Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 24 January 2014

ಅವನು ಜ್ಯೋಕರ್ ಆಗುವುದಕ್ಕಾಗಿಯೇ ಹುಟ್ಟಿದ್ದು!ಜ್ಯೋಕರ್ ….
ಈ ಹೆಸರನ್ನು ಕೇಳಿದೊಡನೆ ನಮಗೆಲ್ಲಾ ನೆನಪಾಗುವುದು
ಒಂದು ನಕಲಿ ನಗುವಿನ ಮುಖವಾಡ ಧರಿಸಿ,
ಎಷ್ಟೇ ಕಷ್ಟವಿದ್ದರೂ ನಮನ್ನು ನಗಿಸಿ ಮನಸನ್ನು ಹಗುರ ಮಾಡುವ
ಸರ್ಕಸ್ ಜ್ಯೋಕರ್ !
ಮತ್ತೊಬ್ಬ ನಮ್ಮೆಲ್ಲಾ ಆಸ್ತಿಗಳನ್ನೂ , ಮಾನವನ್ನು ಕಸಿದುಕೊಂಡು ,
ನಮ್ಮ ಪರಿಸ್ಥಿತಿಯ ನೋಡಿ ನಗುವ ಜೂಜಾಟದ ಜ್ಯೋಕರ್ !
ಶತಮಾನಗಳಿಂದ ನಮ್ಮ ನೆನಪಿನಂಗಳದಲ್ಲಿ ಕೇವಲ ಈ ಇಬ್ಬರು ಜ್ಯೋಕರ್ಸ್ ಮಾತ್ರವೇ ಆಕ್ರಮಿಸಿಕೊಂಡಿದ್ದಾರೆ...!
ಆದರೆ ನೀವು ಒಮ್ಮೆ  Christopher Nolan ನಿರ್ದೇಶನದ
2008ರಲ್ಲಿ ತೆರೆ ಕಂಡ ಬ್ಯಾಟ್ ಮ್ಯಾನ್  ದಿ ಡಾರ್ಕ್ ನೈಟ್  
(batman:The Dark Knight)
ಅಂಗ್ಲ ಚಿತ್ರವನ್ನು ನೋಡಿದರೆ ....ನಿಮ್ಮ ನೆನಪಿನಂಗಳದಲ್ಲಿ ಇರುವ ಆ ಇಬ್ಬರು ಜ್ಯೋಕರ್ಸ್ ತಾನಾಗಿಯೇ ಜಾಗ ಖಾಲಿ ಮಾಡುತ್ತಾರೆ,
ಅಲ್ಲಿಗೆ  ದಿ ಡಾರ್ಕ್ ನೈಟ್  ಚಿತ್ರದಲ್ಲಿ  ಜ್ಯೋಕರ್ ಪಾತ್ರವನ್ನು ನಿರ್ವೈಸಿರುವ  
Heath Ledger ಬಂದು ನೆಲೆಯೂರುತ್ತಾನೆ ..!
ಮತ್ತೆ ನಿಮಗೆ ಜ್ಯೋಕರ್ ಎಂದ ಮರುಕ್ಷಣವೇ  ಕಣ್ಣ ಮುಂದೆ ಬರುವುದು ಅದೇ ದಿ ಡಾರ್ಕ್ ನೈಟ್  ಚಿತ್ರದ ಜ್ಯೋಕರ್!!
ಜ್ಯೋಕರ್ ಪಾತ್ರಕ್ಕೆ ತನ್ನದೇ ಆದ ಒಂದು ಇತಿಹಾಸವಿದೆ
ಆದರೆ ಆ ಹಿತಿಹಾಸವನ್ನು ತನ್ನ ಅದ್ಭುತವಾದ ಅಭಿನಯದ ಮೂಲಕ
Heath Ledger ಬದಲಾಯಿಸಿದ್ದಾನೆ !
ಚಿತ್ರದಲ್ಲಿ ಒಂದು ರೀತಿಯ ಸೈಕೋ ಪಾತ್ ಪಾತ್ರ ಅವನದು
ಚಿತ್ರದಲ್ಲಿ ವಿಲ್ಲನ್ ಕೂಡ ಅವನೇ ! ಬಹುಶ ಇದೊಂದು ಚಿತ್ರವಿರಬೇಕು
ನಾಯಕನಿಗಿಂತ  ಕಳ್ಳನಾಯಕನೇ ಹೆಚ್ಚಾಗಿ ಇಷ್ಟವಾಗುವ ಚಿತ್ರ !
ಮುಖದ ತುಂಬಾ ಬಿಳಿ ಮತ್ತು ತುಟಿಯನ್ನು ದಾಟಿ ಕೆಂಪು ಬಣ್ಣವನ್ನು ಮುಖಕ್ಕೆ ಬಳಿದುಕೊಂಡು
ಬಾಯಿಯ ಒಳಗಿನಿಂದ ಚಾಕುವಿನಲ್ಲಿ ಕುಯ್ದುಕೊಂಡ ಗುರುತಿರುವ
ವಿಕಾರದವಾದ ವದನ ಅದಕ್ಕಿಂತ ವಿಕೃತವಾದದ್ದು ಅವನ ಮನಸ್ಸು!
ಜ್ಯೋಕರ್ ಅವನನ್ನು ಆವರಿಸುವ ಕ್ಷಣ!

ಭಾವನೆಗಳು ಹೇಗೆ ಮನುಷ್ಯರನ್ನ ಬದಲಾಯಿಸುತ್ತೆ ಪ್ರೀತಿ,ಹಣ,ಸ್ನೇಹ,ನಂಬಿಕೆ ದ್ರೋಹ,ಪ್ರಾಣ ಭಯ.ಹೀಗೆ ಅವರಿಗೆ ಎದುರಾಗುವ ಇಲ್ಲ
ಅವರೇ ಎದುರಿಸುವ ವಿಷಯದಿಂದ ಅವರು
ಎಷ್ಟೇ ಒಳ್ಳೆಯವರಾಗಿರಲಿ
ಕೆಟ್ಟವರಾಗಿ ಬದಲಾಗುತ್ತಾರೆ ಅನ್ನೋದು ಆ ಜ್ಯೋಕರ್ ನ ಬಲವಾದ ನಂಬಿಕೆ !
ಇಲ್ಲ ಮನುಷ್ಯರು ಯಾವತ್ತೂ  ಎಲ್ಲರೂ ಕೆಟ್ಟವರಾಗುವುದಿಲ್ಲ,  
ಅವರಿಗೆ ಹೇಗೆ ನಡೆದು ಕೊಳ್ಳಬೇಕು ಹೇಗೆ ಎದುರಿಸಬೇಕು ಎನ್ನುವ ಜ್ಞಾನ ಇರುತ್ತದೆ
ತನ್ನ ಖುಷಿಗಾಗಿ ಇತರರಿಗೆ ಹಿಂಸೆ ಕೊಡುವುದಿಲ್ಲ ಹಾಗೂ ಕೊಲ್ಲುವುದೂ ಇಲ್ಲ
ಎನ್ನುವುದು ಚಿತ್ರದಲ್ಲಿನ ನಾಯಕ  ಬ್ಯಾಟ್ ಮ್ಯಾನ್ ನ ವಾದ!
ಇದುವೇ ಚಿತ್ರ ಕಥೆಯ ಮೂಲ !
ಸರಿ ನಾನು ನಿನಗೆ ಕೊಡುವ ಹಿಂಸೆಯಿಂದ ನೀನೇ ನನ್ನ ಕೊಲ್ಲುವಷ್ಟು
ಕೆಟ್ಟವನು ಆಗ್ತೀಯ ನೋಡು !

ಎಂದು ತನ್ನದೇ ಆದ ತಂತ್ರ ರೂಪಿಸುತ್ತಾ ಹೋಗುತ್ತಾನೆ ಜ್ಯೋಕರ್..
ಅವನ ಒಂದೊಂದೇ ತಂತ್ರವನ್ನು ಬ್ಯಾಟ್ ಮ್ಯಾನ್ ಮುರಿಯುತ್ತಾ ಬರುತ್ತಾನೆ

ಚಿತ್ರದ ಮೊದಲ ದೃಶ್ಯ..
ಕೆಲವು ಜನ ಜ್ಯೋಕರ್ ಮುಖವಾಡ ಧರಿಸಿ
ಒಂದು ಬ್ಯಾಂಕ್ ಕೊಳ್ಳೆ ಹೊಡೆಯಲು ಬರುತ್ತಾರೆ ...
ಆ ಕಳ್ಳರು ಜ್ಯೋಕರ್ ವೇಷದಾರಿಗಳಾಗಿ ಬ್ಯಾಂಕ್ ಒಳಗೆ ಬಂದು
ಐದು ಜೋಡಿಗಳು  ಬೇರೆ ಬೇರೆಯಾಗಿ
ಅವರಿಗೆ ಒಪ್ಪಿಸಿರುವ  ಕೆಲಸಗಳನ್ನ  ಮಾಡುತ್ತಾರೆ,
ಒಂದು ಜೋಡಿ ಬ್ಯಾಂಕ್ ನ ಮ್ಯಾನೇಜರ್ ಮೇಲೆ ಕಣ್ಣು ಇಟ್ಟರೆ,
ಮತ್ತೊಂದು  ಬ್ಯಾಕ್ ನ ಹಣದ ಲಾಕರ್ ಓಪನ್ ಮಾಡುವುದು !
ಇನ್ನೊಂದು ಜೋಡಿ ಬ್ಯಾಕ್ ನಿಂದ ಯಾವುದೇ ಕರೆಗಳು ಹೊರ ಹೋಗದಂತೆ ತಡೆಯುವುದು ಹೀಗೆ ....
ಅವರವರ ಕೆಲಸ ಮಾಡಿದ ಮೇಲೆ ಅವರ ಅವರಿಗೆಯೇ ತಿಳಿಯದ ಹಾಗೆ
ಜೊತೆಯಲ್ಲಿ ಇರುವ ಮತ್ತೊಬ್ಬನೇ ಅವರನ್ನ ಕೊಲ್ಲುತ್ತಾನೆ ...
ನಿಜವಾದ ಜ್ಯೋಕರ್ ನ ಗೇಮ್ ಪ್ಲಾನ್ ಇಲ್ಲಿಂದಲೇ ಶುರುವಾಗುವುದು
ಹೀಗೆ ಎಲ್ಲರನ್ನೂ ಕೊಂದ ಮೇಲೆ ಕೊನೆಯದಾಗಿ ಉಳಿಯುವುದು
ಇಬ್ಬರೇ  ಜ್ಯೋಕರ್ ವೇಷದಾರಿಗಳು ........!
ಅದರಲ್ಲಿ ಒಬ್ಬ ಹಣವನ್ನೆಲ್ಲಾ ಬ್ಯಾಗ್ ನಲ್ಲಿ ಹಾಕಿಕೊಳ್ಳುತ್ತಾ ಇರುತ್ತಾನೆ ಆಗ  
ನನಗೆ ನಿನ್ನ ಕೊಲ್ಲಲು ಆರ್ಡರ್ ಆಗಿದೆ ಎನ್ನುತ್ತಾನೆ
ಮುಂದೆ ಇರುವವ , ಬೇಡ ಬೇಡ ಸ್ವಲ್ಪ ತಡಿ
ಎಂದು ಸಮಯ ನೋಡುತ್ತಾ ಹಾಗೆ ಚೂರು ಜರುಗುತ್ತಾನೆ ...
ಬಾಗಿಲ ಹೊಡೆದು ಒಳಗೆ ಒಂದು ಸ್ಕೂಲ್ ಬಸ್ ಬರುತ್ತದೆ
ಆ ಬಸ್ ಗೆ ಸಿಲುಕಿ  ಕೊಲ್ಲಲು ಬಂದವನು ಸಾಯುತ್ತಾನೆ.
ಈಗ ಆ ಬ್ಯಾಂಕ್  ಮ್ಯಾನೇಜರ್ ಮಾತ್ರವೇ ಅಲ್ಲಿ ಉಳಿದಿರುವುದು ?
ಅವನು ಕೂಡ ಗಾಯದಿಂದ ಒದ್ದಾಡುತ್ತಾ ಇರುತ್ತಾನೆ
ಆಗ ಆ ಜ್ಯೋಕರ್ ವೇಷದಾರಿ ಸ್ಕೂಲ್ ವ್ಯಾನ್ ನಲ್ಲಿ  ಹಣ ಏರಿಸಿದ ಮೇಲೆ
ಕೆಳಗೆ ಇಳಿದು ಅವನ ಹತ್ತಿರ ಹೋಗಿ ತಾನು ಧರಿಸಿರುವ ಜ್ಯೋಕರ್ ಮುಖವಾದ ತೆಗೆದರೆ ?
ಮುಖವಾಡದ ಹಿಂದೆ ಇರುವುದೇ ನಿಜವಾದ ಜ್ಯೋಕರ್!
ಬ್ಯಾಂಕ್ ದರೋಡೆ!

ಮ್ಯಾನೇಜ್ ನ ಬಾಯಿಗೆ ಒಂದು ಬಾಂಬ್ ಇಟ್ಟು ಗಾಡಿ ಹತ್ತಿ ಹೊರಡುತ್ತಾನೆ
ಇಲ್ಲಿಂದ ಜ್ಯೋಕರ್ ನ ಆಟ ಶುರು ಚಿತ್ರದಲ್ಲಿ!
ಎಷ್ಟೋ ಕೋಟಿಯ ಲೆಕ್ಕದಲ್ಲಿ ಕೊಳ್ಳೆ ಹೊಡೆದ 
ಹಣದ ಕಂತೆಯನ್ನು ಬಟ್ಟೆಯ ಹಾಗೆ ಜೋಡಿಸಿರುತ್ತಾನೆ!
ಆ ಬ್ಯಾಂಕ್ ರಾಬರಿ ಮಾಡುವುದಕ್ಕೆ ಸ್ಥಳೀಯ ಕೆಲವು ಮುಖ್ಯವಾದ ಕಳ್ಳರ ಜೊತೆ ಕೈ ಜೋಡಿಸಿರುತ್ತಾನೆ ನನಗೆ ನೀವು ಸಹಾಯ ಮಾಡಿದರೆ ನಿಮಗೆ ಕೊಳ್ಳೆ ಹೊಡೆದ ಹಣದಲ್ಲಿ ಅರ್ಧ ಕೊಡುತ್ತೇನೆ ಎಂದು ಅದನ್ನು ಕೇಳಲು ಅಲ್ಲಿಗೆ
ಕಳ್ಳರು ಬರುತ್ತಾರೆ ?
ಕಳ್ಳರ ನಾಯಕ: ಈಗ ಎಲ್ಲಾ ಆಯಿತು ತಾನೇ ನಮಗೆ ಸೇರಿದ ಹಣ ನಮಗೆ ಕೊಟ್ಟು ಬಿಡು !
ಜ್ಯೋಕರ್: ಹೌದ ಸ್ವಲ್ಪ ನನ್ನ ಹಿಂದೆ ನೋಡು ?
ಹಿಂದೆ ಜ್ಯೋಕರ್ ನ ಕಡೆಯವರು ಹಣದ ಕಂತೆಯ ಮೇಲೆ ಪೆಟ್ರೋಲ್ ಸುರಿಯುತ್ತಾ ಇರುತ್ತಾರೆ

ಕಳ್ಳ: ಲೇಯ್ ನಿನಗೇನೂ ಹುಚ್ಚ ? ನನ್ನ ಅರ್ಧ ಹಣ ನನಗೆ ಕೊಟ್ಟು ಬಿಡು ?
ಜ್ಯೋ: ಹೌದ ಸರಿ ನನ್ನ ಹಣ ಕೆಳಗೆ ಇದೆ ಅದಕ್ಕೆ ಮಾತ್ರ ಬೆಂಕಿ ಇಡ್ತೀನಿ
ಅಂತ ಹೇಳಿ ಅಷ್ಟು ಹಣದ ರಾಶಿಗೆ ಬೆಂಕಿ ಇಟ್ಟು ಬಿಡುತ್ತಾನೆ
ಹೇಯ್ ನಾನು ನಿನ್ನ ಸುಮ್ನೆ ಬಿಡಲ್ಲ ಕಣೋ ಎಂದು ಕಳ್ಳ ಹೇಳುವಾಗ
ಯಾಕ್ರೋ ಹಣ ಹಣ ಅಂತ ಸಾಯ್ತೀರಾ ಹಣ ಏನೂ ಕೊಡಲ್ಲ ಕಣ್ರೋ
 ಇಲ್ಲಿ ಇರೋದು ಹಣ ಅಲ್ಲಾ, ಜನಗಳಿಗೆ ಒಂದು ಸಂದೇಶ!

ನಿನ್ನ ಇಲ್ಲೇ ಸಾಯಿಸ್ತೀನಿ ?
ಜ್ಯೋ: ಏನು ನನ್ನ ಸಾಯಿಸ್ತೀಯ ಈಗ ನಿನ್ನ ಜೊತೆ ಇರೋರೆ ಹೇಗೆ ನಿನ್ನೆ ಸಾಯಿಸ್ತಾರೆ ನೋಡು ಹಣ ಪದವಿ ಎಲ್ಲಾ ಕೆಲಸ ಮಾಡಿಸುತ್ತೆ ?
ಆ ಕಳ್ಳನ ಜೊತೆ ಇದ್ದವರೇ ,ಆ ಕಳ್ಳನನ್ನು ಸಾಯಿಸುತ್ತಾರೆ ....

ಇಲ್ಲಿಂದ ಅವನ ಭಾವನೆಗಳೊಂದಿಗೆ ಹೇಗೆ ಆಟ ಶುರು ಮಾಡುತ್ತಾನೆ
ಎನ್ನುವುದ ತಿಳಿಯುತ್ತದೆ!

ಜ್ಯೋಕರ್ ನ ಆಟಕ್ಕೆ ಒಂದು ಅಂತ್ಯ ಹಾಡುವುದಕ್ಕೆ ಬ್ಯಾಟ್ ಮ್ಯಾನ್ ಮತ್ತೆ
ಕಾಣಿಸಿಕೊಳ್ಳುತ್ತಾನೆ ...
ನಾಯಕ-ಕಳ್ಳನಾಯಕ ಜುಗಲ್ ಬಂಧಿಯನ್ನು ಚಿತ್ರದಲ್ಲಿ ನೋಡಿಯೇ ಸವಿಯಬೇಕು!

ಜೋಕರ್ ನ ಒಂದೊಂದು ಪ್ಲಾನ್ ಗಳೂ ಚಿತ್ರಕತೆಗೆ ಮತ್ತಷ್ಟು ರೋಚಕತೆಯ ಮೂಡಿಸುತ್ತೆ ....
ನಾಯಕ? ಕಳ್ಳನಾಯಕ ? ಯಾರು ಗೆಲ್ಲುತ್ತಾರೆ ಎನ್ನುವ
ಆ ಪ್ರಶ್ನೆಗೆ ಕೊನೆಯಲ್ಲಿ ಉತ್ತರ ಸಿಗುತ್ತದೆ ?
ಗೆಲ್ಲುವುದು ಕಳ್ಳನಾಯಕ!!!! ಹೌದು
ಜೋಕರ್ ಚಾಲೆಂಜ್ ಮಾಡಿದ ಹಾಗೆ
ಒಂದು ಹಿರಿಯ ಅಧಿಕಾರಿಯನ್ನು ಕೆಟ್ಟವನಾಗಿಸಿ ಬಿಡುತ್ತಾನೆ !
ಕೊನೆಗೆ  ತಾನು ಮಾಡದ ಕೊಲೆಗೆ ಶಿಕ್ಷೆಯಾಗಿ  
ಬ್ಯಾಟ್ ಮ್ಯಾನ್ ಊರನ್ನೇ ಬಿಡುತ್ತಾನೆ ಅಲ್ಲಿಗೆ ಚಿತ್ರ ಮುಗಿಯುತ್ತೆ!
ಆದರೆ ಆ ಜೋಕೆರ್ ಪಾತ್ರದಾರಿಯ ನಟನೆ
ನಮ್ಮೊಳಗೇ ಸದಾ ಅಚ್ಚಾಗಿ ಉಳಿಯುತ್ತೆ ......!
ಹೀಗೆ ತನ್ನ ನೈಜವಾದ ಅಭಿನಯದ ಮೂಲಕ ನನ್ನನ್ನು ಮೋಡಿ ಮಾಡಿದವನ
ಬಗ್ಗೆ ಮತ್ತಷ್ಟು ತಿಳಿಯ ಬಯಸಿದೆ ಅವನ ಹಿಂದಿನ ಚಿತ್ರ ಮುಂದೆ ಬರುವ ಚಿತ್ರಗಳು ಹೀಗೆ ...ಹುಡುಕಲು ಹೊರಟರೆ ಗೂಗಲ್ ತಾನೇ ಗುರು....
ಅವನ ಬಗ್ಗೆ ಮಾಹಿತಿಗಳ ನೋಡುತ್ತಲೇ ಇದ್ದಾಗಲೇ ಕಣ್ಣಿಗೆ ಬಿದಿದ್ದು ...
4 April 1979ರ ಆಸ್ಟ್ರೇಲಿಯದ ಪರ್ತ್ ನಲ್ಲಿ  ಜನಿಸಿದ ಅವನ
ಪೂರ್ಣ ಹೆಸರು Heath Andrew Ledger..
ಅವನ  ತಾಯಿ ಸ್ಕೂಲ್ ಟೀಚರ್
ಅಪ್ಪ ರೇಸ್ ಕಾರ್ ಡ್ರೈವರ್ ....
ಹೀಗೆ ಅವನ ವಿದ್ಯಭಾಸ್ಯ ಹುಟ್ಟಿದ ಊರಿನಲ್ಲಿಯೇ ಮುಗಿಸಿ
1990ನಲ್ಲಿ ಬೇರೆ ಬೇರೆ ಕಡೆ ಹೋಗಿ ಚಿತ್ರದಲ್ಲಿ ತೊಡಗಿಸಿಕೊಂಡ
ಹತ್ತೊಂಬತ್ತು ಚಿತ್ರಗಳಲ್ಲಿ ಕೆಲಸ ಮಾಡಿದ ..
ಮತ್ತು ಅವನದೇ ಆದ ಸ್ವಂತ ನಿರ್ಮಾಣದ  ಹಾಗೂ ನಿರ್ದೇಶನದ ಸಂಗೀತ ವೀಡಿಯೊ ಆಲ್ಬಮ್ ಗಳು ಕೂಡ ಹೊರತಂದ  ಅವನಿಗೆ
ಚಿತ್ರ ನಿರ್ದೇಶಕನಾಗಬೇಕು ಎನ್ನುವ ಕನಸಿತ್ತು ಆದರ ಅವನ ನಟನ ಎಲ್ಲರಿಗೂ ಇಷ್ಟವಾದ ಕಾರಣ ನಟನಾಗಿಯೇ ಮುಂದುವರಿದ ...
ಹೀಗೆ  ಸಣ್ಣಪುಟ್ಟ ಚಿತ್ರಗಳಲ್ಲಿ  ಕಾಣಿಸಿಕೊಳ್ಳುತ್ತಿದ್ದರೂ
ಅವನಿಗೆ ಯಾವುದೇ ದೊಡ್ಡ ಮಟ್ಟದ ಯಶಸ್ಸು ಸಿಗುದಿದ್ದು
ಮನದೊಳಗಿನ ವೇದನೆಗೆ ಕಾರಣವಾಗಿತ್ತು ...
ಹೇಗೋ ಕೊನೆಗೂ ಅವನ ಪ್ರತಿಭೆಗೆ ಒಂದು ದೊಡ್ಡ ವೇದಿಕೆ ಸಿಕ್ಕೆ ಬಿಟ್ಟಿತು
ಅದುವೇ ಹೆಸರಾಂತ
Christopher Nolan ನಿರ್ಮಿಸಿ, ನಿರ್ದೇಶಿಸುವ
ಬ್ಯಾಟ್ ಮ್ಯಾನ್ ದಿ ಡಾರ್ಕ್ ನೈಟ್ !
ಅದರಲ್ಲಿ  ಕಳ್ಳನಾಯಕನ ಪಾತ್ರ
ಅದು ನಾಯಕನಷ್ಟೇ ಮುಖ್ಯವಾದದ್ದು
ತನ್ನ ಬದುಕಿನ ಬಹು ಮುಖ್ಯವಾದ ಚಿತ್ರವಾಗುತ್ತದೆ ಇದು ಎಂದುಕೊಂಡುವನು
ಅದಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧನಾದ
ಮೊದಲೇ ಜ್ಯೋಕರ್ ಎಂದರೆ ವಿಚಿತ್ರವಾದ ಅವಭಾವ ಇದ್ದೆ ಇರುತ್ತೆ
ಅದರಲ್ಲೂ ಆ ಚಿತ್ರದಲ್ಲಿ ಬರುವವನು ಚೂರು ಅತೀ ಎನ್ನಿಸುವಷ್ಟು ವಿಚಿತ್ರವಾಗಿ ಆಡುವವನಾಗಿರುತ್ತಾನೆ...!
ಇಷ್ಟೆಲ್ಲಾ ಗಮನದಲ್ಲಿ ಇಟ್ಟುಕೊಂಡು ಆತ ತಾಯಾರಿ ಮಾತ್ರ ಒಂದು ವಿಚಿತ್ರವಾದದ್ದು ಅನ್ನಿಸಿ ಬಿಡುತ್ತೆ ....

ಒಂದು ಅಚ್ಚರಿ ತರಿಸುವ ವಿಷಯ !
ಡಾರ್ಕ್ ನೈಟ್ ನಲ್ಲಿ ಜ್ಯೋಕೆರ್ ಪಾತ್ರ ಮಾಡುವಾಗ
ಅದು ನೈಜವಾಗಿ ಮೂಡಬೇಕು ಎಂದು
ಆತ ತನ್ನನ್ನು ತಾನೇ ಒಂದು ಕತ್ತಲ ಕೊನೆಯಲ್ಲಿ ಕೂಡಿ ಹಾಕಿಕೊಂಡು
ಹಾಗೆ ಯಾರ ಬಳಿಯೂ ಮಾತನಾಡದೆ ಇದ್ದು ಆ ಸೈಕೋತನ ಎನ್ನುವುದು
ತನ್ನನ್ನು ಆವರಿಸಬೇಕು ಎನ್ನುವ ಸಲುವಾಗಿ ಹಾಗೆ ಮಾಡಿದ ...
ಒಂದು ಪಾತ್ರಕ್ಕಾಗಿ ನಟರು ಹೇಗೆಲ್ಲಾ ತಮ್ಮನ್ನು ತಾವು
ಬದಲಾಯಿಸಿಕೊಳ್ಳುತ್ತಾರೆ ...?
ದೇಹರಚನೆಯಲ್ಲಿ ಹಾಗೂ ಅವಭಾವ ಹೀಗೆ ಬದಲಾಯಿಸಿಕೊಳ್ಳುವುದನ್ನು ನೋಡಿದ್ದೇನೆ
ಅವನ್ ಇವನ್ ಎನ್ನುವ ನಿರ್ದೇಶಕ ಬಾಲ
ತಮಿಳು ಚಿತ್ರದಲ್ಲಿ ನಟ ವಿಶಾಲ್
ಮೆಲ್ಲಗನ್ನು ಮಾಡಿಕೊಂಡಿದ್ದು ನೋಡಿದ್ದ ನನಗೆ ನಿಜಕ್ಕೂ ...
  Heath Ledgerನ ಆ ವಿಚಿತ್ರವಾದ ನಡವಳಿಕೆ ಅಚ್ಚರಿಯೇ ಸರಿ!
ಹಾಗೆ ಮುಂದೆ ಓದುತ್ತಾ ಹೋದ ಹಾಗೆ...
ಮತ್ತಷ್ಟು ವಿಷಯಗಳು ಗಮನಕ್ಕೆ ಸೆಳೆದವು...


ಹಗಲಿರುಳು ಎನ್ನದೆ ಜ್ಯೋಕರ್ ಪಾತ್ರದಲ್ಲೇ ತಲ್ಲಿನವಾಗಿದ್ದ
ಕಾರಣಕ್ಕೆ ಹೀತ್ ಲೆಡ್ಜರ್ ಒಂದು ರೀತಿಯ
ಮಾನಸಿಕವಾದ ಖಿನ್ನಕೆಗೆ ಒಳಗಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದ ,
ಮಾನಸಿಕತಜ್ಞರ ಸಲಹೆಯ ಮೇರೆಗೆ ಔಶಧಿಗಳನ್ನೂ ತೆಗೆದುಕೊಳ್ಳುತ್ತಿದ್ದ
ಹೀಗೆ ದಿನಗಳು ಉಳುರಿದವು ..
ತಾನು ಅಭಿನಾಯಿಸಿದ ಚಿತ್ರ ಬಿಡಗಡೆಯಾಗಲಿಲ್ಲ !
ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ಚಿತ್ರನಿರ್ಮಾಣದವರು ತೊಡಗಿದ್ದರು
ಆರುತಿಂಗಳ ನಂತರ ಅದೊಂದು ದಿನ
ಜನವರಿ 22 -2008 ರಂದು ಮಧ್ಯಾಹ್ನ 2:45ಕ್ಕೆ  
ಹೀತ್ ಲೆಡ್ಜರ್ ತನ್ನ ಹಾಸಿಗೆಯಲ್ಲಿ
ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ನೋಡಿದ ಮನೆಗೆಲಸದಾಕೆ...
ತುರ್ತು ದೂರವಾಣಿಗೆ ಕರೆ ಮಾಡಿ ವಿಷಯ ತಿಳಿಸುತ್ತಾಳೆ
ಅಲ್ಲಿಗೆ ಬರುವ ಆಂಬುಲೆನ್ಸ್ ...ಅವನನ್ನು ಏರಿಸಿಕೊಂಡು ಹೋಗಿ
ಚಿಕಿತ್ಸೆ ಕೊಡಲು ಮುದ್ದಾಗುತ್ತಾರೆ ಆದರೆ
ಹೀತ್ ಲೆಡ್ಜರ್ ನ ಪ್ರಾಣ ಪಕ್ಷಿ ಆದಾಗಲೇ ಹಾರಿ ಹೋಗಿರುತ್ತದೆ ...
ಅವನ ಸಾವಿನ ಸುದ್ದಿಯನ್ನು 3:36ಕ್ಕೆ ಅಧಿಕೃತವಾಗಿ ಘೋಷಿಸಲಾಗುತ್ತದೆ !
ಅಲ್ಲಿಗೆ ಈ ಶತಮಾನದ ಜ್ಯೋಕರ್ ತನ್ನ ಬದುಕಿಗೂ ಅಂತಿಮ ತೆರೆ ಎಳೆದುಕೊಂಡ ....!
ಸಾವಿರ ಕನಸುಗಳ ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದಿದ್ದ
ಒಬ್ಬ ಒಳ್ಳೆಯ ನಟನ ಅಂತ್ಯ ಹೀಗೆ ದುರಂತದಲ್ಲಿ ಕೊನೆಕೊಂಡಿದ್ದು
ಚಿತ್ರರಸಿಕರ ಮನಸಿನಲ್ಲಿ ಶೋಕದ ಛಾಯೆಯ ಮೂಡಿಸಿ ಬಿಟ್ಟಿತು!

ಕೊನೆಗೆ ಆತ ಸತ್ತು ಆರುತಿಂಗಳ ನಂತರ ಪ್ರಪಂಚದ್ಯತಂತ ಬ್ಯಾಟ್ ಮ್ಯಾನ್ ತೆರೆಗೆ ಅಪ್ಪಳಿಸಿತು !
ಅದರಲ್ಲಿ ಜ್ಯೋಕರ್ ಪಾತ್ರದಲ್ಲಿದ್ದ ನಟನ ಮನೋಹಕ ಅಭಿನಯವನ್ನು
ಕಂಡು ಚಪ್ಪಾಳೆ ತಟ್ಟದ ಕೈಗಳಿಲ್ಲ !
ಆದರೆ ಅದನ್ನು ಕೇಳಿಸಿಕೊಳ್ಳುವುದಕ್ಕೆ ಹೀತ್ ಲೆಡ್ಜರ್ ಬದುಕಿರಲಿಲ್ಲ !
ಅವನ ನಟನೆಗೆ ಸಿಗಬೇಕಿದ್ದ ಅಷ್ಟು ಪ್ರಸಸ್ತಿಗಳು ಅವನ ಹೆಸರನ್ನು  ಹಿಡಿದು ಕೂಗಿದವು
ಆದರೆ ಅದನ್ನ ಕರದಿಂದ ಸ್ವಿಕರಿಸಲು ಅವನು ಜೀವಂತ ಇರಲಿಲ್ಲ!
ಅವನಿಗೆ ಹೆಸರಿಟ್ಟ ಹೆತ್ತವರು ಅವನ ಪರವಾಗಿ ಸ್ವೀಕರಿಸಿದರು !
ಗೂಗಲ್ ನಲ್ಲಿ ಜ್ಯೋಕರ್ ಎಂದು ಹುಡುಕಿದರೇ ಕಣ್ಣಿಗೆ ಬೀಳುವುದೇ ಬರೀ ಇವನೇ ಚಿತ್ರಗಳೇ !
ಇಂದಿಗೂ ಆ ಜ್ಯೋಕರ್ ನ ನಟನೆ ಮನಸಿನಲ್ಲಿ ಹಸಿರಾಗಿಯೇ ಇದೆ !

-ಪ್ರಕಾಶ್ ಶ್ರೀನಿವಾಸ್   3 comments:

  1. ತುಂಬ ಚೆನ್ನಾಗಿ ವಿವರಿಸಿದ್ದೀರ.... ಕೀಪ್ ರೈಟಿಂಗ್..

    ReplyDelete
  2. ಮಾಹಿತಿ ಭರಿತ ಚೊಕ್ಕವಾದ ಲೇಖನ.

    ReplyDelete
  3. ಎಲ್ಲರಿಗೂ ಪ್ರೀತಿಯ ಧನ್ಯವಾದಗಳು ಮಿತ್ರರೇ

    ReplyDelete