
ದಿ ಕಾಲ್
------------
ನ್ಯೂ ಯಾರ್ಕ್ ನ ಪೋಲಿಸ್ ಸಹಾಯವಾಣಿ 911 ನಲ್ಲಿ ಕೆಲಸ ಮಾಡುವ ನಾಯಕಿ, ಆ ಊರಿನಲ್ಲಿ ಕಳ್ಳರಿಂದ ಹಿಡಿದು, ಮನೆಗೆ ಬಾವುಲಿ ಬಂದರೂ ಸಹ ಜನರು ಸಹಾಯಕ್ಕಾಗಿ ಆ ಸಂಖ್ಯೆಗೆ ಕರೆ ಮಾಡೋದು. ಹೀಗಿರುವಾಗ ಆ ರಾತ್ರಿ ನಾಯಕಿಗೆ ಅದಯಾರೆಯದ ಹುಡುಗಿಯ ಕಡೆಯಿಂದ ಒಂದು ಕರೆ, ತನ್ನನ್ನು ಯಾರೋ ಕೊಲ್ಲಲು ಮನೆಯೊಳಗೇ ನುಗ್ಗಿದ್ದಾರೆ ನಾನು ಅವರಿಂದ ತಪ್ಪಿಸಿಕೊಂಡು ಕೋಣೆಯೊಳಗೆ ಇದ್ದೀನಿ, ನನಗೆ ಸಹಾಯ ಮಾಡಿ ಎನ್ನುವ ಗೋಗರೆತ. ಕೂಡಲೇ ಆ ಹುಡುಗಿ ಇರುವ ಕಟ್ಟಡದತ್ತ ಶರವೇಗದಲ್ಲಿ ಹೊರಡುವ ಪೋಲಿಸ್ ಕಾರುಗಳು, ಪಾಲಿಸುವ ತಲುಪಲು ತಡವಾಗುವ ಪ್ರತಿಯೊಂದು ಕ್ಷಣಕ್ಕೂ ಕೊಲೆಗಾರ ಆ ಹುಡುಗಿಯ ಸನಿಹವಾಗುತ್ತಾನೆ. ಕೊನೆಗೂ ಪೋಲಿಸ್ ಬರುವ ಮುನ್ನವೇ ಆ ಹುಡುಗಿಯ ಭೀಕರ ಹತ್ಯೆ ನಡೆದೇ ಹೋಗುತ್ತೆ. ಆತನೊಬ್ಬ ಸೈಕೋ! ತನ್ನಿಂದ ಆ ಹುಡುಗಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲವಲ್ಲ ಎನ್ನುವ ವೇದನೆಯಿಂದ ಕಾಲ್ ಅಟೆಂಡ್ ಮಾಡುವ ಆ ವಿಭಾಗವನ್ನು ತೊರೆಯುವ ನಾಯಕಿ.... ಮುಂದೆ ಏನಾಯಿತು ಅನ್ನೋದನ್ನು ನೋಡಿಯೇ ಎಂಜಾಯ್ ಮಾಡ್ಬೇಕು ಒಂದೊಂದು ಕ್ಷಣವೂ ರೋಚಕವಾಗಿ ಸಾಗುತ್ತೆ ಚಿತ್ರಕತೆ...
ಕ್ಯಾಲಿಬರ್
---------------
ಶಾಲಾದಿನದಿಂದ ಅವರಿಬ್ಬರೂ ಗೆಳೆಯರು, ಒಂದು ದಿನ ಸಿಟಿ ಜೀವನದಿಂದ ಒಂದಿಷ್ಟು ಬಿಡುವು ಇರಲಿ ಎಂದು ಇಬ್ಬರೂ ಕಾಡಿನೊಳಗೆ ಜಿಂಕೆಯಾ ಬೇಟೆ ಆಡಲು ಹೊರಡುತ್ತಾರೆ, ನಾಯಕನ ಹೆಂಡತಿ ಗರ್ಭಿಣಿ. ಜಿಂಕೆಯನ್ನು ಬೇಟೆ ಆಡಲು ಮುಂದಾದಾಗ ಏನಾಗುತ್ತೆ ಎಂದು ರಾಮಾಯಣದಿಂದ ಮಹಾಭಾರತದ ತನಕ ನೋಡಿದ್ದೇವೆ. ಹಾಗೆಯೇ ಅದೊಂದು ಬೇಟೆಯ ಘಟನೆ ಗೆಳೆಯರಿಬ್ಬರ ಬದುಕನ್ನೇ ನರಕವಾಗಿಸುತ್ತದೆ, ಊರು ಕಾಡು ನಡುವೆ ಹೋಂ ಸ್ಟೇ, ಕಾಡಿನಿಂದ ನಾಡಿಗೆ ಬರಲು ಪಡುವ ಕಷ್ಟ, ಒಂದಿಷ್ಟು ಹೊತ್ತು ಶಾಂತತೆ ಒಂದಿಷ್ಟು ಹೊತ್ತು ರೋಚಕ ಹೀಗೆ ಸಾಗುವ ಚಿತ್ರಕತೆ ನೋಡುಗರನ್ನು ಕುರ್ಚಿಯ ತುದಿಗೆ ತರುತ್ತದೆ, ಬ್ರಿಟಿಶ್ ಫಿಲಂ ಮೇಕಿಂಗ್ ಚೆನ್ನಾಗಿದೆ ಆ ಕಾಡು, ಹೋಂ ಸ್ಟಾಟ್ ಅಲ್ಲೊಂದಿಷ್ಟು ಜನರು ಅವರ ಲೈಫ್ ಸ್ಟೈಲ್...
ದಿ ನೆಸ್ಟ್ ತ್ರೀ ಡೇಸ್
-------------------
ಗಂಡ ಹೆಂಡತಿ ಒಂದು ಗಂಡು ಮಗು ನೆಮ್ಮದಿಯ ಜೀವನ. ಹೀಗಿರುವ ಬದುಕಿನಲ್ಲೊಂದು ಬಿರುಗಾಳಿ ಮಾಡದ ತಪ್ಪಿಗಾಗಿ ಹೆಂಡತಿಯನ್ನು ಪೋಲಿಸ್ ಅರೆಸ್ಟ್ ಮಾಡುತ್ತಾರೆ, ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳು ಆಕೆಯೇ ಕೊಲೆಗಾತಿ ಎಂದು ಹೇಳುವಂತಿವೆ ಹಾಗಾಗಿ ಅವಳಿಗೆ ಜೀವಾವದಿ ಶಿಕ್ಷೆ... ನಾಯಕ ಅವಳು ಆ ತಪ್ಪು ಮಾಡಿಲ್ಲ ಅವಳು ನಿರಪರಾಧಿ ಎಂದು ಸಾಬೀತು ಪಡಿಸಲು ಪ್ರಯತ್ನಿಸುತ್ತಾನೆ. ಅಲ್ಲೂ ಸೋಲು. ನಂತರ ಆತ ತೆಗೆದುಕೊಳ್ಳುವ ನಿರ್ಧಾರವೇ ಚಿತ್ರದ ಸೂಪರ್ ತಿರುವು, ಅಲ್ಲಿಂದ ಕಥೆ ಆರಂಭ. ಆರಂಭದಲ್ಲಿ ಸ್ಲೋ ಅನ್ನಿಸಿದರೂ ಕೊನೆಯ ನಲವತ್ತು ನಿಮಿಷ ಸಕ್ಕತ್ ಥ್ರಿಲರ್..
No comments:
Post a Comment