ನಾಗಮಂಡಲ!
--------------
ವಿರಹದ ವೇದನೆಯು
ವೇಳೆಯಿಲ್ಲದ ವೇಳೆಯಲ್ಲಿ ಅಂಗಳದ ಮಧ್ಯೆ ನಿಂತು ನಗುತ್ತಿದೆ!
ಯಾರೂ ಇಲ್ಲವೆಂದು
ತಿಳಿದೂ ಕಾಮವು
ಬಂದು ಕದವ ತಟ್ಟುದಿದೆ..!
ನನ್ನೊಳಗೆ
ಬಚ್ಚಿಟ್ಟಕೊಂಡಿದ್ದ ಬಯಕೆಗಳು ಅಗ್ನಿಯಂತೆ ಉರಿಯುವಾಗೆಲ್ಲಾ
ನೀ ಬಿಚ್ಚಿಟ್ಟು
ಹೋದ ಅಂಗಿಯೇ ನನ್ನ ಅಂಗವ ಆಲಂಗಿಸಿಕೊಂಡು ತಣಿಸುತ್ತಿದೆ ..!
ನನ್ನುಸಿರ ಹಿಡಿದಿರುವ ಕೋಣೆಯೊಳಗೆ ನಾನೊಬ್ಬಳೆ ಪಿಸುಗುಡುವಾಗ
ಜೊತೆ ಸೇರಿ ಗೇಲಿ
ಮಾಡಿಕೊಂಡು ನಗುತ್ತಿದೆ ಜೋಡಿ ಕೈಬಳೆ!
ತೆಂಗಿನ ಗರಿಯಲ್ಲಿ
ಹೆಣೆದ ಛಾವಣಿಯ ಸೀಳಿಕೊಂಡು
ನೆಲದ ಮೇಲೆ
ಬಿದ್ದಿರುವ ನೇಸರನ ಕಿರಣಗಳ ಮುಂದೆ
ನೈವೈದ್ಯವಿಟ್ಟು ನಮಿಸಿದ್ದೇನೆ ಮುಂಜಾನೆ ಬೇಗನೆ ಮುಖ ಮಾಡದಿರು!
ಸಂಜೆಯ ಸೇತುವೆಯ ದಾಟಿ
ಬರುವ
ಕತ್ತಲ ಕಾಲಿಗೆ
ಬಿದ್ದು ಕೇಳಿಕೊಳ್ಳುತ್ತೇನೆ ನಮಗಾಗಿ ಸ್ವಲ್ಪ ಕಾದಿರು !
ಕಿಟಕಿಯ ಬಳಿ
ಕೂತು ನೀ ಬರುವ ಹಾದಿಯ ಕಾಯುತ್ತಿದ್ದೇನೆ ಹುಡುಗ
ದೀಪಕ್ಕೆ ಎಣ್ಣೆಯ
ಚೂರು ಬಿಟ್ಟ ಅರ್ಧ ಬತ್ತಿಯ ಇಟ್ಟು....!
ನಮ್ಮ ನಡುವೆ
ಬೆಳಕು ಬೇಗಾ ಮುಳುಗಲೆಂದು
ಈ ಇರುಳುಗಳ
ಪೋಣಿಸುವ ದಾರ ನಾವಾಗಬೇಕು!
-ಪ್ರಕಾಶ್ ಶ್ರೀನಿವಾಸ್
ಕಾವ್ಯಧಾರೆ ಅತ್ಯಂತ ಉತ್ಕೃಷ್ಠವಾಗಿದೆ ಗೆಳೆಯರೆ.ಒಬ್ಬ ಪ್ರಬುದ್ಧ ಹಾಗೂ ಕನ್ನಡ ಸ್ನಾತಕನಿಗೂ ಮಿಗಿಲಾದ ರಚನೆ ಇದು.ಅನ್ಯ ಭಾಷಿಕರಾಗಿದ್ದು ಕನ್ನಡವನ್ನು ತಾಯಿ ಭಾಷೆಯಂತೆ ಅನುಭವಿಸಿ ಬರೆದ ಕವಿತೆಯನ್ನು ಓದಿ ಸೋಜಿಗವೂ ಆಗುವುದು.ನಿಜಕ್ಕೂ ಈ ಕವಿತೆಯನ್ನು ವಾಚಿಸಿದ ನಂತರ ನಿಮಗೊಂದು ಸೆಲ್ಯೂಟ್ ಮಾಡಬೇಕಿನಿಸುವಷ್ಟು ಹೆಮ್ಮೆ ಮೂಡುವುದು.
ReplyDeleteಕಿಟಕಿಯ ಬಳಿ ಕೂತು ನೀ ಬರುವ ಹಾದಿಯ ಕಾಯುತ್ತಿದ್ದೇನೆ ಹುಡುಗ
ದೀಪಕ್ಕೆ ಎಣ್ಣೆಯ ಚೂರು ಬಿಟ್ಟ ಅರ್ಧ ಬತ್ತಿಯ ಇಟ್ಟು...............ನಿಜಕ್ಕೂ ಇಂದಿನ ಪ್ರಸಿದ್ಧ ಕವಿಗಳನ್ನು ಮೀರಿಸುವಂತ ಪ್ರಬುದ್ಧ ಚಿಂತನೆಯ ಸಾಹಿತ್ಯವಿದು.ಶುಭವಾಗಲಿ ನಿಮಗೆ,ನಾಡಿನ ಮನೆ ಮಾತಾಗಿರಿ.
ನಿಮ್ಮೀ ಸ್ಫೂರ್ತಿ ತುಂಬುವ ಮಾತುಗಳಿಗೆ
ReplyDeleteನನ್ನ ಮನದಾಳದ ವಂದನೆಗಳು ಗೆಳೆಯ!
ನಿಮ್ಮ ಸಲಹೆ ಸೂಚನೆಗಳು ಹೀಗೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇನೆ!!
adbhutha :)
ReplyDeleteAshakka
ReplyDeleteWow Awesome lines thammaa :-) ista aithu. .
adhbhuta... mechide guruvarya.
ReplyDeletethumba adhbuthavagidhe anna
ReplyDeleteಎಲ್ಲರಿಗೂ ಪ್ರೀತಿಯ ಧನ್ಯವಾದಗಳು !
ReplyDelete