ಸರೋಜಮ್ಮ ....
ಇರುವುದು ಗವಿಪುರಂ
ಅವರಿಗೆ ಇಬ್ಬರು ಗಂಡು ಮಕ್ಕಳು,
ಗಂಡ ಕೆಲವು ವರುಷಗಳ ಹಿಂದೆಯೇ ತೀರಿಕೊಂಡಿದ್ದರು ..
ಮಾರ್ಕೆಟ್ ನಲ್ಲಿ ಹೂ ಕಟ್ಟಿ
ಮಾರಿ ಎರಡು ಮಕ್ಕಳನ್ನು ಸಾಕಿದ್ದ
ಅವರಿಗೆ ....
ಮೊದಲನೆಯ ಮಗ: ಶಂಕರ
ಎರಡನೆಯ ಮಗಾನೇ: ಮಂಜ ...
ಮೊದಲನೆಯವನು,
ತುಂಬಾ ಶಾಂತಸ್ವಭಾವದವನು..
ಅಮ್ಮನಿಗೆ ಸಹಾಯ ಮಾಡಿ ಕೊಂಡೇ
ಆಟೋ ಓಡಿಸುತ್ತಾನೆ!.
ಎರಡನೆಯವನು,
ಸ್ವಲ್ಪ ಒರಟ
ಓದಿರುವುದು ಎಸ್.ಎಸ್.ಎಲ್.ಸಿ
ಕೆಲಸಕ್ಕೆ ಅಂತ ಹೋಗುವುದಿಲ್ಲ
ಹೋದರೂ ಜಾಸ್ತಿ ದಿನ ಕೆಲಸ ಮಾಡುವುದಿಲ್ಲ
ಹುಡುಗರ ಜೊತೆ ಸೇರಿ ಫೀಲ್ಡ್ ನಲ್ಲಿ ಕ್ರಿಕೆಟ್
ಆಡುವುದು ಬೀದಿ ಸುತ್ತುವುದು
ಇದೆ ಮಂಜನ ಕಾಯಕ!
ಅವರಮ್ಮ ಎಷ್ಟೇ ಬುದ್ಧಿ ಹೇಳಿದರೂ ಕೇಳುವ ಹಾಗೆ
ಅವನ ಗುಣ ಇರುತ್ತಿರಲಿಲ್ಲ ....
ಹೀಗೆ ಹೇಗೋ ಇದ್ದ ಆ ಸಂಸಾರದಲ್ಲಿ
ಅದೊಂದು ದಿನ !
ಫಿಲ್ಡ್ ನಲ್ಲಿ ಕ್ರಿಕೆಟ್ ಆಡುವುದಕ್ಕೆ ಎಂದು ಮಂಜ
ಹಾಗೂ ಅವನ ಗೆಳೆಯರು ಬರುತ್ತಾರೆ ಅಲ್ಲಿ!
ಅದಾಗಲೇ ಕೆಲವರು ಕ್ರಿಕೆಟ್ ಆಡುತ್ತ ಇದ್ದಾಗ
ಅದನ್ನ ಕಂಡ ಅವರು ಅಲ್ಲೇ ಸ್ವಲ್ಪ ಸಮಯ ಕೂತು
ಅವರು ಆಡಿ ಹೋಗೋದಕ್ಕೆ ಕಾಯುತ್ತಾರೆ!
ಆಗ...ಅಲ್ಲಿ ಯಾರೋ ಹೊಡೆದ ಬಾಲ್
ಬಂದು ಮನಜ ಕಾಲ್ ಕೆಳಗೆ ಬೀಳುತ್ತದೆ .........
ಅದನ್ನ ಎತ್ತಿಕೊಳ್ಳಲು ಅಲ್ಲಿಗೆ ಬರುವವನೇ ಗಿರಿ!
(ಗಿರಿ ಕೂಡ ಕೆಲಸ ಕಾರ್ಯಕ್ಕೆ ಹೋಗದೆ
ಪೋಲಿ ಹುಡುಗರ ಸೇರಿಸಿಕೊಂಡು
ಬೆಟ್ಟಿಂಗ್ ಮ್ಯಾಚ್ ಆಡುತ್ತ ಸಣ್ಣ ಪುಟ್ಟ ಗಲಾಟೆ ಮಾಡಿ
ಹುಡುಗರ ಮಧ್ಯದಲ್ಲಿ ಗಿರಿ ಅಂದ್ರೆ ಒಂದು ಭಯ ಬರುವ ಹಾಗೆ
ಇಟ್ಟಿರುತ್ತಾನೆ ,
ಅವನಿಗೆ ವರ್ಧ ಎನ್ನುವ ಏರಿಯ ರೌಡಿಯ ಸಪೋರ್ಟ್ ಇರುತ್ತದೆ)
ಮಂಜನ ನೋಡಿ!
ಯಾಕ್ರೋ ಸುಮ್ನೆ ಕೂತಿದ್ದೀರಾ ಬರ್ತೀರಾ
ಬೆಟ್ಟಿಂಗ್ ಮ್ಯಾಚ್ ಆಡಕ್ಕೆ?
ಬೇಡ ಗುರು ನಮಗೆ ಅದೆಲ್ಲ ಬರಲ್ಲ ಬೇಡ!
ಯಾಕೋ ಮಾಮಾ ಭಯಾನ ನಮ್ ಜೊತೆ ಆಡಕ್ಕೆ
ಏನ್ ಚೈಲ್ಡ್ ಗಳ ಜೊತೆ ಅಷ್ಟೇ ಅನ್ನಿಸುತ್ತೆ ತಮ್ಮ ಆಟಗಳು!
ಅಂತ ರೇಗಿಸಿದ ಕೂಡಲೇ
ಮಂಜನ ಜೊತೆ ಇದ್ದ ಗೆಳೆಯರು!
ಮಗ ಬಾ ಆಡೋಣ ಸುಮ್ನೆ ಇದ್ರೆ
ನನ್ನ ಮಕ್ಳು ಓವರಾಗಿ ಆಡ್ತಾರೆ !
ಎಂದು ಸುಮ್ಮನಿದೆ ಮಂಜನನ್ನು ಕೂಡ
ಬೆಟ್ಟಿಂಗ್ ಮ್ಯಾಚ್ ಗೆ ಎಳೆಯುತ್ತಾರೆ!
ಸರಿ ಎಂದು ತಲೆಯ ಆಡಿಸುತ್ತ ಮಂಜ ಕೆಳಗೆ ಇಟ್ಟಿದ್ದ
ಬ್ಯಾಟ್
ತೆಗೆದುಕೊಂಡು ಫೀಲ್ಡ್ ಗೆ ಬರುತ್ತಾನೆ
ಅವನ ಜೊತೆಯಲ್ಲಿ ರಘು ಮತ್ತು ಸುನಿಲ ಇಬ್ಬರು ಗೆಳೆಯರು ಕೂಡ
ಇರುತ್ತಾರೆ!
ಗಿರಿಯ ಹತ್ತಿರ ಬಂದು:
ಏನ್ ಗುರು ರೂಲ್ಸ್ ?
ನೋಡಮ್ಮ ಮಂಜ ..
ಮೂರ್ ಬಾಲ್
ಹಾಕ್ತೀನಿ ಅದ್ರಲ್ಲಿ
ಒಂದೇ ಒಂದು ಸಿಕ್ಸ್ ಹೊಡಿಬೇಕು ಅಷ್ಟೇ !
ಆಯ್ತು ಗುರು ನಾನ್
ಆಡ್ತೀನಿ
ಏನ್ ಬೆಟ್ಟಿಂಗ್ ?
ನೀನೆ ಹೇಳು ಏನ್ ಬೆಟ್ಟಿಂಗ್ ?
ಒಂದು ಸಾವಿರ ?
ಏನು ಒಂದು ಸಾವಿರನ
ಏನ್ ಮಂಜ ಲಾಲಿ ಪಾಪ್ ತಿನ್ನಕ್ಕೆ
ಇಟ್ಕೊಂಡು ಇದ್ದೀಯ ?
ಗುರು ಜಾಸ್ತಿ ಮಾತ್ ಬೇಡ
ಎಷ್ಟ್ ಬೆಟ್ಟಿಂಗ್ ಹೇಳು ?
ನೋಡಮ್ಮ ಒಂದೇ ಹುಕುಂ
ಐದ್ ಸಾವ್ರ ?
ಸರಿ ಒಂದು ನಿಮಿಷ
(ಎಂದು ಹೇಳಿ ಮಂಜ ತನ್ನ ಗೆಳೆಯರ ಪಕ್ಕಕ್ಕೆ
ಕರೆದು ಬಂದ)
ಲೋ ಅವ್ನು ಐದ್ ಸಾವ್ರ ಅಂತ ಇದ್ದಾನೆ
ಏನ್ ಮಾಡೋಣ ನನ್ನ ಹತ್ರ ಇರೋದ್ ಎರಡೇ ಸಾವ್ರ?
ಸುನಿಲ :ಮಗ ನನ್ನ ಹತ್ರ ಒಂದು ಸಾವಿರ ಇದೆ ?
ರಘು: ಮಚ್ಚ ನನ್ನ ಹತ್ರ ದುಡ್ಡ್ ಇಲ್ಲ ಸೈಕಲ್ ಇದೆ
ಎರಡು ಸಾವ್ರಕ್ಕೆ ಹೋಗುತ್ತೆ ಏನ್ ಮಾಡೋಣ ?
ಲೋ ಇದೆಲ್ಲ ಆ ಗಿರಿ ಕೇಳಲ್ಲ ಕಣೋ
ಸರಿ ಬಾ ಮಾತಾಡೋಣ ?
ಗಿರಿಯ ಹತ್ತಿರ ಬಂದು:
ಗಿರಿ ನಮ್ಮ ಹತ್ರ ಮೂರ್ ಸಾವ್ರ ಇದೆ
ಹಾಗೆ ಒಂದು ಸೈಕಲ್ ಇದೆ ಆರಾಂಸೆ ಎರಡ್ ಸಾವ್ರಕ್ಕೆ ಹೋಗುತ್ತೆ
ಏನ್ ಅಂತೀಯ ?
ಲೋ ಏನ್ ಸೈಕಲ್ ಲಾ ..
ಏನ್ ಗುರು ....ಸರಿ ಬಾ
ಇವತ್ತು ಊಟಕ್ಕೆ ಆಗುತ್ತೆ ...
ಅಂತ ಆಟ ಶುರು ಮಾಡಿದರು.............
ಗಿರಿಯ ಮೊದಲ ಬಾಲ್ ತೀರವೇಗವಾಗಿ
ಮಂಜನ ಮುಖದ ಪಕ್ಕದಲ್ಲೇ ಹೋಯಿತು ...
ಇಬ್ಬರೂ ಒಬ್ಬರ ಮುಖವನ್ನು ನೋಡಿಕೊಂಡರು!
ಎರಡನೆಯ ಬಾಲ್ ಬೇಕು ಅಂತಲೇ
ಮಂಜನ ತೋಳಿಗೆ ಎಸೆದ…
ರಭಸವಾಗಿ ಬಿದ್ದ ಏಟಿಗೆ
ಮಂಜ ಕೆಳಗೆ ಬಿದ್ದ .....!
ಗೆಳೆಯರು ಅವನ ಎತ್ತಲು ಬಂದಾಗ
ಬೇಡ ಎನ್ನುವ ಕೈ ಸನ್ನೆಯ ಮೂಲಕ ತಿಳಿಸಿದ!
ಈಗ ಮೂರನೆಯ ಬಾಲ್
ಗಿರಿ ಮಾಡಿದ ಕೂಡಲೇ
ಮಂಜ ಅದನ್ನ ಒಂದೇ ಹೊಡೆತಕ್ಕೆ
ಸಿಕ್ಸರ್ ಗೆ ಎತ್ತಿದ ...
ಗಿರಿ ಹಾಗೂ ಅವನ ಕಡೆಯವರಿಗೆ ನಂಬಲು ಆಗಲಿಲ್ಲ
ಅವರಿಗೆ ಇದೆ ಮೊದಲ ಸೋಲು!
ಈ ಸೋಲಿನ ಕಿಡಿ ಗಿರಿ ಮನದೊಳಗೆ ಹತ್ತಿಕೊಂಡಿತು!....
ಮಂಜ ಹಾಗು ಅವನ ಕಡೆಯವರು ಗೆದ್ದ ಹಣದಲ್ಲಿ
ಹೋಟೆಲ್ ಗೆ ಹೋಗಿ ಚೆನ್ನಾಗಿ ತಿಂದು ..
ಫಿಲಂಸ್ ನೋಡಿ ಎಂಜಾಯ್ ಮಾಡಿದರು.....
ಹೀಗೆ ಒಂದು ವಾರದ ನಂತರ ಮತ್ತೆ ಆಟಕ್ಕೆ ಬರಬೇಕು ಎಂದು
ಗಿರಿ ಮಂಜನಿಗೆ ಗೆಳೆಯನ ಮೂಲಕ ಹೇಳಿ ಕಳುಹಿಸಿದ ....
ಮಂಜ ಅವನ ಗೆಳೆಯರು ಹಣ ಹೊಂಚಿಕೊಂಡು ಹೊರಟರು!
ಮತ್ತದೇ ಆಟ....
ಐದು ಸಾವಿರ ಕೊಟ್ಟು ಬಾಜಿ ಕಟ್ಟಿದ..
ಬ್ಯಾಟ್ ಹಿಡಿದು ಮಂಜ ಫೀಲ್ಡ್ ಗೆ ಬಂದ
ಬಾಲ್ ನ ವೇಗವಾಗಿ ಎಸೆದ!
ಈ ಬಾರಿ ಮತ್ತೆ ಮಂಜ ಸಿಕ್ಸ್ ಹೊಡೆಯುವ ಹಾಗೆ
ಕಾಣುತ್ತಿದ್ದ ಕಾರಣ ಅವನ
ಮುಖಕ್ಕೆ ರಭಸವಾಗಿ ಹೊಡೆದ!
ಬಾಲ್ ಬಿದ್ದ ಏಟಿಗೆ ಕೆಳಗೆ ಬಿದ್ದ ಮಂಜ
ಕೋಪದಿಂದ ಎದ್ದು ಬಂದು:
ಗಿರಿ ಆಟನ ಆಟದ ರೀತಿ ಆಡು
ಬೇಕು ಬೇಕು ಅಂತಾನೆ ಮುಖಕ್ಕೆ ನೀನ್ ಬಾಲ್ ಎಸೆಯೋದು
ನಂಗೂ ಗೊತ್ತು !
ಲೋ ಮಂಜ ಏನೋ ಸಣ್ಣ ಮಗು ಥರ ಬಂದು ಹೇಳ್ತಾ ಇದ್ದೀಯ ?
ಯಾಕೆ ಬಾಲ್ ನ ಫೇಸ್ ಮಾಡಕ್ಕೆ ಮೀಟರ್ ಇಲ್ವಾ ?
ನೋಡು ಮೀಟರ್ ಬಗ್ಗೆ ಎಲ್ಲ ಮಾತಾಡ್ಬೇಡ..
ನಮಗೂ ಬರುತ್ತೆ ಎಲ್ಲಾ...
ಏನೋ ಬರುತ್ತೆ ಏನ್ ಬರುತ್ತೆ....
ಎಂದು ಹೊಡೆದು ತಳ್ಳುತ್ತಿದ್ದ ..
ಕೋಪದಿಂದ ಮಂಜ ಹೊಡೆದದ್ದು ಒಂದೇ ಏಟು!
ಮೂಗಲ್ಲಿ ರಕ್ತ ಬಂದು ಕೆಳಗೆ ಬಿದ್ದ ಗಿರಿ ...
ಫಿಲ್ಡ್ ನಲ್ಲಿ ಎಲ್ಲರೂ ನೋಡುತ್ತಾ ಇದ್ದರೂ ...
ಗಿರಿ ಮೇಲೆ ಎದ್ದವನೇ:
ನನ್ನ ಮೇಲೆ ಕೈ ಇಟ್ ಬಿಟ್ಟೆ ಅಲ್ವ ಮಗನೆ
ನಿನಗೆ ಇದೆ ಕಣೋ ನಾನ್ ಯಾರ್ ಅಂತ ತೋರಿಸ್ತೀನಿ
ಎಂದು ಹೇಳಿ ಅಲ್ಲಿಯಿಂದ ಹೊರಟು ಬಿಟ್ಟ!
ಮಗ ಯಾಕೋ ಅವಸರ ಪಟ್ಟೆ
ಅವನು ಸರಿ ಇಲ್ಲ ಕಣೋ ಮಿಸ್ ಇಲ್ದೆ ಹುಡುಗರನ್ನ ಕರ್ಕೊಂಡು ಬಂದು
ಕಿರಿಕ್ ಮಾಡ್ತಾನೆ ನೋಡು.
ಎಂದು ಹೇಳಿದ ಗೆಳೆಯರಿಗೆ...
ನೋಡೋ ಕೆಣಕ್ತಾ ಇದ್ರೆ ಸುಮ್ನೆ ಇರಕ್ಕೆ ಆಗಲ್ಲ
ನೋಡೋಣ ಏನ್ ಮಾಡ್ತಾರೆ ಅಂತ ಏನ್ ಪ್ರಾಣ ತೆಗಿತಾರ ?
ಬರಲಿ ಅದ್ಯಾವನ್ ಬರ್ತಾನೋ ಬರಲಿ .........
ಎಂದೇಳಿ ಮನೆಗೆ ಬಂದ ಸಂಜೆಯಾಗಿತ್ತು!
ಅಮ್ಮ ಎಂದಿನಂತೆ ಕೆಲಸಕ್ಕೆ ಹೋಗಲ್ಲ
ಹುಡುಗರ ಜೊತೆ ಬೀದಿ ಸುತ್ತೋದೆ ನಿನ್ನ ಕೆಲಸ ಅಂತ
ಬಯ್ಯುತ್ತ ಇದ್ದರೂ ಅವನೊಳಗೆ ಗಿರಿಯ ವಿಷಯ ತುಂಬಿತ್ತು
ಕಾರಣ ಗಿರಿ ಇದಕ್ಕೂ ಮೊದಲು ಅವನ ಮೇಲೆ ಕೈ ಇಟ್ಟವನಿಗೆ
ಸರಿಯಾಗಿ ಹುಡುಗರ ಇಟ್ಟು ಹೊಡೆಸಿದ್ದ...
ಅವನಿಗೆ ಏರಿಯದಲ್ಲಿ ಒಳ್ಳೆಯ ಹವಾ ಇದೆ ....
ಇದೆಲ್ಲ ಅವನೊಳಗೆ ಮಾತುಗಳಾಗಿತ್ತು ..
ಯಾರ ಕಣ್ಣಿಗೆ ಬೀಳದ ಹಾಗೆ ಬೇರೆ ಕಡೆ ಅಡ್ಡ ಹಾಕಿ ಫ್ರೆಂಡ್ಸ್
ಜೊತೆ ಕೇರಂ ಆಡುತ್ತಿದ್ದ ಮಂಜ...
ಗಿರಿ ಕಣ್ಣಿಗೆ ಅವನು ಬೀಳಲೇ ಇಲ್ಲ..
ಈ ಕಡೆ ಗಿರಿ ಮಂಜನ್ನ ಎಲ್ಲಾ ಕಡೆಯೂ ಹುಡುಕುತ್ತಿದ್ದ!
ಮಂಜ ಬೆಳಗ್ಗೆ ಹೋಗಿ ರಾತ್ರಿಯೇ ಮನೆ ಸೇರುತ್ತಿದ್ದಿದ್ದು .....
ಅದೊಂದು ದಿನ ಎಂದಿನಂತೆ ಹುಡುಗರ ಜೊತೆ ಆಟವಾಡಿ ರಾತ್ರಿ ಮನೆಗೆ ಬಂದ!
ಮನೆಯಲ್ಲಿ ಏನೋ ಒಂದು ರೀತಿಯ
ಮೌನ ಅಮ್ಮ ಕೂಡ ಬಯ್ಯದೆ ಸುಮ್ಮನೆ ಇದ್ದರು
ಗೋಡೆಯಲ್ಲಿ ತೂಗು ಹಾಕಿದ್ದ
ದೀಪದ ಬೆಳಕು ಮಾತ್ರವೇ ಮನೆಯಲ್ಲಿ ಆಡುತ್ತಿತ್ತು....
ಅವ್ವ ಊಟ ಹಾಕವ್ವ : ಎಂದು ಕೇಳಿದ
ಕೂಡಲೇ ಅಮ್ಮ ಒಂದೂ ಮಾತೂ ಆಡದೆ ಊಟ ಹಾಕಿದ
ವರ್ತನೆ
ಯಾಕೋ ಅದು ಮಂಜನಿಗೆ ವಿಚಿತ್ರ ಅನ್ನಿಸಿತು
ಪಕ್ಕದಲ್ಲಿ ಕುತ್ತಿದ್ದ ಅಣ್ಣನ ನೋಡಿದ ಅವನು ಬೆನ್ನ ತಿರುಗಿಸಿ
ಕೊಂಡು ಕೂತು
ಊಟ ಮಾಡುತ್ತಿದ್ದ ....
ಏನೋ ಶಂಕರ ಅಮ್ಮ ಇಷ್ಟೊಂದು ಸೈಲೆಂಟ್ ಆಗಿದ್ದಾರೆ
ಏನಪ್ಪಾ ಆಯಿತು ?
ಅವನು ಏನೂ ಹೇಳದೆ ಊಟ ಮಾಡುತ್ತಲೇ ಇದ್ದ!
ಏನೋ ಹೇಳೋ ಅಂತ ಅವನ ಮುಖ ತಿರುಗಿಸಿದರೆ
ಮುಖದ ಮೇಲೆ ಯಾರೋ ಹೊಡೆದ ಗುರುತು!
ಯಾಕೋ ಶಂಕರ ಏನ್ ಆಯ್ತೋ ಏನೋ ಇದು ಗುರುತು ?
ಏನು ಇಲ್ಲ ಕಣೋ ಆಟೋ ಅಪ್ಸೆಟ್ ಆಗಿ ಕೆಳಗೆ ಬಿದ್ದೆ ಅಷ್ಟೇ ಎಂದ
ಅದರೂ ಅವನ ಮಾತಿನ ಮೇಲೆ ನಂಬಿಕೆ ಬರಲಿಲ್ಲ..
ಹೇಯ್ ಏನ್ ಆಯಿತು ಹೇಳೋ ...
ಹೇಳಪ್ಪ ಹೇಳು ನಿನ್ನ ಹುಡುಕೊಂಡು ಬಂದ್ರು
ನಿನ್ ಸಿಗಲಿಲ್ಲಾಂತ ನಂಗೆ ಹೊಡೆದ್ರು ಅಂತ ಹೇಳಪ್ಪ
ಅಂತ ಅವರಮ್ಮ ಹೇಳಿದ ಕೂಡಲೇ..
ಯಾರೋ ಶಂಕರ ನಿನ್ನ ಮೇಲೆ ಕೈ ಇಟ್ಟಿದ್ದು ?
ಯಾರು ಇಲ್ಲ ಕಣೋ ಸುಮ್ನೆ ಇರೋ ..
ಯಾರ್ ಹೇಳೋ ....
ಇವತ್ತು ನಾನು ಆಟೋ ಓಡಿಸಿಕೊಂಡು ಬರ್ತಾ ಇರುವಾಗ
ಆ ಗಿರಿ ಮತ್ತು ಅವನ ಕಡೆಯ ಹುಡುಗರು ಬಂದು ಅಡ್ಡ ಹಾಕಿ
ಎಲ್ಲೋ ನಿನ್ನ ತಮ್ಮ ಗಾಂಡು ನನ್ ಮಗ ನನಗೆ ಹೆದರ್ಕೊಂಡು ಎಲ್ಲೋ
ತಲೆ ಮರೆಸಿಕೊಂಡಿದ್ದಾನೆ
ಎಲ್ಲೋ ಅವನು ...
ನೋಡೋ ಗಿರಿ ನನಗೆ ಅದೆಲ್ಲ ಗೊತ್ತಿಲ್ಲ ನನ್ನ ಬಿಡು
ಅಂತ ನಾನು ಆಟೋ ಸ್ಟಾರ್ಟ್ ಮಾಡ್ದೆ
ಅವನು ಆಟೋ ಸೀಟ್ ನ ಹರಿಯಕ್ಕೆ ಚಾಕು ತೆಗೆದ
ಬೇಡ ಕಣೋ ಇದು ಬಾಡಿಗೆ ಆಟೋ ಬೇಡ ಅಂತ ಕೇಳಿಕೊಂಡ ಮೇಲೆ
ಆಟೋ ನ ಏನೂ ಮಾಡದೆ ನನಗೆ ಸರಿಯಾಗಿ ಹೊಡೆದು ...
ನಿನ್ನ ತಮ್ಮನಿಗೆ ಸ್ವಲ್ಪ ಇದೆ ಬಂದು ತಗೊಂಡು
ಹೋಗಕ್ಕೆ ಹೇಳು
ಇಲ್ಲಾಂದ್ರೆ ದಿನಾ ಬಂದು ನಿನಗೆ ಕೊಡಬೇಕಾಗುತ್ತೆ ಎಲ್ಲಾನೂ ...
ಅಂತ ಹೇಳಿ ಕಳಿಸಿದ್ರು ಕಣೋ .....
ದಯವಿಟ್ಟು ನೀನು ಎಲ್ಲಿಯಾದ್ರೂ ಸ್ವಲ್ಪ ದಿನ ಬಚ್ಚಿಟ್ಟುಕೊಂಡಿರು
ಸ್ವಲ್ಪ ತಣ್ಣಗೆ ಆದಮೇಲೆ ಬರುವಂತೆ ....
ಮಂಜ ಊಟ ಮಾಡದೆ ಮೇಲೆದ್ದ:
ಲೋ ಶಂಕರ ಎಷ್ಟು ದಿನ ಅಂತ ಈ ನನ್ನ ಮಕ್ಕಳಿಗೆ ಹೆದರೋದು ಅಹ್ ?
ಒಂದು ಅವನಿರಬೇಕು ಇಲ್ಲ ನಾನ್ ಇರಬೇಕು ಅಷ್ಟೇ ..
ಅಂತ ಹೇಳಿದ ತಕ್ಷಣ:
ಬೇಡ ಕಣೋ ಮಂಜ ಅವ್ರು ಕೆಟ್ಟ ಜನಗಳು ಕಣೋ
ನಿನ್ ಕೆಲಸಕ್ಕೆ ಹೋಗಿ ದುಡಿಯಲಿಲ್ಲಾಂದ್ರೂ ಪರವಾಗಿಲ್ಲ ಮಗ ಅಂತ
ಮನೆಲಿರು ...
ಬೇಡ ಕಣೋ..
ನೋಡವ್ವ ನಾವು ಬಡವರೇ ಆದ್ರೆ ಹೇಡಿಗಳಲ್ಲ...
ನಾವೇನು ಶವದ ಯಾತ್ರೆಯಲ್ಲಿ ಬೀಳೋ ಹೂಗಳ
ಸಿಕ್ಕೊನೆಲ್ಲ ತುಳಿಯಕ್ಕೆ ....
ಇವತ್ತು ಇದೆ ಅವನಿಗೆ ಅಂತ ಅವರಮ್ಮ
ಎಷ್ಟೇ ಹೇಳಿದರೂ ಕೇಳದೆ ಮಂಜ ಮನೆ ಬಿಟ್ಟು
ಗಿರಿಯ ಏರಿಯಗೆ ಹೋದ......
ಅದಾಗಲೇ ಗಂಟೆ ಹತ್ತಾಗಿತ್ತು!
ಏರಿಯದಲ್ಲಿ ಹಾಗು ಫೀಲ್ಡ್ ನಲ್ಲಿ ಗಿರಿ ಸಿಗಲಿಲ್ಲ
ಕೊನೆಗೆ ಬರುವಾಗ ಗಿರಿ ಫ್ರೆಂಡ್ ಸಿಕ್ಕಿದ
ಅವನ ಹತ್ತಿರ ಗಿರಿಯ ನಂಬರ್ ತೆಗೆದುಕೊಂಡು ...
ಕಾಯಿನ್ ಬೂತ್ ನಲ್ಲಿ
ಕಾಲ್ ಮಾಡಿದ .........
ಗಿರಿ:ಹಲೋ ಯಾರು ?
(ಕುಡಿದಿದ್ದ ಮತ್ತಿನಲ್ಲಿ)
ನಾನು ಮಂಜ......
ಹೂ ಹುಂಜ ಅಲ್ಲ ಮೀಟರ್ ಇಲ್ದೆ ಇರೋ ಮಾ ಮಂಜ
ಯಾಕಪ್ಪ ಏರಿಯದಲ್ಲಿ ಅಣ್ಣ ಇಲ್ಲ ಅಂತ
ಬಂದ್ಯಾ....
ಲೋ ಮಗನೆ ಗಿರಿ ...
ನಿನಗೆ ಕೋಪ ಇರೋದು ನನ್ನ ಮೇಲೆ ನಿನ್ನ ಕೋಪ ನನ್ನ ಮೇಲೆ ತೋರಿಸು
ಇದಕ್ಕೆ ಸಂಬಂಧನೆ ಇಲ್ಲದ ನನ್ನ ಅಣ್ಣನ ಮೇಲೆ ಯಾಕೋ ಕೈ
ಇಟ್ಟಿದ್ದು ...
ನೋಡು ಮಚ್ಚಿ ನನ್ನ ಕೈಗೆ ನಿನ್ ಸಿಗಲಿಲ್ಲ ,ಸಿಕ್ಕಿದ್ದು
ಅವನು
ಅವನಿಗೆ ಇಟ್ರೆ ಅದು ನಿನಗೆ ತಲುಪುತ್ತೆ ಅಂತ ಗೊತ್ತು ಅದಕ್ಕೆ
ಇಟ್ಟಿದ್ದು..
ಯಾಕೋ ಮಂಜ ನಿಂಗೆ ಕೊಡ್ಲಿಲ್ಲಾಂತ ಬೇಜಾರಾ ?
ಲೋ ಗಿರಿ
ನನ್ನ ಕೈಗೆ ಸಿಕ್ಕು ಅವತ್ತೇ ನಿನ್ನ ತಿಥಿ:
(ಗಿರಿಯ ನಶೆ ಇಳಿಯಿತು)
ಏನು ನನಗೆ ತಿಥಿನ?
ನನ್ನ ಮಗನೆ ನನಗೆ ಭಯ ಪಟ್ಕೊಂಡು ಬಚ್ಚಿಟ್ಟುಕೊಂಡಿದ್ದ ನೀನ್
ಹೇಳ್ತಾ ಇದ್ದೀಯ ನನಗೆ ತಿಥಿ ಅಂತ.....
ಅವತ್ತು ನೀನು
ನನ್ನ ಅಡ್ಡದಲ್ಲಿ ಸಿಕ್ಕಿದ್ರೆ ಅಲ್ಲೇ ನಿನ್ನ ಹೊತಾಕಿ ಬಿಡ್ತಾ
ಇದ್ದೆ ...
ಲೋ ಲುಚ್ಚ ಗಿರಿ
ಅಡ್ಡದಲ್ಲಿ ಕುತ್ಕೊಂಡು ಹಾರಡೋದಲ್ಲ..
ಧೈರ್ಯ ಇದ್ರೆ ಏರಿಯಗೆ ಬಾ.........
ಹೌದಾ ನಂಗೆ ನಿಮಪ್ಪ ಯಾರು ಅಂತ ಗೊತ್ತಿಲ್ಲ ...
ನಿಮ್ಮಪ್ಪನಿಗೆ ನೀನು ಹುಟ್ಟಿದ್ರೆ ನಾಳೆ ಜಿಂಕೆ ಪಾರ್ಕ್ ಗೆ ಬಾ
ಒಬ್ಬಾನೆ
ಆಗ ಒಪ್ಕೊಲ್ತೀನಿ ನಿನ್ ಗಂಡ್ಸು ಅಂತ ..
ಬರ್ತೀನಿ ಕಣೋ .....
ಬಾರೋ .......!!
ಅಂತ ಹೇಳಿ ಫೋನ್
ಇಟ್ಟ ಮಂಜ
(ಕೆಲವು ಕ್ಷಣಗಳವರೆಗೂ ಇಬ್ಬರ ಮುಖದಲ್ಲೂ
ಅಕ್ರೋಶವೇ ತುಂಬಿತ್ತು)
ಅಲ್ಲಿಯಿಂದ ಸೀದಾ ಮನೆಗ ಬಂದ....
ಏನ್ ಆಯ್ತೋ ಮಂಜ...
ಎಂದು ಕೇಳಿದ ಅಮ್ಮನಿಗೆ..
ಏನೂ ಆಗಿಲ್ಲವ್ವ ಈಗ ತಾನೇ ಗಿರಿ ಸಿಕ್ದ ..
ಎಲ್ಲಾ ಮಾತಾಡ್ದೆ..ಇನ್ಮುಂದೆ ನಂಗು ನಿಂಗು
ಯಾವದೇ ಜಗಳ ಬೇಡಪ್ಪ ನಿನ್ನ ಪಾಡಿಗೆ ನೀನು
ನನ್ನ ಪಾಡಿಗೆ ನಾನು ಇರೋಣ ಅಂತ ಹೇಳ್ದೆ
ಅವ್ನು ಸರಿ ಅಂತ ಹೇಳಿ ಸುಮ್ಮನಾದ ಕ್ಷಮೆ ಕೇಳಿದಕ್ಕೆ...
ಹೌದ ..ಒಳ್ಳೆ ಕೆಲಸ ಮಾಡ್ದೆ ಕಣೋ
ದ್ರುಷ್ಟರನ್ನ ಕಂಡ್ರೆ ದೂರ ಇರು ಅಂತಾರೆ ಅದನ್ನೇ ಮಾಡಿದ್ದೀಯ
ಈಗ ನಂಗೆ ನೆಮ್ಮದಿ ಆತು ನೋಡು .....
ನೆಮ್ಮದಿಯಾಗಿರವ್ವ ಏನೂ ಆಗಲ್ಲ..
ಬಾ ಊಟ ಮಾಡೋಣ ಅಂತ ಊಟ ಮಾಡಿ ಮಲಗಿದ
ಆದರೆ ಅವನ ಮನೋದಳಗೆ ನಾಳೆಯ ವಿಷಯವೇ ಓಡುತ್ತಿತ್ತು ....
ಬೆಳಗ್ಗೆ ಶಂಕರ ಹಾಗು ಸರೋಜಮ್ಮ ಎದ್ದು ಕೆಲಸಕ್ಕೆ
ರೆಡಿ ಯಾಗುತ್ತಿದ್ದರೂ ಮಂಜ ಮಲಗೇ ಇದ್ದ...
ಲೋ ಮಂಜ ಎದ್ದೇಳೋ ..
ಅವ್ವ ನಾನು ಸ್ವಲ್ಪ ಹೊತ್ತು ಮಲಗಿರ್ತೀನಿ ನೀವು ಬಾಗಿಲು
ಹಾಕೊಂಡು ಹೊರಡಿ...
ಸರಿ ಕಣ. ತಿಂಡಿ ಮಾಡಿಟ್ಟಿದ್ದೀನಿ..
ಎದ್ದು ತಿಂದು ಮತ್ತೆ ಯಾರ ಜೊತೆನೂ ಜಗಳ ಮಾಡಬೇಡ ಹೋಗಿ,
ಸುಮ್ನೆ ಮನೆ ಹತ್ರನೇ ಇರು ನಾನ್ ಮಾರ್ಕೆಟ್ ನಲ್ಲಿ ಹೇಳಿದ್ದೀನಿ
ನಿಂಗೆ ಅಂತ ಒಂದು ಕೆಲಸಕ್ಕೆ ಅದು ಸಿಕ್ಕಿದ್ರೆ ಅದನ್ನ ಮಾಡ್ತಾ
ಇದ್ರೆ
ನಿಂಗೆ ಯಾವದೇ ಕೆಟ್ಟ ಫ್ರೆಂಡ್ಸ್ ಸಹವಾಸ ಇರಲ್ಲ ....
ಆಯ್ತಮ್ಮ ಇಲ್ಲೇ ಇರ್ತೀನಿ .....
ಸರಿ ಅಂತ ಬಾಗಿಲು ಹಾಕಿಕೊಂಡು ಅವರು ಹೊರಟರು ....
ಮಂಜ ಎದ್ದಾಗ ಬೆಳಗ್ಗೆ 10ಗಂಟೆ...
ಎದ್ದು ಸ್ನಾನ ಮಾಡಿ ತಿಂಡಿ ಸ್ವಲ್ಪವೇ ತಿಂದು
ಕೂತಿದ್ದ ...ಗಿರಿಯ ಬಗ್ಗೆ ಅವನಿಗೆ ಮೊದಲೇ ಗೊತ್ತಿತ್ತು
ಗಿರಿಯ ಎದುರು ಹಾಕೊಂಡಿದ್ದ
ಹುಡುಗರಿಗೆ ಹೊಡೆಸಿದ್ದಾನೆ ತುಂಬಾ ಸಲ
ಆ ಭಯ ಇತ್ತು ....
ಸರಿ ಎಷ್ಟು ದಿನ ಹೀಗೆ ಹೆದರಿಕೊಂಡೇ ಓಡಾಡುವುದು
ಇದರ ಮಧ್ಯೆ ಏನೂ ತಿಳಿಯದ ಅಣ್ಣನಿಗೆ ಬೇರೆ ತೊಂದರೆ
ಇದಕ್ಕೆ ಇವತ್ತೇ ಒಂದು ಅಂತ್ಯ ಕಾಣಿಸಬೇಕು ಅಂತ ದೃಡ ಮನಸಿನಿಂದ
ಎದ್ದು ನಿಂತ ........
ಹೊರಡುವ ಮುನ್ನ ಒಮ್ಮೆ ಕನ್ನಡಿಯ ನೋಡಿದರೆ ಮುಖದಲ್ಲಿ ಭಯದ
ಛಾಯೆ...
ಹಾಗೆ ಕನ್ನಡಿಯಲ್ಲಿ ಅಡಿಗೆ ಮನೆಯೊಳಗೇ ಇದ್ದ ಒಂದು ಸಣ್ಣ ಚಾಕು
ಕೂಡ ಕಂಡಿತು
ಯಾವುದಕ್ಕೂ ಇರಲಿ ಎಂದು ಅದನ್ನ ತೆಗೆದು ಜೇಬಿನಲ್ಲಿ
ಇಟ್ಟುಕೊಂಡ...
ಸಮಯ 11ಗಂಟೆ....
ಬಾಗಿಲು ಹಾಕಿಕೊಂಡು ಹೊರಡುವಾಗ ಕಾಲಿಗೆ ಹೊಸ್ತಿಲು ತಾಗಿ ಎಡವಿದ
...
ಭಯ ಹಿಮ್ಮಡಿಯಾಯಿತು .,.
ಬಾಗಿಲಿಗೆ ಬೀಗ ಹಾಕಿ ಕೀನ ಕಿಟಕಿಯ ಹತ್ತಿರ ಇಟ್ಟು ಹೊರಟ ...
ಜಿಂಕೆ ಪಾರ್ಕ್ ಅದೊಂದು ನಿರ್ಜನ ಪ್ರದೇಶ ಅಲ್ಲಿ ಅಲ್ಲಿ ಗಿಡಗಳು
ಬೆಳೆದು
ಪೊದೆಯ ನಿರ್ಮಾಣವಾಗಿತ್ತು ...
ಆಗಾಗ ಅಲ್ಲಿ ಕೊಲೆಗಳು ಕೂಡ ನಡೆಯುತ್ತಿತ್ತು ....
ಹಾಗೆ ಮೆಲ್ಲನೆ ಹೆಜ್ಜೆ ಇಡುತ್ತಾ ಸುತ್ತ ಮುತ್ತ ನೋಡುತ್ತಾ ಹೋದ ...
ಒಳಗೆ ಹೋಗುತ್ತಾ ಇದ್ದ ಹಾಗೆ ಗಿರಿ ಕಣ್ಣಿಗೆ ಬಿದ್ದ..
ಏನೋ ಮಂಜ ಮೀಟರ್ ಇದೆ ಕಣೋ ನಿಂಗೆ ನಾನ್ ಅಷ್ಟು ಹೇಳಿನೂ
ಒಬ್ಬಾನೆ ಬಂದಿದ್ದಿಯ ಅಂದ್ರೆ ನಿಂಗೆ ತಕ್ಕತ್ತು ಇದೆ ಬಿಡೋ ....
ನೋಡೋ ಗಿರಿ ನಂಗೂ ನಿನಗೂ ಇವತ್ತು ಎಲ್ಲಾನೂ ಮುಗಿ ಬೇಕು
ಅದನ್ನ ಹೇಳಿ ಹೋಗಕ್ಕೆ ಬಂದೆ ಇವತ್ತಿನಿಂದ ನಾನ್
ನಿನ್ನ ತಂಟೆಗೆ ಬರಲ್ಲ ನೀನು ಬರ್ಬೇಡ...
ಏನೋ ಮಾಮ ಆಟ ಇನ್ನೂ ಶುರುವಾಗಿನೆ ಇಲ್ಲ ಆಗ್ಲೇ ಮಂಗ್ಳ ಹಾಡ್ತಾ
ಇದ್ದೀಯ
ಈಗ ತಾನೇ ನಿಂಗೆ ಮೀಟರ್ ಇದೆ ಅನ್ಕೊಂಡ್ರೆ ಅಷ್ಟ್ ಬೇಗ ಭಯಾನ
....
ನೋಡ್ ಗುರು ಹೊಡೆದಾಟ ಅಂತ ನಿಂತ್ರೆ ಅದಕ್ಕೆ ಒಂದು ಕೊನೆ ಇರಲ್ಲ
ಸುಮ್ನೆ ಯಾರ್ಗೂ ನೆಮ್ಮದಿನು ಇರಲ್ಲ ಅದಕ್ಕೆ ಬೇಡ ಇಲ್ಲಿಗೆ ಬಿಟ್ಟು ಬಿಡೋಣ ಹೇಳೋದನ್ನ
ಕೇಳು...
ನಿನ್ ಹೇಳೋದನ್ನ ನಾನ್ ಕೇಳ್ತೀನಿ
ಆದ್ರೆ ನೆನ್ನೆ ನೈಟ್ ಅಷ್ಟೆಲ್ಲಾ ಕೂಗಾಡಿ ಎಗರಾಡಿದ್ದೆ ಅಲ್ವ
ಆಗ ಅಣ್ಣ ಜೊತೇನೆ ಇದ್ದ ಅವನು ಕೇಳಲ್ಲ ..
ಅವರಿಗೂ ನಾನ್ ಹೇಳ್ತೀನಿ ಎಲ್ಲಿ ಇದ್ದಾರೆ ಹೇಳು ....
ಫೋನ್ ಮಾಡಿದ್ದೀನಿ ಬರ್ತಾ ಇದ್ದಾರೆ ಕಾಯಿ ಮಾಮ..
ಹಾಗೆ ಹೇಳುತ್ತಲೇ ಅಲ್ಲಿಗೆ ಬಂದ ವರ್ಧ!
(ವರ್ಧ ಆ ಏರಿಯದಲ್ಲೇ ದೊಡ್ಡ ರೌಡಿ ಅವನ
ಸಪೋರ್ಟ್ ಇರುವುದರಿಂದಲೇ
ಗಿರಿಯ ಆಟಕ್ಕೆ ಯಾರೂ ಅಡ್ಡಿ ಬರದೆ ಇರುವುದು ......
ವರ್ಧನ ಕಂಡ ಕೂಡಲೇ ಮಂಜನಿಗೆ ಹೆದರಿಕೆ ಮತ್ತಷ್ಟು ಜಾಸ್ತಿಯಾಯಿತು
ಕಾರಣ ವರ್ಧನ ಬಗ್ಗೆ ತುಂಬಾ
ಕೇಳಿದ್ದ ಅವನಿಗೆ ವರ್ಧನೆ ಎದುರು ಬರುತ್ತಾನೆ ಎಂದು ತಿಳಿದಿರಲ್ಲಿಲ್ಲ ...)
ಅಣ್ಣ ಇವನೇ ನೆನ್ನೆ ನೈಟ್ ಅಷ್ಟೆಲ್ಲಾ ಕೂಗಾಡಿದ್ದು....
ಹೇಯ್ ಯಾರೋ ನೀನು ಏನ್ ನೆನ್ನೆ ಅಷ್ಟು ನಿಗಿರ್ತಾ ಇದ್ದೆ ಯಾಕೆ
ಏನ್ ದೊಡ್ಡ ರೌಡಿನ ನೀನು ?
ಅಣ್ಣ ಇಲ್ಲ ಅಣ್ಣ ಗಿರಿ ನಮ್ಮ ಅಣ್ಣನಿಗೆ ಆಟೋಲ್ಲಿ ಲೈನ್ ಮೇಲೆ ಹೋಗಿದ್ದಾಗ
ಹೊಡೆದಿದ್ದಾನೆ....ಅದಕ್ಕೆ ಕೋಪ ಬಂದು...
ಏನ್ ಕೋಪ ಬಂದ್ರೆ ಎತ್ತ್ ಬಿಡ್ತೀಯ ಏನೋ ಏನ್ ಹೇಳು...
ಇಲ್ಲ ಅಣ್ಣ ಅದೆಲ್ಲ ಇಲ್ಲ ಏನೋ ಕೋಪದಲ್ಲಿ ಮಾತಾಡ್ದೆ ಅಷ್ಟೇ
ಇಲ್ಲಿಗೆ ಎಲ್ಲಾನೂ ಬಿಟ್ಟು ಬಿಡೋಣ ಅಂತ ಹೇಳೋಣ ಅಂತಾನೆ ಬಂದೆ...
ವರ್ಧನ ಹುಡುಗನಿಗೆ ಅವಾಜ್ ಹಾಕ್ತೀಯ
ಅಂದ್ರೆ ನಿನ್ನ ಸುಮ್ನೆ ಬಿಟ್ಟು ಬಿಡಬೇಕಾ .....
ನಿಂಗೆ ಮುಖಕ್ಕೆ ಒಂದು ಸಣ್ಣ
ಮಾರ್ಕ್ ಹಾಕಿದ್ರೇನೆ ಮುಂದೆ ಎಲ್ಲರಿಗೂ ಒಂದು ಭಯ ಇರುತ್ತೆ
ಅಣ್ಣ ಬೇಡ ಅಣ್ಣ ..ಆಮೇಲೆ ನಂಗೆ ಯಾರೂ ಕೆಲ್ಸ ಕೊಡಲ್ಲ ...
ಬೇಡ ಅಣ್ಣ ನನ್ನ ಬಿಟ್ಟು ಬಿಡಿ ..
ಅದೆಲ್ಲಾ ಆಗಲ್ಲ ನೆನ್ನೆ ಏನೋ ಹೇಳ್ತಾ ಇದ್ದೆ ಈಗ ಹೇಳೋ ಅದನ್ನ
ನನ್ನ ಮುಂದೆ
ಹೇಳೋ ಹೇಳು ಎಂದು ಎದೆಯ ಮೇಲೆ ಬಲವಾಗಿ ಒಡೆದ..
ಆ ಏಟಿಗೆ ಮಂಜ ಕೆಳಗೆ ಬಿದ್ದ ...ಬಿದ್ದವನು ಮೆಲ್ಲನೆ ಹಾಗೆ
ಜೇಬಿನಲ್ಲಿ ತಂದಿದ್ದ ಜಾಕುವಿನ ಮೇಲೆ ಕೈ ಇಟ್ಟ.........
ಇಪ್ಪತ್ತು ನಿಮಿಷಗಳ
ನಂತರ ಮಾರ್ಕೆಟ್ ನಲ್ಲಿ:
ಅಮ್ಮಾ ಅಮ್ಮಾ .......ಎಂದು ಮಂಜನ ಗೆಳೆಯ ರಘು ಕೊಗಿಕೊಂಡು
ಓಡಿ ಬಂದ ...
ಏನ್ ಆಯ್ತೋ ರಘು ...
ಅಮ್ಮ ಮಂಜನ್ನ...ಮಂಜನ್ನ...
ಅಯ್ಯೋ ಏನ್ ಆಯ್ತು ಹೇಳೋ ಮಂಜನಿಗೆ .........
ಮಂಜನ್ನ ಪೋಲಿಸ್ ಅರೆಸ್ಟ್ ಮಾಡಿದ್ದಾರೆ
ಕೊಲೆ ಮಾಡಿದ್ದಾನೆ ಅಂತ ...
ಅಯ್ಯೋ ಏನ್ ಹೇಳ್ತಾ ಇದ್ದಿಯೋ ಬೆಳಗ್ಗೆನೇ ಮನೇಲಿ ಮಲಗಿದ್ದ
ಕಣೋ ನಾವ್ ಬರ್ವಾಗ....
ಹೌದಮ್ಮ ನಾನ್ ಹೇಳ್ತಾ ಇರೋದು ನಿಜ
ಗಿರಿ ಹಾಗು ವರ್ಧನ್ನ ಮಂಜ ಎತ್ತಿದ್ದಾನೆ ಅಂತ
ಅವನ್ನ ಅರೆಸ್ಟ್ ಮಾಡಿದ್ದಾರೆ ಈಗ ಏರಿಯ ಪೋಲಿಸ್ ಸ್ಟೇಷನ್ ನಲ್ಲಿ
ಅವನ್ನ ಕೂರಿಸಿದ್ದಾರೆ ಅವನ ಕೈಯಲ್ಲಿ ರಕ್ತ ಇರೋ ಲಾಂಗ್ ಇದೆ
........
ಏರಿಯ ಜನ ಫುಲ್ ಸ್ಟೇಷನ್ ಮುಂದೇನೆ ಇದ್ದಾರೆ ....
ಅಯ್ಯೋ ....ಎಂಡ್ ಅರಚುತ್ತ ....ಸ್ಟೇಷನ್ ಕಡೆಗೆ ಓಡಿದರು ಮಂಜನ
ತಾಯಿ .
ಅಲ್ಲಿ ನೋಡಿದರೆ ಗೇಟ್ ಹಾಕಿತ್ತು ಗೇಟ್ ನ ಸಂದಿಯಿಂದ ನೋಡುವಾಗ
ಟೇಬಲ್ ಮೇಲೆ ಕುಳಿತಿದ್ದ
ಮಂಜನ ಕೈಯಲ್ಲಿ ಮಚ್ಚು!
ಒಳಗೆ ಹೋಗಲು ಯತ್ನಿಸಿದಕ್ಕೆ ಪೋಲಿಸ್ ..
ಆಗಲ್ಲಮ್ಮ ನಿನ್
ಮಗ ಇಬ್ಬರನ್ನ ಎತ್ತಿದ್ದಾನೆ
ಅವನ್ನ ನಾಳೆ ಕೋರ್ಟ್ ನಲ್ಲಿ ಒಪ್ಪಿಸ್ತೀವಿ ಅಲ್ಲಿಗೆ ಬಂದು
ನೋಡ್ಕೋ ..
ಅಂತ ಹೇಳಿ ಕಳುಹಿಸಿ ಬಿಟ್ಟರು ...!!
ಅಲ್ಲಿಗೆ ಮಂಜನ ಅಣ್ಣನು ಕೂಡ ಬಂದ ...
ಅವರಮ್ಮನಿಗೆ ಸಮಾಧಾನ ಮಾಡಿ ಕರೆದುಕೊಂಡು ಹೋದ ...
ಮಾರನೆಯ ದಿನ ಬೆಳಗ್ಗೆಯೇ ...
ಕೋರ್ಟ್ ನಲ್ಲಿ ಮಂಜ ಒಪ್ಪಿಸಿದರು
ನ್ಯಾಯಧಿಷರು: ಏನಪ್ಪಾ ನೀನೇನಾ ಈ ಮರ್ಡರ್ ಮಾಡಿದ್ದು ..
ಮಂಜ ಹಾಗೆ ತಲೆ ಬಾಗಿಸಿಕೊಂಡು ಹೌದು ನಾನೇ ಮಾಡಿದ್ದು..
ಯಾಕೆ ಅವರನ್ನ ಕೊಲೆ ಮಾಡ್ದೆ ?
ಅವರು ನನ್ನ ಮೇಲೆ ಹಲ್ಲೆ ಮಾಡಕ್ಕೆ ಬಂದ್ರು
ವರ್ಧನ ಕೈಯಲ್ಲಿ ದೊಡ್ಡ ಲಾಂಗ್ ಇತ್ತು ಅದರಲ್ಲಿ ನನ್ನ ಮುಖಕ್ಕೆ
ಮಾರ್ಕ್
ಹಾಕಕ್ಕೆ ಬಂದ ಆಗ ನನಗೆ ಕೋಪ ಬಂದು ....
ಅಲ್ಲೇ ಇಬ್ಬರನ್ನೂ ಕೊಂದು ಬಿಟ್ಟೆ .......
ಅಯ್ಯೋ ಪಾಪಿ ನನ್ನ ಹೊಟ್ಟೆಲಿ ಹುಟ್ಟಿ ಇಬ್ಬರ ಪ್ರಾಣ
ತೆಗೆದಿದ್ದಿಯಾನೋ....
ಅಯ್ಯೋ ನಿನ್ ನನ್ನ ಹೊಟ್ಟೆಲಿ ಹುಟ್ಟಲೇ ಬಾರದಾಗಿತ್ತು ...
ನಿನ್ನ ಎತ್ತಿ ಹೊತ್ತ ತಪ್ಪಿಗೆ ಸರಿಯಾದ ಬಹುಮಾನಾನೆ
ಕೊಟ್ಟಿದ್ದಿಯ...
ಅವರಮ್ಮನ ಕೂಗು ಇಡೀ ಕೋರ್ಟ್ ಕೇಳುವಾ ಹಾಗೆ ಇತ್ತು...
ಮಂಜನಿಗೆ ಜೈಲು ಶಿಕ್ಷೆಯಾಗಿ ಜೇಲು ಸೇರಿದ!
ಅವನು ಜೇಲಿಗೆ ಹೋಗುವ ಮುನ್ನ ಕೋರ್ಟ್ ನಿಂದ ಹೊರ ಬರುವಾಗ
ಕೊನೆಯದಾಗಿ
ಒಮ್ಮೆಯ ತಾಯಿಯ ಮುಖ ನೋಡಲು ಬಯಸಿದ ..
ಆದರೆ ಅವರಮ್ಮ ಅವನಿಗೆ ಮುಖ ತೋರಿಸಲೇ ಇಲ್ಲ ನನ್ನ ಪಾಲಿಗೆ ನೀನು
ಸತ್ತು ಹೋದೆ..
ನನಗೆ ದುಡಿದು ತಂದು ಹಾಕಲಿಲ್ಲದಿದ್ದರೂ ನಾನೇ ನಿನ್ನ ದುಡಿದು
ಸಾಕ್ತಾ ಇದ್ದೆ
ಮಕ್ಕಳೇ ಜೀವನ ಅಂತ ಬದುಕಿದ ನನಗೆ ಒಳ್ಳೆಯ ಪಾಠ ಕಲಿಸಿದ್ದಿಯ
....
ಅಂತ ಹೇಳಿ ಹೊರಟೆ ಹೋದರು...
ಮಂಜನಿಗೆ ಸೆರೆಮನೆಯವಾಸವಾಯಿತು...
ಜೈಲಿನೊಳಗೆ ಈಗಾಗಲೇ ಇದ್ದ ಪುಡಿ ರೌಡಿಗಳು ಹಾಗು ದೊಡ್ಡ ರೌಡಿಗಳು
ಕೂಡ
ಮಂಜನ ತಂಟೆಗೆ ಬರುತ್ತಿರಲಿಲ್ಲ ...
ಎಂಟು ಕೊಲೆ ಮಾಡಿದ ವರ್ಧನ ಎತ್ತಿದ ಅನ್ನೋ ಹೆಸರು ಅವನಿಂದೆ
ಇತ್ತು ...
ಇದಾದ ಆರುತಿಂಗಳ ಬಳಿಕ ಒಂದು ದಿನ ಮಂಜನ ನೋಡಲು ಯಾರೋ
ಬಂದಿದ್ದಾರೆ
ಎನ್ನುವ ಸಂದೇಶ ಬಂತು ಕೂಡಲೇ ಮಂಜ ನೋಡಲು ಹೊರಟ ಅಲ್ಲಿ
ಗೋಪಾಲಯ್ಯನ ಕಡೆಯವರು ಬಂದಿದ್ದರು ಗೋಪಾಲಯ್ಯ
ವರ್ಧನ ಪಕ್ಕ ದುಶ್ಮನ್ ಅವನ ಎತ್ತಬೇಕು ಅನ್ನೋದು ಅವನ ಉದ್ದೇಶವಾಗಿತ್ತು
ಈಗ ಮಂಜ ಎತ್ತಿರೋದರಿಂದ ಅವನ ಜೊತೆ ಇಟ್ಟು ಕೊಂಡರೆ ನಾಳೆ ಎಲೆಕ್ಷನ್ ಗಲಾಟೆಯಲ್ಲಿ ಕೆಲ್ಸಕ್ಕೆ
ಬರ್ತಾನೆ ಅಂತ ಅವನ ಕಡೆಯವರು ಬೈಲ್ ಕೊಟ್ಟು ಬಿಡಿಸಿಕೊಂಡು ಹೋಗಕ್ಕೆ ಬಂದಿದ್ರು ಅವರಿಗೆ ಇದೆ
ಕೆಲ್ಸ ಬೈಲ್ ಕೊಟ್ಟು ಬಿಡಿಸಿಕೊಂಡು ಹೋಗದೆ ಸೆರೆಮನೆಯಲ್ಲಿ ಇರುವ ಸಣ್ಣ ಪುಟ್ಟ ರೌಡಿಗಳಿಗೆ ಬೈಲ್
ಕೊಟ್ಟು ಬಿಡಿಸಿಕೊಂಡು ತಮ್ಮ ಕೆಲಸ ಮಾಡಿಸಿಕೊಳ್ಳುವುದು :
ನಾವು ಗೋಪಾಲಯ್ಯನ ಕಡೆಯವರು ಎಂದು ಹೇಳಿದ ಕೂಡಲೇ ಮಂಜ
ಸುಮ್ಮನಾದ...
ನಾಳೆ ನಿನಗೆ ಬೈಲ್ ಸಿಕ್ಕಿದೆ ನಾವೇ ಬರ್ತೀವಿ ನಮ್ಮ ಜೊತೆಗೆ ಬಾ
...
ಆಗಲಿ ಎನ್ನುವ ಹಾಗೆ ತಲೆಯಾಡಿಸಿ ಒಳಗೆ ಹೋದ ಮಂಜ..
ಅವನಿಗೆ ಬೈಲ್ ಸಿಕ್ಕಿ ಹೊರ ಬಂದ ಬಂದವನೇ ...
ತಾಯಿಯ ನೋಡಬೇಕು ಎಂದು ಮನೆಯ ಕಡೆ ಹೊರಟ ....
ಮನೆಯ ಹೊರಗೆ ಕುಳಿತಿದ್ದ ಅವನ ತಾಯಿ ಅವನ ಕಂಡ ಕೂಡಲೇ ಒಳ ಹೋಗಿ ಬಾಗಿಲು ಹಾಕಿಕೊಂಡರು!
ಅಮ್ಮ ಬಾಗಿಲು ತೇಗಿ ನಿನ್ ನೋಡ್ಬೇಕು ....
ನಿನ್ ಯಾರೋ ಯಾಕೆ ಬಂದೆ ಇಲ್ಲಿಗೆ ನಮ್ನ ಕೂಡ ಕೊಂದು ಹೋಗಕ್ಕೆ
ಬಂದ?
ಅಯ್ಯೋ ಇಲ್ಲಮ್ಮ ನಾನ್ ಹೇಳೋದನ್ನ ಕೇಳು ಬಾಗಿಲು ತೇಗಿ...
ಒಂದೇ ಒಂದು ಸಲ ನಿನ್ನ ನೋಡಿ ಹೋಗ್ತೀನಿ ತೇಗಿ .........
ಇಲ್ಲ ಆಗಲ್ಲ .
ನೀನು ಇಲ್ದೆ ನಾವ್ ಹೇಗೋ ಚೆನ್ನಾಗಿದ್ದೀವಿ ಮತ್ತೆ ನಿನ್ನ
ನೋಡಕ್ಕೆ ನನಗೆ ಇಷ್ಟ ಇಲ್ಲ ಹೋಗು ಮತ್ತೆ ಬರಬೇಡ...
ರೋಡಲ್ಲಿ ನನ್ನ ನೋಡಿ ಹೇಳ್ತಾರೆ ಇವರೇ ಆ ಕೊಲೆಗಾರನ ಅಮ್ಮ ಅಂತ ಆಗ ನಂಗೆ ಎಷ್ಟು ನೋವಾಗುತ್ತೆ ಗೊತ್ತ
ನಿನ್ನ ಹೆತ್ತ ತಪ್ಪಿಗೆ ಸರಿಯಾದ ಶಿಕ್ಷೆನೆ ಕೊಟ್ಟಿದ್ದೀಯಪ್ಪ
ನಿನ್ನ ಕಾಲಿಗೆ ಬಿಳ್ತೀನಿ ನಮ್ನ ನಮ್ಮ ಪಾಡಿಗೆ ಇರಕ್ಕೆ
ಬಿಟ್ಟು ಬಿಡು ಇದು ಕೊಲೆಗಾರರು ಇರೋ ಮನೆ ಅಲ್ಲ ....
ಸರಿಮ ನಾನ್ ಹೋಗ್ತೀನಿ ...
ಎಂದು ಕಣ್ಣೀರಿಡುತ್ತಲೇ ದೂರದವರೆಗೂ ಮನೆಯ ನೋಡುತ್ತಾ ಹೊರಟೆ ಹೋದ
ಮಂಜ......
ಬೈಲ್ ಕೊಟ್ಟು ಬಿಡಿಸಿಕೊಂಡು ಬಂದಿದ್ದ ಗೋಪಾಲಯ್ಯನ ಜೊತೆ ಸೇರಿ
ಅವನಿಗೆ ಆಗದವರ ಹೆದರಿಸುತ್ತ ಸಣ್ಣ ಪುಟ್ಟ ಸುಲಿಗೆ ಮಾಡಿಕೊಂಡು
ಕುಡಿತದ ಚಟ ಹಾತಿಸಿಕೊಂಡು
ಸದಾ ಹಣ ಸಿಕ್ಕಾಗೆಲ್ಲ ಕುಡಿದು ಬಿದ್ದಿರುತ್ತಿದ್ದ...
ಅವನ ಮೇಲೆ ಕೊಲೆ ಆರೋಪಗಳು ಬರುತ್ತಿದ್ದರೂ ಗೋಪಾಲಯ್ಯನ ದಯೆ ಅವನಿಗೆ ಇದ್ದ ಕಾರಣ
ಪೋಲಿಸ್ ಕೂಡ ಅವನ ಮೇಲೆ ಕೈ ಇಡುತ್ತಿರಲಿಲ್ಲ ...
ಹೀಗೆ ದಿನಗಳು ಉರುಳಿದವು!
ಮಂಜನಿಗೆ ವಿಪರೀತ ಕುಡಿತದ ಚಟದಿಂದ
ಅದುಯಾವುದೋ ಮಾರಕ ಖಾಯಿಲೆಯಿಂದ
ಎರಡು ಕಿಡ್ನಿಗಳು ಫೈಲ್ ಆಗಿ ಅವನನ್ನು ಸರ್ಕಾರಿ ಆಸ್ಪತ್ರೆಯಲ್ಲಿ
ಸೇರಿಸಿ ಅವನ ಕಡೆಯವರು ತಿರುಗಿ ನೋಡದೆ ಹೋಗಿದ್ದರು!
ಅವನನ್ನು ನೋಡಿಕೊಳ್ಳಲು ಯಾರೂ ಇಲ್ಲದೆ
ಅನಾಥ ಶವದಂತೆ ಬಿದ್ದಿದ್ದ ಮಂಜ....
ಕೆಲವು ದಿನಗಳ ನಂತರ ಅಲ್ಲಿಗೆ ಬಂದಿದ್ದು ಮಂಜನ ತಾಯಿ ಸರೋಜಮ್ಮ:
ಯಾರೋ ಮಗ ಹೀಗೆ ಅನಾಥನಂತೆ ಬಿದ್ದಿದ್ದಾನೆ ಅಂತ ಹೇಳಿ ಅವರನ್ನು
ಕಳುಹಿಸಿದ್ದರು
ಎಷ್ಟೆಯಾಗಲಿ ತಾಯಿ ಹೃದಯ ಅವನು ಮಾಡಿದ ತಪ್ಪುಗಳನ್ನ
ಮನ್ನಿಸದಿದ್ದರೂ
ಅವನ ಮೇಲಿದ್ದ ಆ ಕರುಳಿನ ಪ್ರೀತಿ ಅವರನ್ನು ಅಲ್ಲಿಗೆ ಕರೆತದಿತ್ತು
...
ಶಂಕರನಿಗೆ ವಿಷಯ ತಿಳಿಸಿ ಆಟೋದಲ್ಲಿ ಮನೆಗೆ ಕರೆದುಕೊಂಡು
ಹೋದರು..
ನಂತರ ಬೇರೆ ಬೇರೆ ಆಸ್ಪತ್ರೆಗೆ ತೋರಿಸಿದಾಗ ..
ಇವರಿಗೆ ಒಂದು ಕಿಡ್ನಿ ಹಾಕಿದರೆ ಸ್ವಲ್ಪ ದಿನ ಬದುಕುವ ಸಾಧ್ಯತೆ
ಇದೆ ...
ಎಂದು ಹೇಳಿದ ವೈದ್ಯರ ಮಾತು ಕೇಳಿ ಎಲ್ಲೋ ಒಂದು ಆಶಾಕಿರಣ ಮೂಡಿತು
ಆ ತಾಯಿಯ ಮುಖದಲ್ಲಿ…
ಕಿಡ್ನಿಗಾಗಿ ಎಲ್ಲೆಲ್ಲೊ ಹುಡುಕಿದರೂ ಮೂರು ಲಕ್ಷ ನಾಲಕ್ಕು ಲಕ್ಷ
ಎಂದು ಕೇಳಿ
ಅವರಿಗೆ ಅದನ್ನ ಕೊಂಡುಕೊಳ್ಳಲು ಆಗದ ಸ್ಥಿತಿಯಲ್ಲಿ ಇದ್ದಾಗ ದುಃಖವಷ್ಟೇ
ಕೈಯಲ್ಲಿದಿದ್ದು
ಈಗಿರುವಾಗಲೇ ....
ಸರೋಜಮ್ಮ ತಾನೇ ತನ್ನ ಒಂದು ಕಿಡ್ನಿಯ ಮಂಜನಿಗೆ ಕೊಡಲು
ಮುಂದಾದರು!
ಸರೋಜಮ್ಮನವರನ್ನ ವೈದ್ಯರು ಪರಿಶೀಲಿಸಿ..
ನೋಡಿ ನಿಮಗೆ ಈಗಾಗಲೇ ಏಜ್ ಆಗಿದೆ
ನಿಮ್ಮಿಂದ ಕಿಡ್ನಿ ತೆಗೆದರೆ ನೀವು ತುಂಬಾ ದಿನ ಬದುಕುವುದಿಲ್ಲ ?
ಬೇಡ ಸ್ವಾಮಿ ನಾನು ಬದುಕೋದು ಮುಖ್ಯ ಅಲ್ಲ
ನನ್ನ ಮಗ ಬದುಕ ಬೇಕು ಅಷ್ಟೇ ದಯವಿಟ್ಟು ನನ್ನ ಕಿಡ್ನಿ ಅವನಿಗೆ
ಇಡಿ...
ಸರಿ ಆಗಲಿ ನಾಳೆ ಬಂದು ನೀವು ಅಡ್ಮಿಟ್ ಆಗಿ .....
ಮೂರು ದಿನಗಳ ನಂತರ ಅಪ್ರೆಶನ್ ಮಾಡಿ
ಕಿಡ್ನಿ ಬದಲಾಯಿಸಲಾಯಿತು ....
ಮಂಜನೂ ಕೂಡ ಮೆಲ್ಲನೆ ಸುಧಾರಿಸಿಕೊಳ್ಳುವ ಹಾಗೆ ಆದ...
ಒಂದು ವಾರದ ಬಳಿಕ ಅವನನ್ನು ಆಸ್ಪತ್ರೆಯಿಂದ
ಮನೆಗ ಕರೆದುಕೊಂಡು ಹೋಗುವಾಗ...
ನೋಡಿ ಮ ಏನೇ ನಾವು ಚಿಕಿತ್ಸೆ ಮಾಡಿದರೂ
ನೀವು ಇಬ್ಬರೂ ಮೊದಲ ಹಾಗೆ ಯಾವುದೇ ಕಷ್ಟದ ಕೆಲಸಗಳನ್ನೂ
ಮಾಡುವ ಹಾಗೆ ಇಲ್ಲ ..ಭಾರ ಎತ್ತುವ ಹಾಗೆ ಇಲ್ಲ ...
ನಿಮ್ಮ ಆರೋಗ್ಯದ ಮೇಲೆ ನಿಮಗೆ ಗಮನ ಇರಲಿ ...
ಸರಿ ಸ್ವಾಮಿ ....ಎಂದು ಹೇಳಿ ಅಲ್ಲಿಯಿಂದ ಮನೆಗೆ ಬಂದರು..
ಒಂದು ತಿಂಗಳ ನಂತರ:
ಮಂಜ ಮೊದಲ ಹಾಗೆ ಸ್ವಲ್ಪ ಸುಧಾರಿಸಿದ
ಆದರೂ ಅವನ ಮೇಲೆ ಅವರಮ್ಮನಿಗೆ ಕೋಪ ಹಾಗೆ ಇತ್ತು ....
ಅದೊಂದು ದಿನ ರಾತ್ರಿ
ಮನೆಯಲ್ಲಿ ಮಂಜ ಹಾಗು ಅವನ ತಾಯಿ ಇಬ್ಬರೇ ಇದ್ದಾಗ!
ಮಂಜನಿಗೆ ಅವರಮ್ಮ ಊಟ ಮಾಡಿಸುತ್ತ ಇರುವಾಗ ....
ಅವ್ವ ನನ್ ಮೇಲೆ ನಿಂಗೆ ಇನ್ನೂ ಕೋಪ ಹೋಗಿಲ್ವ ?
ಅದೆಲ್ಲ ಈಗ ಬೇಡ ಸುಮ್ನೆ ಊಟ ಮಾಡು ...
ಇಲ್ಲ ನೀನ್ ಹೇಳೋವರೆಗೂ ನಾನ್ ಊಟ ಮಾಡಲ್ಲ ...
ಇಲ್ಲ ಕಣೋ ಹೋಗಿಲ್ಲ ಹೋಗೋದು ಇಲ್ಲ ..
ನಿನ್ ಮಾಡಿದ್ದು ಏನ್ ಸಣ್ಣ ತಪ್ಪ ?
ಅವರೇ ಏನೇ ಕೆಟ್ಟವರು ಇರಬಹುದು ಅವರನ್ನ ಕೊಲ್ಲೋ ಹಕ್ಕು ನಿನಗೆ
ಇಲ್ಲ?
ಅವರ ಪ್ರಾಣ ತೆಗೆದಿದ್ದೀಯ ಅಂದ್ರೆ ನಿನ್ನ ಹೇಗೆ ನಾನು ಕ್ಷಮಿಸಲಿ
?
ಅಮ್ಮ ಇನ್ನೂ ನಾನು ನಿನಗೆ ನಿಜ ಏನು ಅಂತ ಹೇಳ್ದೆ ಇದ್ರೆ ಆ
ಕೊರಗಲ್ಲೇ ನೀನು ಇರ್ತೀಯ
ಇಷ್ಟು ದಿನ ನಿನಗೆ ಹೇಳಬಾರದು ಅಂತ ಇದ್ದ ಆ ಸತ್ಯ ಈಗ ಹೇಳ್ತಾ
ಇದ್ದೀನಿ
ಆದ್ರೆ ನಿನ್ ನನ್ನ ಮೇಲೆ ಆಣೆ ಮಾಡು ನಾನ್ ಹೇಳೋದನ್ನ ಯಾರಿಗೂ
ಹೇಳಲ್ಲ ಅಂತ ?
ಏನೋ ಅದು ?
ಮೊದಲು ನೀನು ಆಣೆ ಮಾಡು ?
ಸರಿ ನಿನ್ನ ಮೇಲಾಣೆ ಹೇಳು ಏನ್ ಅದು ?
ಅಮ್ಮ ಅವತ್ತು ಏನ್ ನಡಿತು ಅಂದ್ರೆ :
ನಾನು ಅವತ್ತು ಗಿರಿನ ನೋಡಕ್ಕೆ ಜಿಂಕೆ ಪಾರ್ಕ್ ಗೆ ಹೋದೆ ಅಲ್ಲಿ..
ನಾವು ಮಾತಾಡುವಾಗ ನಮ್ಮ ಏರಿಯ ರೌಡಿ ವರ್ಧ ಕೂಡ ಅಲ್ಲಿಗೆ ಬಂದ..
ಬಂದವನೇ ....
ವರ್ಧನ ಹುಡುಗನಿಗೆ ಅವಾಜ್
ಹಾಕ್ತೀಯ ಅಂದ್ರೆ ನಿನ್ನ ಸುಮ್ನೆ ಬಿಟ್ಟು ಬಿಡಬೇಕಾ .....
ನಿಂಗೆ ಮುಖಕ್ಕೆ ಒಂದು ಸಣ್ಣ ಮಾರ್ಕ್
ಹಾಕಿದ್ರೇನೆ ಮುಂದೆ ಎಲ್ಲರಿಗೂ ಒಂದು ಭಯ ಇರುತ್ತೆ !
ಅಣ್ಣ ಬೇಡ ಅಣ್ಣ ..ಆಮೇಲೆ ನಂಗೆ ಯಾರೂ ಕೆಲ್ಸ ಕೊಡಲ್ಲ ...
ಬೇಡ ಅಣ್ಣ ನನ್ನ ಬಿಟ್ಟು ಬಿಡಿ ..
ನಾನು ಅವನ್ನ ಎಷ್ಟೇ ಕೇಳಿಕೊಂಡರೂ ಅವನು ಕೇಳುವ ಹಾಗೆ ಇರಲಿಲ್ಲ
..
ಅದೆಲ್ಲಾ ಆಗಲ್ಲ ನೆನ್ನೆ ಏನೋ ಹೇಳ್ತಾ ಇದ್ದೆ ಈಗ ಹೇಳೋ ಅದನ್ನ
ನನ್ನ ಮುಂದೆ
ಹೇಳೋ ಹೇಳು ಅಂತ ನನ್ನ ಎದೆಯ ಮೇಲೆ ಬಲವಾಗಿ ಹೊದ್ದ..
ಬಿದ್ದ ಏಟಿಗೆ ನಾನು ಕೆಳಗೆ ಬಿದ್ದೆ...ಬಿದ್ದು ಮೆಲ್ಲನೆ ಹಾಗೆ
ಜೇಬಿನಲ್ಲಿ ತಂದಿದ್ದ ಜಾಕುವಿನ ಮೇಲೆ ಕೈ ಇಟ್ಟೆ.........
ಅಷ್ಟರಲ್ಲಿ ನನ್ನ ಹಿಂದೆ ಪೊದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಮೂರು ಜನ
ಬಂದು ನನ್ನ ಹಿಂದೆ ನಿಂತ್ರು....
ಅವರ ಕೈಯಲ್ಲಿ ಲಾಂಗ್ ಗಳು ಇತ್ತು..
ಅವರು ವರ್ಧನ ಕಡೆಯ ಹುಡುಗರು...............
ಅಂತ ಅಂದುಕೊಳ್ಳುವಾಗಲೇ ..
ನನ್ನ ಬೆನ್ನಹಿಂದೆ ಬಟ್ಟೆ ಹಿಡಿದು ಎಳೆದು ನನ್ನ ಹಿಂದೆ ನೂಕಿ
ಮುಂದೆ ಬಂದವರೇ ನೋಡ್ತಾ ನೋಡ್ತಾ ಇದ್ದ ಹಾಗೆ
ಗಿರಿನ ವರ್ಧನ್ನ ಕಣ್ಣ ಎದುರೆ ಕೊಚ್ಚಿದ್ರು ....
ನನಗೆ ಏನ್ ಮಾಡಬೇಕು ಅಂತಾನೆ ತೋಚದೆ ಅಲ್ಲೇ ಬೆಚ್ಚಿ ಬಿದ್ದು
ಕೂತಿದ್ದೆ
ನನ್ನ ಮುಂದೇನೆ ಅವರಿಬ್ಬರೂ ಶವವಾಗಿ ನೆಲಕ್ಕೆ ಉರುಳಿದರು ...
ಇದಾದ ಮೇಲೆ...ಆ ಮೂರು ಜನ ನನ್ನ ಕಡೆ ತಿರುಗಿ ನನ್ನ ಹತ್ರ ಬಂದು
....
ನನಗೆ ಒಳಗೆ ಎಷ್ಟು ಭಯ ಆಯಿತು ಗೊತ್ತ ....
ಬಂದವರೇ ....ನಾವ್ ಯಾರ್ ಗೊತ್ತ ಗೋಪಾಲಯ್ಯನ ಕಡೆಯವರು ...
ಅದೇ ವರ್ಧನ ಅಪ್ಪೋಸಿಟ್ ಗ್ಯಾಂಗ್....
ನಮ್ಮ ಮುಹೂರ್ತ ಗಿರಿಗೆ ಮಾತ್ರಾನೇ ಇದಿದ್ದು
ಆದ್ರೆ ಒಂದು ತಗೊಂಡ್ರೆ ಇನ್ನೊಂದು ಫ್ರೀ ಅನ್ನೋ ಹಾಗೆ ..
ಇಲ್ಲಿಗೆ ವರ್ಧ ಬರ್ತಾನೆ ಅಂತ ನಾವು ಅನ್ಕೊಂಡೆ ಇರ್ಲಿಲ್ಲ
ವರ್ಧನ ರೈಟ್ ಹ್ಯಾಂಡ್ ಗಿರಿ ನ ಎತ್ತಿದ್ರೆ ವರ್ಧನ ಆಟ ಸ್ವಲ್ಪ ಬ್ರೇಕ್
ಬೀಳುತ್ತೆ ಅಂತಾನೆ ಬಂದೋ
ಇವತ್ತು ವರ್ಧನ ಆಟಾನೆ ಮುಗಿಯುತ್ತೆ ಅಂತ ಗೊತ್ತಿರಲಿಲ್ಲ
ಈಗ ಮ್ಯಾಟರ್ ಗೆ ಬರೋಣ ....
ಅಂತ ಹೇಳುತ್ತಾ ನನ್ನ ಮುಂದೆ ಲಾಂಗ್ ಎಸೆದರು ...
ಈ ರೌಡಿಸಂ ಅನ್ನೋ ಫಿಲ್ಡ್ ಗೆ ಹೇಗೋ ಬಂದು ಬಿಟ್ಟಿದ್ದೀಯ ...
ಈಗ ನಿನ್ ಹಿಂದೆ ಹೆಜ್ಜೆ ಇಡಕ್ಕೆ ಆಗಲ್ಲ ...
ನಿನ್ನ ಮುಂದೆ ಬಿದ್ದಿರೋ ಲಾಂಗ್ ನ ತಗೋ
ಗಿರಿನ ಹಾಗು ವರ್ಧನ್ನ ...ನಾನೇ ಎತ್ತಿದ್ದು ಅಂತ ಒಪ್ಕೊಂಡು
ಅಂಧರ್(ಜೈಲ್) ಆಗ್ಬಿಡು..
ಯಾಕೆಂದ್ರೆ ನಿನ್ ವರ್ಧನ ಕಡೆಯವನ ಮೇಲೆ ಕೈ ಇಟ್ಟಿದಕ್ಕೆ ನಿನ್ನ
ಇಡಿದು ನಾಲಕ್ಕು ಇಕ್ಕಕ್ಕೆ
ಏರಿಯಫುಲ್ ಹುಡುಕ್ತಾ ಇದ್ರು...
ಇನ್ನು ನೀನೆ ವರ್ಧನ್ನ ಎತ್ತಕ್ಕೆ ಸ್ಪಾಟ್ ಫಿಕ್ಸ್ ಮಾಡಿದ್ದು
ಅಂತ ಗೊತ್ತಾದ್ರೆ
ಖಂಡಿತ ನೀನು ನಿಮ್ಮ ಮನೆಯವರು ಬದುಕೋಕ್ಕೆ ಆಗಲ್ಲ..
ನೋಡು ಮಚ್ಚ ಈ ಫಿಲ್ಡ್ ಗೆ ಬಂದ ಮೇಲೆ
ಆಯಸ್ಸು ಇರೋವರೆಗೂ ಯಾರೂ ಬದುಕೊಲ್ಲ..
ಅವನ ಮೇಲೆ ಅಪೋಸಿಟ್ ಗ್ರುಪ್ ಗೆ ಭಯ ಇರೋವರೆಗೂ ಅಷ್ಟೇ ಬದುಕೋದು
ದೊಡ್ಡ ರೌಡಿ ವರ್ಧನ್ನೇ ಎತ್ತ್ ಬಿಟ್ಟ ಇನ್ನು ಅವನ ಮನೆಯವರ ಮೇಲೆ ಕೈ ಇಟ್ರೆ ನಮನ
ಸುಮ್ನೆ
ಬಿಡ್ತಾನ ಅಂತ ಯಾರೂ ನಿಮ್ಮ ಅಮ್ಮ ಅಣ್ಣನ ಮೇಲೆ ಕೈ ಇಡಲ್ಲ..
ಅದೇ ನಿನ್ ಅಲ್ಲ ಮಾಡಿದ್ದು ಅಂತ ಗೊತ್ತಾದ್ರೆ
ನಿನ್ ಎಲ್ಲೇ ಇರು ನಿನ್ನ ಬಿಡಲ್ಲ .....
ಅದಕ್ಕೆ ಹೇಳ್ತಾ ಇರೋದು
ನಿನ್ನ ಮೇಲೆ
ಭಯ ಇರೋವರೆಗೂ ಅಷ್ಟೇ ನೀನು ಬದುಕಿರ್ತೀಯ ..
ಒಂದು ಸಲ ಭಯ ಹೋಯ್ತು ಅಂದ್ರೆ
ಮಣ್ಣೊಳಗೆ ಮಲಗಿರ್ತೀಯ ....
ನಿರ್ಧಾರ ನಿನಗೆ ಬಿಟ್ಟಿದ್ದು ...
ನಮಗೆ ಏನ್ ಅಂದ್ರೂ ಓಕೆ..ನೆ...
ಲಾಂಗ್ ನ ತೊಳಿದೆ ಆಟೋದಲ್ಲಿ ಹಾಕೊಂಡು ಅಡ್ಡದಲ್ಲಿ ಕೂತಿರ್ತೀವಿ
ಪೋಲಿಸ್ ಗೆ ಹೇಳಿ
ಕಳಿಸೋದದ್ರೆ ಕಳ್ಸು....ಬರ್ರೋ ...
ಅಂತ ಹೇಳಿ ಅವರು ಹೊರಟು ಹೋದರು ....
ನಾನು ಅಲ್ಲೇ ಕೆಲವು ಕ್ಷಣ ಕುಳಿತು ಯೋಚಿಸಿದೆ ..
ಈಗ ನಾನು ಲಾಂಗ್ ತಗೊಳಿಲ್ಲಾಂದ್ರೆ...
ನಿಮಗೆ ತೊಂದರೆ ಆಗುತ್ತೆ ಅವರು ನಮ್ನ ಸುಮ್ನೆ ಬಿಡಲ್ಲ ...
ಅದಕ್ಕೆ ನಾನೇ ಆ ಕೊಲೆ ಮಾಡಿದ್ದು ಅಂತ ಒಪ್ಪಿ ಶರಣಾದೆ....
ಏನ್ ಮಾಡಕ್ಕೂ ಆಗಲ್ಲವ್ವ ..
ಈ ಫಿಲ್ಡ್ ನಲ್ಲಿ ನಾವೆಲ್ಲಾ ಹರಕೆಯ ಕುರಿಗಳು ಅಷ್ಟೇ
ಯಾರೋ ಆಸೆಗೋಸ್ಕರ ನಾವ್ ಬಲಿಯಾಗ್ತೀವಿ .........
ಅವತ್ತು ನಾನು ಜೈಲ್ ಯಿಂದ ಹೊರ ಬಂಡ ಕೂಡಲೇ ಬಂದು ನಿನಗೆ
ಹೇಳಬೇಕು ಅಂತಲೇ ಬಂದೆ
ಆದ್ರೆ ನೀನು ನನ್ನ ಮುಖ ನೋಡಕ್ಕೆ ರೆಡಿ ಇರ್ಲಿಲ್ಲ
ಬಾಗಿಲು ಹಾಕೊಂಡೆ ಆಗ ಒಂದು ಮಾತು ಹೇಳ್ದೆ
ನನ್ನ ರೋಡ್ ನಲ್ಲಿ ಎಲ್ಲಾ ಇವಳ ಮಗನೆ ಆ ಕೊಲೆ ಮಾಡಿದ್ದು
ಅಂತ ಹೇಳ್ತಾರೆ ಕಣೋ ಅಂತ
ಆಗ ನಾನ್ ಏನಾದರೂ ಇಲ್ಲವ್ವ ನಾನ್ ಮಾಡಿಲ್ಲ ಅಂತ ಹೇಳಿದ್ರೆ
ನನ್ನ ಬಗ್ಗೆ ಯಾರದ್ರೂ ತಪ್ಪಾಗಿ ಮಾತನಾಡುವಾಗ
ನೀನು ನನ್ನ ಮಗ ಕೊಂದಿಲ್ಲ ಕೊಂದಿದ್ದು ಬೇರೆಯವರು ಅಂತ ಅಪ್ಪಿ ತಪ್ಪಿ
ಹೇಳಿದ್ರೂ
ಅದು ನಿಮಗೆ ಕಷ್ಟ ಆಗುತ್ತೆ ಅದಕ್ಕೆ ನಾನು
ಏನೂ ಹೇಳ್ದೆ ಹಾಗೆ ವಾಪಾಸ್ ಹೋದೆ .........
ನಮಗಾಗಿ ನಿನ್ನ
ಬದುಕನ್ನೇ ಹಾಳ್ ಮಾಡ್ಕೊಂಡಿಯಲ್ಲ ಮಂಜ ...
ಬಿಡವ್ವ ಇದ್ರಲ್ಲಿ
ನಂದು ತಪ್ಪಿದೆ ಅವರು ಸರಿ ಇಲ್ಲ ಅಂತ ತಿಳಿದೂ ಅವರ ಸಹವಾಸ ಮಾಡಿದ್ದು
ಬಿಡು ಈಗ ಎಲ್ಲಾ ಮುಗಿದ ಕಥೆ.....
ನನ್ನ ಮನಸಿನಲ್ಲಿ ಇಟ್ಕೊಂಡು ಸಾಯ್ತಾ ಇದ್ದೆ ಕಣೋ
ನನ್ನ ಮಗ ಕೊಲೆಗಾರ ಅದ್ನಲ್ಲ ಅಂತ ಈಗ ನಿನ್ ಹೇಳಿದ್ದು ಕೇಳಿ
ನನ್ನ ಜೀವಕ್ಕೆ ಸಮಾಧಾನ ಆಯ್ತು...
ನಾನ್ ನಿನ್ನ ಮಗ ಅವ್ವ ಯಾವತ್ತೂ ಒಂದು ಪ್ರಾಣ ತೆಗಿಯಲ್ಲ
ಆಮೇಲೆ ನಾನ್ ಗೋಪಾಲಯ್ಯನ ಕಡೆ ಸೇರಿದೆ ಅಲ್ಲಿ ಕೂಡ=
ನಾನ್ ಸಣ್ಣ ಪುಟ್ಟ ಒಡೆದಾಟಕ್ಕೆ ಅಷ್ಟೇ ಹೋಗ್ತಾ ಇದೆ....
ಆಮೇಲೆ ನನ್ನ ಮೈಯಲ್ಲಿ ಶಕ್ತಿ ಕಮ್ಮಿ ಆಯ್ತು
ತಂದು ಆ ಆಸ್ಪತ್ರೆಯಲ್ಲಿ ಎಸೆದು ಹೋದ್ರು...
ಬಿಡು ಮಂಜ ಇನ್ನು ನಿನಗೆ ನಾನ್ ಇದ್ದೀನಿ .....
ಅಂತ ಅವರಮ್ಮ ಮಂಜನ ಕೈ ಹಿಡಿದುಕೊಂಡರು ....
ಕ್ರಮೇಣ ಮೆಲ್ಲನೆ ಮಂಜ ಮೊದಲಿನ ಹಾಗೆ ಆದ
ಆದರೂ ಅವನ ಶಕ್ತಿ ಮೊದಲಿನ ಹಾಗೆ ಇರಲಿಲ್ಲ
ಇದರ ಮಧ್ಯೆ ಶಂಕರನಿಗೆ ಮದುವೆಯಾಗಿ ಬೇರೆ ಮನೆಯಲ್ಲಿ ವಾಸ ಹೂಡಿದ
...
ಮಂಜ ಹಾಗು ಅವನ ಅಮ್ಮ ಮಾರ್ಕೆಟ್ ನಲ್ಲಿ ಹೂ ಮಾರುತ್ತಾರೆ
ಅವರದು ಈಗ ನೆಮ್ಮದಿಯ ಜೀವನ...
ಮಂಜನ ಬದುಕು ಒಂಟಿಯಾಯಿತಲ್ಲ ಎನ್ನುವ ಕೊರಗಿದ್ದರೂ
ಮಗ ಜೀವಂತ ಸಿಕ್ಕಿದ್ನಲ್ಲ ಅನ್ನೋ ನೆಮ್ಮದಿ ಆ ತಾಯಿಗೆ
.........
ಈ ಕಥೆಯಲ್ಲಿ ಬರುವ
ಸನ್ನಿವೇಶಗಳು ಹಾಗೂ ಪಾತ್ರಗಳು
ಕೇವಲ ನನ್ನ ಕಾಲ್ಪನಿಕವಾಗಿರುತ್ತದೆ
ಯಾವುದೇ ನೈಜ ಘಟನೆಗಳಿಗೆ
ಸಂಬಂಧಿಸಿರುವುದಿಲ್ಲ ...
-ಪ್ರಕಾಶ್ ಶ್ರೀನಿವಾಸ್
kathe tumba naijavaagi moodi bandide..
ReplyDelete-Ram
whaw super agide anna
ReplyDeleteAbba yentha kathe, ,, thumba real aagi idhe thammaa. ... ista aithu ....
ReplyDeleteAshakka