Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Sunday, 27 May 2012

ಮೂರು! ಇದು ಮುಕ್ತಾಯವಲ್ಲ, ಆರಂಭ...!


=========================ಪುಟ12======================
ನಾವು ಪಟ್ಟ ಕಷ್ಟ........ನಾವು ಮಾಡಿದ ಅಷ್ಟೂ ಕೆಲಸಗಳು ...ವ್ಯರ್ಥ ..ಆಗ್ಲಿಲ್ಲ....
(ಜೋರಾಗಿ )
ಅಣ್ಣಾ................ನಾವು ಗೆದ್ದೋ ...!!!!
ಮೂರನೆಯ ಸುತ್ತಿನ ಮತ ಎಣಿಕೆಯಲ್ಲಿ ನಾವು 58 ಅಂತರದಿಂದ ಗೆದ್ದಿದ್ದಿವಿ ....
ಅಂತ ಹೇಳುವಾಗ,
ಅಲ್ಲಿಯವರೆಗೂ ತುಂಬಾ ಭಯದಲ್ಲಿದ್ದ ನನಗೆ
ಆ ಖುಷಿಗೆ ಕಣ್ಣಲ್ಲಿ ನೀರು ತುಂಬಿದೆ ..ಅನಂದಭಾಷ್ಮ ..........
ಕೇಳಿಸ್ತ ಇದ್ದೀಯ ಪಟಾಕಿ ಸದ್ದು...
ಕಿವಿ ಕಿತ್ತೊಗಬೇಕು ಹಾಗೆ ಹೊಡಿತ ಇದ್ದಿವಿ ಪಟಾಕಿ 
ಎಲ್ಲರ ಮುಖದಲ್ಲಿ ಖುಷಿ ಅಣ್ಣ..
ಈಗ ನಾವೆಲ್ಲಾ ಮೆರವಣೆಗೆಯಲ್ಲಿ ....
ನಿನ್ನ ನೋಡಕ್ಕೆ ಬರ್ತಾ ಇದ್ದಿವಿ ಹಾರ ...ಸಿಹಿ ಎಲ್ಲ ತಗೊಂಡು 
ರೆಡಿ ಆಗಣ್ಣ…..
ಮಾತಾಡಕ್ಕೆ ಆಗಲ್ಲ ನಾನೇ ಅಲ್ಲಿಗೆ ಬರ್ತೀನಿ ಅಂತ ಫೋನ್ ಕಟ್ ಮಾಡ್ದ ....
ನನಗೆ ಅವನ ಮಾತುಗಳನ್ನು ಕೇಳಿ ...
ನನಗೆ ಹೋದ  ಉಸಿರು ಬಂದಗಾಯಿತು .........
 ಸಂತೋಷಕ್ಕೆ ..ಇದ್ದ ಅಷ್ಟೂ ಭಯ ಮಾಯಾ ಆಯ್ತು ....
ಎಲ್ಲರೂ ಹಾರ ಹಾಕಿ, ಸನ್ಮಾನಿಸಿದರು ..
ಲಲಿತ ..
ನನಗೂ, ಗೋಪಾಲನಿಗೂ ಆರತಿ ಬೆಳಗಿದಳು ...
ಏನೋ ಹೆಮ್ಮೆ ...ಇವನಿಗೆಲ್ಲ ಯಾಕೆ ಎಲೆಕ್ಷನ್
ಅಂದವರ ಮುಂದೆ ಗೆದ್ದು  ಮೀಸೆ ತಿರಿವಿದ್ದು!
ಅವತ್ತೆಲ್ಲ ಎಲ್ಲರ ಮನದಲ್ಲಿ ಸಂತಸವೇ ತುಂಬಿತ್ತು …..
ಚುನಾವಣೆಯಲ್ಲಿ ಗೆದ್ದ ಮೇಲೆ ...
ಆ ಕೆಲಸ ಮಾಡಿಕೊಡಿ ಈ ಕೆಲಸ ಮಾಡಿಕೊಡಿ 
ಎಂದು  ಜನ ಕೆಳಕ್ಕೆ ಪ್ರಾರಂಭಿಸಿದ್ದು ನನಗೆ ಖುಷಿಯಾಯಿತು...
ಚುನಾವಣೆಗೆ ಖರ್ಚು ಮಾಡಿದ ಅಷ್ಟೂ ಹಣ ...
ಮತ್ತೆ ಸಂಪಾದಿಸಿದೆ...
ಅಡ  ಇಟ್ಟಿದ್ದ ಒಡವೆಗಳು,ಮನೆಯ ಮೂಲ ಪತ್ರ ಎಲ್ಲವನ್ನೂ ಬಿಡಿಸಿದೆ!
ಒಂದು ದಿನ ಲಲಿತ ಮನೆಯವರೆಲ್ಲ ನಮ್ಮ ಮನೆಗೆ ಬಂದಿದ್ರು ..
ನಾನು ಲಲಿತ ಒಡವೆಯನೆಲ್ಲ 
ಬಿಡಿಸಿ ಬಿರುನಲ್ಲಿ ಇಟ್ಟಿದನ್ನು
ನೋಡಿ ಖುಷಿಯಿಂದ ಲಲಿತ ...
ಎಲ್ಲ ಒಡವೆಗಳನ್ನೂ ಅವರ ಮನೆಯವರಿಗೆ ತೋರಿಸಲು ತಂದಿದ್ದಳು .....
ನಿನ್ನ ಗಂಡ ಅಷ್ಟೇ ನಿನ್ನ ಒಡವೆಗಳನ್ನ ಬಿಡಿಸಿ ಕೊಡಲ್ಲ 
ಅಂತೆಲ್ಲ ಹೇಳುತ್ತಿದ್ದ ಅವರ ನೆಂಟರಿಗೆ ತನ್ನ ಗಂಡ ಯಾರು ಅಂತ ತೋರಿಸುವುದಕ್ಕೆ!..
ಅದರ ಜೊತೆಗೆ ಅವತ್ತು ಸುಧಾ ಕತ್ತಿನಿಂದ ತೆಗೆದುಕೊಂಡಿದ್ದ ಸರ ಕೂಡ ಇತ್ತು
ಅದನ್ನ ನಾನು ಬಿರು ನಲ್ಲೆ ಇಟ್ಟಿದ್ದು ನನಗೆ ನೆನಪೇ ಇಲ್ಲ 
ಆ ಗಡಿಬಿಡಿಯಲ್ಲಿ..... ಮರೆತು ಬಿಟ್ಟಿದ್ದೆ 
ಅದನ್ನ ನನಗೆ ತೋರಿಸಿ ಲಲಿತ ಎಲ್ಲರ ಮುಂದೆ!
ಏನ್ರೀ ಇದು ನಮ್ಮ ಸರ  ತರ ಕಾಣುತ್ತಿಲ್ಲ ?
(ಎಲ್ಲರೂ ನನ್ನ ನೋಡುತ್ತಿದ್ದಾಗ)
ಹೇಯ್ ಯಾರೋ ಕಮ್ಮಿಗೆ ಮಾರಿದ್ರು ಕಣೆ 
ಹಳೆ ಚಿನ್ನ ಅಲ್ವ ಅದಕ್ಕೆ ಗಿರವಿ ಅಂಗಡಿಯಲ್ಲಿ ನಾನೆ ತಗೊಂಡೆ....
(ಎಂದು ಸುಳ್ಳು ಹೇಳಿದೆ )
ಅವತ್ತು ರಾತ್ರಿ .......ನಾನು ಗೋಪಾಲ ..ತೋಟದ ಮನೆಯಲ್ಲಿ...
ಏನ್ ಅಣ್ಣ ಊರಿನ ನಾಯಕ ಆಗಿ ಬಿಟ್ಟೆ ...
ಇನ್ನೂ ನಿನ್ನ ನೋಡಬೇಕು ಅಂದ್ರೆ ನಾನೇ ಅಪ್ಪಣೆ ತಗೋ ಬೇಕು ....
(ಅಂತ ರೆಗಿಸ್ತ ಇದ್ದ)
ಹೇಯ್ ಸುಮ್ಕೆ ಇರ್ಲ...
ಗೋಪಾಲ ನಿಜ ಹೇಳ್ತೀನಿ ಕಣೋ ನಿನ್ ಇಲ್ಲ ಅಂದಿದ್ರೆ 
ನಾನು ಏನೂ ಆಗ್ತಾ ಇರ್ಲಿಲ್ಲ .....
ಎಲ್ಲದಕ್ಕೂ  ನೀನೆ ಕಣೋ ಕಾರಣ..
ನೀನು ನನಗೆ ತಮ್ಮ ಆಗಿ ಹುಟ್ಟಿದ್ದು 
ನನ್ನ ಯಾವುದೋ ಜನುಮದ ಪುಣ್ಯ ಕನ್ಲ....
ಅಯ್ಯೋ ಅಣ್ಣ ದೊಡ್ಡ ದೊಡ್ಡ ಮಾತೆಲ್ಲ ಆಡಬೇಡ 
ನನಗೂ ಹೇಳಿಕೊಳ್ಳಕ್ಕೆ ನಿನ್ನ ಬಿಟ್ರೆ ಯಾರ್ ಇದ್ದಾರೆ ಹೇಳು 
ನಿನಗೋಸ್ಕರ 
ಪ್ರಾಣ ಬೇಕಾದ್ರೂ ಕೊಡ್ತೀನಿ ...
ಪ್ರಾಣ ಬೇಕಾದ್ರೂ ತೆಗಿತೀನಿ....
ಈ ಜೀವ ನಿನ್ ಕುಶಿ ಗೆ  ಹೋದ್ರೆ .....
ನನಗೆ ಅಷ್ಟೇ ಸಾಕು..
ಹೇಯ್ ಸುಮ್ನೆ ಇರೋ ಸಾಯೋ ಮಾತೆಲ್ಲ ಬೇಡ...
ಗೋಪಾಲ ನನಗೆ ಇನ್ನೂ ಆ ಮೂರು ಕೊಲೆಗಳು ಕಣ್ಣ ಮುಂದೇನೆ ಇದೆ ಕಣೋ ..
ನಲವತ್ತು ದಿನದಲ್ಲಿ ಮೂರು ಕೊಲೆ ......!
ಇದೆ ಮನೇಲೆ ನಾವು ಇಬ್ಬರನ್ನ ಕೊಂದಿದ್ದಿವಿ...
ನೀನು ಈ ಮನೇಲಿ ಇರೋದು ನನಗ್ಯಾಕೋ ಅಷ್ಟು ಸರಿ ಕಾಣಕಿಲ್ಲ...
ಆ ಆತ್ಮಗಳು ಎಲ್ಲಿ ನಿನ್ನ ಏನ್ ಮಾಡುತ್ತೋ ಅನ್ನೋ ಭಯ ನನಗೆ ...
(ನನ್ನ ಮಾತುಗಳನ್ನು ಕೇಳಿ ನಗುತ್ತ)
ಹಹ್ಹಹಹ 
ಅಣ್ಣ , ನಾವು ದಿನ ತಿನ್ನಕ್ಕೆ ಅಂತ ಕುರಿ,ಕೋಳಿಗಳನ್ನು ಕುಯಿತೀವಿ .
ಅವಲ್ಲೇ ಆತ್ಮಗಳಾಗಿ ನಮ್ಮನ್ನ ಕಾಡುತ್ತಾ,,ಇಲ್ಲ ಕೊಲ್ಲುತ್ತ?
ನೀನು ಯಾಕೋ ಸಾನೆ ಹೆದರಿದ್ದಿಯ ...
ಒಂದು ಕೆಲಸ ಮಾಡೋಣ ....
ಹೇಗೋ ನಾವು ಚುನಾವಣೆಯಲ್ಲಿ ಗೆದ್ದಿದ್ದಿವಿ ...
ಊರ ಕಣ್ಣೇ ನಮ್ಮ ಮೇಲೆ ಬಿದ್ದಿರುತ್ತೆ ...
ಅದಕ್ಕೆ ಮನೇಲಿ ಒಂದು ಹೋಮ ಮಾಡಿಸೋಣ ....
ನನಗೆ ಅದರ ಮೇಲೆ ಎಲ್ಲ ನಂಬಿಕೆ ಇಲ್ಲ ನಿನ್ನ  ಸಮಾಧಾನಕ್ಕೆ ಹೇಳ್ತಾ ಇದ್ದೀನಿ ಅಷ್ಟೇ..
ನನಗೂ ನಿನ್ ಹೇಳೋದು ಸರಿ ಅಂತ ಅನ್ನಿಸ್ತ ಇದೆ ..
ಬೇಗ ಮಾಡಿಸೋಣ ....
ಅಂತ ಎರಡು ದಿನದಲ್ಲೇ ಹೋಮ ಮಾಡಿಸೋಕ್ಕೆ ಏರ್ಪಾಡು ಮಾಡಿದೆ 
ಹೋಮ ಎಲ್ಲ ಆದ ಮೇಲೆ ...ಪೂಜೆ ಮಾಡಕ್ಕೆ ಬಂದಿದ್ದ ಶಾಸ್ತ್ರಿಗಳು ..
ನಿಮ್ಮ ಮನೆಯ ಮೇಲೆ ದುಷ್ಟ ಶಕ್ತಿಗಳ ಕಣ್ಣು ಬಿದ್ದೆ ..
ನೀವು ಮನೆಯಲ್ಲೇ ಒಂದು ಹಸ ಸಾಕಿ...
ಅದರಿಂದ ನಿಮಗೆ ಒಳ್ಳೇದು ಆಗುತ್ತೆ ….
ಅಂದ್ರು ನನಗೆ ಅವರ ಮಾತಿನ ಮೇಲೆ ನಂಬಿಕೆ ಬಂದು 
ಒಂದು ಒಳ್ಳೆಯ ಹಾಲು ಕೋಡೋ ಹಸನ ಖರೀದಿಸಿದೆ 
ಎಲ್ಲವೂ ನೆಮ್ಮದಿಯಾಗಿ ಹೋಗುತ್ತಿತ್ತು...
ಒಂದು ತಿಂಗಳ ನಂತರ ...
ಒಂದು ದಿನ ಬೆಳಗ್ಗೆ ಲಲಿತ ಹಿತ್ತಲಿನಿಂದ ಗಾಭರಿಯಾಗಿ ಓಡಿ ಬಂದು ....
ರೀ ಬನ್ನಿ ಬನ್ನಿ ಅಂತ ನನ್ನ ಹಿತ್ತಲಿಗೆ ಕರೆದೊಯಿದು ...
ಒಂದು ಪಾತ್ರೆಯನ್ನು ತೋರಿಸಿದಾಗ ...
ನಾನೂ ಹೆದರಿಕೊಂಡೇ ...
( ಪಾತ್ರೆಯಲ್ಲಿ  ಅರ್ಧ ರಕ್ತ ತುಂಬಿತ್ತು )
ಹೇಯ್ ಏನೇ ಇದು ?
ರೀ ನಾನು ಬೆಳಗ್ಗೆ ಬಂದು ಹಾಲು ಕರೆಯಕ್ಕೆ ಶುರು ಮಾಡಿದ್ರೆ...
ಹಾಲಿನ  ಜಾಗದಲ್ಲಿ ರಕ್ತ ಬರ್ತಾ ಇದೆ ...
(ಒಮ್ಮೆ ಸುತ್ತಲೂ ನೋಡಿದೆ..
ಇದೆಲ್ಲ ಆ ಅಮಾನುಷವಾದ
ಶಕ್ತಿಗಳ ಆಟ ಇರಬಹುದೇನೋ ಅನ್ನಿಸುತ್ತಿತ್ತು ಏನೂ ತೋರಿಸಿ ಕೊಳ್ಳದೆ )
ಹೇಯ್ ಹಸು ಗೆ ಏನೋ ಮೈ ಹುಷಾರು ಇಲ್ಲದೆ ಇರಬಹುದು ಬಿಡು 
ಪಶು ವೈದ್ಯರನ್ನ ಕರಿಸಿ ತೋರಿಸೋಣ ....
ವೈದ್ಯರಿಗೆ ಫೋನ್ ಮಾಡಿ ಬರಕ್ಕೆ ಹೇಳಿದೆ ...
ಬಂದು ನೋಡಿ ಕೆಲವು ಔಷದಿಗಳನ್ನೂ
ಕೊಟ್ಟು ಏನೋ ಸಂಕೆ ಆಗಿದೆ ಅಂತ ಹೇಳಿ ಹೋದರು....
ನಾವು ಅವರು ನೀಡಿದ ಎಲ್ಲ ಔಷದಿ ನೀಡುತ್ತ ಬಂದೋ ...
ಎರಡು ದಿನದಲ್ಲಿ ಹಸ ಚೆನ್ನಾಗಿ ಆಯ್ತು ಮತ್ತೆ ಹಾಲು ಕೊಡಲು ಶುರು ಮಾಡಿತು ...
ಆದರೆ ವಾರದ ಬಳಿಕ ಒಂದು ರಾತ್ರಿ ...
ವಿಚಿತ್ರವಾಗಿ ಅರಚುತ್ತ ....ಹಸ ಸತ್ತಾಗ ...
ನನ್ನ ಮನದೊಳಗೆ ಭಯ ಮನೆ ಮಾಡಿತು ...
ಗೋಪಾಲನ ನೋಡಿ ....
ನೋಡೋ ...ಯಾಕೋ ಏನ್ ಏನೋ ಆಗ್ತಾ ಇದೆ..
ನನ್ನ ಮನಸು ಕೂಡ ಸರಿ ಇಲ್ಲ...
ನೀನು ದಯವಿಟ್ಟು ಹುಷಾರಾಗಿರು ...
ಸರಿಯಣ್ಣ, ನಾನು ಹುಷಾರಾಗಿ ಇರ್ತೀನಿ ಭಯ ಪಡಬೇಡ ,
ಅಂತ ನನಗೆ ಸಮಾಧಾನ ಮಾಡ್ತಾ ಇದ್ದವನು ....
ಒಂದು ದಿನ ಬಂದು ...
ಅಣ್ಣ ಯಾಕೋ ಮೈಯೆಲ್ಲಾ ನವೆ ನವೆ ಆಗ್ತಾ ಇದೆ,
ನಾನು ಅವನ್ನ ಕೂಡಲೇ doctor ಹತ್ರ ಕರೆದು ಕೊಂಡು ಹೋದಾಗ,
Doctor, ಏನೋ ಅಲರ್ಜಿ ಆಗಿದೆ ಅಂತ ಮಾತ್ರೆ,ಮೂಲಾಮು..
ಕೊಟ್ಟರು ....... 
ಆದರೂ ಅವನಿಗೆ ನವೆ ಹೋಗಲೇ ಇಲ್ಲ 
ಆಮೇಲೆ ಅವನ ಚರ್ಮ ಸುಕ್ಕು ಹಿಡಿಯಲು ಶುರು ಮಾಡಿತು ...
ಅಲ್ಲಲ್ಲಿ ಬಿಳಿ ಬಿಳಿಯ ಮಚ್ಚೆಗಳು ಮೂಡುತ್ತಿತ್ತು ....
ನನ್ನ ತಮ್ಮ ನೋಡಕ್ಕೆ ಆರಡಿ ಅಜಾನುಬಾಹು .. ಕುಸ್ತಿ ಪಟುವಿನ ಹಾಗೆ ಇದ್ದ ...
ಕ್ರಮೇಣ ಅವನ ದೇಹಸ್ಥಿತಿ ಕೆಡುತ್ತ ಹೋಯಿತು ,
ನಾವು ನೋಡದ  doctor ಇಲ್ಲ ..ಏರದ  ಆಸ್ಪತ್ರೆ ಇಲ್ಲ ...
ಅವನ ವೈದ್ಯಕೀಯ ಖರ್ಚಿಗಾಗಿ ನನ್ನ ಅರ್ಧ ಆಸ್ತಿಯನ್ನೇ ಮಾರಿದ್ದಿನಿ .....
ನಾನು ಎಷ್ಟೇ ಹಣ ಸುರಿದರೂ ಒಂದು ಚೂರು ನನ್ನ ತಮ್ಮ ಗಣಮುಖನಾಗುತ್ತಿರಲಿಲ್ಲ
ತೀರ ಅಂದರೆ ತೀರ.. ಅದಗೆಡುತ್ತ ಹೋಯ್ತು 
ಮೂಳೆ ಎಲ್ಲ ಕಾಣುವ ಹಾಗೆ ..ಸಣ್ಣಗೆ ಆಗಿದ್ದ ,
ಕಣ್ಣು ಎಲ್ಲ ಒಳಗೆ ಹೋಗಿತ್ತು ....
ಅವನ ಶರ್ಟ್ ಬಿಚ್ಚಿದರೆ ಚರ್ಮ ಅದಕ್ಕೆ ಅಂಟಿಕೊಂಡು ಬರುತ್ತಿತ್ತು ...
ಆ ಮಟ್ಟಕ್ಕೆ ಕೆಟ್ಟಿತ್ತು ಅವನ ಆರೋಗ್ಯ.......
ಭಯಾನಕ ನೋವು ಸಹಿಸಲಾಗದೆ..
ಸಾರಾಯಿಯನ್ನು ಕಂಡರೇನೆ ಆಗದವನು ....ಕುಡಿಯಲು ಶುರು ಮಾಡಿದ್ದ …
ಲಲಿತಗೆ ಕೂಡ ನನ್ನ ತಮ್ಮ ಹಾಗೆ ಆಗಿದ್ದು ತುಂಬಾ ಬೇಜಾರ್ ಆಗಿತ್ತು 
ಅವಳೂ ಸಹ ಎಲ್ಲಿ ಎಲ್ಲಿ ....
ನಾಟಿ ಮದ್ದು ಕೊಡುತ್ತಾರೋ ಅವರನ್ನೆಲ್ಲ ಕೇಳಿ 
ಮದ್ದು ತಂದು ಕೊಡುತ್ತ ಇದ್ದಳು ...
ಇದರ ಮಧ್ಯೆ ಅವನ ಒಂದು ಕಾಲಿನ ಮೂಳೆ ಸವಿದಿದೆ 
ಅಂತ doctor ಹೇಳಿದ್ರು....
ಅದಕ್ಕೂ ಎಲ್ಲ ವೈದ್ಯರನ್ನು ನೋಡಿದ ಏನು ಪ್ರಯೋಜನವಾಗಲಿಲ್ಲ ...
ಗಂಭಿರವಾಗಿ ನಡೆಯುತ್ತಿದ್ದ ನನ್ನ ತಮ್ಮ 
ಕುಂಟುತ್ತಾ .... ಕುಂಟುತ್ತಾ ....ನಡೆಯಬೇಕಾಯಿತು .....
ಇಷ್ಟೆಲ್ಲಾ ಅವನಿಗೆ ತೊಂದರೆಗಳು ಇದ್ದರೂ ..
ಹೆದರುತ್ತಿರಲಿಲ್ಲ..ಅಳುತ್ತಿರಲಿಲ್ಲ ....ನನಗೆ ಧೈರ್ಯ ಹೇಳುತ್ತಿದ್ದ ...
ಬಿಡಣ್ಣ ನನ್ನ ನಿನ್ನಿಂದ ಆ ಯಮನಿಗೂ ಕಿತ್ಕೊಳಕ್ಕೆ ಆಗಲ್ಲ ...ಅಂತ......! 
ಅಂದು ಮಧ್ಯಾಹ್ನ 
ತೋಟದ ಮನೆಯಲ್ಲಿ ಮಲಗಿದ್ದ ..
ಅವನ ಜೊತೆ ಯಾರೂ ಇರಲಿಲ್ಲ ....
ನಾನು ಯಾರಾದರೂ ನಾನು ಬರುವವರೆಗೂ ಅವನ ಜೊತೆ ಇರಲಿ
ಎಂದು ಹೇಳಿದರೂ ...
ಗೋಪಾಲ ..
ಯಾಕೆ ಅಣ್ಣ ನನ್ನ ನಾನು ನೋಡಿಕೊಳ್ಳಕ್ಕೂ ಆಗದವನು 
ಅಂತ ನೀನೆ ನಿರ್ಧರಿಸಿ ಬಿಟ್ಟ ....
ಇಲ್ಲ ಕನ....
ನಿನ್ನ ನೋಡಿಕೊಳ್ಳಕ್ಕೆ ಅಷ್ಟೇ ..
ಊಟ ..ನೀರು ಬೇಕು ಅಂದಾಗ ....
ಏನೂ ಬೇಡ ನಾನು ಒಟ್ಟಿಗೆ ಇದ್ದೋನು ...
ನನಗೆ ಯಾರ ಹಂಗೂ ಬೇಡ ...ಊಟ ,ನೀರು 
ಇಲ್ಲೇ ಇದೆ ತಾನೆ ನಾನೇ ತಗೊಳ್ತೀನಿ ನನಗೆ ಯಾರೂ ಬೇಡ ...
ಸರಿ ಸರಿ ನೀನು ಕೋಪ ಮಾಡ್ಕೋ ಬ್ಯಾಡ 
ನಾನು ಬೇಗ ಬಂದು ಬಿಡ್ತೀನಿ ಅಂತ ಬಂದೆ ….
ಅವತ್ತು ನನಗೆ ಎರಡು ಊರು ದಾಟಿ ಒಂದು ಊರಿನಲ್ಲಿ ಪಂಚಾಯಿತಿ ಇತ್ತು ...
ಲಲಿತ,ಅವರ ತಂದೆಗೆ ಮೈ ಹುಷಾರಿಲ್ಲ ಅಂತ ಊರಿಗೆ ಹೋಗಿದ್ದಳು ….
ನಾನು ಪಂಚಾಯಿತಿ ಮಾಡಿ ಬೇಗ ಬಂದು ಬಿಡೋಣ ಅಂತ 
ಅಂದು ಕೊಂಡರೆ ಆಗಲಿಲ್ಲ...ಸಮಯ ಆಗಲೇ ರಾತ್ರಿ 11ಆಗಿತ್ತು ...
ಒಂದು ರೂಂ ಮಾಡಿ  ಅಲ್ಲೇ  ಉಳಿದು ಬಿಟ್ಟೆ ………..
ಆಗಲೇ ನನಗೆ ಬಂದಿದ್ದು ಆ ಫೋನ್ ಕಾಲ್!
ಸಮಯ ಮಧ್ಯ ರಾತ್ರಿ 12:20 !!
ಯಾರಿಬಹುದು ಎಂದು ಮೊಬೈಲ್ ತೆಗೆದು ನೋಡಿದರೆ ಗೋಪಾಲನ ಸಂಖ್ಯೆಯಿಂದ....
ಫೋನ್ ಎತ್ತಿ....
ಹಲೋ......... ಹಲೋ......... ಗೋಪಾಲ ...
(ಒಂದು ರೀತಿ ಸುಸ್ತಾಗಿರೋ..ಧ್ವನಿಯಲ್ಲಿ )
ಅಣ್ಣ ನನ್ನ ಕ್ಷಮಿಸಿ ಬಿಡು ........
ಹೇಯ್ ಯಾಕೋ ಏನ್ ಆಯ್ತೋ .........ಮಾತಾಡೋ ........
ನಿನ್ನ ಬಿಟ್ಟು ಹೋಗ್ತಾ ಇದ್ದೀನಿ ………
ಹೇಯ್ ಏನ್ ಏನೋ ಮಾತಾಡಬ್ಯಾಡ ಕನ .....
ಇಲ್ಲ ನನಗೆ ಭಯ ಆಗ್ತಾ ಇದೆ....
(ಅದೇ ಮೊದಲ ಬಾರಿಗೆ ಅವನ ದನಿಯಲ್ಲಿ ಜೀವ ಭಯ ನನಗೆ ಕೇಳಿಸಿದ್ದು)
ಯಾಕೋ ಏನ್ ಏನೋ ಮಾತಾಡ್ತಾ ಇದ್ದಿ ಏನ್ಲ ಆಯ್ತು .......?
ನಾನು ಈಗ ಸುಧಾನ ನೋಡ್ದೆ ಹಣೆಲಿ ರಕ್ತ ಬರ್ತಾ ಇತ್ತು ಹಾಗೆ ನನ್ನ ಮುಂದೆ ಬಂದು ನಿಂತ್ಳು...
ನಾನು ಒಳಗೆ ಬಂದು ಬಾಗಿಲು ಹಾಕೊಂಡೆ .............
ಏನು ಹೇಯ್ ನೀನು ಜಾಸ್ತಿ ಕುಡಿದ್ದಿಯ ಕಣೋ ಅದಕ್ಕೆ ಏನೋ ಭ್ರಮೆ ಅಷ್ಟೇ....
(ಅವನು ಅದೇ ಮತ್ತೆ ಮತ್ತೆ ಹೇಳ್ತಾ ಇದ್ದ )
ಸ್ವಲ್ಪ ಹೊತ್ತು ಹಿಂದೆ ...ಹೊರಗೆ ಹೋಗಿದ್ದೆ ಅಲ್ಲಿ ಅವಳು ಅಳ್ತಾ ಕೂತಿದ್ಲು ...
ಹೇಯ್ ಅದೆಲ್ಲ ಏನೂ ಇಲ್ಲ ಕನ್ಲ ,
ನಾವೇ ಅವಳನ್ನ ಮಣ್ಣು ಮಾಡಿದ್ದೀವಿ ತಾನೇ ....
ನೀನು ಸ್ವಲ್ಪ ಧೈರ್ಯ ತಗೋ ನಾನು ಬೇಗ ಬಂದು ಬಿಡ್ತೀನಿ ಬೆಳಗ್ಗೆ ನೆ ...
ಇಲ್ಲ ನೋಡು ನೋಡು ಕಿಟಕಿಯಲ್ಲಿ ಸುಧಾ ಕಾಣುತ್ತಿದ್ದಾಳೆ ..
ಇಲ್ಲ ನನಗೆ ಭಯ ಆಗ್ತಾ ಇದೆ...
ಈ ನೋವೂ ಕೂಡ ನನ್ನ ದಿನ ಕೊಲ್ಲುತ್ತಿದೆ …..
ಅದಕ್ಕೆ ನಾನು ಎಲ್ಲಾನೂ ಬಿಟ್ಟು 
ಹೋಗ್ತಾ ಇದ್ದೀನಿ ಅಣ್ಣ ನನ್ನ ಕ್ಷಮಿಸಿ ಬಿಡು..
ನಿನ್ನ ಬಿಟ್ಟು ಹೋಗಕ್ಕೆ ನನಗೂ ಇಷ್ಟ ಇಲ್ಲ ,
ಆದ್ರೆ ನನ್ನಿಂದ ಆಗ್ತಾ ಇಲ್ಲ .....
ಅಂತ ಮೊಬೈಲ್ ನ ಟೇಬಲ್ ಮೇಲೆ ಇಟ್ಟು....
ನನ್ನ ಕ್ಷಮಿಸಿ ಬಿಡಣ್ಣ ನಾನು ನೇಣು ಹಾಕೊಳ್ತಾ ಇದ್ದೀನಿ .
ನನ್ನ ಕೈಯಲ್ಲಿ ಈ ನೋವು ತಡ್ಕೊಳಕ್ಕೆ ಆಗ್ತಾ ಇಲ್ಲಣ್ಣ ಅಂದ .....
ನಾನು ಜೋರಾಗಿ
ಹೇಯ್ ಗೋಪಾಲ ಬ್ಯಾಡ  ಕನ್ಲ ...
ದಯವಿಟ್ಟು ಬೇಡ ಕನ್ಲ ನಿನ್ನ ಕಾಲಿಗೆ ಬೀಳ್ತೀನಿ ಬೇಡ ಕಣೋ ..
ನನ್ನ ಒಂಟಿ ಮಾಡಿ ಹೋಗಬ್ಯಾಡ ಕಣೋ .......
ಎಷ್ಟೇ ಬೇಡಿಕೊಂಡರೂ ಅವನು ಕೇಳಲಿಲ್ಲ ....
ಅವನು ನಿಂತ್ತಿದ್ದ ಚೇರನ್ನು ಬೀಳಿಸಿದ ಸದ್ದು....
ಕೇಳಿ ನನಗೆ ಉಸಿರೇ ಆಡದೆ ..... ಹಾಗೆ ಕುಸಿದು ಬಿದ್ದೆ 
ನನ್ನ ತಮ್ಮ ನೇಣು ಹಾಕಿಕೊಂಡು ಸತ್ತೋದ......
ಅಯ್ಯೋ ಅಯ್ಯೋ...ನನ್ನ ಬುಟ್ಟು ಹೋದ ,
ನಾನ್ ಏನ್ ಮಾಡ್ಲಿ ಏನ್ ಮಾಡ್ಲಿ ...........
ನನ್ನ ಕೈಯಲ್ಲಿ ಇದ್ದ ಮೊಬೈಲ್ ನ ಕೋಪಕ್ಕೆ 
ಗೋಡೆಗೆ ಹೊಡೆದೆ ,ಆ ಮೊಬೈಲ್ ನಲ್ಲಿ ತಾನೇ
ನನ್ನ ತಮ್ಮನ ಸಾವಿನ ಸದ್ದು ಕೇಳಿದ್ದು ಅಂತ ....
(ಮತ್ತೆ ನಾನು ಮೊಬೈಲ್ ತಗೊಂಡಿದ್ದು ನಾಲಕ್ಕು
ವರುಷಗಳ ನಂತರ ಅಲ್ಲಿಯವರೆಗೂ ನಾನು ಮೊಬೈಲ್ ಮುಟ್ಟಿರಲಿಲ್ಲ )
ಅಲ್ಲಿಂದ ಹೇಗೋ ಒಂದು ಕಾರನ್ನು ಹಿಡ್ದು ಆ ರಾತ್ರಿಯೇ ಹೊರಟೆ ..
ನಾನು ಬಂದು ಊರು ತಲುಪಿದಾಗ ...
ಘಂಟೆ....ಬೆಳಗಿನ ಚಾವ 5ದಾಗಿತ್ತು ...
ತೋಟದ ಮನೆಗೆ ಓಡಿದವನೇ.....
ಬಾಗಿಲು ಹೊಡೆದು ನೋಡಿದರೆ....
ಮುಖ ಎಲ್ಲ ನೀಲಿ ಕಟ್ಟಿ ...
ನಾಲಿಗೆ ಹೊರ ಚಾಚಿ ....
ಗೋಪಾಲ ನೇತಾಡ್ತಾ ಇದ್ದ........
ನನಗೆ ಅಲ್ಲೇ ಅರ್ಧ ಉಸಿರು ಹೋಯ್ತು ...
ಏನೂ ಮಾಡದೆ ಅಲ್ಲಿಂದ  ಯಾರನ್ನಾದರೂ ಕರೆದುಕೊಂಡು ಬರೋಣ ಅಂತ 
ನಡೆದು ಬರ್ತಾ ಇದ್ದೆ..
ಮಧ್ಯೆ ಪಕ್ಕದ ತೋಟದ ಕೆಲಸದಾಳುಗಳು 
ನನ್ನ ನೋಡಿ ....
ಅಣ್ಣ ಏನ್ ಆಯ್ತು ಯಾಕೆ ಇತರ ಹೋಗ್ತಾ ಇದ್ದೀರಾ ?
ಹೋದ , ಹೋಗ್ಬಿಟ್ಟ ನನ್ನ ತಮ್ಮ ನನ್ನ ಬಿಟ್ಟು ಹೋಗ್ಬಿಟ್ಟ ..
ಏನ್ ಹೇಳ್ತಾ ಇದ್ದೀರಾ ಅಂತ ಅವರು ಅಲ್ಲಿಂದ ಗೋಪಾಲ ಇದ್ದ ಮನೆಗೆ ಓಡಿದರು
ದೇಹನ ಕೆಳಗೆ ಇಳಿಸಿ ….
ಮಂಚದ ಮೇಲೆ ಮಲಗಿಸಿದೋ ....
ನಾನು ಅವನ ಪಕ್ಕದಲ್ಲೇ ಕೂತು ಅಳುತ್ತಿದ್ದೆ ...
ಭಾವನ ಅದೆಲ್ಲ ನೋಡಬಾರದು ಅಂತ ಅವಳನ್ನ
ಅತ್ತೆ ಮನೇಲೆ ಬಿಟ್ಟು ಲಲಿತ ಮಾತ್ರ ಬಂದ್ಳು..
ಸ್ವಂತ ಮಗನ ಆಗಿದ್ದ ಗೋಪಾಲ ನೋಡಿ 
ಬಿದ್ದು ಬಿದ್ದು ಅತ್ತದ್ದು ನನಗೆ ಈಗಲೂ ನೆನಪಿದೆ!
ಅವನಿಗೆ ಎಲ್ಲ ವಿಧಿ ವಿಧಾನಗಳನ್ನು ಮಾಡಿ ..
ನಾನೇ ಕೊಲ್ಲಿ ಇಟ್ಟೆ!
ಆಮೇಲೆ ಗೋಪಾಲ ವಾಸವಿದ್ದ ಮನೆಯ
ನೀರಾಕಿ ತೊಳೆದು ....ಎಲ್ಲ ಕ್ಲೀನ್ ಮಾಡಲು
ಮಂಚವನ್ನು ತೆಗೆದಾಗ ಆಗಲೇ ನನಗೆ ಕಂಡದ್ದು ....
ಕಬ್ಬಿಣದ ಆರೇ!!
ಅದು ಸುಧಾನ ಹೊಡೆದು ಸಾಯಿಸಿದ್ದ ಅದೇ ಕಬ್ಬಿಣದ ಆರೇ!!....
ಅದನ್ನ ನೋಡಿ ನನಗೆ ಆತಂಕ ಜಾಸ್ತಿಯಾಗಿ 
ಅಲ್ಲಿಂದ ಬೀಗ ಹಾಕಿ ಮನೆಗೆ ಬಂದು ಬಿಟ್ಟೆ 
ಅವತ್ತು ರಾತ್ರಿ!
ಗೋಪಾಲನ ಪೋಟೋ ಮುಂದೆ...
ಕೂತು ತುಂಬಾ ಅಳುತ್ತಿದ್ದೆ ...
ನನಗೆ ನೂರಾನೆಯ ಬಲದಂತೆ ಇದ್ದ..
ಅವನ ಸಾವು ನನ್ನ ತುಂಬಾ ಕಾಡಿತ್ತು ...
ನನ್ನ ಸಮಾಧಾನ ಮಾಡಕ್ಕೆ ಲಲಿತ ಎಷ್ಟೋ ಪ್ರಯತ್ನ ಪಡ್ತಾ ಇದ್ಳು ....
ಒಂದು ಗಳಿಗೆಯಲ್ಲಿ.....
ನನ್ನ ಮನದೊಳಗಿನ ಭಯವನ್ನು ಯಾರಿಗಾದರೂ ಹೇಳೇ ಬೇಕು ಅನ್ನಿಸಿತು 
ಅದಕ್ಕೆ ನನಗೆ ಲಲಿತ ಬಿಟ್ಟರೆ ಬೇರೆ ಯಾರೂ ಇಲ್ಲ....
ಅದರಿಂದಲೇ ಲಲಿತನ ನೋಡಿ .....
ಲಲಿತ ಒಂದು ವಿಷಯ ನಿನಗೆ ಹೇಳ ಬೇಕು..
ಏನ್ ಹೇಳಿ ?
ನಿನಗೆ ಶ್ರೀಧರ್ ಗೊತ್ತಲ್ವ ?
ಯಾವ ಶ್ರೀಧರ್ ಹೇಳಿ ?
ಅದೇ ನಮ್ಮ ತೋಟದಲ್ಲಿ
ಆರುತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ನಲ್ಲ ಅವನು......
ಹಾ, ಗೊತ್ತು ರೀ ಅವನು ಪಕ್ಕದ ಊರಿನ ಸುಧಾ ನ ಲವ್ ಮಾಡಿ ಅವರಿಬ್ಬರೂ 
ಊರ್ ಬಿಟ್ಟು ಓಡೋಗಿದ್ದಾರೆ ಅಂತ ಊರೇ ಹೇಳುತ್ತಲ್ಲ ...
ಇಲ್ಲ ಅವರು ಊರು ಬಿಟ್ಟು ಓಡಿ ಹೋಗಿಲ್ಲ .......
ಮತ್ತೆ ?
ಇದು ನಿನಗೆ ಹೇಳಿದ್ರೆ ಹೇಗೆ ತಗೊತೀಯೋ ನನಗೆ ಗೊತ್ತಿಲ್ಲ..
ಆದ್ರೆ ಈಗ ನನಗೆ ನಿನ್ನ ಬಿಟ್ರೆ ಬೇರೆ ಯಾರೂ ಇಲ್ಲ ಕಣೆ ....
ಹೇಳಿ ಅಂದ್ರೆ ಏನ್ ವಿಷಯ ?
(ನಾನು ಅವಳ ಮುಖವನ್ನು ನೋಡಿ ಹೇಳಲಾಗದೆ..
ತಲೆ ಬಾಗಿಸಿ ....)
ಸುಧಾ,ಶ್ರೀಧರ್,ಸುಧಾ ತಂದೆ ಮೂರ್ತಿ,
ಈ ಮೂರೂ ಜನಗಳನ್ನೂ ನಾವೇ ಕೊಂದಿದ್ದು …….
ಅವಳು ಪೂರ್ತಿ ಬೆವತೋಗಿ ...
ಅಯ್ಯೋ  ಏನ್ ಹೇಳ್ತಾ ಇದ್ದೀರಾ ನೀವು ?
ಅವರನ್ನ ನೀವು ಯಾಕೆ ಕೊಂದಿದ್ದು ?
ಯಾವಾಗ ? ಇದೆಲ್ಲ ನನಗೆ ಒಂದೂ ಗೊತ್ತಿಲ್ಲ ?
ಏನ್ ಆಯ್ತು ಹೇಳಿ........ ಹೇಳಿ ?.
ಕೆಲವು ತಿಂಗಳ ಹಿಂದೆ........................
ಎಲ್ಲವನ್ನೂ ಲಲಿತ ಗೆ ಹೇಳಿದೆ.........
ಅಯ್ಯೋ ಎಂತ ಕೆಲಸ ಮಾಡಿ ಬಿಟ್ರೆ ಅಯ್ಯೋ.......
ಹೇಯ್ ಲಲಿತ ಆಗಿದ್ದು ಆಗಿದೆ ಕಣೆ...
ಏನೋ ಮಾಡಕ್ಕೆ ಹೋಗಿ ಏನೋ ಆಯ್ತು ...
ಈಗ ನನಗೆ ಭಯ ಶುರು ವಾಗಿದೆ...
ಆ ಆತ್ಮಗಳೇ  ನನ್ನ ತಮ್ಮನ್ನ ಕೊಂದಿದ್ದು ಅಂತ ನನ್ನ ಒಳ ಮನಸು ಹೇಳ್ತಾ ಇದೆ...
ಆ ಜೀವಗಳು ಸಾಯುವಾಗ ಎಷ್ಟು ವೇದನೆ ಪಟ್ಟಿರುತ್ತೆ..
ಆ ಶಾಪ ನಮ್ಮನ್ನ ಸುಮ್ನೆ ಬಿಡಲ್ಲ ರೀ ಬಿಡಲ್ಲ............
ಅಂತ ಅಳ್ತಾ ಇದ್ಳು ...
ಹೇಯ್ ಈಗ ಏನ್ ಮಾಡೋದು ಅಂತ ನೋಡೋಣ 
ನೀನು ನನ್ನ ಭಯಾನ ಜಾಸ್ತಿ ಮಾಡಬೇಡ ...
ಈ ಭಯದಲ್ಲೇ ನಾನು ದಿನ ಸಾಯೋ ಬದಲು....
ಈಗಲೇ ಸತ್ತಗೊತೀನಿ ಅಂತ ಅಲ್ಲಿಂದ..
ಹೊಲಕ್ಕೆ ಹಾಕೋ ವಿಷ ತೆಗೆದು ಕೊಂಡೆ ...
ಅಯ್ಯೋ ಬ್ಯಾಡ ರೀ  ....
ನೀವು ಸತ್ತರೆ ನಾನು ಇರಲ್ಲ ಆಮೇಲೆ ನಮ್ಮ ಮಗಳು ಒಬ್ಬಳೇ ಆಗ್ತಾಳೆ 
ನಾವುಗಳು ಮಾಡಿದ ತಪ್ಪಿಗೆ ಅವಳು ಯಾಕೆ ಶಿಕ್ಷೆ ಅನುಭವಿಸಬೇಕು ....
ಬ್ಯಾಡ ಬ್ಯಾಡ...........
ನಮ್ಮ ಚಿಕ್ಕಪ್ಪನಿಗೆ ಯಾರೋ ಭಾನಮತಿ .....
ಮಾಡಿಸಿದರು,
ಅದನ್ನೇ ತೆಗೆದಿದ್ದು  ಒಬ್ಬ ಮಂತ್ರವಾದಿ....
ಅವನ ಹತ್ರ ಹೋಗೋಣ ...ಏನಾದರೂ ಮಾಡೋಣ ನೀವು ಭಯ ಪಡಬೇಡಿ ಅಂತ
ಸಮಾಧಾನ ಮಾಡಿದಾಗ ನನಗೆ ಸ್ವಲ್ಪ ನೆಮ್ಮದಿಯಾಯಿತು ..
ಮಾರನೆಯ ದಿನ ಬೆಳಗ್ಗೆಯೇ ನಾವು ಆ ಊರಿಗೆ ಹೊರಟೋ...
ಆ ಮಂತ್ರವಾದಿನ ಭೇಟಿಯಾಗಿ .
ಅವನಿಗೆ ಕೊಲೆಯ ವಿಷಯವನ್ನು ತಿಳಿಸದೇ ...
ನಮ್ಮ ತೋಟದಲ್ಲಿದ್ದ ಯಾರೂ ಇಲ್ಲದ ಗಂಡ, ಹೆಂಡತಿ ಇಬ್ಬರೂ 
ನಮ್ಮ ತೋಟದ ಮನೆಯಲ್ಲೇ ವಿಷ ಕುಡಿದು ಸತ್ತಿದ್ದಾರೆ..
ಅವರ ಆತ್ಮಗಳು ನಮ್ಮನ್ನ ಕಾಡುತ್ತಿದೆ ಎಂದೇ ....
ಎಲ್ಲವನ್ನೂ ಕೇಳಿದ ಮೇಲೆ ನಮ್ಮ ಕೈಗೆ ಒಂದು ತಗಡನ್ನ ಕೊಟ್ಟು ...
ನೋಡಿ ಇದನ್ನ ನೀವು ವಾಸಿಸುವ ಮನೆಯ ಹಿತ್ತಲಿನಲ್ಲಿ ಹಾಗೂ
ಮನೆಯ ಮುಖ್ಯದ್ವಾರದಲ್ಲಿ ಹೂತಿಡಿ ....
ನಮಗೆ ಆ ಆತ್ಮಗಳಿಂದ  ತುಂಬಾ ಪ್ರಾಣ ಭಯ ಇದೆ ...
ಇಲ್ಲಿಯವರೆಗೂ ನಮಗೆ ಏನೂ ಆಗದೆ ಇರುವುದೇ ಒಂದು ಅಚ್ಚರಿ ಎಂದಾಗ!!
ನೋಡಿ ಯಾವುದೇ 
ಆತ್ಮಗಳು ..ಯಾವುದೇ ಸಮಯದಲ್ಲಿ ಯಾರನ್ನೇ ಆಗಲಿ....
ಸಾಯಿಸುವುದಕ್ಕೆ ಆಗುವುದಿಲ್ಲ....
ಅವರ ಜಾತಕದಲ್ಲಿ ಕೆಟ್ಟ ಗಳಿಗೆ ಅಂತ  ಬರಬೇಕು ಆಗಲೇ 
ಆ ಆತ್ಮಗಳ ಆಟ ನಡೆಯೋದು .....
ನೀವು ಭಯ ಪಡಬೇಡಿ ಹೊರಡಿ.......
ನಾವು ಅಲ್ಲಿಂದ ನಾಲಕ್ಕು ಹೆಜ್ಜೆ ಮುಂದೆ ಇಟ್ಟಾಗ ಕರೆದು 
ಯಾವುದೇ ಕಾರಣಕ್ಕೂ ಆ ಸತ್ತವರು ಉಪಯೋಗಿಸಿದ  ಯಾವುದೇ ವಸ್ತುಗಳನ್ನು 
ಮತ್ತೆ ಯಾರೂ ಉಪಯೋಗಿಸಬಾರದು 
ಅಂದ ....ನಾವು ಆಗಲಿ ಅಂತ ಹೇಳಿ ಹೊರಟು ಬಂದೋ ...
ನಾನು ಅಲ್ಲಿಂದ ಬಂದು ಅವನು ಹೇಳಿದ ರೀತಿ ಮನೆಯ ಹಿಂದೆ ಮುಂದೆ
ಆ ತಗಡನ್ನು ಹೂತಿದೆ.....
ಅಲ್ಲಿಂದ ನಮಗೆ ಯಾರಿಗೆ ಆಗಲಿ 
ಯಾವುದೇ ರೀತಿಯ ತೊಂದರೆಗಳು ಆಗಲಿಲ್ಲ...
ಆದರೆ ...
ನನ್ನ ತಮ್ಮ ಇದ್ದ ಆ ತೋಟದ 
ಮನೆಯಲ್ಲಿ ಮಾತ್ರ ವಿಚಿತ್ರವಾದ ಘಟನೆಗಳು ನಡೆಯಲು ಶುರು ಮಾಡಿತು ..
ಆ ಮನೆಯಲ್ಲಿಟ್ಟಿದ್ದ 500ಅಕ್ಕಿ ಮೂಟೆಗಳಿಗೆ ಹೇಗೋ ಬೆಂಕಿ ಬಿದ್ದು ಅಷ್ಟು 
ಸುಟ್ಟು ಬೂದಿಯಾಯಿತು ...
ನಂತರ ಆ ಮನೆಯನ್ನು ಹಾಗೆ ಬಿಟ್ಟು  ಬಿಟ್ಟೋ...
ರಾತ್ರಿಯಾದರೆ ಆ ಮನೆಯ ಬಳಿ ಯಾರೋ ಅಳುವುದಾಗಿಯೂ ...
ಅಲ್ಲಿಗೆ ಹೋದ ಹಸುಗಳು ..ವಿಚಿತ್ರ ಖಾಯಿಲೆ ಬಿದ್ದು 
ಸಾಯುವುದಾಗಿಯೂ ಜನ ಎಲ್ಲ ಮಾತನಾಡಿಕೊಳ್ಳುತ್ತಿದ್ದರು ..
ಕೊನೆಗೂ ನನ್ನ ತಮ್ಮ
ಇದ್ದ ಆ ಮನೆಯ ಊರಿನ ಒಂದು ಪಾಳು ಬಿದ್ದ ಮನೆಯಾಗಿ ಉಳಿದು ಬಿಟ್ಟಿತು…..
ಇದಾದ ಕೆಲವು ತಿಂಗಳ ನಂತರ! 
ಭಾವನ ಕೂಡ ಕಾಲೇಜ್ ಗೆ ಹೊಗೊತರ ಆದ್ಳು...
ನಮ್ಮ ಜೊತೆಯಲ್ಲೇ ಇದ್ದು ಬಿಡುತ್ತೇನೆ ಎಂದು ಭಾವನ ಹಠ ಮಾಡಿದ ಮೇಲೆ ..
ನಮ್ಮ ಮನೆಯಿಂದಲೇ ಕಾಲೇಜ್ ಗೆ ಹೋಗುವುದಕ್ಕೆ ಶುರು ಮಾಡಿದಳು...
ಎರಡು ವರುಷ ....ನೆಮ್ಮದಿಯ ಬದುಕಾಗಿತ್ತು ...
ಆ ನೆಮ್ಮದಿಯ ಕೆಡಿಸುವ ಹಾಗೆ ಒಂದು ಘಟನೆ ನಡೆಯಿತು ....
ಸುಧಾಳ ಯಾರೋ ದೂರದ ಸಂಬಂಧಿಕರು 
ಅವಳನ್ನ ಹುಡುಕಿಕೊಂಡು ನಮ್ಮ ಮನೆಗೆ ಬಂದರು...
ನಮ್ಮ ತೋಟದಲ್ಲಿ ಕೆಲಸಕ್ಕೆ ಇದ್ದ ಶ್ರೀಧರನ
ಪ್ರೀತಿಸಿ ಅವರಿಬ್ಬರೂ ಊರು ಬಿಟ್ಟು ಓಡಿಹೋಗಿದ್ದಾರೆ ಅಷ್ಟೇ 
ನನಗೆ ಗೊತ್ತು ಅಂದೇ....
ಅವರ ತಂದೆ,ಕೂಡ ನಮ್ಮನ್ನು ಕಳೆದ ಎರಡು ವರುಷದಿಂದ ಬಂದು ನೋಡಿಲ್ಲ ?
ಅವರಿಗೆ ಏನೋ ಆಗಿದೆ ಅವರು ಇದೆ ಊರಿನಲ್ಲೇ ಇದ್ದಾರೋ ಏನೋ ಅನ್ನಿಸುತ್ತೆ ಅಂತ..
ತಮ್ಮ ಮನೆಯ ಮದುವೆಗೆ ಬಂದಿದ್ದ ವೇಳೆಯಲ್ಲಿ ತೆಗೆದಿದ್ದ ಸುಧಾಳ ಪೋಟೋ ಇಟ್ಟು
ಒಂದು ಪೋಸ್ಟರ್ ಮಾಡಿ ಕಾಣೆಯಾಗಿದ್ದಾರೆ ಅಂತ ಊರೆಲ್ಲ ಅಂಟಿಸುತ್ತ ಇದ್ದರು 
ಈ ವಿಷಯ ಹೀಗೆ ಬಿಟ್ಟರೆ ಪೋಲಿಸ್ ಸ್ಟೇಷನ್ ವರೆಗೂ ಹೋಗುತ್ತೆ ಅಂತ..
ನಾನೇ ನಾಲಕ್ಕು ಜನರ ಮಧ್ಯೆ ....
ನಾನು ಶ್ರೀಧರ್ ಹಾಗೂ ಸುಧಾನ ಪ್ಯಾಟೆಯಲ್ಲಿ ಒಂದು ಬಸ್ ಸ್ಟೇಷನ್ ನಲ್ಲಿ
ನೋಡಿದಾಗಿಯೂ ಅವರಿಗೆ ಒಂದು ಗಂಡು ಮಗು ಕೂಡ ಆಗಿದೆ ಅಂತ 
ಒಂದು ವದಂತಿ ಹಬ್ಬಿಸಿದೆ ....
ಊರೆಲ್ಲ ಅದನ್ನ ನಿಜ ಎಂದು ನಂಬಿತು ...
ಮೂರ್ತಿ ಮಂತ್ರಿಕವಾದಿಯಾಗಿದ್ದರಿಂದ ಅವರು ಎಲ್ಲೋ ಹೋಗಿದ್ದಾರೆ ಅಂತ
ಅವರ ಬಗ್ಗೆ ಜಾಸ್ತಿ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ 
ಎಲ್ಲವೂ ನನ್ನ ಕೈಯಲ್ಲಿ ಇತ್ತು.....
ಆದರೆ ಇಂದು ಎಲ್ಲವೂ ನನ್ನ ಕೈ ಮೀರಿದೆ ...
ನನ್ನ ಸ್ವಂತ ಮಗಳಿಂದಾನೆ ನಾನು ಸಿಕ್ಕಿ ಬೀಳುತ್ತೆನೆಂದು ,
ಒಂದು ಪ್ರೀತಿಯಿಂದ ಶುರುವಾದ ಎಲ್ಲ ಘಟನೆಗಳು ಮತ್ತೊಂದು ಪ್ರೀತಿಯಿಂದಲೇ 
ಅಂತ್ಯವಾಗುತ್ತೆ ಎಂದು ….
ಅವತ್ತು ಮೂರ್ತಿಗೆ ಮಗಳನ್ನ ಮನೆಲಿಟ್ಟು ಸಾಕಕ್ಕೆ ಆಗದೆ ಊರ್ ಅಲಿಯಕ್ಕೆ 
ಬಿಟ್ಟಿದ್ದಿಯ...ಅಂತ ಹೇಳಿ ಹೊಡೆದಿದ್ದೆ ಆದರೆ ಇಂದು ನನ್ನ ಮಗಳೇ ಒಬ್ಬ ಕೀಳ್ ಜಾತಿಯವನ್ನ ಪ್ರೀತಿಸಿ ಮನೆ ಬಿಟ್ಟು ಓಡಿಹೋಗುತ್ತಾಳೆ ಅಂತೆಲ್ಲ .........
ನಾನು ಕನಸಲ್ಲೂ ಎಣಿಸಿರಲಿಲ್ಲ 
ಇಷ್ಟೇ ಆಗಿದ್ದು ...............ಎಲ್ಲವನ್ನೂ ನಿಮ್ಮ ಮುಂದೆ ಹೇಳಿದ್ದೀನಿ ....
ಎಂದು ಅಪ್ಪ ಹೇಳಿ ಮುಗಿಸಿದಾಗ,
ಇದೆ ಆ ಸರ ಅಂತ ಅಮ್ಮ ಸುಧಾಳ ಸರವನ್ನು ಟೇಬಲ್ ಮೇಲೆ ಇಟ್ಟರು….
ನನ್ನ ತಂದೆಯ ಮುಖದ ಹಿಂದೆ ಇಷ್ಟು ಕ್ರೂರವಾದ 
ಇನ್ನೊಂದು ಮುಖವಿದೆ ಎಂದು ನನಗೆ ಆಗಲೇ ತಿಳಿದಿದ್ದು!
ಕೊನೆಯದಾಗಿ ಅಪ್ಪ ..
ನನ್ನ,ಹಾಗೂ  ಕಾರ್ತಿಕ್ ನ ನೋಡಿ ...
ಸರ್ ನಾನು ಒಬ್ಬನೇ ಇವರಿಬ್ಬರ ಜೊತೆ ಮಾತಾಡಬೇಕು 
ಇದಕ್ಕೆ ಮಾತ್ರ ಅವಕಾಶ ಮಾಡಿಕೊಡಿ ಅಂತ ಕೇಳಿದರು ...
ಸರಿ ನೀವು ಆ ಸೆಲ್ ನಲ್ಲಿ ಮಾತಾಡಿ ಅಂತ
ನನ್ನ ನೋಡಿ inspector ಹೇಳಿದ ಮೇಲೆ ನಾನು ,ಕಾರ್ತಿಕ್ ಆ ಸೆಲ್ ನ ಒಳಗೆ  ಹೋದೋ!
ಒಂದು ಸಣ್ಣ ಸುಳಿವೂ ಇಲ್ಲದೆ ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದ ನನ್ನ ಅಷ್ಟು ರಹಸ್ಯಗಳನ್ನ 
ನೀವು ಈ ಜಗತ್ತಿಗೆ ತೋರಿಸಿದ್ದೀರ? ಈಗ ನಿಮಗೆ ಸಮಾಧಾನನ 
ನನ್ನ ಊರಿನಲ್ಲಿ, ನನ್ನ ಜಾತಿ ಜನರ ಮುಂದೆ ತಲೆ ಎತ್ತಿ ತಿರುಗುತ್ತ ಇದ್ದವನನ್ನು ಇಂದು ತಲೆ ತಗ್ಗಿಸಿದ್ದೀರ!
ನೀವಿಬ್ಬರೂ ಒಂದಾಗಕ್ಕೆ ನನ್ನ ಮಾನ ಮರ್ಯಾದೆನ ಕಳೆದಿದ್ದೀರ?
(ಅಪ್ಪನ ಮುಖದಲ್ಲಿ ಇನ್ನೂ ಆ ಅಕ್ರೋಶ ಹಾಗೆ ಇತ್ತು!)
ಒಂದನ್ನ ನೀವು ನೆನಪು ಇಟ್ಕೋಳಿ!!!!
ಇವತ್ತಲ್ಲ, ನಾಳೆ ನಾನೇನಾದ್ರೂ  ಹೊರಗೆ ಬಂದ್ರೆ 
ನಿಮ್ಮ ಇಬ್ಬರಲ್ಲಿ ಒಬ್ಬರು ಜೀವಂತ ಇರಲ್ಲ!
ಒಬ್ಬರನ್ನು ಕಳೆದು ಕೊಂಡ ನೋವಲ್ಲೆ ಇನ್ನೊಬ್ಬರು
ಜೀವನ ಪೂರ್ತಿ ಆ ವೆದನೆಯಲ್ಲೇ ಸಾಯಬೇಕು ....
ಹೋಗಿ ಹೊರಗೆ ............
ಅಪ್ಪನಿಗೆ ಇನ್ನೂ ಅವರು ಮಾಡಿದ ತಪ್ಪಿಗೆ ಯಾವುದೇ ಪಾಶ್ಚತ್ತಾಪ ಕೂಡ ಇಲ್ಲ ..
ಅವರಿಗಿನ್ನೂ ಆ ಕೊಲೆ ಮಾಡೋಷ್ಟು ಕೋಪ ಹೋಗಿಲ್ಲ!
ನಾನು,ಹಾಗೂ ಕಾರ್ತಿಕ್ ....ಅವರ ಮನೆಗೆ ಬಂದೋ ...
ಕಾರ್ತಿಕ್ ತಂದೆ...
ಭಾವನ ಅಳಬೇಡಮ್ಮ....ಇನ್ನೂ ನಿನಗೆ ನಾವೇ ತಂದೆ,ತಾಯಿಯ ಸ್ಥಾನದಲ್ಲಿ 
ಇದ್ದು ನಿನ್ನ ನಮ್ಮ ಸ್ವಂತ ಮಗಳ ಹಾಗೆ ನೋಡಿಕೊಳ್ತೀವಿ...
ಅಂತ ಎಲ್ಲರೂ ಸಮಾಧಾನ ಮಾಡಿದ್ರು .....
ಕೋರ್ಟ್ ವಿಚಾರಣೆ ಅಂತ ಹಾಗೆ ಕೆಲವು ದಿನಗಳು ಹೋಯ್ತು ....
ಮೂರು ಕೊಲೆಯ ಆಪಾದನೆಯ ಮೇಲೆ ಅಪ್ಪನಿಗೆ ಗಲ್ಲು ಶಿಕ್ಷೆ.
ಮಾಡಿದ ಕೊಲೆಗಳನ್ನು ಮುಚ್ಚಿಟ್ಟ ಕಾರಣಕ್ಕೆ ಅಮ್ಮನಿಗೆ ಜೀವಾವಧಿ ಶಿಕ್ಷೆ ಆಯ್ತು...
ಒಂದು ಕಡೆ ನನ್ನಿಂದಲೇ ನನ್ನ ಹೆತ್ತವರು ಜೈಲಿಗೆ ಹೋದರಲ್ಲ ಅಂತ 
ಮನಸಿನಲ್ಲಿ ತುಂಬಾ ನೋವುತ್ತಿತ್ತು ...
ಇನ್ನೊಂದೆಡೆ ಆ ಮೂರು ಆತ್ಮಗಳಿಗೂ ಕೊನೆಗೆ ನ್ಯಾಯ ಸಿಕ್ಕಿತ್ತಲ್ಲ ಅನ್ನೋ ನೆಮ್ಮದಿ...
ತನ್ನ ಹೆತ್ತವರಿಗೆ ಶಿಕ್ಷೆಯಾಗುತ್ತೆ ಅಂತ ತಿಳಿದೂ
ಅವರು ಮಾಡಿದ ಕೊಲೆಗಳನ್ನು ಮುಚ್ಚಿಡದೆ ...
ಧೈರ್ಯವಾಗಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ನೀಡಿದ
ದಿಟ್ಟ ಹುಡುಗಿ ...... ಅಂತ ಪೇಪರ್ ಬಂದಿದ್ದ  ಜಾಗದಲ್ಲೇ ...
ಮಾರನೆಯ ದಿನ ....
ನಾನು +2 ನಲ್ಲಿ 1060 ಮಾರ್ಕ್ಸ್ ನಲ್ಲಿ ಪಾಸ್ ಆಗಿದ್ದು .....
ಕೆಸರಲ್ಲೇ ತಾವರೆ ಅರಳೋದನ್ನ ನನಗೆ ನೆನಪಿಸುತ್ತಿತ್ತು ...
ಸ್ವಲ್ಪ ಸೋಲ್ಪವೇ ಎಲ್ಲವನ್ನೂ ಮರೆಯುವ ಪ್ರಯತ್ನ ಮಾಡುವಾಗಲೇ .....
ಅದೊಂದು ದಿನ ರಾತ್ರಿ!
ನಾನು, ಕಾರ್ತಿಕ್ ಹಾಗೂ ಕಾರ್ತಿಕ್ ಹೆತ್ತವರು ಎಲ್ಲರೂ ಊಟ ಮಾಡಿ 
ಮಲಗಬೇಕು ಆಗ ಸಮಯ 11ಘಂಟೆ 
ನಾನು ಗೆಟ್ ನ ಬಾಗಿಲು ಹಾಕುತ್ತೇನೆ ಎಂದು ಹೊರ ಬಂದೆ ..
ಅದೇ ಸಮಯದಲ್ಲಿ ಪವರ್ ಕಟ್ ಆಯ್ತು!
ಆಗ ನಡೆಯಿತು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸುವ ಹಾಗೆ ಒಂದು ಘಟನೆ!
===================13===================

ಅಲ್ಲಿ ಬಚ್ಚಿಟ್ಟು ಕೊಂಡಿದ್ದ ...ಇಬ್ಬರು ನನ್ನ ಕೊಲ್ಲಲು ಕತ್ತಿ ಬೀಸಿದಾಗ ....
ಕತ್ತಲಿದ್ದಾ ಕಾರಣ ಅದು ನನಗೆ ತಾಕಲಿಲ್ಲ ...
ನಾನು ಕೂಡಲೇ ಕಿರುಚಿಕೊಂಡೆ ..
ಒಳಗಿಂದ ಬಂದ ಕಾರ್ತಿಕ್,ಅವರ ತಂದೆಯ ಕಂಡ ಕೂಡಲೇ
ನನ್ನ ಕೊಲ್ಲಲು ಬಂದಿದ್ದ ಹಂತಕರು …
ಕಂಪೌಂಡ್ ಮೇಲೆ ಏರಿ ಅಲ್ಲಿಂದ ಓಡಿ ಹೋದರು ........
ನಂತರ ಒಳಗೆ ಬಂದೋ ....
ನಮಗೆ ಏನು ಮಾಡಬೇಕು ಅಂತಾನೆ ಗೊತ್ತಾಗಲಿಲ್ಲ ..
ಅವರು ಯಾಕೆ ನನ್ನ ಕೊಲ್ಲಲು ಬಂದಿದ್ದರು ?
ಅವರ್ಯಾರು? ಅನ್ನೋದೆಲ್ಲ ತುಂಬಾ ಕಾಡುತ್ತಿತ್ತು ..
ಮಾರನೆಯ ದಿನ ಒಂದು ಫೋನ್ ಬಂತು! ಕಾರ್ತಿಕ್ ಅಮ್ಮ ತೆಗೆದು ,
ಭಾವನ ನಿನ್ನ ಜೊತೆ ಯಾರೋ ಮಾತಾಡಬೇಕಂತೆ ಬಾ ಮ ಅಂದ್ರು!
ನಾನು ಮಾತಾಡಿದೆ.
ಹಲೋ .....ಯಾರು ?
ನಾವು ಯಾರು ಅನ್ನೋದು ಮುಖ್ಯ ಅಲ್ಲ 
ನೆನ್ನೆ ನಮ್ಮಿಂದ ನೀನು ತಪ್ಪಿಸಿಕೊಂಡಿರಬಹುದು ..
ಆದರೆ ಯಾವತ್ತಿದ್ದರೂ ನಿನ್ನ ಪ್ರಾಣ ನಮ್ಮ ಕೈಯಲ್ಲೇ ಹೋಗೋದು !
ನನ್ನ ಯಾಕೆ ಕೊಲ್ಲಬೇಕು ಅಂತ ಇದ್ದೀರಾ ನಾನು ಏನ್ ಮಾಡ್ದೆ ಅಂತ ?
ಅಳುತ್ತಲೇ ಕೇಳಿದೆ 
ನಮ್ಮ ಜಾತಿ ಮುಖಂಡನ್ನ ನೀನು ಜೈಲಿಗೆ ಕಳುಹಿಸಿದ್ದೀಯಾ  ..
ಬೇರೆ ಜಾತಿಯವರೆಲ್ಲ ನಮ್ಮನ್ನ ನೋಡಿ ಆಡ್ಕೊಲೋ ಹಾಗೆ ಮಾಡಿದ್ದೀಯಾ ...
ನಿಮ್ಮ ಜಾತಿ ಮುಖಂಡನೆ ಸರಿ ಇಲ್ಲ ಇನ್ನೂ ನೀವು ?
ಅಂತ ನಮ್ಮ ಮುಖದ ಎದುರಿಗೆ ಜನ ಪ್ರಶ್ನೆ ಮಾಡ್ತಾ ಇದ್ದಾರೆ
ಎಲ್ಲ ನಿನ್ನಿಂದ ......ನಿನ್ನ ಬಿಡಲ್ಲ ಅಂತ ಕಾಲ್ ಕಟ್ ಮಾಡಿದರು ..
ನನಗೆ ಏನು ಮಾಡಬೇಕು ಅನ್ನೋದೇ ತೋಚದೆ ಹಾಗೆ ಮೌನವಾಗಿ ಕುಳಿತೆ ..
ನಡೆದ ವಿಷಯವನ್ನು ಕಾರ್ತಿಕ್ ತಂದೆಗೆ,ಕಾಲ್ ಮಾಡಿ ಕಾರ್ತಿಕ್ ತಾಯಿ ಹೇಳಿದಾಗ 
ಅವರು ಓಡಿ ಬಂದು ...
ಹೆದರಬೇಡ ಭಾವನ ನಾವು ಇದ್ದೀವಿ
ನಮ್ಮನ್ನ ದಾಟಿ ನಿನ್ನ ಯಾರು ಏನು ಮಾಡಕ್ಕೆ ಆಗಲ್ಲ!
ಇಲ್ಲ ಅಂಕಲ್ ....ನನಗೂ ಯಾಕೋ ಎಲ್ಲಾ ಸಾಕಾಗಿದೆ.
ಮನಸಿಗೆ ನೆಮ್ಮದಿಯೇ ಇಲ್ಲ,
ಒಂದಾದ ಮೇಲೆ  ಒಂದು ನಿರಂತರವಾಗಿ ಆಗ್ತಾನೆ  ಇದೆ..
ಅದಕ್ಕೆ ನಾನು ಈ ಊರನ್ನೇ ಬಿಡಬೇಕು ಅಂತ ಇದ್ದೀನಿ ...
ಏನಮ್ಮ ಹೇಳ್ತಾ ಇದ್ದೀಯ ?
ನಮ್ಮನ್ನ ಬಿಟ್ಟು ಎಲ್ಲಿ ಹೋಗ್ತೀಯ ?
ಸಿಟಿಗೆ ಹೋಗಿ ಅಲ್ಲೇ ಯಾವುದಾದರೂ ಒಂದು ಹಾಸ್ಟೆಲ್ ನಲ್ಲಿದ್ದು 
ಓದೋಣ ಅಂತ ಅನ್ಕೊಳ್ತಾ ಇದ್ದೀನಿ ……….
ಯಾಕೆ ಭಾವನ ನೀನು ಹುಟ್ಟಿದ ಊರನ್ನೇ
ಬಿಡಬೇಕು ಅಂತ ಇದ್ದೀಯಮ್ಮ ಯೋಚನೆ ಮಾಡು!
ಮೊದಲು ನನ್ನ ಎಲ್ಲರೂ  ಅಲ್ಲಿ ನೋಡು ರಾಮಯ್ಯನ ಮಗಳು ಬರ್ತಾ ಇದ್ದಾಳೆ 
ಅಂತ ತುಂಬಾ ಗೌರವದಿಂದ ನೋಡೋರು ಆದರೆ
ಈಗ ಅಲ್ಲಿ ನೋಡು ಇವಳ್ಳಪ್ಪಾನೆ ಮೂರು ಕೊಲೆ ಮಾಡಿದ್ದು ಅಂತ ಹೇಳ್ತಾರೆ...
ಯಾರೂ ಕೂಡ ಕಲ್ಪನೆಯಲ್ಲೂ  ಯೋಚನೆ ಮಾಡದ ..
ಘಟನೆಗಳು ನನ್ನ ಬದುಕಿನಲ್ಲಿ ನಿಜವಾಹಿಯೂ ನಡೆದಿದೆ ...
ಇದರಿಂದ ನಾನು ಹೊರಗೆ ಬರಬೇಕು ಅಂದ್ರೆ ಸ್ವಲ್ಪ ದಿನ 
ಊರಿಂದ   ದೂರ ಇರಲೇ ಬೇಕು 
ಹೂಂ ...........
ನಿನ್ ಹೇಳೋದು ಸರಿನೆ ,,
ಆಡೋ ವಯಸ್ಸಿನಲ್ಲೇ ಏನ್ ಏನೋ ನಡೆದಿದೆ ..
ಸರಿ ನಮ್ಮ ಸಂಬಂಧಿಕರ ಮನೆ ಇದೆ..
ಅವರ ಮನೆಯಲ್ಲಿದ್ದು ನೀನು ಓದಿಕೋ ...
ಅವರಿಗೂ ಯಾರೂ ಇಲ್ಲ ಸ್ವಲ್ಪ ವಯಸ್ಸೂ ಆಗಿದೆ
ಅವರಿಗೆ ಮಕ್ಕಳು ಇಲ್ಲ..
ಗಂಡ,ಹೆಂಡತಿ ಇಬ್ಬರೇ ಇದ್ದಾರೆ ಮನೇಲಿ
ನಿನ್ನ ತಮ್ಮ ಮಗಳ ಹಾಗೆ ನೋಡಿಕೊಳ್ತಾರೆ .....
ಸರಿ ಅಂಕಲ್ ....
ಅಂತ 
ನಾಲಕ್ಕು ದಿನಗಳ ನಂತರ...
ಪೋಲೀಸರ  ಕಾವಲಿನಲ್ಲಿ  ಹೋಗಿ ಕಾಲೇಜ್ ನಿಂದ TC ತಂದು....
ಊರಿಗೆ ಹೋಗಲು ರೆಡಿ ಯಾಗುತ್ತಿದ್ದಾಗ..ಕಾರ್ತಿಕ್ ತಂದೆ..
ನೋಡು ಭಾವನ..
ನೀನು ಯಾವತ್ತಿದ್ದರೂ ನಮ್ಮ ಸೊಸೆ..
ಅನ್ನೋದು  ಆಗಲೇ ನಿರ್ಧರಿಸಿ ಬಿಟ್ಟಿದೆ..
ಈ ಆಗಿರೋ ಘಟನೆಗಳೆಲ್ಲ ನೀನು ಮರೆಯಕ್ಕೆ
ಸ್ವಲ್ಪ ಸಮಯ ಬೇಕು ಅದಕ್ಕೆ ನಿನ್ನ ಊರಿಗೆ ಕಳಿಸ್ತ ಇದ್ದಿವಿ ...
ಕೆಲವೇ ತಿಂಗಳು ಬಿಟ್ಟು ನಿನಗೂ,ಕಾರ್ತಿಕ್ ಗೂ,
ಆ ಸಿಟಿಯಲ್ಲೇ ನಿಮಗೆ ನಿಚ್ಚಿತಾರ್ಥ ಮಾಡಿ..
ಸ್ವಲ್ಪ ದಿನದಲ್ಲೇ ಮದುವೆ ನೀನು ನೆಮ್ಮದಿಯಾಗಿ ಓದ್ತಾ ಇರು ..
ಆಯ್ತು ಅಂಕಲ್ ...
ಅಂಕಲ್ ಅಲ್ಲ ಮಾವ ...
ಆಯ್ತು ಮಾವ...
ಅಂತ ನಗುತ್ತ ಕಾರ್ತಿಕ್ ತಂದೆ,ತಾಯಿ ಇಬ್ಬರ ಕಾಲಿಗೂ ಬಿದ್ದೆ ...
ಚೆನ್ನಾಗಿರಮ್ಮ ನಿನಗೆ ಇನ್ನಾದರೂ ಮನಸಿಗೆ ನೆಮ್ಮದಿ ಸಿಗಲಿ  …
ಅಂತ ಆಶೀರ್ವಾದ ಮಾಡಿದರು ..
ನನ್ನ ಸಿಟಿ ವರೆಗೂ ಬಂದು ಬಿಟ್ಟು ಬರಕ್ಕೆ ಕಾರ್ತಿಕ್ ನನ್ನ ಜೊತೆಯಲ್ಲೇ ಬಂದ...
ನಾವಿಬ್ಬರೂ ರೈಲ್ ನಲ್ಲಿ ಹೋಗಲು ಹೋಗುತ್ತಿದ್ದೋ ...ಆಗ ಸಮಯ ಮಧ್ಯಾಹ್ನ 12
ನಾನಿದ್ದ ಮನೆಯ ದಾಟುವಾಗ 
ಹಾಗೆ ನನ್ನ ಮನೆಯನ್ನೇ ನೋಡುತ್ತಾ ನಡೆದು ಬರುತ್ತಿದ್ದೆ..
ನನ್ನ ಕಣ್ಣುಗಳಿಗೆ ಆ ಸತ್ತ ಮೂರು ಜನ ಕಾಣುವ ಹಾಗೆ ಅನ್ನಿಸುತ್ತಿತ್ತು 
ನಮ್ಮ ಮನೆಯ ಮುಂದೆಯೇ ಅವರು ನಿಂತು ನನ್ನನ್ನೇ ನೋಡುತ್ತಾ ಇದ್ದರು
ನಾನು ಅಲ್ಲಿಂದ ಬರುವವರೆಗೂ ..........
ಸಿಟಿ ಗೆ ಬಂದೋ ..ನನ್ನ ಬಿಟ್ಟು ಹೊರಡುವಾಗ ಕಾರ್ತಿಕ್ ನನ್ನ ಕೈ ಹಿಡಿದು...
ಭಾವನ.........ನನ್ನ ಬದುಕಿನಲ್ಲಿ ನಿನ್ ನನಗೆ ಸಿಕ್ತೀಯ ಅಂತ ನಾನು ಅನ್ಕೊಂಡೆ ಇರ್ಲಿಲ್ಲ..
ನಿನ್ನ ತುಂಬಾ ಪ್ರೀತಿಸ್ತೀನಿ ಕಣೆ ...ಹೇಳಕ್ಕೆ ಆಗಲ್ಲ ...
ತಾರೆ ಕೈಗೆ ಸಿಕ್ಕಷ್ಟು ಖುಷಿ ನನಗೆ ....
ಬಟ್ ನನಗೆ ನಿನ್ ಸಿಗಕ್ಕೂ ಮೊದಲು
ಇಷ್ಟೆಲ್ಲಾ ಕಹಿ ಘಟನೆಗಳು ಆಗುತ್ತೆ ಅಂತ ನಾನು ಅಂದು ಕೊಂಡಿರಲಿಲ್ಲ ...
ಏನ್ ಮಾಡೋದು ಏನ್ ಆಗಬೇಕು ಅಂತ ಇದಿಯೋ ಅದು ಆಗಿದೆ...
ಒಂದು ಹೇಳ್ತೀನಿ ...ನಿನ್ನ ತಂದೆ,ತಾಯಿಯ ಪ್ರೀತಿನ ನನ್ನ ಕೈಯಲ್ಲಿ ಕೊಡಕ್ಕೆ ಆಗಲಿಲ್ಲ ಅಂದ್ರೂ
ನನ್ನ ಪ್ರೀತಿಯಿಂದ ನಿನ್ನ ಎಲ್ಲ ನೋವನ್ನ ನಾನು ಮರೆಸ್ತೀನಿ ....
ನನ್ನ ಜೀವ ನಿನಗೇನೆ ...
ನಾನು ಇನ್ನೂ  ಬದುಕೋದು ಸಹ ನನ್ನ ಭಾವನಗೆನೆ ...
ಸಾಕು ಕಣೋ ನನಗೆ ಬೇರೆ ಏನೂ ಬೇಡ...
ನಿನ್ನ ಪ್ರೀತಿ ಒಂದು ಇದ್ದರೆ ಸಾಕು...
ಎಷ್ಟೇ ನೋವುಗಳೂ ಬಂದರೂ ನಾನು ಎದುರುಸ್ತೀನಿ ..
ಸರಿ ಭಾವನ ಹುಷಾರು ..ಅಂಡ್ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ ಬಂಗಾರೀ .
ಯಾವಾಗಲೂ ಯಾವೊದೋ ಒಂದು ಯೋಚನೇನೆ ಮಾಡ್ತಾ ಇರಬೇಡ..
ನನ್ನ ಜೊತೆ ಮಾತಾಡಬೇಕು ಅಂತ ಅನ್ನಿಸಿದ ಕೂಡಲೇ ಕಾಲ್ ಮಾಡು ...
ನನ್ನ ನೋಡಬೇಕು ಅನ್ನಿಸಿದ ಕೂಡಲೇ ಹೇಳು ನಿನ್ನ ಮುಂದೆ ಬರ್ತೀನಿ..
ಸರಿ ಎಲ್ಲಿ ಒಂದು ಸಲ smile ಮಾಡು  .........
ವಾವ್ ನಕ್ಕಾಗ ಎಷ್ಟು ಚೆನ್ನಾಗಿದ್ದೀಯ ಗೊತ್ತ ...
ಈ ನಗುನ ನೋಡಿ ಎಷ್ಟೋ ದಿನ ಆಗಿತ್ತು .........
ಓಕೆ ನನ್ನ ಮಾಹಾರಾಣಿ ನಾನು ಬರಲೇ ....
ಆಯ್ತು ಕಣೋ ಹುಷಾರಾಗಿರು ಆಯ್ತಾ ...
ಆಯ್ತು ಎಲ್ಲ ನಿಮ್ಮ ಅಪ್ಪಣೆಯಂತೆ ....ಬೈ ಪ್ಲೀಸ್ ಟೆಕ್ ಕೇರ್ ...
ಓಕೆ ಬೈ .................
ನಂತರ ..
ಒಂದು ಕಾಲೇಜ್ ನಲ್ಲಿ ನನಗೆ ಸೀಟ್ ಕೂಡ ಸಿಕ್ಕಿತು ...
ನಾನಿದ್ದ  ಮನೆಯವರು  ತುಂಬಾ ಒಳ್ಳೆಯವರು ನನ್ನ ತುಂಬಾ ಪ್ರೀತಿಸುತ್ತಿದ್ದರು …
ಆ ಮೂರು ದೆವ್ವಗಳಿಗಿಂತ....
ಹಣ..ಜಾತಿ..ಮಾನ .
ಅನ್ನೋ ಮೂರು ದೆವ್ವಗಳ ಭಯವೇ ನಮಗೆ ಅಧಿಕವಾಗಿತ್ತು!!
ಹೀಗ ವರುಷಗಳು ಉರುಳಿದವು ......
ನನಗೂ ಕಾರ್ತಿಕ್ ಗೂ ಮದುವೆ ಕೂಡ ಆಯ್ತು ...
ಕಾರ್ತಿಕ್ ಒಂದು ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದಾನೆ
ನಾನು MBBS ಓದುತ್ತ ಇದ್ದೀನಿ ...
ಕಾರ್ತಿಕ್ ನ ತಂದೆ,ತಾಯಿ ಅದೇ ಊರಿನಲ್ಲಿದ್ದಾರೆ ....
ಈಗ ನಾವು ಬೇರೆ  ಊರಿನಲ್ಲಿದ್ದೀವಿ  ....
ನಾವು ಇರುವ ಜಾಗ ,ಅತ್ತೆ ಮಾವನಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ...
ಎಲ್ಲೋ ಇದ್ದೀವಿ ,ತುಂಬಾ ಸಂತೋಷವಾಗಿದ್ದೀವಿ...
ಹಾಗಾಗ ಹೆತ್ತವರ ನೆನಪು ಕಾಡೋದು ಉಂಟು ....
ಆಗೆಲ್ಲ ಕಾರ್ತಿಕ್ ನನ್ನ ಮಗುತರ ಸಮಾಧಾನ ಮಾಡ್ತಾನೆ ...
ಬದುಕಿನಲ್ಲಿ ಎಷ್ಟೋ  ನೆನಪುಗಳು ನೆರಳ ಹಾಗೆ ನಮ್ಮ ಜೊತೆಯಲ್ಲೇ 
ಬೇಡವೆಂದರೂ ಪ್ರಯಾಣಿಸುತ್ತೆ.........!!
ಇಂತಿ ನಿಮ್ಮ : ಭಾವನ ಕಾರ್ತಿಕ್!


ಮುಕ್ತಾಯ............!!!
===================ನನ್ನ ಮಾತುಗಳು!===================

ಎಲ್ಲರಿಗೂ ನಮಸ್ಕಾರ!
ಮೊದಲ ಬಾರಿಗೆ ಒಂದು ಕುತೂಹಲವಾದ ಕಥೆಯನ್ನು
ನಿಮ್ಮ ಮುಂದೆ ಇಡುವ ಪ್ರಯತ್ನ ಪಟ್ಟೆ....
ನನ್ನ ಮೊದಲ ಕಥೆ 
ಯಶಸ್ಸಿನ .....ನಂತರ 
ಸ್ವಲ್ಪ ತಿಂಗಳು ಬಿಟ್ಟು …….
ನಾನು  ಮತ್ತೊಂದು ಕಥೆ ಬರೆಯುತ್ತಿದ್ದೇನೆ 
ಅದು ಒಂದು ಊರಿನಲ್ಲಿ ಸಂಚಲನ ಸೃಷ್ಟಿಸಿದ ನೈಜ ಘಟನೆಗಳ ಆಧಾರಿತ 
ಎಂದು ನಾನು ಪ್ರಕಟಿಸಿದಾಗ ........
ನನ್ನ ಮೇಲೆ ಭಾರೀ ನಿರೀಕ್ಷೆಗಳು ವ್ಯಕ್ತವಾಗಿತ್ತು.. 
ನನ್ನ ಪ್ರೀತಿಯ ಓದುಗರಿಂದ ,
ಅವರ ನಿರೀಕ್ಷೆ ನಿರಾಸೆ ಮಾಡಲಿಲ್ಲವೆಂದು 
ಹಾಗೂ ಸ್ವಲ್ಪ ಮಟ್ಟಿಗಾದರೂ ಅವರು ಮೆಚ್ಚಿಕೊಳ್ಳುವ ಹಾಗೆ 
ಬರೆದಿದ್ದೇನೆ ಎಂದು ನಂಬುತ್ತೇನೆ ........
ಹಾಗೆ ಇದೆ ವೇಳೆಯಲ್ಲಿ ಕಥೆಯನ್ನು ಸಮಯಕ್ಕೆ ಮುಗಿಸದೆ ಇದ್ದದಕ್ಕೆ
ಕ್ಷಮೆಯನ್ನು ಕೇಳುತ್ತೇನೆ.....
ಕೆಲವು..ಮಾನಸಿಕ ..ದೈಹಿಕ ..
ತೊಂದರೆಗಳು ಕಾಡಿದ್ದುಂಟು ...
ಅದರಿಂದಲೇ ಸ್ವಲ್ಪ ತಡವಾಗಿ
ಕಥೆಯ ಮುಕ್ತಾಯದ ಅಂತ ತಲುಪಿದ್ದು ...!
ನನ್ನ ಓದುಗರಿಗೆ ಎಲ್ಲೂ ಕಥೆಯ 
ಕುತೂಹಲ ಕಮ್ಮಿ ಯಾಗಬಾರದೆಂದೆ ..
ಕಥೆಯ ಪುಟಗಳನ್ನ ಪ್ರಕಟಿಸುವ ಜಾಗದಲ್ಲಿ
ಕಥೆಯ ಪ್ರಮುಖ್ಯವಾದ ಚಿತ್ರಗಳನ್ನು ಪ್ರಕಟಿಸಿ 
ಓದುಗರನ್ನು  ಹಿಡಿದು  ಇಟ್ಟಿದ್ದೆ..
ಈಗ ಈ ಕಥೆಯ ಬರೆಯಲು ನನಗೆ ಸ್ಪೂರ್ತಿಯಾದ ವಿಷಯಗಳಿಗೆ  ಬರೋಣ  ..
ನನಗೆ ಈ ಘಟನೆಗಳನ್ನು ಕೇಳಿ ಎರಡು ದಿನ ಸರಿಯಾಗಿ ನಿದ್ದೆಯೂ ಸಹ ಬರಲಿಲ್ಲ..
ನಾನು, ನನ್ನಮ್ಮ  ಈ ಘಟನೆಗಳ ಬಗ್ಗೆ ತುಂಬಾ ಮಾತನಾಡಿದ್ದಿವಿ..
ನಮ್ಮ ಪಕ್ಕದ ರಾಜ್ಯವಾದ ತಮಿಳು ನಾಡಿನಲ್ಲಿ ನಡೆದ ಘಟನೆ ಇದು..
ಕೆಲವು ವರುಷಗಳ  ಹಿಂದೆ ಒಂದು ಜೋಡಿ  
ಪ್ರೀತಿಸಿ ಮನೆಯ ಬಿಟ್ಟು ಒಬ್ಬರ ಮನೆಗೆ ಬಂದು ಆಶ್ರಯ ಪಡೆಯುತ್ತಾರೆ...
ಅವರನ್ನು ಹುಡುಕಿ ಬಂದ ಆ ಹುಡುಗಿಯ ತಂದೆ ...
ಹಾಗೂ ಆ ಜೋಡಿಗಳು ಕಾಣೆಯಾಗುತ್ತಾರೆ...
ಇದರ ಬಗ್ಗೆ ಆ ಊರಿನ ಯಾರೇ ಆಗಲಿ  ತುಂಬಾ ತಲೆ ಕೆಡಿಸಿಕೊಳ್ಳುವುದಿಲ್ಲ ...!!
ಇದಾದ ನಾಲಕ್ಕು ವರುಷಗಳ ನಂತರ ಅಂದು ಆಶ್ರಯ ನೀಡಿದ್ದ  ಮನೆಯವರ ಮಗಳು 
ಒಬ್ಬ ಹುಡುಗನ ಜೊತೆ ಮನೆ ಬಿಟ್ಟು ಓಡಿ ಹೋಗುತ್ತಾಳೆ ..
ಅವಳನ್ನು ಹುಡುಕುವಾಗಲೇ ಒಂದು ದಿನ ತನ್ನ ಪ್ರಿಯಕರನ ಜೊತೆ 
ಬಂದು ಪೋಲಿಸ್ ಸ್ಟೇಷನ್ ನಲ್ಲಿ ...
ನಾಲಕ್ಕು ವರುಷಗಳ ಹಿಂದೆ ಕಾಣೆಯಾದ ...
ಆ ಮೂರು ಜನಗಳನ್ನು ಕೊಂದು ತನ್ನ ಮನೆಯ ಹಿತ್ತಲಿನಲ್ಲೇ ಹೂತಿರುವುದಾಗಿಯೂ ..
ಇದನೆಲ್ಲ ತನ್ನ ತಾಯಿಯೇ ನನಗೆ ಹೇಳಿದ್ದಾಗಿಯೂ 
ನನ್ನ ತಂದೆ ನನ್ನನ್ನೇ ಕೊಲ್ಲಲು ಮುಂದಾಗಿದ್ದಾಗಿಯೂ  ಹೇಳುತ್ತಾಳೆ..
ಇದನ್ನ ಮೊದಲು ಗಂಭೀರವಾಗಿ ಪರಿಗಣಿಸದ 
ಪೋಲಿಸ್ ನಂತರ ಆ ಹುಡುಗಿಯ ಮಾತಿನ ಮೇಲೆ ನಂಬಿಕೆ ಬಂದು 
ವಿಚಾರಣೆ ಶುರು ಮಾಡಿದಾಗ ..
ಆ ಭಯಾನಕವಾದ ಸತ್ಯ ಘಟನೆಗಳು ಹೊರ ಜಗತ್ತಿಗೆ ತಿಳಿಯುತ್ತದೆ..
ತನ್ನ ಮಗಳಿಗಾಗಿ ಕೂಡಿಟ್ಟಿದ್ದ  ಹಣ ...
ತನ್ನ ಜೀವ.ಹಾಗೂ ಮಗಳ,ಅಳಿಯನ ಜೀವಕ್ಕೆ ಕೊಲ್ಲಿ ಇಡುತ್ತದೆ ಎಂದು 
ಕೊಳ್ಳದ ಒಂದು ತಂದೆ...
ತನ್ನ ಮಾನ ,ಮರ್ಯಾದೆಗಾಗಿ ತನ್ನ ಸ್ವಂತ ಮಗಳನ್ನೇ ಕೊಲ್ಲಲು ಮುಂದಾದ
ಮತ್ತೊಂದು ತಂದೆ...
ನಾಲಕ್ಕು ವರುಷಗಳಾದರೂ ಒಂದು ಸುಳಿವೂ ಇಲ್ಲದೆ 
ಇದ್ದ ಆ ಮೂರು ಕೊಲೆ ಪ್ರಕರಣಗಳು ....
ತಪ್ಪು ಮಾಡಿದ್ದು ತನ್ನ ಹೆತ್ತವರೇ ಆದರೂ 
ಅವರಿಗೆ ಶಿಕ್ಷೆ ಕೊಡಿಸಿದ ಮಗಳು......
ಒಂದು ಜೋಡಿ ಪ್ರೀತಿಸಿ ಮನೆ ಬಿಟ್ಟು ಬಂದಾಗ ಶುರುವಾದ ಘಟನೆ..
ಮತ್ತೊಂದು ಜೋಡಿ ಪ್ರೀತಿಸಿ ಮನೆ ಬಿಟ್ಟು ಹೋದಾಗ ಅಂತ್ಯವಾಗಿದ್ದು ...
ಇವೆಲ್ಲ ವಿಷಯಗಳು ನನ್ನ ತುಂಬಾ ಕಾಡಿತು ...
ಸರಿ.... ಆ ಅಮಾನುಷವಾದ ಘಟನೆಗಳು ತುಂಬಿದ ಮನೆ..
ಆ ಅಮಾನುಷವಾದ ಘಟನೆಗಳಿಗೆ ಸಾಕ್ಷಿಯಾದ ಆ ಮನಗಳು...
ಆ ನಾಯಕಿ ಭಾವನ...
ಮನಸ್ಥಿತಿ ಹೇಗಿರಬಹುದು ...
ಆ ಘಟನೆಗಳು ಹೇಗೆಲ್ಲ ನಡೆದಿರಬಹುದು ...ಎಂದು
ಅವರ ಮನೆಯಲ್ಲೇ.ಆ ಘಟನೆಗಳು ನಡೆಯುವ ಸಮಯದಲ್ಲೇ
ಇದ್ದು ನೋಡಿದ್ದರೆ?ಹೇಗಿರಬಹುದು ?
ಎಂದೆಲ್ಲ ಆಲೋಚನೆಗಳು ನನ್ನಲ್ಲಿ ಮೂಡಿತು ...
ಅದರಿಂದ ನನ್ನ ಕಥೆಯ ಮೂಲಕ ಅಲ್ಲಿಗೆ ಹೋಗಲು ಶುರು ಮಾಡಿದೆ..
ಆ ಘಟನೆಗಳನ್ನು ಇಟ್ಟು ಅದಕ್ಕೆ ಒಂದು ಕಥೆಯ ರೂಪ ಕೊಟ್ಟು ..
ಪುಟ್ಟ ಪುಟ್ಟ (ಪುಟ) ಹೆಜ್ಜೆ ಇಟ್ಟೆ ..
ನನ್ನ ಜೊತೆಯಲ್ಲಿ ನೀವು ಬಂದು ನಿಮ್ಮ ಹೆಜ್ಜೆ ಗುರುತುಗಳನ್ನು (ಕಾಮೆಂಟ್ಸ್)
ಉಳುಸಿ ಹೋಗಿದ್ದಕ್ಕೆ....
ತಪ್ಪುಗಲಿದ್ದರೂ ಮೆಚ್ಚಿದ್ದಕ್ಕೆ..
ಬೇರೆ ಊರುಗಳಿಂದ...ಬೇರೆ ದೇಶದಿಂದ ಕರೆ ಮಾಡಿ 
ನನ್ನ ಬೆನ್ನು ತಟ್ಟಿದ್ದಕ್ಕೆ....ನಾನು ಸದಾ ಚಿರಋಣಿ ....
ನಿಮ್ಮೆರಲ್ಲ ಪ್ರೀತಿಗೆ,ಸ್ನೇಹಕ್ಕೆ ..ಅಕ್ಕರೆಗೆ 
ನನ್ನ ಮನದಾಳದ ಧನ್ಯವಾದಗಳು....
ಮತ್ತೊಂದು ಕಥೆಯೊಂದಿಗೆ ಮತ್ತಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ
ಇಂತಿ ಎಂದೂ ನಿಮ್ಮ ಪ್ರೀತಿಯ ನಿಮ್ಮವ: -ಪ್ರಕಾಶ್ ಶ್ರೀನಿವಾಸ್ 

ಕಥೆಯ ಹಿಂದಿನ ಪುಟಗಳಿಗಾಗಿ (CLICK HERE)
ಈ ಕಥೆಯಲ್ಲಿ ಬರುವ ಪಾತ್ರದಾರಿಗಳ ಹಾಗೂ ಘಟನೆಗಳ ನಿಜವಾದ ಚಿತ್ರಕ್ಕಾಗಿ (CLICK HERE)

TIP:easy2comment
Anonymous ಅಂತ select ಮಾಡಿ ನಿಮ್ಮ ಹೆಸರು ಕೊಟ್ಟು  ಕಾಮೆಂಟ್  ಮಾಡಿ!

42 comments:

 1. hmmmmmm..... inu interesting agi ide adastu bega Monday barali......

  ReplyDelete
 2. ITS VERY INTERESTING IAM WAITING FOR NEXT EPISODE.....

  ReplyDelete
 3. vry nice bro...ista aithu ivathina page... bega next page post maadi...:)

  ReplyDelete
 4. ತುಂಬಾ ಕುತಹಲವಾಗಿದೆ ಪುಟ 12 ಯಾವಗ

  ReplyDelete
 5. ಎಲ್ಲವೂ ಸಲೀಸಾಗಿ ಮುಗಿತು ಅನ್ನೋವಾಗಲೇ ಮತ್ತೊಂದು ಸಸ್ಪೆನ್ಸೆ ತಂದು ಇಟ್ರಿ...ಏನೇ ಅಗಲಿ ಇ ನೈಜ ಘಟನೆ ಮನ ಕಲಕುವಂತಿದೆ ....ಮುಂದಿನ ಸಂಚಿಕೆಯ ನೀರಿಕ್ಷೆಯಲ್ಲಿ.....

  ReplyDelete
 6. wondefull suspence story geleya........I am Waiting Next episode......

  ReplyDelete

 7. ಹೈ ಪ್ರಕಾಶ್ ಒಳ್ಳೆ ಟೈಮಲ್ ಬ್ರೇಕ್ ಕೊಟ್ಬಿಟ್ಯಲ್ಲಮ, ಕಥೆ ಸರಳವಾಗಿದ್ರು ಚೆನ್ನಾಗಿ ಮುಂದುವರಿದಿದೆ ಹಾಗೇ ಕುತೋಹಲ ಮೂಡಿಸಿದೆ

  ReplyDelete
 8. mathe kathe continue madtidiya... k next yavaga.... kavya

  ReplyDelete
 9. wow prakash olle time alli onde saari break kottage aytu.. super.. bega bega next kate barli.. sorry ee kate estu late aagi nodtiroke.. tumba chennagide nimma baravanige..

  ReplyDelete
 10. ಬೇಗ ಬರಲಿ ಕುತೂಹಲ ಹೆಚ್ಚಾಗಿದೆ

  ReplyDelete
 11. freindu hmmmm very nice superbbb freindu adbutha all the best innu echhina kathegalu mudibarali endu asisuttha
  shilpa gm

  ReplyDelete
 12. Lekha Rao:
  Fantastic Prakash.
  Very well written.
  You have a lot of talent.
  Keep up the good work,
  all the best and keep us entertained like this.
  And as for Bhavana and Karthik, wishing them good luck !:) Thank you !

  ReplyDelete
 13. super super vry intresting stry ee stry alli use maida words, line superbbb innu en helbeko gottagta illa totaly fantastic stry gud keep it up

  ReplyDelete
 14. Kathe Chennagi moodi bhandhidhe

  ReplyDelete
 15. Kathe chennagi bhandhidhe... Nimma interest in chennagidhe... alli hogi details collect madkondu bardhidhira good keep it up n all the best for you r future...

  Anuradha

  ReplyDelete
 16. chennagide ri... thnks olle kathe kottidakke.... all d best for future projects... ge

  ReplyDelete
 17. hi sir
  nice ending story
  keep on going on gud new new posts,


  tumbba channgighe nemma bravanige,, keep on going ,,,,,all the best for ur feature...  deepa.

  ReplyDelete
 18. ತುಂಬಾ ಒಳ್ಳೆ ಕೊನೆಯಾಯಿತು ಚೆನ್ನಾಗಿತ್ತು ಕಥೆ ತುಂಬಾ ರೋಮಾಂಚನಕಾರಿ ಹಾಗು ಒಳ್ಳೆ ಸಮಾಜಕ್ಕೆ ಒಳ್ಳೆ ವಿಷಯ ಹೊತ್ತ ಕಥೆಯಾಗಿತ್ತು ಮತ್ತೆ ನಿಮ್ಮ ಬರಹದ ಬಗ್ಗೆ ಎರಡು ಮಾತಿಲ್ಲ ಚೆನ್ನಾಗಿತ್ತು ಪ್ರಕಾಶ್ ನಾನು ನಿಮ್ಮ ಕಥೆ ಮತ್ತೆ ಹನಿ ಕವನಗಳ ಅಭಿಮಾನಿ ಇನ್ನು ಮುಂದೇನು ಸಹ ಇಂತಹ ಒಳ್ಳೊಳೆ ಕಥೆ ಬರೆಯುತ್ತಿರಿ

  ಪ್ರತಿ ಹಂತದಲ್ಲೂ ಕುತುಹಲ ಮತ್ತೆ ನಿಮ್ಮ ಮುಂದಿನ ಸಂಚಿಕೆಗೆ ಕಾಯುವಿಕೆ ನಾನು ಬಹಳ ಕಾಯುತ್ತಿದೆ ಒಳ್ಳೆ ಕಥೆ ಹಾಗು ಒಳ್ಳೆ ಕೊನೆ ಶುಭವಾಗಲಿ ಧನ್ಯವಾದಗಳು

  ReplyDelete
 19. ತುಂಬಾ ಚೇನ್ನಾಗಿ ಕಥೆ ಮುಗಿಸಿದಿರಿ ನಿಮ್ಮ ಮುಂದಿನ ಕಥೆಗೆ ಕಾಯುವ ನಿಮ್ಮ ಅಭಿಮಾನಿ

  ReplyDelete
 20. ಕತೆಯ ಅಂತ್ಯ ತುಂಬಾ ಸುಂದರವಾಗಿ ಮೂಡಿಬಂದಿದೆ.. ಕತೆ ಕೊನೆ ಏನಾಗುತ್ತೋ ಎಂಬ ಕುತೂಹಲ ಕೊನೆ ಆಗಿ ಸುಂದರ ಅಂತ್ಯವಾದರೂ, ಮುಗಿಯಿತಲ್ಲ ಎಂಬ ಬೇಸರ ತುಂಬಾ ಹೆಚ್ಚಾಗಿದೆ.. ನಿನ್ನ ಕತೆಯಲ್ಲಿ ಕುತೂಹಲ ಹೆಚ್ಚಿಸುವ ಘಟನೆಗಳನ್ನು ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದೀರಾ.. ನಾನು ಒಂದೊಂದು ಸಾರಿ ರಾತ್ರಿ ಓದೋವಾಗ ನನ್ನ ಬೆನ್ನ ಹಿಂದೆ ಯಾರೋ ಬಂದ ಹಾಗೆ ಅನುಭವ ಆಗುತ್ತಿತ್ತು.. ಅಷ್ಟು ಚೆನ್ನಾಗಿ ನಿನ್ನ ಕತೆ ಮೂಡಿಬಂದಿದೆ.. ಕೆಲವು ಸನ್ನಿವೇಶಗಳು ಓದುವಾಗ ಆ ಚಿತ್ರಣ ಕಣ್ಣ ಮುಂದೆ ನಡೆಯುತ್ತಿದೆ ಅನ್ನೋ ಹಾಗೆ ಬರುತ್ತಿತ್ತು.. ಕತೆ ಹೇಳುವ ಶೈಲಿ ಸುಂದರವಾಗಿದೆ.. ಈ ಕತೆ ನಿಜವಾಗಿ ನಡೆದ ಘೋರ ಸಂಗತಿ.. ಅದಕ್ಕೆ ನನ್ನ ಬೇಸರ ದುಖವಿದೆ.. ಒಳ್ಳೆ ಮುಖದ ಹಿಂದೆ ಎಂಥ ಕ್ರೂರ ಮನಸ್ಸಿದೆ, ಜಾತಿ ವಿಚಾರದಿಂದ ಎಷ್ಟು ಜೀವ ಹೋಯಿತು.. ಇದೆಲ್ಲ ನೋವನ್ನು ನುಂಗಿ ಜೀವನ ಗೆದ್ದ ಭಾವನಾಗೆ ನನ್ನ ನಮನಗಳು.. ಇಂಥ ಸತ್ಯ ಕತೆ ನಮಗೆಲ್ಲರಿಗೂ ರಸವತ್ತಾಗಿ ಕೊಟ್ಟ ಪ್ರಕಾಶ್ ನಿನಗೂ ನನ್ನ ನಮನಗಳು.. ಬೇಗ ಮತ್ತೊಂದು ಸುಂದರ ಸೊಗಸಾದ ಕತೆ ಬೇಗ ಮೂಡಿಬರಲಿ.. ಧನ್ಯವಾದಗಳು ಪ್ರಕಾಶ್..

  ReplyDelete
 21. Super prakash tumba chennagide film nodida hage ittu

  ReplyDelete
 22. Krishna Krrish:
  Superb Geleya ♥ ed it nd tanksh fr posting such a wonderful story :-)

  ReplyDelete
 23. putta nenna kathege olle tiruvugallu tumba chanage bandu nenn kathege olle anthya kotidiya pa tumba kushi aythu ede rethi ellaru mechuva kathegallanu namage kodi nemma nenappu nema kathe nammellara manasinalli sadha hassirageruthade nemm putta glathi daisy(preethi)

  ReplyDelete
 24. HemZ : gud story
  we ll waiting for your next story..

  ReplyDelete
 25. HemZ : gud story
  we ll waiting for your next story..

  ReplyDelete
 26. ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು...
  ನಿಜಕ್ಕೂ ನಿಮ್ಮೆಲ್ಲರ ಮಾತು ನನಗೆ ಮತ್ತಷ್ಟು ಬರೆಯುವ ಸ್ಪೂರ್ತಿಯ ನೀಡಿದೆ..
  ಅನಿತಾ ಗೌಡ ...
  ನೀವು ಕಥೆ ಶುರುವಾಗಿ ಎರಡನೆಯ ಪುಟಕ್ಕೆ
  ನನಗೆ ಮೇಲ್ ಮಾಡಿ ನಿಮ್ಮ ಅಮೂಲ್ಯವಾದ ಮಾತುಗಳನ್ನು ಹಂಚಿಕೊಂಡಿದ್ದು
  ನನಗೆ ನೆನೆಪಿದೆ ..ನಿಮ್ಮ ಮಾತುಗಳನ್ನು ಕೇಳಿದ ಮೇಲೆ ನನಗೆ ಕಥೆಯ ಮೇಲೆ
  ಮತ್ತಷ್ಟು ಪ್ರೀತಿ ಹೆಚ್ಚಿತು ಕಥೆಯನ್ನು ಎಲ್ಲರೂ ಮೆಚ್ಚುವ ಹಾಗೆ ಕೊಂಡುಕೊಂಡು
  ಹೋಗಬೇಕು ಅನ್ನೂ ಸ್ಫೂರ್ತಿ ನೀಡಿತು ಅಂದು ನಿಮ್ಮ ಮಾತು!
  ಧನ್ಯವಾದಗಳು..ನಿಮ್ಮ ಕವನಗಳ ಅಭಿಮಾನಿ ನಾನು ....
  ಸಂಜು ತುಂಬಾ ಧನ್ಯವಾದಗಳು ನಿಮ್ಮ ವಿಮರ್ಶೆ ನನ್ನ ಪ್ರತಿ ಕಥೆಗೆ
  ಬೇಕು ಅದರಿಂದಲೇ ನಿಮ್ಮ ಮಾತುಗಳನ್ನು ಬಯಸುತ್ತಿದ್ದೆ..
  ಧನ್ಯವಾದಗಳು ಗೆಳೆಯ!
  ನನ್ನ ಪ್ರತಿ ಪೇಜ್ ಗೆ ಬಂದು ಕಾಮೆಂಟ್ ಮಾಡಿದ ನನ್ನ
  ಮಿತ್ರರಿಗೂ ...ಕಾಮೆಂಟ್ ಮಾಡಲು ಮರೆತ ಗೆಳೆಯರಿಗೂ
  ಧನ್ಯವಾದಗಳು ...............!

  ReplyDelete
 27. abba nim nirropane thumba chenaanagitthu..aadre idu katheyagi matrave chenna aadre illi idu sathya ..prapancha dalli heegoo irthare jana antha thilidu manasu allola kallola aithu...

  ReplyDelete
 28. ವೌ ವೌ ಒಳ್ಳೆ ಅಂತ್ಯ ಕೊಟ್ಟರೀ

  ReplyDelete
 29. ಮೈ ನವಿರೇಳಿಸುವ ಕತೆ...
  ಕುತೂಹಲವನ್ನು ಓದುಗರಲ್ಲಿ ಹಾಗೆ ಆರಂಭದಿಂದ ಅಂತ್ಯದವರೆಗೂ ಕಾಯ್ದಿರಿಸಿ ಓದಿಸಿಕ್ಕೊಂಡು ಹೋಗಿದ್ದಿರಿ....

  ReplyDelete
 30. ಕಥೆ ತು೦ಬಾ ಚೆನ್ನಾಗಿ ಮುಡಿ ಬ೦ದಿದೆ.ಘಟನೆಗಳನ್ನು ಚೆನ್ನಾಗಿ .ಒಳ್ಳೆಯ ಕಥೆ

  ReplyDelete
 31. superb bro...kathe thumba chennagithu...each n every line yest chennaghi explain maadi bardidri,,,nijakku ondu movie nodidha haage aithu...bega innondu story start maadi...nanna shuba haaraike nimge yavaglu irathe... :)

  ReplyDelete
 32. ಪ್ರೀತಿಯ ಓದುಗ ಮಿತ್ರರಿಗೆಲ್ಲ ನನ್ನ ವಂದನೆಗಳು!

  ReplyDelete
 33. "ಭಾವನ" ನೈಜ ಘಟನೆಗಳನ್ನೊಳಗೊಡ ಕಥೆಯಾದುದರಿಂದ ಓದುವಿಸಿಕೆಯಲ್ಲಿ ಕೆಲವೊಂದು ಕಡೆ ಭಾವುಕ ಸಂದರ್ಭಗಳುಂಟುಮಾಡುವ ಸನ್ನಿವೆಶಗಳುಂಟು, ಗ್ರಾಮೀಣ ಪ್ರದೇಶದಲ್ಲಿ ಇಂಥಹ ಹಲವಾರು ಘಟನೆಗಳು ನಡೆಯೋದು ಸರ್ವೇ ಸಾಮಾನ್ಯ, ಒಂದು ಕುಟುಂಬದಲ್ಲಿ ಪ್ರೀತಿ ವಿಶ್ವಾಸ ನಂಬಿಕೆಗಳ ಉಳಿವಿಗಾಗಿ ಹಾಗೂ ಮನೆತನದ ಗೌರವಕ್ಕಾಗಿ ಅನುಭವಿಸಲಾಗದ ಸಂಕಟ ಕಷ್ಟಗಳನ್ನು ಎದುರಿಸೋದು ಆ ಮನೆತನದ ಕುರುಹುವಾಗಿರುತ್ತದೆ, ಆದರೆ ಇಲ್ಲಿ ಅದಕ್ಕೆ ವಿರುದ್ದವಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಅಷ್ಟೊಂದು ಅನ್ಯೂನ್ಯತೆಯಲ್ಲಿದ್ದ ಸಂಬಂಧಗಳು ಇಂಥಹ ಘಟನೆಗಳಿಂದ ದೂರವಾಗುವುದುಂಟು. ಆದರೆ ಕಾರ್ತಿಕ್ ತಂದೆ ತಾಯಿಯರು ಕಾರ್ತಿಕ್ ಪ್ರೀತಿಗಿಂತ ಒಬ್ಬ ಅಸಹಾಯಕ ಹೆಣ್ಣುಮಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಅವರ ಮಾನವೀಯತೆಯನ್ನು ತಿಳಿಸುತ್ತದೆ. ಇಲ್ಲಿ ’ಭಾವನ’ಳಲ್ಲಿ ಹಿರಿಯ ತಲೆಮಾರಿಗಿಲ್ಲದ ತಾಳ್ಮೆ, ಜಾಣ್ಮೆಯ ಆತ್ಮಸ್ಥೈರ್ಯವೇ ಶ್ರೀಧರ್ ಮತ್ತು ಸುಧಾ ಕೊಲೆಯ ವಿಷಯ ಹೊರಬರಲು ಸಹಾಯಕವಾಗಿದೆ. ಗ್ರಾಮಸ್ಥರ, ಸಂಬಂಧಿಕರ, ಹಾಗೂ ಸಮಾಜದ ಕೊಂಕು, ಕುಹಕಗಳನ್ನು ಗಣನೆಗೆ ತೆಗೆದುಕೊಳ್ಳದೆ ಈ ಎಲ್ಲ ಕಹಿಘಟನೆಗಳನ್ನು ಧೈರ್ಯವಾಗಿ ಎದುರಿಸಿರೋ ಸುಧಾಳ ಮನಸ್ಥಿತಿಯ ನಿಲುವು ಮೆಚ್ಚುವಂಥದ್ದು. ಕಾರ್ತಿಕ್ ನೆರವಿನಿಂದ "ಪರೋಪಕಾರಕ್ಕೆ ಪರಸ್ಪರ ಸಹಕಾರ’ ಸಿಕ್ಕಿದ್ದು ಸುಧಾಳಿಗೆ ಅನುಕೂಲವಾಯಿತು. "ಹೆಣ್ಣಿಗೆ ತಾ ಮೆಚ್ಚಿದ ಹುಡುಗ ಕೊಡುವ ಬಲವಾದ ಭರವಸೆಯೇ ಅವಳಿಗೆ ಭಗವಂತ ಕರುಣಿಸೋ ಭಾಗ್ಯವಿದ್ದಂತೆ" ಕೆಲವೊಂದು ಸಂದರ್ಭಗಳಲ್ಲಿ ಭರವಸೆಯಿಂದ ಕಳೆದುಕೊಳ್ಳುವುದುಂಟು, ಪಡೆದುಕೊಳ್ಳುವುದೂ ಉಂಟು, "ತವರುಮನೆ ತಾತ್ಕಾಲಿಕ ಒಲಿದವನ ಮನೆ ಉಸಿರುರುವತನಕ" ಈ ಎಲ್ಲಾ ಘಟನೆಗಳಿಂದ ಕೊನೆಗು ಮುಕ್ತಿಹೊಂದಿ, ಭಾವನಳ ಭಾವನೆಗಳಿಗೆ ಸ್ಪಂದಿಸಿರೊ ಕಾರ್ತಿಕ್ ಮತ್ತು ಅವರ ತಂದೆ ತಾಯಿಯಿಯರ ಒಲವಿನ ಆಸರೆ ಸಿಕ್ಕಿರುವುದು ಸಂತಸ ತಂದಿದೆ ಪ್ರಕಾಶ್ ಕಥೆ ತುಂಬಾ ಚೆನ್ನಾಗಿ ಮುಕ್ತಾಯವಾಗಿದೆ. ಈ ಬಗ್ಗೆ ನನ್ನ ಅನಿಸಿಕೆಗಳನ್ನು ಮೊಟಕುಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಪದಗಳು ’ಬ್ಯಾಟರಿ ಲೈಟ್ ತೋರಿಸೋ ಬೆಳಕಿನಂತೆ’ ಜೊತೆಜೊತೆಯಾಗೇ ಮುಂದುವರಿದಿವೆ ಎನ್ ಮಾಡೋದು? ಪದಗಳ ಜೋಡಣೆ ಅತಿಯಯಿತು ಅನ್ನಿಸುತ್ತೆ ಅಲಾ?

  ReplyDelete
 34. ವಾವ್ !!!!
  ಹೇಮಾ ತುಂಬಾ ತುಂಬಾನೇ ಚೆನ್ನಾಗಿದೆ ನಿಮ್ಮ ವಿಮರ್ಶೆ ನನ್ನ ಕಥೆಯ ಬಗ್ಗೆ ಅದರ ಹಿಂದಿನ ಘಟನೆಗಳ ಬಗ್ಗೆ
  ತುಂಬಾನೇ ಖುಷಿಯಾಯಿತು ..........
  ಮನದಾಳದ ವಂದನೆಗಳು!

  ReplyDelete
 35. ಉಮಾ ಪ್ರಕಾಶ್:

  ಪ್ರಕಾಶ್ ಬಹಳ ಕುತೂಹಲ ದಿಂದ ಓದಿಸ್ಕೊಂಡು ಹೋಯ್ತು ! ಅಬ್ಬ ಮೈ ಜುಮ್ ಅಂತ ಇತ್ತು; ನೈಜ್ಯತೆ ಎದ್ದು ಕಾಣ್ತಾ ಇತ್ತು. ಮುಂದೇನು ಮುಂದೇನು ಅನ್ನೋ ಕುತೂಹಲ ಹೆಚ್ಚಿತು ; ಇದನ್ನು ಯಾವುದಾದರು ಒಳ್ಳೆ ನಿರ್ದೇಶಕರಿಗೆ ಕೊಟ್ಟರೆ ಒಳ್ಳೆ ಚಲನ ಚಿತ್ರ ಆಗೋದ್ರಲ್ಲಿ ಸಂದೇಹ ಇಲ್ಲ; ಇದು ಒಳ್ಳೆ ಚಿತ್ರವಾಗಿ ಮೂಡಿ ಬರಲಿ, ಎಲ್ಲರ ಮೆಚ್ಚುಗೆಗೆ ಪಾತ್ರ ಆಗಲಿ ಅಂತ ಹಾರೈಸುತ್ತೇನೆ ಗುಡ್ ಲಕ್ ತಮ್ಮ

  ReplyDelete
 36. Ramya P Gowda :
  U r an excellent story writer... Its superb amazing... I loved d story very much.. Iam d g8 fan of u.. Keep on dng... All d best dude...

  ReplyDelete
 37. Deepika : Thumba chennagide... Ede thara interesting stories baritha eri brother :)

  ReplyDelete
 38. thumba chennagithu ann, mai melina kudhalu ninthkoltha idhvu kathe odhabekandhre, romanchanakari kathe

  ReplyDelete
 39. kathe chennagi mudi bandide, nimma katha shaili thumba hidiside, jeevana paryantha enthaha manastitiyallu kthe bareyuvudu nillisabedi.

  inthaha ondu katheyannu odisiddakke thumba dhayavadagalu

  ReplyDelete
 40. Really good and interesting story prakash.....I like it tumba chennagi mana muttuva haage barediddira......e kate odutta iddare monne nodi banda DRUSHYA film nanapagta ittu.....

  ReplyDelete
 41. ಮೆಚ್ಚಿದ ಎಲ್ಲಾ ಮನಗಳಿಗೂ ಮನದಾಳದ ವಂದನೆಗಳು !

  ReplyDelete