Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday, 12 February 2012

ನಿನ್ನ ನೆನಪು ಕವನ!


7 comments:

  1. ‎(ನಿನ್ನ ನೆನಪು ಕವನ )
    ಮೋಡ ಕವಿದಿದೆ ಗೆಳತಿ
    ನೆನಪಿದೆಯ ನಿನಗೆ ,
    ಎಲ್ಲಿ ಮಳೆ ಬಂದು ಬಿಡುತ್ತದೋ ಎಂದು
    ನಮ್ಮ ಮನೆಯಲ್ಲೇ ಇರುತ್ತಿದ್ದೆ !
    ನೀ ನನ್ನ ಜೊತೆ ಇರಲೆಂದೇ ಮಳೆಯೂ ಸಹ
    ಬಿಟ್ಟು ಬಿಟ್ಟು ಬರುತ್ತಿತ್ತು
    ಮಣ್ಣಿನ ವಾಸನೆ ..
    ಹೇಳಲಾಗದ ಕಲ್ಪನೆ!
    ನಿನ್ನ ಬಳಿ ಇದ್ದ ಪುಸ್ತಕದಿಂದ
    ಹಾಳೆಗಳನ್ನು ಹರಿದು
    ಅದರ ಮೇಲೆ ನಿನ್ನ ನನ್ನ ಹೆಸರ ಬರೆದು
    ಯಾರು ಗೆಲ್ಲುತ್ತಾರೆ ನೋಡು ಎಂದು
    ದೋಣಿ ಮಾಡಿ ಬಿಟ್ಟು
    ನಲಿಯುತ್ತಿದ್ದೆಯಲ್ಲ ಗೆಳತಿ
    ಮಗುವಿನ ರೀತಿ !
    by ಪ್ರಕಾಶ್ ಶ್ರೀನಿವಾಸ್

    ಇದನ್ನು ಬರೆದಿರುವ ದಿನಾಂಕ 11/2/2012
    http://www.facebook.com/prakashsrinivaas/posts/345063612193829

    ReplyDelete
  2. ಮೈ ತೋಯ್ಯದೆ ಮಳೆಯಲಿ ಮೀಯುವ ಅನುಭವವೆಂದರೆ ನೆನಪುಗಳು. ಸುಂದರ ಸಾಲುಗಳು

    ReplyDelete
  3. ಸೂಪರ್ .ಇಷ್ಟ್ ದಿನ ಈ ಬ್ಲಾಗ್ ನಾನ್ ನೋಡಲೇ ಇಲ್ಲಾ ಒಳ್ಳೇ ಕವನಗಳು ಇನ್ನು ಮಿಸ್ ಮಾಡ್ದೇ ನೋಡ್ತೆ .ಪ್ರಕಾಶ್

    ReplyDelete
  4. ತುಂಬು ಹೃದಯದ ಧನ್ಯವಾಗಳು ಗೆಳೆಯರೇ :)

    ReplyDelete
  5. ಬಾಲ್ಯದ ನೆನಪಿಗೆ ಯೌವ್ವನದ ರಂಗು... ಮನದಲ್ಲಿ ಪ್ರೀತಿಯ ಗುಂಗು.. ಜೊತೆಗೆ ಮಳೆಯ ಮೆರಗು... ಚೆನ್ನಾಗಿದೆ... (y)

    ReplyDelete