ಈಗೀಗ ಪ್ರೇಮಿಗಳ
ನಡುವೆ ವೈಮನಸು ಮೂಡಿ ಲವ್ ಬ್ರೇಕ್ ಅಪ್ ನ ತನಕ ಹೋಗಿ ಬಿಡುತ್ತೆ ,
ಕೆಲವೊಂದು ಹೇಗೋ
ಮತ್ತೆ ಪ್ಯಾಚ್ ಅಪ್ ಆದರೂ ನಡುವೆ ಬಿದ್ದ ಬಿರುಕಿನ ಗುರುತು ಸದಾ ಗೋಚರಿಸುತ್ತೆ,
ಬಿರುಕಿನ ಪ್ರಮಾಣ ಮೊದಲು ಸಣ್ಣದಾಗಿಯೇ ಕಂಡರೂ ಅದಕ್ಕೆ ಅಣೆಕಟ್ಟನ್ನೇ ಒಡೆಯುವ ಶಕ್ತಿ ಇದೆ ಎನ್ನುವುದನ್ನು ಮರೆಯದಿರಿ ....
ಬಿರುಕಿನ ಪ್ರಮಾಣ ಮೊದಲು ಸಣ್ಣದಾಗಿಯೇ ಕಂಡರೂ ಅದಕ್ಕೆ ಅಣೆಕಟ್ಟನ್ನೇ ಒಡೆಯುವ ಶಕ್ತಿ ಇದೆ ಎನ್ನುವುದನ್ನು ಮರೆಯದಿರಿ ....
ಬ್ರೇಕ್ ಅಪ್
ಆಗುವ ಮುನ್ನವೇ ಚೆಕ್ ಅಪ್ ಮಾಡಿಕೊಳ್ಳುವುದು ಉತ್ತಮವೆಂದೆ ಈ ಸರಳ ಸೂತ್ರಗಳು!
1)
ಪ್ರೀತಿಸಿದವರು ಒಲಿದ
ಕ್ಷಣದಿಂದ ಇಲ್ಲ ಸಲ್ಲದ ಆಶ್ವಾಸನೆಗಳನ್ನು
ಕೊಡುವುದು ,
ಅದನ್ನು
ಉಳಿಸಿಕೊಳ್ಳುವಲ್ಲಿ ಎಡವುವುದು !
(ಬ್ಯಾಲೆನ್ಸ್
ಇದ್ದಷ್ಟು ಕಾಲ್ ಮಾಡಿ)
2)
ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ ಮೇಲಾದರೂ,
ಅವರು ಸಂತಸದಿಂದ
ಇರುವ ಒಳ್ಳೆಯ ಸಮಯ ನೋಡಿ,
ನೀವು ಅವರಲ್ಲಿ
ಮುಚ್ಚಿಟ್ಟಿರುವ ಸತ್ಯಗಳನ್ನು ಸಾಧ್ಯವಾದಷ್ಟು ಬಿಚ್ಚಿಟ್ಟು ಬಿಡಿ,
ಆರ್ಥಿಕ ಪರಿಸ್ಥಿತಿ ,ಮನೆಯಲ್ಲಿ
ಏನಾದರೂ ತೊಂದರೆಗಳು ಇದ್ದಲ್ಲಿ ಅದನ್ನು,
ಜಾತಿ/ಧರ್ಮದ
ತೊಡುಕುಗಳು, ಕೆಲಸ,ಸಂಬಳ, ಹೀಗೆ ಯಾವುದೇ
ವಿಷಯಗಳೇ ಆಗಿರಲಿ
ಮುಚ್ಚು ಮರೆಯಿಲ್ಲದೆ ಹೇಳಿಬಿಡಿ !
(ನೀರು ಗೊಬ್ಬರ
ಇಲ್ಲದೆಯೇ ಬೆಳೆಯುವ ಒಂದೇ ಒಂದು ಬಿತ್ತನೆ ಬೀಜ ಸುಳ್ಳು ಮಾತ್ರವೇ ,
ಸಾಧ್ಯವಾದಷ್ಟು
ಬೇಗ ಕೊಯ್ದು ಬಿಡಿ !)
3)
ಪ್ರೀತಿ ಎನ್ನುವ
ಗಾಡಿ ಕೈಗೆ ಬಂದ ಖುಷಿಯಲ್ಲಿ ಅತಿವೇಗದ ಚಾಲನೆ
ಒಳ್ಳೆಯದಲ್ಲ!!
ಸಾಮಾನ್ಯವಾಗಿ
ನಾವು ಖರೀದಿಸುವ ದ್ವಿಚಕ್ರ ವಾಹನಗಳನ್ನೇ ಮೊದಲ ಸರ್ವಿಸ್’ವರೆಗೂ
40ಕಿಲೋ ಮೀಟರ್ ವೇಗದಲ್ಲೇ
ಚಲಿಸಬೇಕು ಎನ್ನುವ ನಿಯಮವಿದೆ ಕಾರಣ ,
ಆಗಲೇ ಗಾಡಿಯ
ಎಂಜಿನ್ ಸುದೀರ್ಘ ಬಾಳಿಕೆ ಬರುವುದು ಹಾಗೆ ಪಯಣವು ಅಡೆತಡೆಯಿಲ್ಲದೆ ಸುಖಮಯವಾಗಿರುವುದು ಎನ್ನುವುದಕ್ಕಾಗಿ
!
ಬೇಕು ಎನ್ನುವಾಗ
ಬದಲಾಯಿಸುವ ವಾಹನಕ್ಕೆ ಈ ನಿಯಮ ಎನ್ನುವುದಾದರೆ
ಇನ್ನು ಪ್ರೀತಿಗೆ
?
(ನಿಧಾನವೇ
ಪ್ರಧಾನ!)
4)
ಏನೋ ಇನ್ನು ಕೆಲವೇ
ದಿನದಲ್ಲಿ ಜಗತ್ತಿಗೆ ಪ್ರಳಯವಾಗುತ್ತೆ ಎನ್ನುವ ಹಾಗೆ,
ಕಣ್ಣ ಉಜ್ಜಿ ಎದ್ದೇಳುವಾಗ
ಒಂದು ಗುಡ್ ಮಾರ್ನಿಂಗ್ ,
ರಾತ್ರಿ ಕಣ್ಣ
ಮುಚ್ಚುವ ಮುನ್ನ ಒಂದು ಗುಡ್ ನೈಟ್ ಮೆಸೇಜ್ !
ನಾವು ಆ
ಸಂದೇಶಗಳನ್ನು ಕಳುಹಿಸದಿದ್ದರೆ ಅವರು ಮಲಗುವುದಿಲ್ಲ/ಎದ್ದೇಳುವುದಿಲ್ಲ
ಎನ್ನುವಂತೆ
ತಪ್ಪದೆ ಒಂದು ಸಂದೇಶ!
ದಿನವೆಲ್ಲಾ ಬರೀ
ಮಾತುಕತೆ ,ಏನ್ ತಿಂತಾ ಇದ್ದೀಯ ? ಏನ್ ಮಾಡ್ತಾ ಇದ್ದೀಯ ?
ಎಲ್ಲಿದ್ದೀಯ ?
ಹೀಗೆ ದಿನದಲ್ಲಿ ನಡೆಯುವ ಸಣ್ಣ ನೋವು/ನಲಿವುಗಳನ್ನು
ಹೇಳಲೇ ಬೇಕು
ಇಲ್ಲದಿದ್ದರೆ ನಿದ್ರೆ ಬರುವುದಿಲ್ಲಾ !
ಹೇಗೋ
ಪ್ರೀತಿಸುವವರ ಸಂದೇಶಗಳಿಗೆ ಒಂದು ಲಿಮಿಟ್ ಇರಲಿ
ಎಂದು ಮೊಬೈಲ್
ಕಂಪನಿಗಳೇ ಸಂದೇಶಗಳಿಗೆ ಒಂದು ಮಿತಿ ಇಟ್ಟಿತ್ತು,
ಆದರೆ ಈ ಅಧುನಿಕ
ಯುಗದಲ್ಲಿ ಮೊಬೈಲ್ ನಲ್ಲಿ ಬಂದಿರುವ ಚಾಟ್
ಅಪ್ಲಿಕೇಶನ್ ಗಳು
ದಿನಕ್ಕೆ
ಅದೆಷ್ಟು ಲಕ್ಷ ಸಂದೇಶಗಳನ್ನು ಬೇಕಿದ್ದರೂ ಕಳುಹಿಸುವ ಸೌಲಭ್ಯ ಕೊಡುತ್ತವೆ.
ಇನ್ನು ಕೇಳಬೇಕೆ,
ನಿಂತರೆ ಕೂತರೆ ಒಂದು ಸಂದೇಶ.
ಮುಖದಲ್ಲಿ
ಸುಂದರವಾದ ಭಾವನೆಗಳ ಮೂಡಿಸಿ ,
ದನಿಯಲ್ಲಿ
ಏರಿಳಿತಗಳನ್ನು ಪೋಣಿಸಿ ಹೇಳಬೇಕಿರುವ ಮಾತುಗಳನ್ನು
ಸಪ್ಪೆಯಾಗಿ
ಅಕ್ಷರದ ಬೆನ್ನಿಗೇರಿಸಿ ಕಳುಹಿಸುವುದು ? ಸರಿಯಾದ ಕ್ರಮವಲ್ಲ.
ಕೋಪ,ನಾಚಿಕೆ,ಪ್ರೀತಿ
ಎನ್ನುವ ಭಾವನೆಗಳನ್ನು ಮುಖದಲ್ಲಿ ಮೂಡುವಾಗ ಅದನ್ನು ಕಾಣುವ ಖುಷಿಯನ್ನು
ಯಾವ ಸ್ಮೈಲಿ ಗಳು
ಕೊಡುವುದಿಲ್ಲಾ .
ಒಮ್ನೆ ಅವಳ/ನ ಕೈ
ಹಿಡಿದು ಮೌನವಾಗಿ ,ನಾನು ಇದ್ದೀನಿ ಎನ್ನುವಂತೆ ಚೂರು ತಲೆಯಾಡಿಸಿ
ಕಣ್ಣ ರೆಪ್ಪೆಯ ಮಿಟುಕಿಸುವಾಗ.
ಅದು ಮನದೊಳಗೆ
ಒಂದು ಭದ್ರವಾದ ಭಾವನೆ ಮೂಡಿಸುತ್ತೆ .
5)
ಒಂದು ಹನಿ ಜೇನಿಗಾಗಿ
ಜೇನುನೋಣ ಅದೆಷ್ಟೋ ಹೂಗಳನ್ನು ಹುಡುಕಿ
ಹುಡುಕಿ
ಮಕರಂದವನ್ನು
ಸಂಗ್ರಹಿಸುತ್ತೆ ಆಗಲೇ ತಾನೇ ,
ಜಗತ್ತಿಗೆ ಅತೀ
ಸಿಹಿಯಾದ ಹಾಗೂ ಎಂದೂ ಕೆಡದಂತಹ ಜೇನುತುಪ್ಪ ಸಿಗುವುದು !
ಹಾಗೆ
ಪ್ರೀತಿಸುವವರನ್ನು ಖುಷಿ ಪಡಿಸಲು ನಾನಾ ಮಾರ್ಗಗಳನ್ನು ಹುಡುಕಬೇಕು .
ಅವರಿಗೆ
ಇಷ್ಟದ..ಹಾಡು,ತಿಂಡಿ.ಪುಸ್ತಕಗಳನ್ನು ಹುಡುಕಿ ತಂದು ಕೊಡುವುದು,
ಅವರೊಂದಿಗೆ ಸಮಯ
ಕಳೆಯಲೆಂದೇ ಬಿಡುವು ಮಾಡಿಕೊಳ್ಳುವುದು.
ಜೋತೆಯಿದ್ದಾಗ ಹರಟಲೆಂದೇ ವಿಷಯಗಳನ್ನು ಶೇಖರಿಸುವುದು .
ಹೀಗೆ
ಮಾಡುವುದರಿಂದ ಪ್ರೀತಿ ನಿಂತ ನೀರಾಗುವುದಿಲ್ಲಾ.
6)
ಪ್ರೀತಿಯಲ್ಲಿ
ಒಂದು possesseiveness ಇರಬೇಕು ಆದರೆ ಅದು ಅತಿಯಾದರೆ
ಅಪನಂಬಿಕೆಯ
ರಂಧ್ರವನ್ನು ಸಂಬಂಧ ಹಡಗಿನಲ್ಲಿ ಕೊರೆದು ಬಿಡುತ್ತೆ !
(ಗಾಳಿಪಟದ ಸೂತ್ರ
ಕೈಯಲ್ಲಿ ಇರಲಿ)
7)
ಪ್ರೀತಿಯನ್ನು
ಒಪ್ಪಿಯಾಯಿತು, ಹೇಗೆ ಇದ್ದರೂ ನಡೆಯುತ್ತೆ ಅನ್ನೋ ನಿರ್ಲಕ್ಷ್ಯವೇ ಎಷ್ಟೋ ಸಂಬಂಧಗಳನ್ನು ಆಹುತಿ
ತೆಗೆದುಕೊಂಡು ಬಿಡುತ್ತೆ,
ಪ್ರೀತಿಯನ್ನು
ಒಪ್ಪುವ ಮುನ್ನ ಹೇಗೆ ಕಾದು ಕಾದು, ಹಿಂದೆ ಬಿದ್ದು ಬಿದ್ದು ಪ್ರೀತಿಸುತ್ತಿರೋ ಆ ಆಸಕ್ತಿಯಲ್ಲಿನ ಒಂದು ಭಾಗವನ್ನಾದರೂ ಪ್ರೇಮಿಗಳಾದ ಮೇಲೆ ಕೊಟ್ಟರೆ ಸಾಕು ಪ್ರೀತಿಯಲ್ಲಿನ
ತಾಜಾತನ ಹಾಗೆಯೇ ಉಳಿದಿರುತ್ತದೆ!
8)
ಹುಡುಗಿಯರಿಗೆ ಹುಡುಗರಿಗಿರುವಷ್ಟು ಸ್ವಾತಂತ್ರ್ಯವಿರುವುದಿಲ್ಲ .
ಮನೆಯವರ
ಕೆಲವೊಂದು ಕಟ್ಟುಪಾಡುಗಳಿಗೆ ಅವರು ಒಳಗಾಗಿರುತ್ತಾರೆ..
ಆದುದರಿಂದ , ಹುಡುಗರು
,
ಈಗಲೇ
ನಿನ್ನೊಂದಿಗೆ ಮಾತನಾಡಬೇಕು ಕರೆ ಮಾಡುತ್ತೇನೆ ?
ಏಕೋ
ನಿನ್ನನ್ನೊಮ್ಮೆ ಕಾಣಬೇಕು ಎನ್ನಿಸುತ್ತದೆ
ನಿಮ್ಮ ಮನೆಯ
ಮುಂದೆಯೇ ಇದ್ದೀನಿ ನೀನು ಸ್ವಲ್ಪ ಹೊರಗೆ ಬಾ ?
ನಾಳೆ ಇಬ್ಬರೂ
ಸಿನಿಮಾಗೆ ಅಥವಾ ಎಲ್ಲಿಗಾದರೂ ಹೋಗೋಣ ?
ಈ ರೀತಿಯ
ಕೋರಿಕೆಗಳು ಹಿತವಾದ ಬಲವಂತವಾಗಿರಲಿ
ಆಗಲೇ ಬೇಕು ಎನ್ನುವ ಹಠಮಾರಿತನ ಬೇಡ.
ಅರ್ಥಮಾಡಿಕೊಂಡು ನಡೆಯಿರಿ ಅದುವೇ ಆಸೆಯ ಅಡಿಪಾಯ!
ಆಗಲೇ ಬೇಕು ಎನ್ನುವ ಹಠಮಾರಿತನ ಬೇಡ.
ಅರ್ಥಮಾಡಿಕೊಂಡು ನಡೆಯಿರಿ ಅದುವೇ ಆಸೆಯ ಅಡಿಪಾಯ!
9)
ಹುಡುಗರು
ಪ್ರೀತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲವೊಮ್ಮೆ ಸುಳ್ಳುಗಳನ್ನು ಹೇಳುವುದುಂಟು ,
ಆ ಸುಳ್ಳಿನ
ಸುಳಿವು ಸಿಕ್ಕಾಗ ಹುಡುಗಿಯರು ಅದರ ಹಿಂದಿನ ಉದ್ದೇಶವನ್ನು ಗಮನಿಸಬೇಕು ,
ಅದು ನಿಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಅಥವಾ ನಿಮಗೆ ನೋವಾಗಬಾರದು ಎನ್ನುವುದಕ್ಕಾಗಿ ಇದ್ದರೆ ,
ಅದು ನಿಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಅಥವಾ ನಿಮಗೆ ನೋವಾಗಬಾರದು ಎನ್ನುವುದಕ್ಕಾಗಿ ಇದ್ದರೆ ,
ಸ್ವಲ್ಪ
ಎಚ್ಚರಿಸಿ ಸುಮ್ಮನಾಗಿ ಬಿಡಿ ಅದನ್ನೇ ಹಿಡಿದು ಎಳೆಯುತ್ತಾ ಜಗಳವಾಡಬೇಡಿ!
10)
ಹುಡುಗರ ನೆನಪಿನ
ಶಕ್ತಿ ಕಂಪ್ಯೂಟರ್’ನಲ್ಲಿ
ಬಳಸುವ ram ಇದ್ದ ಹಾಗೆ
ಆ ಕ್ಷಣದ ವಿಷಯಗಳನ್ನಷ್ಟೇ ಅದು ಶೇಖರಿಸಿಟ್ಟುಕೊಳ್ಳುತ್ತದೆ,
ಆ ಕ್ಷಣದ ವಿಷಯಗಳನ್ನಷ್ಟೇ ಅದು ಶೇಖರಿಸಿಟ್ಟುಕೊಳ್ಳುತ್ತದೆ,
ಅದೇ ಹುಡುಗೀರ
ನೆನಪಿನ ಶಕ್ತಿ ಹಾರ್ಡ್ ಡಿಸ್ಕ್ ಇದ್ದ ಹಾಗೆ
ಅದು ಒಂದು ಸಣ್ಣ
ವಿಷಯವನ್ನು ಸಹ ನೆನಪಿನಲ್ಲಿಟ್ಟುಕೊಳ್ಳುತ್ತದೆ
ಇದನ್ನು ಹುಡುಗರು ಅರಿತುಕೊಳ್ಳುವುದು ಅತಿಅವಶ್ಯಕ ,
ಅತಿಯಾದ ಪ್ರೀತಿಯಿಂದಲೋ ಅಥವಾ ಕೋಪದಿಂದಲೋ ನೀವು ಆಡುವ ಮಾತು
ನಾಳೆ ನಿಮಗೆ ಮುಳ್ಳಾಗಬಹುದು!
(ಮಾತನ್ನು ಮಾನಿಟರ್ ಮಾಡಿ )
ಇದನ್ನು ಹುಡುಗರು ಅರಿತುಕೊಳ್ಳುವುದು ಅತಿಅವಶ್ಯಕ ,
ಅತಿಯಾದ ಪ್ರೀತಿಯಿಂದಲೋ ಅಥವಾ ಕೋಪದಿಂದಲೋ ನೀವು ಆಡುವ ಮಾತು
ನಾಳೆ ನಿಮಗೆ ಮುಳ್ಳಾಗಬಹುದು!
(ಮಾತನ್ನು ಮಾನಿಟರ್ ಮಾಡಿ )
11)
ನೀವು
ಪ್ರೀತಿಸುವವರ ಮನೆಯವರನ್ನೂ ಕೂಡ ಸ್ವಲ್ಪ
ವಿಚಾರಿಸಿಕೊಳ್ಳಿ,
ಹೀಗೆ ಮಾಡುವುದರಿಂದ ಅವರ ಮನೆಯವರ ಮೇಲೂ ನಿಮಗೆ ಅಕ್ಕರೆ ಇದೆ ಎನ್ನುವ ಸೂಚನೆ
ಹೀಗೆ ಮಾಡುವುದರಿಂದ ಅವರ ಮನೆಯವರ ಮೇಲೂ ನಿಮಗೆ ಅಕ್ಕರೆ ಇದೆ ಎನ್ನುವ ಸೂಚನೆ
ನಿಮ್ಮನ್ನು ಅವರ
ಮನಸಿನಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸುತ್ತೆ !
ನಿಮ್ಮ ಹುಡುಗ/ಗಿ
ಮಾತ್ರವೇ ಚೆನ್ನಾಗಿದ್ದರೆ ಸಾಕು ಎನ್ನುವ ಸ್ವಾರ್ಥ
ಮನೋಭಾವ ಬೇಡ.
12)
ಅತೀ ಸೂಕ್ಷ್ಮ
ವಿಷಯಗಳನ್ನು ದಯವಿಟ್ಟು,
ಮೆಸೇಜ್/ಕರೆ
ಮಾಡಿ ಕೇಳಬೇಡಿ ಒಂದು ವೇಳೆ ನೀವು ಕೇಳುವ ಪ್ರಶ್ನೆಗೆ ಅವರು
ಬೇಸರವನ್ನೋ ಅಥವಾ
ಕೋಪವನ್ನೋ ಮಾಡಿಕೊಂಡು ಬಿಟ್ಟರೆ
ಅವರಿಂದ ನಿಮಗೆ ಯಾವುದೇ ಮರುಉತ್ತರ ಸಿಗುವುದಿಲ್ಲ,
ಅವರಿಂದ ನಿಮಗೆ ಯಾವುದೇ ಮರುಉತ್ತರ ಸಿಗುವುದಿಲ್ಲ,
ನೀವು ಮತ್ತೆ
ಮತ್ತೆ ಮೆಸೇಜ್/ಕರೆ ಮಾಡಿದರೂ ಅದನ್ನು ಸ್ವೀಕರಿಸುವ ಸ್ಥತಿಯಲ್ಲಿ ಅವರು ಇಲ್ಲದಿದ್ದಾಗ .
ನಿಮಗೂ ಆ ಬೇಸರ ಕೋಪವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುತ್ತದೆ !
ಆದುದರಿಂದ ಮುಖಾಮುಖಿ ಭೇಟಿಯಾಗುವಾಗ ಮಾತನಾಡಿ ಆಗ ಅವರು ಮುನಿಸಿಕೊಂಡರೂ
ಅಲ್ಲೇ ಕೈ ಹಿಡಿದು ಕ್ಷಮೆ ಕೇಳಿ ಸಮಾಧಾನಗೊಳಿಸಬಹುದು ಮನಸು ನಿರಾಳವಾಗುತ್ತೆ !
ನಿಮಗೂ ಆ ಬೇಸರ ಕೋಪವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುತ್ತದೆ !
ಆದುದರಿಂದ ಮುಖಾಮುಖಿ ಭೇಟಿಯಾಗುವಾಗ ಮಾತನಾಡಿ ಆಗ ಅವರು ಮುನಿಸಿಕೊಂಡರೂ
ಅಲ್ಲೇ ಕೈ ಹಿಡಿದು ಕ್ಷಮೆ ಕೇಳಿ ಸಮಾಧಾನಗೊಳಿಸಬಹುದು ಮನಸು ನಿರಾಳವಾಗುತ್ತೆ !
ಅಬ್ಬಾ!!
ಪ್ರೀತಿಯಲ್ಲಿ ಇಷ್ಟೆಲ್ಲಾ ಮಾಡಬೇಕೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಏಳಬಹುದು ..
ಪ್ರೀತಿಯಲ್ಲಿ ಇಷ್ಟೆಲ್ಲಾ ಮಾಡಬೇಕೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಏಳಬಹುದು ..
ಇಷ್ಟೇ ಅಲ್ಲಾ ಇನ್ನೂ ಇದೆ ಅದನ್ನು ನೀವೇ ಪ್ರೀತಿಸುವ ಗಳಿಗೆಯಲ್ಲಿ ಅರಿತು ನಡೆದುಕೊಳ್ಳಿ ..
ಸಂಬಂಧ ಮತ್ತು ಗಿಡ ಎರಡೂ ಸಹ ಒಂದೇ ರೀತಿಯೇ
ಸಂಬಂಧ ಮತ್ತು ಗಿಡ ಎರಡೂ ಸಹ ಒಂದೇ ರೀತಿಯೇ
ಅದು ಬೆಳೆಯಲಿಕ್ಕೂ,
ಉಳಿಯಲಿಕ್ಕೂ ನಾವು ಖಂಡಿತ effort ಹಾಕಲೇ ಬೇಕು .
ಇಲ್ಲದಿದ್ದರೆ
ಗಿಡ ಬಾಡಿ ಹೋಗುತ್ತೆ ಸಂಬಂಧ ಓಡಿ ಹೋಗುತ್ತೆ !
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ!
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ!
-ಪ್ರಕಾಶ್
ಶ್ರೀನಿವಾಸ್
Estu nija :) Elladhakku Poshane Mukhya Well said :) prathi sanna pryathna jeevan asukhavaagittirutthe (Y)
ReplyDeleteabba yest chennagi tilkondidheera yella thamma :-) ♡♥♡
ReplyDeletesuperb ....Ashakka
Deepika : Very Nice Anna :)
ReplyDeletejust superb article....
ReplyDelete