Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday, 22 January 2014

ಕೊನೆಯದಾಗೊಂದು ಪ್ರಯತ್ನ!


ಕೊನೆಯದಾಗೊಂದು ಪ್ರಯತ್ನ!
------------------------
ಎದುರಿನಲ್ಲಿ ನಿಂತಿರುವವಳೇ
ನಿನ್ನ ಹಿಂದೆಯೇ ಸುಳಿದಾಡಿದ
ನನ್ನ ಪ್ರೀತಿಯ ಸೂಚನೆ ನಿನಗೆ ಸಿಗಲೇ ಇಲ್ಲವೇ !?
ಕಣ್ಣ ಸನ್ನೆಯಲ್ಲಿ ತಿಳಿಸಿದೆ
ಬರಹದಲ್ಲಿ  ಬರೆದು ಕಳುಹಿಸಿದೆ
ಅವುಯಾವುದೂ ನಿನ್ನಯ ಮುಚ್ಚಿಟ್ಟ ಮನದ ಬಾಗಿಲ
ಬಂದು ಬಡಿಯಲೇ ಇಲ್ಲವೇ !?                           
ಹೋಗಲಿ ಬಿಡು ಇನ್ನು ನನ್ನಿಂದ ಆಗದು
ಸೋತು ಸುಣ್ಣವಾಗಿ ಬಿಟ್ಟಿದ್ದೇನೆ!
ಆದರೆ ಕೊನೆಯದಾಗಿಯೊಂದು ಮನವಿ?

ಮಲ್ಲಿಗೆಯ ಕೊಯ್ದು ತಂದು ನಿನ್ನ ಮುಡಿಗೆ ಮೂಡಿಸಬೇಕು
ಎನ್ನುವ ನನ್ನ ಬಯಕೆ ಈಡೇರಲೇ ಇಲ್ಲಾ!
ಕಡೇಪಕ್ಷ ನಿನ್ನಯ ಕೂದಲಿನ  ನಾಲ್ಕು ಎಳೆಗಳನ್ನಾದರೂ ನೀಡು
ನಿನ್ನ ವದನವ ವರ್ಣಿಸಿದ ಕವಿತೆಯ ಹೊತ್ತ ಹಾಳೆಯ ಹಿಂದಿಟ್ಟುಕೊಳ್ಳುತ್ತೇನೆ !

ಇನ್ನು ಅಗಲಿಕೆಯ ಅಂಗಳದಲ್ಲಿ ನಾನು ಅನಾಥನಂತೆ ಅಳುವಾಗ
ಕಣ್ಣೀರ ಒರೆಸಲು ನಿನ್ನ ಹೂ ಬೆರಳು ಇರುವುದಿಲ್ಲ
ಕೈಯಲ್ಲಿ ಹಿಡಿದಿರುವ ಕರವಸ್ತ್ರವನ್ನಾದರೂ ಕೊಟ್ಟುಬಿಡು !
ನಿನ್ನನ್ನೇ ನೆನೆದು ನಾನೇ ಒರೆಸಿಕೊಳ್ಳುತ್ತೇನೆ!

ನನ್ನೊಂದಿಗೆ ಏಳು ಹೆಜ್ಜೆ ಇಡುವುದಿಲ್ಲವೆಂದು  
ನಿರ್ಧರಿಸಿ ಬಿಟ್ಟೆ ಅಲ್ಲವೇ
ಒಂದೇ  ಒಂದು ಹೆಜ್ಜೆ  ಹಿಂದಿಡು...
ಒಂದು ಹಿಡಿ  ನಿನ್ನಯ ಕಾಲಡಿ ಮಣ್ಣನ್ನು
ತೆಗೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡು!
ನಿನ್ನಂತೆಯೇ ಒಂದು ಗೊಂಬೆಯ ಮಾಡಿಟ್ಟು
ಎಂದೂ ಆರದ ನೆನಪಿನ ಹಣತೆಯ ಬೆಳಕಿನಲ್ಲಿ
ನಿತ್ಯವೂ ನಿನ್ನನ್ನು ಪೂಜಿಸುತ್ತೇನೆ!

ಓಹ್ .......!!
ಮನಸ್ಪೂರ್ತಿಯಾಗಿ ಧನ್ಯವಾದಗಳು ಹುಡುಗಿ
ನಿನ್ನೊಂದಿಗೆ ಬಾಳಬೇಕು ಎನ್ನುವ ನನ್ನ ಆಸೆಯ
ಹಸೆಮಣೆ ಏರಿ ಈಡೇರಿಸದಿದ್ದರೂ..
ನನ್ನೀ ಪುಟ್ಟ ಕನಸುಗಳನ್ನು ನನಸು ಮಾಡಿದಕ್ಕೆ.
ನೀನಿನ್ನು ಹೊರಡು ಮುಸ್ಸಂಜೆಯಾಯಿತು
ನಿನ್ನಯ ಬದುಕಿನಲ್ಲಿ ನನ್ನ ಪ್ರೀತಿಯು ಮುಳುಗಿದ ರೀತಿ
ಸೂರ್ಯನೂ ಮುಳುಗಲಿದ್ದಾನೆ !
ನಾನು ಹೋಗಿ ಬರುತ್ತೇನೆ ಮುಂಜಾನೆ ಚೂರು ಬೇಗನೆ
ಎದ್ದೇಳಬೇಕು ಕೊಳ್ಳೇಗಾಲಕ್ಕೆ ಹೋಗುವ ಕೆಲಸವಿದೆ.....!!!!  
-ಪ್ರಕಾಶ್ ಶ್ರೀನಿವಾಸ್ 

7 comments:

  1. ಕೊನೆಯದಾಗೊಂದು ಪ್ರಯತ್ನ!
    ------------------------
    ಎದುರಿನಲ್ಲಿ ನಿಂತಿರುವವಳೇ
    ನಿನ್ನ ಹಿಂದೆಯೇ ಸುಳಿದಾಡಿದ
    ನನ್ನ ಪ್ರೀತಿಯ ಸೂಚನೆ ನಿನಗೆ ಸಿಗಲೇ ಇಲ್ಲವೇ !?
    ಕಣ್ಣ ಸನ್ನೆಯಲ್ಲಿ ತಿಳಿಸಿದೆ
    ಬರಹದಲ್ಲಿ ಬರೆದು ಕಳುಹಿಸಿದೆ
    ಅವುಯಾವುದೂ ನಿನ್ನಯ ಮುಚ್ಚಿಟ್ಟ ಮನದ ಬಾಗಿಲ
    ಬಂದು ಬಡಿಯಲೇ ಇಲ್ಲವೇ !?
    ಹೋಗಲಿ ಬಿಡು ಇನ್ನು ನನ್ನಿಂದ ಆಗದು
    ಸೋತು ಸುಣ್ಣವಾಗಿ ಬಿಟ್ಟಿದ್ದೇನೆ!
    ಆದರೆ ಕೊನೆಯದಾಗಿಯೊಂದು ಮನವಿ?

    ಬರೆದ ದಿನಾಂಕ!
    20/11/2013

    ReplyDelete
  2. superrrrrrrrrrrrr :)

    ReplyDelete
  3. ಬೇಕು ಬೇಕು ಅಂತಾ ಏನೆಲ್ಲಾ ಕೇಳ್ತಾ ಹಾಗೆ ಅವಳನ್ನೇ ಕೇಳಿಬಿಡಬೇಕು ಸುತ್ತಿ ಬಳಸಿ .. ಪ್ರೀತಿ ಒಪ್ಪಬಹುದು ಅನ್ಸುತ್ತೆ .. :)

    ReplyDelete
  4. ಅಯ್ಯೋ ಪಾಪ ಹುಡುಗಾ !!! ಅಂತ ಆ ಹುಡುಗಿ ಎಲ್ಲ ಕೊಟ್ಟರೆ ... ನಮ್ಮ ಶ್ರೀ ಶ್ರೀ ಶ್ರೀ ಪ್ರಕಾಶ್ ಅವರು ಕೊಳ್ಳೆಗಾಲದ ದಾರಿ ಹಿಡಿದು ಮತ್ತೆ ಪ್ರೀತಿಯಲ್ಲಿ ಬೀಳುವರೋ ಅಥವಾ ಕಪ್ಪು ಕೈಚಳಕ ತೋರಿಸುವರೋ !!! ಕಾದು ನೋಡಬೇಕಿದೆ :D :P ;)

    ReplyDelete
  5. ಕೊಳ್ಳೇಗಾಲಕ್ಕೆ ಏಕೆ? ವಶೀಕರಣ ಮಾಡಿಸೋಕಾ?...

    ReplyDelete
  6. ಡೇಪಕ್ಷ ನಿನ್ನಯ ಕೂದಲಿನ ನಾಲ್ಕು ಎಳೆಗಳನ್ನಾದರೂ ನೀಡು
    ನಿನ್ನ ವದನವ ವರ್ಣಿಸಿದ ಕವಿತೆಯ ಹೊತ್ತ ಹಾಳೆಯ ಹಿಂದಿಟ್ಟುಕೊಳ್ಳುತ್ತೇನೆ ! super ide lines

    ReplyDelete