ಯೋಚನೆಗಳಿಗೂ ಸಿಗದ ಒಂದು ಮಾಯಾ ಶಕ್ತಿ!
ಪ್ರೀತಿಯ ಬಗ್ಗೆ ಬರೆಯಲು ಹೊರಟರೆ ನಾನಾ ಅಡ್ಡಿಗಳು
ಪ್ರೀತಿ ಹುಟ್ಟಲು...
ಕಾರಣಗಳೇನು ಭಾವನೆಯೇ ?ಮನಸೇ?ಕಣ್ಣುಗಳೇ?
ಉತ್ತರವಿಲ್ಲದ ಪ್ರಶ್ನೆಗಳು
ಇದೆ ಕಾರಣಕ್ಕಾಗಿ
ಪ್ರೀತಿ ಹುಟ್ಟುತ್ತದ ಎಂದು ಹೇಳಲು ಸಾಧ್ಯವಿಲ್ಲ
ಅದು ಮಳೆಯ ಹಾಗೆ ಎಲ್ಲಿ ಬೇಕಿದ್ದರೂ ಬೀಳಬಹುದು!
ಪ್ರೀತಿ ಎನ್ನುವ ಒಂದು ಹೊಸ ಕಣ್ಣು ನಮ್ಮೊಳಗೇ ತೆರೆದ ಮೇಲೆ
ಈ ಭೂಮಿ ಮತ್ತಷ್ಟು ಸುಂದರವಾಗಿ ಕಾಣುವುದು ಅದು ಯಾಕೋ ?
ಮೂರು ಬಾರಿ ಕನ್ನಡಿಯ ನೋಡಿ ಹೊರಡುವುದು ....
ಪ್ರೀತಿಸುವವರ ಮುಂದೆ ಹೆದರುತ್ತಲೇ ಮಾತುಗಳ ಶುರು ಮಾಡುವುದು ...
ಪ್ರೀತಿಸುವವರ ಕಾಣಲೆಂದೇ ಗಂಟೆಯ ಲೆಕ್ಕದಲ್ಲಿ ಕಾಯುವುದು...
ಹೀಗೆ ನಮ್ಮೊಳಗೇ ಒಂದು ಹೊಸ ಪ್ರಪಂಚವೇ ಸೃಷ್ಟಿಯಾಗುತ್ತದೆ ...
ಅಲ್ಲಿ ಎಲ್ಲವೂ ಸುಂದರ....
ಗೆಳೆಯರ ಜೊತೆ ಅದುಯಾವುದೇ ವಿಷಯವಿರಲಿ ಹೆದರದೆ ಮಾತನಾಡುವ ನಾವು
ಪ್ರೀತಿಸುವವರ ಜೊತೆ ಒಂದು ಮಾತನಾಡುವುದಕ್ಕೂ ಯೋಚಿಸುತ್ತೇವೆ ..
ಕಾರಣ ಗೆಳೆಯರ ಕಳೆದುಕೊಂಡರೆ ಮತ್ತೊಬ್ಬರು ಸಿಗಬಹುದು
ಇಲ್ಲಿ ಹಾಗೆ ಆಗಲು ಸಾಧ್ಯವಿಲ್ಲ ಎನ್ನುವ ಮನೋಭಾವವೇ?
ನಮ್ಮದು ತಪ್ಪೇ ಇಲ್ಲದಿದ್ದರೂ ಮತ್ತೆ ಮತ್ತೆ ಕ್ಷಮೆ ಕೇಳುವ ಮನಸು ....
ಸಮಯಕ್ಕೆ ಬರದ ಸಂದೇಶ..ಕರೆ ಮಾಡಿದಾಗ ಸಿಗದಿದ್ದರೆ
ಮನದೊಳಗೆ ಏನೋ ಒಂದು ರೀತಿಯ ಚಟಪಟಿಕೆ..
ನನ್ನ ಪ್ರಕಾರ ಹೇಳುವುದಾದರೆ...
ಪ್ರೀತಿ ಒಂದು ಸಾಗರ ಅದರಲ್ಲಿ ಮುಳಗಬೇಕು ...
ಪ್ರೀತಿ ಕ್ಷಣವನ್ನು ಅನುಭವಿಸಬೇಕು....
ಅದೊಂದು ಧ್ಯಾನ...
ನಮ್ಮೊಳಗೇ ಇಳಿದು ನಮ್ಮನ್ನು ನಮಗೆ ಯಾರೆಂದು ತಿಳಿಸುವ ಒಂದು
ಅದ್ಭುತವಾದ ಪ್ರತಿಕ್ರಿಯೆ...
ಸಾಗರದೊಳಗೆ ಮುಳಗ ಹೊರಟವನು
ಅದಕ್ಕೆ ಬೇಕಾದ ಮುನ್ನೆಚ್ಚರಿಕೆಯ..ಕ್ರಮವನ್ನು ಅನುಸರಿಸಬೇಕು
ಪ್ರೀತಿಯನ್ನುವುದು ಕೇವಲ ಹೃದಯಕ್ಕೆ ಸಂಬಂಧಿಸಿದಲ್ಲ
ಅದು ನಮ್ಮ ಬುದ್ಧಿಗೂ ಸಂಬಂಧಿಸಿದ್ದು
ಎಲ್ಲರೂ ಮನಸಿನೊಂದಿಗೆ ಮಾತನಾಡುತ್ತ
ಬುದ್ಧಿಯ ಮಾತು ಕೇಳದೆ ಬಿಟ್ಟು
ಬಿಡುತ್ತಾರೆ!
ಪ್ರೀತಿಸುವಾಗ ಅಲ್ಲಿ ಇಲ್ಲಿ ಎಂದು ತಿರುಗವಾಗಲೇ
ಮುಂದೆ ಇದೆ ಪ್ರೀತಿಯಿಂದ ಬರುವ ಅಪಾಯದ ಬಗ್ಗೆಯೂ
ಮಾತನಾಡಬೇಕು ...
ಆಗ ಕೇವಲ ಕ್ಷಣಿಕ ಸಂತಸಕ್ಕಾಗಿ ಯಾವುದೇ ಮುಂದಾಲೋಯೋಚನೆ
ಇಲ್ಲದೆ ಸುಮ್ಮನಿದ್ದು ...
ಪ್ರೀತಿಯ ಪಡೆಯಲು ಅಂತಿಮ ಹಂತ ತಲುಪುವಾಗ
ಯೋಚಿಸಲು ಶುರು ಮಾಡುತ್ತಾರೆ
ಒಂದು ರೀತಿಯ ಪರೀಕ್ಷೆಯ ಹಿಂದಿನ ದಿನ ಓದುವ ಹಾಗೆ!
ಹೇಗೆ ಪ್ರೀತಿಸುವವರ ಮೆಚ್ಚಿಸಲು ಯಾವ್ ಯಾವುದೋ ತಂತ್ರಗಳ ಹೆಣೆಯುವ ನಾವುಗಳು
ಅದೇ ಪ್ರೀತಿಯ ಉಳಿಸಿಕೊಳ್ಳುವುದಕ್ಕೆ ಒಳ್ಳೆಯ ರೀತಿಯ ಯೋಚನೆಗಳನ್ನು ರೂಪಿಸದೆ
ಪ್ರೀತಿಯ ಕಳೆದುಕೊಳ್ಳುತ್ತೇವೆ .....
ಆದುದರಿಂದ ಪ್ರೀತಿಸುವಾಗಲೇ
ಮುಂದೆ ಬರುವ ಕಷ್ಟಗಳ ಬಗ್ಗೆ ಮಾತನಾಡಿ ....
ಅದಕ್ಕೆ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸಿ...
ಪ್ರೀತಿಸುವವರು ಪ್ರೀತಿಯ ಒಪ್ಪಿಕೊಂಡ ಕೂಡಲೇ
ಒಂದು ರೀತಿಯ ನಿರ್ಲಕ್ಷ ಬಂದು ಬಿಡುತ್ತೆ ಕೆಲವರಿಗೆ
ಅದು ತುಂಬಾ ತಪ್ಪಾಗುವುದು ...
ಪ್ರೀತಿಯಲ್ಲಿ ಸದಾ ಒಂದು ಆಕರ್ಷಣೆ ಉಳಿಸಿಕೊಳ್ಳಬೇಕು
ಅವರಿಗಾಗಿ ಸಣ್ಣ ಸಣ್ಣ ಉಡುಗೊರೆಯ ನೀಡುತ್ತಿರಬೇಕು..
ಅವರ ಕಷ್ಟಗಳ ಆಳಿಸುವ ಕಿವಿರಲಿ
ಅವರ ಕಷ್ಟಕ್ಕಾಗಿ ಸ್ಪಂದಿಸುವ ಮನಸಿರಲಿ
ಪ್ರೀತಿಯಲ್ಲಿ ಸದಾ ಯಾರೂ ಕೂಡ
ಒಂದೇ ರೀತಿಯಿರುವುದಕ್ಕೆ ಸಾಧ್ಯವಿಲ್ಲ
ಕಾಲಗಳು ಸನ್ನಿವೇಶಗಳು ಬದಲಾಯಿಸುತ್ತೆ
ಆ ಬದಲಾವಣೆಗಳ ಜೊತೆಗೆ ಕೂಡ ಹೊಂದಾಣಿಕೆ ಮಾಡಿಕೊಂಡಾಗಲೇ
ನೆಮ್ಮದಿಯ ಪ್ರೀತಿಯ ಪಯಣ ಸಾಧ್ಯ.....!!
-ಪ್ರಕಾಶ್ ಶ್ರೀನಿವಾಸ್
No comments:
Post a Comment