ನಿನ್ನ
ಕಣ್ಣುಗಳಿಗೆ ಕಾಡಿಗೆಯ ತೀಡಿಕೊಂಡ
ಆ ಕಪ್ಪು
ಕಡ್ಡಿಯನ್ನು ಕೊಟ್ಟುಬಿಡು ಹುಡುಗಿ!
ಈ ಜಗತ್ತಿನ
ಅದ್ಭುತ ಕಲಾಕೃತಿಗೆ
ಅಂತಿಮ ರೂಪಕೊಟ್ಟ
ಕುಂಚವನ್ನು
ನನ್ನಲ್ಲಿಯೇ
ಉಳಿಸಿಕೊಂಡೇ,
ಎಂದು ಕೊಂಚ
ಅಧಿಕವಾಗಿಯೇ ಬೀಗಿಬಿಡುತ್ತೇನೆ!
----------------------------------------------------------
ನೀನು ಕನ್ನಡಿಯ
ಎದುರು ನಿಂತು ಕಾಡಿಗೆ ತೀಡಿಕೊಳ್ಳುವಂತೆ!
ನಾನು ಕಾಗದದ
ಮುಂದೆ ಕುಳಿತು ಕವಿತೆಯನ್ನು ಬರೆಯುತ್ತೇನೆ!
ಎರಡೂ ಸುಂದರವೇ
ನಿನಗೆ ಸೇರಿದ ಮೇಲೆ !
----------------------------------------------------------
ಕಾಡಿಗೆಯ
ತೀಡಿಕೊಳ್ಳಲು ಕನ್ನಡಿಯೇ ಬೇಕೇ ?!
ನಿನ್ನ
ಬಿಂಬವನ್ನು ತೋರಿಸುವ ನನ್ನ ಕಣ್ಣುಗಳು ಸಾಕಾಗುವುದಿಲ್ಲವೇ!?
ನಿನ್ನನ್ನು ಕಂಡ
ಕ್ಷಣಗಳನ್ನು ಕನ್ನಡಿ ಶೇಖರಿಸಿಟ್ಟುಕೊಳ್ಳುವುದಿಲ್ಲ
ನಾನಾದರೂ
ಕವಿತೆಯಲ್ಲಿ ಕೂಡಿಟ್ಟುಕೊಳ್ಳುತ್ತೇನೆ ಕರುಣೆ ತೋರಿಸುವೆಯಾ !?
----------------------------------------------------------
ಬಂಗಾರವನ್ನು ಸಹ
ಬಯಸದವನು ನಾನು,
ನೀನು ಬಳಿದಿಟ್ಟ
ಕಾಡಿಗೆಯ ಮೇಲೆ ಮಾತ್ರ ಒಂದು ಕಣ್ಣಿದೆ !
----------------------------------------------------------
ನಾನು
ಕವಿಯಾಗಬೇಕು ಎನ್ನುವ ಆಸೆ ಹುಟ್ಟಿ ಬಿಟ್ಟಿದೆ ಹುಡುಗಿ
ಬೆರಳಲ್ಲಿ ನಿನ್ನ
ಕಾಡಿಗೆಯ ಕೊಟ್ಟು ಕವಿತೆಯ ಬರೆಯುವುದ ಕಲಿಸುವೆಯಾ ?!
ನೀನು ಕಣ್ಣಿಗೆ
ತೀಡಿಕೊಳ್ಳುವಂತೆ!
----------------------------------------------------------
ಅಂದದ ಕವಿತೆಗೆ 'underline' ಮಾಡುವಂತೆ ತಾನೇ ಹುಡುಗಿ
ನೀನು ನಿನ್ನ
ಕಣ್ಣುಗಳಿಗೆ ಕಾಡಿಗೆ ತೀಡುವುದು !
----------------------------------------------------------
ಹೇಗಾದರೂ ಮಾಡಿ
ನಿನ್ನ ಬಳಿ
ಕಾಡಿ ಬೇಡಿ
ಕಾಡಿಗೆಯ ಪಡೆದು ಬಿಡಬೇಕು!
ಕವಿತೆಗೆ
ಕಲ್ಪನೆಗಳು ಸಿಗದ ದಿನ ಅದನ್ನು ಬಳಸಿಕೊಳ್ಳಬಹುದು !
----------------------------------------------------------
ನೀನು ಕಾಡಿಗೆಯ
ತೀಡಿಕೊಳ್ಳಲು ನನ್ನ ಬೆರಳನ್ನು ಬಳಸಿಕೊಳ್ಳಬಾರದೆ ?!
ನನ್ನನ್ನು ಆಳಲು
ಅಂದಕ್ಕೆ ಅಧಿಕಾರ ಕೊಟ್ಟ ಗುರುತಾದರೂ ಉಳಿಯುತ್ತಿತ್ತು !!
----------------------------------------------------------
ನನ್ನನ್ನು ಕಾಡುವ
ನಿನ್ನ ಕಾಡಿಗೆಯಿಟ್ಟ ಕಣ್ಣುಗಳ ಮೇಲೆ ಕವಿತೆ
ಬರೆದು ಮುಗಿಸಲು
ಚೀನಾ ಮಹಾ ಗೋಡೆಯೂ ಸಹ ಸಣ್ಣದೆ !
----------------------------------------------------------
ನಿನ್ನ ಎದುರು
ನನ್ನ ಕಣ್ಣೀರನ್ನು ರೆಪ್ಪೆಯೊಳಗೆ ಬಂಧಿಸಿಟ್ಟಿದ್ದು!
ಅದನ್ನು ಕಂಡು
ನಿನ್ನ ಕಂಬನಿ ಕಾಡಿಗೆಯೇ ಅಳಿಸಿ ಬಿಡಬಾರದೆಂದು !
----------------------------------------------------------
ನಿನ್ನಾಸೆಯಂತೆ
ಪೂರ್ಣಚಂದಿರನಿಗೂ ಕಾಡಿಗೆ ತೀಡಿದೆ,
ಅಂದೇ
ಅಮಾವಾಸ್ಯೆಯಾಗಿ ಬಿಟ್ಟಿತು!
----------------------------------------------------------
ಕತ್ತಿಯನ್ನು ಸಾಣೆ ಹಿಡಿಯುವಂತೆ
ನೀನು ಕಣ್ಣಿಗೆ ಕಾಡಿಗೆಯ ತೀಡುವುದು!
----------------------------------------------------------
ಇಂದು ಬರೆದಿರುವ ಅಷ್ಟೂ ಕಾಡಿಗೆಯ ಕವನಗಳು
ನನ್ನನ್ನು ಅಂದು ನಿನ್ನ ಕಣ್ಣಿಗಿಟ್ಟ ಕಾಡಿಗೆ ಹೇಗೆ ಕಾಡಿತು ಎನ್ನುವುದಕ್ಕೆ ಸಾಕ್ಷಿ !
--------------------------------------
ಕಾಗುಣಿತ ಕಲಿಯದೆಯೇ ಕವಿತೆ ಬರೆಯುವ ಕಲೆ ನಿನ್ನ ಕಾಡಿಗೆಗೆ ಮಾತ್ರವೇ ಗೊತ್ತೇನೋ ಹುಡುಗಿ!
-------------------
ಕಳುವಾದ ನಿನ್ನ ಕಾಡಿಗೆಯನ್ನು ನಾ ನೀಡುವ ಕಾಗದದ ಮೇಲೆ ಹುಡುಕು ಕವಿತೆಯಾಗಿ ಕರಗಿರುತ್ತದೆ!
-----------
ನೀ ಕಾಡಿಗೆ ಇಟ್ಟಿದ್ದೆನೋ ಆ ಕಣ್ಣಿಗೆ ಕಿಡಿ ಹೊತ್ತಿಕೊಂಡಿದ್ದು ನನ್ನೀ ಮನದ ಕಾಡಿಗೆ!
--------------------------------------
ನಾನು ಕವಿಯಾಗುತ್ತೇನೆಂದು ಕನಸಿನಲ್ಲೂ ಕಲ್ಪಿಸಿಕೊಂಡಿರಲಿಲ್ಲ
ನೀ ನನ್ನೀ ಕೈಯ ಕಿರುಬೆರಳ ತುದಿಯಲ್ಲಿ ಕಾಡಿಗೆಯನ್ನು ತೆಗೆದು ನಿನ್ನ ಆ ಕಣ್ಣುಗಳಿಗೆ ತೀಡುವ ತನಕ!
--------------
ಒಂದೆರೆಡು ಸಾಲುಗಳನ್ನು ಬರೆದು ನಾ ಕವಿಯೆಂದು ಬೀಗುತ್ತಿದ್ದೆ ನೂರಾರು ಬಾರಿ ನಿನ್ನಯ
ಕಣ್ಣುಗಳನ್ನು ಕವಿತೆಯಾಗಿ ತೀಡಿ, ಏನೂ ತಿಳಿಯದಂತೆ ಮಲಗಿದ್ದ ಕಾಡಿಗೆಯನ್ನು ಕಾಣುವವರೆಗೂ!

Good one...
ReplyDeleteಕಾಡುವ ಹುಡುಗಿಯ ಕಾಡಿಗೆ ಕಣ್ಣಿಗೆ ಮನಸೋತ ಕವಿಯ ಮಧುರಾಭಿವ್ಯಕ್ತಿ. .

ReplyDeleteಅಬ್ಬಬ್ಬಾ.. ಕಾಡಿಗೆಯ ಬಗ್ಗೆ ಇಷ್ಟು ವಿಧವಾಗೆಲ್ಲಾ ಬರೆಯಬಹುದೇ..?
ReplyDeleteಸೂಪರ್...
wow Prakash lovely (Y) kaadigege istaadhre inna nimma hudigi sikkaga inna yaava kavanagalu bartthe :) just super :)
ReplyDeleteAnu