Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Thursday 24 October 2013

ಜವ.......!



ಅಣ್ಣ ವಾಸುದೇವ್ , ತಮ್ಮ ರಘುರಾಮ್!
ಕಟ್ಟಡಗಳ ನಿರ್ಮಾಣದ  ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸಹೋದರರು ...
ಹೆಸರು/ಹಣ/ಕೀರ್ತಿ/ ಹೀಗೆ ಎಲ್ಲವನ್ನೂ ಅಪಾರವಾಗಿ ಗಳಿಸಿದ್ದರು ....
ಹೆತ್ತವರನ್ನು ಸಣ್ಣ ವಯಸ್ಸಿನಲ್ಲಿಯೇ ಕಳೆದು ಕೊಂಡರೂ ಅಜ್ಜಿಯ ಆಸರೆಯಲ್ಲಿ ಬೆಳೆದು
ಕಟ್ಟಡ ವಿನ್ಯಾಸದ ಪದವಿ ಪಡೆದು ಬಂದ ಹಿರಿಯಣ್ಣನ ಪರಿಶ್ರದಿಂದ ಮೇಲ್ಮಟ್ಟಕ್ಕೆ ಬೆಳೆದವರು
ಅಜ್ಜಿಯೂ ತೀರಿಕೊಂಡ ಮೇಲೆ ಅಣ್ಣ ವಾಸುದೇವ್ ಒಂದು ಅನಾಥ ಹುಡುಗಿಯ ನೋಡಿ ಮದುವೆಯಾದ.
ಎರಡನೆಯವನು ಮದುವೆಯ ಮೇಲೆ ಅಷ್ಟೋನೂ
ಆಸಕ್ತಿಯಿಲ್ಲದ ಕಾರಣ ಮದುವೆಯ ಮುಂದೂಡುತ್ತಾ ಬಂದ...

ಕಣ್ಣಿಗೆ ಬಿದ್ದ ಬೆಲೆ ಬಾಳುವ  ವಸ್ತುಗಳ ತಂದು 
ಮನೆಯಲ್ಲಿ ಜೋಡಿಸಿ ಇಟ್ಟಿದ್ದ ವಾಸುದೇವನಿಗೆ ಒಂದೇ ಒಂದು ಕೊರಗಿತ್ತು  ಅದು
ಮದುವೆಯಾಗಿ ಐದು ವರ್ಷವಾದರೂ ತನಗೊಂದು ಮಗು ಜನಿಸದೆ ಇರುವುದು ....
ಅದೊಂದು  ದಿನ ಆ ಒಂದೇ ಒಂದು ಕೊರತೆಯೂ ನೀಗುವ ಶುಭದಿನ ಅಂದು ...

(ತನ್ನ ಕಚೇರಿಯಲ್ಲಿ ವಾಸುದೇವ್ ಎಲ್ಲರಿಗೂ ಸಿಹಿ ಹಂಚುತ್ತಿದ್ದ!)

ಸ್ವೀಟ್ ತಗೋಳಿ......
ಏನ್ ಸರ್ ವಿಶೇಷ ?
ನನ್ನ ವೈಫ್ pregnant 
ಹೌದ ಸರ್ ಅಭಿನಂದನೆಗಳು ಸರ್ ..

(ಆಫೀಸ್ ನ ಮತ್ತೊಂದು ದಿಕ್ಕಿನಲ್ಲಿ ವಾಸುದೇವ್ ನ ತಮ್ಮ ರಘುರಾಮ್ !)
ಏನ್ ಬಾಸ್ ಇಷ್ಟು ದೊಡ್ಡ ಆಫೀಸ್ ಗೆ ಇಲ್ಲಾಂದ್ರೂ ಐವತ್ತು ಜನ ಇದ್ದಾರೆ ಎಲ್ಲರಿಗೂ ಸ್ವೀಟ್ ನೀವೇ ಖುದ್ದಾಗಿ ಕೊಡ್ತಾ ಇದ್ದೀರಾ ?
ಎಂದು ಕೇಳಿದ ಮ್ಯಾನೇಜರ್ ಸುರೇಶ ಅವರ ಪ್ರಶ್ನೆಗೆ...
ಹೌದು ನಾನು ಅಣ್ಣ ಇಬ್ಬರೇ ಇರೋದು ಹೆತ್ತವರು ಸಣ್ಣ ವಯಸ್ಸಿನಲ್ಲೇ
ತೀರಿಕೊಂಡ ಮೇಲೆ ಹೇಗೋ ಅಣ್ಣನ ಹಾರ್ಡ್ ವರ್ಕ್ ಯಿಂದ
ಈ ಸ್ಥಾನಕ್ಕೆ ಬೆಳೆದು ಬಂದೋ ಅವನೇ ನನಗೆ ಎಲ್ಲಾ
ಅಣ್ಣನಿಗೆ ಮದುವೆ ಆಗಿ ಐದು ವರ್ಷ ಆದರೂ
ಒಂದು ಮಗು ಆಗಿಲ್ಲ ಅಂತ ಅಣ್ಣ ಅತ್ತಿಗೆ ಇಬ್ಬರೂ ಕೊರಗುತ್ತಾ ಇದ್ರು...
ಆದರೆ ಈಗ ಒಳ್ಳೆಯ ಕಾಲ ಕೂಡಿ ಬಂದಿದೆ
ನಮ್ಮ ಮನೆಗೆ ನಮ್ಮ ರಕ್ತ ಅಂತ ಹೇಳಿಕೊಳ್ಳಕ್ಕೆ ಮತ್ತೊಂದು ಜೀವ ಬರೋದಿದೆ
ಆ ಸಂತೋಷಕ್ಕೆ ಇಷ್ಟೆಲ್ಲಾ ಮಾಡ್ತಾ ಇದ್ದೀವಿ ....
ಹೌದ ಸರ್ ಗ್ರೇಟ್ ಸರ್ ಹೆತ್ತವರು ಇಲ್ಲದೆಯೇ ಇಷ್ಟು ಎತ್ತರಕ್ಕೆ ಬೆಳೆದಿರುವ ನಿಮ್ಮನ್ನ ನೋಡಿದ್ರೆ ನಮಗೆ ಕೂಡ ಖುಷಿ ಆಗುತ್ತೆ  ಒಂದು ಸ್ಫೂರ್ತಿ ಸಿಗುತ್ತೆ ....
ಮಗು ಹುಟ್ಟಿದ ಮೇಲೆ ಇನ್ನೂ ಜೋರಾಗಿರುತ್ತೆ ಅನ್ನಿ ನಿಮ್ಮ ಸಂಭ್ರಮ!
ಹೌದು ಫುಲ್ ಪಾರ್ಟಿ ಎಲ್ಲರಿಗೂ ....
ಓಕೆ ನಾನು ಬರ್ತೀನಿ ನೀವು ಕೆಲಸ ನೋಡಿ ...

ಇವರೆಲ್ಲಾರಿಗಿಂತ  ಸಂತಸದ  ಬಾನಿನಲ್ಲಿ  ನಗುವಿನ ರಕ್ಕೆ ಬಿಚ್ಚಿ ಹಾರುತ್ತಿದ್ದಿದ್ದು
ವಾಸುದೇವನ ಹೆಂಡತಿ ಪಲ್ಲವಿ!
ಸಂಬಂಧಿಕರು,ಸ್ನೇಹಿತರು,ಅಕ್ಕಪಕ್ಕದ ಮನೆಯವರು
ಹೀಗೆ ತಿಳಿದವರಿಗೆಲ್ಲಾ ತಾನು ಒಂದು ಮಗುವಿಗೆ ಜನುಮ ನೀಡುತ್ತೇನೆ ಎನ್ನುವ ಸಿಹಿ ಸುದ್ದಿಯ ಜೊತೆಗೆ ಸಿಹಿಯ ಹಂಚುತ್ತಾ ಸಂಭ್ರಮಿಸಿದಳು !

ಕೆಲವೊಮ್ಮೆ ಅತಿಯಾದ ಖುಷಿಯೂ ಕೂಡ ಮುಂದೆ ಬರುವ ದುಃಖದ
ಮುನ್ಸೂಚನೆಯಾಗಿರುತ್ತವೆ
ಕಾಲದ ಚಕ್ರ ತುಸು ಮುಂದೆ ಚಲಿಸಿತು!
ಪಲ್ಲವಿಗೆ ಈಗ ಮೂರು ತಿಂಗಳು!
ವಾಸುದೇವ್ ಮಧ್ಯಾಹ್ನ ವಿಮಾನದಲ್ಲಿ  ಬೇರೆ ಊರಿಗೆ ಕೆಲಸದ ಸೀಮಿತ ಹೋಗಬೇಕಿತ್ತು
ಹಾಗಾಗಿ ಆತ ಮನೆಯಲ್ಲಿಯೇ ಇದ್ದ ...
ಗಂಡನಿಗೆ ಬೆಳಗ್ಗಿನ ತಿಂಡಿ  ಕೊಟ್ಟು ಪಲ್ಲವಿ ಮನೆಯ
ಒಳಗೆಯೇ ಇರುವ ಮಹಡಿಯ ಮೇಲೆ ಕೆಲಸ ಮಾಡುತ್ತಿದ್ದಳು ......
ಚೇರ್ ಮೇಲೆ ಹತ್ತಿ ಗೋಡೆಯಲ್ಲಿದ್ದ  ಅವರ ಮದುವೆಯ ಪೋಟೋದಲ್ಲಿನ ಧೂಳ್
ಒರೆಸಲು ಮುಂದಾದಾಗ ..ಕಾಲ್ ಜಾರಿ ಮೆಟ್ಟಿಲಿನಿಂದ
ಉರುಳುತ್ತಾ  ಕೆಳಗೆ ಬಿದ್ದು  ಮೂರ್ಛೆ ಹೋದಳು
ಅಲ್ಲಿಯೇ ಹಾಲ್ ನಲ್ಲಿ ಇದ್ದ  ವಾಸುದೇವ್ ಕೂಡಲೇ ..
ಅವಳನ್ನು ಹಿಡಿದು ಕೊಂಡು ಮುಖಕ್ಕೆ ನೀರ್ ಚುಮಿಕಿಸಿದರೂ
ಅವಳಿಗೆ ಪ್ರಜ್ಞೆ  ಬರದ ಕಾರಣ ಅವಳನ್ನು ಎತ್ತಿಕೊಂಡು
ಕಾರ್ ನಲ್ಲಿ ಅವರ ಫ್ಯಾಮಿಲಿ ಲೇಡಿ ಡಾಕ್ಟರ್ ಕ್ಲಿನಿಕ್ ಗೆ ಬಂದ .....
ಪಲ್ಲವಿಯನ್ನು ಕೂಡಲೇ ಚೆಕ್ ಅಪ್ ರೂಂ ಗೆ ಕರೆದೊಯಿಲಾಯಿತು ..
ರೂಂ ಹೊರಗೆ ನಿಂತಿದ್ದ ವಾಸುದೇವ್  ತಮ್ಮನಿಗೆ  ಕಾಲ್ ಮಾಡಿದ
ಹಲೋ ರಘು ಎಲ್ಲಿದ್ದೀಯ ಬೇಗಾ ನಮ್ಮ ಡಾಕ್ಟರ್ ಸುಧಾ ಅವರ ಕ್ಲಿನಿಕ್ ಗೆ ಬಾ
ಆಯಿತು ಅಣ್ಣ ನಾನು ಕೂಡ ಅಲ್ಲೇ ಪಕ್ಕದಲ್ಲೇ ಇದ್ದೀನಿ ಐದು ನಿಮಿಷದಲ್ಲಿ ಬಂದು ಬಿಡ್ತೀನಿ !
ಎಂದೇಳಿ ಕೆಲವೇ ಕ್ಷಣಗಳ ಬಳಿಕ  ವಾಸುದೇವ್ ಬೆನ್ನ ಹಿಂದೆ ಬಂದು ನಿಂತ!
ಅಣ್ಣಾ .......
ಯಾಕೋ ರಘು ನೀನೂ ಒಂತರ ಇದ್ದೀಯ ?
ಇಲ್ಲ ಅಣ್ಣ ನೀನ್ ಬೇರೆ ಬೇಗಾ ಬಾ ಅಂದ ಅದು ಆಸ್ಪತ್ರೆ ಗೆ
ಅದೇ ಟೆನ್ಷನ್ ನಲ್ಲಿ  ಸ್ವಲ್ಪ ಆತುರವಾಗಿ ಬಂದೆ ಅದಕ್ಕೆ ....
ಏನ್ ಆಯಿತು ಅಣ್ಣ ಇನೇನ್ ಇಲ್ಲಿ ?
ಅಯ್ಯೋ ರಘು ನಿಮ್ಮ ಅತ್ತಿಗೆ ಮನೆ ಕ್ಲೀನ್ ಮಾಡುವಾಗ ಮೆಟ್ಟಿಲಿನಿಂದ ಉರುಳಿ ಬಿದ್ದು
ಮೂರ್ಛೆ ಹೋದ್ಲು ಕಣೋ ಅವಳನ್ನ ತಂದು ಸೇರಿಸಿದ್ದೀನಿ
ಏನ್ ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ ಕಣೋ  ನನಗೆ ತುಂಬಾ ಭಯ ಆಗ್ತಾ ಇದೆ.
ಅಣ್ಣ ಭಯ ಪಡಬೇಡ ಅತ್ತಿಗೆಗೆ ಏನೂ ಆಗಲ್ಲ ...
ಡಾಕ್ಟರ್ ಏನ್ ಅಂದ್ರು ?
ಇಲ್ಲ ಕಣೋ ನಮ್ಮ ಫ್ಯಾಮಿಲಿ ಡಾಕ್ಟರ್ ಸುಧಾ ಅವರನ್ನೇ ಹುಡುಕ್ತಾ ಬಂದೆ ...
ಒಳಗೆ ಬೇರೆ ಡಾಕ್ಟರ್ಸ್ ನೋಡ್ತಾ ಇದ್ದಾರೆ .....
ಹೌದ ಇರಣ್ಣ  ನಾನು ಹೋಗಿ ನೋಡ್ತೀನಿ..
ಎಂದು ರಘು  ಸುಧಾರ  ಕರೆತರಲು ಹೊರಟ ಒಂದು ಎರಡು ನಿಮಿಷದ
ಬಳಿಕ ಹೆರಿಗೆ ವಾರ್ಡನ್ ಇಂದ ಸುಧಾ ಅವರ ಕರೆದುಕೊಂಡು ಬರುತ್ತಲೇ ನಡೆದ ವಿಷಯವನ್ನು ಹೇಳುತ್ತಿದ್ದ  ರಘು ...
ಇಬ್ಬರೂ ಬಂದು ವಾಸುದೇವ್ ಮುಂದೆ ನಿಂತರು ...
ಸುಧಾ ನನ್ ವೈಫ್ ಗೆ ..
ಎಲ್ಲಾ ಹೇಳಿದ್ದಾರೆ ಮಿಸ್ಟರ್ ವಾಸುದೇವ್ ನಾನ್ ಹೋಗಿ ನೋಡ್ತೀನಿ.
ಎಂದು ಪಲ್ಲವಿಯ ನೋಡಲು ಸುಧಾ ಒಳಗೊದಳು ...
ಹೊರಗೆ ಅಣ್ಣ ತಮ್ಮ ಇಬ್ಬರ ಮುಖದಲ್ಲಿ ಆತಂಕದ ಛಾಯೆ ..!
ಒಂದು ಗಂಟೆಗಳ ಬಳಿಕ ಹೊರ ಬಂದ ಸುಧಾ ....
ಅವರ ಮುಖದಲ್ಲಿ ನಿರಾಸೆಯ ಭಾವ ಮನೆ ಮಾಡಿತ್ತು ..
ಡಾಕ್ಟರ್ ನನ್ನ ವೈಫ್  ಗೆ ಏನ್ ಆಯಿತು ?
ರಿಯಲಿ ಸಾರೀ ಮಿಸ್ಟರ್ ವಾಸುದೇವ್ ನಿಮ್ಮ ವೈಫ್ ಗೆ ಅಬಾರ್ಶನ್ ಆಯಿತು ....
ಅಯ್ಯೋ  ಅಯ್ಯೋ ಎಂದು ಎದೆಗೆ ಒಡೆದು ಕೊಂಡು ವಾಸುದೇವ್ ಗೋಳಾಡುತ್ತಿದ್ದ
ರಘುವಿಗೂ ಕೂಡ ದುಃಖ ಉಮ್ಮಳಿಸಿ ಬರುತ್ತಿದ್ದರೂ ಕಣ್ಣೀರ ಒರೆಸಿಕೊಂಡು 
ಅಣ್ಣನಿಗೆ ಸಂತೈಸುತ್ತಿದ್ದ ...
ಅಣ್ಣ ದಯವಿಟ್ಟು ಧೈರ್ಯ ಗೆಡಬೇಡ  ನೀನು ತಾನೇ ಅತ್ತಿಗೆಗೆ ಧೈರ್ಯ ಹೇಳ ಬೇಕು,
ಈಗ ನೀನೆ ಹೀಗೆ ಕುಸಿದು ಬಿಟ್ಟರೆ ಅವರ ಗತಿ ಏನು ?
ರಘು ನಾನು ಹೇಗೋ ಅವಳ ಮುಖ ನೋಡಿ ಹೇಳೋದು ಎಷ್ಟೋ ಕನಸು ಕಾಣ್ತಾ ಇದ್ಲು ಕಣೋ
ಹುಟ್ಟೋ ಮಗು ಗಂಡೋ ಹೆಣ್ಣೋ ಅಂತ ಕೂಡ ಗೊತ್ತಿಲ್ಲದೆಯೇ ಅದಕ್ಕೆ ಬೇಕಿರೋ ಆಟದ ಸಾಮಾನುಗಳು ಬಟ್ಟೆಗಳು ಎಲ್ಲಾ ತಂದಿದ್ದಾಳೆ ಕಣೋ ...
ಹೌದು ಅಣ್ಣ ನನಗೂ ಗೊತ್ತು ಅತ್ತಿಗೆ ಎಷ್ಟು ಖುಷಿ ಇಂದ ಇದ್ರು ಅಂತ ಬಟ್ ಈಗ
ಏನ್ ಮಾಡೋದು ಆಗಿದ್ದು ಆಗಿದೆ ಈಗ ನಾವೇ ಅವರಿಗೆ ಧೈರ್ಯ ಹೇಳಬೇಕು ಅಲ್ವ ...
ಹೀಗೆ ವಾಸುದೇವನ ಸಮಾಧಾನ ಪಡಿಸುತ್ತಲೇ ಆ ಕಡೆ ಪಲ್ಲವಿ ಎಚ್ಚರವಾದಳು ...
ಅವಳನ್ನು ನೋಡಲು ಇಬ್ಬರೂ ರೂಂ ಒಳಗೆ ಹೋದಾಗ ..
ಅವಳಿಗಿನ್ನೂ ಪೂರ್ಣ ಎಚ್ಚರ ಬಂದಿರಲಿಲ್ಲ ಹಾಗೆ ಮೆಲ್ಲನೆ ಕಣ್ಣ ಬಿಟ್ಟು ..
ವಾಸುದೇವನ ನೋಡಿದಳು .......
ಅವಳ ಕೈ ಹಿಡಿದು ಕೊಂಡು ...
ಈಗ ಹೇಗಿದೆ ? ಎನ್ನುವ ವಾಸುದೇವನ ಪ್ರಶ್ನೆಗೆ
ಈಗ ಸ್ವಲ್ಪ ಪರವಾಗಿಲ್ಲ ಅದರೂ ಬಿದ್ದ ನೋವಿದೆ ರೀ
ಹೌದು ನನ್ನ ಮಗುಗೆ ಏನೂ ಆಗಿಲ್ಲ ತಾನೇ ?
ಡಾಕ್ಟರ್ ನ ಕೇಳಿದ್ರ ಏನ್ ಅಂದ್ರು ?
ಇಲ್ಲ ಏನೂ ಆಗಿಲ್ಲ ಚೆನ್ನಾಗಿದೆ ಅಂದ್ರು.
ಯಾಕೆ ನೀವು ತುಂಬಾ ಅತ್ತಿರೋ ಹಾಗೆ ಇದೆ ?
ಇಲ್ಲ ನೀನು ಹೀಗೆ ಬಿದ್ದು ಬಿಟ್ಟಲ್ಲ ಅದಕ್ಕೆ
ಇಲ್ಲ ನೀವು ಸುಳ್ಳು ಹೇಳ್ತಾ ಇದ್ದೀರಾ ಏನೋ ಇದೆ ನಿಜ ಹೇಳಿ ಏನ್ ಆಯಿತು ?
ಅತ್ತಿಗೆ ಏನೂ ಆಗಿಲ್ಲ ಮೊದಲು ನೀವು ಸುಧಾರಿಸಿಕೊಳ್ಳಿ
ಇಲ್ಲ ರಘು ಏನೋ ಆಗಿದೆ ದಯವಿಟ್ಟು ಏನ್ ಆಯಿತು ಹೇಳಿ ?
ಅವಳ ಹಠ ಬಿಡದೆ ಮತ್ತೆ ಮತ್ತೆ ಪ್ರಶ್ನೆ ಕೇಳುತ್ತಲೇ ಇದ್ದಾಗ
ವಾಸುದೇವ ನಿಜ ಹೇಳಿಯೇ ಬಿಟ್ಟ ........
ಹಾಗೆ ಸಿಡಿಲು  ಬಡಿದ  ಹಾಗೆ ತಲೆಯ ಮೇಲೆ ಕೈ ಇಟ್ಟು ಕುಳಿತು ಬಿಟ್ಟಳು
ಆ ತಾಯಿಯ ಸಂತೈಸಲು ಅವರಿಬ್ಬರಿಂದಲೂ ಆಗಲಿಲ್ಲ
ಮಗುವ ಕಳೆದು ಕೊಂಡ ತಾಯಿಯ ವೇದನೆ ಪದಗಳಲ್ಲಿ ಹೇಳಲಾಗದು!!
ಹೇಗೋ  ಆ ರಾತ್ರಿಯ ಅಲ್ಲೇ ಕಳೆದು ಮಾರನೆಯ ದಿನವೇ ನಾನು
ಈಗಲೇ ಮನೆಗೆ ಹೋಗಬೇಕು ಇಲ್ಲಿದ್ದರೆ ನನಗೆ ಮತ್ತಷ್ಟು ನನ್ನ ಮಗುವಿನ ಯೋಚನೆಗಳೇ ಬರುತ್ತವೆ ನನ್ನನ್ನು ಮೊದಲು ಇಲ್ಲಿಯಿಂದ ಕರೆದು ಕೊಂಡು ಹೋಗಿ ಹೋಗಿ ಎಂದು
ಹೇಳುತ್ತಿದ್ದ ಪಲ್ಲವಿಯ ವಾಸುದೇವ್ ಮನೆಗೆ ಕರೆ ತಂದ ..
ರಘು ಈ ಟೈಮ್ ನಲ್ಲಿ ನಿಮ್ಮ ಅತ್ತಿಗೆ ನ ಒಬ್ಬಳೇ ಬಿಟ್ಟು ನಾನು ಬರೋದು ಒಳ್ಳೇದಲ್ಲ
ಕಣೋ ನಾನು ಅವಳ ಜೊತೇನೆ  ಇರ್ತೀನಿ ನೀನು  ಆಫೀಸ್  ಬಿಸಿನೆಸ್ಸ್ ನೋಡ್ಕೋ.
ಆಯಿತು ಅಣ್ಣ ನೀನು ಕೂಡ ತುಂಬಾ ನೊಂದ್ಕೊಬೇಡ ಅಣ್ಣ  ಅತ್ತಿಗೆಗೆ ಸಮಾಧಾನ ಮಾಡು
ಎಂದು ಹೇಳಿ ರಘು ಆಫೀಸ್ ಗೆ ಹೊರಟ ...
ಪಲ್ಲವಿ ಮಗುವಿನ ಯೋಚನೆಯಲ್ಲೇ ಊಟ ನಿದ್ರೆ ಬಿಟ್ಟಳು
ಸದಾ ಅವಳಿಗೆ ಮಗುವಿನ ಧ್ಯಾನವೇ ...
ವಾಸುದೇವ್ ಅವಳಿಗೆ ಸಮಾಧಾನ ಪಡಿಸಿ ಮಗುವಿನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ
ಕೆಲಸದಾಳುಗಳು ಇದ್ದರೂ  ಅವನೇ ಅಡುಗೆ ಮಾಡಿ ...ಪಲ್ಲವಿಗೆ ಊಟ ಮಾಡಿಸುತ್ತಿದ್ದ...
ಹೀಗೆ ಮೂರು ದಿನಗಳ ನಂತರ!
ಮಧ್ಯಾಹ್ನ ಮೂರು ಗಂಟೆಗೆ ಯಾಕೋ ಪಲ್ಲವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು
ಏನ್ ಮಾಡಿದರೂ ಅವಳಿಗೆ ಕಡಿಮೆ ಆಗುವ ಸೂಚನೆಯೇ ಇಲ್ಲವೆಂದಾಗ
ತಕ್ಷಣ  ವಾಸುದೇವ್ ಅವಳನ್ನು ಡಾಕ್ಟರ್ ಸುಧಾ ಅವರ ಬಳಿ ಕರೆದುಕೊಂಡು ಹೋಗಿ ತೋರಿಸಿದ
ವಿಷಯ ತಿಳಿದು ರಘು ಅಲ್ಲಿಗೆ ಕೂಡ ಬಂದಿದ್ದ ..
ಪಲ್ಲವಿಯ ಚೆಕ್ ಮಾಡಿದ ಸುಧಾ ಒಂದು ಸಲ ಸ್ಕ್ಯಾನ್ ಮಾಡಿದ ನಂತರವಷ್ಟೇ
ಏನನ್ನೂ ಹೇಳುವುದಕ್ಕೆ ಸಾಧ್ಯವೆಂದು ಹೇಳಿ ಸ್ಕ್ಯಾನ್ ಮಾಡಿಸಲು ಪಲ್ಲವಿಯ ಕರೆದೊಯಿದರು ..
ಡಾಕ್ಟರ್ ರೂಂ ನಲ್ಲಿ ಅಣ್ಣ ತಮ್ಮ ಇಬ್ಬರೂ ಕಾದು ಕುಳಿತಿದ್ದಾಗ ಅಲ್ಲಿಗೆ ಬಂದ ಸುಧಾ
ಅದಗಾಲೆ ಒಂದು ಗಂಟೆ ಕಳೆದಿತ್ತು ....
ಡಾಕ್ಟರ್ ಯಾಕ್ ಒಂತರ ಇದ್ದೀರಾ ಏನ್ ಆಯಿತು ನನ್ನ ಪಲ್ಲವಿಗೆ ?
ನನ್ನ ಮೆಡಿಕಲ್ ಲೈಫ್ ನಲ್ಲಿ ಇಂತಹ ಒಂದು ಕೇಸ್ ನ ನಾನು ಎಲ್ಲೂ ಕಂಡಿಲ್ಲ ಹಾಗೂ ಓದಿಲ್ಲ!!
ಅಂತದು ಏನ್ ಆಗಿದೆ ಡಾಕ್ಟರ್ ಹೇಳಿ ........?
===================ಪುಟ2======================
ಭಯ ಪಡುವಂತದ್ದು ಏನಿಲ್ಲಾ ಅಚ್ಚರಿಯ ಜೊತೆ ಖುಷಿಯ ಕೊಡುವ ವಿಷಯ ...
ಈಗ ನಿಮ್ಮ ವೈಫ್ pregnant…..!!!
ಒಮ್ಮೆ ಸಹೋದರರು ಒಬ್ಬರ ಮುಖ ಒಬ್ಬರು ನೋಡಿಕೊಂಡು !
ಏನ್ ಹೇಳ್ತಾ ಇದ್ದೀರಾ ಡಾಕ್ಟರ್ ?
ಹೌದು ವಾಸುದೇವ್ ನನಗೂ ನಂಬಕ್ಕೆ ಅಗ್ತಾ ಇಲ್ಲ...
ಮತ್ತೆ ಈಗ ನಿಮ್ಮ ವೈಫ್ ನ ಗರ್ಭದೊಳಗೆ ಭ್ರೂಣ ಇದೆ!
ಕಳೆದ ಬಾರಿ ನಾನೇ ನನ್ನ ಕೈಯಾರೆ ಭ್ರೂಣ ಹೊರ ತೆಗೆದಿದ್ದೀನಿ
ಬಟ್ ಮತ್ತೊಂದು ಭ್ರೂಣ ಅದು ಕೂಡ ಆರೋಗ್ಯವಂತ ಸ್ಥಿತಿಯಲ್ಲಿ ಹೇಗೆ ಅನ್ನೋದು
ನನ್ನ ಕಲ್ಪನೆಗೂ ನಿಲುಕದ ಒಂದು ವಿಷಯವಾಗಿದೆ ....
ನನಗೆ ಏನ್ ಹೇಳೋದು ಅಂತಾನೆ ಗೊತ್ತಾಗುತ್ತಿಲ್ಲ  ಡಾಕ್ಟರ್
ಒಂದು ಕಡೆ ನಂಬಕ್ಕೆ ಆಗ್ತಾ ಇಲ್ಲ ಮತ್ತೊಂದೆಡೆ ತುಂಬಾ ಸಂತೋಷ ಕೂಡ ಆಗ್ತಾ ಇದೆ !
ವೈದ್ಯಲೋಕದಲ್ಲಿ  ಈ ರೀತಿಯ ವಿಸ್ಮಯಗಳು ಹಾಗಾಗ ನಡೆಯೋದುಂಟು
ಸೊ ನೀವ್ ಈಗ ಅವರನ್ನ ತುಂಬಾ ಜೋಪಾನವಾಗಿ ನೋಡಿಕೊಳ್ಳಿ
ಮತ್ತೊಂದು ಮುಖ್ಯವಾದ ವಿಷಯ ಅವರ ಗರ್ಭ ಚೀಲ ತುಂಬಾ ಬಲಹೀನವಾಗಿದೆ
ಐ ಥಿಂಕ್ ಅವರಿಗೆ ಇದುವೇ ಕೊನೆಯ ಮಗು ಕೂಡ ಆಗಬಹುದು ...
ಹಾಗಾಗಿ ನೀವು ಈಗ ಸ್ವಲ್ಪ ಹೆಚ್ಚಿನ  ಕಾಳಜಿವಹಿಸುವ  ಅಗತ್ಯವಿದೆ ...
ಈ ಬಾರಿ ಯಾವುದೇ ಅವಗಡ ಆಗಕ್ಕೂ ನಾನು ಬಿಡಲ್ಲ ಡಾಕ್ಟರ್
ನನ್ನ ಮಗು ಈ ಭೂಮಿನ ನೋಡೋದು  ಖಚಿತ..
ಎಂದು ಹೇಳಿ ವಾಸು ಹಾಗೂ ರಘು ಪಲ್ಲವಿಯ ನೋಡಲು ಹೋದರು
ಪಲ್ಲವಿ ಇದ್ದ ರೂಮಿನಲ್ಲಿ....
ಸಹೋದರರ ನಗುವ ಮುಖವನ್ನು ಕಂಡು ಅವಳಿಗೂ ಆಶ್ಚರ್ಯ
ಪಲ್ಲವಿ ತುಂಬಾ ಸಂತೋಷ ಅಗ್ತಾ ಇದೆ ?
ಯಾಕೆ ?
(ಆಸಕ್ತಿಯೇ ಇಲ್ಲದೆ ಕೇಳಿದಳು)
ಹೇಳಿದ್ರೆ ಖಂಡಿತ ನೀನು ನಂಬಲ್ಲ...
ಏನ್ ವಿಷಯ ಹೇಳಿ ?
ನೀನು ಈಗ pregnant!!
ಏನು ? ಸುಮ್ನೆ ನನ್ನ ಸಮಾಧಾನ ಮಾಡಕ್ಕೆ
ಏನ್ ಏನೋ ಹೇಳಬೇಡಿ....
ಇಲ್ಲ ಅತ್ತಿಗೆ ಅಣ್ಣ ಹೇಳ್ತಾ ಇರೋದು ನಿಜ!
ನೀವು  ತಾಯಿ  ಅಗ್ತಾ ಇದ್ದೀರಾ !
ಇಲ್ಲ ನಾನು ನಂಬಲ್ಲ  ನೀವು ಸುಳ್ಳು ಹೇಳ್ತಾ ಇದ್ದೀರಾ..
ರಘು ನೀನು ಡಾಕ್ಟರ್ ಸುಧಾ ಅವರಿಗೆ ಕಾಲ್ ಮಾಡಿ ಬರಕ್ಕೆ ಹೇಳೋ
ಅವರೇ ಹೇಳಿದ ಮೇಲಾದ್ರೂ ಇವ್ಳು ನಂಬ್ತಾಳೆ...
ರಘು ಕಾಲ್ ಮಾಡಿದ ಅಲ್ಲಿಗೆ ಸುಧಾ ಬಂದರು
ಡಾಕ್ಟರ್ ನಾವು ಹೇಳೋದನ್ನ ಪಲ್ಲವಿ ನಂಬ್ತಾನೆ ಇಲ್ಲ
ನೀವೇ ಹೇಳಿ .....
ಹೌದು ಪಲ್ಲವಿ ವಾಸುದೇವ್ ಹೇಳ್ತಾ ಇರೋದು ನಿಜ
ಇದು ನನ್ನಿಂದ ಸಹ  ನಂಬದ ಒಂದು ಸಂಗತಿ ಕಾರಣ
ವೈದ್ಯಲೋಕದಲ್ಲಿ ಇಂತಹ ಒಂದು ಘಟನೆ ನಾನು ಕಂಡಿಲ್ಲ
ನಿಮ್ಮ ಹೊಟ್ಟೆಯಲ್ಲಿ ಈಗ ಮಗು ಇದೆ !
ಸುಧಾ ಮಾತು ಕೇಳುತ್ತಾ ಇದ್ದ ಹಾಗೆ ಪಲ್ಲವಿಯ ಮುಖ ಅರಳಿತು
ಏನ್ ಹೇಳ್ತಾ ಇದ್ದೀರಾ ನಂಗೆ ಮಗು ಆಗುತ್ತಾ ?
ಹೌದು ನಿಮಗೆ ಮಗು ಆಗುತ್ತೆ ನೀವು ಈಗ ಗರ್ಭಿಣಿ !
ಸರಿ ವಾಸುದೇವ್ ಇನ್ನು ನಿಮ್ಮ ವೈಫ್ ನ  ಹುಷಾರಾಗಿ  ನೋಡಿಕೊಳ್ಳಿ..
ನೀವು ಅಷ್ಟೇ ಪಲ್ಲವಿ ಆ ಕೆಲಸ ಈ ಕೆಲಸ ಅಂತ ಮಾಡಕ್ಕೆ ಹೋಗಬೇಡಿ ದಯವಿಟ್ಟು
ನಿಮ್ಮನ್ನ ನೀವು ಮೊದಲು ಚೆನ್ನಾಗಿ ನೋಡಿಕೊಳ್ಳಿ
ಮಗು ಆಗುವವರೆಗೂ ತುಂಬಾ ಕೇರ್ ಇಂದ ಇರಿ...
ಏನಾದ್ರೂ ಇದ್ರೆ ನನ್ನ ಬಂದು ನೋಡಿ ಇಲ್ಲಾಂದ್ರೆ ಕಾಲ್ ಮಾಡಿ
ನಾನೇ  ಬರ್ತೀನಿ ....
ಆಯಿತು ಸುಧಾ ನೀವು ಹೇಳಿದ ಹಾಗೆ ಮಾಡ್ತೀನಿ ....
ಪಲ್ಲವಿಯನ್ನು ಮನೆಗೆ ಕರೆದು ತಂದು ಅವಳ ರೂಮಿನಲ್ಲಿ ಮಲಗಿಸಿ
ವಾಸುದೇವ್  ಮತ್ತು ರಘು ಹಾಲ್ ನಲ್ಲಿ ಮಾತನಾಡುತ್ತಿದ್ದರು ...
ರಘು ಈಗ ಮನೇಲಿ ಕೆಲಸದವರು ಇದ್ದಾರೆ ಅದರೂ
ಸದಾ ಮನೇಲೆ  ಇದ್ದು  ಪಲ್ಲವಿನ ನೋಡಿಕೊಳ್ಳುವ
ಹಾಗೆ ಒಬ್ಬರು ಬೇಕು ಅವರಿಗೆ ಗರ್ಭಣಿಯ ಆರೈಕೆಯೂ ತಿಳಿದಿರ ಬೇಕು ...
ಸರಿ ಅಣ್ಣ ನಾನು ಪೇಪರ್ ನಲ್ಲಿ ಆಡ್ ಕೊಡ್ತೀನಿ
ಗರ್ಭಿಣಿಯಾ ಹಾರೈಕೆ ತಿಳಿದವರು  ಬೇಕಾಗಿದ್ದಾರೆ ಅಂತ ..
ಗುಡ್ ಐಡಿಯಾ ಕಣೋ ಹಾಗೆ ಮಾಡು ......
ನಮ್ಮ ಆಫೀಸ್ ನಲ್ಲಿ ಇರುವವರಿಗೆ ನಾನೇ ಖುದ್ದಾಗಿ ಹೇಳ್ತೀನಿ ...
ವಾಸುದೇವ್ ಮ್ಯಾನೇಜರ್ ಗೆ ಕಾಲ್ ಮಾಡಿ
ಹಲೋ ಸುರೇಶ:
ಹೇಳಿ ಸರ್....
ನನಗೆ ಮನೇಲೆ ಇದ್ದು ನನ್ನ ವೈಫ್ ನ ನೋಡಿಕೊಳ್ಳುವ ಹಾಗೂ
ಗರ್ಭಿಣಿಯರ ಹಾರೈಕೆ ತಿಳಿದಿರುವ ಒಬ್ಬರು ಹೆಂಗಸು ಬೇಕು  ...
ಸರಿ ಸರ್ ನಾನು ನಮ್ಮ ಮನೆಯ ಅಕ್ಕಪಕ್ಕ ವಿಚಾರಿಸಿ
ತಿಳಿಸ್ತೀನಿ ...
ಸ್ವಲ್ಪ ಬೇಗಾ ಹೇಳಿ.
ಸರಿ ಸರ್ ಆದಷ್ಟು ಬೇಗಾ ಹೇಳ್ತೀನಿ ..........
ಪಲ್ಲವಿ ಅವಳೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳುತ್ತಾ ಇದ್ದಳು ಅವಳಿಗೆ
ವಾಸುದೇವ್ ಕೂಡ ಸಹಾಯವಾಗಿದ್ದ ...ಹೀಗೆ ಒಂದು ವಾರದ ಬಳಿಕ
ಆಫೀಸ್ ನಲ್ಲಿ !
ಮ್ಯಾನೇಜರ್ ಸುರೇಶ ಒಂದು 40-45ರ ಆಸುಪಾಸಿನ ಹೆಂಗಸಿನೊಂದಿಗೆ
ಬಂದರು ವಾಸುದೇವನ ರೂಮಿನೊಳಗೆ ....
ಸರ್ ನೀವು ಹೇಳಿದ್ರಲ್ಲ ಕೆಲಸದವರು ಬೇಕು ಅಂತ
ಅದಕ್ಕೆ ಇವರನ್ನ ಕರೆದು ತಂದಿದ್ದೀನಿ ಇವರ ಹೆಸರು ರತ್ನಮ್ಮ ..
ಇವರಿಗೆ ಈಗಾಗಲೇ  pregnant lady ನ ನೋಡಿಕೊಂಡು ಅಭ್ಯಾಸವಿದೆ
ಹಾಗೂ ಇವರಿಗೆ ಹೆರಿಗೆ ಕೂಡ ಮಾಡಿಸಕ್ಕೆ  ಬರುತ್ತೆ ಸರ್ ....
ಓಹ್ ಹೌದ ನಮಗೆ ಅಷ್ಟೆಲ್ಲಾ ಏನ್ ಬೇಡ ಜಸ್ಟ್ ಮನೇಲಿ
ಇದ್ದು ಜೋಪಾನವಾಗಿ ನೋಡಿಕೊಂಡರೆ ಸಾಕು ...
ನೀವು ಎಲ್ಲಿ ಇರೋದು ?
(ಎಂದು ರತ್ನಮ್ಮ ನ ನೋಡಿ ಕೇಳಿದ ವಾಸುದೇವ್ )
ಬುದ್ದಿ ನಾನು ನಮ್ಮ ಸುರೇಶ ಇದ್ದರಲ್ಲ ಅವರ ಮನೆಯ ಹತ್ತಿರವೇ ಇರೋದು
ಹೌದು ಸರ್ ನಮ್ಮ ಮನೆ ಹತ್ರನೇ ಇರೋದು ...
ಓಕೆ ನಿಮಗೆ pregnant lady ನೋಡಿಕೊಂಡು ಅಭ್ಯಾಸ ಯಾವಗಳಿಂದ ಇದೆ ?
ಬುದ್ದಿ ಶಾನೆ ವರ್ಷದಿಂದ ನಾನೇ ಇದೆ ಕೆಲಸ ಮಾಡೋದು
ನನಗೆ ನಾಟಿವೈದ್ಯನೂ  ಬರುತ್ತೆ ನಾನು ಆರು ಜನ ಗರ್ಭಿಣಿಯರನ್ನ ನೋಡಿಕೊಂಡಿದ್ದೀನಿ
ಅವರಿಗೆಲ್ಲಾ ಈಗ ಹೆರಿಗೆ ಆಗಿ ಮುದ್ದಾದ ಮಗು ಇದೆ
ನೀವು ಬೇಕಿದ್ರೆ ಅವರ ನಂಬರ್ ಕೊಡ್ತೀನಿ ಫೋನ್ ಮಾಡಿ ಕೇಳಿ.....
ಗುಡ್ ಗುಡ್ ...ಅದೆಲ್ಲಾ ಏನ್ ಬೇಡ ಸರಿ ನಿಮ್ಮ ಜೊತೆ ಯಾರ್ ಇದ್ದಾರೆ ?
ನನ್ನ ಗಂಡ ಸತ್ತು ಮೂವತ್ತು ವರ್ಷ ಆಗ್ತದೆ ...
ನನಗೆ ಇರೋದು ಒಂದೇ ಹೆಣ್ ಮಗ ಅವಳಿಗೆ ನಮ್ಮೂರು ಮಂಡ್ಯ ಅಲ್ಲೇ ಒಂದು ವರನ ನೋಡಿ ಮದುವೆ ಮಾಡಿದ್ದೀನಿ ಅವಳು ಅಲ್ಲೇ ಇದ್ದಾಳೆ
ಮಗಳಿಗೆ ಮದುವೆ ಅದಮೇಲೆ ಅಳಿಯನ ಮನೆಯಲ್ಲಿ ಇರೋದು ಅಷ್ಟೊಂದು ಚಂದಕೆ ಇರಲ್ಲ ಅಂತ  
ನಾನು ಅಲ್ಲಿಯಿಂದ ಇಲ್ಲಿಗೆ ಬಂದೆ ...
ಇಲ್ಲಿ ಬಂದ ನನಗೆ ಯಾವ ಕೆಲ್ಸನೂ ಬರಕಿಲ್ಲ ಬರೋದು ಹೆರಿಗೆ ಮಾಡಿಸೋದು ನಾಟಿಮದ್ದು ಕೊಡೋದು ಆದರೆ ಹೆರಿಗೆ ಮಾಡಿಸೋದಕ್ಕೆ ಇಲ್ಲಿ ಆಸ್ಪತ್ರೆಗಳು ಇದ್ದಾವೆ ಅಂತ
ಗರ್ಭಣಿಯರ ನೋಡಿಕೊಳ್ಳಕ್ಕೆ  ಮಾತ್ರ ನಾನು ಹೋಗ್ತಾ ಇದ್ದೆ ಅವರ ಜೊತೆಯೇ ಇದ್ದು
 ಹೆರಿಗೆ ಅದ್ಮೆಕೆ ಅವರು ಕೊಡ ಕಾಸ್ ನಲ್ಲಿ ನನ್ನ ಮಗಳಿಗೆ ಸೀರೆ ಒಡವೆ ತಗೊಂಡು
ಊರಿಗೆ ಹೋಗಿ ಕೊಟ್ಟು ಬರ್ತಾ ಇದ್ದೆ .....
ನನ್ನ ಜೊತೆ ಯಾರೂ ಇಲ್ಲ ಅದಕ್ಕೆ ನಾನು ಕೆಲಸ ಮಾಡೋರ ಮನೇಲೆ ಉಳಿಯೋದು ಬುದ್ದಿ ...
ಸರಿ ನಮಗೂ ಅದೇ ಬೇಕು ....
ಆಯಿತು ಸುರೇಶ ಇವರನ್ನ ನಾನು ಕೆಲಸಕ್ಕೆ ಸೇರಿಸಿಕೊಂಡಾಯಿತು
ನಿಮಗೆ ತುಂಬಾ ಥ್ಯಾಂಕ್ಸ್ ....
ಸರ್ ಥ್ಯಾಂಕ್ಸ್ ಎಲ್ಲಾ ಬೇಡ ಸರ್ ಏನೋ ನನ್ನಿಂದ ಆದ ಒಂದು ಹೆಲ್ಪ್ ಅಷ್ಟೇ
ಸರಿ ಸುರೇಶ ನೀವು ಹೊರಡಿ ..... ..
ಓಕೆ ಸರ್ ನಾನು ಬರ್ತೀನಿ ...
ಸುರೇಶ್ ಹೋದ ಬಳಿಕ ...
ನೋಡಿ ರತ್ನಮ್ಮ ಅವರ ಮುಂದೆ ಎಲ್ಲಾ ,
ಇರೋ ವಿಷಯನ ಹೇಳಕ್ಕೆ ಆಗಲ್ಲ ಅದಕ್ಕೆ ಅವರು ಹೋದ ಮೇಲೆ ನಿಮಗೆ ಹೇಳ್ತಾ ಇದ್ದೀನಿ ....
ನನ್ನ ವೈಫ್ ಗೆ ಅಪ್ಪ ಅಮ್ಮ ಅಂತ ಯಾರೂ ಇಲ್ಲ ಅವಳನ್ನ ನೋಡಿಕೊಳ್ಳೋಕೆ ಅಂತ ನಮ್ಮ ಸಂಬಂಧಿಕರು ಕೂಡ ಬರಲ್ಲ ಅದಕ್ಕೆ ನಾನು ಒಬ್ಬರನ್ನ  ಅವಳ ತಾಯಿಯ ಹಾಗೆ ಪಕ್ಕದಲ್ಲೇ ಇದ್ದು ನೋಡ್ಕೋಬೇಕು ಅಂತ ಏರ್ಪಾಡು ಮಾಡಬೇಕು ಅಂತ ಇದ್ದಿದ್ದು ..
ಈಗ ನೀವು ಸಿಕ್ಕಿದ್ದು ನನಗೆ ಖುಷಿ ಆಯಿತು ..
ನಾನು ಇರೋದನ್ನ ಹೇಳಿ ಬಿಡ್ತೀನಿ ಆಗ ನಿಮಗೆ ಎಲ್ಲಾ ಅರ್ಥ ಆಗುತ್ತೆ ...
ಮೊದಲು ನೀವು ಕುಳಿತುಕೊಳ್ಳಿ
ಬ್ಯಾಡ ಬುದ್ದಿ ..ನಾನು ನಿಂತೇ ಇರ್ತೀನಿ ನೀವು ಹೇಳಿ
ಅಯ್ಯೋ ನೀವು ದೊಡ್ಡೋರು ನೀವು ನಿಲ್ಲೋದು ನಾನು ಕೂತು ಮಾತಾಡೋದ ?
ಮೊದಲು ನೀವು ಕುಳಿತುಕೊಳ್ಳಿ ....
ಸರಿ ಬುದ್ದಿ.......
(ರತ್ನಮ್ಮ ಕುರ್ಚಿಯಲ್ಲಿ ಕುಳಿತುಕೊಂಡರು )
ನನಗೆ ಮದುವೆ ಆಗಿ ಐದು ವರ್ಷ ಆಯಿತು
ನಮಗೆ ಒಂದು ಮಗು ಇಲ್ಲ ಅಂತ ನಾವು ನೋಡದ ವೈದ್ಯರು ಇಲ್ಲ ತೆಗೆದುಕೊಳ್ಳದ  ಔಷಧಿ ಇಲ್ಲ
ಅಷ್ಟೆಲ್ಲಾ ನಾವ್ ಮಾಡಿದ ಪ್ರಯತ್ನಕ್ಕೆ ಈಗಷ್ಟೇ  ಕೆಲವು ದಿನಗಳ ಹಿಂದೆ ಅವಳಿಗೆ ಮಗು ಆಗುತ್ತೆ ಅನ್ನೋ ಸುದ್ದಿ ಕೇಳಿ
ತುಂಬಾ ಸಂತೋಷವಾಗಿದ್ದ ನಮಗೆ ಅವಳು ಏನೋ ಕೆಲಸ ಮಾಡಕ್ಕೆ ಹೋಗಿ
ಮಹಡಿಯಿಂದ ಮೆಟ್ಟಿಲಿನಲ್ಲಿ ಉರುಳಿ ಬಿದ್ದು ....
ಆಮೇಲೆ ಅವಳನ್ನ ಅಸ್ಪತ್ರೆಗೆ ಸೇರಿಸಿದೋ ಅಲ್ಲಿ ಅವಳಿಗೆ ..
ಡಾಕ್ಟರ್ ಗರ್ಭಪಾತವಾಯ್ತು ಅಂತ ಹೇಳಿದ್ದನ್ನ ಕೇಳಿ
ಹಾಗೆ ಎದೆಯೊಳಗೆ ಸಿಡಿಲು ಬಡಿದ  ಹಾಗೆ  ಕುಸಿದು ಬಿದ್ದೆ ....
ಆಮೇಲೆ ಸ್ವಲ್ಪ ದಿನ ಅದಮೇಲೆ ಅವಳಿಗೆನೋ ಹೊಟ್ಟೆ ನೋವು ಅಂತ
ಮತ್ತೆ ಅಸ್ಪತ್ರೆಗೆ ತೋರಿಸಿದಾಗ ನಿಮ್ಮ ವೈಫ್ ನ ಹೊಟ್ಟೆಯಲ್ಲಿ ಮಗು ಇದೆ
ಅಂತ ಡಾಕ್ಟರ್ ಹೇಳಿದ್ರು ........
(ಇದನ್ನ ಕೇಳುತ್ತಿದ್ದ  ರತ್ನಮ್ಮನ ಹುಬ್ಬು ಅಚ್ಚರಿಯಲ್ಲಿ ಮೇಲೆದ್ದಿತು )
ಏನ್ ಹೇಳ್ತಾ ಇದ್ದೀರಾ ಬುದ್ದಿ ?
ನಿಮ್ಮ ಹಾಗೆ ನಮಗೂ ಇದನ್ನ ನಂಬಕ್ಕೆ ಆಗಲಿಲ್ಲ ಆದರೆ ಅದುವೇ ನಿಜ ಆಗಿದ್ದರಿಂದ
ನಂಬಲೇ ಬೇಕಾಗಿ ಬಂತು ...
ಎಲ್ಲೋ ನಾನು ಮಾಡಿದ ದಾನಧರ್ಮದ ಪುಣ್ಯ  ನನ್ನ ಕಾಪಾಡಿದ ಅಂತ ನಾನು ನಂಬಿದೆ ..
ಸೊ ಈಗ ಅವಳನ್ನ ಮತ್ತಷ್ಟು ಹುಷಾರಾಗಿ ನೋಡಿಕೊಳ್ಳಬೇಕು
ಅವಳ ಗರ್ಭ ಚೀಲ ತುಂಬಾ ಸೂಕ್ಷ್ಮವಾಗಿದೆ ಅವಳಿಗೆ ಮಗು ಆಗಲಿ ಆಗದೆ ಇರಲಿ ಇದುವೇ
ಕೊನೆಯ ಹೆರಿಗೆ ಅಂತ ವೈದ್ಯರು ಹೇಳಿದ್ದಾರೆ ಅದಕ್ಕೆ ಈ ಮಗುನ ನಾವು ಉಳಿಸಿಕೊಳ್ಳಲೇ ಬೇಕು
ಅದಕ್ಕೆ ನೀವು ಅವರನ್ನ ತುಂಬಾ ಚೆನ್ನಾಗಿ ನಿಮ್ಮ ಸ್ವಂತ ಮಗಳ ಹಾಗೆ ನೋಡಿಕೊಳ್ಳಿ
ನಿಮಗೆ  ಇದುವರೆಗೂ ಯಾರೂ ಕೊಡದಷ್ಟು ಹಣ ನಾನು ಕೊಡ್ತೀನಿ ....
ಬುದ್ದಿ ಹಣ  ಏನ್ ಬುಡಿ ಬುದ್ದಿ ಹೆಂಗಾದ್ರೂ ಸಂಪಾದನೆ ಮಾಡಬಹುದು ಮನುಷ್ಯ ಮುಖ್ಯ
ನೀವು ಇಷ್ಟೆಲ್ಲಾ ಹೇಳಿದ್ ಮ್ಯಾಕೆ  ನನ್ನ ಸ್ವಂತ ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ತೀನಿ ...
ನಿಮ್ಮ ಮಗುನ ನಿಮ್ಮ ಕೈಯಲ್ಲಿ ಕೊಟ್ಟ ಮೇಲೆಯೇ ನಾನು ನಿಮ್ಮ ಮನೆ ಬಿಡೋದು ....
ಇಷ್ಟು ಹೇಳಿದ್ರಲ್ಲ ಸಾಕು ರತ್ನಮ್ಮವರೆ ಮನಸಿಗೆ ಎಷ್ಟೋ ನೆಮ್ಮದಿಯಾಯಿತು ...
ಒಂದು ನಿಮಿಷ ನನ್ನ ತಮ್ಮನಿಗೆ ನಿಮ್ನ ಕರ್ಕೊಂಡು ಹೋಗಿ ನಮ್ಮ ಮನೇಲಿ ಬಿಡಕ್ಕೆ ಹೇಳ್ತೀನಿ .....   
ಫೋನ್ ತೆಗೆದುಕೊಂಡು
ರಘು ಸ್ವಲ್ಪ ನನ್ನ ರೂಂ ಗೆ ಬಾ ..
ಬಾಗಿಲು ತೆಗೆದು ರಘು ಒಳ ಬಂದ ...
ಅಣ್ಣಾ ......
ಹಾ ರಘು ಇವರು ರತ್ನಮ್ಮ ಅಂತ
ರತ್ನಮ್ಮನವರೆ ಇವನು ನನ್ನ ತಮ್ಮ ರಘು ಅಂತ
(ರತ್ನಮ್ಮ ಎದ್ದು ನಿಂತು)
ನಮಸ್ಕಾರ ಬುದ್ದಿ ...
ನಮಸ್ತೆ ಮಾ ..
ಇವರನ್ನ ನಮ್ಮ ಮ್ಯಾನೇಜರ್  ಸುರೇಶ್ ಕರ್ಕೊಂಡು ಬಂದಿದ್ದಾರೆ ಕಣೋ
ನಮ್ಮ ಮನೆಯಲ್ಲೇ ಇದ್ದು ಪಲ್ಲವಿನ ನೋಡಿಕೊಳ್ಳಕ್ಕೆ ...
ಓಹ್ ಹೌದಾ ಅಣ್ಣ ಒಳ್ಳೆದೇ ಆಯಿತು
ಮತ್ತೆ ವಿಷಯ ಎಲ್ಲಾ ಹೇಳಿದೆ ತಾನೇ ?
ಹೇಗೆ ಎಂತಾ ಅನ್ನೋದೆಲ್ಲಾ ವಿಚಾರಿಸಿದ್ದೀಯ ತಾನೇ ?
ಎಲ್ಲಾ ಹೇಳಿದ್ದೀನಿ ವಿಚಾರಿಸಿದ್ದೀನಿ ನನಗೂ ಕೂಡ ಅವರ ಮೇಲೆ ನಂಬಿಕೆ ಬಂತು
ನೋಡಕ್ಕೆ ಒಳ್ಳೆಯ ಜನರಂತೆ ಕಾಣ್ತಾರೆ  ...
ಅದಕ್ಕೆ ಕೆಲಸಕ್ಕೆ ಸೇರಿಸಿಕೊಂಡೆ ಕಣೋ ...
ನೀನ್ ಮಾತಾಡಿದ್ದೀಯ ಅಂದ ಮೇಲೆ ಮುಗಿತು ಬಿಡಣ್ಣ ..
ಸರಿ ರಘು ಇವರನ್ನ ಮನೇಲಿ ಬಿಟ್ಟು ...
ಹಾಗೆ ಪಲ್ಲವಿಗೆ ಇವರ ಪರಿಚಯ ಮಾಡಿಕೊಟ್ಟು ಬಾ ....
ಆಯಿತು ಅಣ್ಣ ...
ಬನ್ನಿ ರತ್ನಮ್ಮ .....
ಕಾರಿನಲ್ಲಿ ಕೂರಿಸಿಕೊಂಡು ಹೊರಟ ಗಾಡಿ ಮನೆಯ ಮುಂದೆ ಬಂದು ನಿಂತಿತು ..
ಬನ್ನಿ ಒಳಗೆ ...
ಅತ್ತಿಗೆ .........ಅತ್ತಿಗೆ .....
ಮಹಡಿಯಿಂದ ಇಳಿದು ಬಂದಳು ಪಲ್ಲವಿ ..
ಅತ್ತಿಗೆ ಇವರ ಹೆಸರು ರತ್ನಮ್ಮ ಅಂತ ಇನ್ ಮುಂದೆ ಇವರು ನಿಮ್ಮ ಜೊತೆಯಲ್ಲೇ ಇದ್ದು ನೋಡಿಕೊಳ್ತಾರೆ  ....
ಇವರನ್ನ ನಮ್ಮ ಮ್ಯಾನೇಜರ್ ಸುರೇಶ್ ಅವರ ಕರ್ಕೊಂಡು ಬಂದಿರೋದು
ಅಣ್ಣ ಎಲ್ಲಾ ಮಾತಾಡಿ ಇವರನ್ನ ಕೆಲಸಕ್ಕೆ ಸೇರಿಸಿಕೊಂಡ ...
ಓಹ್ ಹೌದಾ ಸರಿ ರಘು ...
ಬನ್ನಿ ಮ ಕುಳಿತುಕೊಳ್ಳಿ
ಇರ್ಲಿ ಅಮ್ಮೊರೆ ....
ಮತ್ತೆ ರತ್ನಮ್ಮ ಇವರ ಹೆಸರು ಪಲ್ಲವಿ ಅಂತ ಇವರನ್ನೇ  ನೀವು  ನೋಡಿಕೊಳ್ಳಬೇಕಾಗಿರುವುದು ..
ತುಂಬಾ ಜೋಪಾನವಾಗಿ ನೋಡಿಕೊಳ್ಳಿ ...
ಆಯಿತು ಬುದ್ದಿ ನಿಮ್ಮ ಅಣ್ಣ ಎಲ್ಲಾ ವಿಷಯ ಹೇಳಿದ್ದಾರೆ ನಾನು ತುಂಬಾ ಚೆನ್ನಾಗಿ ನೋಡ್ಕೊಳ್ತೀನಿ ..
ಸರಿ ಅತ್ತಿಗೆ ನಾನು ಬರ್ತೀನಿ .....
ಆಯಿತು ರಘು ......
ರಘು ಹೋದ ಬಳಿಕ !
ಬನ್ನಿ ರತ್ನಮ್ಮ ನಿಮಗೆ ಮನೆ ಸುತ್ತಿ ತೋರಿಸ್ತೀನಿ ...
ಇದು ಹಾಲ್ ಅಲ್ಲಿ ನೋಡಿ ಅಲ್ಲಿ ಇರೋದು ರಘು ಅವರ ರೂಂ
ಬನ್ನಿ ಇಂದು ನಿಮ್ಮ  ರೂಂ ಇನ್ಮುಂದೆ ನೀವು ಇಲ್ಲಿ ಉಳಿದುಕೊಳ್ಳಬಹುದು
ನಿಮಗೆ ಏನಾದರೂ ಬೇಕಿದ್ರೂ ಕೇಳಿ ನಾನೇ ತಂದು ಕೊಡ್ತೀನಿ
ಸರಿ ಅಮ್ಮೊರೆ  ..ಇಲ್ಲಿ ಅಡುಗೆ ಮನೆ ಇದೆ ...
ಬನ್ನಿ ಮೇಲೆ  ಹೋಗೋಣ ...
ಇದು ನಮ್ಮ ರೂಂ ಇನ್ನೊಂದು ರೂಂ ಅದು ಗೆಸ್ಟ್ ಗಳು ಬಂದ್ರೆ ಅವರಿಗೆ ಅಂತ ಮಾಡಿರೋದು
ಅಷ್ಟೇ ಮೇಲೆ ಕೆಳಗೆ ಎರಡು ರೂಂ ಇದೆ ...
ಗೆಟ್ ನಲ್ಲಿ  ವಾಚ್ ಮ್ಯಾನ್ ಇದ್ದಾರೆ ಇಷ್ಟೇ ನಮ್ಮ ಮನೆಯ ವಿಸ್ತಾರ ...
ಎಂದು ಸೋಫಾಸೆಟ್ ಮೇಲೆ ಕುಳಿತಳು ಪಲ್ಲವಿ ...
ಯಾಕಮ್ಮ ಒಂತರ ಇದ್ದೀರಾ ?
ಬೆಳಗ್ಗೆಯಿಂದ ಏನ್ ತಿಂದರೂ ವಾಂತಿ ಅದಕ್ಕೆ ವಿಪರೀತ ತಲೆ ನೋಯ್ತಾ ಇದೆ.
ಒಂದೇ ಒಂದು ನಿಮಿಷ ಇರಿ ಬಿಸಿ ಬಿಸಿಯಾಗಿ ಒಂದು ಕಷಾಯ ಮಾಡಿಕೊಡ್ತೀನಿ ನೋಡಿ
ಅರೆಕ್ಷಣದಲ್ಲಿ ತಲೆ ನೋವು ಮಾಯಾ ಆಗುತ್ತೆ ....
ಸರಿ ರತ್ನಮ್ಮ ...
ಅಡುಗೆ ಮನೆಗೆ ಹೋಗಿ ತನಗೆ ತಿಳಿದ ಮನೆಮದ್ದು ಬಳಸಿ ಒಂದು ಕಷಾಯ ಮಾಡಿ ತಂದಳು
ತಗೋಳಿ ಅಮ್ಮೊರೆ ಇದನ್ನ ಹಾಗೆ ಬಿಸಿ ಬಿಸಿಯಾಗಿ ಕುಡಿದು ನೋಡಿ ....
ಅಷ್ಟೇ ನಿಮ್ಮ  ತಲೆ ನೋವು ಹೇಳ ಹೆಸರಿಲ್ಲದೆ ಮಾಯಾ ಆಗುತ್ತೆ ..
ಹಾಗೆ ತುಟಿಗಳು ಸುಡುವ ಬಿಸಿಯಲ್ಲಿಯೇ ಕುಡಿದು ಮುಗಿಸಿದಳು ಪಲ್ಲವಿ ...
ಹತ್ತು ನಿಮಿಷಗಳಲ್ಲಿ ಅವಳ ತಲೆ ನೋವು ಇಲ್ಲದಾಗಿತ್ತು ...
ಅಬ್ಭ ಏನ್ ರತ್ನಮ್ಮ ಏನಾದರೂ ಮ್ಯಾಜಿಕ್  ಗೊತ್ತಾ ನಿಮಗೆ ?
ಅಯ್ಯೋ ಇಲ್ಲ ಅಮ್ಮೊರೆ ಈ ಸಮಯದಲ್ಲಿ ಯಾವ್ ಯಾವ್ ಥರ ನೋವುಗಳು ಬರುತ್ತೆ
ಅದಕ್ಕೆ ಹೇಗೆ ವೈದ್ಯ ಮಾಡಬೇಕು ಅಂತ ನನಗೆ ತುಂಬಾ ಚೆನ್ನಾಗಿ ಗೊತ್ತು
ನಮ್ಮವ್ವ ನನಗೆ ಕಲಿಸಿದ ಪಾಠ ಇದು ....
ಮೊದಲು ನನಗೆ ನಿಮ್ಮ ಮೇಲೆ ಸಣ್ಣ ಅನುಮಾನ ಇತ್ತು ಇವರು ಹೇಗೆ ನೋಡಿಕೊಳ್ಳುತ್ತಾರೋ ನನ್ನ ಅಂತ ಬಟ್ ಈಗ ನಿಮ್ಮ ಮೇಲೆ ಫುಲ್ ನಂಬಿಕೆ ಬಂತು ....
ಸಂತೋಷ ಅಮ್ಮೊರೆ ........
ರಾತ್ರಿ ಎಲ್ಲರೂ ರತ್ನಮನ ಅಡುಗೆ ರುಚಿ ನೋಡಿ ...
ಏನ್ ರತ್ನಮ್ಮ ನಿಮಗೆ ಎಷ್ಟು ಚೆನ್ನಾಗಿ ಅಡುಗೆ ಬೇರೆ ಮಾಡಕ್ಕೆ ಬರುತ್ತಾ ?
ಎನ್ನುವಾ ವಾಸುದೇವನ ಪ್ರಶ್ನೆಗೆ ....
ಹೌದು ಬುದ್ದಿ ನಾನು ಇದ್ದ ಮನೆಗಳಲ್ಲಿ ನಾನೇ ಅಡುಗೆ ಮಾಡ್ತಾ ಇದ್ದೆ ...
ಹೌದಾ ಆಗಿದ್ರೆ ಸರಿ ಇನ್ಮುಂದೆ ನೀವು ನಮ್ಮ ಮನೆಯಲ್ಲೂ ಅಡುಗೆ ಮಾಡಿ.
ಆಯಿತು ಬುದ್ದಿ.......
ವಾಸುದೇನ ರೂಮಿನೊಳಗೆ!
ರೀ ಇವತ್ತು ನೀವು ಕಳುಹಿಸಿದ ರತ್ನಮ್ಮ ಒಂದು ಕಷಾಯ ಮಾಡಿ ಕೊಟ್ರು ಕಣ್ರೀ
ಅಷ್ಟೇ ನನಗೆ ಕ್ಷಣದಲ್ಲಿ ಸಿಡಿದು ಹೋಗೋಷ್ಟು ಇದ್ದ ತಲೆ ನೋವು ಬಂದ ಸುಳಿವೇ ಇಲ್ಲದ ರೀತಿ ಮಾಯಾ ಆಗಿತ್ತು .......ತುಂಬಾನೇ ಒಳ್ಳೆಯ ಹೆಂಗಸು ಬಾಯ್ ತುಂಬಾ ಅಮ್ಮೊರೆ ಅಂತಾರೆ
ತುಂಬಾ ಚೆನ್ನಾಗಿ ನೋಡಿಕೊಳ್ತಾರೆ ಒಳ್ಳೆಯ ಮನಸಿನವರು ಅನ್ನಿಸುತ್ತೆ ಅಲ್ವ  ....
ಹೌದು ಪಲ್ಲವಿ ನಾನು ಕೂಡ ಅವರನ್ನ ಚೆನ್ನಾಗಿ ಮಾತಾಡಿಸಿ ಮೊದಲು ನನಗೆ ಇಷ್ಟ ಅದ ಮೇಲಷ್ಟೇ
ಕೆಲಸಕ್ಕೆ ಸೇರಿಸಿಕೊಂಡೆ ......
ಹೇಗೋ ಇನ್ಮುಂದೆ ನಾನು ಯಾವುದೇ ಭಯ ಇಲ್ಲದ ಆಫೀಸ್ ನಲ್ಲಿ ಕೆಲಸ ಮಾಡಬಹುದು ಅನ್ನಿಸುತ್ತೆ ........
ನೀನು ರತ್ನಮ್ಮ ಅವರ ಆರೈಕೆಯಲ್ಲಿ ಸೇಫ್ ಆಗಿ ಇರ್ತೀಯ  ಅನ್ನೋ ಧೈರ್ಯ ...
ಹೌದು ನನಗೂ ಅದೇ ಅನ್ನಿಸುತ್ತೆ .......
ಅವರಿಬ್ಬರೂ ಮಲಗಿದರು ..
ಹೀಗೆ ರತ್ನಮ್ಮ ಬಂದ ಮೇಲೆ ಪಲ್ಲವಿಯ ಸಣ್ಣ ಪುಟ್ಟ ತೊಂದರೆಗಳಿಗೆ ಅವಳೇ ಮನೆ ಮದ್ದು ಮಾಡಿ ವಾಸಿ ಮಾಡುತ್ತಿದ್ದಳು ....
ಸೊಂಟ,ಕತ್ತು,ಬೆನ್ನು ನೋವು ಹೀಗೆ ಯಾವುದೇ ರೀತಿಯ ನೋವುಗಳನ್ನೂ ರತ್ನಮ್ಮನ ಮದ್ದು ವಾಸಿ ಮಾಡುತ್ತಿತ್ತು .....ತನ್ನ ಸ್ವಂತ ಮಗಳ ಹಾಗೆ ಪಲ್ಲವಿಯ ಹಾರೈಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು ರತ್ನಮ್ಮ  ...............
ಎರಡು ತಿಂಗಳ ಬಳಿಕ ಆಗ ಪಲ್ಲವಿ ಐದು ತಿಂಗಳ ಗರ್ಭಿಣಿ ..
ಆ ದಿನ ...
ರತ್ನಮ್ಮ ............. ರತ್ನಮ್ಮ .............
ಬೆಳಗ್ಗೆ  ಏಳು ಗಂಟೆಯಲ್ಲಿ ಮನೆಯೆಲ್ಲಾ ಹುಡುಕಿದರೂ ರತ್ನಮ್ಮ ಮನೆಯಲ್ಲಿ ಇಲ್ಲ !
ಪಲ್ಲವಿ ಹೊರಗೆ ಬಂದು ವಾಚ್ ಮ್ಯಾನ್ ಬಳಿ!
ವಾಚ್ ಮ್ಯಾನ್ ರತ್ನಮ್ಮ ನೋಡಿದ್ರ ?
ಹೌದು ಮೇಡಂ ನೋಡ್ದೆ ಅವರು ಬೆಳಗ್ಗೆ ನಾಲಕ್ಕು ಗಂಟೆಗೆ ಎದ್ದು ತನ್ನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ್ರು ....
ಓಹ್ ಹೌದಾ ಸರಿ ಸರಿ ....
ಗಂಟೆ ಮಧಾಹ್ನ ಒಂದು !
ರತ್ನಮ್ಮ ಮನೆಗೆ ಬಂದರು .....
ಪಲ್ಲವಿಯ ಹುಡುಕುತ್ತಾ ಪಲ್ಲವಿ ಇದ್ದ ಬೆಡ್ರೂಮ್ ಗೆ ಬಂದರು ..
ಎಲ್ಲಿ ಹೋಗಿದ್ರಿ ಬೆಳಗ್ಗೆನೇ ಎದ್ದು ?
ಪಲ್ಲವಿಯ ಪ್ರಶ್ನೆಗೆ ..
ಇಲ್ಲ ಅಮ್ಮೊರೆ ಇವತ್ತು ಅಮಾವಾಸ್ಯೆ ನೋಡಿ ಅದಕ್ಕೆ ನಮ್ಮ ಮನೆಯಿಂದ ಸೋಲ್ಪವೇ ದೂರದಲ್ಲಿ
ಒಂದು ಗುಡಿ ಇದೆ ಅಲ್ಲಿ ಇವತ್ತು ತುಂಬಾ ಜನ ಸೇರಿ ಪೂಜೆ ಮಾಡ್ತಾರೆ
ಅಲ್ಲಿ ಗರ್ಭಿಣಿಯರಿಗೆ ಒಳ್ಳೆಯ ಸಹಜ ಹೆರಿಗೆ ಆಗಿ ಮಗು ಆರೋಗ್ಯವಾಗಿ ಹುಟ್ಟಲಿ
ಅಂತ ಪೂಜೆ ಮಾಡಿಸಿದ್ರೆ ..ನಾನು ಬಯಸಿದ ಹಾಗೆ ನಡೆಯುತ್ತೆ ಅದಕ್ಕೆ ಹೋಗಿದ್ದು ಅಮ್ಮೊರೆ ...
ಓಹ್ ಹೌದಾ ....
ನೋಡಿ ಅಮ್ಮೊರೆ ಇದೆ ನಾನು ಪೂಜಿಸಿ ತಂದ ವಿಭೂತಿ ..
ಇದನ್ನ ಚೂರು ಹಾಲ್ ನಲ್ಲಿ ಹಾಕಿ ಕುಡಿದ್ರೆ ನಿಮಗೆ ಮುದ್ದಾದ ಮಗು ಆರೋಗ್ಯವಾಗಿ ಹುಟ್ಟುತ್ತೆ ...
ಯಾರದೇ ಕೆಟ್ಟ ದೃಷ್ಟಿ ,ದುಷ್ಟಶಕ್ತಿಗಳು ನಿಮ್ಮನ್ನ ಏನೂ ಮಾಡಲ್ಲ ...
 ಸರಿ ರತ್ನಮ್ಮ ...
ನಾವು ಈಗ ಮೈಸೂರ್ ನಲ್ಲಿ ನಮ್ಮವರ ಫ್ರೆಂಡ್ ಒಬ್ಬರ ಗ್ರಹಪ್ರವೇಶ ಇದೆ ಅದಕ್ಕಾಗಿ
ಈಗ ಹೋಗ್ತಾ ಇದ್ದೀವಿ ...
ಈಗಾಗಲೇ ಲೇಟ್ ಆಗಿದೇ ಹಾಗೆ ಹೋಗಿ ತಲೆ ತೋರಿಸಿ ಬರೋಣ ಅಂತ
ಗೊತ್ತಿರೋರು ಬೇರೆ  ಎಂದು ಹೇಳುತ್ತಾ  ....
ಹಾಗೆ  ಶೃಂಗರಿಸಿ ಕೊಳ್ಳುತ್ತಾ ಕನ್ನಡಿಯಲ್ಲಿ ತನ್ನನ್ನು ಕಂಡು
ರತ್ನಮ್ಮ  ಈಗೀಗ ನಾನು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀನಿ ಅನ್ನಿಸುತ್ತೆ ..
ಹೌದು ಹೌದು ಅಮ್ಮವರೆ ...
ಹೆಣ್ಣು ಗರ್ಭವತಿ ಆಗಿದ್ದಾಗ ಅಂದವಾಗಿ ಕಾಣ್ತಾಳೆ ಅಂತ ನಮ್ಮಜ್ಜಿ ಹೇಳೋಳು ...
ಓಹ್ ಹೌದು ನೋಡಿ ಅದಕ್ಕೆ ನಿಮ್ಮ ಹಾಗೆ ತಿಳಿದವರು ಇರಬೇಕು ಅನ್ನೋದು ..
ಆಮೇಲೆ ಇನ್ನೊಂದು ವಿಷಯ 
ನಾವು ಬರೋದು ರಾತ್ರಿ ಹತ್ತು ಗಂಟೆಯ ಮೇಲಾಗುತ್ತೆ ...
ರಘು ಕೂಡ ಆಫೀಸ್ ನಲ್ಲೆ ಇರ್ತಾರೆ ಅವರು ಬರೋದು ಲೇಟ್ ಆಗುತ್ತೆ
ಇವರು ಬೇರೆ ಇಲ್ಲ ಸೊ ಎಲ್ಲಾ ಕೆಲಸ ಅವರ ಮೇಲೆಯೇ ಇರುತ್ತೆ .
ನೀವು ಊಟ ಮಾಡಿ ನಮಗಾಗಿ ಕಾಯಬೇಡಿ ….
ನಾನು ರಾತ್ರಿ ಬಂದು ನೀವು ತಂದಿರುವ ವಿಭೂತಿನ ಹಾಲಿಗೆ ಬೆರೆಸಿಕೊಂಡು  ಕುಡಿತೀನಿ...
ಸರಿ ಅಮ್ಮೊರೆ ...
ಪಲ್ಲವಿ ಹಾಗೂ ವಾಸುದೇವ್ ಊರಿಗೆ ಹೊರಟರು ..
ಅವರ ಕಳುಹಿಸಿ ಕೊಟ್ಟು ಬಾಗಿಲು ಹಾಕಿಕೊಂಡು ಒಳ ಬಂದರು ರತ್ನಮ್ಮ ...
ಆಗ ಸಮಯ ಮಧ್ಯಾಹ್ನ ಮೂರು ಗಂಟೆ ..........
ಮನೆಯಲ್ಲಿ ಇದ್ದ ಸಣ್ಣ ಪುಟ್ಟ ಕೆಲಸಗಳ ಮಾಡುತ್ತಾ ಇದ್ದಾಗ ...
ಸರಿ ಅಮ್ಮೋರ ರೂಂ ನ ಕ್ಲೀನ್ ಮಾಡಿ ಬಿಡೋಣ ಅವರು ಇಲ್ಲದಿದ್ದಾಗ
ಇದ್ದಾಗ ಸುಮ್ನೆ ಧೂಳ್ ಎದ್ದೇಳುತ್ತೆ ..ಎಂದು ಪಲ್ಲವಿಯ ಕೋಣೆಯ ಬಳಿಗೆ ಹೋಗಿ ....
ಬಾಗಿಲ ತೆಗೆಯಲು ಕೈ ಮುಂದೆ ತರುತ್ತಿದ್ದ ಹಾಗೆ ಬಾಗಿಲು ತಾನಾಗಿಯೇ ತೆರೆದು ಕೊಂಡಿತು ...
ಗಾಳಿಯೂ ಕೂಡ ಬೀಸುತ್ತಿಲ್ಲ ಹೇಗೆ ತೆರೆದುಕೊಂಡಿತು ಎಂದು ಯೋಚಿಸುತ್ತಾ ಒಳ
ಹೋಗಿ ಅಲ್ಲಿದ್ದ ವಸ್ತುಗಳ ಒಂದೊಂದೇ ತೆಗೆದು ಧೂಳ್ ಒರೆಸಿ ಇಡುತ್ತಿದ್ದಾಗ ......
ಹೇಯ್ ರತ್ನ .....
ಯಾವುದೊ ಒಂದು ಗಂಭೀರವಾದ ದನಿ ...
ಕೂಡಲೇ ತಿರುಗಿ ನೋಡಿದ ಯಾರೂ ಕಾಣಲಿಲ್ಲ ...
ಏನೋ ಭ್ರಮೆ ಎಂದು ಕೆಲಸ ಮಾಡುತ್ತಾ ಇದ್ದಾಗ ಮತ್ತದೇ ಅಮಾನುಷವಾದ ದನಿ
ಹೇಯ್ ರತ್ನ ........
ಈ ಬಾರಿ ಹೊರ ಬಂದು ನೋಡಿದರೆ ಯಾರೂ ಇಲ್ಲ, ಕೆಳಗೆ ನೋಡಿದರೆ ಅಲ್ಲೂ ಯಾರೂ ಇಲ್ಲ
ಹಾಗೆ ಬಾಲ್ಕನಿಯಲ್ಲಿಯೇ ನೋಡಿ ಮತ್ತೆ ಪಲ್ಲವಿಯ ಕೋಣೆಯೊಳಗೆ ಹೋಗಿ
ಬೆಡ್ ಶೀಟ್ ಎಲ್ಲವನ್ನೂ ಮಡಚಿ ಇಟ್ಟು ಕನ್ನಡಿಯ ಒರೆಸುವಾಗ
ಯಾಕೋ ಕನ್ನಡಿಯಲ್ಲಿ ಕಾಣುವ ತನ್ನ ಬಿಂಬದ ಚೂರು ಬೇರೆ ರೀತಿ ಕಾಣುವ ಹಾಗೆ ಅನ್ನಿಸಿ
ಅದನ್ನೇ ಗಮನಿಸುತ್ತಾ ಇರುವಾಗ ಕೈಯಲ್ಲಿ ಹಿಡಿದಿದ್ದ ಬಟ್ಟೆ ಕೆಳಗೆ ಬಿತ್ತು
ಅದನ್ನು ಎತ್ತಲು ಬಾಗಿದರೆ  ಕನ್ನಡಿಯಲ್ಲಿದ್ದ  ಅವಳ ಬಿಂಬ ಹಾಗೆ ನಿಂತಿತ್ತು ...
ಆ ದನಿ ಸ್ವಲ್ಪ ಕೊಪದದಿಂದ
ಹೇಯ್ ರತ್ನ ........
ರತ್ನಮ್ಮಳ ಮುಖದಲ್ಲಿ ಭಯದ ಗೆರೆಗಳು ಮೂಡಲಾರಂಭಿಸಿತು ....
ಎದ್ದು  ಕನ್ನಡಿಯಲ್ಲಿ ನೋಡಿದ್ರೆ ಯಾರೂ ಇಲ್ಲ ಅವಳದೇ  ಬಿಂಬ ಮಾತ್ರ ಕಾಣುತ್ತಿತ್ತು
ಹಾಗೆ ಕನ್ನಡಿಯ ಮೇಲೆ ಕೈಯಾಡಿಸಿದಳು ....
ಇದ್ದಕಿದ್ದ ಹಾಗೆ ಕನ್ನಡಿಯಿಂದ ಒಂದು ಕೈ ಹೊರ ಬಂದು ..
ಅವಳ ಕತ್ತುನ್ನು ಬಿಗಿಯಾಗಿ  ಹಿಡಿದು  ಮೇಲಕ್ಕೆ ಎತ್ತಿತ್ತು ...
ಗಾಳಿಯಲ್ಲಿ ರತ್ನಮ್ಮಳ ಕಾಲುಗಳು ಹೊಡೆದುಕೊಳ್ಳುತ್ತಿತ್ತು ...
ಸುಧಾರಿಸಿಕೊಂಡು ಮೆಲ್ಲನೆ ಕನ್ನಡಿಯಲ್ಲಿ ನೋಡಿದರೆ ತನ್ನದೇ ರೂಪ ವಿಕಾರವಾಗಿ
ಕತ್ತನ್ನು ಹಿಡಿದಿತ್ತು ಅದನ್ನು ಕಂಡು ಅವಳ ಎದೆ ಹೊಡೆದು ಬಾಯಿ ಮೂಗಿನಿಂದ ರಕ್ತ
ಹೊರ ಬಂದು ಅವಳ ತಲೆ ಬಾಗಿತು  ...
ಗಾಳಿಯಲ್ಲಿ ಆಡುತ್ತಿದ್ದ ಕಾಲುಗಳು ಮೌನವಾದವು ...
ಅವಳ ಪ್ರಾಣ ಪಕ್ಷಿ ಹಾರಿಹೋಯಿತು ............
ಅವಳನ್ನು ಹಿಡಿದಿದ್ದ  ಆ ಕೈ ಸಡಿಲ ಗೊಳಿಸಿತು ಅವಳ ದೇಹ ನೆಲಕ್ಕೆ ಬಿತ್ತು....
ಅವಳಿದ್ದ ಕೋಣೆಯ ಬಾಗಿಲು ಹೊರ ಕೇಳುವಷ್ಟು ಬಲವಾದ ಸದ್ದಿನೊಂದಿಗೆ ಮುಚ್ಚಿಕೊಂಡಿತು ...
ಕೆಳಗೆ ಕುಳಿತ್ತಿದ್ದ ವಾಚ್ ಮ್ಯಾನ್  ಮಹಡಿಯ ಕಡೆ ನೋಡಿದ
ಏನೋ ಕೆಲಸ ಮಾಡುತ್ತಿರಬೇಕು ಎಂದು ಸುಮ್ಮನಾದ!
===================ಪುಟ3======================
ಗಂಟೆ ಆರಾಯಿತು!
ಮನೆಯೊಳಗೇ ದೀಪ ಹಾಕಿಲ್ಲವಲ್ಲ ಎಂದು ನೋಡುತ್ತಾ ಇದ್ದ
ವಾಚ್ ಮ್ಯಾನ್  ಏಳು ಗಂಟೆಗೆ ಪೂರ್ತಿ ಕತ್ತಲಾವರಿಸಿತು ...
ಅವನೇ ಎದ್ದು ಬಾಗಿಲ ತೆಗೆದು ಹಾಲಿಗೆ ಬಂದ ..
ರತ್ನಮ್ಮವರೆ .ರತ್ನಮ್ಮವರೆ ...ಎಂದು ಕೂಗುತ್ತಾ ಹಾಲ್ ದೀಪ ಹಾಕಿದ
ಹಾಗೆ ಅಡುಗೆ ಮನೆಕಡೆ ನೋಡಿದ ಅಲ್ಲೂ ಇಲ್ಲ ...
ಕೆಳಗಿನ ರೂಂಗಳಲ್ಲಿ ನೋಡಿದ ಕಾಣದಿದ್ದಾಗ ಹಾಗೆ ಮೇಲೆ ಮಹಡಿಗೆ ಹೋದ
 ... ರತ್ನಮ್ಮವರೆ ... ರತ್ನಮ್ಮವರೆ
ಎನ್ನುತ್ತಾ ಪಲ್ಲವಿಯ ಕೋಣೆಯ ಬಾಗಿಲು ತೆಗೆದು ದೀಪ ಹಾಕಿದವನಿಗೆ
ಕನ್ನಡಿಯ ಮುಂದೆ ರಕ್ತದ ಮಡುವಿನಲ್ಲಿ  ಬಿದ್ದಿದ್ದ  ರತ್ನಮ್ಮನ್ನ ಬಳಿ ಬಂದು ಅವರ ಮೂಗಿನ ಹತ್ತಿರ ಬೆರಳಿಟ್ಟು ನೋಡಿದ  ಉಸಿರಾಡುತ್ತಿರಲಿಲ್ಲ  ಕ್ಷಣದಲ್ಲೇ
ಥರಥರನೇ ನಡುಗಿ ಬಿಟ್ಟ ..ಎದ್ದೋ ಬಿದ್ದೋ ಎಂದು ಅಲ್ಲಿಯಿಂದ ಕೆಳಗೆ ಓಡಿದವನೇ
ಹೊರ ಬಂದು ರಘುವಿಗೆ ಕರೆ ಮಾಡಿದ ...
ಹಲೋ ಸರ್ ನಾನು ನಿಮ್ಮ ಮನೆಯ ವಾಚ್ ಮ್ಯಾನ್ ಮಾತಾಡ್ತಾ ಇದ್ದೀನಿ
ಹೇಳಿ ? ಯಾಕ್ ಎದುರಿಸಿರು ಬಿಡ್ತಾ ಇದ್ದೀರಾ ಏನ್ ಆಯ್ತು ?
ಸರ್ .........ಸರ್ .....ಎನ್ನುತ್ತಾ ಎಂಜಿಲ ನುಂಗಿಕೊಂಡು
ಸರ್ ರತ್ನಮ್ಮ ಸತ್ತು ಬಿದ್ದಿದ್ದಾರೆ ಮೇಲೆ ಮಹಡಿಯಲ್ಲಿ ?
ವಾಟ್ ? ಏನ್ ಹೇಳ್ತಾ ಇದ್ದೀರಾ ?
ಹೌದು ಸರ್ ನಾನು ಮನೆಯೊಳಗೇ ದೀಪ ಹಾಕಿಲ್ಲ ಅಂತ ಬಾಗಿಲು ತೆರೆದು ಒಳಗೆ ಹೋಗಿ
ಎಲ್ಲಾ ಕಡೆ ದೀಪ ಹಾಕಿ ಕೊನೆಗೆ ಪಲ್ಲವಿ ಅಮ್ಮೋರ ರೂಂ ನಲ್ಲಿ ನೋಡಿದ್ರೆ ರತ್ನಮ್ಮ ಬಾಯಿಂದ ರಕ್ತ ಬಂದು ಸತ್ತು ಬಿದ್ದಿದ್ರು.....
ಸರಿ ನೀವು ಅಲ್ಲೇ ಇರಿ ನಾನು ಬರ್ತೀನಿ 
ಅಂಡ್ ನೀವು ಅಲ್ಲಿ ಯಾವುದನ್ನೂ ಮುಟ್ಟಬೇಡಿ ...
ಇಲ್ಲ ಇಲ್ಲ ಸರ್ ಮುಟ್ಟಲ್ಲ ......
ಕೆಲವು ನಿಮಿಷಗಳ ನಂತರ ಅಲ್ಲಿಗೆ  ಬಂದ ರಘು ....
ಏನ್ರೀ ಆಯಿತು ?
ಸರ್ ಗೊತ್ತಿಲ್ಲಾ ಸರ್ ನಾನು ಹೋಗಿ ನೋಡಿದ್ರೆ ಅವರು ಕೆಳಗೆ ಬಿದಿದ್ರು ನಾನು ಮೂಗಿನ ಹತ್ರ ಬೆರಳಿಟ್ಟು ನೋಡಿದೆ ಉಸಿರು ಆಡ್ತಾ ಇರ್ಲಿಲ್ಲ  ಅದನ್ನ ನೋಡಿ ನಿಮಗೆ ಕಾಲ್ ಮಾಡ್ದೆ ....
ಎಂದು ನೋಡಿದ್ದನ್ನು ಹೇಳಿದ ವಾಚ್ ಮ್ಯಾನ್ ..
ಸರಿ ಬನ್ನಿ ನೋಡೋಣ ...ಇಬ್ಬರೂ
ಹೋಗಿ ನೋಡಿದರು....ರತ್ನಮ್ಮ ಸತ್ತಿರುವುದನ್ನು ಖಚಿತ ಪಡಿಸಿಕೊಂಡು ಕೂಡಲೇ
ಪೋಲಿಸ್ ಗೆ ಕರೆ ಮಾಡಿದ ರಘು ..
ಅಲ್ಲಿಗೆ ಬಂದ ಪೋಲಿಸ್ .....
ಏನ್ ಆಯಿತು ಮಿಸ್ಟರ್ ರಘು ?
ಸರ್ ಇವರು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರತ್ನಮ್ಮ ಅಂತ
ಇವತ್ತು ಬೆಳಗ್ಗೆ ವರೆಗೂ ಚೆನ್ನಾಗಿದ್ದ  ಅವರು ಅಣ್ಣ ಅತ್ತಿಗೆ ಒಂದು ಗ್ರಹಪ್ರವೇಶವಿದೆ ಅಂತ ಊರಿಗೆ ಹೋಗಿದ್ದಾರ ಅವರು ಹೋದ ಮೇಲೆ ಹೀಗೆ ಆಗಿದೆ ಸರ್ ....
ನನಗೆ ವಾಚ್ ಮ್ಯಾನ್ ಕಾಲ್ ಮಾಡಿ ಹೇಳಿದ ಮೇಲಷ್ಟೇ ಇಲ್ಲಿಗೆ ಬಂದೆ ...
ನೀವು ಯಾವಾಗ ಇವರನ್ನ ನೋಡಿದ್ದು ?
ಎಂದು ಪೋಲಿಸ್ ವಾಚ್ ಮ್ಯಾನ್ ನ ಬಳಿ ಕೇಳಿದ ಪ್ರಶ್ನೆಗೆ ...
ಸರ್ ನಾನು ಆರೂವರೆ ಆದರೂ ಇನ್ನೂ ಮನೆಯೊಳಗೇ ಲೈಟ್ ಹಾಕಿಲ್ಲ ಅಂತ
ಬಾಗಿಲು ತೆಗೆದು ನೋಡಿದ್ರೆ ಇವರು ಹೀಗೆ ಬಿದ್ದಿದ್ರು ನನಗೆ ತುಂಬಾ ಭಯ ಆಗಿ ಅಲ್ಲಿಯಿಂದ ಕೆಳಗೆ ಬಂದು ರಘು ಸರ್ ಗೆ ಕಾಲ್ ಮಾಡಿ ವಿಷಯ ತಿಳಿಸಿದೆ ....
ಸರಿ ರಘು ಸರ್ ಈಗ ಬಾಡಿ ನ ಪೋಸ್ಟ್ ಮಾರ್ಟಂ ಗೆ ಕಳಿಸ್ತೀನಿ
ಆ ರಿಪೋರ್ಟ್ ಬಂದ ಮೇಲಷ್ಟೇ ಮಿಕ್ಕಿದನ್ನ ಹೇಳಕ್ಕೆ ಆಗೋದು ..
ಸರಿ ಸರ್ ....

ರತ್ನಮ್ಮನ್ನ ದೇಹವನ್ನು ತೆಗೆದು ಕೊಂಡು ಹೋಗುತ್ತಿದ್ದ ಹಾಗೆ
ನಡೆದ ಎಲ್ಲವನ್ನೂ ಅಣ್ಣನಿಗೆ ಕರೆ ಮಾಡಿ ತಿಳಿಸಿದ ........
ಏನ್ ಹೇಳ್ತಾ ಇದ್ದೀಯ ರಘು ?
ಗಾಬರಿಯಿಂದ ಕೇಳಿದ ವಾಸುದೇವ್ ...
ಹೌದು ಅಣ್ಣ ...ಏನ್ ಆಯಿತು ಅಂತಾನೆ ಗೊತ್ತಾಗ್ತಾ ಇಲ್ಲ ......
ನೀನು ಬರೋ ಹಾಗೆ ಇದ್ರೆ ಬಾ ಬಟ್ ಅತ್ತಿಗೆನ ಅಲ್ಲೇ ಬಿಟ್ಟು ಬಾ
ಇಲ್ಲಿ ಮನೆ ಇನ್ನೂ ಕ್ಲೀನ್ ಮಾಡಿಲ್ಲ ಸುಮ್ನೆ ಅತ್ತಿಗೆಗೆ ಎಲ್ಲಾ ವಿಷಯ ಹೇಳಬೇಡ ಆಮೇಲೆ ನಾಳೆ ಒಬ್ಬರೇ ಮನೆಯಲಿ ಇರಕ್ಕೆ ಭಯ ಪಡ್ತಾರೆ
ಸುಮ್ನೆ ಹಾರ್ಟ್ ಅಟ್ಯಾಕ್ ಆಗಿದೆ ಅಂತ ಮಾತ್ರ ಹೇಳಣ್ಣ ...
ನೀನು ಹೇಳೋದು ಸರಿ ರಘು ಹಾಗೆ ಮಾಡ್ತೀನಿ ...
ವಿಷಯ ಪಲ್ಲವಿಗೂ ತಿಳಿಸಿದ ವಾಸುದೇವ್ ...
ಪಲ್ಲವಿಗೆ ಒಂದು ಕ್ಷಣ ನಂಬುವುದಕ್ಕೆ ಆಗಲಿಲ್ಲ ...
ಅಯ್ಯೋ ನಾನು ಮನೆ ಬಿಟ್ಟು ಬರುವಾಗ ಕೂಡ ಅವರನ್ನ ನೋಡಿದ್ದೀನಿ
ಛೆ ಏನ್ ಇದು ....ತಾಯಿಗಿಂತ ಹೆಚ್ಚಾಗಿ ನೋಡಿಕೊಂಡ್ರು ನನ್ನ ...
ಎಂದು ಕಣ್ಣೀರಿಡುತ್ತಿದ್ದ ಪಲ್ಲವಿಯ ಸಂತೈಸಿ ....ವಾಸುದೇವ್
ಬೆಂಗಳೂರಿಗೆ ಬಂದ .....ಬೆಳಗ್ಗಿನ ಜಾವ ....
ರಘು ಆಫೀಸ್ ನಲ್ಲೆ ಮಲಗಿದ್ದ ....ಅಲ್ಲಿಗೆ ಬಂದ ವಾಸುದೇವ್ ಎಲ್ಲವನ್ನೂ ವಿಚಾರಿಸಿ ...
ಪೋಲಿಸ್ ನ ನೋಡಲು ಹೋದಾಗ ಸಮಯ 11 ಆಗಿತ್ತು
ಮರಣತ್ತೋರ ಪರೀಕ್ಷೆಯ ಬಳಿಕ ದೇಹವನ್ನು
ವಿಷಯ ತಿಳಿದು ಊರಿನಿಂದ  ಬಂದಿದ್ದ
ರತ್ನಮ್ಮಳ ಮಗಳ ಕೈಗೆ ಒಪ್ಪಿಸಲಾಯಿತು ...
ಹಾಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ಕೂಡ ಬಂದಿತ್ತು ....
ಅದನ್ನು ಪೋಲಿಸ್ ವಾಸುದೇವ್ ನ ಕೈಗಿಟ್ಟರು ...

ರಿಪೋರ್ಟ್ ನಲ್ಲಿ ನ್ಯಾಚುರಲ್ ಡೆತ್ (ಸಹಜ ಸಾವು)
ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿರಿವುದು ಸಾಭೀತು ಆಗಿತ್ತು...
ಆ ರಿಪೋರ್ಟ್ ನೂ ಕೂಡ ದೇಹದ ಜೊತೆ ಮಗಳ ಕೈಗೆ ಕೊಟ್ಟು
ಹಾಗೆ ಒಂದು ಲಕ್ಷ ರೂಪಾಯಿ ಕೊಟ್ಟು ಕಳುಹಿಸಿದ ವಾಸುದೇವ್ ...
ಪಲ್ಲವಿ ಊರಿನಲ್ಲಿಯೇ ಇದ್ದಳು ...ಗರ್ಭಿಣಿಯಾಗಿರುವಾಗ ಶವವನ್ನು ನೋಡುವುದು ಅಷ್ಟು ಒಳ್ಳೆಯದಲ್ಲ ಎಂದು ಅವಳು ಕೊನೆಗೂ ರತ್ನಮಳ ಮುಖ ನೋಡಲೇ ಇಲ್ಲ ...
ರತ್ನಮ್ಮಳ ಬಟ್ಟೆಗಳ ಜೊತೆಗೆ 
ಅವಳು ತಂದಿದ್ದ ಆ ವಿಭೂತಿ ಕೂಡ ಮನೆಯಿಂದ ಹೊರ ಹೋಯಿತು .....
ಮನೆಯ ಸ್ವಚ್ಛಗೊಳಿಸಿದ ಐದು ದಿನಗಳ ಬಳಿಕ ಪಲ್ಲವಿ ಮನೆಗೆ ಬಂದಳು ....
ಮನೆಯಲ್ಲಿ ಎಲ್ಲಿ ನೋಡಿದರೂ ಅವಳಿಗೆ ರತ್ನಮ್ಮನ ನೆನಪೇ ಆಗುತ್ತಿತ್ತು ..
ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಒಂದೊಂದು ಆಳುಗಳನ್ನು ಇಟ್ಟ ವಾಸುದೇವ್ ಇನ್ನೂ ಮಗು ಆಗುವವರೆಗೂ ಪಲ್ಲವಿಯ ಜೊತೆಯೇ ಇದ್ದು ನೋಡಿಕೊಳ್ಳುವುದಾಗಿ ನಿರ್ಧರಿಸಿದ ....
ಮದುವೆ,ಮಾಲ್,ಹೋಟೆಲ್,ಪಾರ್ಕ್.ಫಿಲಂ ...ಹೀಗೆ ಅವಳನ್ನು ಎಲ್ಲೆಡೆಯೂ ಕರೆದುಕೊಂಡು
ಹೋಗಿ ಸಂತಸ ಪಡಿಸುತ್ತಿದ್ದ ....ಜೋಪಾನವಾಗಿ ಹಾರೈಕೆ ಮಾಡುತ್ತಾ
ಎಲ್ಲಾ ಸಮಯವನ್ನೂ ಅವಳೊಂದಿಗೆ ಕಳೆದ ...
ಆ ಕಡೆ ಆಫೀಸ್ ನ ವ್ಯವಹಾರಗಳನ್ನ ರಘುರಾಮ್ ನೋಡಿಕೊಳ್ಳುತ್ತಿದ್ದ ..
ದಿನಗಳು ಉರುಳಿದವು .....ಎರಡು ತಿಂಗಳ ಬಳಿಕ
ಆಗ ಪಲ್ಲವಿ ಏಳು ತಿಂಗಳ ಗರ್ಭಿಣಿ ......
ಅದೊಂದು ದಿನ ರಾತ್ರಿ ...ಹನ್ನೆರೆಡು ಹತ್ತಕ್ಕೆ ಮೆಲ್ಲನೆ ಶುರುವಾಯಿತು ಪಲ್ಲವಿಗೆ ಹೊಟ್ಟೆ ನೋವು!
ಹಾಗೆ ಕಡಿಮೆ ಆಗಬಹುದು ಎಂದು ಸುಧಾರಿಸಿಕೊಳ್ಳುತ್ತಿದ್ದಳು ನೋವು ಜಾಸ್ತಿಯಾಗುತ್ತಿತ್ತೆ ವಿನಃ ಕಡಿಮೆ ಆಗುತ್ತಿರಲಿಲ್ಲ ...ನೋವಿನಿಂದ ಒದ್ದಾಡುತ್ತಿದ್ದ  ಧ್ವನಿ ಕೇಳಿದ ತಕ್ಷಣ ನಿದ್ದೆಯಿಂದ ಎಚ್ಚರಗೊಂಡ ವಾಸುದೇವ್ .......
ಏನ್ ಆಯಿತು ಪಲ್ಲವಿ ?
ನನ್ನ ಕೈಯಲ್ಲಿ ಆಗ್ತಾ ಇಲ್ಲ ಹೊಟ್ಟೆ ತುಂಬಾ ನೋವ್ತಾ ಇದೆ !
ಏನು ಮಾಡಬೇಕು ಎಂದು ತಿಳಿಯದೆ ನೀರನ್ನು ಕುಡಿಸಿದ ಸಮಾಧಾನ ಮಾಡಿದ
ಏನು ಮಾಡಿದರೂ ಅವಳ ನೋವು ಕಡಿಮೆ ಆಗುವ ಲಕ್ಷಣಗಳೇ ಕಾಣದಿದ್ದಾಗ
ಕೂಡಲೇ ಕೆಳಗಿಳಿದು ಬಂದು ...
ರಘುವಿನ ರೂಂ ಮುಂದೆ ನಿಂತು .
ದಡ್...ದಡ್... ದಡ್...
ಬಾಗಿಲು ಬಡಿದ ...
ರಘು ಬಾಗಿಲ ತೆಗೆಯುತ್ತಿದ್ದಂತೆ ....
ಏನ್ ಅಣ್ಣ ?
ರಘು ಪಲ್ಲವಿಗೆ ಹೊಟ್ಟೆ ನೋವು ಕಣೋ ಏನ್ ಮಾಡಿದ್ರೂ ಕಡಿಮೆ ಆಗ್ತಾ ಇಲ್ಲ
ನೀನು ಡಾಕ್ಟರ್ ಸುಧಾ ಅವರಿಗೆ ಕಾಲ್ ಮಾಡಿ ಎಲ್ಲಿದ್ದಾರೆ ಅಂತ ಕೇಳು
ಮನೇಲಿ ಇದ್ರೆ ಅವರನ್ನ ಕೂಡ್ಲೇ ಅಸ್ಪತ್ರೆಗೆ ಬರಕ್ಕೆ ಹೇಳು ?
ಹಾಗೆ ಕಾರ್ ನ ಶೆಡ್ ಯಿಂದ ಹೊರಗೆ ತೆಗೆದು ಇಟ್ಕೋ ನಾನು ಪಲ್ಲವಿನ ಕರ್ಕೊಂಡು ಬರ್ತೀನಿ ...
ಆಯಿತು ಆಯಿತು ನೀನು  ಟೆನ್ಷನ್ ಆಗಬೇಡ ..ನಾನು ನೋಡ್ಕೊಳ್ತೀನಿ
ನೀನು ಅತ್ತಿಗೆನ ಕರ್ಕೊಂಡು ಬಾ ಹೋಗು ...
ಅಣ್ಣ ಮೇಲೆ ಹೋಗುತ್ತಿದ್ದ ಹಾಗೆ ಸುಧಾರಿಗೆ ಕಾಲ್ ಮಾಡಿ..
ಡಾಕ್ಟರ್ ...ನೀವು ಎಲ್ಲಿದ್ದೀರಾ ?
ನಾನು ಆಸ್ಪತ್ರೆಯಲ್ಲೇ ಇದ್ದೀನಿ ಇನ್ನೂ ಒಂದು ವೀಕ್ ನನಗೆ ನೈಟ್ ಡ್ಯೂಟಿ ಇದೆ ರಘು
ಏನ್ ವಿಷಯ ಹೇಳಿ ?
ಓಹ್ ತುಂಬಾ ಒಳ್ಳೇದೆ ಆಯಿತು ನಮ್ಮ ಅತ್ತಿಗೆಗೆ
ಹೊಟ್ಟೆ ನೋವು ವಿಪರೀತ ಅಂತ ಒದ್ದಾಡ್ತಾ ಇದ್ದಾರೆ
ಅದಕ್ಕೆ ಕರ್ಕೊಂಡು ಬರೋಣ ಅಂತ ನಿಮಗೆ ಕಾಲ್ ಮಾಡ್ದೆ ...
ಸರಿ ಅವರನ್ನ ಬೇಗಾ ಕರ್ಕೊಂಡು ಬನ್ನಿ ..
ಆಯಿತು ಎಂದು ಕಾಲ್ ಕಟ್ ಮಾಡಿ
ಶೆಡಯಿಂದ ಕಾರ್ ಹೊರೆ ತೆಗೆದು ಸ್ಟಾರ್ಟ್ ಮಾಡಿ ಕಾಯುತ್ತಿದ್ದ ...
ವಾಸುದೇವ್ ಪಲ್ಲವಿಯ ಕರೆದುಕೊಂಡು ಬಂದು ಗಾಡಿಯ ಹತ್ತುತ್ತಿದ್ದ ಹಾಗೆ
ಗಾಡಿ ವೇಗವಾಗಿ ಬಂದು ನಿಂತಿದ್ದು ಅಸ್ಪತ್ರೆಯ ಬಳಿಗೆ ...
ಸುಧಾ ಅವರಿಗಾಗಿ ಕಾಯುತ್ತಾ ಇದ್ದವಳು ಕೂಡಲೇ ಪಲ್ಲವಿ
ಚೆಕ್ ಅಪ್ ರೂಂ ಗೆ ಕರ್ದೊಯಿದು ..ನೋಡಿ ...
ಹೊರ ಬಂದು ಮಿಸ್ಟರ್ ವಾಸುದೇವ್ ನಿಮ್ಮ ವೈಫ್ ಗೆ ಹೆರಿಗೆ ನೋವು ಬಂದಿರೋದು.
ಏನ್ ಹೇಳ್ತಾ ಇದ್ದೀರಾ ಡಾಕ್ಟರ್  ಡೇಟ್ ಕೊಟ್ಟಿರೋದು ಇನ್ನು ಎರಡು ತಿಂಗಳ ನಂತರ
ಈಗ ಅವಳಿಗೆ ಏಳು ತಿಂಗಳು ನಡೆಯುತ್ತಿದೆ ..
ಹೌದು ಕೆಲವೊಮ್ಮೆ ಏಳು ತಿಂಗಳಿಗೆ ಕೆಲವರಿಗೆ ಹೆರಿಗೆ ನೋವು ಕಾಣಿಸುತ್ತೆ ಹಾಗೆ
ಹೆರಿಗೆ ಕೂಡ ಆಗಿ ಮಗು ಆರೋಗ್ಯವಾಗಿ ಹುಟ್ಟಿರೋದನ್ನ ನೋಡಿದ್ದೀನಿ ..
ನೀವು ಮೊದಲು ಈಗ ಅಪ್ಲಿಕೇಶನ್ ಗೆ ಸಹಿ ಹಾಕಿ
ಈಗ ಏನ್ ಮಾತಡಕ್ಕೂ ಸಮಯ ಇಲ್ಲ ..
ಎಂದು ಸುಧಾ ತೋರಿಸಿದ  ಅಪ್ಲಿಕೇಶನ್ ಗೆ ಸಹಿ ಹಾಕಿದ ವಾಸುದೇವ್ ..
ಪಲ್ಲವಿಯ ಅಪರೇಷನ್ ಥಿಯೇಟರ್ ಕರೆದು ಕೊಂಡು ಹೋಗಿ ..
ಸಿಸೆರೀಯನ್ ಶುರುವಾಯಿತು ...
ಹೊರಗೆ ಸಹೋದರರ ಮುಖದಲ್ಲಿ ಆತಂಕವೇ ಮನೆ ಮಾಡಿತ್ತು ..
ಅದರಲ್ಲೂ ವಾಸುದೇವ್ ಒಂದೆಡೆ ನಿಲ್ಲದೆ ಅತ್ತಿಂದಿತ್ತ ಇತ್ತಿಂದತ್ತ ನಡೆದಾಡುತ್ತಿದ್ದ ...
ಒಂದೂವರೆ ಗಂಟೆಗಳ ಬಳಿಕ ಅಪರೇಷನ್ ಥಿಯೇಟರ್ ನ
ಮೇಲಿದ್ದ ದೀಪ ಕೆಂಪಿನಿಂದ ಹಸಿರಾಯಿತು ಬಾಗಿಲು ತೆರೆದು ಹೊರದರು ಸುಧಾ
ಸಮಯ ಮಧ್ಯ ರಾತ್ರಿ ಒಂದೂವರೆ ...
ಅವರ ಬಳಿ ಅವಸವಸರವಾಗಿ ಬಂದು...
ಡಾಕ್ಟರ್ ಡಾಕ್ಟ್ರೇ ನನ್ನ ವೈಫ್ ಹೇಗಿದ್ದಾಳೆ ?
ವಾಸುದೇವ್ ನಿಮಗೊಂದು ಶುಭ ಸಮಾಚಾರ ...
ನಿಮಗೆ ಗಂಡು ಮಗು ಆಗಿದೆ .......
ರಘು,ವಾಸುದೇವ್ ಮುಖದಲ್ಲಿ ಹಾಗೆ ನಗುವಿನ ನರ್ತನ! ...
ನನ್ನ ಪಲ್ಲವಿ ಹೇಗಿದ್ದಾಳೆ ?
ಮಗು ತಾಯಿ, ಇಬ್ಬರೂ ಆರೋಗ್ಯವಾಗಿದ್ದಾರೆ ...
ಮಗು ಮಾತ್ರ ಹುಟ್ಟಿದ ಕೂಡಲೇ ಅಳಲ್ಲಿ ಅಷ್ಟೇ ಅದನ್ನ ಬಿಟ್ರೆ ಬೇರೆ ಏನೂ ಇಲ್ಲ.
ಡಾಕ್ಟ್ರೇ , ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಅದು ಕಡಿಮೇನೆ
ನೀವು ನನ್ನ ಮಗು ಹೆಂಡತಿ ನ ನನಗೆ ಉಳಿಸಿ ಕೊಟ್ಟಿದ್ದೀರ
ನಿಮ್ಮೀ ಉಪಕಾರನ ನನ್ನ ಜೀವ ಇರುವವರೆಗೂ ನಾನು ಮರೆಯೋಲ್ಲ.
ಅಷ್ಟೊಂದು ದೊಡ್ಡ ಮಾತುಗಳು ಯಾಕೆ ಮಿಸ್ಟರ್ ವಾಸುದೇವ್
ನಾನು ನಿಮ್ಮ ಫ್ಯಾಮಿಲಿ ಡಾಕ್ಟ್ರೇ ನನ್ನ ಡ್ಯೂಟಿ ನಾನು ಮಾಡಿದ್ದೀನಿ ...
ನಿಮ್ಮಂತವರು ನಮ್ಮ ಫ್ಯಾಮಿಲಿ ಡಾಕ್ಟರ್ ಆಗಿದ್ದು
ನಮ್ಮ ಪುಣ್ಯಾನೆ ಅನ್ನಬೇಕು ...
ಹೌದು ಹೌದು ಸುಧಾ ನೀವು ನಮಗೆ ಸಿಕ್ಕಿದ್ದು ನಮ್ಮ ಅದೃಷ್ಟ ...  
ವಾಸುದೇವನ ಮಾತಿಗೆ ರಘು ಕೂಡ ದನಿಗೂಡಿಸಿದ ..
ನಿಮ್ಮ ಖುಷಿಯಲ್ಲಿ ನನ್ನದೂ ಒಂದು ಪಾಲು ಇದೆ ಅನ್ನೋದೇ ನನಗೆ ತೃಪ್ತಿ ...
ನೀವು ಇನ್ನು ಕೆಲವು ನಿಮಿಷಗಳ ನಂತರ ಪಲ್ಲವಿ ಹಾಗೂ ನಿಮ್ಮ ಮಗುವನ್ನು ನೋಡಬಹುದು ...
ಎಂದು ಹೇಳಿ ಸುಧಾ ಆ ಕಡೆ ಹೋಗುತ್ತಿದ್ದ ಹಾಗೆ ..
ರಘು ಅವರಣ್ಣನ ಮಗುವಿನ ರೀತಿ ಮೇಲೆತ್ತಿ ಹಿಡಿದು ಒಂದು ಸುತ್ತು ಸುತ್ತಿದ
ಅಣ್ಣ ಎಷ್ಟು ಖುಷಿ ಆಗ್ತಾ ಇದೆ ಗೊತ್ತ ಅಬ್ಭ ಇದೊಂದು ಕ್ಷಣಕ್ಕೆ ಅಲ್ವ ನಾವು ಇಷ್ಟು ದಿನ ಕಾದಿದ್ದು.
ಹೌದು ಎನ್ನುವಂತೆ ವಾಸುದೇವ್ ತಲೆಯಾಡಿಸಿದ ...
ಅಲ್ಲಿ ಕೆಲಸ ಮಾಡುವ ವಾರ್ಡ್ ಬಾಯ್ ಗಳು ಅಲ್ಲಿರುವ ನರ್ಸುಗಳಿಗೆಲ್ಲಾ
ಐನೂರರ ನೋಟ್ ನ್ನು ನೀಡಿ ತನ್ನ ಖುಷಿಯ ವ್ಯಕ್ತಪಡಿಸಿದ ... ರಘು

ರಾತ್ರಿ ಮುಗಿದು ಮುಂಜಾನೆ ಮುಖ ಮಾಡಿತು.....
ಬೆಳಗ್ಗಿನ ಜಾವ ಐದಕ್ಕೆ ಪಲ್ಲವಿ ಎಚ್ಚರಗೊಂಡಳು...
ವಾಸುದೇವ್ ಕೂಡ ಪಲ್ಲವಿ ಇದ್ದ ರೂಂ ನ ಒಳಗೆ ಬಂದ
ಗಂಡನ ಮುಖ ನೋಡಿದ ಪಲ್ಲವಿಯ ಕಣ್ಣುಗಳಲ್ಲಿ ಏನಾಯಿತು ಎನ್ನುವ ಪ್ರಶ್ನೆ ?
ಹಾಗೆ ರೆಪ್ಪೆಯ ಮುಚ್ಚಿ ಎಲ್ಲವೂ ಶುಭವೇ ಆಗಿದೆ ಎನ್ನುವಾ ಸೂಚನೆಗಳ ನೀಡಿದ ..
ಒಂದು ಮುಗುಳುನಗೆಯೊಂದಿಗೆ
ತಲೆಯ ಪಕ್ಕಕ್ಕೆ ಆಡಿಸಿ ಅಲ್ಲಿದೆ ನೋಡು ನಿನ್ನ ಕನಸು ಎಂದ ವಾಸುದೇವ್ ...
ಹೊಟ್ಟೆಯ ಮುಟ್ಟಿ ಮುಟ್ಟಿ ನೋಡಿಯೇ  ಮಗುವಿನ ಚಂದದ ಮುಖವ ಕಂಡವಳಿಗೆ 
ಉಸಿರಾಡುವ ಹೂವೊಂದು ತೊಟ್ಟಿಲಲ್ಲಿ ಮಲಗಿದ್ದನ್ನು ಕಂಡು ಕ್ಷಣಕಾಲ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ .. ಮಗುವನ್ನು ನೋಡುತ್ತಾ ಮೆಲ್ಲನೆ ಮಲಗಿದ್ದ ಮುದ್ದಾದ ಕೈಗಳ ಸ್ಪರ್ಶಿಸಿದಳು
ವಾಸುದೇವನೂ ಆ ಕೈಗಳ ಮುಟ್ಟಿದ ...
ಆ ಜೋಡಿಗಳ ಮುಖದಲ್ಲಿ ಒಂದು ಸಾರ್ಥಕದ ಭಾವನೆ ....
ಸಮಯ ಬೆಳಗ್ಗೆ 10 ಪಲ್ಲವಿಯ ನೋಡಲು ಬಂದ  ಸುಧಾಳ ಬಳಿ
ಡಾಕ್ಟರ್ ನಾನು ಡಿಸ್ ಚಾರ್ಜ್ ಮಾಡಿಸಬಹುದು ?
ಬೇಡಾ ಮಿಸ್ಟರ್ ವಾಸುದೇವ್ ಏಳು ತಿಂಗಳಲ್ಲಿ ಹುಟ್ಟಿರೋದರಿಂದ
ಇನ್ನೂ ಮೂರು ದಿನ ಮಗು ನಮ್ಮ ಗಮನದಲ್ಲೇ ಇರಬೇಕು .....
ನಗು ಮುಖದೊಂದಿಗೆ ಸರಿ ಡಾಕ್ಟರ್ .....
ಒಮ್ಮೆ ತಾಯಿ ಮಗುವನ್ನು ಚೆಕ್ ಮಾಡಿ ಹೋದ ನಂತರ  ...
ಅಸ್ಪತ್ರೆಗೆ ವಾಸುದೇವನ ದೂರದ ಸಂಬಂಧಿಕರು
ಹತ್ತಿರದ ಸ್ನೇಹಿತರು ಎಲ್ಲರೂ ಬಂದು ಮಗುವನ್ನು ನೋಡಿಕೊಂಡು ಹೋಗುತ್ತಿದ್ದರು ...
ಮೂರನೇ ದಿನ ....
ಪಲ್ಲವಿಯ ಡಿಸ್ ಚಾರ್ಜ್ ಮಾಡಿ ಮನೆಗೆ ಕಳುಹಿಸಿ ಕೊಡಲಾಯಿತು ....
ಮನೆಗೆ ಬಂದ ಮಗುವನ್ನು ಆರತಿ ಬೆಳಗಿ ಕೆಲಸದಾಳುಗಳು ಬರ ಮಾಡಿಕೊಂಡರು.....
ತನ್ನ ಕೋಣೆಯ ಒಳಗಿನ ತೊಟ್ಟಿಲಲ್ಲಿ ಮಗುವ ಮಲಗಸಿ
ನೆಮ್ಮದಿಯಾಗಿ ನಿದ್ರಿಸಿದರು ಆ ಜೋಡಿಗಳು!

ಸಮಯ ರಾತ್ರಿ ಹನ್ನೆರಡು ಐವತ್ತು !
ಆಸ್ಪತ್ರೆಯಲ್ಲಿ ...
ಪೇಷಂಟ್ ಗಳ ರಿಪೋರ್ಟ್ ಗಳನ್ನು ಲ್ಯಾಪ್ ಟಾಪ್ ನಲ್ಲಿ ನೋಡುತ್ತಿದ್ದ  ಸುಧಾಳ ಕಿವಿಯ ಮುಟ್ಟಿ ಹೋಯಿತು ಒಂದು ನವಜಾತ ಶಿಶುವಿನ  ಅಳುವ ಸದ್ದು ...
ಬರೀ ಮಗುವಿನ ಅಳುವಿನ ಸದ್ದುಗಳನ್ನೇ  ಕೇಳಿ ಕೇಳಿ ಎಲ್ಲೋ ಭ್ರಮೆ
ಇರಬೇಕು ಎಂದು ಸುಮ್ಮನಾದಳು
ಮತ್ತೊಮ್ಮೆ ಅದೇ ಸದ್ದು ಆದರೆ ಈ ಬಾರಿ ನಿರಂತರವಾಗಿತ್ತು ...
ಯೋಚಿಸಿ ನೋಡಿದರೆ ಕೊನೆಯದಾಗಿ ಪಲ್ಲವಿಗೆ ಬಿಟ್ಟರೆ ಮತ್ಯಾರಿಗೂ ಹೆರಿಗೆ ಆಗಿಲ್ಲ
ಹಾಗಾಗಿ ಆಸ್ಪತ್ರೆಯಲ್ಲಿ ಮತ್ಯಾವ ಮಗು ಇರುವ ಸಾಧ್ಯತೆ ಕೂಡ ಇಲ್ಲ 
ಆದರೂ ಹೇಗೆ ಅಳುವ  ಶಬ್ದ?
ಎಂದು ಯೋಚಿಸುತ್ತಾ ತೆರೆದುಕೊಂಡಿದ್ದ  ಲ್ಯಾಪ್ ಟಾಪ್ ನ ಬಾಯಿಯ ಮುಚ್ಚಿ ಹೊರ ಬಂದು ನೋಡಿದರೆ ಪಲ್ಲವಿ ಇದ್ದ ಅದೇ ಕೋಣೆಯಿಂದಲೇ ಸದ್ದು ಬರುತ್ತಿತ್ತು  ...
ಮೆಲ್ಲನೆ ಆ ಕೋಣೆಯ ಕಡೆ ಹೆಜ್ಜೆ ಹಾಕುತ್ತಾ ಹತ್ತಿರ ಬಂದು ಇನೇನು
ಕೈಯ ಬಾಗಿಲ ತೆರೆಯುವುದಕ್ಕೆ ಮುಂದಕ್ಕೆ ಕೊಂಡೊಯಿದ ಕ್ಷಣದಲ್ಲೇ  ಸದ್ದು ಶಾಂತವಾಯಿತು ...ಮುಂದೆ ಹೋಗಿದ್ದ  ಕೈ ಹಿಂದೆಗೆದು ಕೊಂಡು ನಿಂತಿದ್ದವಳಿಗೆ   ..
ಶಸ್ತ್ರ ಚಿಕಿತ್ಸೆ ಗೆ ಬಳಸುವ ಕತ್ತರಿ,ಚಾಕುಗಳು ಇಟ್ಟಿದ್ದ ತಟ್ಟೆ ಕೆಳಗೆ ಬಿದ್ದು 
ಜೆಲ್ ಎನ್ನುವ ಸದ್ದು ದಿಢೀರ್ ಎಂದು ಕಿವಿಗೆ ಅಲೆಯಂತೆ ಅಪ್ಪಳಿಸಿದ ಕೂಡಲೇ ಬೆಚ್ಚಿ ಬಿದ್ದು
ತಿರುಗಿ ನೋಡಿದರೆ ಆ ಸದ್ದಾಗಿದ್ದು ಇದ್ದ ಜಾಗದಿಂದ ಹತ್ತೆಜ್ಜೆ ಎದುರು ಇರುವ
ಅಪರೇಷನ್ ಕೋಣೆಯಿಂದ ....!
ಸೀದಾ ಅಪರೇಷನ್ ಕೋಣೆಯ ಬಳಿ ನಿಂತು ಬಾಗಿಲ ತೆರೆದು ನೋಡಿದ್ರೆ
ಗಾಢ ಕತ್ತಲು ಪಕ್ಕದಲ್ಲಿದ್ದ ದೀಪದ ಸ್ವಿಚ್ ಹಾಕಿದೊಡನೆ ಮಿಂಚಿನಂತೆ ಬಂದೊಯಿತು ಬೆಳಕು
ಬಲ್ಪ್ ಫ್ಯುಸ್ಡ್ ...ಮತ್ತದೇ ಕತ್ತಲಾವರಿಸಿತು ...
ಆ ಅರೆಕ್ಷಣದ ಬೆಳಕಿನಲ್ಲಿ
ನೆಲದ ಮೇಲೆ ಬಿದ್ದು ನೇರವಾಗಿ ನಿಂತಿದ್ದ  ಕತ್ತರಿ,ಚಾಕುಗಳು ಅವಳ ಕಣ್ಣಿಗೆ ಬೀಳಲಿಲ್ಲ ...!!
ಒಂದೆಜ್ಜೆ ಒಳ ಇಡುತ್ತಿದ್ದ ಹಾಗೆ ಏನೋ ಕಾಲಿಗೆ ರಭಸವಾಗಿ
ಹೊಡೆದಂತೆ ಎಡವಿ ಬಿದ್ದ ಅವಳ ಸದ್ದು ಮೇಲೇಳುವ ಮುನ್ನವೇ
ಗಂಟಲ ನಾಳಗಳ ಹರಿದು ಹಾಕಿತ್ತು ,
ಕತ್ತನ್ನು ಸೀಳಿಕೊಂಡು ಒಳ ನುಗ್ಗಿದ್ದ  ಕತ್ತರಿ,ಚಾಕುಗಳು!!
ಮೂರುದಿನಗಳ ಹಿಂದೆಯಷ್ಟೇ ಪಲ್ಲವಿಯ ಕರುಳಬಳ್ಳಿಯ ರಕ್ತದ ರುಚಿ ನೋಡಿದ್ದ ಆದೆ
ಕತ್ತರಿ,ಚಾಕುಗಳು  ಇಂದು ಸುಧಾಳ  ನೆತ್ತರನ್ನು ಕೂಡ ನೆಕ್ಕುತ್ತಿತ್ತು .....!
ಕೂಗಿಕೊಳ್ಳಲೂ ಆಗದೇ ಆ ಕೋಣೆಯಲ್ಲಿಯೇ ಒದ್ದಾಡುತ್ತಾ 
ಕೊನೆಯುಸಿರೆಳೆದಳು ಡಾಕ್ಟರ್ ಸುಧಾ!
===================ಪುಟ4======================
ಸಾವಿನ ಸುದ್ದಿ ವಾಸುದೇವನಿಗೆ ತಿಳಿದಿದ್ದು ಬೆಳಗ್ಗೆ ಹತ್ತು ಗಂಟೆಗೆ !
ತಮ್ಮನನ್ನು  ರೂಮಿಂದ ಹೊರ ಕರೆದು ವಿಷಯ ತಿಳಿಸಿದ ....
ಅಯ್ಯೋ ಏನ್ ಆಯಿತು ಅಣ್ಣ ಅವರಿಗೆ ?
ಏನೋ ಗೊತ್ತಿಲ್ಲ ಕಣೋ ರಘು ನೈಟ್ ಡ್ಯೂಟಿಯಲ್ಲಿ ಇರುವಾಗ ಕತ್ತಲಲ್ಲಿ ಎಡವಿ ಬಿದ್ದು
ಚಾಕು ಅವರ ಕತ್ತಿಗೆ ಚುಚ್ಚಿಕೊಂಡು ಸತ್ತಿದ್ದಾರೆ ಅಂತ ಈಗ ತಾನೇ  ಆಗ ಕಡೆ ಹೋದ ನನ್ನ ಫ್ರೆಂಡ್ ಒಬ್ಬ ಕಾಲ್ ಮಾಡಿ ತಿಳಿಸಿದ ..........
ವಿಷಯ ಕೇಳಿ ನನಗೂ ತುಂಬಾನೇ ಬೇಜಾರ್ ಆಯ್ತು ....
ನೀನು ಒಂದು ಮಾಲೆ ತಗೊಂಡು ಹೋಗಿ ಮುಖ ನೋಡ್ಕೊಂಡು ಬಂದು ಬಿಡು
ನಾನ್ ಬರೋಣ ಅಂದ್ರೆ ನಿಮ್ಮ ಅತ್ತಿಗೆನೂ ಬರ್ತೀನಿ
ಅಂತಾಳೆ ಅದಕ್ಕೆ ಬೇಡ ಹಸಿ ಮೈಯಿ ಅವಳು ಸಾವಿನ ಮನೆಗೆ ಬರೋದು ಒಳ್ಳೇದಲ್ಲ ....
ಅದಕ್ಕೆ ನೀನೆ ಹೋಗಿ ಬಾ ...ಪಾಪ ಸುಧಾ ಅವರು ನಮಗೆ ಅಂತ ತುಂಬಾ ಮಾಡಿದ್ದಾರೆ
ಅವರೇ ಇಲ್ಲಾಂದ್ರೆ ಇವತ್ತು ನನ್ನ ಹೆಂಡತಿ ಮಗುನ ನಾನು ನೋಡಕ್ಕೆ ಆಗ್ತಾ ಇರ್ತಾ ಇರ್ಲಿಲ್ಲ ..
ಹೌದಣ್ಣ ...ಸರಿ ಬಿಡು ನಾನೇ ಹೋಗಿ ಮಾಲೆ ಹಾಕಿ ನೋಡಿಕೊಂಡು ಬರ್ತೀನಿ ....
ವಿಷಯ ತಿಳಿದು ಪಲ್ಲವಿ ಕೂಡ ತುಂಬಾ ನೊಂದುಕೊಂಡಳು ...
ಏನಿದು ಮತ್ತೆ ಮತ್ತೆ ಕೆಟ್ಟ ಸುದ್ದಿಗಳೇ ಬರುತ್ತಿದೆ ಆಗ ರತ್ನಮ್ಮ ಈಗ ಸುಧಾ ...!
ಮಗು ಜನಿಸಿದ ಸಂತಸ  ಮರೆಯಾಗಿ  ಆ ಮನಸುಗಳ ನೋಡುವ ಶೋಕಾಚರಣೆ ಆಗಿತ್ತು 
ಆರು ತಿಂಗಳ ನಂತರ .....
ಮಗುವಿಗೆ ನಾಮಕರಣ ಮಾಡಿ ಒಳ್ಳೆಯ ಹೆಸರೊಂದ ಇಟ್ಟು ಆ ಸಂಭ್ರಮವನ್ನು
ಅದ್ಧೂರಿಯಾಗಿ ಆಚರಿಸಬೇಕು ಎಂದು ನಿರ್ಧರಿಸಿದರು ....
ಕೇಳುವುದಕ್ಕೂ ಹೊಸದಾಗಿರಬೇಕು ಚಂದವಾಗಿರಬೇಕು ಎಂದು
ಎಷ್ಟೋ ಹೆಸರುಗಳ ಹುಡುಕುತ್ತಾ ಇದ್ದವರಿಗೆ ಕೊನೆಗೂ ಒಂದು ಹೆಸರು ಸಿಕ್ಕತು 
ಅದನ್ನು ಅಂತರ್ಜಾಲದಲ್ಲಿ ಜಾಲಾಡಿ ತಂದಿದ್ದು ರಘುರಾಮ್ ...
ಅತ್ತಿಗೆ ಅಣ್ಣ  ಜೊತೆ ಹಾಲ್ ನಲ್ಲಿ ...
ಅಣ್ಣ ಜವ ಅನ್ನೋ ಹೆಸರು ಹೇಗಿದೆ ?
ಏನೋ ರಘು ಜವ ಅಂದ್ರೆ ?
ಅಣ್ಣ  ಒಂದೇ ಹೆರಿಗೆಯಲ್ಲಿ ಹುಟ್ಟುವ ಅವಳಿಜವಳಿ  ಮಕ್ಕಳಿಗೆ
ಹಾಗೆ ಅಂತಾರೆ . ನಮ್ಮ ಪಾಪು ಹುಟ್ಟಿದ್ದು ಒಂದು ರೀತಿ ಹಾಗೆ ತಾನೇ ಅದಕ್ಕೆ ಆಮೇಲೆ ?
ಬಲವಾದ ಶಕ್ತಿಶಾಲಿ ಅನ್ನೋ ಅರ್ಥ ಕೂಡ ಇದೆ  ಅಣ್ಣ ...
ಒಂದು ಕ್ಷಣ ದಂಪತಿಗಳು ಜೋಚಿಸಿ ....
ಸರಿ ರಘು ನಿನ್ ಸೆಲೆಕ್ಟ್ ಮಾಡಿರೋ ಹೆಸರೇ ಇರಲಿ ಎನ್ನುವ ಒಪ್ಪಿಗೆ ನೀಡಿದರು !
ಎಲ್ಲರ ಮುಖದಲ್ಲಿ ನಗೆಯ ಛಾಯೆಗಳು ಸುಂದರವಾಗಿ ಮೂಡಿತ್ತು
ಆದರೆ ಜವಎನ್ನುವ ಹೆಸರಿಗೆ ಯಮ ಎನ್ನುವ ಮತ್ತೊಂದು ಅರ್ಥವೂ ಇದೆ ಎನ್ನುವುದು
ಸ್ವತಃ ರಘುವಿಗೂ ತಿಳಿದಿರಲಿಲ್ಲ!
ಬಾರೀ ಅದ್ಧೂರಿಯಾಗಿ ಸಂಭ್ರಮದೊಂದಿಗೆ ಮಗುವಿನ ನಾಮಕರಣದ ಕಾರ್ಯಕ್ರಮ ನೆರವೇರಿತು ..
ಒಂದು ಎರಡು ಮೂರು ಎಂದು ಎಲೆಗಳಂತೆ ವರುಷಗಳು ಉರುಳಿದವು .....
ವರುಷಗಳ ನಂತರ .......!
ಈಗ ಜವನಿಗೆ ಐದು ವರ್ಷ ! ಆದರೂ ಒಂದೂ ಮಾತೂ ಕೂಡ ಆಡುತ್ತಿರಲಿಲ್ಲ
ತೋರಿಸದ ವೈದ್ಯರಿಲ್ಲ ...ಹಸಿವಾದರೆ ಅಳುವುದು
ಇಷ್ಟವಾದರೆ ನಗುವುದು ಈ ಎರಡು ಮಾತ್ರವೇ ಅವನ ಭಾಷೆಯಾಗಿತ್ತು ....
ಅದೊಂದು ದಿನ..............!
ಬೇರೆ ಊರಿನಲ್ಲಿ ನಡೆಯಲಿರುವ
ಮದುವೆಗೆ ಹೊರಡಲು ವಾಸುದೇವ್ ಅವನ ಪತ್ನಿ ಹಾಗೂ ಜವ ಸಿದ್ದರಾದರು ....
ಲೋ ರಘು ಬೇಗಾ ಬಂದು ಸೇರು ನೀನು
ನಿನಗೂ ಮೂವತ್ತೈದು ವರ್ಷ ಆಯ್ತು ಇನ್ನು ಯಾವಾಗ ಮದುವೆ ಆಗೋದು ನೀನು ?
ನಿನಗಾಗಿ  ಸಂಬಂಧಿಕರ ಮಗಳನ್ನ ನೋಡೋಣ ಅಂತ ಇದ್ದೀವಿ ಹುಡುಗಿ ನಿನಗೂ ಇಷ್ಟ ಆಗಿರುವವಳೇ ....ನೀನೂ ಆ ಹುಡುಗಿಗೆ ಇಷ್ಟ ಆಗಿದ್ದೀಯ ಎಲ್ಲಾ ಮಾತುಕತೆ ಮುಗಿದಿದೆ
ಅದಕ್ಕೆ ಈ ಮದುವೆ ನಡೆಯುವ ಶುಭಗಳಿಗೆಯಲ್ಲೇ ನಿನ್ನ ನಿಶ್ಚಿತಾರ್ಥ
 ಕೂಡ ಮುಗಿಸೋಣ ಅನ್ನೋ ಪ್ಲಾನ್ ಇದೆ ಕಣೋ ...
ರಘು ಖುಷಿಯಿಂದ..
ಆಯಿತು ಅಣ್ಣ ನೀವು ಹೇಗೆ ಹೇಳ್ತೀರೋ ಹಾಗೆ ಆಗ್ಲಿ ...
ಸರಿ ಇನ್ನು ಸ್ನಾನ ಮಾಡಿಲ್ಲ ನೀನು ಆಗ್ಲೇ ಸಮಯ ಹನ್ನೆರಡು ಆಯಿತು ?
ಅಣ್ಣ ರೀಷೆಪ್ಶನ್ ಸಂಜೆ ತಾನೇ ಅದಕ್ಕೆ ?
ಆದರೂ ನಾವು ಬೇಗೆ ಅಲ್ಲಿ ಇರಬೇಕು ಕಣೋ ಸರಿ ಸರಿ ನೀನು ರೆಡಿ ಆಗಿ ಬಾ
ನಾವು ಹೊರಡ್ತೀವಿ ....ಎಂದು ಕಾರಿನ ಬಾಗಿಲ ತೆರೆದು ಕೂರುವ ಮುನ್ನ
ಹಿಂದೆಯೇ ಓಡಿ ಬಂದು ರಂಘು..
ಅಣ್ಣ ಪುಟ್ಟನ್ನ ನಾನು ಕರ್ಕೊಂಡು ಬರ್ತೀನಿ  ಒಬ್ಬಾನೆ ಲಾಂಗ್ ಡ್ರೈವ್ ಮಾಡಕ್ಕೆ ಬೋರ್ ಆಗುತ್ತೆ
ಇವ್ನು ಜೊತೆ ಇದ್ರೆ ಚೆನ್ನಾಗಿರುತ್ತೆ ...
ಏನೋ ಪುಟ್ಟ ಚಿಕ್ಕಪ್ಪನ ಜೊತೆ ಕಾರ್ ನಲ್ಲಿ ಬರ್ತೀಯ ?
ಎನ್ನುವ ವಾಸುದೇವ ಪ್ರಶ್ನೆಗೆ ಆಯಿತು ಎನ್ನುವ ಹಾಗೆ ತಲೆಯಾಡಿಸಿದ ಜವ!
ಸರಿ ಕಣೋ ರಘು ಈಗಲೇ ಟೈಮ್ ಆಯಿತು ನೀನು ಸ್ನಾನ ಮಾಡಿ ಬೇಗ ಬಂದು ಸೇರು
ಮದುವೆ ವಿಷಯ ಬೇರೆ ಮಾತಾಡಬೇಕು ಅಂತ ಹೋಗ್ತಾ ಇರೋದು ಮೂರು ಜನ ಒಟ್ಟಿಗೆ ಹೋಗೋದು ಅಷ್ಟು ಚೆನ್ನಾಗಿರಲ್ಲ ನೀನ್ ಹೇಳಿದ್ದು ಒಳ್ಳೇದೆ ಆಯ್ತು ...
ನಾನು ನಿಮ್ಮ ಅತ್ತಿಗೆ ಹೋಗಿರ್ತೀವಿ ನೀನು ಪುಟ್ಟ ಹಿಂದೇನೆ ಬಂದು  ಬಿಡಿ ...
ಎಂದೇಳಿ ಮಗುವನ್ನು ರಘುವಿನ ಕೈಗೊಪ್ಪಿಸಿ ಹೊರಟರು ದಂಪತಿಗಳು ..
ಒಳಗೆ ಬಂದು ಪುಟ್ಟ ಇಲ್ಲೇ ಸೋಫಾ ಮೇಲೆ ಕುತ್ಕೊಂಡು ಇರು ನಾನು ಸ್ನಾನ ಮಾಡಿ ಬಂದು ಬಿಡ್ತೀನಿ ಇಬ್ಬರೂ ಊರಿಗೆ ಹೋಗೋಣ ....ಎಂದು ಮೇಲಿನ ತನ್ನ ರೂಂ ಗೆ ಹೋಗಿ ಸ್ನಾನ ಮುಗಿಸಿ ರೆಡಿ ಆಗಿ ಕೆಳಗೆ ಬಂದಾಗ ಅರ್ಧಗಂಟೆ ಕಳೆದಿತ್ತು ...
ಹೊರಡುವ ಮುನ್ನ ...ಪುಟ್ಟ ಕಾರ್ ನಲ್ಲಿ ಆಡಕ್ಕೆ ಯಾವುದಾದರೂ ಗೊಂಬೆ ತಗೊಳ್ತೀಯ ?
ಎಂದ ಕೂಡಲೇ ಸೋಫಾ ಮೇಲೆ ಬಿದ್ದದ್ದ ಹತ್ತಿಯ ಇಟ್ಟು ಬಟ್ಟೆ ಸುತ್ತಿದ್ದ ಮಾನವನಾಕಾರದ ಗೊಂಬೆಯ ಕೈಗೆತ್ತಿಕೊಂಡ ....ಇದೊಂದೇ ಸಾಕ ?
ಸಾಕು ಎನ್ನುವ ಸೂಚನೆ ತಲೆಯಾಡಿಸುವ ಮೂಲಕ ಸಿಕ್ಕಿದ ಕೂಡಲೇ
ರಘು ಮನೆಗೆ ಬೀಗ ಹಾಕಿ ಕಾರಿನ ಬಳಿ ಬಂದು ಮುಂಭಾಗದ ಬಾಗಿಲ ತೆರೆದ
ನಾನು ಹಿಂದೆ ಕೂರುತ್ತೇನೆ ಎಂದು ಜವ ಕೈ ತೋರಿಸಿದಕ್ಕೆ
ಸರಿ ಎಂದು ಹಿಂದಿನ ಸೀಟ್ ನಲ್ಲಿ ಕೂರಿಸಿ ಗಾಡಿ ಸ್ಟಾರ್ಟ್ ಮಾಡಿ ಹೊರಟ ....

ಕಾರು ಹೆದ್ದಾರಿಯ ತಲುಪಿತು ಮೋಡ ಕವಿದ ವಾತಾವರಣ ....
ಕೆಲವು ಸಮಯಗಳ ನಂತರ .....
ರಘೂ ...ಎನ್ನುವ ಕೂಗು ಕೇಳಿದ ತಕ್ಷಣ ಮುಂಭಾಗದ ಕನ್ನಡಿಯಲ್ಲಿ ಹಿಂದೆ ಕುಳಿತ್ತಿದ್ದ
ಜವನ ನೋಡಿದ ಅವನು ತಲೆ ಬಾಗಿಸಿಕೊಂಡು ಗೊಂಬೆಯ ಜೊತೆ ಆಟವಾಡುತ್ತಿದ್ದ
ಏನೋ ಭ್ರಮೆ ಎಂದು ಗಾಡಿ ಓಡಿಸುತ್ತಿದ್ದ  ...ಕೆಲವು ದೂರ ಸಾಗಿದ ಮೇಲೆ ಮತ್ತದೇ ಕೂಗು 
ರಘೂ ...ಈ ಬಾರಿಯೂ ಮುಂಭಾಗದ ಕನ್ನಡಿಯ ನೋಡುತ್ತಾ
ಪುಟ್ಟಾ ನೀನ ನನ್ನ ಕರೆದದ್ದು ?
ಮೇಲೆಕೆಳಗೆ ತಲೆಯಾಡಿಸಿ ಹೌದೆಂದ...!!
ರಘುವಿನ ಮುಖದಲ್ಲಿ ನಗು ಅರಳಿತು ,
ಪುಟ್ಟಾ ನೀನು ಮಾತಾಡ್ತಾ ಇದ್ದೀಯ ? ರಘು ಅಂತ ಕರೆಯಬಾರದು ಕಣೋ ಪುಟ್ಟ
ಚಿಕ್ಕಪ್ಪ ಅಂತ ಕರೆಯಬೇಕು ....ಅಯ್ಯೋ ಈ ವಿಷಯ ಅಣ್ಣ ಅತ್ತಿಗೆಗೆ ಗೊತ್ತಾದ್ರೆ ಎಷ್ಟು ಖುಷಿ ಪಡ್ತಾರೆ ಕಾಲ್ ಮಾಡಿ ಹೇಳ್ಲ ಬೇಡ ಬೇಡ  ಅವರಿಗೆ ನೇರವಾಗಿ ಹೋಗಿ ಹೇಳಿದ್ರೆ ಇನ್ನು ಚೆನ್ನಾಗಿರುತ್ತೆ ....ಎನ್ನುತಾ ಗಾಡಿಯ ಸಂತಸದೊಂದಿಗೆ ಚಲಾಯಿಸುತ್ತಿದ್ದ ...
ಅದನ್ನ ಹೇಳಕ್ಕೆ ನೀನು ಜೀವಂತ ಇರಲ್ಲ!!!!
ಎಂದೇಳಿದ ಜವನ ಕೆಂಡದಂತೆ ಕೆಂಪಾಗಿದ್ದ ಕಣ್ಣುಗಳ ಕನ್ನಡಿಯಲ್ಲಿ ಕಂಡವನಿಗೆ
ಹವಾನಿಯಂತ್ರಣ ಕಾರಿನಲ್ಲೂ ಕೂಡ ನಗುವಡಗಿ ಬೆವರಿನ ಹನಿಗಳು ಮೂಡಿತ್ತು ........
===================ಪುಟ5======================
ಏನ್ ಏನ್ ಆಯಿತು ಪುಟ್ಟಾ ಯಾಕ್ ಹೀಗೆ ಮಾತಾಡ್ತಾ ಇದ್ದೀಯ …..?
ಲಾವಣ್ಯ..............!!!!
ಐದುವರ್ಷಗಳ ನಂತರ ಆ ಹೆಸರನ್ನು ಅದೂ ಜವನ ಬಾಯಿಯಿಂದ ಕೇಳಿದ್ದು
ಅವನ ಎದೆಗೆ ಸಿಡಿಲು ಬಡಿದಂತೆ ಆಗಿತ್ತು ...
ಗಾಡಿಯ ಚಕ್ರಗಳು ಮುಂದೆ ಚಲಿಸುತ್ತಿದ್ದರೂ ಅವನ ನೆನಪಿನ ಚಕ್ರ ಹಿಂದೆ ಚಲಿಸ ತೊಡಗಿತು !
ಐದೂವರೆ ವರ್ಷಗಳ ಹಿಂದೆ ....
ಲಾವಣ್ಯ ವಾಸುದೇವನ ಆಫೀಸ್ ನಲ್ಲಿ ಅಕೌಂಟ್ ಟೆಂಟ್
ಆಗಿ ಕೆಲಸ ಮಾಡುತ್ತಿದ್ದ ಹುಡುಗಿ ...
ಎಂತಹವರನ್ನೂ ಸೆಳೆಯುವಂತ ಮೋಹಕ ಚೆಲುವೆ
ಅವಳ ಸೌಂದರ್ಯಕ್ಕೆ  ಸೋತವರು ,ಪ್ರೀತಿಗಾಗಿ ಹಿಂದೆಯೇ ಬಿದ್ದಿದರು ..
ಅಂತಹ ಸೌಂದರ್ಯವಿದ್ದರೂ ಅವಳನ್ನು ಒಮ್ಮೆಯೂ ತಿರುಗಿ ನೋಡಿದವನಲ್ಲ ರಘು ...!
ತನ್ನನ್ನು ಒಂದು ಬಾರಿಯೂ ಕಾಣದೆ ಇದ್ದಿದ್ದೆ ರಘುವಿನ ಮೇಲೆ ಲಾವಣ್ಯಳಿಗೆ ಆಕರ್ಷಣೆ ಹುಟ್ಟಲು ಕಾರಣವಾಯಿತು ಆ ಆಕರ್ಷಣೆಯೇ ಪ್ರೀತಿಯಾಗಿ ತಿರುಗಿದಾಗ ...
ತನ್ನ ಪ್ರೇಮವನ್ನು ಅವಳು ರಘುವಿಗೆ ಹೇಳಿಯೇ ಬಿಟ್ಟಳು ..
ಅಂತಹ ಸುಂದರ ಹೆಣ್ಣು ತಾನಾಗಿಯೇ ಬಂದು ಪ್ರೀತಿಸುತ್ತಿದ್ದೇನೆ ಎನ್ನುವಾಗ
ಅವನಿಗೆ ಅವಳ ಪ್ರೀತಿಯನ್ನು ನಿರಾಕರಿಸಲು ಮನಸಾಗಲಿಲ್ಲ .....
ಅವರಿಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದು ಪ್ರೇಮಪಕ್ಷಿಗಳಂತೆ ಹಾರಾಡಿದರು ..
ಯಾರಿಗೂ ತಿಳಿಯದ ಹಾಗೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ...
ತಿಂಗಳುಗಳು  ಹೀಗೆ ಕಳೆಯಿತು ...ಅದೊಂದು ದಿನ ಲಾವಣ್ಯ ಆಫೀಸ್ ಗೆ ಬಂದಿರಲಿಲ್ಲ
ಸಮಯ ಮಧ್ಯಾಹ್ನ 12:30ಕ್ಕೆ  ರಘುವಿಗೆ ಕರೆ ಮಾಡಿದಾಗ ....
ಹಲೋ ಚಿನ್ನ ಯಾಕೆ ಆಫೀಸ್ ಗೆ ಬಂದಿಲ್ಲ ?
ರಘು ಸ್ವಲ್ಪ ಹುಷಾರಿರಲಿಲ್ಲ ಸೊ ಡಾಕ್ಟರ್ ನ ನೋಡಕ್ಕೆ ಹೋಗಿದ್ದೆ.
ಓಹ್ ಏನ್ ಆಯಿತು ಡಾರ್ಲಿಂಗ್ ?ಈಗ ಹೇಗಿದ್ದೀಯ ?
ರಘು  ನಾನು ಈಗ ಮೂರು ತಿಂಗಳು!!!
ವಾಟ್ (ಪ್ರೇಮ ಕಾಮದ ಗಡಿಯ ದಾಡಿದ ಸೂಚನೆ ಅವನಿಗೆ ಸಿಕ್ಕಿತು)
ಒಂದು ಕ್ಷಣದ ನಂತರ ಈಗ ಏನ್ ಮಾಡೋಣ ಅಂತ ಇದ್ದೀಯ ?
ನನಗೆ ಒಂದೂ ತೋಚ್ತಾ ಇಲ್ಲ ರಘು ನೀವೇ ಹೇಳಬೇಕು ಏನ್ ಮಾಡೋದು ಅಂತ ?
ಅಬಾರ್ಶನ್ ? ಅದನ್ನ ಬಿಟ್ರೆ ಬೇರೆ ದಾರಿ ಇಲ್ಲ ....
ಬೇಡಾ ರಘು ಬೇರೆ ಏನಾದರೂ ದಾರಿ ಇದ್ರೆ ನೋಡೋಣ ?
ಆಗಲ್ಲ ಚಿನ್ನ ಅರ್ಥ ಮಾಡ್ಕೋ ಪ್ಲೀಸ್
ಇನ್ನು ನಮ್ಮ ಅತ್ತಿಗೆಗೆ ಮಗು ಆಗಿಲ್ಲ ಅಷ್ಟರಲ್ಲಿ ನಮಗೆ ಮಗು ಅಂದ್ರೆ ಅದು ಚೆನ್ನಾಗಿರಲ್ಲ
ನಮ್ಮ ಅಣ್ಣನಿಗೆ ಇದೆಲ್ಲಾ ಇಷ್ಟ ಆಗಲ್ಲ ಅವನಿಗೆ ನಡತೆ ಅನ್ನೋದು ತುಂಬಾ ಮುಖ್ಯ ಏನೋ ನಾನು ಅವಸರ ಪಟ್ಟು ತಪ್ಪು ಮಾಡಿ ಬಿಟ್ಟೆ ಈಗ ನಮಗೆ ಇರೋದು ಇದೊಂದೇ ದಾರಿ....
ಆಮೇಲೆ ನಮ್ಮ ಮದುವೆಗೆ ಅವನು ಒಪ್ಪೋದೆ ಇಲ್ಲ ಅದಕ್ಕೆ ಹೇಳ್ತಾ ಇದ್ದೀನಿ
ನಾಳೆ ಬೆಳಗ್ಗೆ ನಾನು ಬರ್ತೀನಿ ಗೊತ್ತಿರೋ ಡಾಕ್ಟರ್ ಹತ್ರ ಹೋಗಿ ಮೊದಲು ಅದನ್ನ ತೆಗಿಸೋಣ
ನೀನ್ ಚಿಂತೆ ಮಾಡ್ಬೇಡ ನಿನಗೆ ಏನೂ ಆಗಲ್ಲ! ...ಭಯ ಪಡಬೇಡ.
ಈಗ ನೀನು ರೆಸ್ಟ್ ತಗೋ ನಾನು ನಿನ್ನ ನಾಳೆ ನಿನ್ನ ಫ್ಲಾಟ್ ನಲ್ಲೆ ಬಂದು ನೋಡ್ತೀನಿ
ಪ್ಲೀಸ್ ಚಿನ್ನು ಟೇಕ್ ಕೇರ್ ....
ಮಾರನೆಯ ದಿನ ಬೆಳಗ್ಗೆ ಹತ್ತಕ್ಕೆ .....
ಅವಳನ್ನು ಕಾಣಲು ಹೋದವನನ್ನು ಬರ ಮಾಡಿಕೊಂಡಿದ್ದು ಬಾಗಿಲಿಗೆ ಹಾಕಿದ್ದ ಬೀಗ!
ಅವಳಿಗೆ ಕರೆ ಮಾಡಿದರೆ ನಾಟ್ ರೀಚ್ ಬಲ್....
ಎದುರಿನ ಮನೆಯವರ ವಿಚಾರಿಸಿದ ....
ಮೇಡಂ ನಾನು ನಿಮ್ಮ ಎದುರು ಮನೆಯಲ್ಲಿ ಇದ್ದಾರಲ್ಲ ಲಾವಣ್ಯ ಅಂತ ಅವರ ಫ್ರೆಂಡ್
ಅವರು ಎಲ್ಲಿ ಹೋಗಿದ್ದಾರೆ ಅಂತ ಏನಾದ್ರೂ ಗೊತ್ತ ?
ಸರ್ ಅವರು  ಬೆಳಗ್ಗಿನ ಜಾವದಲ್ಲೇ ಬ್ಯಾಗ್ ಎತ್ಕೊಂಡು ಹೋಗ್ತಾ ಇದ್ರು
ನಾನ್ ಏನಮ್ಮ ಇಷ್ಟು ಬೇಗಾ ಎಲ್ಲಿಗೆ ಹೋಗ್ತಾ ಇದ್ದೀಯ ಅಂತ ಕೇಳಿದಕ್ಕೆ ..
ಆಂಟಿ ನಾನು ಊರಿಗೆ ಹೋಗ್ತಾ ಇದ್ದೀನಿ ಬರೋದು ಸ್ವಲ್ಪ ದಿನ ಆಗುತ್ತೆ ಅಂತ ಹೇಳಿದ್ರು ..
ಎಲ್ಲಿಗೆ ಹೋಗ್ತಾ ಇರೋದು ಯಾವ ಊರು ಅಂತ ಏನೂ ಹೇಳಲಿಲ್ಲ
ತುಂಬಾ ಅವಸವಸರವಾಗಿ ಹೋಗ್ತಾ ಇದ್ರು ...
ಓಕೆ ಮೇಡಂ ಥ್ಯಾಂಕ್ಸ್ ....
ಓಕೆ ಸರ್ ...
ಅಪಾರ್ಟ್ ಮೆಂಟ್ ಯಿಂದ ಹೊರ ಬಂದು ಮತ್ತೆ ಕರೆ ಮಾಡಿದ ಆಗಲೂ ಅದೇ ಉತ್ತರ!
ಎಲ್ಲಿಗೆ ಹೋಗಿರಬಹುದು ಒಂದು ಕಾಲ್ ಕೂಡ ಮಾಡಿ ತಿಳಿಸದೇ ಎಂದು ಯೋಚಿಸುತ್ತಲೇ
ಆಫೀಸ್ ನಲ್ಲಿ ತನ್ನ ಕೋಣೆಯಲ್ಲಿ ಬಂದು ಕುಳಿತ ...
ಹಾಗೆ ಕೆಲಸ ಮಾಡುವಾಗ ಅವನ ಮೊಬೈಲ್ ರಿಂಗಣಿಸುತ್ತಿತ್ತು ...
ಮೊಬೈಲ್ ಪರದೆಯ ನೋಡಿದರೆ ಲಾವಣ್ಯಳ ಹೆಸರು...ತಕ್ಷಣ ತೆಗೆದು:
ಹಲೋ  ಎಲ್ಲೇ ಇದ್ದೀಯ ?
ಸಾರೀ ರಘು ನಿನಗೂ ಒಂದು ಮಾತು ಹೇಳಕ್ಕೆ ಆಗಲಿಲ್ಲ
ಈಗ ನಾನು ನಮ್ಮ ಊರಿನಲ್ಲಿ ಇದ್ದೀನಿ ?
ಅಷ್ಟೊಂದು ಅವಸರವಾಗಿ ಹೋಗೋದು ಏನ್ ಇತ್ತು ?
ನಮ್ಮ ಅಮ್ಮನಿಗೆ ಆಸ್ತಮಾದಿಂದ ಉಸಿರಿನ ತೊಂದರೆ ಆಗಿ ಅವರನ್ನ ಹಾಸ್ಪೆಟಲ್ ಗೆ ಅಡ್ಮಿಟ್ ಮಾಡಿದ್ದಾರೆ .ಅಂತ ಕಾಲ್ ಬಂತು ...
ಇಲ್ಲಿ ಅವರಿಗೆ ನನ್ನ,ಹಾಗೂ ತಮ್ಮನ ಬಿಟ್ಟರೆ ಬೇರೆ ಯಾರೂ ಇಲ್ಲ
ಅವನು ಕೂಡ ಇನ್ನು ಸಣ್ಣವ ಎಸ್. ಎಸ್.ಎಲ್.ಸಿ ಓದ್ತಾ ಇದ್ದಾನೆ ...
ಅಕ್ಕ ಹೀಗೆ ಅಮ್ಮನಿಗೆ ಆಗಿದೆ ನನಗೆ ತುಂಬಾ ಭಯ ಆಗ್ತಾ ಇದೆ ನೀನು ಬೇಗ ಬಂದು ಬಿಡು ಅಂತ
ನೆನ್ನೆ ರಾತ್ರಿ ಕಾಲ್ ಮಾಡ್ದ ಅದಕ್ಕೆ ನಾನು ಬೆಳಗ್ಗೆಯೇ ಎದ್ದು ಊರಿನ ಕಡೆ ಬಂದು ಬಿಟ್ಟೆ
ನಿನಗೆ ಹೇಳೋಣ ಅಂದ್ರೆ ಅಷ್ಟೊತ್ತಿನಲ್ಲಿ ನಿನಗೆ ತೊಂದರೆ ಮಾಡೋದು ಬೇಡ ಅಂತ ಹೇಳಿಲ್ಲ
ಇಲ್ಲಿಗೆ ಬಂದ ಕೂಡ್ಲೇ ನೆಟ್ ವರ್ಕ್ ಸಿಗದೇ ಈಗ ಊರಿನ ಆಚೆ ಸ್ವಲ್ಪ ಸಿಟಿ ಕಡೆ ಬಂದೆ ಅಮ್ಮನಿಗೆ ಔಷಧಿ ತಗೊಳಕ್ಕೆ ಅದಕ್ಕೆ ನಿನಗೆ ಈಗ ಕಾಲ್ ಮಾಡಿದ್ದು ....
ಓಹ್ ಇಷ್ಟೆಲ್ಲಾ ಆಯ್ತಾ ?
ಬಟ್ ಈಗ ನೀನ್ ಯಾವ ಪರಿಸ್ಥಿತಿಯಲ್ಲಿ ಇದ್ದೀಯ ಅನ್ನೋದು ನಿನಗೆ ನೆನಪಿದೆ ತಾನೇ ?
ಖಂಡಿತ ಇದೆ ಅದಕ್ಕೆ ಆದಷ್ಟು ಬೇಗಾ ಬಂದು ಬಿಡ್ತೀನಿ ಇನ್ನು ಒಂದು ತಿಂಗಳಲ್ಲಿ ಅಲ್ಲಿ ಇರ್ತೀನಿ ...
ಸರಿ ಹಣ ಏನಾದರೂ ಬೇಕಿತ್ತಾ ?
ಸಧ್ಯಕ್ಕೆ ಬೇಡ ರಘು ....
ಓಕೆ ಲಾವಣ್ಯ ಬೇಗಾ ಬರೋದನ್ನ ನೋಡು..
ಆಯಿತು ನಾನು ಮತ್ತೆ ಕಾಲ್ ಮಾಡ್ತೀನಿ.
ಓಕೆ ನೀನ್ ಹುಷಾರು ...
ಬೈ .................
ಎರಡು ತಿಂಗಳ ಬಳಿಕ ..........
ಒಂದು ತಿಂಗಳಲ್ಲಿ ಬಂದು ಬಿಡುತ್ತೇನೆ ಎಂದವಳು ಎರಡು ತಿಂಗಳು ಕಳೆದರೂ  ಪತ್ತೆ
ಇಲ್ಲದರ  ಬಗ್ಗೆಯೇ ತನ್ನ ಕೊಠಡಿಯ ಕುರ್ಚಿಗೆ ಒರಗಿ ಕಣ್ಣ ಮುಚ್ಚಿ ...
ನಾನೇ ಬಿತ್ತಿದ ಬೀಜ ಬೇರೂರಿ ಮರವಾಗುವ ಮುನ್ನ ಬುಡ ಸಹಿತ ಕಿತ್ತೆಸೆಯಬೇಕೆಂದು
ಯೋಚಿಸುತ್ತಿದ್ದಾಗ ..ಮುಂದೆ  ಟೇಬಲ್ ಮೇಲಿಟ್ಟಿದ್ದ ಮೊಬೈಲ್ ಬಡೆದುಕೊಂಡು ಜರುಗುತ್ತಿತ್ತು
ಹಾಗೆ ಅದ ಕೈಯಲ್ಲಿ ಎತ್ತಿಕೊಂಡು ಕಣ್ಣ ತೆರೆದು ನೋಡದೆಯೇ ಕರೆಯ ಸ್ವೀಕರಿಸಿ ..
ಹಲೋ  ಯಾರು ?
ನಾನು ಲಾವಣ್ಯ!
ಕಣ್ಣ ಬಿಟ್ಟು ನೇರವಾಗಿ ಕುಳಿತುಕೊಂಡು
ಹೇಯ್ ಏನ್ ಆಟ ಆಡ್ತಾ ಇದ್ದೀಯ ?
ಇಲ್ಲ ರಘು ಇಲ್ಲಿ ಎಲ್ಲಾ ಸರಿ ಮಾಡೋಷ್ಟರಲ್ಲಿ ಇಷ್ಟು ದಿನ ಬೇಕಾಯಿತು ...
ನಾನು,ನೀನು ಕಾಯಬಹುದು ಆದರೆ ನಿನ್ನ ಹೊಟ್ಟೆ ಒಳಗೆ ಇರೋ ಮಗು ?
ನೆನಪಿದೆಯ ಈಗ ನಿನಗೆ ಐದು ತಿಂಗಳು ?
ಎಲ್ಲಾ ನೆನಪಿದೆ ..ಅಲ್ಲಿ ನಾನು ಇದನ್ನ ಯಾರಿಗೂ ಗೊತ್ತಿಲದೇ ಮುಚ್ಚಿಡಕ್ಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಸರಿನಮ್ಮ ಈಗ ಏನ್ ಮಾಡೋಣ ಅಂತ ಇದ್ದೀಯ ?
ನಾನು ಈಗ ಬೆಂಗಳೂರಿನಲ್ಲಿ ಇದ್ದೀನಿ ...
ಇಲ್ಲಿ ಎಲ್ಲಿ ?
ನನ್ನ ಫ್ಲಾಟ್ ನಲ್ಲಿ ...
 ಗುಡ್ ನಾನೇ ಅಲ್ಲಿಗೆ ಬರ್ತೀನಿ ಇರು ....
ಎಂದವನ ಕಾರು ಹೋಗುವ ದಾರಿಯ ಮಧ್ಯೆ ಒಂದು ಹೋಟೆಲ್ ನಲ್ಲಿ ಅವಳಿಗೆ ಊಟ ತೆಗೆದು ಕೊಂಡು  ಅವಳ ಫ್ಲಾಟ್ ಮುಂದೆ ಬಂದು ನಿಂತಿತು .........
ಸೀದಾ ಅವಳ ಫ್ಲಾಟ್ ಗೆ ಒಳಗೆ ಬಂದು ಬಾಗಿಲು ಹಾಕಿಕೊಂಡು
ಅಲ್ಲ ಲಾವಣ್ಯ ನಿನಗೆ ..ಏನಾದ್ರೂ  ಮೈ ಮೇಲೆ ಪ್ರಜ್ಞೆ ಇದೆಯಾ ?
ಇಷ್ಟು ದಿನ ನಾನು ಹೆಂಗೆಲ್ಲಾ ಒದ್ದಾಡಿದ್ದೀನಿ ಗೊತ್ತ ...?
ನನ್ನ ಪರಿಸ್ಥಿತಿನ ಕೂಡ ಅರ್ಥ ಮಾಡ್ಕೋ ರಘು ... ನಾವ್ ಇರೋದು ಈಗಲೂ ಹಳ್ಳಿಯೇ ಅಲ್ಲಿ
ಅರೋಗ್ಯ ಸರಿಯಿಲ್ಲದ ಅಮ್ಮನ ಹಾಗೆ ಬಿಟ್ಟು ಬಂದರೆ ಜನ ಸುಮ್ನೆ ಇರಲ್ಲ ...
ನಾನ್ ಇಷ್ಟು ದಿನ ಅವರೇ ಜೊತೆಯೇ ಇದ್ದೆ  ಈಗ ಅಮ್ಮ ಸ್ವಲ್ಪ ಸುಧಾರಿಸಿಕೊಂಡರು ಅದಕ್ಕೆ ನಾನು ಹೊರಟು ಬಂದೆ ..
ಸರಿ ಲಾವಣ್ಯ ಇನ್ನೂ ಒಂದು ದಿನ ಕೂಡ ಲೇಟ್ ಮಾಡೋದು ಬೇಡ
ನಾಳೆನೆ ನಾನು ನಿನ್ನ ಗೊತ್ತಿರೋ ಡಾಕ್ಟರ್ ಹತ್ರ ಕರ್ಕೊಂಡು ಹೋಗ್ತೀನಿ
ಇನ್ನು ತಡ ಮಾಡೋದು ಒಳ್ಳೇದಲ್ಲ!!
ಪ್ಲೀಸ್ ಕೋಪ ಮಾಡ್ಕೋಬೇಡ ರಘು ಹೀಗೆ ಹೇಳ್ತೀನಿ ಅಂತ
ನಮಗೆ ಅಬಾರ್ಶನ್ ಮಾಡಿಸೋದನ್ನ ಬಿಟ್ಟು ಬೇರೆ ದಾರಿ ಇಲ್ವಾ ?
(ಹೀಗೆ ಕೇಳುವ ಅವಳ ಮುಖ ಬಾಡಿತ್ತು )
ರಘು ಬಳಿ ಬಂದು ಅವಳ ಕೈ ಹಿಡಿದುಕೊಂಡು...
ನೋಡು ಚಿನ್ನು  ನಮ್ಮ ಎಲ್ಲಾ ಆಸ್ತಿ ನನ್ನ ತಾತಾ ನನ್ನ ಅಪ್ಪ ಸಂಪಾದಿಸಿದ್ದು
ಅಂತ ಆಗಿದ್ರೆ ನನ್ನ ಪಾಲಿನ ಆಸ್ತಿ ತಗೊಂಡು ಹೊರಗೆ ಬಂದು  ಬಿಡಬಹುದಿತ್ತು ಆದರೆ
ಇದೆಲ್ಲಾ ನನ್ನ ಅಣ್ಣನ ಹಾರ್ಡ್ ವರ್ಕ್ ಯಿಂದ ಸಂಪಾದಿಸಿದ ಹಣ ಅವನು ನೋಡಿ
ಏನಾದರೂ ಕೊಟ್ಟರೆ ಮಾತ್ರಾನೇ ನನಗೆ ಅಂತ ಅಷ್ಟೋ ಇಷ್ಟೋ ಆಸ್ತಿ ಸಿಗೋದು ...
ಅವನು ಕೊಡಲ್ಲ ಅಂದ್ರೆ ನನ್ನಿಂದ ಏನೂ ಮಾಡಕ್ಕೆ ಆಗಲ್ಲ ....
ನನ್ನ ಹೆತ್ತವರು ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡರು ನನ್ನ ಅಣ್ಣನ್ನ ಸಾಕಿದ್ದು ನಮ್ಮ ಅಜ್ಜಿ
ನಮ್ಮನ್ನ ಚೆನ್ನಾಗಿ ಓದಿಸಿ ..ಒಳ್ಳೆಯ ಕಡೆ ಕೆಲಸಕ್ಕೆ ಸೇರಿಸಿದ್ದು ಎಲ್ಲವೂ ಅಜ್ಜಿಯೇ
ನಾವು ಕಷ್ಟದಲ್ಲಿ ಇದ್ದಾಗ ಯಾವ ಸಂಭಂಧಿಕರು ಬಂದು ನಮಗೆ ಒಂದು ಚೂರೂ ಸಹಾಯ ಮಾಡಲಿಲ್ಲವೆಂದೇ ..ಅಣ್ಣ ಅಜ್ಜಿನೂ ನಮ್ನ ಬಿಟ್ಟು ಹೋದ ಮೇಲೆ ಒಂದು ಅನಾಥ ಹುಡುಗಿನ ನೋಡಿ
ಅವಳನ್ನ ಮದುವೆ ಆದ ಆ ಹುಡ್ಗಿನೆ ನಮ್ಮ ಅತ್ತಿಗೆ ಪಲ್ಲವಿ ...
ಅವರನ್ನ ಮದುವೆ ಆಗಕ್ಕೂ ಮುನ್ನ ನಮ್ಮ ಎಷ್ಟೋ ಸಂಬಂಧಿಕತು ಬಂದು ನಮ್ಮ ಮಗಳನ್ನ ಮದುವೆ ಆಗು ಅಂತ ಪೀಡಿಸಿದ್ದು ಉಂಟು ಆದರೆ ಅಣ್ಣ ಮುಖಕ್ಕೆ ಹೊಡೆದ ಹಾಗೆ ,
ಅವತ್ತು ನಮ್ಮ ಹತ್ರ ಏನೂ ಇಲ್ಲದಿದ್ದಾಗ ನಾವು ನಿಮಗೆ ಬೇಡ ಈಗ ಸ್ವಲ್ಪ ಹಣ ಕಾಸು ಬಂದ ಮೇಲೆ ನಾವು ನಿಮಗೆ ಬೇಕು ಅಲ್ವ, ನಿಮ್ಮ ಹಾಗೆ ಹಣಕ್ಕೆ ಬಾಯಿ ಬಿಡೋ ಸಂಬಂಧಗಳೇ ನನಗೆ ಬೇಕಿಲ್ಲ ಹೋಗ್ತಾ ಇರಿ .ಅಂತ ಹೇಳಿ ಕಳುಹಿಸಿದ ..
ನಮ್ಮ ಮನೆಗೆ ಬಂದ ಅತ್ತಿಗೆ ನನ್ನ ಯಾವತ್ತೂ ಕೂಡ ಒಂದು ಮೈದುನ ಅಂತ ನೋಡಲಿಲ್ಲ ಸ್ವಂತ ಮಗನ ಹಾಗೆ ನೋಡ್ಕೊಂಡ್ರು ..ಆದರೆ ಅಣ್ಣ ಅತ್ತಿಗೆಗೆ ಒಂದು ಕೊರಗಿತ್ತು ಅವರಿಗೆ ಮದುವೆ ಆಗಿ ಐದು ವರ್ಷವಾದರೂ ಒಂದು ಮಗುವಿಲ್ಲವೆಂದು ...ಅಲ್ಲಿ ಇಲ್ಲಿ ಅಂತ ತೋರಿಸದ ಡಾಕ್ಟರ್ಸ್ ಇಲ್ಲ
ಹೇಗೋ ಈಗ ಅವರು ಮೂರು ತಿಂಗಳು.!
ಅವರಿಗೂ ಎರಡು ತಿಂಗಳು ಮೊದಲೇ ನಮಗೆ ಮಗು ಆಗುತ್ತೆ ? ಹೀಗೆ ಆದ್ರೆ ಆಮೇಲೆ ಅಣ್ಣ ನನಗೆ ಸಮಾಜದಲ್ಲಿ ಇದ್ದ ಮಾನ ಮರ್ಯಾದೆ ಹೋಯ್ತು ಅಂತ ನಮ್ನ ಮನೆ ಬಿಟ್ಟು ಕಳಿಸಿದ್ರೆ ಏನ್ ಮಾಡೋದು ?
ನಾನ್ ಹೀಗೆ ಹೇಳ್ತೀನಿ ಅಂತ ಬೇಜಾರ್ ಮಾಡ್ಕೋಬೇಡ ನಿನಗೆ ಎಲ್ಲಾ ಕಳೆದು ಕೈಗೆ ಸಿಗೋ ಸಂಬಳ ಹನ್ನೆರಡು ಸಾವಿರ ...
ಈ ಫ್ಲಾಟ್ ನ ಬಾಡಿಗೆನೆ ಇಪ್ಪತ್ತು ಸಾವಿರ ....
ಇಲ್ಲಿ ಬರಕ್ಕೂ ಮುನ್ನ ನೀನು ಒಂದು ಸಾಮಾನ್ಯವಾದ ಪಿ.ಜಿ.ನಲ್ಲಿ ಹತ್ತಕ್ಕೆ ಹತ್ತು ಅನ್ನೋ ಕೋಣೆಯಲ್ಲಿ ಇಬ್ಬರು ಹುಡುಗಿಯರ ಜೊತೆ ರೂಂ ಶೇರ್ ಮಾಡ್ಕೊಂಡು ಇದ್ದೆ ,
ಅದು ನನಗೆ ಇಷ್ಟ ಆಗದೇನೆ ತಾನೇ ಇಷ್ಟು ಒಳ್ಳೆಯ ಫ್ಲಾಟ್ ನಲ್ಲಿ ನಿನ್ನ ತಂದು ಇಟ್ಟಿದ್ದು
ನಿನ್ನ ರಾಣಿ ಥರ ನೋಡ್ಕೋಬೇಕು ಅನ್ನೋದು ಕನಸಿದೆ ನನಗೆ ಅದಕ್ಕೆ  ಇಷ್ಟೆಲ್ಲಾ ಮಾಡೋದು
ಅಣ್ಣನ ಆಸ್ತಿ ಬೇಡ ಅಂತ ಬರೀ ಗೈನಲ್ಲಿ  ಬಂದ್ರೆ ಆಮೇಲೆ  ಐಷರಾಮಿ ಜೀವನ ನಡೆಸಕ್ಕೆ ಆಗಲ್ಲ ಅನಾಥರ ಹಾಗೆ ಜೀವಿಸಬೇಕಾಗುತ್ತೆ ?
ನಮಗೆ ಏಜ್ ಇದೆ ಲಾವಣ್ಯ ಮುಂದೆ ಇನ್ನೊಂದು ಮಗು ಆಗುತ್ತೆ
ಬಟ್ ಇಷ್ಟೊಂದು ಆಸ್ತಿನ ನಾಮ್ ಕೈಯಲ್ಲಿ ಸಂಪಾದನೆ ಮಾಡಕ್ಕೆ ಆಗುತ್ತಾ ?
ಇನ್ನು ಎಲ್ಲಾ  ನಿನ್ನ ಮಾತಿನ ಮೇಲಿದೆ ಯೋಚನೆ ಮಾಡು ..
ಎಂದು ಹಾಸಿಗೆಯ ಮೇಲೆ ಕುಳಿತ .
ಅವಳು ಕಿಟಕಿಯ ಬಳಿ ಹಾಕಿದ್ದ ಕುರ್ಚಿಯಲ್ಲಿ ಕುಳಿತು ಯೋಚಿಸುತ್ತಾ ಇದ್ದಳು .....
ರಘುವಿನ ಮೇಲೆ ಪ್ರೀತಿ ಹುಟ್ಟಲು ಮೂಲ ಕಾರಣವೇ  ಶ್ರೀಮಂತಿಕೆ ,
ಅವನು ಬಳಸುವ  ಬೆಲೆ ಬಾಳುವ ಕಾರು,ಹಾಗೂ ಇತರೆ ವಸ್ತುಗಳು
ಬಡತನದ ಬೇಗೆಯಲ್ಲಿ ಬೆಂದವಳಿಗೆ ಚಿನ್ನದ ಚಾಕು ಸಹ ಚಂದವೇ ಕಾಣುತ್ತಿತ್ತು ...
ತನ್ನ ಗರ್ಭದೊಳಗೆ ಇರುವ ಐದು ತಿಂಗಳ ಮಗುವನ್ನು ಕೊಲ್ಲಲು ಅವಳ ಮನಸು ಪೂರ್ತಿ ಒಪ್ಪಲಿಲ್ಲ
ಒಂದೆಡೆ ಬದುಕು ಇನ್ನೊಂದೆಡೆ ಮಗು ?
ಅದ ? ಇದ ? ಎನ್ನುವ ಪ್ರಶ್ನೆಯಗಳು ಅವಳ ಯೋಚನಾ ಶಕ್ತಿಗೆ ಸವಾಲ್ ಎಸೆಯುತ್ತಿತ್ತು
ಕೋಣೆಯೊಳಗೆ ನಿಶ್ಯಬ್ದಕ್ಕೆ  ಟಿಕ್ ಟಿಕ್ ಎನ್ನುವ ಗಡಿಯಾರದ ಸದ್ದು ಮಾತ್ರವೇ  
ಮಧ್ಯೆ ಮಧ್ಯೆ ಕೇಳುತ್ತಿತ್ತು ...!
ಹತ್ತು ನಿಮಿಷಗಳ ಸುದೀರ್ಘ ಆಲೋಚನೆಯ ಬಳಿಕ
ಸರಿ ರಘು ನಾನು ಅಬಾರ್ಶನ್ ಗೆ ಒಪ್ತೀನಿ...
ಎಂದ ಮರುಕ್ಷಣ ಕಿಟಕಿಯ ಗಾಜು ಪುಡಿ ಪುಡಿ ...ಸಿಡಿ ಮದ್ದು ಸಿಡಿದಂತ  ಸದ್ದಿಗೆ
ಇಬ್ಬರೂ ಹೆದರಿ ಬಿಟ್ಟರು ...
ರಘು ಎದ್ದು ಕಿಟಕಿಯ ಬಳಿ ಹೋಗಿ ನೋಡಿ ...
ಏನಿಲ್ಲ ಹೆದರ ಬೇಡ ಕೆಳಗೆ ಹುಡುಗರು ಕ್ರಿಕೆಟ್ ಆಡ್ತಾ ಇದ್ದಾರೆ
ಆ ಬಾಳ್ ಬಿದ್ದು ಗ್ಲಾಸ್ ಒಡೆದಿದೆ ಅಷ್ಟೇ .....
ಮತ್ತೆ ಅವಳ ಹತ್ತಿರ ಬಂದವನು ಒಳ್ಳೆಯ ನಿರ್ಧಾರ ತಗೊಂಡೆ ಲಾವಣ್ಯ ..
ನಾನು ಹೋಗಿ ಡಾಕ್ಟರ್ ಹತ್ರ ಮಾತಾಡ್ತೀನಿ ...ನಿನ್ನ ರಿಪೋರ್ಟ್ ಕೊಡು
ರಿಪೋರ್ಟ್ ಅವನ ಕೈಗಿಟ್ಟು ...
ರಘು ನೀನು ನನ್ನ ಕೈ ಬಿಡಲ್ಲ ತಾನೇ ?
ಹೇಯ್  ಹುಚ್ಚಿ  ನಿನ್ನ ಕೈ ಬಿಡೋ ಹಾಗೆ ಇದಿದ್ರೆ ಇಷ್ಟು ದಿನ ನಿನ್ನ ಬಗ್ಗೆ ನೆನಸ್ಕೊಂಡು
ತಲೆ ಕೆಡಿಸಿಕೊಳ್ತಾ ಇರ್ಲಿಲ್ಲ ಹಾಗೆ ನಿನಗೆ ಎಲ್ಲಾ ವಿಷಯನ ಕೂಡ ಹೇಳ್ತಾ ಇರ್ಲಿಲ್ಲ
ನಿನ್ ಅಂದ್ರೆ ನನಗೆ ತುಂಬಾ ಇಷ್ಟ ನಿನ್ ಇಲ್ಲದ ಒಂದು ಬದುಕನ್ನ
ನನ್ನಿಂದ ಊಹಿಸಿಕೊಳ್ಳಕ್ಕೂ ಆಗಲ್ಲ  ಅರ್ಥ ಮಾಡ್ಕೋ
ಆದಷ್ಟು ಬೇಗಾ ನಿನ್ನ ಮದುವೆ ಆಗಿ ಮನೆ ತುಂಬಿಸಿಕೊಳ್ಳಬೇಕು ಅನ್ನೋದೇ ನನ್ನ ಆಸೆಯೂ ಸಹ!
ಸರಿ ರಘು ನನಗೆ ನಿನ್ನ ಮೇಲೆ ಪೂರ್ಣವಿಶ್ವಾಸ ಇದೆ ...
ಗುಡ್ ನಾನು ಈಗ ಡಾಕ್ಟರ್ ನೋಡಿ ಮಾತಾಡ್ತೀನಿ ನೀನು ಬೆಳಗ್ಗೆನೇ ರೆಡಿ ಆಗಿರು..
ಆಯಿತು ..
ಮೊದಲು ನಿನಗೆ ಅಂತ ನಿನ್ನ ಇಷ್ಟದ ಊಟ ತಂದಿದ್ದೀನಿ ಊಟ ಮಾಡಿ ರೆಸ್ಟ್ ತಗೋ
ಏನಾದ್ರೂ ಬೇಕು ಅಂದ್ರೆ ನನಗೆ ಕಾಲ್ ಮಾಡು..ಆಯ್ತಾ ಟೇಕ್ ಕೇರ್..
ಓಕೆ ಓಕೆ ...
ಕೆಳಗಿಳಿದು ಬಂದು ಕಾರಿನೊಳಗೆ ಕೂತು ಕಿಟಕಿಯಿಂದ ಮೇಲೆ ನೋಡಿದ
ಅವಳು ಅವನ್ನನ್ನೇ  ಬಾಲ್ಕನಿಯಿಂದ ನೋಡುತ್ತಾ ನಿಂತಿದ್ದಳು ...
ನಗುತ್ತಲೇ .
ಮೊದಲು ನಿನ್ನ ಹೊಟ್ಟೆನ ತೊಳಸ್ತೀನಿ ಆಮೇಲೆ ನಿನ್ನೇ. ಕೈ ತೊಳಿತೀನಿ!
ಮನದೊಳಗೆ ಅಂದು ಕೊಂಡು ಹೋಗಿಬರುತ್ತೇನೆಂದು ಕೈಯಾಡಿಸಿ
ಡಾಕ್ಟರ್ ಸುಧಾಳ ನೋಡಲು ಬಂದ ...
ರೂಂ ನಲ್ಲಿ ಅವರಿಬ್ಬರೇ ಮಾತನಾಡುತ್ತಾ ಇದ್ದರು!...
ನನ್ನಿಂದ ಆಗಲ್ಲ ರಘು!
ಯಾಕೆ ಸುಧಾ ಹೀಗೆ ಹೇಳ್ತಾ ಇದ್ದೀರಾ ?
ಅವರಿಗೆ ಐದೂವರೆ ತಿಂಗಳು ಆಗಿದೆ ಈಗ ಏನಾದರೂ ಅಬಾರ್ಶನ್  ಮಾಡಕ್ಕೆ ಟ್ರೈ ಮಾಡೋದು
ಅವರ ಜೀವದ ಜೊತೆ ಆಟ ಆಡೋದು ಎರಡೂ ಒಂದೇ!..
ಬಟ್ ಏಳು ತಿಂಗಳು ತುಂಬಿರುವವರಿಗೆ ಕೂಡ
ಅಬಾರ್ಶನ್ ಮಾಡಿಸಿರೋದನ್ನ ನಾನೇ ನೋಡಿದ್ದೀನಿ ....
ಹೌದು ರಘು ಮಾಡ್ತಾರೆ ಆದರೆ ಅದು ಅವರ ದೈಹಿಕ ಸಾಮರ್ಥ್ಯದ ಮೇಲೆ ಡಿಸೈಡ್ ಆಗುತ್ತೆ ..
ಆಮೇಲೆ ಆ ಪೈನ್ ಅವರಿಂದ  ಸಹಿಸಿಕೊಳ್ಳಕ್ಕೆ ಆಗ್ಲಿಲ್ಲಾಂದ್ರೆ ತುಂಬಾ ಅಪಾಯವಿದೆ ...
ಓಹ್ ಆಗಿದ್ರೆ ಲಾವಣ್ಯ ಕೂಡ ಒಳ್ಳೆಯ ಆರೋಗ್ಯವಾಗಿ ಇದ್ದಾಳೆ ಅಂಡ್ ದೈಹಿಕವಾಗಿ ಕೂಡ ಸ್ಟ್ರಾಂಗ್ ಇದ್ದಾಳೆ ....
ನೀವು ಆ ಚಿಂತೆ ಬಿಡಿ ಸುಧಾ ಇದೇನು ನಿಮಗೆ ಹೊಸದ  ಹೆದರಕ್ಕೆ ?
ಇದಕ್ಕೂ ಮೊದಲೇ ನೀವ್ ಕರ್ಕೊಂಡು ಬಂದ ಇಬ್ಬರಿಗೆ ಅಬಾರ್ಶನ್ ಮಾಡಿದ್ದೀನಿ
ಬಟ್ ಆ ಕೇಸ್ ನಲ್ಲಿ ಅವರಿಗೆ ಮೂರು ತಿಂಗಳಾಗಿತ್ತು ಅಷ್ಟೇ ಇದು ಹಾಗಲ್ಲ ...
ಚೂರು ಹೆಚ್ಚು ಕಡಿಮೆ ಆದ್ರೂ
ನನ್ನ ಮೆಡಿಕಲ್ ಕೆರಿಯರ್ ಗೆ ಒಂದು ದೊಡ್ಡ ಬ್ಲಾಕ್ ಮಾರ್ಕ್ ಆಗುತ್ತೆ.!
ನೀವು ಆ ಹುಡುಗಿನ ಪ್ರೀತಿಸುತ್ತಾ ತಾನೇ ಇದ್ದೀರಾ ನೀವೇ ಮದುವೆ ಆಗಬಹುದಲ್ವ ?
ಏನು ಮದುವೇನ ? ಲಾಸ್ಟ ಟೈಮ್ ಇಬ್ಬರನ್ನ ಕರ್ಕೊಂಡು ಬಂದೆ ನೋಡಿ
ಆ ಹುಡುಗಿರನ್ನಾದರೂ ಮದುವೆ ಆಗಬಹುದಿತ್ತು ಒಂದು ವೇಳೆ ಆಗಲೇ ಬೇಕು ಅಂತ ಬಂದಿದ್ರೆ ಬಟ್ ಈ ಹುಡುಗಿನ ಚಾನ್ಸೇ ಇಲ್ಲಾ ಬಿಡಿ ....
ನಮ್ಮ ಎತ್ತರಕ್ಕೆ ಅವರು ಎಣಿ ಇಟ್ರೂ ಎಟುಕ್ಕಲ್ಲ.....
ಏನೋ ಅಂದಕ್ಕೆ ಆಸೆ ಪಟ್ಟು ಲವ್ ಮಾಡಿ ಬಿಟ್ಟೆ ಅಷ್ಟೇ ....
ನಾನ್ ಅವಳನ್ನ ಮುಟ್ಟಿರೋದಕ್ಕೆ ಇರೋದು ಅದೊಂದು ಸಾಕ್ಷಿ ಅದನ್ನು ಇಲ್ಲ ಅನ್ನಿಸಿ ಬಿಟ್ರೆ
ಆಮೇಲೆ ....ಮದುವೆ ಆಗು ಎನ್ನುವಾಗ ಹಣ ಕೈಗಿಟ್ಟು ಕಳಿಸಿದ್ರೆ ಹೋಗ್ತಾರೆ  .....
ನಮ್ಮನ್ನ ಎದುರು ಹಾಕಿಕೋಲ್ಲಕ್ಕೂ ಆಗಲ್ಲ!
ನಿಮಗೆ ಯಾವುದೇ ಭಯ ಬೇಡ ನಾನ್ ಇದ್ದೀನಿ ನಿಮ್ನ ಅಷ್ಟು ಸುಲಭವಾಗಿ ಆಗಿ ಬಿಟ್ಟು ಬಿಡಲ್ಲ
ನಿಮ್ಮ ಹಿಂದೆ  ನಾನ್ ಇರೋದು ಯಾರಿಗೂ ಗೊತ್ತಿಲ್ಲ ಸೊ ನಾನ್ ನಿಮ್ನ ಯಾವದೇ ಕಾರಣಕ್ಕೂ
ತೊಂದರೆಗೆ ಸಿಳುಕಕ್ಕೆ ಬಿಡಲ್ಲ ..
ಈಗ ಈ ಹಣ ತಗೋಳಿ (ಒಂದು ಲಕ್ಷದ ಹಣದ ಕಂತೆಯ ಮುಂದಿಟ್ಟ,
 ಅದನ್ನು ತೆಗೆದುಕೊಂಡು)
ಏನೋ ನೀವು ಇದ್ದೀರಾ ಅಂತ ನಾನ್ ನಿಮ್ಮ ಮಾತಿಗೆ ಒಪ್ತಾ ಇದ್ದೀನಿ ...!
ನಾನ್ ಇದ್ದೀನಿ ಇರ್ತೀನಿ , ಓಕೆ ಡಾಕ್ಟರ್ ನಾಳೆ ನಾನ್ ಲಾವಣ್ಯಳ ಕರ್ಕೊಂಡು ಬರ್ತೀನಿ
ಬೈ ..........
ನಾನು ಬೆಳಗ್ಗೆ ಎಲ್ಲಾ ಏರ್ಪಾಡು ಮಾಡಿರ್ತೀನಿ ಬನ್ನಿ...
ಬೆಳಗ್ಗೆ ಹನ್ನೊಂದಕ್ಕೆ ಅವಳ ಜೊತೆ ಬಂದು ಯಾರಿಗೂ ಕಾಣಬಾರದೆಂದು ಆಸ್ಪತ್ರೆಯ ಹಿಂದೆ ಕಾರ್ ಪಾರ್ಕ್ ಮಾಡಿ ಒಳ ಕರೆದುಕೊಂಡು ಬಂದ ....
 ಸುಧಾ ,ಲಾವಣ್ಯಳ ಅಪರೇಷನ್ ಥೇಟರ್ ಗೆ ಕರೆದೊಯಿದಳು..
ರಘು ಹೊರಗೆ ಕುಳಿತು ಕಾಯುತ್ತಿದ್ದ ..
ಒಂದು ಗಂಟೆಗಳ ಬಳಿಕ ನರ್ಸುಗಳು ಅತುರಕಾತುರದಿಂದ ಒಳ-ಹೊರಗೆ  ಅಪರೇಷನ್ ಥೇಟರ್ ಗೆ
ಹೋಗಿ ಬರುತ್ತಿದ್ದರು ....ಇದಾದ ಒಂದು ಗಂಟೆಗಳ ನಂತರ!!
ಎಲ್ಲವನ್ನೂ ಮುಗಿಸಿ ಹೊರ ಬಂದ ಸುಧಾಳ ಮುಖ ಸಣ್ಣದಾಗಿತ್ತು !
ಏನ್  ಆಯಿತು ಡಾಕ್ಟ್ರೇ !         
ಎಲ್ಲಾ ನಮ್ಮ ಕೈ ಮಿರಿ ಹೋಯ್ತು....
ಕಣ್ಣುಗಳ ಕಿರಿದು ಮಾಡಿಕೊಂಡು
ಯಾಕ್ ಸುಧಾ ಏನ್ ಆಯಿತು ?
ಸಾರೀ ರಘು ಲಾವಣ್ಯ ಇಸ್ ನೋ ಮೊರ್!
ಓಹ್ ನೋ ಎನ್ನುತ್ತಾ ಹಾಗೆ ಕುಸಿದು ಕುರ್ಚಿಯಲ್ಲಿ ಕುಳಿತ
ತಲೆಯ ಮೇಲೆ ಕೈ ಇಟ್ಟು ಕೊಂಡಾ
ಏನ್ ಆಯ್ತು ? ?
ನನಗೆ ಏನ್ ಹೇಳೋದು ಅಂತಾನೆ ಗೊತ್ತಾಗ್ತಾ ಇಲ್ಲ ...ಎಲ್ಲವೂ ಸರಿನೆ ಇತ್ತು
ಇನೇನು ಮಗುನ ಹೊರಗೆ ತೆಗೆಯಬೇಕು ಎನ್ನುವಾಗ ಅವಳ ಹಾರ್ಟ್ ಬೀಟ್ಸ್ ಜಾಸ್ತಿ ಆಗಿ
ತೀವ್ರ ಉಸಿರಾಟದಿಂದ..ಅವಳನ್ನ ಉಳಿಸಿಕೊಳ್ಳಕ್ಕೆ ಆಗಲಿಲ್ಲ  ಹಾಗೆ  ಮಗುನ ಕೂಡ ಆಚೆ ತೆಗೆಯಕ್ಕೆ ಆಗ್ಲಿಲ್ಲಾ!
ಈಗ ಏನ್ ಮಾಡೋದು ಅಂತಾನೆ ನನಗೆ ತಿಳಿತಾ ಇಲ್ಲ ರಘು ..
ಈ ವಿಷಯ ಹೊರಗೆ ಗೊತ್ತಾದ್ರೆ ನನ್ನ ಆಸ್ಪತ್ರೆ ಗೆ ಸೀಲ್ ಬೀಳುತ್ತೆ  ಹಾಗೆ ನನ್ನ ಮೆಡಿಕಲ್ ಕೆರಿಯರ್ ಗೂ ಅಂತ್ಯ ಕಾಣಿಸ್ತಾರೆ ....ನನಗೆ ಕೈ ಕಾಲ್ ಓಡ್ತಾ ಇಲ್ಲ ಈ ಟೆನ್ಷನ್ ಗೆ !
ಎಲ್ಲವನ್ನು ಒಂದೇ ಉಸಿರಿಗೆ ಹೇಳಿ ಮುಗಿಸಿದಳು ...
ಕೂಲ್ ಕೂಲ್ ಸುಧಾ ನನಗೆ ತುಂಬಾ ಟೆನ್ಷನ್ ಆಗ್ತಾ ಇದೆ ನೀವ್ ಬೇರೆ ಟೆನ್ಷನ್ ಮಾಡ್ಬೇಡಿ
ಇದಕ್ಕೆಲ್ಲಾ ಏನ್ ಮಾಡೋಣ ಅಂತ ನಾನ್ ಯೋಚನೆ ಮಾಡ್ತೀನಿ
ನೀವ್ ಹೆದರ ಬೇಡಿ ...ನನ್ನ ಸ್ವಲ್ಪ ಒಬ್ಬನೇ ಯೋಚನೆ ಮಾಡಕ್ಕೆ ಬಿಡಿ ಎಂದು .
ಎದ್ದು ಹೊರಗೆ ಪೇಷಂಟ್  ಗಳು ಕುಳಿತುಕೊಳ್ಳುವ ಕುರ್ಚಿಯಲ್ಲಿ ಕುಳಿತು ಮುಂದೇನು ಮಾಡುವುದು ಎಂದು ಯೋಚಿಸುವಾಗ ಅವನ ಟೆನ್ಷನ್ ಇನ್ನು ಹೆಚ್ಚು ಮಾಡುವ ಹಾಗೆ
ಎದುರಿನ ಕೂಗಳತೆ ದೂರದಲ್ಲಿ  ಅವರಣ್ಣ !!! ವಾಸುದೇವ್!
ಅಯ್ಯೋ ಇವ್ನು ಇಲ್ಲಿಗೆ ಯಾಕ್ ಬಂದ ಎಂದವನು ಎದ್ದೋ ಬಿದ್ದೋ ಎಂದು
ಗೋಡೆಯ ಹಿಂದೆ ಬಚ್ಚಿಟ್ಟುಕೊಂಡ!
ಅವನ ಮೊಬೈಲ್ ಬಡಿದುಕೊಂಡಿತು ನೋಡಿದ್ರೆ ಅದು ಅಣ್ಣನ ಕಾಲ್
ಸುಧಾರಿಸಿಕೊಂಡು  ಸ್ವೀಕರಿಸಿ...
ಹಲೋ ರಘು ಎಲ್ಲಿದ್ದೀಯ ಬೇಗಾ ನಮ್ಮ ಡಾಕ್ಟರ್ ಸುಧಾ ಅವರ ಕ್ಲಿನಿಕ್ ಗೆ ಬಾ.
ಆಯಿತು ಅಣ್ಣ ನಾನು ಕೂಡ ಅಲ್ಲೇ ಪಕ್ಕದಲ್ಲೇ ಇದ್ದೀನಿ ಐದು ನಿಮಿಷದಲ್ಲಿ ಬಂದು ಬಿಡ್ತೀನಿ !
ಎಂದೇಳಿ ಬೆವತಿದ್ದ ಮುಖವನ್ನು ಕರ್ಚಿಫಿನಲ್ಲಿ ಒರೆಸಿಕೊಂಡು ಆಗಷ್ಟೇ ಅಲ್ಲಿಗೆ ಬಂದವನ ಹಾಗೆ
ವಾಸುದೇವ್ ಬೇರೆ ಕಡೆ ನೋಡುತ್ತಿರುವಾಗ ಹಿಂದೆ ಬಂದು ನಿಂತ!
ಅಣ್ಣಾ .......
ಯಾಕೋ ರಘು ನೀನೂ ಒಂತರ ಇದ್ದೀಯ ?
ಇಲ್ಲ ಅಣ್ಣ ನೀನ್ ಬೇರೆ ಬೇಗಾ ಬಾ ಅಂದ ಅದು ಆಸ್ಪತ್ರೆ ಗೆ
ಅದೇ ಟೆನ್ಷನ್ ನಲ್ಲಿ  ಸ್ವಲ್ಪ ಆತುರವಾಗಿ ಬಂದೆ ಅದಕ್ಕೆ ....
ಏನ್ ಆಯಿತು ಅಣ್ಣ ಇನೇನ್ ಇಲ್ಲಿ ?
ಅಯ್ಯೋ ರಘು ನಿಮ್ಮ ಅತ್ತಿಗೆ ಮನೆ ಕ್ಲೀನ್ ಮಾಡುವಾಗ ಮೆಟ್ಟಿಲಿನಿಂದ ಉರುಳಿ ಬಿದ್ದು
ಮೂರ್ಛೆ ಹೋದ್ಲು ಕಣೋ ಅವಳನ್ನ ತಂದು ಸೇರಿಸಿದ್ದೀನಿ
ಏನ್ ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ ಕಣೋ  ನನಗೆ ತುಂಬಾ ಭಯ ಆಗ್ತಾ ಇದೆ
ಅಣ್ಣ ಭಯ ಪಡೆದ ಅತ್ತಿಗೆಗೆ ಏನೂ ಆಗಲ್ಲ
ಡಾಕ್ಟರ್ ಏನ್ ಅಂದ್ರು ?
ನಮ್ಮ ಫ್ಯಾಮಿಲಿ ಡಾಕ್ಟರ್ ಸುಧಾ ಅವರನ್ನ ಹುಡುಕುತ್ತಾ ಬಂದೆ
ಹೌದ ಇರಣ್ಣ  ನಾನು ಹೋಗಿ ನೋಡ್ತೀನಿ  ........
ಸುಧಾಳ ಬಳಿ ಬಂದು .....
ನಮ್ಮ ಅಣ್ಣ ಬಂದಿದ್ದಾನೆ ..
ಕುರ್ಚಿಯಿಂದ ಎದ್ದು ನಿಂತಳು ...
ಭಯ ಪಡೋದು ಏನೂ ಇಲ್ಲ ಡಾಕ್ಟರ್ ..
ಮೊದಲು ನೀವು ನನ್ನ ಜೊತೆ ಬನ್ನಿ ಹೋಗ್ತಾ ಹೇಳ್ತೀನಿ ...
ನಮ್ಮ ಅತ್ತಿಗೆ ಮೆಟ್ಟಿಲಿನಿಂದ ಉರುಳಿ ಬಿದ್ದು ಮೂರ್ಛೆ ಹೋಗಿದ್ದಾರೆ ಅದಕ್ಕೆ ಅವರನ್ನ ತಂದು ಅಣ್ಣ ಇಲ್ಲಿಗೆ ಸೇರಿಸಿದ್ದಾನೆ ಅಷ್ಟೇ ನಮ್ಮ ವಿಷಯ ಏನೂ ಅವನಿಗೆ ಗೊತ್ತಿಲ್ಲ ನೀವ್ ಕೂಡ ನನ್ನ ಈಗಷ್ಟೇ ನೋಡಿದ ರೀತಿಯೇ ನಡೆದುಕೊಳ್ಳಿ  ...ಈಗ ಅಣ್ಣ ಬಂದ ನಾರ್ಮಲ್ ಆಗಿ ಮಾತಾಡಿಸಿ ..
ಎಂದು ಅವರಣ್ಣನ ಹತ್ತಿರ ಬಂದು ಇಬ್ಬರೂ ನಿಂತರು ...
ಸುಧಾ ನನ್ ವೈಫ್ ಗೆ ..
ಎಲ್ಲಾ ಹೇಳಿದ್ದಾರೆ ಮಿಸ್ಟರ್ ವಾಸುದೇವ್ ನಾನ್ ಹೋಗಿ ನೋಡ್ತೀನಿ ಎಂದು ಪಲ್ಲವಿಯ ನೋಡಲು ಸುಧಾ ಒಳಗೊದಳು .....
ಅವತ್ತು ರಾತ್ರಿ ...ಸುಧಾಳನ್ನು ರಘು ಒಬ್ಬನೇ ಬಂದು ಬೇಟಿಯಾಗಿ
ನಾಳೆ ನಾನು ಬಂದು ಬಾಡಿ ನ ತಗೊಂಡು ಹೋಗ್ತೀನಿ ...
ರಘು ಏನೂ ಪ್ರಾಬ್ಲಮ್ ಆಗಲ್ಲ ತಾನೇ ?
(ಲಾವಣ್ಯಳ ಮೃತದೇಹವನ್ನು ನೋಡುತ್ತಾ)
ಹೆಣ ಎಲ್ಲೂ ಬಂದು ಮಾತಾಡಲ್ಲ  ಡಾಕ್ಟ್ರೇ ಆದ್ರೆ ಹಣ ಮಾತಾಡುತ್ತೆ ,
ಈ ಸಲ ನಿಮಗೆ ಸ್ವಲ್ಪ ಜಾಸ್ತಿ ಟೆನ್ಷನ್ ಕೊಟ್ಟಿದ್ದಕ್ಕೆ ತಗೋಳಿ ಫೀಸ್ ಕೂಡ ಜಾಸ್ತಿನೆ ಕೊಡ್ತಾ ಇದ್ದೀನಿ ಎಂದು ಇನ್ನೊಂದು ಲಕ್ಷದ ಕಂತೆಯ ಅವಳ ಕೈಗಿಟ್ಟ...
ಬೇಡಾ ರಘು ನನಗೆ ಇದೆಲ್ಲಾ ಮೊದಲು ಯಾರಿಗೂ
ಅನುಮಾನ ಬರದೆ ಇರೋ ಹಾಗೆ ಮುಗಿದ್ರೆ ಸಾಕು ..
ಅದರ ಚಿಂತೆ ಇನ್ನು ನಿಮಗೆ ಬೇಡ ತಗೋಳಿ ಇದನ್ನ ಇಟ್ಕೋಳಿ ಎಂದು  ಬಲವಂತವಾಗಿ ಹಣ ಕೊಟ್ಟು ಹೋದ ...
ಹೀಗೆ ಹೋದವನು ಮಾರನೆಯ ರಾತ್ರಿ ಹನ್ನೊಂದಕ್ಕೆ ಬಂದು ಬಾಡಿ ತೆಗೆದುತನ್ನದೇ ಕಾರಿನಲ್ಲಿ ಹಾಕಿಕೊಂಡು ....ಅವಳು ಫ್ಲಾಟ್ ಗೆ ಹೋಗುವ ಒಂದು ನಿರ್ಜನ ಜಾಗದಲ್ಲಿ ಎಸೆದು ಅವಳ ಮುಖದ ಮೇಲೆ ಕಲ್ಲು ಎತ್ತಿ ಹಾಕಿ  ಗುರುತೇ ಸಿಗದಷ್ಟು ಮಾಡಿದ .
ಅದಾಗಲೇ  ಅವಳ ಮೇಲಿದ್ದ ಒಡವೆಗಳು ತೆಗೆಯಲ್ಪಟ್ಟಿತ್ತು ...ಹಾಗೆ ಅವಳದೇ ಗಾಡಿಯಲ್ಲಿದ್ದ ಸಾಮಾನುಗಳು ಬಿಚ್ಚಿ ಮೋರಿಗೆ ಎಸೆದು ಗಾಡಿಯನ್ನು ಅಲ್ಲೇ ಒಂದು ಪೊದೆಯಲ್ಲಿ ಬಿಟ್ಟು  ಹೋಗಿದ್ದ .
ಕೂಡಲೇ ಅಲ್ಲಿಯಿಂದ ಹೊರಟು ತನ್ನ ಬಿಳಿ ಬಣ್ಣದ ಸ್ಕೋಡ ಕಾರನ್ನು ಶೆಡ್ ನಲ್ಲಿ ನಿಲ್ಲಿಸಿ ಮಲಗಿದ ...
ಮಾರನೆಯ ದಿನ ಎಂದಿನಂತೆ ಎದ್ದು ತನ್ನ ಕಚೇರಿಗೆ ತಲುಪಿದ ..
ಸಂಜೆ ನಾಳಕ್ಕೆ ಅವನಿಗೊಂದು ಕರೆ ,ಮಾಡಿದ್ದು ಪೋಲಿಸ್!
ಸರ್ ನಿಮ್ಮ ಆಫೀಸ್ ನಲ್ಲಿ ಲಾವಣ್ಯ ಅಂತ ಯಾರಾದರೂ ವರ್ಕ್ ಮಾಡ್ತಾರ ?
ಹೌದು ಸರ್ ನಮ್ಮ ಆಫೀಸ್ ಅಕೌಟ್ ಟೆಂಟ್ ಅವರು ಯಾಕೆ ಏನ್ ವಿಷಯ?
ಸಾರೀ ಸರ್ ನೀವು ಈಗ ಸ್ವಲ್ಪ ನಿಮ್ಮ ಆಫೀಸ್ ಮಧ್ಯೆ ಇರುವ ಜನ ಓಡಾಡದ
ಪೋದೆಗಳೇ ಇರುವ ಜಾಗ ಇದೆಯಲ್ಲ ಅಲ್ಲಿಗೆ ಬರ್ತೀರಾ ?
ಖಂಡಿತ ಈಗಲೇ ಬಂದೆ ..ಎಂದು ಅಲ್ಲಿಗೆ ಬಂದ..
ಬಿಳಿಯ ಬಟ್ಟೆಯಲಿ ಮುಚ್ಚಿದ್ದ ದೇಹವನ್ನು ತೋರಿಸಿ ..
ನೋಡಿ ಸರ್ ಇವರೇನಾ ಲಾವಣ್ಯ ಅನ್ನೋರು?
ಮುಖದ ಗುರುತು ಪೂರ್ತಿ ಸಿಗದ ಸ್ಥಿತಿಯಲ್ಲಿ ಇದ್ದರೂ ..
ಗುರುತು ಅಷ್ಟೊಂದು ಸಿಕ್ತಾ ಇಲ್ಲ ಬಟ್ ಇವರನ್ನ ನೋಡಿದ್ರೆ ಅವರೇ ಅನ್ನಿಸುತ್ತೆ ...
ನಿಮಗೆ ಇವರು ಲಾವಣ್ಯ ಅಂತ ಹೇಗೆ ತಿಳಿದಿದ್ದು ?
ಎನ್ನುವ ರಘುವಿನ ಪ್ರಶ್ನೆಗೆ ..
ಸರ್ ಸ್ವಲ್ಪ ದೂರದಲ್ಲಿ ಇವರ ಗಾಡಿಯಲ್ಲಿ ಇರೋ ಸ್ಪೇರ್ ಪಾರ್ಟ್ಸ್ ನ ಬಿಚ್ಚಿಕೊಂಡು
ಗಾಡಿನ ಅಲ್ಲೇ ಬಿಟ್ಟು ಹೋಗಿದ್ದಾರೆ ಅದರ ನಂಬರ್ ಇಂದ ಇವರ ವಿಳಾಸ ಪತ್ತೆ ಹಚ್ಚಿದೋ ..
ಆಗ ಇವರು ವರ್ಕ್ ಮಾಡೋದು ನಿಮ್ಮ ಆಫೀಸ್ ನಲ್ಲಿ ಅಂತ ತಿಳಿದು ಬಂತು ...
ಇವರು ಕೆಲವು ತಿಂಗಳಿನಿಂದ ಕೆಲಸಕ್ಕೆ ಬಂದಿರಲ್ಲಿಲ್ಲ ಸರ್ ಕೇಳಿದಕ್ಕೆ ನಾನ್ ಊರಲ್ಲಿ ಇದ್ದೀನಿ ಅಂತ ಹೇಳಿದ್ರು ....ಬರಕ್ಕೆ ಇನ್ನೂ ಮೂರು ತಿಂಗಳು ಆಗುತ್ತಾ ಅಂತ ಕೂಡ ಹೇಳಿದ್ರು ಈಗ ನೋಡಿದ್ರೆ ಹೀಗೆ ಆಗಿದೆ ....
ಓಹ್ ಹೌದಾ ಇಲ್ಲಿ ಹಾಗಾಗ ದರೋಡೆ ..ಅತ್ಯಾಚಾರಗಳು ನಡೆಯುತ್ತಾ ಇರುತ್ತೆ ..
ಇದು ಕೂಡ ಅದೇ ಲಿಸ್ಟ್ ಗೆ ಸೇರುತ್ತೆ ಅನ್ಕೊಲ್ತೀನಿ ...
ಇವರ ಸಂಬಂಧಿಕರು ಇರೋದು ಎಲ್ಲಿ ?
ಸರ್ ಇವರು ಒಂದು ಹಳ್ಳಿಯಿಂದ ಸಿಟಿ ಗೆ ಬಂದು ಓದಿ ಇಲ್ಲೇ ನಮ್ಮದೇ ಆಫೀಸ್ ನಲ್ಲಿ ಕೆಲಸಕ್ಕೆ ಸೇರಿದ್ರು..ಇವರ ಮನೆಯಲ್ಲಿ ಅಮ್ಮ ಅಂಡ್ ತಮ್ಮ ಅಷ್ಟೇ ಇರೋದು ...
ಸರಿ ಅವರ ನಂಬರ್ ಕೊಡಿ ..
ಅವರೂರಿಗೆ ಕಾಲ್ ಮಾಡಿ ವಿಷಯ ತಿಳಿಸಿದ ಕೂಡಲೇ ಮಗಳ ಸಾವಿನ ಸುದ್ದಿ ಕೇಳಿ
ಅವರಮ್ಮನಿಗೆ ಅರೋಗ್ಯ ತೀರ ಹದಗೆಟ್ಟಿತು ..ಕೊನೆಗೂ ಅವಳ ದೇಹವನ್ನು ತೆಗೆದು ಕೊಂಡಳು ಹೋಗಲು ಅವಳ ತಮ್ಮ ಹಾಗೂ ಊರಿನ ಕೆಲವು ಹಿಯರು ಬಂದಿದ್ದರು ..
ಅವರ ಕೈಗೆ ದೇಹವನ್ನು ಒಪ್ಪಿಸಿ ...ತಮ್ಮ ಆಫೀಸ್ ನ ಪರವಾಗಿ ಅವಳ ಕುಟುಂಬಕ್ಕೆ ಎಂದು
ಎರಡು ಲಕ್ಷ ಕೊಟ್ಟು ಕಳುಹಿಸಿದ ರಘು!
ಅಲ್ಲಿಗೆ ಅವಳ ಕೇಸ್ ಮುಗಿಯಿತು!
ತನ್ನ ನೆನಪಿನ ದಿನಚರಿಯಲ್ಲಿ ಹಿಂದಿನ ಹಾಳೆಗಳನ್ನು ತಿರುವಿ ಹಾಕಿ ವಾಸ್ತವಕ್ಕೆ ಬಂದ ರಘು!
ಜವನ ನೋಡಿ !!!!!
ಆಗಿದ್ರೆ ನೀನು........... ನೀನು ?????   ಲಾವಣ್ಯ?????
ಅವಳನ್ನ ಕೊಂದಿದ್ದೇ ನಾನು!..................... ಅಪ್ಪಾ!!
ನೀವುಗಳು ಮಾಡಿದ ತಪ್ಪಿಗೆ ನನ್ನ ಯಾಕ್ ಕೊಂದ್ರಿ ?
ನೀವು ಮಾಡಿದ್ದು ಭ್ರೂಣಹತ್ಯೆ ಆತ್ಮಕ್ಕೆ ಎಲ್ಲಿದೆ ಸಾವು ?
ನನ್ನ ಆತ್ಮ ಒಂದು ಆಸರೆಗಾಗಿ ಒದ್ದಾಡುತ್ತಿದ್ದಾಗ ನನಗೆ ಸಿಕ್ಕಿದ್ದೇ ನನ್ನ ಪಲ್ಲವಿ ಅಮ್ಮನ  ಗರ್ಭ
ಅಲ್ಲೇ ನಾನು ಬೆಳೆಯಲು ಶುರು ಮಾಡಿದೆ ....
ಅಲ್ಲೂ ಕೂಡ ಗೋರಿಯ ಕಟ್ಟಲು ನೀ ನಡೆಸಿದ ಸಂಚಿನ ಬಗ್ಗೆ ಚೂರು ನೆನಪಿಸಿಕೋ!

ಗಾಬರಿಯಿಂದ ನಾನ್ ನಾನೇನ್ ಮಾಡ್ದೆ ?
ರತ್ನಮ್ಮ!!!
ಅವನ ಮುಂದಿದ್ದ ಕಾರಿನ ಗ್ಲಾಸ್ ನೆನಪಿನ ಚಿತ್ರಗಳನ್ನು ತೋರಿಸುತ್ತಿತ್ತು  !
ಅದೊಂದು ದಿನ ಆಫೀಸ್ ನಲ್ಲಿ ಅಣ್ಣನ ಫೋನ್ ಬಂತು  ...
ಸ್ವಲ್ಪ ನನ್ನ ರೂಂ ಗೆ ಬಾ ......
ಬಾಗಿಲು ತೆಗೆದು ರಘು ಒಳ ಬಂದ ...
ಅಣ್ಣಾ ......
ಹಾ ರಘು ಇವರು ರತ್ನಮ್ಮ ಅಂತ
ರತ್ನಮ್ಮನವರೆ ಇವನು ನನ್ನ ತಮ್ಮ ರಘು ಅಂತ
(ರತ್ನಮ್ಮ ಎದ್ದು ನಿಂತು)
ನಮಸ್ಕಾರ ಬುದ್ದಿ ...
ನಮಸ್ತೆ ಮಾ ..
ಇವರನ್ನ ನಮ್ಮ ಮ್ಯಾನೇಜರ್  ಸುರೇಶ್ ಕರ್ಕೊಂಡು ಬಂದಿದ್ದಾರೆ ಕಣೋ
ನಮ್ಮ ಮನೆಯಲ್ಲೇ ಇದ್ದು ಪಲ್ಲವಿನ ನೋಡಿಕೊಳ್ಳಕ್ಕೆ ...
ಓಹ್ ಹೌದಾ ಅಣ್ಣ ಒಳ್ಳೆದೇ ಆಯಿತು
ಮತ್ತೆ ವಿಷಯ ಎಲ್ಲಾ ಹೇಳಿದ್ದೀಯ ತಾನೇ ?
ಹೇಗೆ ಎಂತಾ ಅನ್ನೋದೆಲ್ಲಾ ವಿಚಾರಿಸಿದ್ದೀಯ ತಾನೇ ?
ಎಲ್ಲಾ ಹೇಳಿದ್ದೀನಿ ವಿಚಾರಿಸಿದ್ದೀನಿ ನನಗೂ ಕೂಡ ಅವರ ಮೇಲೆ ನಂಬಿಕೆ ಬಂತು
ನೋಡಕ್ಕೆ ಒಳ್ಳೆಯ ಜನರ ಹಾಗೆ ಕಾಣ್ತಾರೆ...
ಅದಕ್ಕೆ ಕೆಲಸಕ್ಕೆ ಸೇರಿಸಿಕೊಂಡೆ ಕಣೋ ...
ನೀನ್ ಮಾತಾಡಿದ್ದೀಯ ಅಂದ ಮೇಲೆ ಮುಗಿತು ಬಿಡಣ್ಣ ..
ಸರಿ ರಘು ಇವರನ್ನ ಮನೇಲಿ ಬಿಟ್ಟು ...
ಹಾಗೆ ಪಲ್ಲವಿಗೆ ಇವರ ಪರಿಚಯ ಮಾಡಿಕೊಟ್ಟು ಬಾ ....
ಆಯಿತು ಅಣ್ಣ ...
ಬನ್ನಿ ರತ್ನಮ್ಮ .....
ಕಾರಿನಲ್ಲಿ ಕೂರಿಸಿಕೊಂಡು ಹೊರಟ...ದಾರಿಯ ಮಧ್ಯೆ!!
ರತ್ನಮ್ಮನವರೆ ಹೇಗೋ ನಮ್ಮ ಮೇಲೆ ಒಂದು ಚೂರೂ ಅನುಮಾನ ಬರದೆ ಇರೋ ರೀತಿ ನೀವ್ ನಮ್ಮ ಮನೆಗೆ ಸೇರ್ತಾ ಇದ್ದೀರಾ ಮುಂದಿನ ಕೆಲಸ ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕು ..!
ಬುದ್ದಿ ಈ ನಾಟಿ ವೈದ್ಯೆ ರತ್ನಮ್ಮ ಒಂದು ಕೆಲಸ ನ ಒಪ್ಕೊಳಲ್ಲ ಒಪ್ಕೊಂಡ್ರೆ ಮಾಡಿ ಮುಗಿಸದೆ ಹಿಂದೆ ಹೆಜ್ಜೆ ಇಡಲ್ಲ ....ನೀವು ಮೊದಲೇ ಹೇಳಿದ ಹಾಗೆ ನಿಮ್ಮ ಅತ್ತಿಗೆಯ ಗರ್ಭದೊಳಗೆ ಇರೋ ಮಗು ಮುಖನ ಈ ಜಗತ್ತು ನೋಡಲ್ಲ!!!
(ಕೋಪದಿಂದ) ಹೌದು ನಂಗೆ ಅದೇ ಬೇಕಿರೋದು...ಆದ್ರೆ ನಮ್ಮ ಮೇಲೆ ಯಾವುದೇ ಅನುಮಾನ ಬರದೆ ಹೇಗೆ ಆ ಕೆಲ್ಸನ ಮುಗಿಸ್ತೀಯ ?
ಬುದ್ದಿ ಒಸಿ ಇಲ್ಲಿ ನೋಡ್ರಲ ?
(ಬಿಚ್ಚಿದ ಕಾಗದದಲ್ಲಿ ಬಿಳಿ ಪುಡಿಯ ತೋರಿಸಿದಳು)
ಏನ್ ಅದು ನೋಡಕ್ಕೆ ವಿಭೂತಿ ಥರ ಇದೆ ?
ಇದೊಂದು ನಂಚಿನ ಪುಡಿ ಬುದ್ದಿ ,ಇದನ್ನ ಹಾಲಿನಲ್ಲಿ ಬೆರೆಸಿ ಕೊಟ್ಟರೆ ಸಾಕು ಹದಿನೈದು ದಿನಗಳಲ್ಲಿ
ಗರ್ಭದೊಳಗೆ ಇರುವ ಶಿಶು ಅಲ್ಲೇ ಸಮಾಧಿ ಆಗುತ್ತೆ
ಅದನ್ನ ಹೊರ ತೆಗೆಯಲು ಪ್ರಯತ್ನಿಸುವಾಗ ತಾಯಿ ಕೂಡ ಜೀವಂತ ಉಳಿಯಲ್ಲ
ಇದು ಸಹಜ ಸಾವು ಅನ್ನಿಸಿಕೊಳ್ಳುತ್ತೆ ನಮ್ಮ ಮೇಲೆ  ಯಾರಿಗೂ ಅನುಮಾನಾನೆ ಬರಲ್ಲ!!
ಓಹ್ ಸಕ್ಕತ್ ಆಗಿದೆ ಯೋಚನೆ ...
ಆಗಿದ್ರೆ ಇದನ್ನ ಹಾಲ್ನಲ್ಲಿ ಬೆರಸಿ ಕೊಡ್ತೀಯ ?ಅವರಿಗೆ ತಿಳಿಯದ ಹಾಗೆ ?
ಇಲ್ಲ ಬುದ್ದಿ ನಾವ್ ಅವಸರ ಪಡ್ಬಾರ್ದು ..ಈ ವಿಷ  ಕೆಲಸ ಮಾಡೋದು ಐದು ತಿಂಗಳ ಗರ್ಭವತಿಗೆ ಮಾತ್ರ ...ಹಾಗೆ ಇದನ್ನ ಹಾಲಿನಲ್ಲಿ ಬೆರೆಸಿದಾಗ ಒಂದು ರೀತಿಯಯಾದ ಘಾಟು ವಾಸನೆ ಬರುತ್ತೆ ಅವರಿಗೆ ಅನುಮಾನ ಬಂದು ಕುಡಿಯೋದನ್ನ ಅರ್ಧದಲ್ಲೇ ನಿಲ್ಲಿಸಿ ಬಿಟ್ರೆ ನಮ್ಮ ಅಷ್ಟೂ ಪ್ರಯತ್ನ ಹೊಳೆಯಲ್ಲಿ ಹುಣಸೆ ಹಣ್ಣು ಕಿವಿಚಿದ ಹಾಗೆ ಆಗುತ್ತೆ .....ಅದಕ್ಕೆ ...
ನಾನು ನಿಮ್ಮ ಮನೆಗೆ ಬರ್ತೀನಿ ಮೊದಲು ನನ್ನ ಮೇಲೆ ಬಲವಾದ ನಂಬಿಕೆ ಬರೋ ಹಾಗೆ ನಡ್ಕೊಲ್ತೀನಿ .. ಐದು ತಿಂಗಳು ತುಂಬಿದ ಮೇಲೆ ಒಂದು ದಿನ ದೇವರ ಪ್ರಸಾದ ಅಂತ ಹೇಳಿ ಅವರ ಕಣ್ಣ ಮುಂದೇನೆ ಹಾಲಿನಲ್ಲಿ ಬೆರೆಸಿ ಕುಡಿಸ್ತೀನಿ ....!!!
(ಸ್ಟೇರಿಂಗ್ ಮೇಲೆ ಒಡೆದು) ಗುಡ್ ಗುಡ್ ವೆರಿ ಗುಡ್ ರತ್ನಮ್ಮ ...
ನನಗೂ ನಿನ್ನ ಮೇಲೆ ಕೊಟ್ಟಿರೋ ಕೆಲಸನ  ಹೇಗೆ ಮುಗಿಸ್ತೀಯೋ ಅಂತ ಸ್ವಲ್ಪ ಅನುಮಾನ ಇತ್ತು ಆದರೆ ಈಗ ನಿನ್ನ ಪ್ಲಾನ್ ಕೇಳಿದ ಮೇಲೆ ನನ್ನ ಕೆಲಸ ಆದಂಗೆ ಅಂತ ಅನಿಸ್ತಾ ಇದೆ ....
ನೀವ್ ಚಿಂತೆ ಬುಡಿ ಬುದ್ದಿ ನನ್ನ ಕೈಗೆ ಕೆಲಸ ಒಪ್ಪಿಸಿದ ಮೇಲೆ .........  
ಆದ್ರೆ ಇದೆಲ್ಲಾ ಯಾಕ್ ಮಾಡ್ತಾ ಇದ್ದೀರಾ ಅಂತ ಕೇಳಬೋದ?
ಇನೆನ್ನಕ್ಕೆ ಆಸ್ತಿಗೆ!! ನಮ್ಮ ಅಣ್ಣನ ಹೆಸರಿನಲ್ಲಿ ಇರೋ ಅಷ್ಟೂ ಆಸ್ತಿ ನನಗೆ ಬರಕ್ಕೆ ...
ಈಗ ಈ ಮಗು ಹುಟ್ಟಿತು ಅಂದ್ರೆ ನಾಳೆ ನನಗೇನ್ ಸಿಗುತ್ತೆ ?
ಸರಿ ಬುದ್ದಿ ಆದ್ರೆ ನಿಮ್ಮ ಅಣ್ಣ ಇನ್ನೊಂದು ಲಗ್ನ ಆದ್ರೆ ?
ಯಾರು ನಮ್ಮ ಅಣ್ಣನ ಖಂಡಿತ ಸಾಧ್ಯನೇ ಇಲ್ಲ , ನಮ್ಮ ಅತ್ತಿಗೆಗೆ ಇಷ್ಟು ವರ್ಷ ಮಗು ಇಲ್ಲದಿದ್ದಾಗ ಎಷ್ಟೋ ಜನ ಹೇಳಿದ್ರು ಯಾಕೆ ನಮ್ಮ ಅತ್ತಿಗೆನೆ ಖುದ್ದಾಗಿ ಹೇಳಿದ್ರೆ ನೀವು ಇನ್ನೊಂದು ಮದುವೆ ಆಗಿ ಅಂತ ..ಆದ್ರೆ ಅವನು ಹೇಳಿದ್ದು ಏನ್ ಗೊತ್ತಾ ?
ಮಗುನೇ ಆಗಲಿಲ್ಲಾಂದ್ರೆ ಪರವಾಗಿಲ್ಲ ನನಗೆ ನೀನು ನಿನಗೆ ನಾನು ಮಗುವಾಗಿರೋಣ ,,
ಇನ್ನೊಂದು ಮದುವೆ ಆಗೋ ವಿಷಯನ ಮಾತ್ರ ಇನ್ನೊಂದು ಸಲ ತೆಗಿಬೇಡ ಅಂದ ...
ಹೀಗೆ ನಮ್ಮಣ್ಣ ..ಅತ್ತಿಗೆ ಮಗು ಇಬ್ಬರೂ ಹೋದ್ರೆ ಅವನು ಇನ್ನೊಂದು ಮದುವೆ ಆಗಲ್ಲ ಆಗ ನಾನು ಮದುವೆ ಆಗ್ತೀನಿ ಇಡೀ ಆಸ್ತಿ ನನ್ನ ಪಾಲಿಗೆ ಸಿಗುತ್ತೆ .....
ಅದೂ ಅಲ್ಲದೆ ಅವನಿಗೆ ಎಲ್ಲಾ ಕಡೆಯೂ ಮರ್ಯಾದೆ ಜಾಸ್ತಿ ಎಲ್ಲಿ ನೋಡು ವಾಸುದೇವ್ ವಾಸುದೇವ್ ಅಂತ ನಾನ್ ಏನೇ ಮಾಡಿದರೂ ಅದು ಯಶಸ್ಸು ಆದರೂ ಕೂಡ
ನೀನ್ ಬಿಡಪ್ಪ ವಾಸುದೇವ್ ತಮ್ಮ ಮಾಡ್ದೆ ಇರ್ತೀಯ ಅಂತಾರೆ
ನನ್ನ ಸಾಧನೆಗೆ ಕೂಡ ಅವನದೇ ಬಿಂಬ!
ಅದಕ್ಕೆ ಇದಕ್ಕೆಲ್ಲಾ ಒಂದು ಫುಲ್ ಸ್ಟಾಪ್ ಇಡಬೇಕು ಅನ್ಕೊಂಡೆ ನನಗೆ ಕೊಲ್ಲಿಸೋದು ಇಷ್ಟ ಆಗಲ್ಲ ....
ಅದಕ್ಕೆ ಈ ರೀತಿಯ ಮಾರ್ಗಗಳನ್ನ ಹುಡುಕಿದೆ ...
ಅತ್ತಿಗೆ ಗರ್ಭದಲ್ಲಿ ಇರೋ ಮಗುನ ಹೇಗೆ ಮುಗಿಸೋದು ಅಂತ ನೋಡ್ತಾ ಇದ್ದಾಗಲೇ ಅಣ್ಣಾನೆ ಅದಕ್ಕೂ ಒಂದು ಮುಹೂರ್ತ ಇಟ್ಟು ಕೊಟ್ಟಾ ,
ಅವನು ಕೆಲಸದವರು ಬೇಕು ಎಂದ ಮೇಲೆ ....
ನಿನ್ನ ಮ್ಯಾನೇಜರ್ ಸುರೇಶ್ ಅವರ ಮನೆಯ ಹತ್ರ ಮನೆ ಮಾಡಿಸಿ ಇಟ್ಟೆ
ಆಮೇಲೆ ನಮ್ಮ ಮ್ಯಾನೇಜರ್ ಮೂಲಕ ನಿಮ್ಮನ್ನ ಮನೆಯೊಳಗೇ ಬರೋ ಹಾಗೆ ಮಾಡ್ದೆ ...
ತಪ್ಪೇ ಮಾಡಿದ್ರೂನೂ ಅದನ್ನ ತಪ್ಪೇ ಇಲ್ಲದ ಮಾಡೋನು ನಾನು!
ಇದೆಲ್ಲಾ ಒಂದು ಚೂರೂ ಹೊರಗೆ ಗೊತ್ತಾಗಬಾರದು ರತ್ನಮ್ಮ
ಆಮೇಲೆ ನಾನ್ ಏನ್ ಮಾಡ್ತೀನೋ ನನಗೆ ಗೊತ್ತಿಲ್ಲಾ ....
ಅಯ್ಯೋ ಬುದ್ದಿ ನಾನು ಈ ಕೆಲಸನ ಒಪ್ಪಿಕೊಂಡ ಮೇಲೆ ಇದರಲ್ಲಿ ನನ್ನದೂ ತಪ್ಪಿದೆ ತಾನೇ ನಾನ್ ಹೊರಗೆ ಹೇಳಿದ್ರೆ ನಾನು ಸಿಕ್ಕಿ ಬೀಳ್ತೀನಿ ....
ನಮ್ಮವ್ವನ ಆಣೆ  ಯಾರಿಗೂ ಹೇಳಕಿಲ್ಲ ....
ಸರಿ ಸರಿ .......ಈಗ ....
ಮನೆ ಬಂತು ಏನೂ ತೋರಿಸಿಕೊಳ್ಳದೆ ಒಳಗೆ ಬಾ ......
ಗಾಡಿ ಮನೆಯ ಮುಂದೆ ಬಂದು ನಿಂತಿತು ..
ಬನ್ನಿ ಒಳಗೆ ...
ಅತ್ತಿಗೆ .........ಅತ್ತಿಗೆ .....
ಮಹಡಿಯಿಂದ ಇಳಿದು ಬಂದಳು ಪಲ್ಲವಿ ..
ಅತ್ತಿಗೆ ಇವರ ಹೆಸರು ರತ್ನಮ್ಮ ಅಂತ ಇನ್ ಮುಂದೆ ಇವರೇ ನಿಮ್ನ ಮನೇಲೆ ಇದ್ದು ನೋಡಿಕೊಳ್ಳುತ್ತಾರೆ ....
ಇವರನ್ನ ನಮ್ಮ ಮ್ಯಾನೇಜರ್ ಸುರೇಶ್ ಅವರ ಕರ್ಕೊಂಡು ಬಂದಿರೋದು
ಅಣ್ಣ ಎಲ್ಲಾ ಮಾತಾಡಿ ಇವರನ್ನ ಕೆಲಸಕ್ಕೆ ಸೇರಿಸಿಕೊಂಡ ...
ಓಹ್ ಹೌದಾ ಸರಿ ರಘು ...
ಬನ್ನಿ ಮ ಕುಳಿತುಕೊಳ್ಳಿ
ಇರ್ಲಿ ಅಮ್ಮೊರೆ ....
ಮತ್ತೆ ರತ್ನಮ್ಮ ಇವರ ಹೆಸರು ಪಲ್ಲವಿ ಅಂತ ಇವರನ್ನೇ  ನೀವು  ನೋಡಿಕೊಳ್ಳಬೇಕಾಗಿರುವುದು ..
ತುಂಬಾ ಜೋಪಾನವಾಗಿ ನೋಡಿಕೊಳ್ಳಿ ...
ಆಯಿತು ಬುದ್ದಿ ನಿಮ್ಮ ಅಣ್ಣ ಎಲ್ಲಾ ವಿಷಯ ಹೇಳಿದ್ದಾರೆ ನಾನು ತುಂಬಾ ಚೆನ್ನಾಗಿ ನೋಡ್ಕೊಳ್ತೀನಿ ..
ಸರಿ ಅತ್ತಿಗೆ ನಾನು ಬರ್ತೀನಿ .....
ಆಯಿತು ರಘು ......

ಈಗ ಗೊತ್ತಾಯಿತಾ ನೀನ್ ಏನ್ ಏನ್ ಮಾಡ್ದೆ ಅಂತಾ .........
ಆದ್ರೆ ನಾನ್ ಏನ್ ಏನ್ ಮಾಡ್ದೆ ಅಂತ ನಿನಗೆ ಗೊತ್ತಿಲ್ಲ ಅಲ್ವ .........
ನನ್ನ ಕೊಲ್ಲಿಸಕ್ಕೆ ಹೊರಟ ಲಾವಣ್ಯ !
ನನ್ನ ಕೊಂದ ಸುಧಾ!
ನನ್ನ ಮತ್ತೊಂದು ಜನ್ಮವನ್ನೂ ಕಣ್ ಬಿಡುವ ಮುನ್ನವೇ ಕೊನೆಗಾಣಿಸೋಕ್ಕೆ ಬಂದಿದ್ದ ರತ್ನಮ್ಮ!
ಹಹಹ್ಹಹ ಹೀಗೆ ಎಲ್ಲರಿಗೂ ಮುಕ್ತಿ ತೋರಿಸುತ್ತಾ ಬಂದ ನನಗೆ ಉಳಿದ್ದು ನೀನು ಮಾತ್ರ ನೀನೇ ಇಷ್ಟಕ್ಕೂ ಮೂಲ ಕಾರಣ! ಈಗ ನಿನ್ನ ಉಸಿರನ್ನೂ ನಿಲ್ಲಿಸೋ ಸಮಯ ಅಪ್ಪಾ!
ಇಷ್ಟು ವರ್ಷ ನಿನ್ನ ಉಳಿಸಿದ್ದು ನನ್ನ ಬಾಯಿಯಿಂದಾನೆ ನೀನು ಮಾಡಿದ ತಪ್ಪುಗಳನ್ನ ಹೇಳಿ ಕೊಲ್ಲಬೇಕು ಅಂತ ನೀನ್ ಕೂಡ ಅವರುಗಳ ಹಾಗೆ ಕಾರಣವೇ ಗೊತ್ತಿಲ್ಲದೇ ಸಾಯೋದು ನನಗೆ ಇಷ್ಟ ಇಲ್ಲಾ (ಎನ್ನುವ ಜವನ ಮುಖ ಕೆಂಡ ಕಾರುವ ಜ್ವಾಲಾಮುಖಿಯಂತೆ ಕೆಂಪಾಗಿತ್ತು)
ಬೇಡಾ ಪ್ಲೀಸ್ ನನ್ನ ಏನೂ ಮಾಡ್ಬೇಡ ಬೇಡಾ ... ಪ್ಲೀಸ್...
ಏನೂ ತಪ್ಪ್ ಮಾಡ್ದೆ ಇರೋ ನನ್ನ ಕೊಲ್ಲಕ್ಕೆ ನಿಮಗೆ ಅಧಿಕಾರ ಇದೆ ಎನ್ನುವಾಗ
ಇಷ್ಟೆಲ್ಲಾ ತಪ್ಪುಗಳನ್ನ ಮಾಡಿರೋ ನಿಮ್ಮನ್ನ ಕೊಲ್ಲಕ್ಕೆ ನನಗೆ ಅಧಿಕಾರವಿಲ್ವ ?
(ಎಂದೇಳಿ ಸೀಟ್ ಬೆಲ್ಟ್ ಹಾಕಿಕೊಂಡು ಆಕ್ರೋಶದಿಂದ ಕೈಯಲ್ಲಿ ಹಿಡಿದ್ದಿದ್ದ  ಗೊಂಬೆಯ ಕತ್ತನ್ನು ತಿರುವಿದ ಕಾರಿನ ವೇಗ ತೋರಿಸುವ ಮುಳ್ಳು 120ರಲ್ಲಿ ಬಂದು ನಿಂತಿತು!)

ಒಂದು ತಾಸುಗಳ ನಂತರ ................
ವಾಸುದೇವನ ಮೊಬೈಲ್ ಗೊಂದು ಕರೆ....
ಹಾಲೋ .......
ಹಾಲೋ ಸರ್ ನಾನು ಇನ್ಸ್ಪೆಕ್ಟರ್  ಕಿರಣ್ ಕುಮಾರ್ ಮಾತಾಡ್ತಾ ಇದ್ದೀನಿ ..
ವೈಟ್ ಕಲರ್ 3747 ನಂಬರಿನ ಸ್ಕೋಡ ನಿಮ್ಮದೇನ ?
ಹೌದು ಸರ್ ನನ್ನ ತಮ್ಮನ ಗಾಡಿ ಯಾಕ್ ಸರ್ ಏನ್ ಆಯ್ತು ?
ಸಾರೀ ಸರ್ ಆ ಕಾರಿಗೆ ಹೆದ್ದಾರಿಯಲ್ಲಿ ಅಪಘಾತವಾಗಿದೆ ...
ಅಯ್ಯೋ ಏನು ಸರ್ ಏನ್ ಹೇಳ್ತಾ ಇದ್ದೀರಾ ?
ದಯವಿಟ್ಟು ನೀವು ಸ್ಪಾಟ್ ಗೆ ಬಂದ್ರೆ ಒಲ್ಲದು ಸರ್ ..
ನಾನ್ ಈಗಲೇ ಬರ್ತೀನಿ ..ಎಂದು ಪಲ್ಲವಿಗೂ ಕೂಡ ವಿಷಯ ತಿಳಿಸದೇ
ಅಪಘಾತವಾದ ಸ್ಥಳಕ್ಕೆ ಬಂದ ನೋಡಿದರೆ ಕಾರಿನ ಮುಂಭಾಗ ನಚ್ಚುಗುಚ್ಚಾಗಿತ್ತು ..
ಅದ ಕಂಡೊಡನೆ ಹಣೆಯಲ್ಲಿ ಭಯದ ಬೆವರಿನ ಹನಿಗಳು ...
ಸರ್ ನೀವೇನ ವಾಸುದೇವ್ ..
ಹೌದು ........
ಈಗ ನಿಮಗೆ ಕಾಲ್ ಮಾಡಿದ್ದು ನಾನೇ...
ನನ್ನ ತಮ್ಮ ನನ್ನ ತಮ್ಮನಿಗೆ ಏನ್ ಆಯ್ತು ?
ಬನ್ನಿ ...ಇಲ್ಲಿ ನೋಡಿ (ಎಂದು ಬಿಳಿ ಬಟ್ಟೆಯಲ್ಲಿ ಮುಚ್ಚಿದ ಶವದ ಮುಖ ತೋರಿಸಿದರು,ಅಪಘಾತದ ರಭಸಕ್ಕೆ ಮುಖ ಜಜ್ಜಿ ಹೋಗಿತ್ತು ಹಾಕಿದ್ದ ಅಂಗಿ ಹಾಗೂ ವಾಚ್ ಒಡವೆಗಳ ನೋಡಿ ಅದು ರಘುವೆ ಎಂದು ತಿಳಿದ ಕೂಡಲೇ ಹೆಣದ ಕಾಲ ಬಳಿ)
ಅಯ್ಯೋ  ಅಯ್ಯೋ ರಘು ನನ್ನ ಬಿಟ್ಟು ಹೋಗ್ಬಿಟ ಅಯ್ಯೋ ನನಗೆ ಅಂತ ಇದ್ದ ಒಂದೇ ಒಂದು ಸಂಬಂಧ ಕಣೋ ನೀನು ..ನನ್ನ ಅನಾಥ ಮಾಡಿ ಬಿಟ್ಟಲ್ಲೋ ರಘು ರಘು ....
ಎಂದು ಮುಗಿಲ ಮುಟ್ಟುವ ಹಾಗೆ ಗೊಲಾಡುತ್ತಿದ್ದವನ ನೆನಪಿಗೆ ..
ಅವನೊಂದಿಗೆ ಹೊರಟಿದ್ದ ತನ್ನ ಮಗ ನೆನಪಾದ ...ಆ ಸಾವಿನ ಆಘಾತಕ್ಕೆ ಎದ್ದು ನಿಲ್ಲುವ ಶಕ್ತಿಯೂ ಇಲ್ಲದಂತಾಯಿತು ... ಹಾಗೆ ಎದ್ದು ಮೆಲ್ಲನೆ ಇನ್ಸ್ಪೆಕ್ಟರ್ ಹತ್ತಿರ ಬಂದು ...
ಸರ್ ಸರ್ ಇದೆ ಕಾರಿನಲ್ಲಿ ನನ್ನ ಮಗ ಕೂಡ ಬರ್ತಾ ಇದ್ದ ಸರ್ ?
ನನ್ನ ಮಗು ಎಲ್ಲಿ ಅವನಿಗೆ ಏನ್ ಆಗಿದೆ ಸರ್?
ಹೌದು ಕಾರಿನೊಳಗೆ ಒಂದು ಮಗು ಕೂಡ ಇತ್ತು, ಅಲ್ಲಿ ನೋಡಿ ...
ಎಂದು ಒಂದು ಮರದಡಿಯ ತೋರಿಸದರು ..
ಮರದ ನೆರಳಿನ ಮೇಲೆ ರುಂಡವಿಲ್ಲದ .....
ಗೊಂಬೆಯ ಹಿಡಿದು ಸಣ್ಣ ಪುಟ್ಟ ತರಚಿದ ಗಾಯಗಳೊಂದಿಗೆ ಕುಳಿತಿದ್ದ ಜವ!!
ಅವನ ಕಂಡ ಕೂಡಲೇ ಅವನಲ್ಲಿಗೆ ಓಡಿ ಹೋಗಿ ಅವನ ಎತ್ತಿಕೊಂಡು ಮುದ್ದಾಡಿದ ..
ನಿನಗೇನೂ ಆಗಿಲ್ಲ ಅಲ್ವ ಪುಟ್ಟ ಎಂದು ಕೇಳಿದವನಿಗೆ ....
ಇಲ್ಲ ಅಪ್ಪ!!! ಎಂದು ಉತ್ತರಿಸಿದ
ಅದುವೇ ಅವನು ಬಾಯಿ ತೆರೆದು ವಾಸುದೇವನ ಮುಂದೆ ಮಾತನಾಡಿದ ಮೊದಲ ಪದ!
ಅದರ ಖುಷಿಯ ಕೂಡ ಮುಖದಲ್ಲಿ ತೋರಿಸದಷ್ಟು ದುಃಖವೇ ಹೆಪ್ಪುಗಟ್ಟಿತ್ತು ವಾಸುದೇವನಿಗೆ..
ಮಗುವನ್ನು ಎತ್ತಿಕೊಂಡು ಭಾರವಾದ ಮನಸಿನೊಂದಿಗೆ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದ ...
ಅಪ್ಪನ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದವನು ಬಿಳಿ ವಸ್ತ್ರದಲ್ಲಿ ಮುಚ್ಚಿದ್ದ ರಘುವಿನ ಶವ ಕಂಡ ಕೂಡಲೇ ತಲೆ ಎತ್ತಿ  ಕೊನೆಯ ಬಾರಿಗೆ ಒಂದು ಮಗುಳುನಗೆಯ ಹೂವಿಟ್ಟ ಜವ...!

ಮುಕ್ತಾಯ......!


ಈ ಕಥೆಯಲ್ಲಿ ಬರುವ ಪಾತ್ರಗಳು,ಸನ್ನಿವೇಶಗಳು
ಕೇವಲ ನನ್ನ ಕಾಲ್ಪನಿಕವಾಗಿರುತ್ತದೆ ...
ಯಾವುದೇ ನಿಜ ಜೀವನಕ್ಕೆ ಸಂಬಂಧಿಸಿರುವುದಿಲ್ಲ!
-ಪ್ರಕಾಶ್ ಶ್ರೀನಿವಾಸ್
TIP:easy2comment
Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು  ಕಾಮೆಂಟ್  ಮಾಡಿ!


52 comments:

  1. ಕಥೆ ಚೆನ್ನಾಗಿದೆ... ಮುಂದುವರಿಸಿ ಏನಾಗಿದೆ ಎಂಬ ಕುತೂಹಲ

    ReplyDelete
  2. ಒಳ್ಳೆ ರೀತಿಯಲ್ಲೇ ಶುರುವಾಗಿದೆ ಕುತುಹಲ ಮುಂದುವರೆಸಿ

    ReplyDelete
  3. kathe thumba interesting agidhe waiting for next episode

    ReplyDelete
  4. Deepika...
    Munde???

    ReplyDelete
  5. whaw super ide anna adre avlige enagide anno kuthuhala jasti agide bega continue madi anna

    ReplyDelete
  6. Ashakka!!
    Thammaaaaa thumba interesting aagidhe Kathe. ...nice. ..next posting yaavaga?

    ReplyDelete
  7. Aathmiya deepu
    wow sakkath. mundhina sanchikeya neeriksheyali

    ReplyDelete
  8. kathe chenagide waiting for next episode...:)

    ReplyDelete
  9. thumba interesting agide.... am waiting for next episode... :)

    ReplyDelete
  10. ತುಂಬಾ ಚೆನಾಗಿದೆ ಮುಂದಿನ ಸಂಚಿಕೆಯ ನೀರಿಕ್ಷೆಯಲ್ಲಿ .............

    ಸಂತೋಷ್ ಕುಮಾರ್ .......

    ReplyDelete
  11. thumba interesting agide.... am waiting for next episode... :)

    ReplyDelete
  12. thumba channagide

    ReplyDelete
  13. thumba chennagidhe mundhina bhaga yavaga baruthe pls bega ....................

    ReplyDelete
  14. thumba chennagidhe mundhina sanchike aadhastu bega barali..............

    ReplyDelete
  15. yenidu horror thara ide?.adre chennagide.mundina bhagakkagi kayta idini :)

    ReplyDelete
  16. Ashakka
    Abbaa !!!!! Thumba ista aithu thammaa ...Monday bega barli anta kaitha idheeni :-)

    ReplyDelete
  17. Very Interesting ...........pls continue soon...........

    ReplyDelete
  18. ಭಯಂಕರ ತಿರುವು ಹಹಹ

    ReplyDelete
  19. rashmi

    wowww superr agide...... :)

    ReplyDelete
  20. Kathe thumba chennagide....

    ReplyDelete
  21. ಕಥೆ ತುಂಬಾ ಚೆನ್ನಾಗಿದೆ. ಮುಂದುವರಿಸಿ...ಮುಂದೇನಾಯ್ತು ಅನ್ನೋ ಕುತೂಹಲ ಇದೆ....

    ReplyDelete
  22. Ashakka...
    Kathe thumba chennagi barta idhe thammaa..every posting nallu ondu new twist idhe ....gr8

    ReplyDelete
  23. bahala kutoohalabharitavaagide..... munduvaresi nimage shubhavaagali....- Asha Basavaraj

    ReplyDelete
  24. tumbha interesting agi ide bega munduvaresi..... nimage ollleyadagalli.......Rajeshwari Satya

    ReplyDelete
  25. ಒಳ್ಳೇ ಕಥೆ... ಎಷ್ಟು ಜನ ಸಾಯ್ತಾರೆ ಈ ಕಥೆಲಿ.. ಹಹಹಹ...... ಸದ್ಯ ಪುಣ್ಯ ನಾನು ಬೆಳಗಿನ ಹೊತ್ತು ಓದುತಿದ್ದೇನೆ ರಾತ್ರಿ ಆಗಿದ್ರೆ ಕನಸಲ್ಲಿ ಈ ಕಥೆಯೇ ಬರುತ್ತಿತ್ತೇನೋ

    ReplyDelete
  26. ಈ ಬಾರಿಯ ಕಥೆ ಇನ್ನೂ ಚೆನ್ನಾಗಿ ಮೂಡಿ ಬಂದಿದೆ.ಮುಂದೇನಾಗುತ್ತೆ ಅನ್ನೋ ಕುತೂಹಲ...

    ReplyDelete
  27. Ivathu kooda Interesting agittu....nice thamma ...
    Ashakka

    ReplyDelete
  28. ಕಥೆ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಪ್ರಕಾಶ್ ಅವ್ರೆ ರತ್ನಮ್ಮನ ಸಾವು ಮತ್ತು ಜವನ ಜನ್ಮದ ಹಿಂದಿನ ರಹಸ್ಯವನ್ನು ತಿಳಿಯುವ ಕುತೂಹಲ ಮನಸಲ್ಲಿ ಮನೆಮಾಡಿದೆ...ನಿಮ್ಮ ಮುಂದಿನ ಸಂಚಿಕೆಯ ನೀರಿಕ್ಷೆಯಲ್ಲಿ......

    ReplyDelete
  29. Rajesh nayak.
    12.45 am.... nidde barde ero hage madidri...!!
    Kathe chennagi moodibandide...
    Interval tumbhane time tegedukobedi....
    Mundina sanchike adastu bega barali... dhanyavadagalu.

    ReplyDelete
  30. Kiru Prasad :
    thumba kuthhalavagithu kate praksh thumba chegidea brunathaye bage thumba chengi helidira

    ReplyDelete
  31. ಹಲವಾರು ಕುತೂಹಲಗಳ ಜೊತೆ ಜೊತೆಗೆ ಭಯ ಭೀತಿ ಹುಟ್ಟಿಸಿದ ಈ ಕಥೆ ತುಂಬಾ ಚೆನ್ನಾಗಿತ್ತು..
    @ಲತಾ ಆಚಾರ್ಯ

    ReplyDelete
  32. ಕಥೆ ತುಂಬ ಚೆನ್ನಾಗಿದೆ ಆದ್ರೆ ಬೇಗ ಮುಗ್ಸಿದ್ದು ಬೇಜಾರಾಗ್ತಿದೆ ಅಲ್ಲದೆ ಎಲ್ಲ ವಿಷಯ ನು ಅವರ ಅಣ್ಣನಿಗೆ ತಿಳಿಯಬೇಕಿತ್ತು ಇನ್ನು ಮುಂದುವರೆಸಬಹುದಿತ್ತು ತುಂಬ ಚೆನ್ನಾಗಿ ಕಥೆಯ ಕುತೂಹಲವನ್ನು ಕಾಯ್ದುಕೊಂಡಿದ್ದಕ್ಕೆ ಧನ್ಯವಾದಗಳು - Kavya Rai

    ReplyDelete
  33. Vry interesting stry prakash. First i thought it was emotional story nd then i got hookup. Twists nd turns r superb.. Introduction of Lavanyas character is drastic. Amazing srory..keep writing..

    ReplyDelete
  34. Thumbha chanagide..........thumbha istha aytu........:)

    ReplyDelete
  35. Awesome interesting story thammaa :-) thumba ista aithu...ivathina last page anthu superb ...
    Ashakka

    ReplyDelete
  36. kathe bahala kutuhala mudiside.waiting for next episode

    Kusuma

    ReplyDelete
  37. ಕೆಟ್ಟಾದಕ್ಕೆ ಕಾಲವಿಲ್ಲ ಒಂದಲ್ಲಾ ಒಂದು ದಿನ ಯಾವುದಾದರು ರೂಪದಲ್ಲಿ ತೀರಿಸಿಕೊಳ್ಳುತ್ತೆ ಎನ್ನುವುದಕ್ಕೆ ಈ ಕಥೆ ಸಾಕ್ಷಿ. ಚೆನ್ನಾಗಿದೆ

    ReplyDelete
  38. hi tumbba interesting kathe channge idhe,,


    thanks
    deepa.

    ReplyDelete
  39. ಕಥೆನ ಇನ್ನೂ ಮುಂದುವರಿಸಿದರೆ ಚೆನ್ನಾಗಿರುತ್ತೆ ಪ್ರಕಾಶ್ ಜೀ...- ಲತಾ ಆಚಾರ್ಯ

    ReplyDelete
  40. ಸಾಮಾನ್ಯವಾಗಿ ಭಯಾನಕ ಕಥೆಗಳನ್ನ ನಾನು ತುಂಬಾ ಇಷ್ಟ ಪಡುತ್ತೇನೆ ... ಭಯಾನಕ ಸಿನೆಮಾಗಳನ್ನು ನೋಡುತ್ತಿದ್ದ ನನಗೆ, ನಿಮ್ಮ ಬರವಣಿಗೆಯ ಕಥೆ ದೊರಕಿದ್ದು ಸುಮಾರು ಒಂದು ವರ್ಷದ ಹಿಂದೆ ... ನಿಮ್ಮ ಕಥೆಗಳನ್ನ ತುಂಬಾ ಇಷ್ಟ ಪಡುತ್ತೇನೆ ... ಕಥೆ ಓದುವಾಗ ಆ ಕಥೆಯಲ್ಲಿನ ಪಾತ್ರಗಳನ್ನು , ಸನ್ನಿವೇಶಗಳನ್ನು ಊಹಿಸಿಕೊಂಡು ಓದುತ್ತೇನೆ, ಆಗ ಕಥೆ ನನ್ನ ಕಣ್ಣ ಮುಂದೆ ನಡೆಯುತ್ತಿದೆಯೇನೋ ಎಂದು ಅನಿಸುತ್ತದೆ ... ಮೈ ಜುಮ್ಮೆಂದು ಭಾಸವಾಗುವ ಅನುಭವ ಆಹಾ!!! ತುಂಬಾ ಚೆನ್ನಾಗಿರುತ್ತೆ ... ಹೀಗೆ ನೀವು ಮತ್ತಷ್ಟು ಕಥೆಗಳನ್ನು ನಮಗೆ ನೀಡಬೇಕು ... ಇದು ನಿಮ್ಮ ಅಭಿಮಾನಿಯಾಗಿ ನನ್ನ ಕೋರಿಕೆ ... ಮುಂದಿನ ದಿನಗಳಿಗೆ ನಿಮಗೆ ಒಳ್ಳೆಯದಾಗಲಿ ಪ್ರಕಾಶ್ ಸರ್ ... !!!!!


    - ಲಕ್ಷ್ಮೀ ಸುಹಾನ

    ReplyDelete
  41. ಕಥೆಯ ಪ್ರತಿ ಪುಟವನ್ನೂ ಓದಿ ತಮ್ಮ ಅಭಿಪ್ರಾಯ ತಿಳಿಸುತ್ತಾ ಬಂದ ಎಲ್ಲಾ ಮಿತ್ರರಿಗೂ
    ಮನದಾಳದ ವಂದನೆಗಳು ....
    ನಿಮ್ಮೆಲ್ಲರ ಸಲಹೆ ಸೂಚನೆಗಳು ಪ್ರೋತ್ಸಾಹ ಸದಾ ಹೀಗೆ ಇರಲಿ

    ReplyDelete
  42. ಕಥೆ ತುಂಬ ಚೆನ್ನಾಗಿ ಮೂಡಿಬಂದಿದೆ :) HATS ಆಫ್ ಟು ಯು

    ReplyDelete
  43. kathe thumbaaaaaaaaa istaaaaaaaa aithu :).....

    rashmi

    ReplyDelete
  44. ಮೊದಲು ಓದೋವಾಗ ... ಮನೆ ಬೂತ ಬಂಗಲೆ ಅನ್ನಿಸ್ತು .... ಆಮೇಲೆ ಇನ್ನೇನೋ ಅಂದು ಕೊಂಡೆ ಹೀಗೆ ಕಾದು ಕಾದು ಅನತೋ ಕೊನೆಗೆ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು ಕೊನೆವರೆಗೂ ಊಹಿಸಿಯೇ ಕೂತೆ ... :) ಸೂಪರ್ ಭೂತದ ಕತೆ :)

    ReplyDelete
  45. ಇದರಲ್ಲಿ ಎರಡು ವಿಷಯ ಊಹಿಸಿದ್ದೆ, ಸೊಗಸಾದ ಮುಕ್ತಾಯ. ಮುಂದಿನ ಕಥೆಗಳನ್ನು ಓದಲು ಉತ್ಸುಕಳಾಗಿದ್ದೇನೆ...
    - ನಾಗಲಕ್ಷ್ಮಿ ಕಡೂರು.

    ReplyDelete
  46. ಎಲ್ಲರಿಗೂ ಧನ್ಯವಾದ ಗೆಳೆಯರೇ!

    ReplyDelete
  47. very goood narration :) osum climaxxxx :) cheerss!!!! - Anu M Anu

    ReplyDelete
  48. Pradeep Hegde:
    wow.... superb, mindblowing imagine.... realy too gud story...

    ReplyDelete
  49. Sowmya Prasanna: Tumba kutoohala kaydukondu odisida story..........tumba chennagide

    ReplyDelete