Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday 23 June 2020

ಚೆ ಎನ್ನುವ ಕ್ರಾಂತಿಯ ಕಿಡಿ....

'ಚೆಎಂದು ಕರೆಯುವ ಚೆಗುವಾರ..
-----------------
ನಾನು ಮೊದಲಿಗೆ ಆತನ ಮುಖವನ್ನು ನೋಡಿದ್ದು, ಟಿಶರ್ಟ್ಹ್ಯಾಟ್ಕರ್ಚಿಫ್ಸ್ಟಿಕರ್ಹೀಗೆ ಅನೇಕ ರೀತಿಯಲ್ಲಿ


ಆತನದು ಚಿರಪರಿಚಿತ ಮುಖಮೊದಲಿಗೆ ನಾನು ಆತನು ವಿದೇಶಿ ಹಾಡುಗರನೇನೋ
ಎಂದೇ ಭಾವಿಸಿದ್ದೆಕಾರಣ ರಾಕ್ ಸ್ಟಾರ್ಸ್ ಗಳಾದ ಬಾಬ್ ಮಾರ್ಲೇ, ಮೈಕಲ್ ಜಾಕ್ಸನ್ ನ ಭಾವಚಿತ್ರಗಳನ್ನು ಅಚ್ಚಾಗಿಸಿಕೊಂಡು ತಿರುಗುವ ಅಭಿಮಾನಿಗಳನ್ನು ನೋಡಿದ್ದೇ. ನಂತರವಷ್ಟೇ ತಿಳಿದಿದ್ದು ಆತ ಕ್ರಾಂತಿಕಾರಿಯ ರಾಕ್ ಸ್ಟಾರ್ ಎಂದು. ಆತನ ಬಗ್ಗೆ ನನ್ನೊಳಗಿನ ಒಂದು ಪ್ರಶ್ನೆಗೆ ಹುಡುಕಾಡಿದಾಗಲೇ ಹಲವಾರು ಆಶ್ಚರ್ಯಗಳ ಸರಮಾಲೆಯೇ ಕಣ್ಣ ಮುಂದೆ ಸಿಕ್ಕಿತುನಿಜಕ್ಕೂ ಹೀಗೂ ಒಬ್ಬ ಕ್ರಾಂತಿಕಾರಿಯನ್ನು ಜಗತ್ತು ಆತನಿಗೂ ಹಿಂದೆಯೇ ಕಂಡಿದೆಯೇ?


ಮುಂದೆ ಎಂದಾದರೂ ಕಾಣಲು ಸಾಧ್ಯವೇಎನ್ನುವ ಪ್ರಶ್ನೆ ಹುಟ್ಟಿಕೊಂಡಿತುನಮಗೇನು ಕ್ರಾಂತಿಕಾರಿಗಳು ಹೊಸಬರಲ್ಲಾ, ಜಗತ್ತಿನಾದ್ಯಂತ ಅನೇಕ ದೇಶದಲ್ಲಿ ಕ್ರಾಂತಿಕಾರಿಗಳು ಕಾಣ ಸಿಗುತ್ತಾರೆ. ನಮ್ಮದೇ ದೇಶ
ವಿದೇಶಿಯರ ಕೈಯಲ್ಲಿ ಬಂಧಿಯಾಗಿದ್ದಾಗನಮ್ಮಲ್ಲೇ ಚಿಗುರು ಮೀಸೆಯ ಕುಡಿಗಳು,
ಮನಮಿಡಿದು ಅಕಾಡಕ್ಕೆ ಇಳಿದಿವೆ. ಹೀಗೆ ಜಗತ್ತಿನ ನಾನಾ ಕಡೆಯೂ ಕ್ರಾಂತಿಕಾರಿಗಳು ಹುಟ್ಟಿಕೊಂಡುಸಾಧಿಸಿದ್ದಾರೆಈಗಲೂ ಸಾಧಿಸುತ್ತಾ ಇದ್ದಾರೆಅದರಲ್ಲಿ 'ಚೆಹೇಗೆ ವಿಶೇಷವಾಗಿ ಕಾಣುತ್ತಾನೆ...ಎನ್ನುವುದಕ್ಕೆ ನನ್ನ
ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ...
1928 ಜುನ್ 14ರಂದು ಅರ್ಜೆಂಟೆನದಲ್ಲಿ ಸಿರಿವಂತ ಕುಟುಂಬದಲ್ಲಿ ಜನಿಸಿದ. ಎರಡನೆಯ ವಯಸ್ಸಿನಲ್ಲಿ ಕಾಣಿಸಿಕೊಂಡ
ಅಸ್ತಮ ಅವನ ಜೀವನವನ್ನು ಇನ್ನಿಲ್ಲದಂತೆ ಕಾಡಿತುಉಸಿರಾಡಲು ಕಷ್ಟವೆಂದು ಕುಳಿತಾಗ ಆತನೊಳಗೆ ಧೈರ್ಯ ಹೇಳಿದ ಹೆತ್ತವರು ಅವನಿಗೆ ಇನ್ನೂ ಜೀವನುದ್ದಕ್ಕೂ ಅದನ್ನು ಎದುರಿಸುವ ಶಕ್ತಿ ತುಂಬಿದರು.


ವೈದ್ಯ ವಿದ್ಯಾರ್ಥಿಯಾಗಿ ಕಾಲೇಜಿಗೆ ಸೇರಿದ ಚೆ. ಒಂದೆಡೆ ನಿಲ್ಲುವ ಸ್ವಭಾವದವನಲ್ಲ ಚೆ. ಕಷ್ಟವೆಂದರೆ ಏನು ಎಂದು ತಿಳಿಯದಂತೆ ಬೆಳಸಿದ ಹೆತ್ತವರು. ಕೈಯಲ್ಲಿ ಹಣ, ಕಣ್ಣಲ್ಲಿ ಕನಸು, ಹೀಗೆ ಬದುಕಿದ ಚೆ’ಗೆ  ತನ್ನ ಮೋಟಾರ್ ಬೈಕ್ ನಲ್ಲಿ ವಿಶ್ವಪರ್ಯಟನೆ ಮಾಡಬೇಕು ಎನ್ನುವ ಇಚ್ಚೆಯೊಂದಿಗೆ ತನ್ನ ಗೆಳಯನ್ನು ಕರೆದುಕೊಂಡು ಹೊರಡುತ್ತಾನೆ.

ಅದೊಂದು ದಿನ ಕಷ್ಟವೇ ಕಾಣದಂತೆ ಬೆಳಸಿದ ಸಿದ್ಧಾರ್ಥನಿಗೆ ದಾರಿಯುದ್ದಕ್ಕೂ ಕಂಡ ಸಾವು, ನೋವುಗಳು ಹೇಗೆ ಅವನನ್ನು ಬದಲಾಯಿಸಿತೋ ಹಾಗೆ ಚೆ ಮನಸಿನಲ್ಲಿ ಆ ಪಯಣ ಹೊಸದೊಂದು ಗುರಿಯತ್ತಾ ಅವನನ್ನು ದೂಡಿತು.

 ಹೋಗುವ ದೇಶದಲ್ಲೆಲ್ಲಾ ಕಾಣುವ ಕಡುಬಡತನ ಆತನನ್ನು ಜೀವನದಲ್ಲಿ ಮೊದಲನೆಯ ಭಾರಿಗೆ ಆಳವಾಗಿ ಚಿಂತೆಗೀಡು ಮಾಡಿತು. ಅವರೊಂದಿಗೆ ನಿಲ್ಲಬೇಕು ಅವರ ಕಷ್ಟದಲ್ಲಿ ಭಾಗಿಯಾಗಬೇಕು, ಹೇಗಾದರೂ ಮಾಡಿ ಇವರನ್ನು ಈ ಗುಲಾಮತನದಿಂದ, ಜೀತದಿಂದ ಸ್ವಾತಂತ್ರ್ಯ ಕೊಡಿಸಬೇಕು ಎಂದು ಯೋಚಿಸುವಾಗಲೇ. ಕ್ಯೂಬ ದೇಶದಲ್ಲಿ ಫಿಡಲ್ ಕ್ಯಾಸ್ಟ್ರೋ ಅಲ್ಲಿನ ಸರ್ವಾಧಿಕಾರಿ ಆಡಳಿತಗಾರನಾದ ಬ್ಯಾಟಿಸ್ಟನ ವಿರುದ್ಧ ಹೋರಾಡುವ ಸುದ್ದಿ ತಿಳಿದು ಅಲ್ಲಿಗೆ ಬಂದು ಬಲಗೈ ಬಂಟನಾಗಿ ಚೆ ಸೇರುತ್ತಾನೆ.. ತನ್ನ ಗೆರಿಲ್ಲಾ ಯುದ್ಧ ಕಲೆಯ ಮೂಲಕ ಬ್ಯಾಟಿಸ್ಟ


ಒಂದು ಲಕ್ಷ ಸೈನಿಕರ ದೊಡ್ಡ ಸೈನ್ಯವನ್ನು ಸ್ವಲ್ಪ ಸ್ವಲ್ಪ ಕಡಿತಗೊಳಿಸುತ್ತಾಒಂದು ಸಾವಿರದಷ್ಟೇ ಇದ್ದ
ಚೆ ಗೆರಿಲ್ಲಾ ಪಡೆ ಗೆಲ್ಲುತ್ತದೆ...(ಈ ಗೆಲುವೇನು ಸುಮ್ಮನೆ ಸಿಗುವುದಿಲ್ಲಾ ಅದಕ್ಕಾಗಿ ಅವರು ಅನುಸರಿಸುವ ಮಾರ್ಗಗಳು ಅಷ್ಟೇ ರೋಚಕ)
ಅವನ ಆಡಳಿತದ ಶವದ ಪೆಟ್ಟಿಗೆ ಅಂತಿಮ ಮೊಳೆ ಹೊಡೆದುಕ್ಯೂಬಾ ಗೆ ಫಿಡಲ್ ಕ್ಯಾಸ್ಟ್ರೋ ನಾಯಕನಾಗುತ್ತಾನೆ.
ವಸ್ತ್ರಕಳಚುವ ನೃತ್ಯಕ್ಕೂಜೂಜು ಆಡುವ ಕೃತ್ಯಕ್ಕೂ ಬಳಕೆಯಾಗುತ್ತಾ, ಕ್ಯೂಬಾ ರಾಷ್ಟ್ರ ಬಡತನದ ಬಿರುಗಾಳಿಗೆ ಸಿಲುಕಿ,

ಚೆ-ಚೇತನ


ಸಂಕ್ರಾಮಿಕ ರೋಗಳಿಂದ ಜನರು ಸಾಯುತ್ತಾ, ಆ ದೇಶವೇ ಅಮೇರಿಕನ್ನರ ಆಟದ ಮೈದಾನವೇನೋ
ಎನ್ನುವಂತೆ ಇದ್ದ ಜಾಗವನ್ನುಕ್ರಮೇಣ, ಚೆ ತಾನು ವಹಿಸಿಕೊಂಡಹಲವಾರು ಸರ್ಕಾರಿ ಪದವಿಗಳ ಮೂಲಕ,
ಸ್ವಚ್ಚಗೊಳಿಸುತ್ತಾ ಮತ್ತೆ ಅಲ್ಲಿಯ ಜನರು ತಲೆ ಎತ್ತಿ ಬದುಕುವ ಹಾಗೆ ಮಾಡುವತ್ತಾ ಹೆಜ್ಜೆ ಇಟ್ಟಕ್ಯೂಬಾ ರಾಷ್ಟ್ರೀಯ ಬ್ಯಾಂಕ್ ಅಧ್ಯಕ್ಷನಾಗಿ. ಜೂಜು ಕೇಂದ್ರವಾಗಿದ್ದ ಜಾಗವನೆಲ್ಲಾ ರೈತರಿಗೆ ಹಂಚಿದ ಇದರಿಂದ ಲಕ್ಷ್ಯಾಂತರ ರೈತರು ಲಾಭ ಪಡೆದರು. ಹೀಗೆ ಹಲವಾರು ಯೋಚನೆಗಳನ್ನು ಜಾರಿಗೊಳಿಸಿದಸುಮ್ಮನೆ ಯೋಚನೆಯನ್ನು ಪ್ರಕಟಿಸಿ
ಕಚೇರಿಯಲ್ಲಿ ಕೂರುವ ನಾಯಕರಂತೆ ಇರದೇ, ಜನಗಳಿಗೆ ಕಟ್ಟಡ ಕಟ್ಟುವ ಕಾಮಗಾರಿಯ ತರಬೇತಿ.
ಬಟ್ಟೆ ನೈಯುವ ತರಬೇತಿಇನ್ನು ಅನೇಕ ಕರಕುಶಲ ತರಬೇತಿ ನೀಡಿ, ಜನರಿಗೆ ತಮ್ಮದೇ ದುಡಿಮೆಯಲ್ಲಿ ಬದುಕುವ ಹಾಗೆ ಮಾಡಲು, ಅವರೊಂದಿಗೆ ಅವನು ಆ ತರಬೇತಿಯಲ್ಲಿ ಸೇರಿ ಶರಟನ್ನು ಕಳಚಿಟ್ಟು ತಾನೂ ಒಬ್ಬ ಕೂಲಿಯಾಗಿ ದುಡಿಯುತ್ತಿದ್ದ ಚೆ. ಕ್ಯೂಬಾ ಬಡತನದಿಂದ ಮುಕ್ತವಾಗುವತ್ತಾ ಸಾಗುತ್ತಿದ್ದ ವೇಳೆಯಲ್ಲಿ.

ಅತ್ತ ಅಮೇರಿಕ ತನ್ನ ಪರವಾಗಿದ್ದ ಬ್ಯಾಟಿಸ್ಟನನ್ನು ಹೀಗೆ ಕೊಂದು, ನಮ್ಮ ವಿರುದ್ಧವೇ ತೊಡೆ ತಟ್ಟುವಷ್ಟು ಕೊಬ್ಬೆ ಇವರಿಗೆಂದುಕೊಡಲೇ ಕ್ಯೂಬಾಗೆ ಅರ್ಥಿಕ ಹೊಡೆತ ನೀಡಬೇಕು ಎಂದು ನಿರ್ಧರಿಸಿ. ಕ್ಯೂಬಾದಿಂದ ತೆಗೆದುಕೊಳ್ಳುತ್ತಿದ್ದ ಸಕ್ಕರೆ ಮತ್ತೆ ಅಡುಗೆ ಎಣ್ಣೆಯ ರಫ್ತನ್ನು ನಿಲ್ಲಿಸುತ್ತದೆಇದರಿಂದ ವಿಚಿಲಿತನಾಗದ ಚೆ..ಸೋವಿಯತ್ ಯುನಿಯನ್ ಅಧ್ಯಕ್ಷರ ನೋಡಿ, ತಮ್ಮಲ್ಲಿರುವ ಸಕ್ಕರೆ ಮತ್ತು ಅಡುಗೆ ಎಣ್ಣೆಯನ್ನು ನೀವು ಖರೀದಿಸಬೇಕು
ಎನ್ನುವ ಬೇಡಿಕೆ ಇಟ್ಟಅದಕ್ಕೆ ಒಳ್ಳೆಯ ರೀತಿಯಲ್ಲಿ ಸ್ಪಂಧಿಸಿ. ಅಮೇರಿಕ ಖರೀದಿಸಬೇಕಿದ್ದ ಅಷ್ಟು ಸಕ್ಕರೆಎಣ್ಣೆಯನ್ನು ಸೋವಿಯನ್ ಯುನಿಯನ್ ಕೊಂಡುಕೊಂಡಿತು, ಇದನ್ನು ಕೇಳಿದ ಅಮೇರಿಕಗೆ ಮತ್ತಷ್ಟು ಕೋಪ ಕೆರಳಿ.
ಇವರಿಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ಕ್ಯೂಬಾ ಮೇಲೆ ಯುದ್ಧ ಸಾರಲು ನಿರ್ಧರಿಸಿ ಕ್ಯೂಬಾದತ್ತ ತಮ್ಮ ಬಲಿಷ್ಟವಾದ ಸೈನ್ಯವನ್ನು ಕಳುಹಿಸಿದರುಕ್ಯೂಬಾ ಬಳಿ ಇದ್ದ ಸೈನಿಕರ ಸಂಖ್ಯೆಕೇವಲ ಇಪ್ಪತ್ತೈದು ಸಾವಿರ..
ಅಮೇರಿಕದಂತಹ ಬಲಿಷ್ಠ ರಾಷ್ಟ್ರವನ್ನು ಎದುರಿಸಲು ಜಗತ್ತಿನ ಮುಂದುವರಿದ ದೇಶಗಳೇ ಹೆದುರುವಾಗಆಗಷ್ಟೇ ಸರ್ವಾಧಿಕಾರಿಯ ಹಿಡಿತದಿಂದ ತಪ್ಪಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದ ಕ್ಯೂಬಾ ಎದುರಿಸಲು ಸಿದ್ಧವಾಯಿತು..
ಚೆ ರಾಷ್ಟ್ರದ ಜನರಲ್ಲಿ ಒಂದು ಮನವಿ ಇಟ್ಟ. ನಮ್ಮನ್ನು ಶತ್ರು ಸೈನ್ಯ ಅಕ್ರಮಿಸಿಕೊಳ್ಳುವ ಮುನ್ನ. ನಮ್ಮ ದೇಶದಲ್ಲಿ ಒಬ್ಬೊಬ್ಬರು ಸಹ ಸೈನಿಕರಾಗಬೇಕು ಎಂದು, ಅದಕ್ಕೆ ದೇಶಕ್ಕೆ ದೇಶವೇ ಮುಂದೆ ಬಂದಿತುಎರಡು ಲಕ್ಷ ಜನರಿಗೆ



ಬದೂಕು ತರಬೇತಿ ನೀಡಿಅವರನ್ನು ಕೆಲವೇ ದಿನಗಳಲ್ಲಿ ಸೈಕರನ್ನಾಗಿ ಮಾಡಿ, ಯುದ್ಧ ಆರಂಭಿಸಿಯೇ ಬಿಟ್ಟಾ.  ಆಗಲೇ ಚೆ ಒಳಗಿನ ನಿಜವಾದ ಹೋರಾಟಗಾರನ ದರ್ಶನ ಈ ಜಗತ್ತಿಗೆ ಕಂಡಿದ್ದು... ತನ್ನ ಸೈನ್ಯದೊಂದಿಗೆ ಅಮೇರಿಕವನ್ನು ಸೋಲಿಸಿದ ಚೆ.. ರಣರಂಗವಾಗಿದ್ದ ದೇಶವನ್ನು ಕಷ್ಟದಿಂದ ಮೇಲೆತ್ತುವಲ್ಲಿ, ಚೆ ಮತ್ತು ಫಿಡಲ್ ಕ್ಯಾಸ್ಟ್ರೋ ಹಗಲಿರುಳು ದುಡಿದರು. ಕ್ಯುಬ ಮೆಲ್ಲನೆ ಸುಧಾರಿಸುವತ್ತ ಸಾಗಿತು, ಬಡತನ, ರೋಗಗಳ ಕತ್ತಲು ಸರಿದು ಭರವಸೆಯ ಬೆಳಕು ದೇಶದ ಮೇಲೆ ಮೂಡಲು ಆರಂಭಿಸಿತು. ಇಲ್ಲಿಗೆ ಚೆ ಸುಮ್ಮನಾಗಿದ್ದರೆ ಅತ ಬರೀ ಕ್ಯೂಬಾ ಗೆ ಮಾತ್ರವೇ ವಿಶೇಷ ವ್ಯಕ್ತಿಯಾಗುತ್ತಿದ್ದನೇನೋಆದರೆ ಚೆ ತಾನು ವಹಿಸಿಕೊಂಡಿದ್ದ ಎಲ್ಲಾ ಸರಕಾರಿ ಪದವಿಗಳನ್ನು ರಹಸ್ಯವಾಗಿ ರಾಜೀನಾಮೆ ನೀಡಿ, ಕ್ಯೂಬಾದ ಹಾಗೆಯೇ ಸರ್ವಾಧಿಕಾರದ ಹಿಡಿತದಲ್ಲಿ ಇರುವ ಕಾಂಗೋಗೇ ಹೋಗಿ ಅಲ್ಲಿನ ಜನರಿಗೆ ಗೆರಿಲ್ಲಾ ತರಬೇತಿ ನೀಡಿಅವರನ್ನು ಗುಲಾಮತನದಿಂದ ಮುಕ್ತರಾಗಿಸಬೇಕು ಎಂದು ನಿರ್ಧರಿಸಿದ.

ಫಿಡಲ್ ಮೊದಲಿಗೆ ಇದಕ್ಕೆ ಒಪ್ಪಲಿಲ್ಲಾ, ಚೆ ಮಾತು ಕೇಳುವವನಲ್ಲ ಆತನ ಹೃದಯ ಬಡವರಿಗಾಗಿ ಮಿಡಿಯುವುದನ್ನು ಯಾರಿಂದಲೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿದ ಫಿಡಲ್ ಕ್ಯಾಸ್ಟ್ರೋ ಅವನ ರಾಜಿನಾಮೆಗೆ ಒಪ್ಪಿದರು. ಚೆ ಹೊರಟ. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲಾಕರಿಯರಾಗಿದ್ದ ಅವರಿಗೆ ಬಿಳಿಯಾಗಿ ಕಂಡ ಚೆ ನನ್ನು ಮೊದಲು ಒಪ್ಪಿಕೊಳ್ಳುವ ಮನಸು ಬರದೆ ಇವನು ಆ ಸರ್ವಾಧಿಕಾರಿಗ ಗೂಡಾಚಾರಿಯೇ ಇರಬೇಕು ಎಂದು ಅವನ ಮೇಲೆಯೇ ದಾಳಿ ನಡೆಸುತ್ತಾರೆಇದನ್ನು ತಿಳಿದ ಕ್ಯಾಸ್ಟ್ರೋಬೇಡ ಅವನನ್ನು ಮತ್ತೆ ಕ್ಯೂಬಾ ಗೆ ಬರಲು ಹೇಳಿ ಎಂದು ಜನರನ್ನು ಕಳುಹಿಸದರೆ,
ಅವರಿಗೆ ಇಲ್ಲಾ ನಾನು ಈ ಅಮಾಯಕರಿಗೆ ಯುದ್ಧ ಕಲೆಯನ್ನು ಕಲಿಸಿಯೇ ಬರುವೆ ಎಂದು
ಅವರನ್ನು ಬರಿಗೈಯಲ್ಲಿ ಹಿಂತಿರುಗಿಸಿತಾನು ಅಂದುಕೊಂಡಿದನ್ನು ಮಾಡಿಯೇ ಕಾಂಗೋ ಇಂದ ಕ್ಯೂಬಗೆ ಬರುತ್ತಾನೆ.. ಅಲ್ಲಿಯೂ ಹೆಚ್ಚಿನ ದಿನ ಅವನಿಂದ ಇರಲು ಸಾದ್ಯವಿಲ್ಲ,
ಮೊದಲೇ ಚೆ ಸದಾ ಹಾರುವ ಹಕ್ಕಿ ಅವನ ಬಾಲ್ಯದ ಹವ್ಯಾಸವಾದ ಬೈಕ್ ನಲ್ಲಿ ದೇಶ ಸುತ್ತುವುದಕ್ಕೆ ಮುಂದಾಗುತ್ತಾನೆ ತನಗಿಂತ ಹಿರಿಯನಾದ ಅಲ್ಬರ್ಟೊ ಜತೆ ಸೇರಿ..
ಆ ಪಯಣ ಅವನ ಬದುಕಿನಲ್ಲಿ ಅತಿಮುಖ್ಯವಾದದ್ದು..
ಅದುವೇ ಮೋಟರ್ ಸೈಕಲ್ ಡೈರಿ’ (ಇಲ್ಲಿರುವ ಯಾವ ಮಾಹಿತಿಯೂ ಪುಸ್ತಕದಲ್ಲಿಲ್ಲ ಅಲ್ಲಿರುವುದು ಅವನ ಸುಂದರ ಪಯನದೊಂದಿಗೆ ಸಿಗುವ ವಾಸ್ತವಕತೆ)
ಸುತ್ತಾಡುವಾಗ ಮತ್ತದೇ ಬಡತನ ಸರ್ವಾಧಿಕಾರಿಯ ಹಿಡಿತದಲ್ಲಿ ಇರುವ ಬೊಲಿವಿಯ ದೇಶದ ಪರವಾಗಿ ಯುದ್ಧ ಸಾರಲು ನಿಂತ, ಈ ಬಾರಿ ತನ್ನ ಗೆರಿಲ್ಲಾ ಯುದ್ಧ ಸೈಕರು ಒಬ್ಬೊಬ್ಬರೇ ಬೊಲಿವಿಯ ದೇಶದ ಸೈನಿಕರ
ಗುಂಡಿಗೆ ಬಲಿಯಾದರುಕೊನೆಗೆ ಚೆ ನನ್ನು ಸೆರೆಹಿಡಿಯಲಾಯಿತು. ಚೆ ಗೆ ಆಹಾರ ನೀಡಲು ಒಂದು ಹುಡುಗಿಯನ್ನು ನೇಮಿಸಲಾಯಿತು. ಆಹಾರ ತಂಡ ಆಕೆಯಲ್ಲಿ ಕೇಳಿದ. ಇದು ಯಾವ ಜಾಗ? ಶಾಲೆ ಎಂದು ಉತ್ತರಿಸಿದಳು ಆಕೆ. ಛೆ ಇಂಥ ಸ್ಥಿತಿಯಲ್ಲಿ ಇದೆಯಾ ಈ ದೇಶದ ಶಾಲೆಗಳು ಕುಳಿತುಕೊಳ್ಳಲು ಜಾಗವಿಲ್ಲದೆ, ಛಾವಣಿ ಇಲ್ಲದೆ, ನಮ್ಮ ಹೋರಾಟ ಒಳ್ಳೆಯ ರೀತಿಯಲ್ಲಿ ಗೆದ್ದು ಮುಗಿದ ಕೂಡಲೇ ನಿಮಗೆಲ್ಲಾ ಮೊದಲಿಗೆ ಒಂದು ಉತ್ತಮವಾದ ಶಾಲೆಯನ್ನು ನಿರ್ಮಿಸಿಕೊಡುತ್ತೇನೆ ಎಂದ ಚೆ.
ಚೆ ನನ್ನು ಸೇರೆಯಲ್ಲಿಯೇ ಹೆಚ್ಚು ದಿನ ಇಟ್ಟುಕೊಳ್ಳುವುದು ಅಪಾಯಕಾರಿ ಎಂದು ಅರಿತ ಸೈನ್ಯದ ಅಧಿಕಾರಿಅವನನ್ನು ಇಲ್ಲಿಗೆ ಮುಗಿಸಿ ಬಿಡೋಣ ಎಂದು ನಿರ್ಧರಿಸಿದರು.



ಅವನನ್ನು ಬಂಧಿಸಿಟ್ಟಿದ್ದ ಕೋಣೆಗೆ ಹೋದ ಸೈನಿಕ ಟೆರಾನ್ ಚೆ ಎದೆಗೆ ಗುಂಡುಗಳನ್ನು ಇಳಿಸಲುಹೆದರಿದ.. ಅವನ ಮುಂದೆ ಎದ್ದು ನಿಂತ ಚೆ..
ಶೂಟ್ ಮಾಡು ಹೆದರಬೇಡ ನೀನು ಕೊಲ್ಲುವುದು ಚೆ ಎನ್ನುವ ಸಾಮಾನ್ಯ ವ್ಯಕ್ತಿಯನ್ನು ಅಷ್ಟೇಅವನ ಕ್ರಾಂತಿಕಾರಿ ಚಿಂತನೆಗಳನ್ನಲ್ಲ....ಎಂದು ಹೇಳಿದ..
ಆಗಲೂ ಚೆ ನ ಶೂಟ್ ಮಾಡಲು ಆಗದೆಮದ್ಯವನ್ನು ಕುಡಿದು ಬಂದು,
ಅರ್ಧ ಡಜನ್ ಬುಲೆಟ್ಸ್ ಗಳಿಂದ ಚೆ ದೇಹವನ್ನು ಚಿದ್ರವಾಗಿಸಿದ ಟೆರಾನ್..
ನಂತರ ಅವನ ಮೃತ ದೇಹದಿಂದ ಎರಡು ಕೈಗಳನ್ನು ಕತ್ತರಿಸಿ ಕ್ಯೂಬಾಗೆ ಕಳುಹಿಸಿ,



ದೇಹವನ್ನು ಉಳಿದ ಸೈನಿಕರ ಶವದೊಂದಿಗೆ ಸುಟ್ಟು ಬಿಟ್ಟೋ ಎನ್ನುವ ಸುದ್ದಿಯನ್ನು ಮುಟ್ಟಿಸಿದರು.. ಆದರೆ ಬೊಲಿವಿಯ ದೇಶದ ಮಾಜಿ ಸೈನ್ಯದ ಅಧಿಕಾರಿ ಹೇಳಿದ ಮೇಲಷ್ಟೇ ಅವನನ್ನು ಸುಟ್ಟಿಲ್ಲ..ಹೂತಿದ್ದಾರೆ ಎಂದು ತಿಳಿಯಿತು..
ನಂತರ ಆ ಜಾಗವನ್ನು ಹುಡುಕಿ ಅವನ ಕಳೇಬರವನ್ನು ಹೊರ ತೆಗೆದು..
ಮೂವತ್ತು ವರ್ಷಗಳ ಬಳಿಕ ಕ್ಯೂಬಾ ಗೆ ತಂದು 1997ರಲ್ಲಿ ಚೆಗಾಗಿ ಕಟ್ಟಿದ ಸ್ಮಾರಕದಲ್ಲಿ ಇಟ್ಟುಮಣ್ಣು ಮಾಡಿದರು..


ಸಿರಿವಂತ ಕುಟುಂಬದಲ್ಲಿ ಹುಟ್ಟಿಒಳ್ಳೆಯ ಸರ್ಕಾರೀ ಪದವಿಗಳಲ್ಲಿ ಇದ್ದು,
ತನ್ನ ರಾಷ್ಟ್ರಕ್ಕೆ ಮಾತ್ರವೇ ಸೀಮಿತವಾಗದ ಒಬ್ಬ ಕ್ರಾಂತಿಕಾರಿಯಾದ ಚೆ..
ಬಡವರಿಗಾಗಿನಿರ್ಗತಿಕರಿಗಾಗಿಮರುಗಿ..ಎಲ್ಲವನ್ನೂ ತ್ಯಾಗ ಮಾಡಿ ಬಂದು ನಿಂತ..
ಇಂದು ಜಗತ್ತಿನ ಕ್ರಾಂತಿಕಾರಿ ಮನಸುಗಳಿಗೆ ಐಕಾನ್ ನಂತೆ ಇರುವ
ಪ್ರಪಂಚದ ಏಕೈಕ ಕಮರ್ಶಿಲೈಸ್ ಅದ ಕ್ರಾಂತಿಕಾರಿ ಚೆ....

ನಡುಬಗ್ಗಿಸಿ ಬದುಕುವುದಕ್ಕಿಂತನೇರ ನಿಂತು ಸಾಯುವುದು ಮೇಲು: ಚೆ

ಅರ್ಜೆಂಟೀನದಲ್ಲಿ ಹುಟ್ಟಿಕ್ಯೂಬಾಗಾಗಿ ಯುದ್ಧಕ್ಕೆ ಇಳಿದು ಗೆದ್ದು,
ಕಾಂಗೋಗಾಗಿ ಮುಂದೆ ಬಂದು. ಬೊಲಿವಿಯ ಜನರಿಗಾಗಿ ಮಡಿದವನ..
ಮಾತುಗಳು ಬೆಂಕಿಯ ಕಿಡಿಯಂತೆ ಇಂದಿಗೂ ಹಾರುತ್ತಿವೆ...

 


ಕೊರೊನ ಎನ್ನುವ ಮಹಾಮಾರಿ ಇಂದಾಗಿ ಜಗತ್ತಿನಲ್ಲಿರುವ ಎಲ್ಲಾ ದೇಶಗಳು ತಮ್ಮ ಪ್ರಜೆಗಳ ಸೇವೆಗೆ, ತಮ್ಮಲ್ಲಿರುವ ವೈಧ್ಯರು, ನರ್ಸುಗಳು ಸಾಲುತ್ತಿಲ್ಲ ಎಂದು ಯೋಚಿಸುವ ಇದೆ ವೇಳೆಗೆ ಕ್ಯುಬ ತನ್ನ ದೇಶದಿಂದ ವೈಧ್ಯರನ್ನು ಬೇರೆ ದೇಶಗಳಿಗೆ ಸೇವೆಗಾಗಿ ಕಳುಹಿಸುತ್ತಿದೆ. ಇಂತಿಷ್ಟು ಜನರಿಗೆ ಇಂತಿಷ್ಟು ವೈಧ್ಯರು ಎನ್ನುವ ಸರಾಸರಿಯಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ರೆಸ್ಯೋ ಒಂದಿರುವ ದೇಶವೆಂದರೆ ಅದು ಕ್ಯುಬ. ರೋಗಿಗಳಿಂದ ತುಂಬಿದ್ದ ದೇಶದಲ್ಲಿ ಇಂದು ಕಣ್ಣಿಗೆ ಕಂಡ ಕಡೆಯೆಲ್ಲಾ ವೈದ್ಯರೇ ಕಾಣುತ್ತಾರೆ ಅಂದ್ರೆ ಆ ಸಾಧ್ಯನೆಯ ಹಿಂದೆ ಚೆ ಎನ್ನುವ ಬಿತ್ತನೆ ಇದೆ....

 

No comments:

Post a Comment