾರಾದ್ರು ಪ್ರೀತಿಸಿದ್ರೆ ಅವನನ್ನು ಕೊಂದಾದ್ರು ತನಗೆ ದಕ್ಕಿಸಿಕೊಳ್ಳಬೇಕು ಎಂಬ ಮನೋಭಾವ ಇತ್ತೀಚಿಗೆ ನಮ್ಮ ಬೆಂಗಳೂರಲ್ಲೇ ಆದ ಡಬ್ಬಲ್ ಮರ್ಡರ್ ಇಂದ ತಿಳಿಯುತ್ತದೆ

    ಏನೇ ಆಗಲಿ ಕಥೆ ತುಂಬಾ ಮುದ್ದಾಗಿದೆ, ಮುಂದುವರೆಸಿ, ಮತ್ತಷ್ಟು ಉತ್ತಮ ಕಥೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ....

    ReplyDelete
  81. ಶಿಲ್ಪ ಶ್ರೀ.....
    ನಿಮ್ಮ ಚಂದದ ಮಾತುಗಳು ಇಷ್ಟ ಆಯಿತು !
    ನಿಮ್ಮ ಪ್ರೀತಿಯ ನೋಟ ಚೆನ್ನಾಗಿದೆ .
    ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು ಗೆಳತಿ!

    ReplyDelete
  82. sowmyashri...
    sure matte kathe bareyakke try maadtini nimma wishesh ge tumbaa thnx :)

    ReplyDelete
  83. ಹೇಮಾ!
    ತುಂಬಾ ಧನ್ಯವಾದಗಳು ಗೆಳತಿ !

    ReplyDelete
  84. ಹೇಳಲು ಪದಗಳೇ ಇಲ್ಲ ಗೆಳೆಯ.."ಅದ್ಭುತ" ಅನ್ನುವುದು ಕೂಡ ಸಣ್ಣ ಪದ ಈ ಪ್ರಯತ್ನಕ್ಕೆ...ಹೆಸರಿಡದ ನಿಮ್ಮ ಕಥೆಯ ನಾಯಕನ ವ್ಯಥೆ ಮನ ಮುಟ್ಟಿತು..ಪ್ರೀತಿ ಗೆಲ್ಲಬೇಕು..ಪ್ರೀತಿಸಿದವರು ಗೆಲ್ಲಬೇಕು..ನಮ್ಮದೇ ಪ್ರೀತಿ ಗೆಲ್ಲಬೇಕು ಅಂತ ಏನು ಇಲ್ಲ..ಅಲ್ಲಿ ಅವನ ಪ್ರಿಯಕರಳ ಪ್ರೀತಿ ಗೆದ್ದಿದ್ದೆ..ಆಗಾಗಿ ಪ್ರೀತಿ ಅಲ್ಲಿ ಜೀವಂತ..ಹೂವಾಗಿ ಅರಳಿದೆ..ಗೆದ್ದಿದ್ದೆ..
    ಆದರೆ ನಮ್ಮ ನಾಯಕನ ನೋವು ಸಹಿಸಲಾರದ್ದು..ಏನು ಮಾಡಲಾಗದು.."ಪ್ರೀತಿ ಮದುರ, ತ್ಯಾಗ ಅಮರ"..ಅದ್ಭುತ ಗೆಳೆಯ..ಮತ್ತಸ್ಟು ಬರೆಯಿರಿ..ಕಣ್ಣು ಒದ್ದೆ ಹಾಗಿದಂತು ಸತ್ಯ..

    ReplyDelete
  85. ಗೆಳೆಯ ಪವನ್!
    ನಿಜಕೂ ನಿಮ್ಮ ಮುಕ್ತ ಮನಸ್ಸಿನ ಸಲಹೆ.ಸೂಚನೆಗಳು ತುಂಬಾ ಹಿಡಿಸಿತು ಗೆಳೆಯ!
    ೧} ಫಾಂಟ್ ಚಿಕ್ಕದು ಮಾಡಿದ್ದೆ ಅದರ ಫೇಸ್ ಬುಕ್ ನಲ್ಲೂ ಇದೆ ರೀತಿಯ ಫಾಂಟ್
    ಇಲ್ಲಿ ಓದುವವರಿಗೆ ಕಣ್ಣಿಗೆ ಹಿತವಾಗಿರಲಿ ಎಂದು ಸ್ವಲ್ಪ ದೊಡ್ಡದು ಮಾಡಿದ್ದು ..
    ಅಂಡ್ ನನ್ನ ಕೆಲವು ವಿಷಯಗಳನ್ನು ತಿಳಿಸಲು ಆ ಪದಗಳಿಗೆ ಬೇರೆ ಬೇರೆ ಬಣ್ಣಗಳನ್ನು ನೀಡಿದೆ!
    ೨) ಮೊದಲು ನನಗೂ ಕಥೆಯನ್ನು ಒಂದೇ ಸಲ ಬರೆದು ಹಾಕೋಣ ಅನಿಸಿತು
    ಆದರೆ ನನ್ನ ಫ್ರೆಂಡ್ ಅನನ್ಯ ಬೇಡ ಕಥೆಯಲ್ಲಿ ಒಳ್ಳೆಯ ಕಾತೂರ ತರಿಸೋ ವಿಷಯಗಳು ಇದೆ ಇದನ್ನು ಸಂಚಿಕೆಯ ರೂಪದಲ್ಲಿ ಪ್ರಕಟಿಸು ಅಂದರು .
    ಅದು ಅಲ್ಲದೆ ನನಗೂ ನನ್ನ ಕಥೆಯನ್ನು ಒಂದೇ ಸಲ ಹೇಳುವುದಕ್ಕಿಂತ ನನ್ನ ಕಥೆಯೊಂದಿಗೆ
    ಓದುಗಾರನ್ನೂ ಕರೆದು ತರುವುದು ಬೇಕಿತ್ತು !
    ೩)ನಿಮ್ಮ ಮಾತು ನಿಜ ಈ ಕಾಲದಲ್ಲಿ ನಿಸ್ವಾರ್ಥ ಪ್ರೀತಿ ಎಲ್ಲ ಸಿನಿಮಗಲ್ಲಿ ಮಾತ್ರ!
    ೪) ಕೊಂದು ಆದರೂ ಸರಿ ಆ ಹುಡುಗಿಯನ್ನ ಪಡೆಯಬೇಕು ಅನ್ನೋ ಮನೋಭಾವ ಜಾಸ್ತಿ ಆಗ್ತಾ ಇದೆ ಈ ಕಾಲದಲ್ಲಿ.
    ಪ್ರೀತಿನೆ ಬಲವಂತ ಮಾಡಿ ಪಡೆಯೋದಲ್ಲ...
    ತಾನಾಗಿ ಬರಬೇಕು ಜೊತೆ ಜೀವಿಸಬೇಕು!

    ನಿಮ್ಮ ಎಲ್ಲ ಮಾತಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಗೆಳೆಯ!
    ನಿಮ್ಮ ಸಲಹೆ,ಸೂಚನೆಗಳು ಸದಾ ಇರಲಿ! ವಂದನೆಗಳು!

    ReplyDelete
  86. S Manu Gowda
    ತುಂಬಾ ಧನ್ಯವಾದಗಳು ಗೆಳೆಯ !
    ನಿಮ್ಮ ಸ್ಫೂರ್ತಿ ತುಂಬುವ ಮಾತಿಗೆ !

    ReplyDelete
  87. ಅದ್ಭುತವಾದ ಪರಿಕಲ್ಪನೆ., ಉತ್ತಮವಾದ ನಿರೂಪಣಾ ಶೈಲಿ.,
    ಮನಮುಟ್ಟುವ ಭಾವ., ತುಂಬಾ ಚೆನ್ನಾಗಿ ವ್ಯಕ್ತವಾಗಿದೆ ಈ
    ನಿಮ್ಮ ಕಥೆಯಲ್ಲಿ..:)
    ನಿಮ್ಮಿಂದ ಇನ್ನಷ್ಟು ಈ ರೀತಿಯಾ ಉತ್ತಮ ಕಥೆಗಳು ಬರಲಿ ಅಣ್ಣಾ..!!:)

    ತಾನು ನೊಂದರೂ ತನ್ನಾ ಪ್ರೀತಿಗಾಗಿ ಮಾಡಿದ ತ್ಯಾಗ ಕಥೆಯಾ ಪ್ರತಿ ಹಂತದಲ್ಲೂ
    ಉತ್ತಮವಾಗಿ ವ್ಯಕ್ತಪಡಿಸಿದ್ದೀರಾ... ಈಗೀನ ದಿನಗಳಲ್ಲಿ ಇಂತಹ ನಿಷ್ಕಲ್ಮಶ ಪ್ರೀತಿಯನ್ನು
    ಕಾಣುವುದೇ ಅಪರೂಪವಾಗಿದೆ..!!:) ತುಂಬಾ ಇಷ್ಟವಾಯಿತು ಅಣ್ಣಾ..:):)

    ReplyDelete
  88. kannada ondu adbutha koduge neevu....nimma sadhaneya haadhige ondu chikka hoo agi shubha haraisuve....all the best bujji

    ReplyDelete
  89. Ananya Kaushik S11:20 pm, April 05, 2012

    hatthu putagaLu oddhidde gothagailla....ashtu haguravaada baravaNige shailiyalli madhuravaada PREMA KATHE na eshtu sundaravaagi bidisiddira...preethi andhre eeh kathe ya hero thara irbeku...very descent lov frm a descent guy...:)!!...prema kaigUdali illa niraashe aagli....yavaglU ondhe eradarallu sukha idhe antha eeh nimma KAVANA NEE NANNAVALE...(NA)..? katheyalli kandubarathe....eegina premigaLige idhondu maadariyaagide....ishtakku prakash ninge hege eeh theme holiyithu...? plzz share dis wid us...:)

    ReplyDelete
  90. ♥`•.¸¸.•´´♥ದೀಪು♥`•.¸¸.•´´♥

    ಪ್ರೀತಿಯ ತಂಗಿಗೆ ಮನದಾಳದ ಧನ್ಯವಾದಗಳು!

    ReplyDelete
  91. Ananya ninage ondu spl thnx :)
    ನಿನ್ನ ಎಲ್ಲ ಮಾತುಗಳೂ ನನಗೆ ತುಂಬಾ ಹಿಡಿಸಿತು ಕಥೆಯ ಒಳ ಅರ್ಥವನ್ನು ಚೆನ್ನಾಗಿ ಹೇಳಿದೆ!
    ನನ್ನ ಬದುಕಿನಲ್ಲಿ ನಡೆದ ಒಂದು ಸಣ್ಣ ಘಟನೆ ಈ ಕಥೆ ಬರೆಯಲು ಸ್ಫೂರ್ತಿ ಆಗಿದ್ದು!
    ಒಂದು ನಿಜವಾದ ಪ್ರೀತಿ ಅಂದರೆ ನಾವು ಪ್ರೀತಿಸುವವರ ಸುಖವನ್ನು ಮಾತ್ರ ಬಯಸೋದು ಅಂತ ಹೇಳೋ ಒಂದು ಸಣ್ಣ ಪ್ರಯತ್ನ!
    ನಿನ್ನ ಎಲ್ಲ ರೀತಿಯ ಸಲಹೆ, ಸೂಚನೆಗಳಿಗೆ ನನ್ನ ವಂದನೆಗಳು ಅನನ್ಯ!

    ReplyDelete
  92. Anitha Ritvikgowda ...........
    prakash neevu nimma modala prayatnadalle geddidira...
    tumba chennagide..
    preetiya manassugala vijayada maale nimage seride..
    superbbbbb..
    ondu kshana manassige tumba novaytu..
    avana preeti avanige sigalilla anthaa..
    adre avana preeti avanalle erovaaga matteke bejaru... super..

    ReplyDelete
  93. ಒಂದು ಪ್ರೀತಿಯ, ಪ್ರೀತಿಗಾಗಿ ಮಾಡಿದ ತ್ಯಾಗದ ಕಥಾ ವಸ್ತುವನ್ನು ಕವನಗಳಲ್ಲೇ ಎಳೆ ಎಳೆಯಾಗಿ ಬಿಡಿಸಿ ಕಥೆ ಹೊಸೆದ ಕಲೆಗಾರ ... ಪ್ರಕಾಶ್ ಶ್ರೀನಿವಾಸ್ ರಿಗೆ.

    ನನ್ನ ಮನದ ಅಸ್ಟು ಮಾತುಗಳನ್ನು ಹಲವಾರು ಮಿತ್ರರು ಮೊದಲೇ ಮೂಡಿಸಿದ್ದಾರೆ... ನಿಮ್ಮೀ ಕಥೆಯನ್ನು ಒಟ್ಟು ಮೊತ್ತವಾಗೆ ಒಮ್ಮೆಲೇ ಓದಬೇಕೆಂಬ ಉಮ್ಮೇದಿಯಿ೦ದ
    ನನ್ನನ್ನೇ ನಾ ಹತ್ತಿಕ್ಕಿಕೊಂಡು ಸುಮ್ಮನಿದ್ದೆ.

    ಸುಲಭ ಪದಗಳನ್ನೇ ಆಯ್ಕೆ ಮಾಡಿ ಸಾಲು ಸಾಲುಗಳಿಗೆ ಜೀವ ಕೊಟ್ಟು ಓದುಗರ ಮನಸೆಳೆವ ನಿಮೀ ಹತ್ತು ಪುಟಗಳು ಅಮೋಘ.
    "
    ನನ್ನ ಪ್ರೀತಿಯನ್ನು ಮಗುವಿನ ರೀತಿಯಲ್ಲಿ ನನ್ನ ಮನಸ್ಸಿನಲ್ಲಿ ಹೊತ್ತಿದ್ದೇನೆ
    ಆ ಮಗು ಹೊರಬರುವ ಮೊದಲೇ ಮಣ್ಣಿನಲ್ಲಿ ಹೂತಿದ್ದೇನೆ
    ಕಂಡ ಕನಸುಗಳನ್ನು ನಿನ್ನ ಮುಂದೆ ಹೇಳಲಾಗದೆ ಸೋತಿದ್ದೇನೆ !
    ****
    ಕಣ್ಣುಗಳಲ್ಲಿ ಕವಿತೆ ಬರಲಿಲ್ಲ ಕೈ ಬೆರಳ ಹಿಡಿದು
    ನಾವು ನಡೆಯಲಿಲ್ಲ ಹೃದಯವೆಂಬ ಕಾಗದದ ಮೇಲೆ
    ನನ್ನ ಪ್ರೀತಿ ಹಾಗೆ ಅಕ್ಷರವಾಗಿ ಉಳಿದು ಬಿಟ್ಟಿತ್ತು..!

    ಎಷ್ಟೋ ಹುಡುಗ ಹುಡುಗಿಯರ ಮನದ ಅಳಲು ಇವು ಶ್ರೀನಿವಾಸ್, ಇಂದಿಗೂ ಹೇಳಲೂ ಆಗದೆ ಸುಮ್ಮನಿರಲೂ ಆಗದೆ ಒಳಗೊಳಗೇ ನರಳುತಿರುವುದು ಹಲವರ ಗಮನಕ್ಕೆ ಬರುವುದೇ ಇಲ್ಲ.. ಹೀಗೆ ಹೇಳುತ್ತಾ ಹೊರಟರೆ ಒಂದೊದು ಪುಟದಲ್ಲೂ ಹಲವಾರು ಮನಸೆಳೆವ ವಾಕ್ಯಗಳು ಸಿಗುತ್ತವೆ.

    ಒಂದಲ್ಲ ಒಂದೆಡೆ ಈ ಕಥೆಯ ಹೆಸರೇ ಇಲ್ಲದ ನಾಯಕನಾಗೋ. ನಿನ್ನಿoದ ಹೆಸರು ಪಡೆದ ನಾಯಕಿಯಾಗೋ, ಕಥೆಗೆ ಪೂರಕವಾಗಿ ಆಕಸ್ಮಿಕವಾಗಿ ಬಂದು ಹೋಗೋ ಡಾ.ರಾಹುಲ ನಾಗೋ, ಹರ್ಷನಾಗೋ ಅಥವಾ ಸುರೇಶನಾಗೋ ಓದುಗ ತನ್ನನ್ನು ತಾನು ಕಲ್ಪಿಸಿಕೊಲ್ಲುತ್ತಾನೆ " ಪ್ರೀತಿಯ ಮಳೆ ಹನಿಯೇ ಎಲ್ಲಿ ಬಿದ್ದೆ ನೀನು ? ಕಣ್ಣಲಿ ಕಾಣುವ ಮುನ್ನ ಮಣ್ಣಲಿ ಮರೆಯಾದೆ" ಅಂದುಕೊಳುತ್ತಾ.

    ಮತ್ತೊಂದಷ್ಟು ಓದುಗರ ತಲೆದೂಗಿಸೋ ಕವನಗಳು ನಿನ್ನ ಮನದಲ್ಲಿ ಅದಿನ್ನೆಷ್ಟು ಅಡಗಿದೆಯೋ ಯಾರು ಬಲ್ಲರು ? ಹೊಸೆಯುತ್ತಲೇ ಇರು ದಿನಕೊಂದಿಷ್ಟು ಹೊಸಕವನ ಕಥೆಗಳ ನನಗಾಗಿ, ನನ್ನಂಥ ಎಣಿಸಲಾಗದ ನಿನ್ನ ಅಭಿಮಾನಿಗಳಿಗಾಗಿ....

    ಶುಭಾಕಾಮನೆಗಳೊಂದಿಗೆ
    ನಂದಕುಮಾರ್.ಕೆ.ವಿ.

    ReplyDelete
  94. Nanda Kumar ಸರ್!
    ನಿಮ್ಮ ಮಾತುಗಳನ್ನು ನೋಡಿ ನನಗೆ ಏನು ಹೇಳಬೇಕು ಅಂತಾನೆ ಗೊತ್ತಾಗುತ್ತಿಲ್ಲ ,
    ನನ್ನ ಒಂದು ಸಾಮಾನ್ಯವಾದ ಪ್ರಯತ್ನವನ್ನು
    ನೀವು ಮೆಚ್ಚಿದ ರೀತಿಯ ನಿಜಕ್ಕೂ ಒಂದು ರೀತಿಯ ಹೊಸದೊಂದು ಸ್ಪೂರ್ತಿಯ ನೀಡಿದೆ!
    ನಮ್ಮನ್ನು ನಾವೇ ಕವಿ ಎಂದು ಒಂದು ಬೇಲಿ ಹಾಕಿಕೊಂಡು ಇರಬಾರದು ಅಂತ,
    ನಾನು ಲೇಖನ,ಕಥೆಯ ಕಡೆಗೂ ಗಮನ ಕೊಡುತ್ತ ಇದ್ದೇನೆ!
    ಮೊದಲು ಇದನ್ನು ಬರೆದು ಪ್ರಕಟಿಸಲು ಭಯ ಪಟ್ಟು ಸ್ವಲ್ಪ ದಿನಗಳು ಅದ ಮೇಲೆ ಇದನ್ನು ಪ್ರಕಟಿಸಿದೆ ....
    ಜನ ಹೇಗೆ ಸ್ವಿಕರಿಸುತ್ತಾರೋ ಎಂದು ಆದರೆ ..
    ನಿಮ್ಮೆಲ್ಲರ ಮೆಚ್ಚುಗೆ, ಸಲಹೆ ,ಸೂಚನೆಗಳು ಕೇಳಿದ ಮೇಲೆ
    ಮನಸಿಗೆ ಸಮಾದಾನವಾಗಿದೆ!
    ಬದುಕಿನಲ್ಲಿ ನಡೆದ ಒಂದು ಸಣ್ಣ ಘತೆಯನ್ನು ಕಥೆಯಲ್ಲಿ ತರುವ ಒಂದು ಪ್ರಯತ್ನ .
    ಇಂತಹ ಒಳ್ಳೆಯ ಪ್ರೇಮ ಕಥೆಯನ್ನು
    ಒಂದು ನಿಜವಾದ ಪ್ರೀತಿಯನ್ನು ಹೇಳಬೇಕು ಎಂದು ನಿರ್ಧರಿಸಿದೆ,
    ತುಂಬಾ ಕಥೆಗಳನ್ನು ಓದದ ಕಾರಣ ನನ್ನದೇ ಶೈಲಿಯಲ್ಲಿ ಬರೆದೆ.
    ಕಥೆಯೊಳಗೆ ಸಣ್ಣ ಸಣ್ಣ ಕವನಗಳನ್ನು ಪೋಣಿಸುತ್ತ ಹೋದೆ
    ಆ ಕಥೆಗೆ ಹೊಂದುವ ಹಾಗೆ!
    ನನ್ನ ಕಥೆಯೊಂದಿಗೆ ಓದುಗರೂ ಪ್ರಯಾಣಿಸಿದ್ದು ನನಗೆ ಖುಷಿಯಾಯಿತು..
    ಪ್ರತಿ ಪುಟವನ್ನೂ ಓದಿ ಅಭಿಪ್ರಾಯ ಹೇಳುತ್ತಾ ನನ್ನ ತಿಂದುತ್ತ ಬಂದರು ..
    ನಿಮ್ಮ ಅಭಿಪ್ರಾಯ ಏನೋ ಒಂದು ಸ್ಪೂರ್ತಿಯಾಗಿದೆ ಮನಸಿಗೆ
    ತುಂಬಾ ಸಂತೋಷವಾಯಿತು ನೀವು ನನ್ನ ಕಥೆಯನ್ನು ಪೂರ್ತಿ ಓದಿ
    ನಿಮ್ಮ ಅಮೂಲ್ಯವಾದ ಮಾತುಗಳನ್ನು ಹೇಳಿದಕ್ಕೆ ..
    ನಿಮ್ಮ ಸ್ನೇಹಕ್ಕೆ ಸದಾ ಋಣಿ .
    ನಿಮ್ಮ ಪ್ರೀತಿಯ -ಪ್ರಕಾಶ್ ಶ್ರೀನಿವಾಸ್

    ReplyDelete
  95. ನೈಸ್ ಗೆಳೆಯ ಕಥೆ ತುಂಬಾ ಭಾವುಕತೆಗೆ ಎಳೆದೊಯ್ಯಿತು. ಒಂದೊಂದು ಸಮಯ ಈ ಮೇಲಿನ ಅಸಹಾಯಕ ಹುಡುಗನ ಪಾತ್ರದಲ್ಲಿ ಕೆಲವು ಸನ್ನಿವೇಶಗಳು ನನ್ನ ಬದುಕಿನಲ್ಲೂ ಹಾದುಹೋಗುತ್ತವೆ. ಎನಿವೇ ಎಲ್ಲೋ ಒಂದು ಕಡೆ ಅವರು ಖುಷಿಯಾಗಿದ್ದರೆ ಸಾಕು ಎನ್ನುವಂತ ಹಂಬಲಕ್ಕೆ ಕಟ್ಟುಬೀಳಬೇಕು ಧನ್ಯವಾದಗಳು...

    ReplyDelete
    Replies
    1. ತುಂಬಾ ಧನ್ಯವಾದಗಳು ಗೆಳೆಯ...................

      Delete
  96. Sunil Kumar....
    thumba adbuthavaagi mudi bandhide ,,
    kannige kattida haagide,,
    aadare katheyannu nivu kevala hero angle nindha nodiddira ,,,
    hi bavanegalanu vyakthapadiiddire innu chennagi iruttittu ,,
    antha nanna anisike ,,, but finally it was a drushya - kavya ...
    super,, thanks 4 the stopry,,, book aagi publish madabahudu

    ReplyDelete
  97. ನಿಮ್ಮ ಕಥೆ ತುಂಬ ಮನ ಮುಟ್ಟಿದೆ ಪ್ರಕಾಶ್ ಅವನ ಜೀವನದಲ್ಲಿ ಕೊನೆಗೂ ಕವನ ಬರಲೇ ಇಲ್ಲ .........ಅದು ತುಂಬ ಬೆಜಾರ ಆಯಿತು ......ಆದರೆ ಕಥೆಗೆ ತಿರುವಿನಂತೆ ಕೊನೆಯ ಭಾಗ ಕಥೆಗೆ ಆಸಕ್ತಿ ಕೊಟ್ಟಿದೆ .......... ಅವನ ಪ್ರೀತಿ ಮುಖದಲ್ಲಿ ಸದಾ ನಗು ತುಂಬಿರಲಿ
    ನಿಮ್ಮ ಮೊದಲ ಕಥೆ ಯಶಸ್ವೀ ಪ್ರಕಾಶ ಇನ್ನು ಮುಂದೆ ಬೆರೆ ಬೆರೆ ವಿಷಯಗಳ ಬಗ್ಗೆ ಕಥೆ ಬರೆಯರಿ ನಿಮ್ಮ ಮುಂದಿನ ಕಥೆಗಾಗಿ ಕಯುತಿರುತ್ತೆನೆ
    ಶುಭಾವಗಲಿ , ಧನ್ಯವಾದಗಳು

    ReplyDelete
  98. ಇನ್ನು ಹೆಚ್ಚು ವಿಮರ್ಶಿಸುವ ಬಹಳ ಇಚ್ಚಿ ಇತ್ತು ಆದರೆ ಸಮಯದ ಅಭಾವ ನೋಡೋಣ ಸಮಯ ಸಿಕ್ಕಾಗ ಬರೆಯುತ್ತೇನೆ

    ReplyDelete
  99. nice story bro ...:) but happy ending agidre andre kavana avnige sikkidre manassige innu khushi sigtha ithu,,,adre avna true love ge idhe correct ending ansathe...

    totally neevu barediruva reethi yella thumba chennagi bandhidhe...idannu aadastu bega publish madi...:)

    wishing u all the best...

    ReplyDelete
  100. Sunil Kumar..
    thnku thnku soo much sunil..
    nimma haage film fiel nalli irore nanna katheyanna mecchiddu nanage tumbaa kushi aguttide ...

    ReplyDelete
  101. ನೂರು ಭಾವಗಳ ಒಂದು ಬಿಂಧು ಸಂಜು......
    ನಿಮ್ಮ ವಿಮರ್ಶಗೆ ತುಂಬು ಹೃದಯದ ಧನ್ಯವಾದಗಳು ಗೆಳೆಯ!
    ನಿಮ್ಮ ಸಮಯ ಕೊಟ್ಟು ನಿಮ್ಮ ಅಮೂಲ್ಯವಾದ ನುಡಿಗಳಿಗೆ ನನ್ನ ಮನದಾಳದ ನಮನಗಳು!

    ReplyDelete
  102. ashakka...
    thnku soooooooo much akka :)
    nivu evry page gu comment maadi nimma maatugalanna share maadiddu nijakkoo nanage tumba santosha aytu idanna post maadakkoo modalu nimma spoortiya maatugalanna kelida meleye nanage dahirya bandiddu .....nimma preeti sadaa irali akka :)

    ReplyDelete
  103. Tumba chennagidhe prakashavre , bhaavuka naadhenu naa nimma manadhaaladhi baredha katheyannu odhi , tumba chennagidhe. Ige sadhaa olleya kathegallanna bareyiri, All the best :)

    ReplyDelete
  104. tumbaa dhanyavaadagalu geleya deepak nimma maatugalu kushiya needide thnku so much :)

    ReplyDelete
  105. baraha tumbaa channagide praakash
    jeevana ella majalugalu tegedittiddeeya...ellavannu samatattagi nibhaayisuva kale maatra sojiga..
    innu bhejaan kathegalu horage barali ninninda
    naanu ninna kaavyada abhimaani

    ReplyDelete
  106. ವಿಭಿನ್ನ ಧಾಟಿಯಲ್ಲಿ ಕವನಾಳ ವ್ಯಥೆಯನ್ನು ಪ್ರಸ್ತುತ ಪಡಿಸಿದ್ದೀರಿ. ಓದುಗನಿಗೆ ತಾಳ್ಮೆ ಬೇಕಾಗುತ್ತದೆ ಇಡೀಯ ಕಥೆಯನ್ನು ಅರಗಿಸಿಕೊಳ್ಳಲು. ಕೆಲವೊಂದು ಪುಟಗಳಲ್ಲಿ ಅತೀವ ಆಂಗ್ಲ ಪದಗಳ ಬಳಕೆ ಸ್ವಲ್ಪ ಮುಜುಗರಕ್ಕೆ ಒಳಪಡಿಸುತ್ತದೆ. ಆದರೆ ಭಾವಗಳು ಮೆರೆದು ನಿಲ್ಲುತ್ತವೆ. ನಿರೂಪಣೆಯಲ್ಲಿ ಪದಗಳ ಪುನಾರವರ್ತನೆಯಾಗದಿರಲಿ (ಸಲಹೆ ಅಷ್ಟೇ-ಕ್ಷಮೆಯಿರಲಿ). ಪ್ರಯತ್ನ ಮೆಚ್ಚಬೇಕಾದದ್ದೆ. ಶುಭವಾಗಲಿ ಪ್ರಕಾಶ್. ಮುಂದಿನ ಕಥೆಗಳು ಇನ್ನಷ್ಟು ಸುಲಲಿತವಾಗಿ ಹೊರಹೊಮ್ಮಲಿ.

    ReplyDelete
  107. ಪುಷ್ಪರಾಜ್ ಚೌಟ...........
    ನಿಮ್ಮ ಅಮೂಲ್ಯವಾದ ಅಭಿಪ್ರಾಯಕ್ಕೆ ತುಂಬಾ ಧನ್ಯವಾಗಳು ಸರ್ !
    ನೀವು ಕ್ಷಮೆ ಕೇಳಬೇಡಿ ಸರ್!
    ನಿಮ್ಮ ಸಲಹೆ ಸೂಚನೆಗಳು ನನಗೆ ಸದಾ ಬೇಕು !

    ReplyDelete
  108. very very....super sir....
    kavana oduthidathe kannali neeru,adaru ending nali keeru nagu...preethi madura theyga ammara....!i like it...
    'best of luck'; mondina kavana ennu soogasagiraliy........

    ReplyDelete
  109. shrinivas shri:
    super prakash, mathe bartha illa yen helbeku antha , nivu nijakku great prakash..

    ReplyDelete
  110. tumba chennagide edu modala prayathna na anistide u r a good writer.all d best

    ReplyDelete
  111. kavya g rai!
    hi nim luv story odide but nange nan prithina bitkodoke ishta illa,
    hegadru sari padkobeku anno hata nandu hegu
    avna opsidini adre ege mathe dura hogtidane..
    vapas barodu yavaga antha gottilla eshtu varsha
    adru nanu avanigoskara kaithini...
    nimma modala prayathna thumba
    chennagide adu odida mele nivinnu
    luv story na artha m,adkondu mansinda
    feel agi baribeku antha heloke
    ishta padtini kathe chennagide.... :D

    ReplyDelete
  112. Thnku so much kavya!
    ಪ್ರೀತಿಯ ಹಾಗೆ ಗೆಳತಿ ಅದು ಒಬ್ಬೊಬ್ಬರ ಭಾವನೆಯಲ್ಲಿ ಒಂದೊಂದು ರೀತಿ!

    ReplyDelete
  113. Really Nice and awesome story !!!!

    ReplyDelete
  114. Renuka:
    awesome story Prakash really liked !!!

    ReplyDelete
  115. really very very nice story,,,, manasige muttuvantaha mathugalu,,,,tumbba channgeidhe,,,,,
    deepa

    ReplyDelete
  116. Prakash, Good Write Up:)- Bhagya

    ReplyDelete
  117. awesome kathe pa superrr :)

    ReplyDelete
  118. Modala yatna heege adre munde hodante hege antha ???

    Thumbaa chenagittu ...mana mutto maatugalu :) aa kavana thumbaane adrustavante ...

    nice write up!!!

    ReplyDelete
  119. No words Prakash Srinivas avare really gud story bt konegu namma katheya nayakanige aavana kavana siguvudilla annode besarada sangathi

    ReplyDelete
  120. thumba channagide idannu nodida mele nange thumba novagta ide yakandre nanu preethiyannu nambi mosa hodavalu

    ReplyDelete
  121. ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು ಗೆಳೆಯರೇ!

    ReplyDelete
    Replies
    1. really ur awesome writer really heart touching story.. :)

      Delete
  122. Kann than thaaane oddhe aythu :(

    ReplyDelete
  123. ಪ್ರಕಾಶ್, ನಿಜ ನೀವು ಹೇಳುವಂತೆ... ಪ್ರೀತಿಯಲ್ಲಿ ಪ್ರೀತಿಸಿದವರಿಗೆ ನಗು ಕೊಡುವುದು ಮುಖ್ಯ.... ಆಗ್ತಿಲ್ಲ... ಕಥೆ ಓದಿ ಮನದಲ್ಲಿ ಮೂಡಿದ ಮಾತುಗಳ್ಯಾವೂ ಹೊರ ಬರುತ್ತಿಲ್ಲ.... ಅಳ್ತಿದೀನಿ ಯಾಕೆ ಅಂತ ಗೊತ್ತಿಲ್ಲ.... ನಿಮ್ಮ ವ್ಯಕ್ತಿತ್ವಕ್ಕೆ ಒಂದು ಸಲಾಮ್....no words

    ReplyDelete
  124. ಎಲ್ಲರಿಗೂ ಪ್ರೀತಿಯ ಧನ್ಯವಾದಗಳು!

    ReplyDelete
  125. ನಿಮ್ಮ ಪ್ರೀತಿಯ ನಿವೇದನೆಯು "ಪ್ರಕಾಶಿ"ಸಿತು..."ಕವನ"ದ ರೂಪದಲ್ಲಿ....
    "ಹರ್ಷ"ನ ಜೀವನದಲ್ಲಿ... ನಿಮ್ಮ ಪ್ರೀತಿ "ಕವನ"ವಾಯಿತು...
    ನಮಗೂ ಚೂರು-ಪಾರು... ನೆನೇಪಾಯಿತು... ನಾವೂ ಪ್ರೀತಿ ಮಾಡಬೇಕೆನ್ನುತ್ತಿದ್ದ ಘಳಿಗೆ.

    ReplyDelete
  126. Fentastic sir

    ReplyDelete
  127. ನಾಗರಾಜ್ ಕಾಂಬಳೆ1:26 pm, May 19, 2015

    ಚೆನ್ನಾಗಿದಾಳೆ ಸರ್ ನಿಮ್ಮ ಕವನ.. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ..

    ReplyDelete
  128. ಪ್ರೀತಿಯಿಂದ ಮೆಚ್ಚಿಗೆ ಸೂಚಿಸಿದ ಎಲ್ಲರಿಗೂ ನನ್ನ ವಂದನೆಗಳು...

    ReplyDelete
  129. ಕವಿಗಳೇ.... ಕಣ್ಣೀರು ಬಂತು ರೀ ನಿಮ್ಮ ಈ ಕಥೆ ಓದಿ. ಕವನ ಹೇಳಿದ ಮಾತು ಈಗ ಸತ್ಯವೇ ಆಗಿದೆ.. ನೀವು ನಮ್ಮೆಲ್ಲರ ಮನದಾಳದ ಮೆಚ್ಚಿನ ಸ್ನೇಹಿತರಾಗಿರುವಿರಿ...ಕಾಲಕ್ಕೆ ತಕ್ಕಂತೆ ಎಲ್ಲರ ಜೀವನದಲ್ಲಿ ಕೆಲ ಘಟನೆಗಳು ನಡೆಯುತ್ತಿರುತ್ತವೆ, ಒಮ್ಮೊಮ್ಮೆ ತೀರಾ ಘೋರವಾಗಿ ನೋವನ್ನುಂಟು ಮಾಡುತ್ತದೆ.ಜೀವನವೆಂದರೆ ಹೀಗೇನೇ ಏನೂ���� ನಿಮಗೆ ಒಳ್ಳೆಯದಾಗಲಿ

    ReplyDelete