Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Thursday, 8 May 2014

ಹಕ್ಕಿಯ ಹಕ್ಕು!?


ಹಕ್ಕಿಯ ಹಕ್ಕು!?
-----------------
ಹೇಗೋ ನೀ ಈ ಬಾನಾಡಿಯನ್ನು ಹಿಡಿದು ಬಿಟ್ಟೆ
ಪಂಜರದೊಳಗೆ ಬಂಧಿಸುವ ಮುನ್ನ
ನನ್ನ ರೆಕ್ಕೆಯನ್ನಾದರೂ ಕಡಿದು ಬಿಡು,
ಹಾರುವ ಆಸೆಯನ್ನು ಬಿಟ್ಟು
ಬಂಧನದ ಭಾವನೆಯಲ್ಲಿಯೇ ಮುಳುಗುತ್ತೇನೆ.

ಇಲ್ಲದಿದ್ದರೆ ಪಂಜರದ ಕಂಬಿಗಳನ್ನು ಕಿತ್ತಿಟ್ಟು ಬಿಡು,
ಸ್ವಾತಂತ್ರದ ಸವಿಯೇನೆಂದು
ಸವಿಯುತ್ತಾ ಜಗಕ್ಕೆ ಸಾರುತ್ತೇನೆ.

ಇಲ್ಲ,
ನಾ ಗರಿಬಿಚ್ಚಿ ಹಾರಿ, ಕಬ್ಬಿಣದ ಕಂಬಿಗಳು ಗೀರಿ
ನನ್ನ ರಕ್ತ ಚಿಮ್ಮುವ ಕ್ಷಣಗಳಿಗಾಗಿ ಕಾದಿದ್ದರೆ ಹೇಳಿ ಬಿಡು,
ನನ್ನಿಷ್ಟದಂತೆ ಬದುಕಲಾಗದಿದ್ದರೂ
ನಿನ್ನಷ್ಟದಂತೆ ಸಾಯಲು ಸಿದ್ಧ!
-ಪ್ರಕಾಶ್ ಶ್ರೀನಿವಾಸ್

No comments:

Post a Comment