Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Tuesday, 25 June 2013

ದೇವತೆಯ ರೆಕ್ಕೆಯಿಂದ ಬಿದ್ದ ಗರಿಗಳು!

more ಮೇಲೆ click ಮಾಡಿ 

(ಭಾವನೆ!)
ನಿನ್ನನ್ನು ಪ್ರತಿ ಬಾರಿ ಕಾಣುವಾಗಲೂ
ಹೊಸದೊಂದು
ಕವಿತೆಯ ಓದಿದ ತೃಪ್ತಿ!

(ಪ್ರಶ್ನೆ!)
ಕಾಣದ ಹಾಗೆ
ಕನ್ನಡಿಯೂ ಕೂಡ
ಕಣ್ಣ ಹೊಡೆಯುತ್ತೇನೋ
ನಿನ್ನ ಕಂಡಾಗ!

(ಕೋರಿಕೆ)
ನಿನ್ನಯ ಅಂದದ ಅಗ್ನಿಯ ಹಿಡಿದು
ಈ ಕತ್ತಲಲ್ಲಿ ಕರಗ ಬಯಸುವ ಮೇಣ ನಾ!!

(ಆಸೆ!)
ಹಿಡಿದಿರಲೇ ಆಗದು
ಕನ್ನಡಿಯ ಎಂದು ದೂರುತ್ತಿದೆ
ನಿನ್ನ ಕೋಣೆಯ ಗೋಡೆ!
ನೀ ನೋಡುವಾಗೆಲ್ಲಾ
ನಾ ತೋರಿಸುವೆ ಕಣ್ಣಲ್ಲೇ
ನಿನ್ನೆಯ ಬಿಂಬವ
ಆ ಕೆಲಸವ
ನನಗಾದರೂ ಕೊಡುವೆಯ!

(ಸೋಲು!)
ನಿನ್ನ ಅಂದದೊಂದಿಗೆ
ಯುದ್ಧ ಮಾಡಲೆಂದೇ
ಕಾಗದದ ಆಯುಧಗಳ ಮಾಡಿ
ಚಂದದ ಕವಿತೆಯ ಕೈಯಲ್ಲಿಟ್ಟು
ಕಳುಹಿಸಿದ್ದ ನನಗೆ!
ಅವುಗಳು ಹಿಂತಿರುಗದೆ
ಇದ್ದಾಗಲೇ ಅರಿವಾಗಿದ್ದು!
ನಿನ್ನ ರೂಪದ ಮುಂದೆ ಸೋತು
ಶರಣಾಗಿ ಮಂಡಿಯೂರಿವೆಯೆಂದು!

(ನಿರಾಸೆ!)
ನಿನ್ನೆಯ ಅಂದದ
ಬಗ್ಗೆಯೇ ಎಷ್ಟೇ
ಕವಿತೆಗಳ ಬರೆದರೂ!
ಒಂದೂ ಸಹ
ನಿನ್ನ ಅಂಗೈಯ
ಚಂದದಷ್ಟು ಕೂಡ ಹುಟ್ಟಲಿಲ್ಲ!

(ರಸಿಕ!)
ನೀನೇ ಒಂದು
ಕವನ ಸಂಕಲನ!
ನಿನ್ನೊಳಗಿನ
ಅಂದದ ಕವಿತೆಗಳ
ಸವಿಯುತ್ತಲೇ
ಈ ಜನ್ಮವ
ಕಳೆಯುವೆ ನಾ!

(ಕಹಿಪಾಕ!)
ನಿನ್ನ ಅಂದದ
ಸವಿಯ ಕ್ಷಣವೂ
ಕಣ್ಣ ತುಂಬಿಸಿಕೊಂಡು
ಸವಿಯುತ್ತಿದ್ದ ನನಗೆ!
ನಿನಗೂ ಸುಂದರ
ಕವನಗಳ ಸೃಷ್ಟಿಸಿ
ನಿನ್ನಯ ಮುಂದೆ
ಸುರಿಯುವ ಬಯಕೆಯಿತ್ತು!
ಮಾಡಿ ಮುಚ್ಚಿಡುವ
ಮುನ್ನ ರುಚಿಯ
ನೋಡಿದರೆ ಎಲ್ಲವೂ
ನಿನ್ನೆಯ ಚಂದವ
ಎರುರಿಸಲು ಶಕ್ತಿಯಿಲ್ಲದೆ
ಹೆದರಿ ಕಹಿಯಾಗಿತ್ತು!

(ಹೇಳು ಹೆಣ್ಣೇ!)
ವಿತೆಗಳೆಲ್ಲವೂ ಸುಂದರ
ಎನ್ನುವುದಾದರೆ!
ಸುಂದರವಾಗಿರುವ
ನೀನೂ ಸಹ ಒಂದು ಕವಿತೆ ತಾನೇ!

(ಕವಿತೆಗಳು!)
ನದ ಪುಸ್ತಕದೊಳಗಿನ
ಪ್ರತಿ ಪುಟದಲ್ಲೂ
ನೀ ಬೀಳಿಸಿ ಕೊಂಡು ಹೋದ
ರೆಕ್ಕೆಯ ಗರಿಗಳ ಇಟ್ಟು
ಶೃಂಗರಿಸಿದ್ದೇನೆ ದೇವತೆಯೇ!

(ದೇವತೆ!)
ಣ್ಣ ಮುಚ್ಚಿ ಮಲಗಿರುವ
ಕವಿತೆಯೇ ನಿನ್ನ ಕದ್ದು
ಓದಲೆಂದೇ
ಧರೆಗಿಳಿದಿದ್ದಾನೆ ಚಂದಿರ!

ದೇವತೆ!
-------
-ನೆರಳು!
ನಿನ್ನ ಅಂದಕ್ಕೆ ಇಟ್ಟ ದೃಷ್ಟಿಬೊಟ್ಟು!
-ತೋರುಬೆರಳು!
ನನ್ನ ಬದುಕಿನ ದಿಕ್ಸೂಚಿ!
-ಮುಗುಳುನಗೆ!
ನಾ ನೆನೆದ ಮೊದಲ ಮಳೆ!
-ನಯನ!
ನನ್ನನ್ನು ಮಂತ್ರಿಸಿ ಬಂಧಿಸಲೆಂದು ನೀ ಉರುಳಿಸುವ ಕವಡೆ!
-ಹೆಜ್ಜೆಗುರುತು!
ಕಾಲಲ್ಲಿ ಬರೆದ ಕಲಾಕೃತಿ!
-ಹಲ್ಲು!
ಜೊಡಿಸಿಟ್ಟ ಮಲ್ಲಿಗೆಯ ಸಾಲು!
-ಉಬ್ಬು
ಮಳೆಯಿಲ್ಲದೆ ಮೂಡಿದ ಕಾಮನಬಿಲ್ಲು!
-ಬಳೆ
ನಿನ್ನನ್ನು ಹಿಡಿಯಲು ಬಂದಾಗೆಲ್ಲ ಕೂಗಿ ಕೊಳ್ಳುವ ಕಾವಲುಗಾರ!
-ಮೂಗು
ಮಳೆಯ ಹನಿ ಆಡಲು ಇರುವ ಜಾರಬಂಡೆ!
-ಕೇಶ!
ಬೆಳಕಲ್ಲಿ ಕಾಣುವ ಇರುಳು!

-ಪ್ರಕಾಶ್ ಶ್ರೀನಿವಾಸ್

No comments:

Post a Comment