Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Friday, 22 June 2012

ಮೂರು! ಇದು ಮುಕ್ತಾಯವಲ್ಲ, ಆರಂಭ...!

ಒಂದು ನೈಜ ಘಟನೆಯ ಆದರಿಸಿದ ಭಯಾನಕ ಕಥೆ!


ನನ್ನ ಹೆಸರು ಭಾವನ.
ತಂದೆ:ರಾಮಯ್ಯ 
ಊರಿನ ಪಂಚಾಯಿತಿ.. ಹಾಗೂ ಜಾತಿ ಸಂಘದ ಮುಖಂಡ!
ಎಲ್ಲರೂ ರಾಮಣ್ಣ ಅಂತ ಕರಿತಾರೆ..
ಅಪ್ಪಯ್ಯನ ಕಂಡರೆ ಊರಿನವರಿಗೆ ತುಂಬಾ ಗೌರವ!
ಲಲಿತಕ್ಕ!
ಅಂತ ಎಲ್ಲರೂ ಕರೆಯೋ 
ತಾಯಿ:ಲಲಿತ
ಮನೆಯ ಒಡತಿ! 
ನನ್ನ ನೋಡಿಕೊಳ್ಳುವುದೇ ಅಮ್ಮನಿಗೆ ಫುಲ್ ಟೈಮ್ ಕೆಲಸ
ಒಬ್ಬಳೇ ಮಗಳು ಅಂತ ತುಂಬಾ ಪ್ರೀತಿ .
ನಮ್ಮದು ಸುಂದರ ಸಂಸಾರ ನಾವು ಮೂರೇ ಜನ,
ಅಂದದ ಮನೆ!
ಹಿತ್ತಲಿನಲ್ಲಿ ಬಾವಿ ಸುತ್ತಲೂ ಹೂವಿನ ಗಿಡಗಳು!
ನನಗೊಂದು,
ಓದಲು ಪ್ರಶಾಂತವಾದ ..
ಹಿತ್ತಲ ಪಕ್ಕದಲ್ಲೇ ಇರುವ Room!
ನಾನೇ, ಮನೆಯ ಯುವರಾಣಿ

ನಾನು +2 ಓದುತ್ತ ಇದ್ದೆ .
ನಮ್ಮ ಮನೆಯಿಂದ ಕಾಲೇಜಿಗೆ ದೂರವೇ
ಹಾಗಾಗಿ ಹೊಲ, ತೋಟದ ಹಾದಿಯಲೇ ಹೋಗಬೇಕು ..
ನಾನು ಶಾಲೆಯ ದಿನಗಳಿಂದಲೂ ಒಳ್ಳೆಯ ವಿದ್ಯಾರ್ಥಿನಿ ..
ಓದಿನಲ್ಲಿ ಸದಾ ಮುಂದು!
ಪ್ರೀತಿಯ ವಿಷಯದಲ್ಲಿ ಸ್ವಲ್ಪ ದೂರವೇ ಉಳಿದಿದ್ದ ನನಗೆ!
ಪರಿಚಯ ಆದವನೇ ಕಾರ್ತಿಕ್!
ನನ್ನ class mate !
ಸ್ನೇಹ ಅನ್ನೋ ಹೆಸರಲ್ಲಿ ಪರಿಚಯವಾಗಿ,
ಪ್ರೀತಿ ಅನ್ನೋ ಸಂಬಂಧ ಆದವನು .
ಒಂದು ದಿನ ಅವನ ಪ್ರೀತಿಯನ್ನು ನನಗೆ ಹೇಳಿಯೇ ಬಿಟ್ಟ..
ನನಗೆ ನಮ್ಮ ಮನೆಯ ಬಗ್ಗೆ ಚೆನ್ನಾಗಿ ಗೊತ್ತಿತ್ತು 

ಇಲ್ಲ, ಈ ಪ್ರೀತಿನ  ನಮ್ಮ ಮನೆಯಲ್ಲಿ  ಒಪ್ಪಲ್ಲ!
ನಾವು, ಬೇರೆ ಬೇರೆ ಜಾತಿ,ಹಾಗೂ ಊರು! 
ನಮ್ಮ ತಂದೆ 
ತುಂಬಾ ಮಾನ,ಮರ್ಯಾದೆ,ಜಾತಿ
ಅಂತ ಮಾತನಾಡುತ್ತಾರೆ... ಕಾರ್ತಿಕ್ ನಿನ್ನ ಮುಂದೇನೆ ನಿಮ್ಮ ತಂದೆಯ ಕಾಲಿಗೆ ಬಿದ್ದದಾದರೂ ಸರಿ ನಾನು ಒಪ್ಪಿಸುತ್ತೇನೆ! 
ನಾನು ನಿನ್ನ ತುಂಬಾ ಪ್ರೀತಿಸ್ತ ಇದ್ದೀನಿ ಕಣೆ,
ನನಗೂ ಗೊತ್ತು ನಿಮಗೂ ನಮಗೂ ಏಣಿ ಹಾಕಿದರೂ ಎಟುಕಲ್ಲ ಅಂತ,
ಆದರೆ ಈ ಮನಸು ಕೇಳಬೇಕಲ್ಲ ..
ಅದಕ್ಕೆ ನನ್ನ ಪ್ರೀತಿನ ಹೇಳದೆ ಇರುವುದಕ್ಕಿಂತ
ನಿನಗೆ ಹೇಳಿ ಬಿಡೋಣ ಅಂತ ಬಂದೆ ... 


ನೋಡು ನಾಳೆ ನನ್ನ ತಂದೆನ ನೀನು ಒಪ್ಪಿಸಲಿಲ್ಲ..
ಅಂದರೆ ಅವರು ಹೇಳಿದ ಹಾಗೆ ನಾನು ಕೇಳೋದು!ಇಲ್ಲ ನಿಮ್ಮ ತಂದೆನ ನಾನು ಒಪ್ಪಿಸುತ್ತೇನೆ!
ನಿಮ್ಮ ತಂದೆಯ ಒಪ್ಪಿಗೆಯಲ್ಲೇ ನಮ್ಮ ಮದುವೆ ನಡೆಯೋದು! 
ಭಾವನ..


ನಾನು, ಯಾವತ್ತೂ ಜಾತಿ,ಹಣ ಎಲ್ಲ ನೋಡಲ್ಲ ಕಣೋ..
ಆದರೆ ನಿನಗೆ ಗೊತ್ತಲ್ಲ ನಮ್ಮ ತಂದೆಯ ಬಗ್ಗೆ ಅವರು ಈ ಊರಿಗೆ ಹಿರಿಯ
ಜಾತಿಯ ಮುಖಂಡ...ನನಗೆ ಯೋಚಿಸಕ್ಕೆ ಸಮಯ ಬೇಕು ..


ಎಂದು ಹೇಳಿ ನಾ ಹೊರಟೆ...... 
ನನಗೂ ಮೊದಲೇ ಅವನ ಮನಸು,ಗುಣ,ಹಾರೈಕೆ ಮಾಡೋದು
ಎಲ್ಲವೂ ಇಷ್ಟವಾಗಿತ್ತು ...
ನಮ್ಮ ಸ್ನೇಹದ ಬೀಜ ಕ್ರಮೇಣ ಪ್ರೀತಿಯ ಮರವಾಗ ತೊಡಗಿತು 
ಅಪ್ಪ ಹೊಸದಾಗಿ ಒಂದು ಮೊಬೈಲ್ ತಗೊಂಡ್ರು.
ಅದರಲ್ಲಿ ಆಟವಾಡುತ್ತ ಇರುತ್ತೆನೆಂದು ಹೇಳಿ ..
ತೋಟದಲ್ಲಿ ಒಬ್ಬಳೇ ಕಾರ್ತಿಕ್ ಜೊತೆಯಲ್ಲಿ ಮಾತನಾಡುತ್ತ ಇದ್ದೆ
ನಮ್ಮ ರಜೆಯ ದಿನಗಳಲ್ಲಿ ....
ಹೀಗೆ ಸ್ನೇಹ,ಪ್ರೀತಿ ಎಂದು ಸುಂದರವಾಗಿದ್ದ ನನ್ನ ಬದುಕಿನಲ್ಲಿ 

ಮೊದಲ ಬಾರಿಗೆ ಹೊಸದೊಂದು ತಿರುವು!
ಅದೊಂದು ದಿನ.........
ಕಾಲೇಜು ಮುಗಿಸಿಕೊಂಡು ಮನೆಗೆ ಬಂದೆ ...

ಹೇಯ್ ಭಾವನ ನಿನ್ನ room ನಲ್ಲಿ
ಒಂದು ಸರ ಇಟ್ಟಿದ್ದೀನಿ ತಗೊಂಡು ಬಾ...
ಏನಮ್ಮ ಇದು ಸರ..
ಅದನ್ನ ನೀನು ಹಾಕ್ಕೋ …
ಸಕ್ಕತ್ ಆಗಿದೆ 
ಆದರೆ ಹಳೆಯ ಸರ ತರ ಕಾಣುತ್ತೆ,,

ಹೌದು ಕಣೆ  ಯಾರೋ ನಿಮ್ಮ ಅಪ್ಪಂಗೆ ಮಾರಿದ್ದಾರೆ!
ಹಳೆಯ ಚಿನ್ನ ಚೆನ್ನಾಗಿರುತ್ತೆ ಅಂತ ನಿಮ್ ಅಪ್ಪನು ತಂದಿದ್ದಾರೆ  
ಚಿನ್ನದ ಸರ ಕಣೆ ಹುಷಾರು ಮೈ ಮೇಲೆ ನಿಗಾ  ಇರಲಿ ..
ಸರಿ ಸರಿ.....
ಎಂದು ಖುಷಿಯಿಂದಲೇ ಆ ಸರವನ್ನು ಹಾಕಿಕೊಂಡೆ..

ಅಂದು ರಾತ್ರಿ  ನನ್ನದೇ ರೂಂ ನಲ್ಲಿ.......
ಯಾಕೋ ಕತ್ತು ತುಂಬಾ ನೋವುತ್ತಿತ್ತು,,
ಯಾರೋ ಹೆಗಲ ಮೇಲೆ ಕುಳಿತಿರುವಷ್ಟು ಭಾರ!
ತುಂಬಾ ಓದುತ್ತ ಇದ್ದೆ ಅದಕ್ಕೆ ಕತ್ತಿನ ನೋವು ಬಂದಿರಬೇಕು ಎಂದು ಸುಮ್ಮನಾದೆ! .
ಆ ನೋವಿಗೆ ನಿದ್ದೆಯೂ ಸಹ ಬರಲಿಲ್ಲ ...
ಆಗ ಸಮಯ 12ಘಂಟೆ!
ಯಾರೋ ಹಿತ್ತಲಿನಲ್ಲಿ ರಾಮಯ್ಯ , ರಾಮಯ್ಯ
ಎಂದು ಕೂಗುವ ಹಾಗೆ ಕೇಳಿಸಿತು ... ನಾನು ಎದ್ದು ಹೊರ ಬಂದೆ ,
ಅಮ್ಮ,ಅಪ್ಪ hallನಲ್ಲಿ ಇರುವ Roomನಲ್ಲಿ ಮಲಗಿದ್ದರು.
ಯಾರು ಇರಬಹುದು ಎಂದು ನೋಡುವುದಕ್ಕೆ ಹಿತ್ತಲಿನ ಕಡೆ ಹೆಜ್ಜೆ ಹಾಕಿದೆ ..
ಗೆಟ್ ಬಳಿ ಯಾರೋ ನಿಂತಿದ್ದರು ...
ಅವರ ಬಟ್ಟೆಯಲ್ಲ ಕೊಳೆಯಾಗಿತ್ತು ..
ಯಾರು ನೀವು ? ಏನ್ ಆಗಬೇಕಿತ್ತು ??
ಕೇಳುತ್ತಲೇ ಹತ್ತಿರ ಹೋದೆ ..
ರಾಮಯ್ಯ ಇದ್ದಾರ??
ಇದ್ದಾರೆ ಮಲಗಿದ್ದಾರೆ ಏನ್ ಆಗಬೇಕಿತ್ತು ಹೇಳಿ ?
ನಾನು ರಾಮಯ್ಯ  ನೋಡಬೇಕು 
ನೀವು ಬೆಳಗ್ಗೆ ಬನ್ನಿ ಸಿಗುತ್ತಾರೆ..
ಇಲ್ಲ ನನಗೆ ಈಗಲೇ ಬೇಕು ಕರಿ..........
ಅಷ್ಟರಲ್ಲಿ ನನ್ನ ಮಾತನ್ನು ಕೇಳಿ ಅಮ್ಮ ಎಚ್ಚರವಾಗಿ ಹೊರ ಬಂದರು 
ಹಿತಲಿನ ಕಡೆ ..ಬರುವಾಗ 
ಭಾವನ ಅಲ್ಲಿ ಏನೇ ಮಾಡ್ತಾ ಇದ್ದೀಯ ?
ಅಮ್ಮ ಇಲ್ಲಿ ಯಾರೋ ಅಪ್ಪಯ್ಯನ ನೋಡಬೇಕು ಅಂತ 
ಬಂದಿದ್ದಾರೆ.
ಎಂದು ಅಮ್ಮನಿಗೆ ಹೇಳಿ ಗೆಟ್ ನ ಕಡೆ ತಿರುಗಿದೆ....!!
============================ಪುಟ2 ======================


ಅಲ್ಲಿ ಯಾರೂ ಇರಲಿಲ್ಲ....

ನನ್ನ ಹೆಗಲ ಮೇಲೆ ಯಾರೋ ಕೈ ಇಟ್ಟರು

ಆ ಭಯದಲ್ಲೇ ತಿರುಗಿದರೆ 

ಅದು ಅಮ್ಮನೇ....

ಯಾರೇ ಇದ್ದಾರೆ ಇಲ್ಲಿ ?

ಅಮ್ಮ ಇಲ್ಲೇ ನಿಂತಿದ್ದರು ...

ಅಮ್ಮ ಗೆಟ್ ತೆಗೆದು ಹೊರಗೆ  ಹೋಗಿ ಸುತ್ತಲೂ ನೋಡಿ... 

ಹೇಯ್ ಯಾರೂ ಇಲ್ಲ ಕಣೆ ನೀನು ವಯಸ್ಸು ಹುಡುಗಿ  ಹೀಗೆಲ್ಲ  

ಹೊತ್ತಿಲ್ಲದ ಹೊತ್ತಿನಲ್ಲಿ ಹೊರಗೆ ಬರಬೇಡ ಹೋಗು ಒಳಗೆ...

ನಾನು ತಿರುಗಿ ನೋಡುತ್ತಲೇ Roomಗೆ ಬಂದು ಮಲಗಿದೆ ...

ಮಾರನೆಯ ದಿನ ಕಾಲೇಜಿಗೆ ರೆಡಿ ಆಗಿ ,

ಹೊಸ ಸರ ಎಲ್ಲರಿಗೂ ತೋರಿಸಬೇಕು ಅನ್ನೋ ಆಸೆ.

ಖುಷಿಯಿಂದಲೇ ಹೊರಟೆ.  

ಕಾಲೇಜಿನಲ್ಲಿ ಎಲ್ಲರೂ ನೋಡಿ ..

ಹೇಯ್ ಎಷ್ಟೇ ಆಯಿತು ? ಎಷ್ಟು ಗ್ರಾಂ ಇದೆ ?

ನಮ್ಮ ಅಪ್ಪಯ್ಯ ತಂದಿದ್ದು ಕಣೆ ಹಳೆ ಚಿನ್ನ.. 50ಗ್ರಾಂ ಇದೆ ..

ಹೌದಾ ತುಂಬಾ ಚೆನ್ನಾಗಿದೆ  ಭಾವನ....

ಅಂದು ಶನಿವಾರ ....
ನನ್ನ ಗೆಳೆಯರೂ ಸಹ ಸ್ವಲ್ಪ ದೂರ ನನ್ನ ಜೊತೆ ಬಂದರು ..
ಸರಿ ಕಣೆ ಸರ ಬೇರೆ ಹಾಕ್ಕಿದ್ದಿಯ ಹುಷಾರಾಗಿ ಹೋಗು...
ಆಯಿತು ನೀವು ಅಷ್ಟೇ ಹುಷಾರು ಅಂತ ಹೇಳಿ ಮುಂದೆ ಬಂದೆ ...
ಮಧ್ಯಾಹ್ನದ ಸಮಯದಲ್ಲಿ ತೋಟದ ಹಾದಿಯಲ್ಲಿ ಒಬ್ಬಳೇ ಬರುವಾಗ!
ದೂರದಲ್ಲಿ ಯಾರೋ ಒಂದು ಹುಡುಗಿ ನಿಂತಿರುವ ಹಾಗೆ ಕಾಣಿಸಿತು ..
ನಾನು ಹತ್ತಿರ ಹೋಗಿ ಅವಳನ್ನ ಹಾದು ಹೋಗುವಾಗ...
ಅವಳೇ ಕರೆದಳು .........

ಹೇಯ್ ಭಾವನ,
ನನ್ನ ಹೆಸರು ನಿಮಗೆ ಹೇಗೆ ಗೊತ್ತು ?
ನನಗೆ ಎಲ್ಲ ಗೊತ್ತು!.
ಯಾರು ನೀವು ? ನಿಮ್ಮನ್ನ ಎಲ್ಲೋ ನೋಡಿದ ನೆನಪು ??
ನನ್ನ ಹೆಸರು ಸುಧಾ  ,
ಸುಧಾ ……..?
ನಾನು ಪಕ್ಕದ ಊರಿನವಳು!
ಓಹ್ ಈಗ ನನಗೆ ನೆನಪಾಯಿತು !!
ಅದೇ ಕೆಲವು ವರುಷಗಳ ಹಿಂದೆ ಕಾಣೆಯಾಗಿದ್ದಾರೆ 
ಅಂತ ನಾನು ನಿಮ್ಮ photoನ  posterನಲ್ಲಿ ನೋಡಿದ್ದೀನಿ 
ಯಾವಾಗ ಬಂದ್ರಿ ? ಎಲ್ಲಿ ಹೋಗಿದ್ರಿ ?
(ನಾನು ಕೇಳಿದ ಪ್ರಶ್ನೆಗಳಿಗೆ, ಯಾವುದಕ್ಕೂ ಉತ್ತರಿಸಲಿಲ್ಲ! ) 
ನಿನ್ನ ಸರ ಹೊಸದ ಭಾವನ.?
ಇಲ್ಲ..ಹಳೆದು ನಮ್ಮ ಅಪ್ಪಂಗೆ ಯಾರೋ ಮಾರಿದಂತೆ
ಹಳೆ ಚಿನ್ನ ಚೆನ್ನಾಗಿರುತ್ತೆ ಅಂತ ತಂದಿದ್ದಾರೆ, ಚೆನ್ನಗಿದಿಯ?
(ಅವಳು ತಲೆ ಬಾಗಿಸಿ ಕೊಂಡು )
ಚೆನ್ನಾಗಿದೆ ...........
(ಅವಳ ಮುಖದಲ್ಲಿ ಏನೋ ಒಂದು ರೀತಿಯ ಬದಲಾವಣೆ,
ಹಾಗೆ ಕಾಲನ್ನು ಗಮನಿಸಿದೆ 
ಒಂದು ಕಾಲಿಗೆ ಮಾತ್ರ ಗೆಜ್ಜೆ ಹಾಕಿದ್ದಳು. ಇನ್ನೂ ಇಲ್ಲಿ ನಿಲ್ಲ ಬಾರದು ಎಂದು)
ಸರಿ ನನಗೆ ಟೈಮ್ ಆಯಿತು ನಾನು
 ಹೊರಡ್ತೀನಿ ..
ಇರು ನಾನು ನಿನ್ನ ಜೊತೆ ಸ್ವಲ್ಪ ದೂರ ಬರ್ತೀನಿ ..
ಎಂದು ಹೇಳಿ ಜೊತೆಯಲ್ಲೇ ಬಂದಳು ,
ತುಂಬಾ ನಿಧಾನವಾಗಿ ನಡೆಯುತ್ತಾ ಇದ್ದಳು 
ನಾನು ಅವಳಿಗಿಂತ ಸ್ವಲ್ಪ  ಮುಂದೆ ನಡೆಯುತ್ತಿದ್ದೆ 
ದೂರದ ಆಲದ ಮರದ ಹತ್ತಿರ ಕಾರ್ತಿಕ್ 
ನಿಂತಿದ್ದ ಅವನನ್ನು ನೋಡಿದ ಕೂಡಲೇ 
ಖುಷಿಯಲ್ಲಿ ಅವನ ಬಳಿ ಓಡಿದೆ..
ಹಾಯ್ ಕಾರ್ತಿಕ್ ..
ಹಲ್ಲೋ ನಿಧಾನ ಕಣೆ 
ಏನು ಮಹಾರಾಣಿ ಒಬ್ಬಳೇ ಎಲ್ಲಿಗೆ ಪಯಣ?
ಇಲ್ಲ ನನ್ನ ಜೊತೆ ಪಕ್ಕದ ಊರಿನ ಸುಧಾ ಬರ್ತಾ ಇದ್ದಾರೆ ...
ಎಲ್ಲೇ ಯಾರೂ ಇಲ್ಲ ?

(ನಾನು ತಿರುಗಿ ನೋಡಿದರೆ ಕಣ್ಣಿಗೆ ಎಟುಕಿಸುವ ದೂರದಲ್ಲಿ
ಯಾರೂ ಇಲ್ಲ...
 ಆಗಲೇ ನನ್ನ ಸುತ್ತಲೂ ಏನೋ
ನಡೆಯುತ್ತಿದೆ ಎಂದು ನನ್ನ ಒಳ
ಮನಸಿನ ದನಿ ನನಗೆ ಕೇಳುತ್ತಿತ್ತು ಏನನ್ನೂ ತೋರಿಸಿಕೊಳ್ಳಲಿಲ್ಲ)
============================ಪುಟ3 ======================


ಇಲ್ಲ ಕಣೋ ನನ್ನ ಜೊತೆಯಲ್ಲಿ ಸ್ವಲ್ಪ ಅಂತರದಲ್ಲಿ ಬರ್ತಾ ಇದ್ರು.
ಅವರ ಗೆಜ್ಜೆಯ ಸದ್ದು ಕೂಡ ಕೇಳ್ತಾ ಇತ್ತು....


ಇಲ್ಲ ನಾನು ನಿನ್ನ ದೂರದಿಂದಲೇ ನೋಡುತ್ತಾ
ಇದ್ದೀನಿ ನಿನ್ನ ಜೊತೆ ಯಾರೂ ಬರ್ತಾ ಇಲ್ಲ
ಯಾಕೋ ನೀನು ಗೊಂದಲದಲ್ಲಿದ್ದಿಯ ?
ನಾನು ಬರ್ಲಾ ಮನೆಯವರೆಗೂ ?
ಓಹ್ ಆಮೇಲೆ ? ನಮ್ಮನ್ನ ಏನಾದರೂ ಅಪ್ಪಯ್ಯ ಒಟ್ಟಿಗೆ ನೋಡಿದರೆ ಅಷ್ಟೇ ಕಥೆ .
ಆಯಿತು  ಬಿಡಮ್ಮ ನಾನು ಬರಲ್ಲ ನೀನು ಹುಷಾರಾಗಿ ಹೋಗು.. 
ಸರಿ ಕಣೋ ನನಗೆ ಟೈಮ್ ಆಯಿತು.
ನಾನು ಬರುತ್ತೇನೆಂದು ಹೇಳಿ ಹೊರಟೆ..
ಮನೆಯವರೆಗೂ ನನ್ನ ಸುತ್ತಲೂ ನಡೆಯುತ್ತಿರುವುದು ಭ್ರಮೆಯೇ? ಇಲ್ಲ ನಿಜವೇ ?
ಯೋಚುಸುತ್ತ ಮನೆಗೆ ಬಂದ ಕೂಡಲೇ ..

ಭಾವನ.. ಹೋಗಿ ಕೈ ಕಾಲು ತೊಳೆದುಕೊಂಡು ರೆಡಿ ಆಗಿ 
ಬಾ ..
ಸ್ವಲ್ಪ ಹೊರಗೆ ಹೋಗಿ ಕೆಲವು ವಸ್ತು ತರಬೇಕು .
ಏನ್ ತರಬೇಕು ?
ಬಾರೆ ಸುಮ್ನೆ ಪ್ರಶ್ನೆ ಕೇಳ್ತಾ ಇರಬೇಡ  ..
ಸರಿ ಆಯಿತು ಬಂದೆ ಇರು .
ನಾನುಅಮ್ಮ ...
ಸೀರೆ, ಪಂಚೆ.. ಹಾಗೂ ಒಂದು ಜೊತೆ ಬೆಳ್ಳಿ ದೀಪ  ಖರೀದಿಸಿ..
ಸಂಜೆ ಮನೆಗೆ ಬಂದೋ..
ಅಮ್ಮ, ಊರಿಗೆ ಹೋಗಲು ರೆಡಿ ಆಗ್ತಾ ಇದ್ರು ..
ಅಮ್ಮ ಎಲ್ಲಿಗೆ ಹೊರಟಿದ್ದಿರ ?
ನಮ್ಮ ಸಂಬಂಧಿಕರ ಮಗನ ಮದುವೆ ಇದೆ 
ಅದಕ್ಕೆ ಹೋಗ್ತಾ ಇದ್ದಿವಿ ನಿಮ್ಮ ಅಪ್ಪಯ್ಯನೂ ಬರ್ತಾರೆ ಅವರಿಗೆ ಕಾಯ್ತಾ ಇದ್ದೀನಿ .
ನಾವು ಸಂಜೆ 7ಕ್ಕೆ ಹೋಗಿ
ಬೆಳಗ್ಗೆ 6ಕ್ಕೆ ಧಾರೆ ಮುಗಿಸಿಕೊಂಡು ,
7ಕ್ಕೆ ಬಂದು ಬಿಡುತ್ತೇವೆ ..
ನಾನು ಒಬ್ಬಳೇ ಇರಬೇಕಾ? ನನಗೆ ಹೇಳಲೇ ಇಲ್ಲ ನೀನು ಆಗ್ಲೇ ?
ನೀನು ಹೋಗಬೇಡ ಅಂತ ಹಠ ಮಾಡ್ತಿಯ ಅಂತ ಹೇಳಿಲ್ಲ  ಪುಟ್ಟ,
ನಾವು ಒಂದು ದಿನ ಮುಂಚೆನೇ ಹೋಗಬೇಕಿತ್ತು ..
ನಿನ್ನ ಒಬ್ಬಳೇ ಎರಡು ದಿನ ಬಿಟ್ಟು ಹೋಗಕ್ಕೆ ಇಷ್ಟ ಇಲ್ಲ 
ಅದಕ್ಕೆ ಬೆಳಗ್ಗೆ ಧಾರೆಗೆ ರಾತ್ರಿನೇ ಹೋಗಿ ಬೆಳಗ್ಗೆ
ಮುಗಿಸಿಕೊಂಡು ಬೇಗ ಬಂದು ಬಿಡ್ತೀವಿ .
ಸರಿ ನಾನೂ ಬರ್ತೀನಿ ?
ಬೇಡ ನಿನಗೆ ಕಾಲೇಜ್ ಇದೆ..
ನಾವು ಹೋಗಿ ಬೇಗ ಬಂದು ಬಿಡ್ತೀವಿ ನೀನು ಕಾಲೇಜ್ ಗೆ ಹೋಗೋಷ್ಟರಲ್ಲಿ ..
 ಅಮ್ಮಾ ನನಗೆ ಒಬ್ಬಳೇ ಇರಕ್ಕೆ ಭಯ ಆಗುತ್ತೆ !
ಏನೂ ಭಯ ಬೇಡ ಮನೆನ ಎಲ್ಲ ಕಡೆ ಬೀಗ ಹಾಕಿಕೊಂಡು 
ಒಳಗೆ ಇರು. ಅವರು ಕರೆದರು ,
ಇವರು ಕರೆದರು ಅಂತ ಹೊತ್ತಿಲ್ಲದ ಹೊತ್ತಿನಲ್ಲಿ ಹೊರಗೆ ಹೋಗಬೇಡ ಹುಷಾರಾಗಿರು ..
ಎಂದು ಹೇಳಿ ಹೊರೆಟರು ...
ನಾನು ಮುಂದೆ, ಹಾಗೂ ಹಿತ್ತಲಿನ ಬಾಗಿಲಿಗೆ ಬೀಗ ಹಾಕಿ ಓದುತ್ತ ಇದ್ದೆ 
ಆಗ ಸಮಯ 9ಘಂಟೆ !
ಬಾಗಿಲು ಬಡಿಯುವ ಶಬ್ದ ..
ಏನೋ ಒಂದು ರೀತಿಯ ಭಯ...
ನಾನು ಕಿಟಕಿಯಲ್ಲಿ ನೋಡಿದೆ ..
ಇಬ್ಬರು ನಿಂತಿದ್ದರು ,,
ಒಬ್ಬರು ನಮಗೆ ಪರಿಚಯ ಇರುವವರೇ 
ಇನ್ನೊಬ್ಬರ ಮುಖ ನಾನು ನೋಡಿಲ್ಲ ?
ಬಾಗಿಲು ತೆಗೆದು ಹೊರ ಬಂದೆ..
ಏನಮ್ಮ ನಿಮ್ಮ ತಂದೆ ಇದ್ದಾರ ?
ಇಲ್ಲ ಅವರು ಮದುವೆಗೆ ಹೋಗಿದ್ದಾರೆ 
ನೀವು ಯಾರು ? ಏನ್ ಆಗಬೇಕಿತ್ತು ?
ನಾವು power supply ಯಿಂದ ಬಂದಿದ್ದೀವಿ ..
ನಿಮ್ಮ ಮನೆಯ ಮುಂದೆ ನಾಳೆ  ಒಂದು ಕರೆಂಟ್ ಕಂಬ ನೆಡಬೇಕು  
ಹಾಗಾಗಿ ಹಳ್ಳ ತೊಡುವುದಕ್ಕೆ 
 ನಿಮ್ಮ ತಂದೆಗೆ ಒಂದು ಮಾತು ಹೇಳಿ ಹೋಗೋಣ ಅಂತ ಬಂದೋ...
ಹೌದ ...ಅಪ್ಪ ಬೆಳಗ್ಗೆ 7ಕ್ಕೆ ಬರುತ್ತಾರೆ ..
ಸರಿ ಮ ನಾವು ಬೆಳಗ್ಗೆ 9ಕ್ಕೆ ಬರುತ್ತೇವೆ
ಆಗಲಿ, ಎಂದು ನಾನು ಒಳ ಬಂದೆ..
ಕೆಲವು ನಿಮಿಷಗಳ ನಂತರ!
ನಮ್ಮ ಮನೆಯ LandLine ಗೆ ಕಾಲ್ ಬಂತು! ..
ಹಲೋ .....ಹಲೋ ....ಭಾವನ..
ಹಲೋ ಹೇಳಮ್ಮ ಕೇಳಿಸ್ತ ಇದೆ ...
ಭಾವನ ಊಟ ಮಾಡ್ದ ?
ಇಲ್ಲ ಈಗ ಮಾಡ್ಬೇಕು ..
ಸರಿ ..
ಮನೆ ಕಡೆ ಹುಷಾರು ! ..ಯಾರಾದರೂ ಬಂದಿದ್ರ ?
ಹೌದಮ್ಮ  ನಮ್ಮ ಮನೆಯ ಮುಂದೆ ಹಳ್ಳ ತೊಡಬೇಕು ಅಂತ 
Power supply ಯಿಂದ ಬಂದಿದ್ದರು ,
(ಆ ಕಡೆ ಮಳೆಯ ಕಾರಣ network ಸರಿಯಾಗಿ ಇರಲಿಲ್ಲ,)
ಏನ್ ಏನು ???? 
ಅದೇ ಮ  power supply  EB ............
ಅಷ್ಟರಲ್ಲಿ ಕಾಲ್ ಕಟ್ ಆಯಿತು 
ನಾನು ಮತ್ತೆ ಟ್ರೈ ಮಾಡಿದೆ not reachable ಬಂತು ..
ಫೋನ್ ಇಟ್ಟು...
ಊಟ ಮಾಡಿ ಮಲಗಲು ಹಾಸಿಗೆ ಹಾಸುತ್ತಿರುವಾಗ..
ಪವರ್ ಕಟ್...
ಮನಸಿನಲ್ಲಿ ಮತ್ತೆ ಆ ಭಯದ ಕ್ಷಣಗಳು ನೆನಪಾಗಿ ಆತಂಕ ಜಾಸ್ತಿಯಾಯಿತು!...
ಹೆದರಿಕೆಯಲ್ಲೇ ಮಲಗಿದೆ ...
ಮಧ್ಯ ರಾತ್ರಿ 12!!
ಹಿತ್ತಲಿನಲ್ಲಿ ಯಾರೋ ಅಳುವ ಸದ್ದು!
ಹೋಗಿ ನೋಡಿದರೆ ಒಂದು ಹುಡುಗಿ ಬಾವಿ ಕಟ್ಟೆಯ ಮೇಲೆ 
ಕುಳಿತು ತಲೆ ಬಾಗಿಸಿ  ಅಳುತ ಇದ್ದಳು ....
ನನಗೆ ಅದು ಸುಧಾನೇ ಅನ್ನಿಸಿತು,
ನಾನು ಅವಳ ಹತ್ತಿರ ಹತ್ತಿರ ಹೋಗುತ್ತಾ !!
ಯಾರು ?? ನೀವು ಯಾರು ?
ಎಂದು ಭಯದಲ್ಲೇ  ಉಸಿರು ಬಿಗಿ ಹಿಡಿದು ಹೋಗುತ್ತಿದ್ದೆ
ಇನ್ನೇನು ಅವಳನ್ನು ಮುಟ್ಟ ಬೇಕು ಎನ್ನುವಾಗ.....
ದಿಢೀರ್ ಅಂತ ಭೂಮಿಯ ಒಳಗಿನಿಂದ ಒಂದು ಕೈ 
ನನ್ನ ಕಾಲನ್ನು ಹಿಡಿಯಿತು........!
ಅಮ್ಮಾ..........
ಎಂದು ಕಿರುಚಿ ನಿದ್ದೆಯಿಂದ ಎದ್ದು ಕುಳಿತೆ ..

ನನ್ನ ಬದುಕಿನಲ್ಲಿ ನಾ ಕಂಡ ಒಂದು ಭಯಾನಕ ಕನಸು ಅದು!
ಆ ಕನಸಿನ ಕ್ಷಣಗಳು ಕಣ್ಣ ಮುಂದೆ ಮತ್ತೆ ಮತ್ತೆ ಹಾದು ಹೋಗುತ್ತಿತ್ತು ,
ಭಯದಲ್ಲಿ ನಿದ್ದೆಯೂ ಸಹ ಬರದೆ ಗಟ್ಟಿಯಾಗಿ ತೋಳುಗಳನ್ನು ಹಿಡಿದುಕೊಂಡು
ಪೂರ್ತಿ ಬೆವತು, ಉಸಿರು ಕಟ್ಟಿದಂತೆ ಆಗಿತ್ತು ..
ಬಲವಾಗಿ ಉಸಿರು ಎಳೆದುಕೊಳ್ಳುತ್ತ 
ಕಂಬಳಿಯನ್ನು ಕತ್ತಿನವರೆಗೂ ಹೊದ್ದು  ,
ಗೋಡೆಗೆ ಒರಗಿ ಕುಳಿತ್ತಿದ್ದೆ...

ಯಾರೋ ಮುಂಬಾಗಿಲು ಬಡಿಯುವ ಸದ್ದು ಕೇಳ ತೊಡಗಿತು ..
ಸಮಯ ನೋಡಿದರೆ ಘಂಟೆ 1:30...


ಇದೂ ಸಹ ಕನಸ ಎಂದು ನನ್ನನ್ನು ನಾನೇ ಮುಟ್ಟಿ
ನೋಡಿಕೊಂಡರೆ ಅದು ಕನಸಲ್ಲ ನಿಜವಾಗಿಯು ಯಾರೋ ಬಂದಿದ್ದಾರೆ ?
ಈ ಹೊತ್ತಿನಲ್ಲಿ ಯಾರಿರಬಹುದು? ತೆಗಿಯೋದ ಬೇಡವ
ಅನ್ನೋ ಪ್ರಶ್ನೆಗಳು ಮನಸಿನಲ್ಲೇ?
ಭಯದಿಂದಲೇ 
ಬಾಗಿಲ ಬಳಿ ಹೋಗಿ.....
ಯಾರು ಯಾರು ?
(ಆ ಕಡೆಯಿಂದ  ಮೆಲ್ಲನೆಯ ಧ್ವನಿಯಲ್ಲಿ)
ಭಾವನ ಬಾಗಿಲು ತೆಗಿ........


============================ಪುಟ4 ======================


ನಾನು .ನಿಮ್ ಅಪ್ಪಯ್ಯ ಬಾಗಿಲು ತೆಗಿ ...
ಅಮ್ಮ  ಒಳಗೆ ಬಂದ ಕೂಡಲೇ ಬಾಗಿಲ ಮುಚ್ಚಿ ..
(ಅಪ್ಪ.ಅಮ್ಮನ ಮುಖದಲ್ಲಿ ಏನೋ ಒಂದು ರೀತಿಯ ಭಯ ತುಂಬಿತ್ತು )
ಹೇಯ್  ಯಾರ್ ಯಾರೇ ಅದು ? ಪೋಲಿಸ್ ಯಾಕೆ ಬಂದಿದ್ದು ?
ಏನು ಪೋಲಿಸ ??
ಇಲ್ಲಮ್ಮ ಅವರು power supply ಯವರು ..
ಮನೆಯ ಮುಂದೆ ಕರೆಂಟ್ ಕಂಬ ನಿಲ್ಲಿಸಬೇಕಂತೆ ಹಾಗಾಗಿ ಹಳ್ಳ ತೊಡುವುದಕ್ಕೆ ನಿಮ್ನ ಒಂದು ಮಾತು ಕೇಳೋಣ ಅಂತ ಬಂದಿದ್ದರು ..
ಓಹ್ ಹೌದ  ನಾನು ಪೋಲಿಸ್ ಅಂತ ಕೇಳಿಸಿಕೊಂಡೆ ...
ಅದಕ್ಕೆ ನಾನು ಇವರು ಓಡೋಡಿ ಬಂದೋ …
ಅಪ್ಪ ಫುಲ್ ಬೆವತು ಹೋಗಿದ್ದರು ...
ಯಾಕೆ ಅಪ್ಪಯ್ಯ ತುಂಬಾ ಆತಂಕದಲ್ಲಿದ್ದಿರ  ?
ಇಲ್ಲಮ್ಮ ..ನಮ್ಮ ಕೊನೆಯ ಬೀದಿಯ ಸೋಮಣ್ಣ ಇದ್ದರಲ್ಲ  
ಅವರ ಗದ್ದೆಗೆ ನೀರು ಬಿಡೋ ವಿಷಯವಾಗಿ ಪಕ್ಕದ ಗದ್ದೆಯವರ ಜೊತೆ 
ರಕ್ತ ಬರೋಷ್ಟು  ಹೊಡೆದಾಟ  ಆಗಿತ್ತು ಮೂರು ದಿನಗಳ ಹಿಂದೆ ,
ಅದು ಪೋಲಿಸ್ case ಆಗಿ  ಅದಕ್ಕೆ ಆಮೇಲೆ  ನಾನೇ   
ಪಂಚಾಯಿತಿ ಕೂಡ  ಮಾಡಿದ್ದೆ ,,,
ನೀನು ಬೇರೆ ಒಬ್ಬಳೇ ಇದ್ದೀಯ ಹೆಣ್ಣ್ ಮೊಗ ಏನ್ ಮಾಡ್ತಿಯ
ಆ ವಿಷಯವಾಗಿನೆ   ಏನೋ  ಪೋಲಿಸ್ ಮತ್ತೆ ವಿಚಾರಣೆ  ಮಾಡಕ್ಕೆ  ಬಂದಿದ್ದಾರೋ  
ಅಂತ  ನಾನು, ಇವಳು ತುಂಬಾ ಅವಸರವಾಗಿ  ಬಂದೋ,
ನಿಮ್ಮವ್ವ  ಇದ್ದಾಳಲ್ಲ! ಏನೂ ಸರಿಗೆ  ಕೇಳಿಸಿಕೊಳ್ಳದೆ
ಅವಳು  ಹೆದರೋದು ಅಲ್ಲದೆ ನನ್ನೂ ಭಯ ಪಡಿಸಿದಳು ....
ಪಾಪ ಅಮ್ಮನಿಗೆ ನಾನು ಹೇಳಿದ್ದು ಕೇಳಿಲ್ಲ
Network ಇರ್ಲಿಲ್ಲ ಅದಕ್ಕೆ....
ಹೇಗೆ ಬಂದ್ರಿ ನೀವಿಬ್ಬರೂ ಅಪ್ಪಯ್ಯ ?
ಮಳೆ ಸ್ವಲ್ಪ ಬಿಡೋದನ್ನೇ ಕಾಯ್ತಾ ಇದ್ದೋ
ಅಲ್ಲಿದ್ದ ಒಬ್ಬರ ಹತ್ರ ಬೈಕ್ ತಗೊಂಡು 
ನಮ್ಮ ಊರಿನ ಹಿರಿಯರಿಗೆ ಮೈ ಹುಷಾರಿಲ್ಲವಂತೆ ಅದಕ್ಕೆ
ನಾನು ಈಗಲೇ ಹೋಗಬೇಕು ದಯವಿಟ್ಟು ಬೇಜಾರ್ ಮಾಡ್ಕೋ ಬೇಡಿ .
ಕರ್ನಾರೆಗೆ ಖಂಡಿತ ನಾವು ದಂಪತಿಯಾಗಿ ಬಂದೆ ಬರ್ತೀವಿ..
ಅಂತ ಹೇಳಿ ಬಂದ್ವಿ ...
ನನ್ನ ಮುಖದಲ್ಲಿ ಭಯವನ್ನು ಗಮನಿಸಿದ ಅಮ್ಮ ..
ಅದಿರ್ಲಿ ಭಾವನ,
ನಿನ್ ಯಾಕೆ ಇಷ್ಟು ಬೆವತಿದ್ದಿಯ?
ನಾವೇನೋ ಅಲ್ಲಿಂದ ಬಂದೋ,
ನಿನಗೆ ಏನ್ ಆಗಿದೆ?
ಅಮ್ಮ ನನಗೆ  ತುಂಬಾ ಕೆಟ್ಟ ಕನಸು ಬಿತ್ತು ..
ಆಮೇಲೆ ನೀವು ಬೇರೆ  ಹೊತ್ತಿನಲ್ಲಿ ಬಾಗಿಲು  ಬಡಿದ್ರ  
ಅದಕ್ಕೆ ಭಯ ಆಗಿ ......

ಓಹ್ ಸರಿ  ಬಾ...ಮ  ನಾನು  ನಿನ್ನ ಜೊತೇನೆ ಮಲಗ್ತೀನಿ 
ಭಯ ಪಡಬೇಡ ....

ಬೆಳಗ್ಗೆ ಎದ್ದು ಎಂದಿನಂತೆ ಕಾಲೇಜಿಗೆ ಹೊರಟೆ ..
ನನ್ನ ಜೊತೆಯಲ್ಲಿ ಬರಬೇಕಿದ್ದ ಗೀತಗೆ ಎರಡು ದಿನದಿಂದ ಮೈ ಹುಷಾರಿಲ್ಲ ,,
ಅವಳು ರಜೆ ಹಾಕಿದ್ದಕ್ಕೆ ನಾನು ಒಬ್ಬಳೇ ನಡೆದು ಬರುತ್ತಿದ್ದೆ 
ನಾನು ಮಾವಿನ ತೋಪಿನಲ್ಲಿ ಬರುವಾಗ 
ಯಾರೋ ನನ್ನ ಹಿಂದೆಯೇ ಬರುವಾ ಹಾಗೆ ಹೆಜ್ಜೆಯ ಸದ್ದು 
ನಾನು ಸ್ವಲ್ಪ ದೂರ ಹೋದ ಮೇಲೆ ತಿರುಗಿ ನೋಡಿದೆ 
ಯಾರೂ ಇಲ್ಲ!!!
ಮತ್ತೆ ಆದೆ ಸದ್ದು !!
ಈ ಸಲ ತಿರುಗಿ ನೋಡಿದರೆ ಯಾರೋ ಸ್ವಲ್ಪ ದೂರದಲ್ಲಿ ಬರುತ್ತಿದ್ದರು...

ಅವರೇ ಮುಂದೆ ಹೋಗಲಿ ಅಂತ ನಾನು ನಿಂತು ಬಿಟ್ಟೆ 
ಒಂದು ಕಾಲನ್ನು ಕುಂಟುತ್ತ .... ಕುಂಟುತ್ತ ....
ಅವರು ನನ್ನ ಹತ್ತಿರ ಬಂದು...
ನಾನು ಹಾಕಿದ್ದ ಸರವನ್ನೇ ನೋಡುತ್ತಿದ್ದ ನಾನು ಅವನು ಯಾರೋ ಕಳ್ಳ ಇರಬಹುದು ಎಂದು 
ಹಿಂದೆ ಹಿಂದೆ ಹೆಜ್ಜೆ ಇಡುತ್ತಿದ್ದೆ  ..

ನೀನು ರಾಮಯ್ಯನ ಮಗಳು ತಾನೇ?
ಹೌದು ನಿಮ್ಮನ್ನು ಎಲ್ಲೋ ನೋಡಿದ ಹಾಗೆ ಅನ್ನಿಸುತ್ತೆ ?
ನಿಮ್ಮ ಹೆಸರು ಶ್ರೀಧರ್ ಅಲ್ವ ?
ಹೌದು!
ನೀವು ಕೆಲವು ವರುಷಗಳ ಹಿಂದೆ ಊರು ಬಿಟ್ಟು ಓಡಿ ಹೋಗಿದ್ದಿರ ಅಂತ 
ಊರಿನ ಜನ ಎಲ್ಲ ಮಾತನಾಡಿಕೊಳ್ಳುತ್ತಿದ್ದರು ?
ಮತ್ತೆ ಬಂದ್ರ ? ಈಗ ಎಲ್ಲಿದೀರ?
ಇದೆ ಊರಿನಲ್ಲೇ ಇದ್ದೀನಿ ...
ನಿನಗೊಸ್ಕರನೆ ಇಷ್ಟು ದಿನ ಕಾಯ್ತಾ ಇದ್ದೆ ಭಾವನ...
ಯಾಕೆ...??
ನಿನಗೆ ನಾನು ಒಂದು ವಸ್ತು ಕೊಡಬೇಕು ?
ಏನ್ ಅದು ?
ತಗೋ ತಗೋ ?
(ಎಂದು ಕೈ ಮುಂದೆ ಮಾಡಿದಅವನ ಮುಷ್ಠಿ ಮುಚ್ಚಿದ್ದ ಅದನ್ನು ಮೆಲ್ಲನೆ ತೆರೆದಾಗ ನನಗೆ ಏನ್ ಹೇಳಬೇಕು ಅಂತಾನೆ ತೋಚಲಿಲ್ಲ ಅವನ ಕೈಯಲಿದ್ದಿದ್ದು 
ಅವತ್ತು ಸುಧಾ ಹಾಕಿದ್ದ ಅದೇ ಗೆಜ್ಜೆ!!)
ಹೇಯ್ ಹೇಯ್ ಇದು ಸುಧಾ ಹಾಕಿದ್ದ ಗೆಜ್ಜೆ ಅಲ್ವ ?
ಹೌದು ..............ಹೌದು!!
ನಿಮ್ಮ ಕೈಯಲ್ಲಿ ಹೇಗೆ ಬಂತು ಇದು ?
ನಿನಗೆ ಕೊಡಬೇಕು ಅಂತಾನೆ ತಂದೆ  ಭಾವನ ತಗೋ ತಗೋ !!
ನನಗೆ ಬೇಡ ........
ಇಲ್ಲ ನೀನ್ ತಗೊಳ್ಳೇ ಬೇಕು ..... ತಗೋ !!
ಇಲ್ಲ ಬೇಡ ....
(ಅವನ ಮುಖನೊಮ್ಮೆ ನೋಡಿದೆ ಒಂದು ರೀತಿಯ ಭಯಾನಕವಾಗಿತ್ತು! )
ನಾನು ಅಲ್ಲಿಂದ ಕೂಡಲೇ ಓಡಲು ಶುರು ಮಾಡಿದೆ 
ಭಯದಲ್ಲಿ ವೇಗವಾಗಿ ಆ ಹಾದಿಯನ್ನು ದಾಟಿ ಮನೆ ಸೇರಿದೆ..
ಅಮ್ಮನಿಗೆ ಸರ ಹಾಕಿಕೊಳ್ಳಬೇಡ ಅಂತ ಬೈಯುತ್ತಾರೆ ಅಂತ ಏನೂ  ಹೇಳಲಿಲ್ಲ! .

ಹೇಯ್ ಯಾಕೆ ಇಷ್ಟು ಅವಸರದಲ್ಲಿ ಬರ್ತಾ ಇದ್ದೀಯ ಏನ್ ಆಯಿತು ?
ಇಲ್ಲಮ್ಮ ಬೀದಿ ನಾಯಿ ನನ್ನ ಹಿಂದೆಯೇ ಬಂತು ಅದಕ್ಕೆ ..
ಹೌದ ಸರಿ ಸುಧಾರಿಸಿಕೋ !!...

ಮಾರನೆಯ  ದಿನ ಕಾಲೇಜಿಗೆ ಹೋಗಲಿಲ್ಲ ರಜೆ ಹಾಕಿ
ಗೀತಗೆ ಮೈ ಹುಷಾರಿಲ್ಲ ಅವಳನ್ನ ನೋಡ ಬರುತ್ತೇನೆಂದು ಹೇಳಿ 
ಗೀತ ನ ಭೇಟಿಯಾದೇ ..
ಹಾಯ್ ಗೀತ ಹೇಗಿದ್ದೀಯ ?
ಈಗ ಸ್ವಲ್ಪ ಪರವಾಗಿಲ್ಲ ತುಂಬಾ ಜ್ವರ ಬಂದಿತ್ತು 
ಹೌದ ಬೇಗ ನೀನು ಸುಧಾರಿಸಿಕೋ 
ನೀನು ಇಲ್ಲದೆ ನನಗೆ ಒಬ್ಬಳೇ ಕಾಲೇಜಿನಿಂದ ಬರಕ್ಕೆ ಭಯ ಕಣೆ .
ನಾನು ಬೇಗ ಕಾಲೇಜಿಗೆ ಬರ್ತೀನಿ ಭಾವನ.
ಸರಿ ನಾನು ಹೋಗಿ ಬರ್ಲಾ .
ಆಯಿತು ಹುಷಾರು ..
ಅವಳನ್ನು ನೋಡಿ ಬರುವಾಗ ಮಧ್ಯದಲ್ಲಿ 
ಕಾರ್ತಿಕ್ ಸಿಕ್ಕಿದ ...........
ಅವನಿಗೆ ಇಷ್ಟು ದಿನ ನನ್ನ ಸುತ್ತಲೂ 
ನಡೆದ ಎಲ್ಲ ಘಟನೆಗಳನ್ನೂ ಹೇಳಿದೆ..
ಇದೆಲ್ಲ ಏನೂ ಇಲ್ಲ ನೀನು ಭಯ ಪಡಬೇಡ!..
ತುಂಬಾ ಅದರ ಬಗ್ಗೆನೇ ಯೋಚನೆ ಮಾಡಬೇಡ ಭಾವನ..
ನಿಮ್ಮ ಅಮ್ಮನಿಗೆ ಒಂದು ಮಾತು ಹೇಳು!?
ಇಲ್ಲ ಅಮ್ಮ ತುಂಬಾ ಭಯ ಪಡ್ತಾರೆ ಆಮೇಲೆ ಕಾಲೇಜಿಗೆ ಕಳಿಸಲ್ಲ!
ಹೌದ ಹಾಗಿದ್ರೆ ಬೇಡ ,
ಬೇರೆ ಏನಾದರೂ ಯೋಚನೆ ಮಾಡೋಣ?
ನಿನಗೆ ಕಾಣಿಸಿದವರನ್ನ  ಯಾರನ್ನು ನಾನು ಊರಲ್ಲಿ ನೋಡಿಲ್ಲ 
ಅವರು ಯಾರ ಕಣ್ಣಿಗೂ ಕಾಣದೆ ನಿನಗೆ ಮಾತ್ರ 
ಕಾಣುತ್ತ ಇರೋದರ ಮರ್ಮ ಏನು ?
ಅದೇ ನನಗೂ ಗೊತ್ತಾಗುತ್ತ ಇಲ್ಲ !
ನನಗೆ ಮಾತ್ರ ಕಾಣಿಸ್ತ ಇದ್ದಾರೆ ಬೇರೆಯವರು ಬಂದ್ರೆ ಅವರು ಕಾಣಲ್ಲ !
ನನಗೆ ಹುಚ್ಚು ಹಿಡಿಯೋದೊಂದೇ ಭಾಕಿ ..
ಹೇಯ್ ಕೂಲ್ ..
ನನಗೆ ಅನ್ನಿಸುತ್ತೆ ಕಾಣೆಯಾದ ಆ ಮೂರು ಜನ .. 
ನಮ್ಮ ಊರಿನಲ್ಲೇ ಎಲ್ಲೋ ಇದ್ದಾರೆ ಅವರು ಯಾರ ಕಣ್ಣಿಗೂ ಕಾಣದೆ
ನಿನ್ನ ಮುಂದೆ ಮಾತ್ರ ಬರಕ್ಕೆ ಏನು ಕಾರಣ ?
ಇದಕ್ಕೆ ಏನಾದರೂ ಮಾಡೋಣ ನಿನ್ ಯೋಚನೆ ಬಿಡು ..
ನಾನ್  ಬರ್ತೀನಿ .
ಆಯಿತು ಜಾಸ್ತಿ ಯೋಚನೆ ಬೇಡ ಆರಾಮಾಗಿರು 
ಸರಿ . 
ನಮ್ಮ ಪ್ರೀತಿಯ ವಿಷಯವನ್ನು ಯಾರೋ ಅಪ್ಪನಿಗೆ ಹೇಳಿದ್ದರು!
ಅಪ್ಪ ನಂಬಿರಲಿಲ್ಲ ...
ಆದರೆ ಅವತ್ತು ನಾನು ಕಾರ್ತಿಕ್ ಅಲ್ಲಿ ತೋಟದಲ್ಲಿ
ಮಾತಾಡೋದನ್ನ ನೋಡಿ ಅವರಿಗೆ ಅನುಮಾನ ......
ಅವತ್ತು ನನ್ನ Roomಗೆ ಅಪ್ಪ ಬಂದು 
ಕಾರ್ತಿಕ್ ಹಾಗೂ ನಿನ್ನ  ಒಟ್ಟಿಗೆ ನೋಡಿದ್ದಿವಿ ಅಂತ ಊರಿನ ಜನ ಹೇಳಿದಾಗ,
ಒಂದೇ ಕಾಲೇಜಿನಲ್ಲಿ ಓದ್ತಾರೆ ಅದಕ್ಕೆ 
ಒಟ್ಟಿಗೆ ಬರುವಾಗ ನೋಡಿರ್ತಾರೆ ಅಂತ ಸುಮ್ಮನಾದೆ,
ಆದರೆ, ಅವತ್ತು ಒಂದು ದಿನ ನಿನ್ನ
ಅವನ ಜೊತೆ ತೋಟದಲ್ಲಿ  ನೋಡಿದಾಗಿನಿಂದ 
ಕೇಳಬೇಕು ಅಂತ ಇದ್ದು ಈಗ ಕೇಳ್ತಾ ಇದ್ದೀನಿ,
ಯಾವುದನ್ನೂ ಮುಚ್ಚಿಡಬೇಡ ನಿಜ ಹೇಳು?
ನೀನು  ಪಕ್ಕದ ಊರಿನ ಕಾರ್ತಿಕ್ ನ ಲವ್ ಮಾಡ್ತಾ ಇದ್ದೀಯ ?
ಹೌದು ಅಪ್ಪ ನನಗೆ ಅವನು ತುಂಬಾ ಇಷ್ಟ ಆಗಿದ್ದಾನೆ !
ನಿನಗೆ ಗೊತ್ತ ಅವನು ನಮಗಿಂತ ಜಾತಿಲಿ ಹಾಗೂ ಆಸ್ತಿ ಅಂತಸ್ತಿನಲ್ಲಿ  ಕೆಳಗಿದ್ದಾನೆ ?
ಅಪ್ಪ ಸ್ನೇಹ,ಪ್ರೀತಿ ಜಾತಿ ನೋಡಿ ಬರಲ್ಲ ಅಲ್ವ ? 
ನೋಡು ಭಾವನ ಈ ಮಾತೆಲ್ಲ ನನಗೆ ಬೇಡ ...
ನಮ್ಮ ಮಾನ ,ಮರ್ಯಾದೆ ಎಲ್ಲ ನಿನ್ನ ಕೈಯಲ್ಲಿ ಇದೆ
ನಿಮ್ಮ ಅಪ್ಪಯ್ಯ ಊರೋರ ಮುಂದೆ ತಲೆ ಎತ್ತಿ ತಿರುಗೋದು 
ಇಲ್ಲ ತಲೆ ತಗ್ಗಿಸೋದು ನಿನ್ನ ನಿರ್ಧಾರದ ಮೇಲಿದೆ ..
ಒಂದು ವೇಳೆ ನನ್ನ ಮಾನ,ಮರ್ಯಾದೆಗೆ ಏನಾದರೂ 
ಸ್ವಲ್ಪ ಕಳಂಕ ಬಂದರೂ ನಾನು ಬದುಕಿರೋಲ್ಲ!! 
ಎಂದು ಹೇಳಿ ಅಪ್ಪ ಹೊರಟು ಹೋದರು! 
ಅವತ್ತು ಊಟ ಮಾಡದೆ ರೂಂ ನಲ್ಲಿ ಒಬ್ಬಳೇ ಇದ್ದೆ 
ಆ ಕಡೆ ಪ್ರೀತಿ , ಈ ಕಡೆ ಮನೆ..
ನನಗೆ ಏನು ಮಾಡಬೇಕು ಅನ್ನೋದೇ ತೋಚದೆ ಒದ್ದಾಡುತ್ತಿದ್ದೆ ..
ಆಗ ಸಮಯ 12 ಘಂಟೆ 
ಹಿತ್ತಲಿನ ಕಡೆ ಸದ್ದಾಯಿತು ....
ಹೋಗಿ ನೋಡಿದೆ ಅಲ್ಲಿ ಅವತ್ತು ಬಂದಿದ್ದ ಅದೇ ವ್ಯಕ್ತಿ ಬಂದಿದ್ದ ..
ಅಮ್ಮ ಹತ್ತಿರ ಹೋಗಬೇಡ ಅಂತ ಹೇಳಿದ್ದು ನೆನಪಾಯಿತು ..
ಅವನು ಕೈ ಸನ್ನೆ ಮೂಲಕ ಬಾ ಬಾ....ಅನ್ನುತ್ತಿದ್ದ.
============================ಪುಟ5======================


ಅವರನ್ನು ನೋಡುತ್ತಲೇ ಬಂದು Roomನಲ್ಲಿ ಮಲಗಿ ಕೊಂಡೆ.

ಮಾರನೆಯ ದಿನ,
ಮನಸು ಸರಿ ಇರಲಿಲ್ಲ ಹಾಗಾಗಿ ಕಾಲೇಜಿಗೆ ರಜೆ  ಹಾಕಿ 
ಕೊನೆಯ ಬಾರಿ ಒಂದು ಸಲ ಕಾರ್ತಿಕ್ ನ ನೋಡಿ
ಅಪ್ಪ ಹೇಳಿದ ಮಾತುಗಳನ್ನು ಹೇಳಬೇಕೆಂದು 
ಯಾರೂ ಬರದ ಒಂದು ಜಾಗ ಇದೆ ಊರಿನ
ಆಚೆ ನೀರು ಇಲ್ಲದ ಕೆರೆ! ಅಲ್ಲಿ ದೊಡ್ಡದಾದ ಒಂದು ಮರದ ಬಳಿ  ಭೇಟಿಯಾದೆ.....
ಕಾರ್ತಿಕ್ ನನಗೆ ಏನು ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ..
ನಮ್ಮ ಪ್ರೀತಿಯ ವಿಷಯ ಅಪ್ಪಯ್ಯನಿಗೆ ಗೊತ್ತಾಗಿ ನೆನ್ನೆ ಕೇಳಿದ್ರು...
(ಗಾಬರಿಯಿಂದ)
ಹೌದ ಭಾವನ...
ಏನ್ ಅಂದ್ರು ?
ಇಲ್ಲ ನಮ್ಮ ಅಪ್ಪಯ್ಯ ಇದಕ್ಕೆ ಒಪ್ಪಲಿಲ್ಲ
ಅವರಿಗೆ ಜಾತಿ ಬಿಟ್ಟು ಜಾತಿ ಪ್ರೀತಿ ಮಾಡೋದು ಇಷ್ಟ ಆಗಲ್ಲ
ಕಾರ್ತಿಕ್ ಪ್ಲೀಸ್ ನನ್ನ ಮರೆತು ಬಿಡು ...!!
ಏನ್ ಭಾವನ,
ಮರೆತು ಬಿಡು ಅಂತ ಎಷ್ಟು Easy ಆಗಿ ಹೇಳ್ತಾ ಇದ್ದೀಯ ?
ಪ್ರೀತಿಸಕ್ಕೆ ಕ್ಷಣ ಸಾಕು 
ಮರೆಯಕ್ಕೆ ಒಂದು ಜನುಮ ಬೇಕು...
ಎಷ್ಟೋ ಕನಸುಗಳಿಗೆ ನಿನ್ನ ಹೆಸರು ಇಡ್ಬೇಕು ಅಂತ ಅನ್ಕೊಂಡಿದ್ದೆ ..
ಆದರೆ,
ನೀನೆ ಇಷ್ಟು ಬೇಗ ಒಂದು ಕನಸು ಆಗ್ತೀಯ ಅಂತ ಕನಸಲ್ಲೂ ಅನ್ಕೊಂಡಿರ್ಲಿಲ್ಲ! 
ಸರಿ ನೀನು ಹೋಗು..
ಒಂದು ನಿಮಿಷ ಭಾವನ...
ನಾಳೆ ಏನಾದರೂ ನಾನು ಸತ್ತೋದೆ ಅಂತ ನಿನಗೆ ಸುದ್ದಿ ಬಂದ್ರೆ,
ನೀನು ಬರಬೇಡ.  ನಿನ್ನ ನೋಡಕ್ಕೆ ಅಷ್ಟೇ ನಾನು ಇಷ್ಟ ಪಡೋದು 
ನಾನು ಆಗ ಕಣ್ಣು ಮುಚ್ಚಿರ್ತೀನಿ ನಿನ್ನ ನೋಡಕ್ಕೆ ಆಗಲ್ಲ ಅದಕ್ಕೆ..
ಹೇಯ್ ಕಾರ್ತಿಕ್ ಏನ್ ಮಾತಾಡ್ತಾ ಇದ್ದೀಯ ನೀನು..?
ನಾನು ಅವತ್ತೇ ನಿಂಗೆ ಹೇಳಿಲ್ವ ನಮ್ಮ ಮನೇಲಿ ಇದಕ್ಕೆಲ್ಲ ಯಾವತ್ತೂ  ಒಪ್ಪಲ್ಲ
ಅಂತ ನೀನೂ ಹೇಳಿದ್ದೆ ತಾನೇ?
ನಿಮ್ಮ ತಂದೆ ಒಪ್ಪಲಿಲ್ಲ ಅಂದ್ರೆ ನಾನು ದೂರ ಆಗ್ತೀನಿ ಅಂತ ?
ಹೌದು ಹೇಳಿದ್ದೆ ಈಗಲೂ ಹೇಳ್ತಾ ಇದ್ದೀನಿ 
ನಾನು ನಿಮ್ಮ ತಂದೆ ಹತ್ರ ಮಾತಾಡಿದ ಮೇಲೆ 
ನನ್ನ ಮಾತಿಗೆ ನಿಮ್ಮ ತಂದೆ ಒಪ್ಪಲಿಲ್ಲ ಅಂದ್ರೆ 
ನೀನು ಹೇಳೋ ಹಾಗೆ ನಿನ್ನ ಬದುಕಿನಿಂದ ಅಲ್ಲ
ಈ ಊರಿನಲ್ಲೇ ಇರಲ್ಲ ಎಲ್ಲೋ ದೂರ ಹೋಗಿ ಬಿಡ್ತೀನಿ 
ನಿನ್ನ ಕಣ್ಣಿಗೆ ಕೊನೆಯವರೆಗೂ ಕಾಣಲ್ಲ! 
ನನಗೆ ಯಾಕೋ ಎಲ್ಲ ಕಡೆಯಿಂದ ಕಷ್ಟ ಆಗ್ತಾ ಇದೆ..
ಆ ಕಡೆ ಅಪ್ಪ..ಈ ಕಡೆ ನೀನು ಇದರ  ಮಧ್ಯದಲ್ಲಿ 

ಆ ಕಣ್ಣ ಮುಂದೆ ಬಂದು ಹೋಗುವ ಮರ್ಮಗಳ ಕಾಟ.
ನೀನೇನು ಮಾಡಬೇಡ ನಾನು ಏನ್ ಮಾಡ್ಲಿ ಹೇಳು ?ಭಾವನ,
ನಿಮ್ಮ ತಂದೆ ಹತ್ರ ಮಾತಾಡ್ಲ ?
ಹೇಯ್ ಅದನೆನಾದರೂ ಮಾಡಿ ಬಿಟ್ಟೆಯ ಆಮೇಲೆ ..
ನನ್ನ ಕಾಲೇಜಿಗೆ ಕಳಿಸಲ್ಲ ಈಗಲೇ ಯಾವುದೋ ಒಂದು ವರ ಹುಡುಕಿ
ಮದುವೆ ಮಾಡಿ ಬಿಡುತ್ತಾರೆ ..
ನನಗೆ ಈ ಪ್ರೀತಿ ,ಮದುವೆ ಅನ್ನೋದಕ್ಕಿಂತ ನನ್ನ ಬದುಕಿನಲ್ಲಿ
ನಾನು  ಚೆನ್ನಾಗಿ ಓದಿ Doctor ಆಗ್ಬೇಕು ಅಂತ ಕನಸಿದೆ...
ಆಯಿತು ನಾನು ಈಗಲೇ ಬಂದು ಮಾತಾಡಲ್ಲ
ನೀನೆ ಹೇಳು ಯಾವಾಗ ಬಂದು ಮಾತಾಡ್ಲಿ?
ಇನ್ನೇನೂ ಸ್ವಲ್ಪ ದಿನ 
ನನ್ನ +2 exam ಆದಮೇಲೆ ನೋಡೋಣ ಆಗ ನನಗೆ
ವರ ಖಂಡಿತ ಹುಡುಕೆ ಹುಡುಕುತ್ತಾರೆ ..
ನೀನು ಆಗ ಬಂದು ಮಾತಾಡು! 
ಸರಿ ನೀನು ಹೇಗೆ ಹೇಳ್ತೀಯೋ ಹಾಗೆ ಮಾಡ್ತೀನಿ...
ನೀನು ಇಷ್ಟು ಹೇಳಿದಲ್ಲ ಸಾಕು ನನಗೆ ನಮ್ಮ ಪ್ರೀತಿ ಗೆಲ್ಲುತ್ತೆ
ಅನ್ನೋ ನಂಬಿಕೆ ಬಂದಿದೆ.
ಒಂದು ಮಾತು ಹೇಳಕ್ಕೆ ಇಷ್ಟ ಪಡ್ತೀನಿ ಕಾರ್ತಿಕ್,
ನಿನ್ನೂ ನಾನು ಜೀವಕ್ಕಿಂತ ಜಾಸ್ತಿ ಪ್ರೀತಿಸ್ತಾ ಇದ್ದೀನಿ ಕಣೋ ..
ನಿನ್ನ ಅಷ್ಟು ಬೇಗ ಬಿಟ್ಟು ನನಗೂ ಬದುಕಕ್ಕೆ ಆಗಲ್ಲ ,
ಕೊನೆಯ ಎಲ್ಲೆವರೆಗೂ ನಾವು ಹೋರಾಡೋಣ ...
ನಾನು ಜಾಸ್ತಿ ಸಮಯ ಇರಕ್ಕೆ ಆಗಲ್ಲ ಈಗ ಬರ್ತೀನಿ ಮತ್ತೆ ಸಿಗೋಣ ..

ಅಂತ ಹೇಳಿ ಬಂದು  
ಮನೆಯ ಹಿತ್ತಲಿನ ಬಾವಿ ಕಟ್ಟೆ ಮೇಲೆ ಕುಳಿತ್ತಿದ್ದೆ ..
ಹಿತ್ತಲಿನ ಕಡೆಗೆ ಬಂದ ಅಮ್ಮ ...
ಯಾಕೆ ಒಂತರ ಇದ್ದೀಯ ಇನ್ನೂ
ಪ್ರೀತಿಯ ಬಗ್ಗೆ ಯೋಚನೆ ಮಾಡ್ತಾ ಇದ್ದೀಯ ?

ಅಮ್ಮ ನಾನು ಕಾರ್ತಿಕ್ ನ ತುಂಬಾ ಪ್ರೀತಿಸ್ತ ಇದ್ದೀನಿ 
ಅವನ್ನ ಮರೆಯೋಕ್ಕೆ ನನ್ನ ಕೈಯಲ್ಲಿ ಆಗ್ತಾ ಇಲ್ಲ...
ನೋಡಮ್ಮ ನಿಮ್ಮ ಅಪ್ಪನ ಮೀರಿ ನಾನು ಏನೂ ಮಾಡಕ್ಕೆ ಆಗಲ್ಲ 
ಆದರೆ ಒಂದು ನಿನ್ನ ಹಣೆಲಿ ಏನ್
ಬರೆದಿದ್ದೆಯೋ ಅದೇ ಆಗೋದು ಭಾವನ
ನಿನ್ನ ಹಣೆಲಿ ಅವನೇ ನಿನ್ನ ಗಂಡ ಆಗಬೇಕು ಅಂತ ಇದ್ರೆ ಆಗುತ್ತೆ ...
ಯಾಕೆ ಅಪ್ಪ ಜಾತಿ, ಮರ್ಯಾದೆ ಅಂತಾರೆ ಅವರು ಮನುಷ್ಯರು ತಾನೇ ?
ಹೌದು ನಿಮ್ಮ ಅಪ್ಪಯ್ಯ ಆಗಿನಿಂದಲೂ
ಜಾತಿ,ಮರ್ಯಾದೆ ಅಂತ ತುಂಬಾ
ಹೆದರುತ್ತಾರೆ ಅವರಿಗೆ ಅವರ ಮರ್ಯಾದೆಗೆ ಒಂದು
ಸಣ್ಣ ದಕ್ಕೆ ಆಗುತ್ತೆ ಅಂತ ಗೊತ್ತಾದರೂ
ಸುಮ್ಮನೆ ಇರಲ್ಲ ಇನ್ನೂ ನಿಮಪ್ಪನ ಕೋಪದ
ಮುಖನ ನೀನು ನೋಡಿಲ್ಲ ನಾನು ನೋಡಿದ್ದೀನಿ .....
ಅದಕ್ಕೆ ಹೇಳ್ತಾ ಇದ್ದೀನಿ ಸುಮ್ಮನೆ ನಾಳೆ
ನಿನ್ನಿಂದ ಆ ಕಾರ್ತಿಕ್ ಗೆ ಅವರ ಮನೆಯವರಿಗೆ ಯಾವುದೇ ತೊಂದರೆ
ಬೇಡ ಅನ್ನೋದಾದರೆ ನನ್ನ ಮಾತು ಕೇಳು ಭಾವನ ...
ಸರಿ ಮ ನನ್ನಿಂದ ಅವನಿಗೆ ,ಅವರ ಮನೆಯವರಿಗೆ ಯಾವುದೇ ತೊಂದರೆ ಬೇಡ 
ಇನ್ನೂ ನಾನು ಎಲ್ಲನ್ನೂ ಮರೆಯಕ್ಕೆ ಟ್ರೈ ಮಾಡ್ತೀನಿ .
ಒಳ್ಳೇದು ಪುಟ್ಟ..ಇದೆಲ್ಲ ಸ್ವಲ್ಪ ದಿನ ಅಷ್ಟೇ ಆಮೇಲೆ ಎಲ್ಲಾನೂ ಸರಿ ಹೋಗುತ್ತೆ ಸುಮ್ಮನೆ ನಿನ್ನ ಮನಸಿನಲ್ಲಿ ನಾನಾ ಯೋಚನೆಗಳನ್ನ ತುಂಬಿಕೊಳ್ಳಬೇಡ ಆಯ್ತಾ ?
ಏನೇ ಇದ್ದರೂ ಅಮ್ಮನಿಗೆ ಹೇಳು ?
ಅಮ್ಮ ನಿನಗೆ ಒಂದು ವಿಷಯ ಹೇಳಬೇಕು ಅವತ್ತು ಬಂದಿದನಲ್ಲ ಅದೇ ವ್ಯಕ್ತಿ 
ನೆನ್ನೆ ರಾತ್ರಿ ಕೂಡ ಬಂದಿದ್ದ ..
ಹೌದ ನೋಡಕ್ಕೆ ಹೇಗಿದ್ದ ?
ನಮ್ಮ ಊರಿನವರು ಅಲ್ಲ ,
ನೋಡಕ್ಕೆ ಸಣ್ಣಕ್ಕೆ ಪಂಚೆ ಕಟ್ಟಿದ್ದರು ಆದರೆ ಮೈ ಎಲ್ಲ ಮಣ್ಣಾಗಿತ್ತು ..
ಯಾರೋ ಬಿಕ್ಷುಕ ಇರಬೇಕು ಬಿಡು ..
ಎಂದು ಹೇಳಿ ಅಮ್ಮ ಒಳಗೆ  ಹೋಗುವಾಗ ...
ಅಮ್ಮ ನಿನಗೆ ಹೇಳೋದನ್ನ ಮರೆತೇ ನಾನು ಸ್ವಲ್ಪ ದಿನಗಳ ಹಿಂದೆ
ಸುಧಾನ ಕೂಡ ನೋಡಿದೆ .............
(ತುಂಬಾ ಗಾಬರಿ ಆಗಿ ಓಡಿ ಬಂದು..)
ಏನು  ಏನು ಸುಧಾನ ಎಲ್ಲಿ ಯಾವಾಗ ?
ಅವತ್ತು ನಾನು ಕಾಲೇಜಿನಿಂದ ಬರುವಾಗ ನೋಡಿದೆ..
ಅವಳು ನನ್ನ ಜೊತೆಯಲ್ಲೇ ಸ್ವಲ್ಪ ದೂರ ಕೂಡ ಬಂದಳು 
ಆಮೇಲೆ ನೋಡಿದರೆ ಇಲ್ಲ! 
ನೀನು ಕೂಡ ನೋಡಿರಬೇಕು ಕೆಲವು
ವರುಷಗಳ ಹಿಂದೆ ಸುಧಾ ಕಾಣೆಯಾಗಿದ್ದಾಳೆ
ಅಂತ ಪೋಸ್ಟರ್ ಕೂಡ ಅಂಟಿಸಿತ್ತು ಊರಲ್ಲಿ
ಹೌದು ನೋಡಿದ್ದೀನಿ ಅವರೆಲ್ಲ ಕಾಣೆಯಾಗಿದ್ದಾರೆ 
ಈಗ ಪಟ್ಟಣದಲ್ಲಿದ್ದಾರೆ ಅಂತ ಊರಿನ ಜನ ಹೇಳ್ತಾ ಇದ್ದಾರೆ ಭಾವನ,
ಇಲ್ಲಮ್ಮ ಆಮೇಲೆ ಸ್ವಲ್ಪ ದಿನ ಆದಮೇಲೆ ನಾನು ಶ್ರೀಧರನ್ನ ಕೂಡ ನೋಡಿದೆ 
ಅವನು ಅವತ್ತು ನನ್ನ ಹಿಂದೆಯೇ  ಓಡಿ ಬಂದ ನಾನು 
ನಾನು ನಿನಗೆ ನನ್ನ ಹಿಂದೆ ನಾಯಿ ಅಟ್ಟಾಡಿಸಿಕೊಂಡು ಬಂತು ಅಂತ ಹೇಳಿದನಲ್ಲ ಅವತ್ತೇ ನಿನಗೆ ಹೇಳಿದರೆ ನೀನು ಹೆದರಿಕೊಂಡು ನನ್ನ ಕಾಲೇಜಿಗೆ ಕಳಿಸಲ್ಲ ಅಂತ ಹೇಳಿಲ್ಲ..
(ಕೂಡಲೇ ಅಮ್ಮನ ಮುಖದಲ್ಲಿ ಏನೋ ಆತಂಕ!!)
ಹೇಯ್ ಅದಲ್ಲೇ ಏನು ಇಲ್ಲ ಅವರನ್ನ ನೋಡಿರಕ್ಕೆ 
ಸಾಧ್ಯನೇ ಇಲ್ಲ  ಅವರೆಲ್ಲ ನಮ್ಮ ಊರಿನಲ್ಲೇ ಇಲ್ಲಾ 
ಇಲ್ಲಮ್ಮ ನಾನು ನೋಡ್ದೆ ಮಾತಾಡಿಸಿದೆ ಕೂಡ ….
ನನಗೆ ಅನ್ನಿಸುತ್ತೆ ಅವರು ಇದೆ ಊರಿನಲ್ಲಿ ಎಲ್ಲೋ ಇದ್ದಾರೆ ಯಾಕೆ ನನಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಮಾತ್ರ ಗೊತ್ತಾಗ್ತಾ ಇಲ್ಲ ..
ಆ ದಿನ ನೀವು  ಮದುವೆಗೆ ಹೋಗಿ ಅರ್ಧದಲ್ಲಿ
ಮಧ್ಯ ರಾತ್ರಿ ಬಂದಾಗ ನಾನು
ಹೆದರಿಕೊಂಡಿದ್ದೆ ಗೊತ್ತ ನೀನೂ ಕೊಡ ಕೇಳಿದ ಏನ್ ಆಯಿತು ಅಂತ?
ಅವತ್ತು ನನಗೆ ಸುಧಾ  ಕನಸಿನಲ್ಲಿ ಕಾಣಿಸಿದಳು
ಇದೆ ಬಾವಿ ಕಟ್ಟೆ ಮೇಲೆ ಕುಳಿತು ಅಳುತ್ತ ಇದ್ದಳು
ನಾನು ಅವಳನ್ನ ಇನ್ನೇನು ಮುಟ್ಟ ಬೇಕು ಅನ್ನುವಾಗ
ಭೂಮಿಯಿಂದ ಒಂದು ಕೈ ಬಂದು ನನ್ನ ಕಾಲನ್ನ ಹಿಡಿದುಕೊಂಡಿತು 
ಆಮೇಲೆ ನಾನು ಕಿರುಚಿ ಎದ್ದೆ..
ಇದೆಲ್ಲ ಯಾವಾಗಲಿನಿಂದ ನಿನಗೆ ಆಗ್ತಾ ಇದೆ ಭಾವನ ???
ಅದೇ ಮ ಅವತ್ತು ನೀನು ಈ ಸರ ಹಾಕಿದಗಿನಿಂದ
ಈ ಸರ ಹಾಕಿಕೊಂಡು
ರಾತ್ರಿಯೇ ನನಗೆ ತುಂಬಾ ಕತ್ತು ನೋವು ಬಂತು 
ಯಾರೋ ಹೆಗಲ ಮೇಲೆ ಕುಳಿತಿರುವಷ್ಟು ಭಾರ ,
ನಾನು ತುಂಬಾ ಓದಿಕೊಳ್ಳುತ್ತ ಇದ್ದೆ ಅಲ್ವ ಅದಕ್ಕೆ
ಕತ್ತು ನೋವು ಬಂದಿರಬೇಕು ಅಂತ ಸುಮ್ನಾದೆ
ಅಂದಿನಿಂದ ನನ್ನ ಸುತ್ತಲೂ ಒಂದು
ರೀತಿಯ ಅಮಾನುಷವಾದ ಘಟನೆಗಳು ನಡೀತಾ ಇದೆ 
ಅಂತ ಹೇಳಿದ ತಕ್ಷಣ ಅಮ್ಮ ಹೆದರಿಕೊಂಡು !!
ಮೊದಲು ಬಿಚ್ಚು ಈ ಸರನ,
ನೀನು ಇಲ್ಲಿ ಇರಬೇಡ ಬಾ ಒಳಗೆ !
ಅದು ರಾತ್ರಿ !
ನಾನು ನನ್ನ ರೂಂ ನಲ್ಲಿ ಮಲಗಿದ್ದೆ ಅಮ್ಮ ಬಂದು .
ಭಾವನ ನೀನು ಇವತ್ತು ಬಂದು ಹಾಲ್ ನಲ್ಲಿ ಮಲಗು .
ಯಾಕಮ್ಮ ,?
ಇವತ್ತು ಅಮಾವಾಸೆ ಸುಮ್ನೆ ನೀನು
ಈಗಲೇ ತುಂಬಾ ಹೆದರಿದ್ದಿಯ ಅದಕ್ಕೆ 
ಬಂದು ಹಾಲ್ ನಲ್ಲಿ ಮಲಗಿಕೋ ..
ಆಯ್ತಮ್ಮ ....
ಅಂತ ನಾನು hall ನಲ್ಲಿ ಮಲಗಿ ,
ಇದೆ ಮೊದಲ ಬಾರಿಗೆ ಅಮ್ಮನ ಈ ರೀತಿಯ ವರ್ತನೆ ನೋಡುತ್ತಿರುವುದು 
ಏನೋ ಯೋಚಿಸುತ್ತ ಇದ್ದಾಗ ...
ಅಮ್ಮ,ಅಪ್ಪನ,Room ನಲ್ಲಿ  ಏನೋ ಗಲಾಟೆ ..
ನಾನು ರೂಂ ಪಕ್ಕ ಹೋಗಿ ನಿಂತೆ ಒಳಗೆ
ಮಾತನಾಡುವ ಸದ್ದು ಕೇಳಿತು ..
ರೀ ಬೆಳಗ್ಗೆ ನಮ್ಮ ಭಾವನ, ಒಂದು ವಿಷಯ ಹೇಳಿದಳು,
ಸುಧಾ, ಹಾಗೂ ಶ್ರೀಧರ್ 
ನನಗೆ ಸಿಕ್ಕಿದ್ದರು ನಾನು ಅವರ ಜೊತೆ ಮಾತನಾಡಿದೆ ಅಂತೆಲ್ಲ ಹೇಳ್ತಾ ಇದ್ದಾಳೆ .
ಏನು ಸುಧಾ,ಶ್ರೀಧರ ?? 
ಹೌದು ರೀ ಅವರೇ .
ಹೇಯ್ ಅದೆಲ್ಲ ಅವಳಿಗೆ ಕನಸು ಇರಬೇಕು ,
ಊರಿನ ಜನರ ಮಾತು ಕೇಳಿ,
ಹಾಗೆ ಹೇಳ್ತಾ ಇದ್ದಾಳೆ ಅನ್ನಿಸುತ್ತೆ ಕಣೆ ಬಿಡು .
ಇಲ್ಲ ರೀ ನೀವು ಅದೊಂದು ದಿನ  ಯಾರೋ ಮಾರಿದ್ರು ಅಂತ 50ಗ್ರಾಂನ ಒಂದು ಸರ ಕೊಟ್ಟಿದ್ರಿ ಗೊತ್ತ,
ಆ ಸರನ ಅವಳಿಗೆ ಸ್ವಲ್ಪ ದಿನಗಳ ಹಿಂದೆ ಹಾಕಿದ್ದೆ 
ಆಗಿನಿಂದ ಹೀಗೆ ಅವರೆಲ್ಲ ಕಾಣುತ್ತ ಇದ್ದಾರೆ ಅನ್ನುತ್ತಿದ್ದಾಳೆ 
(ಎಂದು ಅಮ್ಮ ಹೇಳಿದ ಕೂಡಲೇ , ಅಪ್ಪ)
ಅಯ್ಯೋ .......
============================ಪುಟ6======================

ಅಯ್ಯೋ ಯಾಕೆ ಆ ಸರ ನನ್ನ ಕೇಳ್ದೆ ಅವಳಿಗೆ ಹಾಕಿದ್ದು!
(ಅಂತ ಹೇಳಿ ಅಪ್ಪಯ್ಯ ಅಮ್ಮನಿಗೆ ಮೊದಲ ಬಾರಿಗೆ ಹೊಡೆದರು ಅಮ್ಮ ಅಳುತ್ತಲೇ ಇದ್ದಾಗಲೇ )
ನಾನು ಅಲ್ಲಿಂದ ಬಂದು hallನಲ್ಲಿ ಇರುವ ಮತ್ತೊಂದು Roomನಲ್ಲಿ ಮಲಗಿ ಕೊಂಡೆ !
ನನ್ನ ಸುತ್ತಲೂ ಏನೋ ನಡೀತಾ ಇದೆ ಅದು ಏನು ಅಂತಾನೆ ಗೊತ್ತಾಗುತ್ತಿಲ!
ಇದರ ಮಧ್ಯೆ ನನ್ನ +2 exam ಬೇರೆ ..
ಈ ಎಲ್ಲ ವಿಷಯಗಳನ್ನು ಪಕ್ಕಕ್ಕೆ ಇಟ್ಟು ಓದುಕೊಳ್ಳಲು ಪ್ರಾರಂಭಿಸಿದೆ ..
ಒಂದು ವಾರದ ನಂತರ ಒಂದು ದಿನ!
ಅಂದು ನನ್ನ ಕೊನೆಯ  subject ಬರೆದು,
Exam ಮುಗಿಸಿ .
ನಾನು ಗೀತ..ಆ ಮಾವಿನ ತೋಪಿನಲ್ಲಿ ಬರುವಾಗ..
ಮೋಡ ಕವಿದಿತ್ತು ..ಮಳೆಯ ಹನಿಗಳು ಬೀಳಲಾರಂಭಿಸಿತು ...
ನಾನು ಗೀತ ಒಂದು ಮರದ ಕೆಳಗೆ ನಿಂತೋ..
ಭಾವನ ಅಲ್ಲಿ ಒಂದು ಮನೆ ಇದೆ ಬಾ ಅದರೊಳಗೆ ಹೋಗೋಣ..?
ಹೇಯ್ ಗೀತ ಬೇಡ ಕಣೆ ಅದು ಪಾಳು ಬಿದ್ದ ಮನೆ ಅಲ್ಲಿ 
ಹಾವು,ಚೇಳು ಹಾಗೋ ಪ್ರೇತಾತ್ಮಗಳು ಇರುತ್ತೆ ಅಲ್ಲಿ 
ಯಾವುದೇ ಕಾರಣಕ್ಕೂ  ಹೋಗಬೇಡ  ಅಮ್ಮ ಹೇಳ್ತಾ ಇರ್ತಾರೆ ..
ಏನು ಭೂತ ನ ...?? ಈ ಗೀತನ ನೋಡಿದ್ರೆ ಭೂತನೂ ಭಯ ಪಡುತ್ತೇ ಬಾರೆ..
ಅವಳು ಎಷ್ಟೇ ಹೇಳಿದರೂ ಕೆಳಗೆ ನನ್ನ ಕೈ ಹಿಡಿದು ಒಳಗೆ ಕರೆದು ಕೊಂಡು ಹೋದಳು .
ಮನೆಯೊಳಗೇ ಹೋಗುತ್ತಲೇ ನನಗೆ ಒಂದು ರೀತಿಯ ಭಯ ಶುರುವಾಗಿತ್ತು ,
ಅಲ್ಲಿನ ಗೋಡೆಗಳನ್ನೇ ನೋಡುತ್ತಾ ನಿಂತ್ತಿದ್ದೆ ...
ಏನೇ ಭಾವನ ಇದು ಅರ್ಧ ಕಟ್ಟಿ ನಿಲ್ಲಿಸಿದ್ದಾರೆ ?
ಯಾರ ಮನೆ ಇದು
ನಮ್ಮದೇ ಮನೆ ಕಣೆ ಸುಮ್ನೆ ಇರ್ಲಿ ಬಂದೋರು ಉಳ್ಕೊಳಕ್ಕೆ ಅಂತ 
ಕಟ್ಟಿಸಿದರಂತೆ ಆಮೇಲೆ ಇಲ್ಲಿ ಕೆಲಸ ಮಾಡಿದ ಕೆಲಸಗಾರರಿಗೆ 
ಏನ್ ಏನೋ ಆಯಿತು ಅದಕ್ಕೆ ಅರ್ಧದಲ್ಲೇ ನಿಲ್ಲಿಸಿ ಬಿಟ್ಟೋ ಅಂತ ಅಮ್ಮ ಹೇಳಿದ್ರು ..
ಓಹ್ ಹೌದ..
ನೋಡು ಅರ್ಧ ಸೀಮೆಂಟ್  ಕೂಡ ಆಗಿದೆ ಗೋಡೆಗಳಿಗೆ  ..
ನಿಮ್ಮದು ತುಂಬಾ ದೊಡ್ದಾದ ಮಾವಿನ ತೋಪು ಅಲ್ವ ಭಾವನ ಅದಕ್ಕೆ.
ಮಾವಿನ ಕಾಯಿನ ಮುಟ್ಟೆ ಕಟ್ಟಿಡಕ್ಕೆ  ಅಂತಾನೆ ಕಟ್ಟಿದ್ದಾರೆ ಅನ್ನಿಸುತ್ತೆ ಈ ಮನೆ .
(ಮಳೆ ಸ್ವಲ್ಪ ನಿಧಾನವಾಯಿತು)
ನೀನು ಒಳಗೆ ಇರು ನಾನು ಒಂದು ಮಾವಿನಕಾಯಿ 
ಕಿತ್ಕೊಂಡು ಬರ್ತೀನಿ ..
ಹೇಯ್ ಬೇಡ ನನ್ನ ಒಬ್ಬಳೇ ಬಿಟ್ಟು ಹೋಗಬೇಡ..?
ಭಾವನ ಎಲ್ಲೂ ಹೋಗಲ್ಲ ಕಣೆ ಇಲ್ಲಿ ಮುಂದೇನೆ ಇದೆ ಮರ ಇರು ಬಂದೆ ..
(ಅಂತ ಹೇಳಿ ಗೀತ ಹೊರಗೆ ಹೋದಾಗನಾನು ಬಾಗಿಲ ಬಳಿ ಬಂದು ನಿಂತೇ .
ನನ್ನ ಬೆನ್ನ ಹಿಂದೆ ಯಾರೋ ಉಸಿರಾಡುವ ಹಾಗೆ ಸ್ಪರ್ಶವಾಗುತ್ತಿತ್ತು 
ನಾನು ಮೆಲ್ಲನೆ ತಿರುಗಿ ನೋಡಿದರೆ ಆ ಗೋಡೆಯ ಮೇಲೆ ಸುಧಾ,ಹಾಗೂ ಶ್ರೀಧರನ ಚಿತ್ರಗಳು ಮೂಡಲಾರಂಭಿಸಿತು !, ಆ ಭಯದಲ್ಲೇ ನಾನು ಬಲಗಡೆ ತಿರುಗಿದರೆ ಸುಧಾ ಕೂದಲು ಬಿಟ್ಟು ಒಂದು ರೀತಿಯ ಭಯ ಪಡಿಸುವ ಹಾಗೆ ನಿಂತಿದ್ದಳು ,
ಅದನ್ನು ನೋಡಿ ತುಂಬಾ ಗಾಬರಿಯಾಗಿ)
ಗೀತಾ........ಗೀತ..........!!
(ಗೀತ ಒಳಗೆ ಬಂದು)
ಹೇಯ್ ಹೇಯ್ ಭಾವನ ಏನ್ ಅಯ್ತೆ ಯಾಕೆ ಹೆದರಿಕೊಂಡಿದ್ದಿಯ  ??
ಗೀತ ಅಲ್ ಅಲ್ಲಿ ಆ ಗೋಡೆನ ನೋಡು....
(ಗೀತ ಗೋಡೆಯ ಪಕ್ಕ ಹೋಗಿ ಎಲ್ಲವನ್ನೂ ಮುಟ್ಟಿ ನೋಡಿ )
ಏನೇ ಇದೆ ಇಲ್ಲಿ  ಏನೂ ಇಲ್ಲ ಕಣೆ....
ಇಲ್ಲ ಇಲ್ಲ ನಾನು ಈಗ ಅಲ್ಲಿ ಒಂದು ಹುಡುಗ, ಹುಡುಗಿಯ 
ಚಿತ್ರ ನೋಡ್ದೆ .
ಇಲ್ಲ ಏನು ಇಲ್ಲ ನೀನು ಯಾವುದೋ ವಿಷಯನ ಯೋಚನೆ ಮಾಡ್ತಾನೆ 
ಅಲ್ಲಿ ನೋಡಿದ್ದಿಯ ಅದಕ್ಕೆ ನಿನಗೆ ಹಾಗೆ ಅನ್ನಿಸಿದೆ ಅಷ್ಟೇ ...
ಹೇಯ್ ಗೀತ ಇಲ್ಲೇ ಕಣೆ ಒಂದು ಹುಡುಗಿ ನಿಂತಿದ್ದಳು..
ಭಾವನಾ ...ಇಲ್ಲಿ ನಿನ್ನ, ನನ್ನ ಬಿಟ್ಟರೆ ಯಾರೂ ಇಲ್ಲ ಕಣೆ,
ಈ ಮನೆಯೊಳಗೇ ಬರುವಾಗಲೇ
ಭೂತ ,ದೆವ್ವ ಅಂತ ಬಂದೆ ಅದಕ್ಕೆ ನಿನಗೆ ಹೀಗೆ ಭ್ರಮೆ ಅಷ್ಟೇ .

ಬೇಡ ಗೀತ ಬಾ ನಾವು ಹೋಗೋಣ ಬಾ .....
ಅಂತ ಹೇಳಿ ನಾವು ಬಂದು ಹೊರಟೋ...
ಗೀತನ ಅವಳ ಮನೆಯತ್ತಿರ ಬಿಟ್ಟು ...
ಮನೆಗೆ ಬಂದು ಸೀಧಾ ಅಮ್ಮನ Roomಗೆ ಹೋಗಿ ಅಲ್ಲಿ 
ಅಪ್ಪಯ್ಯ ಇರಲಿಲ್ಲ ಅಮ್ಮ ಒಬ್ಬರೇ ಒಣಗಿದ ಬಟ್ಟೆಗಳನ್ನು ಮಡಿಚಿಡುತ್ತಿದ್ದರು.
ಕಾಲೇಜ್ ಬ್ಯಾಗ್ ನ ಎಸೆದು ..
ಅಮ್ಮ ಯಾಕೋ ನನ್ನ ಸುತ್ತಲೂ ಅಮಾನುಷವಾದ ಘಟನೆಗಳು ನಡೀತಾ ಇದೆ 
ಯಾಕೆ ಇದೆಲ್ಲ ನನಗೆ ಆಗ್ತಾ ಇರೋದು ?
ಇವತ್ತು ನಾನು ನಮ್ಮ ತೋಪಿನ ಮನೆಗೆ ಹೋಗಿದ್ದೆ ಅಲ್ಲಿ
ನಾನು ಗೋಡೆಯಲ್ಲಿ ಸುಧಾ,ಶ್ರೀಧರ್ ನ ಮುಖನ ನೋಡಿದೆ ಗೊತ್ತ?
ಹೇಯ್ ಭಾವನ ನಿನ್ನ ಆ ಮನೆಗೆ ಹೋಗಬೇಡ ಅಂತ ನಾನು ಹೇಳಿದ್ದೀನಿ ತಾನೇ ?
ಯಾಕೆ ಹೋದೆ?
ಅದು ಬಿಡು ,
ಆಮೇಲೆ ಅವತ್ತು ನಾನು ನಿನ್ನ ತುಂಬಾ ಗಮನಿಸಿದೆ
Power supply ಯವರು ಬಂದಿದ್ದಾರೆ ಅಂತ 
ಹೇಳಿದ್ದನ್ನ ನೀನು ಪೋಲಿಸ್ ಅಂತ ಕೇಳಿಸಿಕೊಂಡು ತುಂಬಾ ಗಾಬರಿಯಾಗಿದ್ದೆ,
ಅವತ್ತು ರಾತ್ರಿ ನಿನ್ನ ಅಪ್ಪಯ್ಯನ ಮಾತು ನಾನು
ಕೇಳಿಸಿಕೊಂಡೆ Roomನಲ್ಲಿ ಮಾತನಾಡುವಾಗ 
ಹೇಳು ನಿನಗೆ ಏನೋ ಗೊತ್ತಿದೆ ಏನ್ ಅದು  ?

ಏನು ಇಲ್ಲ ,ಎಲ್ಲ ಸ್ವಲ್ಪ ದಿನದಲ್ಲಿ ಸರಿ ಹೋಗುತ್ತೆ ನೀನು ಭಯಪಡಬೇಡ !
ಇಲ್ಲ ನನಗೆ ಯಾಕೆ ಅಂತ ಗೊತ್ತಾಗ ಬೇಕು
ನನಗೆ ಕೆಲಸ ಇದೆ .....
(ಅಮ್ಮ ನನ್ನ ಪ್ರೆಶ್ನೆಗಳಿಗೆ ಉತ್ತರಿಸಲಾಗದೆ ಹೊರಗೆ ಹೊರಟಾಗ ಅವರ ಕೈ ಹಿಡಿದು)
ನಾನು ಸತ್ತ ಮೇಲೆ ಅಷ್ಟೇ
ನಿನಗೆ ನಾನು ಹೇಳೋದೆಲ್ಲ ನಿಜ ಅಂತ ಗೊತ್ತಾಗುತ್ತೆ.....
ಹೇಯ್ ಭಾವನ ಬಿಡ್ತು ಅನ್ನು 
ನಿನಗೆ ಯಾವತ್ತೂ ಹೇಳಬಾರದು ಅಂತ ಇದ್ದೆ ,
ಆದರೆ ನನಗೆ ನಿನ್ನ ಜೀವ ತುಂಬಾ ಮುಖ್ಯ ಅದಕ್ಕೆ ಹೇಳ್ತಾ ಇದ್ದೀನಿ
ನೀನು ಹುಷಾರಾಗಿರಕ್ಕೆ!
ನೀನು ನೋಡಿದ 
ಸುಧಾ,ಶ್ರೀಧರ್,!
ಯಾರೂ ಜೀವಂತ ಇಲ್ಲ!!
ಏನು ಜೀವಂತ ಇಲ್ವಾ ಅಮ್ಮ ನಾನೇ ನನ್ನ ಕಣ್ಣಾರೆ ನೋಡಿದ್ದೀನಿ 
ಮಾತಡಿಸಿದ್ದಿನಿ , ಅವರು ಕಾಣೆಯಾಗಿದ್ದಾರೆ ಅಷ್ಟೇ. 
ಇಲ್ಲ ಕಣೆ ನಿನಗೆ ಗೊತ್ತಿಲ್ಲ ..
ಅವರು ಕಾಣೆಯಾಗಿದ್ದಾರೆ ಅಂತ ಜನ ನಂಬಿದ್ದಾರೆ ಅಷ್ಟೇ 
ಆದರೆ, ಅವರಾರೂ ಜೀವಂತ ಇಲ್ಲ!
ಇಲ್ಲಮ್ಮ ನಾನು ನೋಡಿದ್ದೀನಿ !
ಅವರು ಇದೆ ಊರಿನಲ್ಲಿ ಎಲ್ಲೋ ಇದ್ದಾರೆ ನನ್ನ ಹತ್ರ ಏನೋ ಹೇಳ್ಬೇಕು ಅಂತ ನನಗೆ ಮಾತ್ರ ಕಾಣಿಸಿಕೊಳ್ತಾ ಇದ್ದಾರೆ.
ಇಲ್ಲ ಭಾವನ ನಾನು ಹೇಳೋದು ಕೇಳು ಅವರು ಜೀವಂತ ಇಲ್ಲ ಅವರನ್ನ ಇನ್ನಾ ಮುಂದೆ ನೋಡಿದರೆ ಹತ್ತಿರ ಹೋಗಬೇಡ.
ನಾನು ಕಣ್ಣಾರೆ ನೋಡಿದ್ದೀನಿ ಅದು ಸುಳ್ಳಾ?
ನಾನು ನಂಬಲ್ಲ ಅವರು ಬದುಕಿದ್ದಾರೆ .....
ಹೇಯ್ ಭಾವನಾ.........!!!!
(ಹೀಗೆ ನನಗೂ ಅಮ್ಮನಿಗೂ ವಾದ ನಡೆಯುವಾಗಲೇ,
ಅಮ್ಮ ಒಂದು ಸತ್ಯವನ್ನು  ಹೇಳಿಯೇ ಬಿಟ್ಟರು.
ಅದನ್ನು ಕೇಳಿ ನನ್ನ ತಲೆ ಹೊಡೆದು ಚೂರು ಚೂರು ಆಗೋದೊಂದೇ ಭಾಕಿ!!!..
ಕೇಳಿದ ಕೂಡಲೇ ಮೈಯಲ್ಲ ನಡುಕ!!  
ಹಾಗೆ  ಕುಸಿದು ಕುರ್ಚಿಯ ಮೇಲೆ ಕುಳಿತೆ )
============================ಪುಟ7======================

ನೀನು ನೋಡಿದ್ದೀನಿ , ಮಾತಡಿಸಿದ್ದೀನಿ 
ಅಂತ ಹೇಳ್ತಾ ಇರೋರ ಮೃತ ದೇಹಗಳನ್ನ...........
ಹೂಂ ಹೇಳಮ್ಮಾ  ಯಾಕೆ ಮೌನವಾಗಿ ಬಿಟ್ಟೆ.....
(ಅಮ್ಮ ತಲೆ ಬಾಗಿಸಿಕೊಂಡು )
ನಮ್ಮ ಹಿತ್ತಲಿನಲ್ಲೇ ಹೂತಿರೋದು ...!!
ಅಮ್ಮ !!!!!!! ಏನ್ ಹೇಳ್ತಾ ಇದ್ದೀಯ ನಮ್ಮ ಹಿತ್ತಲಿನಲ್ಲಾ??
ನನಗೆ ತಲೆ ಸುತ್ತುತ ಇದೆ, ನಂಬಕ್ಕೆ ಆಗ್ತಾ ಇಲ್ಲ 
ಅವರ ದೇಹಗಳು ಹೇಗೆ ನಮ್ಮ ಹಿತ್ತಲಿನಲ್ಲಿ 
ಅವರನ್ನ ಕೊಂದಿದ್ದು ಯಾರು ?
ಹೇಳಮ್ಮ ಇದೆಲ್ಲ ನಿನಗೆ ಹೇಗೆ ಗೊತ್ತು ?
ಅದೆಲ್ಲ ನಿನಗೆ ಬೇಡ ...
ಇಷ್ಟು 
ವಿಷಯವನ್ನೇ ನಿನಗೆ ಯಾವತೂ ಹೇಳಬಾರದು ಅಂತ ಇದ್ದೆ
ಅವರು ಸಾಯಕ್ಕೂ ಮೊದಲು ನೀನು ಅವರನ್ನ ಯಾವತ್ತೂ ನೋಡಿಲ್ಲ.
ಅವರು ಬದುಕಿದ್ದಾಗ ನೀನು ನಮ್ಮ
ಅಮ್ಮನ ಮನೆಯಲಿದ್ದು ಸ್ಕೂಲ್ ಗೆ ಹೋಗ್ತಾ ಇದ್ದೆ ,
ಈಗ ಅವರೆಲ್ಲ ನಿನಗೆ ಕಾಣುತ್ತ ಇದ್ದಾರೆ ಅಂದರೆ 
ಆ ಮೂರು ಆತ್ಮಗಳಿಂದ  ನಿನ್ನ ಜೀವಕ್ಕೆ ಅಪಾಯ ಇದೆ 
ಈಗಗಾಲೇ ಆ ಆತ್ಮಗಳಿಗೆ ಒಂದು ಜೀವನ ಬಲಿ ಕೊಟ್ಟಿದ್ದು ಸಾಕು!
ನನಗೆ  ಇರೋದು ನಿನೋಬ್ಬಳೆ ಮಗಳು ನಿನ್ನೂ ಬಲಿ ಕೊಡಕ್ಕೆ ನನಗೆ ಇಷ್ಟ ಇಲ್ಲ...
ಅದಕ್ಕೆ ನೀನು ಹುಷಾರಾಗಿರ್ಲಿ ಅಂತ  ಅಂತ ಹೇಳಿದ್ದು !
ಅಮ್ಮ ನನಗೆ ನನ್ನ ಸುತ್ತಲೂ ಏನು ನಡೀತಾ
ಇದೆ ಅಂತ ಗೊತ್ತಾಗಬೇಕು ದಯವಿಟ್ಟು ಹೇಳು ?
ಬೇಡ ಭಾವನ, ಸತ್ಯ ಅನ್ನೋದು ವಿಷ ತರ ತುಂಬಾ ಕಹಿಯಾಗಿರುತ್ತೆ 
ಒಂದು ಚೂರು ಗೊತ್ತಾದ್ರೂ ಸಾಕು ದಿನ ಕೊಲ್ಲುತ್ತೆ!
ಎಂದು ಹೇಳಿ ಅಮ್ಮ Roomನಿಂದ ಹೊರಗೆ ಹೊರಟು ಹೋದರು!
ನನ್ನ ಗೊಂದಲಗಳು ಅಮ್ಮನ ಕೇಳಿದರೆ ಕಮ್ಮಿಯಾಗುತ್ತೆ ಅಂತ ಅಂದು ಕೊಂಡರೆ
ಅಮ್ಮ ಹೇಳಿದ ಮಾತುಗಳನೆಲ್ಲ ಕೇಳಿದ ಮೇಲೆ ಇನ್ನೂ ಜಾಸ್ತಿ ಆಯಿತು...!
ಉಗುರನ್ನು ಕತ್ತಿರಿಸಿಕೊಳ್ಳಲು ಹೋಗಿ ,ಬೆರಳನ್ನೇ
ಕತ್ತರಿಸಿಕೊಂಡ ಹಾಗೆ ಆಗಿತ್ತು ನನ್ನ ಮನಸ್ಥಿತಿ.   
ನಮ್ಮ ಮನೆಯ ಮೇಲಿನ ಪ್ರೀತಿ,ಗೌರವ ಕ್ರಮೇಣ ಕಮ್ಮಿಯಾಗುತ್ತಿತ್ತು!
ಮನೆ ಗೊಂದಲದ ಗೂಡಾಗಿತ್ತು ಇಲ್ಲಿ ಇರುವುದಕ್ಕೆ ನನಗೆ ಇಷ್ಟವೂ ಆಗುತ್ತಿರಲಿಲ್ಲ.
ಇದರ ಮಧ್ಯೆ ನನಗೆ ಕಾರ್ತೀಕನ ಪ್ರೀತಿ ಸ್ವಲ್ಪ ನೆಮ್ಮದಿಯಾಗಿತ್ತು 
ಇಷ್ಟು ದಿನ ದೂರ ಮಾಡಿದ್ದ ಕಾರ್ತೀಕ.. ಮತ್ತೆ ಹತ್ತಿರವಾದ ...
ನಮ್ಮ ಮನೆಯಲ್ಲಿ ನಡೆದ ಎಲ್ಲ ವಿಷಯ ಹಾಗೂ
ನಮ್ಮ ಅಮ್ಮನ ಆ ಮಾತುಗಳನ್ನ್ಬು ಎಲ್ಲವನ್ನೂ ಹೇಳಿದೆ...

ಎಲ್ಲವನ್ನೂ ಕೇಳಿ ಕಾರ್ತಿಕ್ ...
ಇನ್ನೂ ನೀನು ಅಲ್ಲಿ ಇರೋದು ಅಪಾಯನೇ
ಒಂದು ಮಾತು ಹೇಳ್ತೀನಿ ಭಾವನ ಬೇಜಾರ್ ಮಾಡ್ಕೋ ಬೇಡ ...
ನಿಮ್ಮ ಮನೆ ಈಗ ಮನೆ ಅಲ್ಲ ಅದು ಮಶಾನ ಆಗಿದೆ 
ನೀನು ಇನ್ನೂ ಅಲ್ಲಿರೋದು ಖಂಡಿತ ನನಗೆ ಒಳ್ಳೇದಲ್ಲ ಅನಿಸ್ತ ಇದೆ .
ನಿಜ ಹೇಳ್ಬೇಕು ಅಂದ್ರೆ ಕಾರ್ತಿಕ್ ನನಗೆ ಅಮ್ಮ ಆ ವಿಷಯ ಹೇಳಿದಾಗಿನಿಂದಾ
ನನಗೆ ಎಲ್ಲಿ ನೋಡಿದರೂ ಭಯ ಆಗುತ್ತೆ!! 
ಸರಿ ... ನೀನು ಮನೆ ಬಿಟ್ಟು ಬಂದು ಬಿಡು 
ನಾವು ದೇವಸ್ಥಾನದಲ್ಲಿ ಮದುವೆ ಆಗೋಣ ..
ಯೋಚನೆ ಮಾಡಬೇಡ ಭಾವನ ಸ್ವಲ್ಪ ದಿನ ಅಷ್ಟೇ 
ನಮ್ಮ ಮೇಲೆ ಕೋಪದಲ್ಲಿ ಇರ್ತಾರೆ ಆಮೇಲೆ ಎಲ್ಲವೂ ಸರಿ ಹೋಗುತ್ತೆ ..
ನಿಮ್ಮ ಮನೆಯಲ್ಲಿ ಏನ್ ಏನೋ ನಡೀತಾ ಇದೆ ..
ನನ್ನ ಮಾತು ಕೇಳು ನಾನು ನಿನ್ನ ಎಷ್ಟು ಪ್ರೀತಿಸ್ತ ಇದ್ದೀನಿ ಅಂತ ನಿನಗೆ ಚೆನ್ನಾಗಿ
ಗೊತ್ತು ನನ್ನ ಹೆತ್ತವರೂ ಸಹ ತುಂಬಾ ಒಳ್ಳೆಯವರು ನಾನೂ ಸಹ ಅವರಿಗೆ ಒಬ್ಬನೇ ಮಗ..
ನನ್ನ ಸಂತೋಷಕ್ಕೆ ಯಾವತ್ತೂ ನನ್ನ ತಂದೆ,ತಾಯಿ ಅಡ್ಡ ಬಂದಿದ್ದಿಲ್ಲ
ನಿನ್ನ ಸ್ವಂತ ಮಗಳ ಹಾಗೆ ನೋಡಿಕೊಳ್ಳುತ್ತಾರೆ .... 
ಇಲ್ಲ ಕಾರ್ತಿಕ್ ಮನೆ ಬಿಟ್ಟು ಓಡಿ ಹೋಗೋದೆಲ್ಲ ನನಗೆ ಇಷ್ಟ ಆಗಲ್ಲ.
ನೋಡು ಭಾವನ ನನಗೂ ಇಷ್ಟ ಇಲ್ಲ ಆದರೆ ,
ನಿಮ್ಮ ಮನೆಯಲ್ಲಿ ಇಷ್ಟೆಲ್ಲಾ ಆತಂಕಕಾರಿಯ ವಿಷಯಗಳು ನಡೀತಾ ಇದೆ ಅಂತ ತಿಳಿದ ಮೇಲೂ
ನಿನ್ನ ಅಲ್ಲಿ ಬಿಟ್ಟು ನಾನೇ ಅರಾಮಾಗಿರಕ್ಕೆ ಆಗಲ್ಲ ,
ಆ ಆತ್ಮಗಳು ನಿನಗೆ ಏನ್ ಮಾಡುತ್ತೋ 
ಅನ್ನೋ ಭಯ ನನಗೆ ಈಗಲೇ ಶುರುವಾಗಿದೆ,
ನಿನ್ನ ನಾನು ಜೀವಕ್ಕಿಂತ ಜಾಸ್ತಿ ಪ್ರೀತಿಸ್ತೀನಿ ಕಣೆ,
ನಿನ್ನ ಜೀವನಕ್ಕೆ ಒಂದು ಅಪಾಯ ಅಂತ  ಗೊತ್ತಾದ್ರೆ 
ನಾನು ಏನ್ ಆಗ್ತೀನಿ ಅಂತ ನನಗೆ ಗೊತ್ತಿಲ್ಲ,
ಒಂದು ಮಾತು ಕೇಳು,
ನನ್ನ ಮೇಲೆ ನಿನಗೆ ಪ್ರೀತಿ ಇದ್ದರೆ ಬಂದು ನನ್ನ ಜೊತೆ ಸೇರಿ ಬಿಡು,
ನಿನ್ನ ಮನೆನೇ ನಿನಗೆ ಮುಖ್ಯ ಅಂದ್ರೆ ನನ್ನ ಈ ಭೂಮಿಯಿಂದ ಕಳಿಸಿ ಕೊಡು ,
ಛೇ  ಇತರ ಎಲ್ಲ ಮಾತಾಡ್ಬೇಡ ಕಾರ್ತಿಕ್ ,
ಮತ್ತೆ ನೀನು ಇಲ್ಲದೆ ನಾನು ಬದುಕಿದ್ದು ಸತ್ತ ಹಾಗೆ
ನೋಡು ಭಾವನ ನನ್ನ ತಂದೆ ,ತಾಯಿ ನಮ್ಮ ಮದುವೆ ಆದಮೇಲೆ 
ನಮಗೆ ಫುಲ್ ಸಪೋರ್ಟ್ ಆಗಿರ್ತಾರೆ 
ನಿಮ್ಮ ತಂದೇನೂ ಸಹ ಏನೂ ಮಾಡಕ್ಕೆ ಆಗಲ್ಲ 
ನೀವು ಪ್ಲೀಸ್ ಬಾ ನಾನು ನಿನ್ನ ರಾಣಿ ತರ ನೋಡ್ಕೊಳ್ತೀನಿ
ಆ ಮನೇಲಿ ದಿನ ಭಯದಲ್ಲೇ ಸಾಯೋದು ಬೇಡ ....
ನನಗೂ ಅವನ ಮಾತು ಸರಿ ಅನ್ನಿಸಿತು ..
ಆಯಿತು ನಾನು  ಇವತ್ತು  ರಾತ್ರಿ ಎಲ್ಲರೂ ಮಲಗಿದೆ ಮೇಲೆ 
ಬಟ್ಟೆ ಎಲ್ಲ ತಗೊಂಡು ನಿಮ್ಮ ಮನೆಗೆ ಬಂದು ಬಿಡ್ತೀನಿ .
ಎಂದು ಹೇಳಿ ಬಂದು .
ರಾತ್ರಿ ಅಮ್ಮ,ಅಪ್ಪ,ಮಲಗಿದ ಮೇಲೆ ನಾನು 
ಮನೆ ಬಿಟ್ಟು ಕಾರ್ತಿಕ್ ಮನೆಗೆ ಹೋದೆ ...

ಕಾರ್ತಿಕ್ ಹೆತ್ತವರು ತುಂಬಾ ಒಳ್ಳೆಯವರು ...
ಜಾತಿ,ಹಣದಲ್ಲಿ ನಮಗಿಂತ ಕೆಳಗೆ ಇರಬಹುದು ಆದರೆ ಪ್ರೀತಿಯಲ್ಲಿ 
ಅವರು ನಮಗಿಂತ ಎತ್ತರದಲ್ಲಿದ್ದರು! 
ಕಾರ್ತಿಕ್ ತಂದೆ ನನ್ನ ನೋಡಿದ ಕೂಡಲೇ,
ಬಾ ಮ , ಕಾರ್ತಿಕ್ ಎಲ್ಲ ವಿಷಯವನ್ನು ನಮಗೆ ಹೇಳಿದ್ದಾನೆ
ನೀವು ಎಷ್ಟು ಪ್ರೀತಿಸ್ತ ಇದ್ದೀರಾ ಒಂದು ವೇಳೆ ನಾವು ಒಪ್ಪಲಿಲ್ಲ ಅಂದ್ರೆ ಕಾರ್ತಿಕ್ ವಿಷ ಕುಡಿತೀನಿ ಅಂತನೂ ಹೇಳಿದ್ದಾನೆ
ಅದರಲ್ಲೇ ಗೊತ್ತಾಗುತ್ತೆ ಅವನು ನಿನ್ನ ಎಷ್ಟು ಪ್ರೀತಿಸ್ತ ಇದ್ದಾನೆ ಅಂತ ,
ನಮಗೆ ನಮ್ಮ ಮಗನ ಸಂತೋಷ ಆಷ್ಟೇ ಮುಖ್ಯ ,
ನೀನು ಇದು ನಿಮ್ಮ ಮನೆ ಅಂತ ಅನ್ಕೋ ಇಲ್ಲಿ ನೀನು ಸಂತೋಷವಾಗಿರಬಹುದು ..
ಕಾರ್ತಿಕ್ ತಂದೆಯ ಮಾತು ಕೇಳಿ ನನಗೆ ತುಂಬಾ ನೆಮ್ಮದಿ ಅನ್ನಿಸಿತು ,

ಅಪ್ಪನಿಗೆ ಬೆಳಗ್ಗೆ  ನಾನು  ಮನೆ ಬಿಟ್ಟು ಹೋಗುತ್ತೇನೆ ಎಂದು ನಾನು ಬರೆದಿಟ್ಟಿದ್ದ ಪತ್ರವನ್ನು  ನೋಡಿ 
ನನ್ನ ಹುಡುಕಿಕೊಂಡು ಕಾರ್ತಿಕ್ ಮನೆಗೆ ಅಮ್ಮನ ಜೊತೆ ಬಂದರು!

ಬನ್ನಿ ರಾಮಣ್ಣ,
ನನ್ನ ಹೆಸರು ವೆಂಕಟಪ್ಪ ಅಂತ ಕಾರ್ತಿಕ್ ನ ತಂದೆ 
ಇದು ನನ್ನ ಹೆಂಡತಿ ಗಿರಿಜಾ..
ನಾನು ಸ್ವಂತ ರೈಸ್ ಮಿಲ್ ಇಟ್ಟಿದ್ದೀನಿ ..
ನನ್ನ ಮಗ ನಿಮ್ಮ ಮಗಳು ಭಾವನನ ತುಂಬಾ ಪ್ರೀತಿಸ್ತಾ ಇದ್ದಾನೆ ಅಂತ ಗೊತ್ತಾಯಿತು 
ನಾನೂ ಸಹ ಹೇಳಿದ ಇದೆಲ್ಲ ಬೇಡ ಅವರೆಲ್ಲಿ ನಾವೆಲ್ಲಿ ? ಅಂತ
ಏನ್ ಮಾಡೋದು ವಯಸ್ಸಿನ ಹುಡುಗರು ನಮ್ಮ ಮಾತು ಕೇಳಬೇಕಲ್ಲ ,
ನಾವು ಒಂದು ಹುಡುಗ/ಹುಡುಗಿನ ನೋಡಿ ಮದುವೆ ಮಾಡಿಸೋದು ನಮ್ಮ 
ಮಕ್ಕಳಿಗೆ ಅವರು ಜೀವನಲ್ಲಿ ಸಂತೋಷವಾಗಿರಲಿ ಅಂತ ತಾನೇ ,
ಆದರೆ ಅವರು ಸಂತೋಷವಾಗಿ ಇರಲ್ಲ ಅಂತ ಗೊತ್ತಿದ್ದೂ ನಾವು ಹೇಗೆ ಬೇರೆ ಹುಡುಗಿನ/ಹುಡುಗನ್ನ ನೋಡಿ ಮದುವೆ ಮಾಡಿಸೋದು ಹೇಳಿ ?
ನಮಗೂ ಸಹ ಒಬ್ಬನೇ ಮಗ 
ನಿಮ್ಮ ಮಗಳನ್ನ ನಮ್ಮ ಮಗಳ ಹಾಗೆ ನೋಡಿಕೊಳ್ಳುತ್ತೇವೆ 
ನಿಮ್ಮ ಮಗಳು ಏನ್ ಓದಬೇಕು ಅಂದ್ರೂ ನಾವು ಓದಿಸುತ್ತೇವೆ ..
ನನ್ನ ಹೆಂಡತಿ ನಿಮ್ಮ ಜೊತೆ ನಾಲಕ್ಕು ಮಾತು ಆಡುತ್ತಾಳೆ ...
ನಮಸ್ಕಾರಮ ನಾನು ಕಾರ್ತಿಕ್ ನ ತಾಯಿ ಗಿರಿಜಾ ಅಂತ..
ನಿಮ್ಮ ಮಗಳನ್ನ ಧೈರ್ಯವಾಗಿ ನಮ್ಮ ಮನೆಗೆ ಕಳಿಸಿ ಕೊಡಬಹುದು
ನನ್ನ ಹತ್ರ ಹತ್ತು ತೋಲ ಬಂಗಾರ ಇದೆ ಅದನ್ನೂ ನಿಮ್ಮ ಮಗಳಿಗೆ ನಾನೇ ಹಾಕುತ್ತೇನೆ 
ನಿಮ್ಮ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತೇವೆ ...
(ಕಾರ್ತಿಕ್ ಅಮ್ಮ ಕಾರ್ತಿಕನನ್ನು ಕರೆದು )
ಹೇಯ್ ಕಾರ್ತಿಕ್ ಭಾವನಳ ಹೆತ್ತವರ ಮುಂದೆ
ಹೇಳು ಅವರ ಮಗಳನ್ನ ಮದುವೆ ಆಗೋ ನೀನು ಹೇಗೆ ನೋಡಿಕೊಳ್ಳುತ್ತೀಯ ಅಂತ .
ನಮಸ್ಕಾರ ನಾನೇ ಕಾರ್ತಿಕ್ ..
ನಿಮ್ಮ ಮಗಳನ್ನ ನಾನು ರಾಣಿತರ ನೋಡಿಕೊಳ್ತೀನಿ 
ಒಂದು ಹನಿ ಕಣ್ಣೀರೂ ಹಾಕಿಸದ ಹಾಗೆ,,
ಕಾರ್ತಿಕ್ ,ಹಾಗೂ ಅವರ ಹೆತ್ತವರ ಮಾತು ಕೇಳಿ ಅಪ್ಪ ಸಂತಸದಿಂದಲೇ..
ತುಂಬಾ ಖುಷಿಯಾಗುತ್ತೆ 
ವೆಂಕಟಪ್ಪನವರೇ ..
ನಾವು ಮದುವೆ ಮಾಡಿಕೊಡೋ ಗಂಡು ಹಾಗೂ ಅವರ ಮನೆಯವರು ಹೇಗೆ ನೋಡಿಕೊಳ್ಳುತ್ತಾರೆ ಅಂತ ಎಲ್ಲ ಹೆಣ್ಣು ಹೆತ್ತವರಿಗೂ ಒಂದು ಭಯ ಇರುತ್ತೆ ,
ಈಗ ನನಗೆ ನಿಮ್ಮೆಲ್ಲರ ಮಾತು ಕೇಳಿ ಆ ಭಯ ಒಂದು ಚೂರೂ ಇಲ್ಲ 
ನನ್ನ ಮಗಳು ನಿಮ್ಮ ಮನೆಯಲ್ಲಿ ನೆಮ್ಮದಿಯಾಗಿರುತ್ತಾಳೆ ಅನ್ನೋ 
ವಿಶ್ವಾಸ ನನಗೆ ಈಗ ಬಂದಿದೆ,
ಅಪ್ಪ ನನ್ನನ್ನು ನೋಡಿ. 
ನೋಡು ಭಾವನ ನಾನೇ ಮುಂದೆ ನಿಂತು ನಿಮಗೆ ಮದುವೆ ಮಾಡಿಸುತ್ತೇನೆ 
ಹೀಗ್ ಮನೆ ಬಿಟ್ಟು ನೀವು ಮದುವೆ ಆದರೆ .
ನಾಳೆ ನಾನು ಜನಗಳ ಮುಂದೆ ತಲೆ ಎತ್ತಿ ಓಡಾಡಕ್ಕೆ ಆಗಲ್ಲ ..
ನನ್ನ ಮಾನ ,ಮರ್ಯಾದೆ ಹೋದ ಮೇಲೆ ನಾನು ಬದುಕಿದ್ದು ಸತ್ತ ಹಾಗೆ ..
ಅಪ್ಪ ಮಾತನಾಡಿದ ನಂತರ ..ಕಾರ್ತಿಕ್ ತಂದೆ ..
ನೋಡಮ್ಮ ಭಾವನ ನಿಮ್ಮ ತಂದೆ ಇಷ್ಟೆಲ್ಲಾ ಕೆಳ್ಕೊಳ್ತಾ ಇದ್ದಾರೆ 
ಅವರ ಮನಸನ್ನ ನೋಯಿಸಿ ನೀವು ಚೆನ್ನಗಿರಕ್ಕೆ ಆಗಲ್ಲ
ಈಗ ಮನೆಗೆ ಹೋಗು ನಾನೇ ಬಂದು ಹೆಣ್ಣು ಕೇಳ್ತೀನಿ ,
ಊರೇ ನೋಡುವ ಹಾಗೆ ನಿಮ್ಮ ಮದುವೆ ಆಗಲಿ ಆಗ ನಮಗೂ, ನಿಮ್ಮ ಮನೆಗೂ ಗೌರವ ಅಂದರು!
ನಾನು ಅವರ ಮಾತಿಗೆ ಒಪ್ಪಿ ಅಪ್ಪಯ್ಯನ ಜೊತೆ ಹೊರಟೆ! 
ಆಗ ಸಮಯ ಬೆಳಗ್ಗೆ  6ಘಂಟೆ ...
ಅದೊಂದು ದೊಡ್ದಾದ ಮಾವಿನ ತೋಪು ......
ನಾವು ಮೂರು ಜನ ಆ ಮಾವಿನ ತೋಪಿನಲ್ಲಿ ನಡೆದು ಬರುತ್ತಿರುವಾಗ ..
ಅಂದೇ ಮೊದಲು ನನ್ನ ಬದುಕಿನಲ್ಲಿ ಅಪ್ಪನ ನೈಜ ರೂಪ ನೋಡಿದ್ದು! 
============================ಪುಟ8======================

ಅಪ್ಪ ನನ್ನ ಹುಡುಕಿಕೊಂಡು ಬರುವಾಗಲೇ ಚಾಕುನ ಜೊತೆಯಲ್ಲೇ ತಂದಿದ್ದರು!
ಅಪ್ಪ ದಿಢೀರ್ ಅಂತ ..
ಹೇಯ್ ಭಾವನ ಇವತ್ತೇ ಲಾಸ್ಟ್ ನೀನು ಆ ಕಾರ್ತಿಕ್ ನ ಮರೆಯಬೇಕು 
ಅಂತ ಹೇಳಿ ನನಗೆ ಹೊಡೆದು ಕೆಳಗೆ ತಳ್ಳಿದರು!
ನನ್ನ ಮಾನ,ಮರ್ಯಾದೆ ತೆಗಿಯಕ್ಕೆ ಹುಟ್ಟಿದ್ದಿಯ?
ಈ ರಾಮಯ್ಯನ ಒಂದು ಮುಖ ಅಷ್ಟೇ ಈ ಊರು ನೀನು ನೋಡಿರೋದು 
ಇನ್ನೊಂದು ಮುಖ ನಿಮ್ ಅಮ್ಮ ನೋಡಿದ್ದಾಳೆ ಕೇಳು,
ಮೂರು ಜನರನ್ನ ಕೊಂದು ಹೂತಿರೋನು ನಾನು..
ನನ್ನ ಮಾನ,ಮರ್ಯಾದೆಗೆ ಏನಾದರೂ ಧಕ್ಕೆ ಬಂದ್ರೆ 
ಮಗಳು ಅಂತನೂ ನೋಡಲ್ಲ ನಿನ್ನ ಕೊಂದು ಇಲ್ಲೇ  ಹೂತಾಕಿ ಬಿಡ್ತೀನಿ …
ಅಂತ ಅಪ್ಪ ನನ್ನ ಕತ್ತಿನಲ್ಲಿ ಕತ್ತಿಯನ್ನು ಇಟ್ಟಾಗ ..
ಅಮ್ಮ ಅಪ್ಪನ ಕಾಲಿಗೆ ಬಿದ್ದು ..
ಬೇಡ ರೀ ಬೇಡ ನನಗೆ ಇರೋದು ಒಬ್ಬಳೇ ಮಗಳು
ಏನು ಮಾಡ್ಬೇಡಿ ಅವಳಿಗೆ ನಾನು ಬುದ್ಧಿ ಹೇಳ್ತೀನಿ
ಇನ್ನೂ ಮುಂದೆ ಅವಳು ಈ ತರ ಮಾಡಲ್ಲ ..
ಅಂತ ಗೋಳಾಡಿದರು!
ಅಪ್ಪ ಕೋಪದಿಂದ!
ಬೆಳಗ್ಗೆ ಎದ್ದು ಮಗಳು ಇಲ್ಲದನ್ನು ನೋಡಿ ನನಗೆ ಎಷ್ಟು ಭಯ ಆಯಿತು ಗೊತ್ತ?
ಏನ್ ಹೇಳಲ್ಲ ಊರಿನ ಜನ ?
ನನ್ನ ಮುಂದೆ ನಿಂತು ಮಾತಾಡಕ್ಕೆ ಯೋಗ್ಯತೆ ಇಲ್ಲದ ನನ್ನ ಮಕ್ಕಳೆಲ್ಲ ನನ್ನ ಮುಂದೇನೆ 
ಕೂತು ,ನನಗೇ ಬುದ್ಧಿ ಹೇಳೋತರ ಮಾಡಿದ್ದಾಳೆ!
ನೋಡ್ದ ಆ ವೆಂಕಟಪ್ಪ ............
ನನ್ನ ಮನೆಗೆ ಬಂದು ಹೆಣ್ಣು ಕೆಳ್ತಾನಂತೆ ಎಷ್ಟು ಧೈರ್ಯ ಇರಬೇಕು ಅವನಿಗೆ ?
ಯಾವನಾದರೂ ಮನೆ ಕಡೆ ಬರಲಿ ಅದು ಹೇಗೆ ಜೀವಂತವಾಗಿ  ನನ್ನ ಊರನ್ನ ಬಿಟ್ಟು ಹೋಗ್ತಾರೆ ಅಂತ ನಾನು ನೋಡ್ತೀನಿ …
ಇದಕ್ಕೆಲ್ಲ ಯಾರು ಕಾರಣ ? ಯಾರು ಕಾರಣ ????
ಎಲ್ಲದಕ್ಕೂ ನಿನ್ನ ಮಗಳೇ ಕಾರಣ …
ಇಷ್ಟು ದಿನ ಒಬ್ಬಳೇ ಮಗಳು ಅಂತ ನನ್ನ ನಿಜವಾದ ರೂಪ ತೋರಿಸದೆ ತುಂಬಾ ಪ್ರೀತಿಯಿಂದ ಸಾಕಿದಿನಿ ...
ನೋಡು ಇದೆ ಕೊನೆ ..
ಇನ್ನೊಂದು ಸಲ ಏನಾದರೂ ನಾನು ತಲೆ ತಗ್ಗಿಸೋತರ ಮಾಡಿದ್ರೆ 
ಅಮ್ಮ,ಮಗಳು ಇಬ್ಬರನ್ನೂ 
ಹೂತಾಕಿ ಬಿಡ್ತೀನಿ  !
ಅಲ್ಲಿಂದ ಮನೆಗೆ ಬಂದ ಕೂಡಲೇ 
 Roomನಲ್ಲಿ ಕೂಡಿ ಹಾಕಿದರು ...
ರಾತ್ರಿ ನನಗೆ ಊಟ ಕೊಟ್ಟು !
ರಾತ್ರಿ ನನ್ನ ಎಳೆದೋಗಿ ಹಿತ್ತಲಿನ ಬಾವಿಗೆ ಹಾಕಿರುವ motor roomನಲ್ಲಿ ತಳ್ಳಿ 
ಇಡೀ ರಾತ್ರಿ ಇದೆ Roomನಲ್ಲಿರು ಇದೆ ನಿನಗೆ ಶಿಕ್ಷೆ..
ಅಪ್ಪ ಬೇಡ ನನಗೇ ತುಂಬಾ ಭಯ ಆಗುತ್ತೆ ಪ್ಲೀಸ್ ಬೇಡ ..
ಇನ್ನೊಂದು ಸಲ ತಪ್ಪು ಮಾಡಬಾರದು ನೀನು ಅದಕ್ಕೆ ……
ಹೇಳಿ ಅಪ್ಪ ಹೊರಗಿನಿಂದ ಚಿಲಕ ಹಾಕಿಕೊಂಡು 
ಹಿತ್ತಲಿನ ಬಾಗಿಲನ್ನು ಮುಚ್ಚಿ ಒಳಗೆ ಹೋದರು!
ಅದೊಂದು  ಸಣ್ಣ ಕೋಣೆ..
ಒಂದೇ ಕಬ್ಬಿಣದ ಬಾಗಿಲ್ಗೆ ಒಂದು ಸಣ್ಣ ಕಿಟಕಿ ಅಷ್ಟೇ  ..
ನಾನು ಅಲ್ಲೇ ಅಳುತ್ತಲೇ ಕುಳಿತುಕೊಂಡೆ ...
ಆಗ ಸಮಯ 12:30ಘಂಟೆ 
ನಾನಿದ್ದ ಕೋಣೆಯ ಬಲ್ಬ್ ಹೊಡೆದುಕೊಳ್ಳುತ್ತಿತ್ತು .   
ನನ್ನ ಸುತ್ತಲೂ ಏನೋ ಒಂದು ರೀತಿ ಅಮಾನುಷವಾದ ಶಬ್ದ !
ನಾನು ಎದ್ದು ಭಯದಲ್ಲೇ ಕಿಟಕಿಯಲ್ಲಿ ನೋಡಿದೆ!
ಹೊರಗೆ ಆ ಮೂರೂ ಪ್ರೇತಾತ್ಮಗಳೂ ನಿಂತಿದ್ದವು!
ನನ್ನ ಹಣೆಯಲ್ಲಿದ್ದ ಬೆವರಿನ ಹನಿಗಳೇ ಹೇಳುತ್ತಿತ್ತು ನನ್ನ ಮನದೊಳಗಿನ ಭಯವನ್ನು.......
ನನ್ನ ಕೋಣೆಯಲ್ಲಿದ್ದ ವಸ್ತುಗಳಲ್ಲೇ ಒಂದೊಂದಾಗಿ ಬೀಳುತ್ತಿತ್ತು
ನನಗೆ ಆಗಲೇ ತಿಳಿಯಿತು ಆ ಆತ್ಮಗಳು ನನ್ನ ಕೊಲ್ಲುವುದಕ್ಕೆ ಬಂದಿದೆ! 
ಬಾಗಿಲಿನ ಹತ್ತಿರೋ ಯಾರೋ ಬಂದಾಗ ಹಾಗೆ ಅನ್ನಿಸಿತು..
ಹೊರಗೆ ಹಾಕಿದ್ದ ಚಿಲಕ ತೆಗೆದ ಸದ್ದು ..
ಕೂಡಲೇ ನಾನು ಒಳಗಿನಿಂದ ಚಿಲಕ ಹಾಕಿಕೊಂಡೆ ..
ಯಾರೋ ಬಾಗಿಲನ್ನು ಬಲವಾಗಿ ಎಳೆದಾಡುವ ಹಾಗೆ ಬಾಗಿಲು ಹಿಂದೆ, ಮುಂದೆಯಾಗುತ್ತಿತ್ತು ...
ನಾನು ಆ ರೂಮಿನ ಬಾಗಿಲ ಹತ್ತಿರ ಕುಳಿತುಕೊಂಡು ...
ನನ್ನ ಏನೂ ಮಾಡಬೇಡಿ ನನ್ನ ಏನೂ ಮಾಡಬೇಡಿ ಎಂದು ಬೇಡಿಕೊಂಡೆ!
ಹೀಗ ನಾನು ಕೇಳುತ್ತಲೇ ಇದ್ದೆ ನನ್ನ ರೂಮಿನ ಒಳಗೆ ನಡುಕ ಹಾಗೆ ಇತ್ತು!
ನಾನೂ ಸತ್ತರೆ ನಿಮ್ಮ ಸಾವು ಯಾರಿಗೂ ತಿಳಿಯದೆ ಮಣ್ಣಲ್ಲಿ ಮಣ್ಣಾಗುತ್ತದೆ ಎಂದು ಹೇಳಿದ ಕೂಡಲೇ 
ಕೆಲವೇ ಕ್ಷಣಗಳಲ್ಲಿ......................
ಎಲ್ಲವೂ ಶಾಂತವಾಯಿತು! 
ರೂಮಿನ ಬಾಗಿಲು ತೆಗೆದು ನಾನು ಭಯದಲ್ಲೇ ಹೊರ ಬಂದು ನೋಡಿದೆ
ಸುತ್ತಲೂ ಯಾರೂ ಇಲ್ಲ ನಾನು ಹಿತ್ತಲಿನ ಗೆಟ್ ತೆಗೆದು,
ನಮ್ಮ ಊರಿನಲ್ಲಿರುವವರೆಲ್ಲ ನಮ್ಮದೇ ಜಾತಿ ಜನ ...
ಈ ರೀತಿ ನಮ್ಮದೇ ಜಾತಿ ಮುಖಂಡ ಮಾಡಿದ್ದಾನಲ್ಲ ಅಂತ 
ತಮ್ಮ ಜಾತಿಯ ಮೇಲೆ ನಾಳೆ ಕಳಂಕ ಬರಬಹುದು ಅನ್ನೋ ಕಾರಣಕ್ಕೆ ನನ್ನ ಮತ್ತೆ ನನ್ನ ತಂದೆಯ ಕೈಯಲ್ಲೇ ಒಪ್ಪಿಸಿ ಬಿಡುತ್ತಾರೆ ಅನ್ನೋ ಆಲೋಚನೆಯಲ್ಲೇ ನಾನು 
ಅಲ್ಲಿಂದ ಕಾರ್ತಿಕ್ ಮನೆ ಕಡೆ ವೇಗವಾಗಿ ಓಡಿದೆ ! 
ನಡೆದ ಎಲ್ಲ ವಿಷಯಗಳನ್ನೂ ಕಾರ್ತಿಕ್ ಹೆತ್ತವರಿಗೆ ತಿಳಿಸಿದೆ,ಕಾರ್ತಿಕ್ ಅಪ್ಪ..
ಭಾವನ ಮೊದಲು ನೀನು ಸುಧಾರಿಸಿಕೋ ಮ..ತುಂಬಾ ಹೆದರಿದ್ದಿಯ..
ಕಾರ್ತಿಕ್ ನನ್ನ ತಂದೆ ಈ ರೀತಿ ವರ್ತಿಸ್ತಾರೆ ಅಂತ ನಾನು ಕನಸಲ್ಲೂ ಅನ್ಕೊಂಡಿರ್ಲಿಲ್ಲ ..
ಭಾವನ ಈಗ  ಏನು ಮಾತಾಡೋದು ಬೇಡ ನೀನು ಬಾ ಊಟ ಮಾಡು ಮೊದಲು 
ನೀನು  ಸ್ವಲ್ಪ ಸುಧಾರಿಸಿಕೋ 
ನಾಳೆ ಬೆಳಗ್ಗೆ ಎಲ್ಲ ಮಾತಾಡೋಣ ..
ಕಾರ್ತಿಕ್ ಮನೆಯವರ ಬಲವಂತಕ್ಕೆ ಸ್ವಲ್ಪಾನೆ ಊಟ ಮಾಡಿ 
ನಾನು ಕಾರ್ತಿಕ್ ತಾಯಿಯ ಜೊತೆ ಮಲಗಿಕೊಂಡೆ 
ಬೆಳಗ್ಗೆ 6ಕ್ಕೆ  !
ಕಾರ್ತಿಕ್ ಬಾ ಈಗಲೇ ಪೋಲಿಸ್ ಸ್ಟೇಷನ್ ಗೆ
ಹೋಗಿ ನನ್ನ ತಂದೆ ಮೇಲೆ ದೂರ ಕೊಡಬೇಕು !
ಹೂಂ ಭಾವನ ನಾವು ದೂರು ಕೊಟ್ಟರೆ ನಿನ್ನ ಹೆತ್ತವರೇ ಅಪರಾಧಿಯ ಸ್ಥಾನದಲ್ಲಿ ನಿಲ್ತಾರೆ..
ನಾನು ಎಲ್ಲಾನೂ ಯೋಚನೆ ಮಾಡಿದ್ದೀನಿ ,
ಸತ್ಯ ಸತ್ಯನೇ ಅಲ್ವ ...
ನಮ್ಮ ಮನೆಯಲ್ಲಿ ಎಷ್ಟೋ
ಮರ್ಮಗಳು ಮೌನವಾಗಿ ಮಣ್ಣೊಳಗೆ ಮಲಗಿದೆ ಅದನ್ನ ಹೊರ ತೆಗೆಯಬೇಕು .....
ನನ್ನ ಮಾತುಗಳನ್ನು ಕೇಳಿ ಕಾರ್ತಿಕ್ ತಂದೆ,
ನಿನ್ನ ನೋಡಿದ್ರೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತೆ ಭಾವನ
ಹೆತ್ತವರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲೇ ಬೇಕು ಅನ್ನೋ 
ನಿನ್ನ ಮನೋ ಧೈರ್ಯ ಮೆಚ್ಚಲೇ ಬೇಕು ,
ನೀನು, ಕಾರ್ತಿಕ್ ಹೋಗಿ ದೂರು ಕೊಡಿ 
ನಾನು ಬಂದರೆ ನಾನೇ ಎಲ್ಲಾನೂ ನಿನಗೆ ಹೇಳಿ ಇತರ ದೂರು ಕೊಡಿಸ್ತಾ ಇದ್ದೀನಿ 
ಅಂತ ನಿನ್ನ ತಂದೆ ಹೇಳಿದ್ರೂ ಹೇಳ್ತಾರೆ ಅದಕ್ಕೆ ನಾನು ಬರಲ್ಲ ....
ಸರಿ ಅಪ್ಪ ನಾನು ಭಾವನನೆ ಹೋಗಿ ದೂರು ಕೊಡ್ತೀವಿ ...
ನಾನು ಕಾರ್ತಿಕ್ 
ಪೋಲಿಸ್ ಸ್ಟೇಷನ್ ನಲ್ಲಿ .........

ಸರ್, ನಮಸ್ಕಾರ 
ನಾನು ಒಂದು ದೂರು ಕೊಡಬೇಕು ?
ನೀವು ರಾಮಣ್ಣನ ಮಗಳು ಅಲ್ವ ?
ಹೌದು ಸರ್ ನನ್ನ ಹೆಸರು ಭಾವನ.
ಈ ಹುಡುಗ ಯಾರು ?
ಕಾರ್ತಿಕ್ ಅಂತ ನನ್ನ class mate ,
ನಾವಿಬ್ಬರೂ ಪ್ರೀತಿಸ್ತ ಇದ್ದಿವಿ ..
ಅನ್ಕೊಂಡೆ ಏನು ಮನೆ ಬಿಟ್ಟು ಬಂದಿದ್ದಿರ ?
ನಿಮ್ಮ ತಂದೆ ದೂರು ಕೊಡಕ್ಕೆ ಮುಂಚೆ
ನೀವು ಕಂಪ್ಲೇಂಟ್ ಕೊಡೋಣ ಅಂತ ಬಂದ್ರ ?
ಏನ್ ದೂರು ?
ಸರ್.ಕೆಲವು ವರುಷಗಳ ಹಿಂದೆ ಕಾಣೆಯಾದ 
ಸುಧಾ,ಹಾಗೂ ಶ್ರೀಧರ್ ನ ಕೊಂದು ನಮ್ಮ ಮನೆಯ ಹಿತ್ತಲಿನಲ್ಲೇ ಹೂತಿದ್ದಾರೆ!
(Inspector ತುಂಬಾ ಗಾಬರಿಯಿಂದ)
ಏನು ?? ಏನ್ ಹೇಳ್ತಾ ಇದ್ದೀಯ ಮ ನೀನು ?
ಇದೆಲ್ಲ ನಿನಗೆ ಹೇಗೆ ಗೊತ್ತು ?
ಸರ್ ,ನನ್ನ ಜೀವಕ್ಕೆ ಆ ಮೂರು ಆತ್ಮಗಳಿಂದ ಅಪಾಯ ಇತ್ತು ,
ಅದಕ್ಕೆ ನಮ್ಮ ಅಮ್ಮನೇ ನಾನು ಹುಷಾರಾಗಿ ಇರಬೇಕು ಅಂತ ಈ ವಿಷಯ ಹೇಳಿದ್ರು .
ಏನಮ್ಮ ನಿನ್   ಹೇಳೋದು
ಈ ಕಾಲದಲ್ಲಿ ದೆವ್ವ ಭೂತ ..
ಅಂತೆ ಆಮೇಲೆ ನಿಮ್ಮ ಅಮ್ಮನೇ ನಿನಗೆ ಈ ವಿಷಯ ಹೇಳಿದ್ರು 
ಅನ್ನೋದು  ನಂಬಕ್ಕೆ ಆಗ್ತಾ ಇಲ್ಲ ....!
ಸರಿ ನೀನೆ ನಿನ್ನ ಕೈಯಾರೆ ಕಂಪ್ಲೇಂಟ್
ಬರೆದು ಕೊಡು ...
ನಾನೇ ಕೈಯಾರೆ ದೂರನ್ನು ಬರೆದು ..
ತೊಗೊಳಿ ಸರ್ ..
ಕೆಲವು ವರುಷಗಳ ಹಿಂದೆ ಕಾಣೆಯಾದ,
ಸುಧಾ,ಹಾಗೂ ಶ್ರೀಧರ್ ಮತ್ತೊಬ್ಬರ ಹೆಸರು ನನಗೆ ತಿಳಿದಿರುವುದಿಲ್ಲ.
ಅವರನ್ನು ಕೊಂದು ನಮ್ಮ ಮನೆಯ ಹಿತ್ತಲಿನಲ್ಲಿ ಹೂತ್ತಿದ್ದಾರೆ,
ಎಂದು ನನಗೆ ತಿಳಿದು ಬಂದಿರುತ್ತದೆ ,
ಇದರ ಬಗ್ಗೆ ವಿಚಾರಣೆ ಮಾಡಿ ಆ ಸಾವಿನ 
ಹಿಂದಿನ ಸತ್ಯಗಳನ್ನು ಹೊರ ಜಗತ್ತಿಗೆ ತೋರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ ..
ಈ ದೂರನ್ನು ನಾನೇ ಸ್ವಯಂ ಪ್ರೇರಿತಳಾಗಿ  ಕೊಟ್ಟಿರುತ್ತೇನೆ,
ಇದರ ಹಿಂದೆ ಯಾರ ಬಲವಂತವೂ..
ಹಾಗೂ ಯಾವುದೇ ದುರುದ್ದೇಶವೂ  ಇರುವುದಿಲ್ಲ..
ಇಂತಿ ಭಾವನ.(ರಾಮಯ್ಯನ ಮಗಳು )
ನನ್ನ ದೂರನ್ನು ಓದಿದ ನಂತರ Inspector….
ಒಂದು ಮಾತು ಭಾವನ,
ನೀನು ದೂರು ಕೊಡ್ತಾ ಇರೋದು 
ಯಾರೋ ಸಾಮಾನ್ಯವಾದ ವ್ಯಕ್ತಿಯ ಮೇಲೆ ಅಲ್ಲ ಅನ್ನೋದು ನೆನಪಿರಲಿ ....!
ದೂರು ಕೊಡ್ತಾ ಇರೋ ನಾನೂ ಸಹ ಯಾರೋ ಸಾಮಾನ್ಯವಾದ ಹುಡುಗಿ ಅಲ್ಲ ಸರ್,
ಅಪಾದನೆ ಹೊತ್ತಿರುವ ರಾಮಯ್ಯನ ಸ್ವಂತ ಮಗಳು ಅನ್ನೋದು ನನಗೆ ನೆನಪಿದೆ!
ಗುಡ್ ಸರಿ ಬನ್ನಿ ಹೋಗೋಣ ...
ನನ್ನ ಮಾತಿನ ಮೇಲೆ ಬಲವಾದ ನಂಬಿಕೆ ಬಂದ ಮೇಲೆ 
JCB ಭೂಮಿ ಅಗೆಯುವ ಯಂತ್ರ ವನ್ನೂ ತರಿಸಿದರು...!
ನಾನು,ಕಾರ್ತಿಕ್ ,ಹಾಗೂ ಪೋಲಿಸ್ ಮನೆಯ ಮುಂದೆ ನಿಂತಾಗ 
ಅಪ್ಪಾನೆ ಬಾಗಿಲು ತೆಗೆದು ಹೊರ ಬಂದು 
ನಾನು ಪೋಲಿಸ್ ಜೊತೆ ಬಂದಿರೋದನ್ನ ನೋಡಿ
ಅವರಿಗೆ ಆಗಲೇ ಎಲ್ಲವೂ  ಅರ್ಥವಾಯಿತು!!
ಪೋಲಿಸ್ ಅವರಿಗೆ ವಿಷಯ ತಿಳಿಸಿ 

ರಾಮ್ಮಯ್ಯನವರೆ ನಾವು ನಿಮ್ಮ ಮನೆಯ ಹಿತ್ತಲಿನಲ್ಲಿ ಅಗೆಯ ಬೇಕು
ನಿಮ್ಮ ಮೇಲೆ ಮೂರು ಕೊಲೆಯ ಆರೋಪವಿದೆ ?
ಸರ್, ನನ್ನ ಮಗಳು ಇವನ ಜೊತೆ ಓಡಿ ಹೋಗಿ ಮದುವೆ ಆಗಕ್ಕೆ 
ನನ್ನ ಮೇಲೆ ಇಲ್ಲದ ಸಲ್ಲದ ದೂರ ಕೊಟ್ಟಿದ್ದಾಳೆ ,
ಇದೆಲ್ಲ ಶುದ್ಧ ಸುಳ್ಳು ..!
ನೋಡಿ ರಾಮಯ್ಯನವರೇ ದೂರು ಕೊಟ್ಟಿದ್ದು ಯಾರೋ ನಿಮಗೆ ಸಂಬಂಧ ಇಲ್ಲದ
ವ್ಯಕ್ತಿ ಆಗಿದ್ದರೆ ಪರವಾಗಿಲ್ಲ ..
ದೂರು ಕೊಟ್ಟಿರೋದು ನಿಮ್ಮ ಸ್ವಂತ ಮಗಳು!
ಅಷ್ಟಕ್ಕೂ ನಿಮ್ಮ ಮೇಲೆ ತಪ್ಪು ಇಲ್ಲ ಅನ್ನೋದಾದರೆ
ಭೂಮಿನ ಅಗಿದು ನೋಡಿದ ಮೇಲೆ ಗೊತ್ತಾಗುತ್ತೆ ...
ನಮ್ಮ ಕೆಲಸನ ಮಾಡಕ್ಕೆ ಬಿಡಿ .....
ಅಂತ ಹೇಳಿ .....
ಹಿತ್ತಲಿನ ಕಡೆ ಅಗೆಯಲು ಆರಂಭಿಸಿದರು! 
ಊರಿನ ಜನ ಎಲ್ಲರೂ ನಮ್ಮ ಮನೆಯ ಮುಂದೆ ಸರಿ
ನಡೆಯುವುದೆಲ್ಲ ನೋಡುತ್ತಾ .....
ಎನ್ ಆಗ್ತಾ ಇದೆ ಊರಿಗೆ ನ್ಯಾಯ ಹೇಳೋರ ಮನೆಯಲ್ಲೇ ಇತರನ ?
ಈ ಹುಡುಗಿ , ಆ ಹುಡುಗನ ಜೊತೆ ಓಡಿಹೊಗಕ್ಕೆ ಇತರ ಸುಳ್ಳು ಹೇಳ್ತಾ ಇದ್ದಾಳೆ......
ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು ..
ಅದಗಾಲೆ ಅಗೆಯುವುದನ್ನು ಶುರು ಮಾಡಿ ಒಂದು ಘಂಟೆಯಾಗಿತ್ತು .
ಊರಿನವರಿಗೆಲ್ಲ ನನ್ನ ಮೇಲೆ ಅನುಮಾನ ಸುಳ್ಳು ಹೇಳುತ್ತಿರಬಹುದೆಂದು ! 
ಆಗ ಒಂದು ಜಾಗದಲ್ಲಿ...
ನಾಲಕ್ಕು ವರುಷಗಳ ಹಿಂದೆ ಮಣ್ಣಾಗಿದ್ದ ಸುಧಾ!
ಅಸ್ಥಿಪಂಜರವಾಗಿ ಸಿಕ್ಕಿದಳು ..
ಅದು ಸುಧಾನೆ ಅಂತ ನನಗೆ ಹೇಗೆ ತಿಳೀತು ಅಂದ್ರೆ 
ಆಲ್ಲಿ, ಅವತ್ತು ಸುಧಾಳ ಕಾಲಿನಲ್ಲಿ ನೋಡಿದ್ದೇ ಅದೇ ಒಂಟಿ 
ಗೆಜ್ಜೆ ಪೋಲಿಸ್ ನನಗೆ ತೋರಿಸಿದಾಗ
ನನ್ನ ಕಣ್ಣುಗಳನ್ನೇ ನಂಬಲಾಗದ ಸ್ಥಿತಿ!!
ಕೆಲವು ಕ್ಷಣಗಳ ನಂತರ..
ಮತ್ತೆರಡು ದೇಹಗಳ ಅಸ್ಥಿಪಂಜರಗಳು ಕೂಡ ಸಿಕ್ಕಿದವು ...
ಅವೆರಡೂ ಗಂಡು ದೇಹದ್ದೆ ಅಂತ ಅಲ್ಲಿದ ಪರಿಶೀಲನ  ಅಧಿಕಾರಿಗಳು ಹೇಳಿದರು ..
ಒಂದು ಅಸ್ಥಿಪಂಜರದ ಜೊತೆ ಸುಧಾಳ ಮತ್ತೊಂದು ಗೆಜ್ಜೆ ಕೂಡ ಇತ್ತು! 
ನನಗೆ ಅದು ಶ್ರೀಧರನ ಇರಬೇಕೆನ್ನಿಸುತ್ತಿತ್ತು ..
ಮಣ್ಣಲ್ಲಿ  ಮಣ್ಣಾಗುತ್ತೆ  ಅಂದು ಕೊಂಡಿದ್ದ ಸತ್ಯ ಕೊನೆಗೂ
ಎಂದು ಹೊರ ಬಂದಾಗ ಅಲ್ಲಿಂದ ಜನಗಳಿಗೆ ಅಚ್ಚರಿ! 
ಅಮ್ಮ.ಅಪ್ಪ ಇಬ್ಬರನ್ನೂ arrest ಮಾಡಿ ಪೋಲಿಸ್ ಸ್ಟೇಷನ್ ನಲ್ಲಿ
ವಿಚಾರಣೆ ಶುರು ಮಾಡಿದರು!
ಹೇಳಿ ಹೇಗೆ ಆ ದೇಹಗಳು ನಿಮ್ಮ ಮನೆಯ ಹಿತ್ತಲಿನಲ್ಲಿ ಬಂದಿದ್ದು ??
ಯಾರು ಅವರನ್ನ ಕೊಂದಿದ್ದು ?
ಎಂದು ಪೋಲಿಸ್ ಕೇಳುತ್ತಿದ್ದರು 
ಅಮ್ಮ ಹೇಳಲು ಮುಂದೆ ಬಂದಾಗ,
ಅಪ್ಪ ತಡೆದು..
ಒಂದು ಕ್ಷಣ ನನ್ನ ನೋಡಿದರು 
ನಾನು ತಲೆ ಬಾಗಿ ನಿಂತೆ!.
ಹೇಳ್ತೀನಿ ಸರ್.................!
(ಅಪ್ಪ ಎಲ್ಲವನ್ನೂ ಹೇಳ ತೊಡಗಿದರು)

============================ಪುಟ9======================
ನಾಲಕ್ಕು ವರುಷಗಳ ಹಿಂದೆ! 2007-8
ನಮ್ಮ ಊರಿನ್ನೋ ಮುಂದುವರೆದಿರಲಿಲ್ಲ...
ಯಾವುದೇ ರೀತಿಯ ಮೂಲಸೌಕರ್ಯಗಳು ಇರಲಿಲ್ಲ
ಅದಕ್ಕೆ ನಾನು ಭಾವನನ ನನ್ನ ಹೆಂಡತಿ ಲಲಿತಳ
ತಾಯಿಯ ಮನೆಲ್ಲಿ ಬಿಟ್ಟು ಅಲ್ಲೇ ಇರುವ ಶಾಲೆಗೇ ಕಳಿಸುತ್ತಿದ್ದೆ ..
ಅವಳನ್ನು ನೋಡಬೇಕು ಎನ್ನುವಾಗಲ್ಲೇ
ನಾವೇ ಹೋಗಿ ನೋಡಿ ಬರುತ್ತಿದ್ದೋ..
ನಾನು ಊರಿನಲ್ಲಿ ಜಾತಿ ಮುಖಂಡ ಆಗಿ ಕೆಲವು ದಿನಗಳ ಬಳಿಕ !  ..
ಊರಿನಲ್ಲಿ ಪಂಚಾಯಿತು ಚುನಾವಣೆಯ ಸಮಯ ಅದು! 
ನಾನೂ ಸಹ ಚುನಾವಣೆಯಲ್ಲಿ ನಿಂತಿದ್ದೆ...

ಶ್ರೀಧರ್ ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ!
ಅವನು ಕೆಲ್ಸಕ್ಕೆ ಸೇರಿದ ಆರು ತಿಂಗಳ ನಂತರ  ಒಂದು ದಿನ!

ರಾಮಣ್ಣ
ನಾನು ಪಕ್ಕದ ಊರಿನ ಸುಧಾ ಅನ್ನೋ ಹುಡುಗಿನ ತುಂಬಾ ಪ್ರೀತಿಸ್ತಾ ಇದ್ದೀನಿ ..
ನೀವೇ ಮುಂದೆ ನಿಂತು ಈ ವಿಷಯ ಮಾತಾಡಿ ನಮಗೆ ಲಗ್ನ ಮಾಡ್ಬೇಕು ?
ಏನ್ಲ ಹೇಳ್ತಾ ಇದಿ...?
ಅವರು ನಿನ್ನ ಜಾತಿಗಿಂತ ಕೆಳಗೆ ಇದ್ದಾರೆ ಅಂತ ನಿಂಗೆ ತಿಳಿದಿಲ್ವನ್ಲ ?
ಗೊತ್ತಣ್ಣ..
ಆದರೆ ನಂಗೂ ಯಾರೂ ಇಲ್ಲ..ಅನಾಥ..
ನಂಗೆ ಅಂತ ಯಾರ್ ಇದ್ದಾರೆ? ಹೇಳಿ ಹೆಣ್ಣ್ ನೋಡಿ ಲಗ್ನ ಮಾಡಕ್ಕೆ..
ಏನ್ಲ ನೀನ್ ಮಾತಿನ ಅರ್ಥ ನಾವೆಲ್ಲಾ ಸತ್ತೊಗಿದ್ದಿವಿ ಅಂತ ನ ?
ಅಯ್ಯೋ ಬುಡ್ತು ಅನ್ನಿ ಅಣ್ಣ...ನನ್ನ ಮಾತಿನ ಅರ್ಥ ಅದಲ್ಲ,
ನನಗೆ ಅವಳು ಸಾನೆ  ಇಷ್ಟ ಅಗವ್ಳೆ,
ಅವಳಿಗೂ ನಾನು ಇಷ್ಟ ಅಗಿವ್ನಿ ...
ಅದಕ್ಕೆ ನಾನು ಅವಳು ಲಗ್ನ ಆಗೋಣ ಅಂತ ಇದ್ದಿವಿ ಅಣ್ಣ.
ಹೊಂ ಸರಿ ......ಈ ಎಲೆಕ್ಷನ್ ಗಲಾಟೆ ಮುಗಿಲಿ ನಾನೇ ಒಂದು ದಿನ 
ಅವರ ಮನೇಲಿ ಮಾತಾಡಿ ನಿಮಗೆ ಲಗ್ನ ಮಾಡಕ್ಕೆ ಏರ್ಪಾಡು ಮಾಡ್ತೀನಿ ..
ಅಯ್ತಣ್ಣ ಆಯಿತು...
ಅಂತ ಹೇಳಿ ಹೋದವನು ಕೆಲವೇ ದಿನಗಳಲ್ಲಿ 
ರಾಮಣ್ಣ ... ರಾಮಣ್ಣ ...
ಎಂದು ಮನೆಯ ಮುಂದೆ ಬಂದು ನಿಂತ! 
ನಾನು ಬಾಗಿಲು ತೆರೆದು ನೋಡಿದರೆ
ಇಬ್ಬರೂ ಮದುವೆ ಮಾಡಿಕೊಂಡು  ಬಂದಿದ್ದರು ! 

ಏನೋ ಶ್ರೀಧರ ಇದು
ಅಣ್ಣ  ನಾವಿಬ್ಬರೂ ಮನೆ ಬಿಟ್ಟು ಬಂದು ಮದುವೆ ಆಗಿದ್ದಿವಿ ..
ನೀವೇ ನಮಗೆ ಒಂದು ದಾರಿ ತೋರಿಸಬೇಕು !
ಅಂತ ನನ್ನ ಕಾಲಿಗೆ ಬಿದ್ದ ....
ಏನ್ಲ ..ನಿಂಗೆ ಈ  ರಾಮಯ್ಯನ ಮಾತಿನ ಮೇಲೆ ನಂಬಿಕೆ ಇಲ್ಲ ಅಲ್ವ?
ನಾನು ಅಷ್ಟು ಹೇಳಿನೂ ನೀನು ಇತರ ಮಾಡಿದ್ದಿಯ ಅಂದ್ರೆ ಏನ್ಲ ಅರ್ಥ ಇದಕ್ಕೆ ?
ಅಣ್ಣ ದಯವಿಟ್ಟು ಅತರ ಹೇಳಬ್ಯಾಡಿ...
ಇವಳ ಮನೇಲಿ ನಮ್ಮ ವಿಷಯ ತಿಳಿದು 
ಇವಳಿಗೆ ಅವಸರಅವಸರವಾಗಿ ವರ ನೋಡಿ ಲಗ್ನ ಮಾಡಕ್ಕೆ ಇದ್ರು ಅಣ್ಣ..
ಇವಳು  ನಿನ್ನ ಬಿಟ್ರೆ ನಾನು ಯಾರಿಗೂ ನನ್ನ ಮನಸು ಕೊಡಕಿಲ್ಲ ಅಂತ ಹೇಳಿ
ಮನೆ ಬಿಟ್ಟು ಬಂದ್ಳು
ನಾನು ಇಲ್ಲಾಂದ್ರೆ ಬಾವಿನೋ ಕೆರೇನೋ ನೋಡಿಕೊಳ್ತೀನಿ ಅಂತ ಅಳ್ತಾ ಇದ್ಲು ,
ಅದಕ್ಕೆ ಊರಾಚೆ ಇರೋ ಗುಡಿಯಾಗ ಮದುವೆ ಅಗೀವಿ ,ಅಣ್ಣ..
ಈ ಅನಾಥನಿಗೆ ನಿಮ್ಮನ್ನ ಬಿಟ್ಟರೆ ಬೇರೆ ಯಾರೂ ಗತಿ ಇಲ್ಲ..
ನೀವ್ ಏನ್ ಮಾಡ್ತೀರೋ ಮಾಡಿ 
ನಿಮ್ಮ ಪಾದದಾಗ ನಮ್ಮ ಜೀವ ಇಟ್ಟಿವಿ 
ನೀವು ಕೆರೆಗೆ ಹಾಕಿದ್ರೂ ಸರಿ ಇಲ್ಲ ಹಾಲಿಗೆ ಹಾಕಿದ್ರೂ ಸರಿ...
ಎಂದೇಳಿ ಕೈ ಕಟ್ಟಿ ನನ್ನ ಮುಂದೆ ನಿಂತು ಕೊಂಡ …
ಸರಿ ಆಗಿದ್ದು ಆಯಿತು ..ಊರಲ್ಲಿ ಚುನಾವಣೆ ಬೇರೆ ಇದೆ ಈ ಸಮಯದಾಗ ನಿಮ್ಮ ವಿಷಯ ತಿಳಿದರೆ ಅಷ್ಟೇ ಊರಿನ ಜನ ಸುಮ್ಕೆ ಇರಾಕಿಲ್ಲ ...
ಹೊಡೆದೆ ಸಾಯಿಸಿಬಿಡ್ತಾರೆ  ನಿಮ್ಮನ್ನ !!
ಒಸಿ ತಡಿ..
ಲೇಯ್ ಗೋಪಾಲ!
(ಗೋಪಾಲ ನನ್ನ ಸ್ವಂತ  ತಮ್ಮ ತುಂಬಾ ವರುಷಗಳ ಹಿಂದೆಯೇ ಅವನು ನಮ್ಮ ಹಳ್ಳಿಯ ಬಿಟ್ಟು ಪ್ಯಾಟೆ ಸೇರಿದ್ದ,
ನಾನೇ ಚುನಾವಣೆಯ ವಿಷಯದಲ್ಲಿ  ಕೆಲಸಗಾರರನ್ನೇ ನಂಬಕ್ಕೆ ಆಗಲ್ಲ ,
ನಮ್ಮವರು ಒಬ್ಬರು ಇರಬೇಕು
ಅಂತ ಸಹಾಯಕ್ಕೆ ಪ್ಯಾಟೆಯಿಂದ ಕರಿಸಿಕೊಂಡೆ.)
ಹೇಯ್ ಗೋಪಾಲ,
ಇವರು ಮನೆ ಬಿಟ್ಟು ಬಂದು ಮದುವೆಯಾಗಿದ್ದಾರೆ ಕನ..
ಇವರಿಗೆ ನಮ್ಮ ಊರಾಚೆ ಇರೋ ತೋಟದ ಮನೆಯ ಬೀಗ ಕೊಡು,
(ಒಳಗಿನಿಂದ ಬೀಗದ ಜೊತೆ ಬಂದ ಗೋಪಾಲನ ಮುಖದಲ್ಲಿ ಕೋಪವೇ ತುಂಬಿತ್ತು!) 
ತಗೊಲ್ಲ ಹುಷಾರು  ಕನ್ಲ ಶ್ರೀಧರ ಯಾರ ಕಣ್ಣಿಗೂ ಕಾಣಬೇಡ ಸ್ವಲ್ಪ ದಿನ ಗ್ಯಪ್ತಿ ಮಡ್ಕೋ .
ಈಗ ನೀವು ಉಳಿದು ಇರೋ ಜಾಗದಲ್ಲಿ ನೀವು ಎಷ್ಟೇ ಕಿರುಚಿದರೂ ಯಾರಿಗೂ ಕೇಳಕ್ಕಿಲ್ಲ 
ಅದಕ್ಕೆ ಹುಷಾರು! ಯಾರ್ನೂ ನೋಡ್ದೆ ಬಾಗಿಲು ತೆಗೆಬ್ಯಾ   !ಹೋಗು  
ಆಯ್ತಣ್ಣ ......
ಅಂತ ಅವರಿಬ್ಬರೂ ಅಲ್ಲಿಂದ ಹೋದ ಮೇಲೆ ಗೋಪಾಲ!
ಅಣ್ಣ ಏನ್ ಮಾಡ್ತಾ ಇದ್ದೀಯ ಅಂತ ನಿಂಗೆ ತಿಳಿದ್ದಿಯ ?
ಯಾಕ್ಲ ಅಂಗ್ ಕೇಳ್ತೀ ?
ಮತ್ತೆ  ಏನಣ್ಣ,
ಊರಲ್ಲಿ ಎಲೆಕ್ಷನ್ ಇದೆ  ಟೈಮ್ ನಲ್ಲಿ 
ನಿನ್ ಮಾಡೋದು ನನಗ್ಯಾಕೋ ಸರಿ ಕಾಣಕಿಲ್ಲ
ಊರಲ್ಲಿ ಈ ವಿಷಯ ಗೊತ್ತಾಯಿತು ಅಂದ್ರೆ ಅಷ್ಟೇ ,
ನಮ್ಮ ಜಾತಿ ಜನರ ಒಂದೇ ಒಂದು ವೋಟು ನಮಗೆ ಬೀಳಕಿಲ್ಲ!
ಈಗಲೇ ನೀನು ಚುನಾವಣೆಯಲ್ಲಿ ನಿಂತಿರೋದು ತುಂಬಾ ಜನಕ್ಕೆ ಹೊಟ್ಟೆ ಉರಿ ಇದೆ!  
ಮೊನ್ನೆ ಮೂರ್ನೆ ಬೀದಿ  ರಂಗಪ್ಪ  ಕರೆದು ಕೇಳ್ತಾನೆ ,
ಯಾಕ್ಲ ಗೋಪಾಲ ನಿಮ್ ಅಣ್ಣನ್ ಬುದ್ಧಿಗೆ ಗರ ಬಡಿದಿದ್ದಿಯ ?
ಚುನವನೆಯೆಲ್ಲ ನಮಗೆ ಯಾಕ ?
ಅದಕ್ಕೆ ಹಣ ಬಲ ಬೇಕು ಕಲ.
ಅದಕ್ಕೆ ನಾನ್ ಹೇಳ್ದೆ,
ನೋಡಿ ರಂಗಪ್ಪನವರೆ ,
ನಮಗೆ ಹಣ ಬಲ ಇಲ್ಲದೆ ಇರಬಹುದು ಆದರೆ ಜನ ಬಲ ಇದೆ
ಈ ಊರ್ ನಲ್ಲಿರೋರೆಲ್ಲ ನಮ್ಮ ಜಾತಿ ಜನ,
ನಮಗೆಯ ವೋಟು ಹಾಕೋದು ,
ಏನ್ಲ ಗೋಪಾಲ ಈ ಕಾಲದಲ್ಲಿ ಜಾತಿ ಅಂತೀಯ? ಅದೆಲ್ಲ ನಡಿತೈದ ?
ರಂಗಪ್ಪ ..
ಕಾಲ ಬದಲಾಗಬೋದು  
ನಮ್ಮ ಬಟ್ಟೆಬರೆ ಬದಲಾಗಬೋದು ,
ಆದರೆ ನಾವು ತಿನ್ನೋದು ಅನ್ನನೆ ಅಲ್ವ ?
ಹಾಗೆ ಯಾ ಜಾತಿ ಕೂಡ ಬದಲಾಗಲ್ಲ,
ಜಾತಿ ಇಲ್ಲ ಅಂತ ಹೇಳ್ತಾನಲ್ಲ ಅವನ ಮುಂದೆ ಇರೋನು ಯಾವ ಜಾತಿ
ಅಂತ ಗೊತ್ತಗೊವರೆಗೂ ಅಷ್ಟೇ ಒಂದು ಸಲ ಅವನ ಮುಂದೆ ಇರೋರು ಕೀಳ್ ಜಾತಿ 
ಅಂತ ಗೊತ್ತಾಯಿತು ಅಂದ್ರೆ ಅವನ ಮಾತಿನ ಧಾಟಿ ಬೇರೆಯಾಗಿರುತ್ತೆ
ಜಾತಿ ಅನ್ನೋದು ಒಳಗೆ ಇರೋ ಮೃಗ ಅದು ಹಸಿವಾದಾಗ ಹೊರಗೆ ಬರಲೇ ಬೇಕು.
ಯಾವುದೋ ಹೆಸರಿಲ್ಲದ ಮರನ ಅಂಗೆ ಬಿಟ್ಟಿರ್ತಾರೆ ...
ಅದೇ  ಗಂಧದ ಮರಕ್ಕೆ ಬೆಲಿ ಹಾಕಿರ್ತಾರೆ  ..
ಯಾಕಂದ್ರೆ ಇದು ಮೇಲ್ ಜಾತಿ ಅದು ಕೀಳ್ ಜಾತಿ ಅದಕ್ಕೆ..
ಬಿದ್ದೋಗೋ ಮರಕ್ಕೆ ಜಾತಿ ಇದೆ ಇನ್ನೂ ನಮಗೆ!!!!
ಈ ಚುನಾವಣೇಲಿ ನಾವೇ ಗೆಲ್ಲೋದು ..
ಅಂತ ಹೇಳಿ ಸಿಧಾ ಕಡೆದ್ ಬಂದೆ ....
ಅದೆಲ್ಲ ಬಿಡಣ್ಣ ,ಇವರಿಗೆ ಇರೋದಕ್ಕೆ ನಮ್ಮದೇ ಜಾಗ ಕೊಟ್ಟಿರೋ 
ವಿಷಯ ಏನಾದರೂ ಚುನಾವಣೆಯಲ್ಲಿ ನಮ್ಮ 
ವಿರೋಧವಾಗಿ ನಿಂತಿರೋ 
ಭಧ್ರಯ್ಯನಿಗೆ  ಗೊತ್ತಾಯಿತು ಅಂದ್ರೆ ...
ಊರಲ್ಲೇ ಪೋಸ್ಟರ್ ಅಂಟಿಸಿ ಬಿಡ್ತಾನೆ ..
ನೋಡ್ರಪ್ಪ ನೋಡಿ...
ಜಾತಿ ಮುಖಂಡ ರಾಮಯ್ಯನ ಮನೆಯಲ್ಲಿ  
ಅಂತರ್ಜಾತಿ ವಿವಾಹ ....
ನಮ್ಮೂರ ಹುಡುಗನಿಗೆ ಪಕ್ಕದ ಊರಿನ ಕೀಳ್ ಜಾತಿಯ ಯುವತಿಯ ಜೊತೆ ಮದುವೆ!
ಅದನ್ನ ನೋಡಿದ್ರೆ ಊರಿನ ಜನ ವೋಟು ಹಾಕೋದು ಇರ್ಲಿ ಯಾರೂ ಹತ್ತಿರನೂ ಸೇರಿಸಲ್ಲ ನಮ್ಮನ್ನ...
ನೋಡಕ್ಕೆ ತಲ್ಲೆಗೆ ಬೆಳ್ಳಗೆ ಇದ್ದಾಳೆ ಅಂತ ಆ ಸುಧಾನ ಮೇಲ್ ಜಾತಿ ಅನ್ಕೊಂಡ?
ಇವರಿಬ್ಬರನ್ನ ನಾನ್ ಮೊದಲೇ ನೋಡಿದ್ದೀನಿ ಕೆರೆ ಹತ್ರ!
ಆಗಲೇ ನಾನು ಶ್ರೀಧರನಿಗೆ ಹೇಳಿದ್ದೆ.
ನೋಡೋ ಶ್ರೀಧರ ಹಂದಿನೆ ಎಲ್ಲಿ ಅಂದ್ರೆ ಅಲ್ಲಿ ಬಾಯಿ ಹಾಕೋದು 
ಹಸು ಅಲ್ಲ ಕನ್ಲ.....
ಅಂತ ಅದನ್ನ ಕೇಳಿ ಅವನು ಒಂದೂ ಮಾತು ಆಡದೆ ಹೋಗಿದ್ದ ಅಲ್ಲಿಂದ! 
ಗೋಪಾಲ ಒಸಿ ನಿಧಾನ ಕನ,
ಅಂತದೇನೂ ಆಗಕಿಲ್ಲ ...
ಇವರನ್ನ ಊರಿನ ಆಚೆ ಇಟ್ಟಿರೋದು ನನಗೆ, ನಿನಗೆ ಬಿಟ್ಟರೆ ಯಾರಿಗೂ ತಿಳಿಯಾಕಿಲ್ಲ 
ಅಲ್ಲಿ ಊರಿನ ಜನ  ಯಾರೂ ಹೋಗೋದು ಇಲ್ಲ ಕನ..
ಎಲೆಕ್ಷನ್ ಅದಮೇಲೆ ನಾವು ಇದಕ್ಕೆ ಏನಾದರೂ ಒಂದು ಮಾಡೋಣ 
ಬುಡ್ಲ ನೀನು ಸಾನೆ  ತಲೆ ಕೆಡಿಸಿಕೊಳ್ಳ ಬ್ಯಾಡ ..  
ಅಣ್ಣಾ....ನಾನು ಇಷ್ಟೆಲ್ಲಾ ಹೊಡ್ಕೊಳ್ತಾ ಇರೋದು 
ನಮ್ಮ ಜಾತಿ ಜನರ ಮುಂದೆ ನಾವು
ತಲೆ ಬಾಗಬೇಕಾಗುತ್ತೆ ಅನ್ನೋ ಭಯ ಮಾತ್ರ ಅಲ್ಲ,
ಈ ಚುನಾವಣೆಯಲ್ಲಿ ಗೆಲ್ಲ ಬೇಕು ಅಂತ ಮನೆ,ಹೊಲ,ತೋಟ,
ಎಲ್ಲದರ ಮೂಲ ಪತ್ರನ ಅಡ ಇಟ್ಟಿದ್ದಿವಿ,
ನಾವು ಒಂದು ವಸ್ತು ಮೇಲೆ ದುಡ್ಡು  ಹಾಕಿದ್ರೆ ಅದು ಹಳೆದಾದಾಗ 
ಅರ್ಧ ಬೆಲೆಗೆ ಮಾರಬಹುದು ,
ಇಲ್ಲ ಒಂದು ಜಾಗದ  ಮೇಲೆ ದುಡ್ಡು  ಹಾಕಿದ್ರೆ 
ನಾಳೆ ಅದನ್ನ ಮಾರಕ್ಕೆ ಆಗಲಿಲ್ಲ ಅಂದರೆ ಅಲ್ಲೇ
ನಾವೇ ಹೋಗಿ ವಾಸ ಆದರೂ ಮಾಡಬಹುದು ,
ಆದರೆ ಇದು ಚುನಾವಣೆ,
ಗೆದ್ದರಷ್ಟೇ ಹಾಕಿರೋ ಹಣ ಬರೋದು!! ಸೋತ್ರೆ ?
ಮಳೆ ಬರುವಾಗ ಉಪ್ಪು ಮಾರಕ್ಕೆ ಹೋದ ಹಾಗೆ ಎಲ್ಲ ಕರಗಿ ಬಿಡುತ್ತೆ!!
ಆಮೇಲೆ ಮಾನನೂ ಇರಲ್ಲ ಇರಕ್ಕೆ ಸ್ಥಾನನೂ ಇರಲ್ಲ!
ಅದಕ್ಕೆ ನಾನು ಇಷ್ಟು ಮಾತಾಡ್ತಾ ಇರೋದು!
ಏನ್ಲ ಗೋಪಾಲ ನಿನ್ನ ಮಾತು ಕೇಳ್ತಾ ಇದ್ರೆ ಭಯವಾಯಿತಿದೆ ಕನ...!
ಅಣ್ಣಾ, ನಿನ್ನ ತಮ್ಮ ಈ ಗೋಪಾಲ ಇದ್ದಾನೆ...
ನನಗೆ ಬುದ್ಧಿ ಬಂದಾಗಿನಿಂದಾ ಅವ್ವ,ಅಪ್ಪನ್ನ ನೋಡಿ ಬೆಳೆದಿಲ್ಲ
ನಿನ್ನ ಅವ್ವ,ಅಪ್ಪ.ಅಂತ ನೋಡಿ ಬೆಳೆದಿರೋದು 
ಈ ಹಳ್ಳಿ ಸಹವಾಸನೆ ಬ್ಯಾಡ ಅಂತ ಪ್ಯಾಟೆ ಗೆ ಹೋಗಿದ್ದವನು 
ನೀನು ಫೋನ್ ಮಾಡಿ ಬಾರ್ಲ ...
ಅಂತ ಹೇಳಿದ ಕೂಡ್ಲೇ ಯಾಕ್ ಹೇಳು ಬಂದಿದ್ದು
ನಿನಗೆ ಈ ಎಲೆಕ್ಷನ್ ನಲ್ಲಿ ಗೆಲ್ಲಿಸಿ 
ನನ್ನ ಅಣ್ಣ ಈ ಊರಿನ ಜನರ ಮುಂದೆ ತಲೆ ಎತ್ತಿ ತಿರುಗ  ಬೇಕು ಅಂತ .
ನನ್ನ ಪ್ರಾಣನ ಕೊಟ್ಟಾದರೂ ಸರಿಯೇ ನಿನ್ನ ಗೆಲ್ಲಿಸದೆ ಬಿಡಲ್ಲ !!!
ಅಂತ ಹೇಳಿ ಗೋಪಾಲ ಒಳಗೆ ಹೋಗಿ ಬಿಟ್ಟ .....

 (ನಾನು ಅಲ್ಲೇ ಕುಳಿತು ಯೋಚಿಸುತ್ತಿದ್ದೆ, 
ನನಗೂ ಶ್ರೀಧರ್ ಹಾಗೆ ಮಾಡಿದ್ದು ಇಷ್ಟ ವಿರಲಿಲ್ಲ 
ಅವನು ಒಳ್ಳೆಯ ಜಾತಿ ಅವಳು ಜಾತಿಯಲ್ಲಿ ಕೆಳಗಿದ್ದಳು ,
ಅಂತರ್ಜಾತಿ ವಿವಾಹಕ್ಕೆ ನನಗೇ ಆಗಿನಿಂದಲೂ ವಿರೋಧವಿತ್ತು!)
ಕೆಲವು ದಿನಗಳ ನಂತರ  ……
ಅದೊಂದು ಸಂಜೆಯ 6ರ ವೇಳೆ!
ಶ್ರೀಧರನನ್ನು ಹುಡುಕಿಕೊಂಡು
ನಮ್ಮ ಊರಾಚೆಯ ಮನೆಯ ಹತ್ತಿರ ಹೋದೆ ...
ಮನೆಯಲ್ಲಿ ಶ್ರೀಧರ್ ಇರಲಿಲ್ಲ!
ಸುಧಾ ಒಬ್ಬಳೇ ಇದ್ದಳು!
============================ಪುಟ10======================

ಸುಧಾ ನನ್ನನ್ನು ನೋಡಿದ ಕೂಡಲೇ!
ಓಹ್ ಬನ್ನಿ ಅಣ್ಣ ಒಳಗೆ ಬನ್ನಿ...
ಅಂತ ಕರೆದಳು .......
ನನ್ನನ್ನು ಯಾರಾದರೂ ಹಿಂಬಾಲಿಸುತ್ತಿದ್ದಾರ ಎಂದು ಒಮ್ಮೆ ಸುತ್ತಲೂ ನೋಡಿದೆ..
ಯಾರೂ ಇಲ್ಲವೆಂದು ಖಚಿತ ಪಡಿಸಿಕೊಂಡ ಮೇಲೆ ಮನೆಯೊಳಗೇ ಹೋಗಿದ್ದು!
ಎಲ್ಲವ್ವ ಶ್ರೀಧರ ?
ಮನೆಗೆ ಸ್ವಲ್ಪ ವಸ್ತುಗಳು ಬೇಕು ಅಂತ ತರಕ್ಕೆ ಹೊರಗೆ ಹೋಗಿದ್ದಾರೆ.
ಅಲ್ಲವ್ವ ನಾನು  ಹೇಳಿವ್ನಿ ತಾನೇ ಯಾರ್ ಕಣ್ಣಿಗೂ ಬೀಳಬೇಡಿ ಅಂತ .
ಹೌದಣ್ಣ  ಅದಕ್ಕೆ ಸಂಜೆಯಾದಮೇಲೆ ಹೋದ್ರು.
ಹೌದ ನಾಳೆ ಒಸಿ ಕೆಲಸ ಇತ್ತು ಅದಕ್ಕೆ ಶ್ರೀಧರನಿಗೆ
ಬೇಗ ಬಂದು ಬಿಡು ಅಂತ ಹೇಳೋಗೋಣ ಅಂತ ಬಂದೆ ..
ಆಮೇಲೆ ,
ನಿಮ್ಮ ಮನೆಯಿಂದ ಯಾರಾದರೂ ನಿನ್ನ ನೋಡಕ್ಕೆ ಪ್ರಯತ್ನ ಪಟ್ರ?
ಇಲ್ಲಣ್ಣ ನನಗೆ ಇರೋದು ಅಪ್ಪ ಮಾತ್ರ !
ಓಹ್ ನಿಮ್ಮ ತಂದೆ ಏನ್ ಮಾಡ್ಕೊಂಡಿದ್ದಾರೆ ಮ ?
ಅಪ್ಪ ಏನ್ ಏನೋ ಮಾಟ ಮಂತ್ರ 
ಅಂತ ಮಸಾನದ ಮಧ್ಯ ರಾತ್ರಿಯಲ್ಲಿ ಪೂಜೆ ಅದು ಇದು ಅಂತ ಮಾಡ್ತಾರೆ ಅಣ್ಣ!
ಅವರು ಒಂದು ಸಲ ಮನೆ ಬಿಟ್ಟು ಹೋದರೆ ಆರು ತಿಂಗಳು ,
ಒಂದೊಂದು  ಸಾರಿ ಒಂದು ವರುಷವಾದರೂ ಬರಲ್ಲ ....
ಎಷ್ಟೋ ಸಲ ನನ್ನ ನೋಡಿ ನಮ್ಮ ಊರಿನ ಜನ ರೆಗಿಸಿದ್ದು ಇದೆ
ನಿಮ್ಮ ತಂದೆ ಅಷ್ಟೇ ಸತ್ತು ಹೋಗಿರ್ತಾರೆ ಇನ್ನೂ ಬರಲ್ಲ ಅಂತ ..
ಹೌದಾ ನೀವು ಮಾಂತ್ರಿಕ ಜನಾಂಗಕ್ಕೆ ಸೇರಿದವರ 
ಹೌದಣ್ಣ ....
ಓಹ್ ನಾನೂ ಕೆಳಿವ್ನಿ ಅವ್ರು  ಮಾಟ ಮಂತ್ರ  ಅಂತ ಮನೆ ಬಿಟ್ಟು  ಹೊಂಟ್ರೆ ಮತ್ತೆ ಬರಕ್ಕೆ
ತಿಂಗಳು ವರುಷಾನೆ ಆಗುತ್ತೆ ಅಂತ
ಆ ಸಮಯದಾಗ ಹೇಗಮ್ಮ ಒಬ್ಬಳೇ ಇರ್ತೀಯ ?
ನಮ್ಮ ಪಕ್ಕದ ಮನೇಲಿ ಒಂದು ಅಜ್ಜಿ ಇದೆ ಅವಜ್ಜಿ ನನ್ನ ಜೊತೆ ಇರುತ್ತೆ 
ಅವಜ್ಜಿಗೂ ಯಾರೂ ಇಲ್ಲ ..
ನಾನು ಒಬ್ಬಳೇ ಇದ್ದೀನಿ ಅಂತ ಯಾರೂ ನನ್ನ ವಿಷಯಕ್ಕೆ ಬರಲ್ಲ
ನನ್ನ ತಂದೆನ ನೋಡಿದ್ರೆ ಅವರಿಗೆಲ್ಲ ಭಯ ಇದೆ ....
ಯಾಕಮ್ಮ ನಿಮ್ಮ ತಂದೆ,ತಾಯಿಯ ಜೊತೆ ಹುಟ್ಟಿದವರು ಯಾರೂ ಇಲ್ವಾ ?
ತಾಯಿ ನಾನು ಹುಟ್ಟಿದ ಕೆಲವೇ ವರುಷದಲ್ಲೇ ತೀರಿಕೊಂಡರು ,
ಇನ್ನೂ ಅಪ್ಪನ ಜೊತೆ ಹುಟ್ಟಿದವರು ಮಾತ್ರ ಇದ್ರು!
ಇದ್ರು ?? ಅಂದ್ರೆ ಈಗ ಏನ್ ಆದ್ರು ?
ಅವರೂ ಸಹ ಮಾಟ ಮಂತ್ರದಲ್ಲಿ ಇದ್ರು ,
ನಮ್ಮ ದೊಡ್ಡಪ್ಪ ಹೀಗೆ ಒಂದು ಅಮಾವಾಸೆಯ ದಿನ ಮಸಾನದಲ್ಲಿ 
ಪೂಜೆ ಮಾಡುವಾಗ ಆತ್ಮ ಹೊಡೆದು ಅಲ್ಲೇ ರಕ್ತ ಕಕ್ಕಿ ಸತ್ತರಂತೆ...
ಓಹ್ ಏನಮ್ಮ ಹೇಳ್ತಾ ಇದ್ದೀಯ ಆತ್ಮಹೊಡೆಯುತ್ತ ?? 
ನಿಜ ಅಣ್ಣ ಇನ್ನೊಬ್ಬರು ಇದ್ರು  ನಮ್ಮ ಚಿಕ್ಕಪ್ಪ ತುಂಬಾ ಒಳ್ಳೆಯವರು 
ಅವರು ಒಂದು ದಿನ ಇದೆ ತರನೇ 
ಒಂದು ಭಯಾನಕ ಪೂಜೆ ಮಾಡುವಾಗ 
ಒಂದು ಆತ್ಮ ಇವರ ಮಂತ್ರಕ್ಕೆ ಬಂಧಿಯಾಗದೆ 
ಇವರಿಗೆ ತಿರುಗಿ ಹೊಡೆದಿತ್ತು ನಾನು ನೋಡಿದೆ ಕೂಡ 
ಅವರ ದೇಹನ ತಂದಾಗ ಅವರ ಬಟ್ಟೆಯಲ್ಲ ರಕ್ತದ ಕಳೆಗಳು..

ಇನ್ನೂ ನಮ್ಮ ತಂದೆ ,
ಒಂದು ದಿನ ತುಂಬಾ ದಿನಗಳು ಅದ ಮೇಲೆ ಮನೆಗೆ ಬಂದಿದ್ದರು ,
ಅವರಿಗೆ ವಿಪರೀತ ಕುಡಿಯೋ ಚಟ ಕುಡಿಯಕ್ಕೆ
ಅಂತ ಹೊರಗೆ ಹೋದವರು ಬರಲೇ ಇಲ್ಲ ..
 ಅಂದು ರಾತ್ರಿ ಏನ್ ಆಯಿತು ಗೊತ್ತ ಅಣ್ಣ ,
ನಾನು ಒಬ್ಬಳೇ ಮಲಗಿದ್ದೆ ...
ಮನೆಯಲ್ಲಿ ಏನೋ ಒಂದು ರೀತಿಯ ಶಬ್ದ 
ಒಂದು ಡಬ್ಬಿ ಇತ್ತು ಅದರೊಳಗೆ ಒಂದು ಗೋಲಿ ಹಾಕಿತ್ತು 
ಅದರಿಂದ ಗೋಲಿ ಇರುವ ಡಬ್ಬಿಯನ್ನು
ಆಡಿಸಿದಾಗ ಹೇಗೆ ಸದ್ದು ಬರುತ್ತೆ ಹಾಗೆ ಸದ್ದು ಮಾಡುತ್ತಾ ಇತ್ತು 
ನನಗೆ ಯಾಕೆ ಹೀಗೆ ಇದು ಸದ್ದು ಮಾಡುತ್ತಾ
ಇದೆ ಅಂತ ಇನ್ನೇನು ತೆಗೆದು ನೋಡಬೇಕು ಅನ್ನುವಾಗ,
ಬಾಗಿಲು ಬಡಿಯುವ ಸದ್ದಾಗಿ ಬಾಗಿಲು ತೆರೆದರೆ 
ಅಪ್ಪ ಚೆನ್ನಾಗಿ ಕುಡಿದು ಬಂದಿದ್ದರು 
ನಾನು ಆ ಡಬ್ಬಿಯನ್ನು ಹೊರ ತೆಗೆದು ಇಟ್ಟಿದ್ದನ್ನು ನೋಡಿ ಅಪ್ಪ,
ಹೇಯ್ ಸುಧಾ ಈ ಡಬ್ಬಿನ ಯಾಕೆ ಹೊರಗೆ ಇಟ್ಟಿದ್ದಿಯ?
ಇದನ್ನ ಬಿಚ್ಚಿ ನೋಡಿಲ್ಲ ತಾನೇ ?
ಇಲ್ಲ ಕಣಪ್ಪ ಅದರಿಂದ ಸದ್ದು ಬರ್ತಾ
ಇತ್ತು ಅದಕ್ಕೆ ಏನ್ ಇದೆ ಅಂತ ನೋಡೋಣ ಅಂತ.. 
ಅಷ್ಟರಲ್ಲಿ ನಿನ್ ಬಂದೆ ......
ಹೇಯ್ ನೀನು ಆ ಮುಚ್ಚುಲಾನ ತೆಗೆದಿದ್ದರೆ ಅಷ್ಟೇ !!!!!
ಯಾಕಪ್ಪ ಏನ್ ಇದೆ ಅದರಲ್ಲಿ ?
ಅಯ್ಯೋ ಒಂದು ದುಷ್ಟ ಆತ್ಮ ತುಂಬಾ ದಿನದಿಂದ ನನ್ನ ಮಂತ್ರಕ್ಕೆ 
ಬಂಧಿಯಾಗಿರಲಿಲ್ಲ ಅದನ್ನ ಮೊನ್ನೆ ಅಮಾವಾಸೆಯ ದಿನ ಕಷ್ಟ ಪಟ್ಟು ಬಂಧಿಸಿದ್ದಿನಿ !
ಅಪ್ಪ ನಿನಗೆ ಬುದ್ಧಿ ಇದೆಯಾ ?
ವಯಸಿಗೆ ಬಂದ ಹುಡುಗಿ ಇರೋ ಮನೇಲಿ ಹೀಗೆ ಎಲ್ಲ ತಂದಿ ಇಟ್ಟಿದ್ದಿಯಲ್ಲ?
ಬೇಜಾರ್ ಮಾಡ್ಕೋ ಬೇಡ ಕಣವ್ವ ...
ಈಗಲೇ ಇದನ್ನ ತಗೊಂಡು ಹೋಗಿ ಮಣ್ಣಿನಲ್ಲಿ ಹೂತಿ ಬರ್ತೀನಿ ಇರು ..
ಅಂತ ಹೇಳಿ ಅಪ್ಪ ಅದನ್ನ ಮಣ್ಣಿನಲ್ಲಿ ಹೂತಿದರು 
ಬೆಳಗ್ಗೆ ಎದ್ದು ಅದನ್ನ ತೆಗೆದು ಕೊಂಡು ಹೋದ್ರು ಅಣ್ಣ..
ಏನಮ್ಮ ಕೆಳಕ್ಕೆ ಭಯ ಆಗುತ್ತೆ ....
ನಿನ್ನ ಒಂದು ಮಾತು ಕೇಳ್ತೀನಿ ಬೇಜಾರ್ ಇಲ್ಲಾಂದ್ರೆ ?
ಕೇಳಿ ಅಣ್ಣ ..
ಅಲ್ಲ ನಿಮಗಿಂತ ಜಾತಿಲಿ ಶ್ರೀಧರ ಮೇಲ್ ಇದ್ದಾನೆ .
ಅದರೂ ನಿಮ್ಮ ತಂದೆ ಯಾಕೆ ನಿಮ್ಮ ಮದುವೆಗೆ ಒಪ್ಪಲ್ಲ ಅಂತೀಯ?
ಇಲ್ಲಣ್ಣ ನಮ್ಮ ತಂದೆಗೆ ನನ್ನ ತುಂಬು ಕುಟುಂಬದಲ್ಲಿ ಕೊಡ್ಬೇಕು ಅಂತ ಆಸೆ ಇತ್ತು,
ಎಷ್ಟೋ ಜನ ಗಂಡುಗಳನ್ನ ನೋಡಿದರೂ ಒಬ್ಬರೂ  ನನ್ನ ಒಪ್ಪಲಿಲ್ಲ
ಕಾರಣ ನನ್ನ ತಂದೆ ಒಬ್ಬ ಮಾಂತ್ರಿಕ ಅಂತ ...!
ಇದು ನನ್ನ ತಂದೆಗೆ ಅರ್ಥನೇ ಆಗಲ್ಲ
ಊರಿನ ಜನ ಎಲ್ಲ ನಿನಗೆ ನಿಮ್ಮ ಅಪ್ಪ ಕೊನೆಯವರೆಗೂ ಮದುವೆ ಮಾಡಿಸಲ್ಲ ..
ಹೇಳಿದ್ದನ್ನ ನಾನೇ ಅಪ್ಪನಿಗೂ ಹೇಳಿದ್ದೀನಿ ಆಗೆಲ್ಲ.
ಹೇಯ್ ಸುಧಾ ನಾನು ನಿನ್ನ ಮದುವೆನ ಈ ಊರೇ ಮೂಗಿನ ಮೇಲೆ 
ಬೆರಳು ಇಡಬೇಕು  ಹಾಗೆ ಮಾಡ್ತೀನಿ ನೋಡವ್ವ ..
ಅಂತ ಹೇಳ್ತಾ ಇದ್ರು .
ಸರಿ ನಿಮ್ಮ ಅಪ್ಪನಿಗೆ ಯಾಕೆ ಹೆದರ್ತೀಯ ಈಗ ನಿಮ್ಮ ಮನೆಗೆ ಹೋಗಬಹುದಲ್ವ ?
ಇಲ್ಲಣ್ಣ ಅವರಿಗೆ ವಿಪರೀತ ಕೋಪ ಜಾಸ್ತಿ ಆಮೇಲೆ ಶ್ರೀಧರ್ ನ ನೋಡಿ ಏನಾದರೂ ಅಂದ್ರೆ ನನಗೆ ತುಂಬಾ ಬೇಜಾರ್ ಆಗುತ್ತೆ,ಹಾಗೂ ಅವರಿಗೆ ತುಂಬಾ ದೊಡ್ಡ ದೊಡ್ಡವರು ಪರಿಚಯ ಇದ್ದಾರೆ 
ಅವರಿಗೆಲ್ಲ ಅವರ ಶತ್ರುಗಳಿಗೆ ಏನಾದರು ಆಗ್ಲಿ ಅಂತ ಇವರ ಹತ್ರನೇ ಮಾಟ ಮಾಡಿಸೋದು !
ನಿನ್ ಭಯ ಪಡಬ್ಯಾಡ ಇದು ನನ್ನ ಊರು ಇಲ್ಲಿ ಇರೋರೆಲ್ಲ ನನ್ನ ಜಾತಿ  ಜನ ,
ನನ್ನ ಮೀರಿ ನಿಮ್ಮ ಅಪ್ಪ ಏನೂ ಮಾಡಕ್ಕೆ ಆಗಲ್ಲ
ಎಲೆಕ್ಷನ್ ಬೇರೆ ನಿಂತಿದ್ದಿನಿ ಅದರಲ್ಲಿ ಗೆದ್ದರೆ ನಾನು ಹೇಳಿದ್ದೆ ಇಲ್ಲಿ ವೇದವಾಕ್ಯ ...
ಶ್ರೀಧರನಿಗೂ ಯಾರೂ ಇಲ್ಲ ಹೇಗೆ ಚೆನ್ನಾಗಿ ಬಾಳಿ..
ಶ್ರೀಧರ್ ಕೂಡ ನನ್ನ ಹಾಗೆಯೇ ಯಾರೂ ಇಲ್ಲ ಅಂತ ಗೊತ್ತಾಗಿನೆ ಅವರನ್ನ ತುಂಬಾ ಪ್ರೀತಿ ಮಾಡಿ ಮದುವೆಯಾದೆ, ನಮ್ಮ ತಂದೇನೂ ನಮ್ಮ ಜೊತೇನೆ ಬಂದು ಇದ್ದು ಬಿಟ್ಟರೆ ಸಾಕು ನಾವು ಮೂರೇ ಜನ ಅಂತ ಇರೋದು ನಾವು ಕೊನೆಯವರೆಗೂ ಒಂದಾಗಿ ಸಂತೋಷವಾಗಿ ಬಾಳ್ತೀವಿ .
ಏನೂ ..ಚಿಂತೆ ಮಾಡಬೇಡ ಎಲ್ಲ ಸರಿ ಹೋಗುತ್ತೆ
ನಿಮ್ಮ ತಂದೆ ಎಲ್ಲಾನೂ ಮರೆತು ಒಂದು ದಿನ ನಿನ್ನ ನೋಡಕ್ಕೆ ಬಂದೆ ಬರುತ್ತಾರೆ!
ನಿಮ್ಮ ಮಾತಿನ ಹಾಗೆ ಆದ್ರೆ ಸಾಕಣ್ಣ!

ಯಾಕೋ ಗಂಟಲು ಒಣಗೈತೆ ಒಂದು ಲೋಟ ನೀರು 
ಕೊಡ್ತೀಯ ?
ತಗೋಳಿ ಅಣ್ಣ........
ನಾನು ನೀರು ಕುಡಿದು 
ಸರಿ ಮ ಶ್ರೀಧರನಿಗೆ ಒಸಿ ಬೆಳೆಗೆಯೇ ಬರಕ್ಕೆ ಹೇಳವ್ವ,,
ಸ್ವಲ್ಪ ಚುನಾವಣೆ ಕೆಲಸ ಇದೆ ಆಯ್ತಾ ...ನಾನ್ ಬರ್ತೀನಿ 
ಅಯ್ತಣ್ಣ  ಹೇಳ್ತೀನಿ ..
ಕೆಲವು ದಿನಗಳ ನಂತರ!
ಒಂದು ದಿನ ! ನಾನು ಹಾಗೂ ಗೋಪಾಲ!
ತಗೋ ಅಣ್ಣ ......
ಏನ್ಲ ಇದು ಗೋಪಾಲ!
ಮೊಬೈಲ್ ಕಣಣ್ಣ .....ನಿನಗೊಂದು ನನಗೊಂದು!
ಓಹ್ ಅಲ್ಲ ಕನ ಯಾಕ ಇದೆಲ್ಲ ನಮಗ ?
ಅಣ್ಣ ಇನ್ನೂ ನೀನು ಈ ಊರಿನ ನಾಯಕ ಅಗೋನು ಇದೆಲ್ಲ
ಇದ್ರೇನೆ ಸ್ವಲ್ಪ ಗೆತ್ತು! ಅದು ಅಲ್ದೆ ನಾನೂ ತೋಟದ ಮನೇಲಿ ಇರ್ತೀನಿ 
ಅತ್ತಿಗೆನೂ ಭಾವನನ ನೋಡಕ್ಕೆ ಆಗಾಗ ಅವರ ತಾಯಿ ಮನೆಗೆ ಹೋಗ್ತಾ ಇರ್ತಾರೆ .
ಆಗೆಲ್ಲ ನೀನು ನಮಗೆ ಫೋನ್ ಮಾಡಿ ಮಾತಾಡಬೋದು ಅಲ್ವ !
ಹೋಗ್ಲ ನನಗೆ ಇದೆಲ್ಲೇ ಹೇಗೆ ಉಪಯೋಗಿಸಬೇಕು ಅಂತ ತಿಳಿಯಾಕಿಲ್ಲ ...
ಅಯ್ಯೋ ಅಣ್ಣ ಫೋನ್ ಬಡ್ಕೊಂಡಾಗ ಈ ಹಸಿರು ಗುಂಡಿ ಹೊತ್ತು..
ಮಾತಾಡಿದ್ದು ಸಾಕು ಅಂತ ಇಡುವಾಗ ಈ ಕೆಂಪು ಗುಂಡಿನ ಹೊತ್ತು! 
ಅಟೆಯ..
ಸರಿ ಕನ............ 
ಅಣ್ಣ ಹಾಗೆ ಸ್ವಲ್ಪ ಹಣ ಬೇಕಿತ್ತು ?
ಯಾಕ್ಲ ?
ಅಣ್ಣ  ವೋಟಿಂಗ್ ಡೇಟ್ ಹತ್ರ ಬರ್ತಾ ಇದೆ 
ಈ ಟೈಮ್ ನಲ್ಲಿ ಎಲ್ಲರಿಗೂ ಕುಡಿಸಿ ,ಅವರಿಗೆ ಹಣ ಕೊಟ್ಟು ನಮ್ಮ ಜೊತೆ ಇಟ್ಕೊಬೇಕು
ಅದಕ್ಕೆ,
ಸರಿ ....ಹಣ ಹೊಂಚಕ್ಕೆ ಏರ್ಪಾಡು ಮಾಡ್ತೀನಿ ..
ಯಾಕಣ್ಣ ಹಣ ಇಲ್ವಾ ?
ಇಲ್ಲ ಗೋಪಾಲ ಎಲ್ಲಾನೂ ಇದಕ್ಕೆ ಸುರಿದ್ದಿದ್ದು ಆಗಿದೆ
ಕೈಯಲ್ಲಿ ನಯಾಪೈಸೆ ಇಲ್ಲ ಕನ್ಲ..
ಹೌದ ಸರಿ ನಾನು ಯಾರನ್ನಾದರೂ ಕೆಳ್ತಾನಿ
ನಿನ್ ಯೋಚನೆ ಮಾಡಬೇಡ ಅಣ್ಣ ...
ಅಂತ ಹೇಳಿ ಗೋಪಾಲ ಹೊರಗೆ ಹೋದ 
ಆ ದಿನ ರಾತ್ರಿ! 
ಒಬ್ಬನೇ ...ಲೆಕ್ಕದ ಪತ್ರಯೆಲ್ಲ  ನೋಡುತ್ತಾ ಇದ್ದೆ ಆಗ ಸಮಯ 9:30ಘಂಟೆ !!
ಹಿತ್ತಲಿನಲ್ಲಿ ರಾಮಣ್ಣ ರಾಮಣ್ಣ!
ಎಂದು ಕೂಗುವ ಸದ್ದು!
ನಾನು ಎದ್ದು ಹಿತ್ತಲಿನ ಕಡೆ ಹೋಗಿ ನೋಡಿದೆ 
ಸಣ್ಣಗೆ ಒಂದು ವ್ಯಕ್ತಿ ಬಂದಿದ್ದ 
ನಾನು ಹತ್ತಿರ ಹೋದೆ ಅವರು ಸ್ವಲ್ಪ ಕುಡಿದಿದ್ದ ವಾಸನೆ ಮೂಗಿಗೆ ಬಡಿಯುತ್ತಿತ್ತು!! 
ಹಾಗೆ ಅವರ ಕೈಯನ್ನು ಗಮನಿಸಿದೆ ಕೈಯಲ್ಲಿ ಒಂದು ಸಣ್ಣ ಬೇಲಿಯ ಚೀಲ! 
ನೀವು ರಾಮಣ್ಣ ?
ಹೋದು ನೀವು ಯಾರು ಅಂತ ಗೊತ್ತಾಗಲಿಲ್ಲ ?
ನಾನು ನಿಮ್ಮ ತೋಟದಲ್ಲಿ ಕೆಲಸ ಮಾಡುವ ಶ್ರೀಧರ್ ಮದುವೆ ಆಗಿದ್ದನಲ್ಲ
ಸುಧಾ ಅವಳ ತಂದೆ ಮೂರ್ತಿ ಅಂತ !
ಓಹ್ ಬನ್ನಿ ಒಳಗ್ ಬನ್ನಿ..
ಅಯ್ಯೋ ಮೂರ್ತಿಯವರೇ ಕುರ್ಚಿ ಮೇಲೆ ಕೂತ್ಕೊಳಿ ....
ನೆಲದ ಮೇಲೆ ಕೂಳ್ಕೊಳ್ತೀನಿ ಬುಡಿ ಸ್ವಾಮಿ ...
ನೋಡಿ ನಿಮಗೆ ಒಂದು ಲೋಟ ಕಾಫಿ ಕೊಡಕ್ಕೂ ಆಗಲಿಲ್ಲ
ಅಜ್ಜಿಯ ಮನೇಲಿ ಇರೋ ಮಗಳನ್ನ ನೋಡ್ಕೊಂಡು ಬರಕ್ಕೆ ಅಂತ 
ನನ್ನ ಹೆಂಡತಿ ಹೋಗಿದ್ದಾಳೆ!
ಇರ್ಲಿ ಇರ್ಲಿ ...ಪರವಾಗಿಲ್ಲ..
ಮತ್ತೆ ಮೂರ್ತಿಯವರೇ ನಾನೇ ಒಂದು ದಿನ ಬಂದು ನಿಮ್ನ ನೋಡ್ಬೇಕು ಅಂತ ಇದ್ದೆ ..
ಶ್ರೀಧರನ ಮದುವೆಯ ವಿಷಯವಾಗಿ ….ಆಗಿದ್ದು ಆಗಿದೆ 
ನೀವು ಎಲ್ಲ ಮರೆತು ಒಂದಾಗ ಬೇಕು ?
ನಾನೂ ಕೂಡ ಅದೇ ವಿಷಯವಾಗಿನೆ ನಿಮ್ನ ನೋಡಿ ಮಾತಾಡಿಸಿಕೊಂಡು ಹೋಗೋಣ ಅಂತ ಬಂದೆ...
ಇವರಿಬ್ಬರ ಪ್ರೀತಿಯ ವಿಷಯ ನನಗೆ ಗೊತ್ತಾಗಿ ನಾನೇ ಒಂದು ವರ ನೋಡಿದ್ದೇ ,
ಮಗಳ ಮದುವೇನ ಊರೇ ಮೆಚ್ಚೋತರ ಮಾಡ್ಬೇಕು ಅಂತ ಇದ್ದೆ ನನ್ನ ಆಸೆಗೆ ನೀರ್ ಎರಚಿ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದಾಳೆ ..
ಹಳೆದೆಲ್ಲ ಮರೆತು ಬಿಡಿ . ನೀವು ಬೇಜಾರ್ ಮಾಡ್ಕೋ ಬ್ಯಾಡಿ 
ನಿಮ್ಮ ಆಶಿರ್ವಾದ ಅವರಿಗೆ ತುಂಬಾ ಮುಖ್ಯ ..... ಅಲ್ವ ?
ಅಯ್ಯೋ ಬುಡಿ ಸ್ವಾಮಿ ನಮ್ಮ ಆಶಿರ್ವಾದ ಎಲ್ಲ ಮುಖ್ಯ ಅಂತ ಅವರ ಮನಸಿನಲ್ಲಿದ್ದಿದ್ದರೆ 
ಇತರ ನನ್ನ ಮುಖಕ್ಕೆ ಮಸಿ ಬಳಿದು ಹೋಗ್ತಾ ಇರ್ಲಿಲ್ಲ!
ನಮ್ಮ ಊರಿನ ಜನ ನಮ್ಮ ಮುಂದೇನೆ ಹೇಳ್ತಾರೆ ,
ನಿನ್ನ ಮಗಳು ಸರಿಯಾಗೇ ಮಾಡಿದ್ದಾಳೆ ..
ನಿನ್ ಕುಡಿಯಕ್ಕೆ ಲಾಕಿ ...
ಕೈಯಲ್ಲಿ ಆಗದೆ ಇರೋ ಅಪ್ಪನ
ನಂಬಿಕೊಂಡು ಅವಳು ಏನ್ ಮಾಡ್ತಾಳೆ ಅಂತ ...
ನನ್ನ ಮನಸು ಎಷ್ಟು ನೊಂದಿರಲ್ಲ ….
ಅಮ್ಮ ಇಲ್ಲದ ಮಗು...ಅಂತ ತುಂಬಾ ಆಸೆಯಿಂದ ಸಾಕಿದ್ದಿನಿ
ನಾನು ಊರಲ್ಲಿ ಇರಲ್ಲ ನನ್ನ ಕೆಲಸ ಹಾಗೆ ಆಗಿದ್ರೂ ಅವಳ ಊಟಕ್ಕೆ ಬಟ್ಟೆಗೆ ಯಾವತ್ತು ಮೋಸ ಮಾಡಿಲ್ಲ...
ಊರೇ ಹೇಳ್ತಾ ಇದ್ರೂ ,
ಮಾಂತ್ರಿಕನ ಮಗಳು ...ಇವಳನ್ನ ಯಾರು ಬಂದು ಮದುವೆ ಆಗ್ತಾರೆ,
ಇವಳಿಗೆ ಕೊನೆಯವರೆಗೂ ಮದುವೆನೇ ಆಗಲ್ಲ ಅಂತ.
ಅವರೆಲ್ಲ ನಾಚಿಕೊಳ್ಳ ಬೇಕು ಹಾಗೆ ಮದುವೆ ಮಾಡ್ಬೇಕು ಅನ್ನೋದೇ ನನ್ನ ಕನಸಾಗಿತ್ತು..
ಅವಳು ಆಯ್ಕೆ ಮಾಡಿರೋ ಆ ಶ್ರೀಧರ ಯಾರೂ ಇಲ್ಲದ ಅನಾಥ.
ಹೇಳಿಕೊಳ್ಳಕ್ಕೆ ನನಗೆ ಸುಧಾ, ಅವಳಿಗೆ ನಾನು ಅಷ್ಟೇ
ಅದಕ್ಕೆ ಒಂದು ತುಂಬು ಕುಟುಂಬದಲ್ಲಿ ಕೊಟ್ಟು ಮದುವೆ ಮಾಡ್ಬೇಕು ಅಂತ ಇದ್ದೆ.
ನನ್ನ ಮೇಲೆ ನನ್ನ ಮಗಳಿಗೆ ನಂಬಿಕೆ ಇಲ್ಲ ಸ್ವಾಮಿ
ನಾನ್ ಏನ್ ಮಾಡ್ಲಿ ! ! ! ನಾನ್ ಏನ್ ಮಾಡ್ಲಿ...!!
ಅಂತ  ಅವರು ಅಳುತಾ ಇದ್ದರು ...
ಬ್ಯಾಡ ಮೂರ್ತಿ ನೋಡಿ ಮಗಳು ಏನೋ ಪಿರುತಿ 
ಮಾಡಿ , ಆಸೆಯಿಂದ ಅವರು ಮದುವೆ ಆಗಿದ್ದಾರೆ ಹೇಗೋ ಚೆನ್ನಾಗಿ ಇರಲಿ 
ಅಂತ ಆಶಿರ್ವಾದ ಮಾಡಿ, ಎಷ್ಟು ದಿನ ಅಂತ ಹೀಗೆ ಇರ್ತೀರಾ ಎಲ್ಲ ಮುಗಿಸಿ ,
ಕೊನೆಗಾಲದಲ್ಲಿ  ನೀವು ಅವರೊಂದಿಗೆ  ಇದ್ದು ಬಿಡಿ...
ಇಲ್ಲ ರಾಮಣ್ಣ ಇಲ್ಲ ,
ನನಗೆ ಇನ್ನೂ ಸ್ವಲ್ಪ ಕೆಲಸ ಭಾಕಿ ಇದೆ
ಅದನ್ನೇ ಮುಗಿಸಿಯೇ ನಾನು ನಿಲ್ಲಿಸೋದು ......
ನಾನು ಕೈಯಲ್ಲಿ ಆಗದವನು ಅಂತ ಅಂದು ಕೊಂಡಿರೋ ನನ್ನ ಮಗಳಿಗೆ,
ನನ್ನ ಊರಿನ ಜನಕ್ಕೆ  ನಾನು ಯಾರು ಅಂತ ತೋರಿಸಬೇಕು! 
ಅದಕ್ಕೆ ನಾನು ನಿಮ್ಮನ್ನ ನೋಡಕ್ಕೆ ಬಂದಿದ್ದು!! 
ಹೀಗೆ ಮಾತನಾಡುವಾಗಲೇ!
ಮೂರ್ತಿ ನನ್ನ ಕೈಗೆ ಹಣದ ಕಂತೆಯನ್ನು  ಇಟ್ಟು................!!
============================ಪುಟ11======================

ನೋಡಿ ರಾಮಣ್ಣ ಇದು ಅವಳ ಮದುವೆಗಾಗಿ ಕೂಡಿಟ್ಟಿದ್ದ 50ಸಾವಿರ  ಹಣ ,
ಒಂದು ನಿಮಿಷ ,
ಇದು ಅವಳಿಗಾಗಿ ಮಾಡಿಸಿದ್ದ 30ತೊಲ, ಒಡವೆಗಳು! 
ನನ್ನ ಕೈಯಲ್ಲಿ ಆಗದವನು ಅಂತ ಅನ್ಕೊಂಡಿದ್ದಾರೆ ..
ಊರಿನ ಜನ ....ಯಾಕೆ ನನ್ನ ಸ್ವಂತ ಮಗಳೂ ಕೂಡ..
ನಾನು ಯಾರು ಅಂತ ಒಂದೆಲ್ಲ ಒಂದು ದಿನ ಊರಿನ ಜನಕ್ಕೆ,
ನನ್ನ ಮಗಳಿಗೆ ಗೊತ್ತಾಗುತ್ತೆ ..
ನಾನು ಎಲ್ಲರ ತರ ದುಡಿದ ಹಣನೆಲ್ಲ ಕುಡಿದು ಖಾಲಿ  ಮಾಡಿಲ್ಲ ..
ನನಗೂ ಗೊತ್ತು ವಯಸಿಗೆ ಬಂದ ಮಗಳಿದ್ದಾಳೆ.....
ಅವಳನ್ನ ಒಳ್ಳೆಯ ಕಡೆ ಕೊಟ್ಟು ಊರೇ ನೋಡೋತರ ಮದುವೆ ಮಾಡ್ಬೇಕು 
ಅಂತ ಅದಕ್ಕೆ ಒಂದೊಂದು ಕಾಸನ್ನು
ನೋಡಿ ಖರ್ಚು ಮಾಡ್ತಾ ಇದ್ದೆ ...
ಈಗ ನನ್ನ ನೋಡಿ ನಗ್ತಾ ಇರೋ …..
ಅದೇ ಊರಿನ ಜನ ನೋಡಿ ಹೊಟ್ಟೆ ಉರ್ಕೊಲೋತರ 
ದೊಡ್ಡ ಮನೆ ಮಾಡಿ  ...ಟಿ.ವಿ...ಮಂಚ..ಮನೆಗೆ ಬೇಕಾದ ಎಲ್ಲ
ವಸ್ತುಗಳನ್ನೂ ತಂದು ಇಡಬೇಕು .....
 ಆ ಮನೇಲಿ ನಾನು , ನನ್ನ ಮಗಳ 
ಸಂಸಾರದ ಜೊತೆ ಆಯಾಗಿ ಇದ್ದು ಬಿಡಬೇಕು ಅನ್ನೋ ಕನಸೂ ಕೂಡ ಇದೆ ..
ನನ್ನ ಮಗಳ ಮದುವೆ ನನ್ನ ಇಷ್ಟದಂತೆ ಆಗ್ಲಿಲ್ಲ..
ಕೊನೆ ಪಕ್ಷ ಅವಳ ಬದುಕು ಅದರೂ ನಾನು
ಅಂದುಕೊಂಡಿರೋ ಹಾಗೆ ಇದ್ದರೆ ಸರಿ
ಆದಕ್ಕೆ ಈ ಹಣ ಹಾಗೂ ಒಡವೆಗಳನ್ನ ನಿಮ್ಮ ಕೈ ಗೆ ಕೊಟ್ಟು ,
ಸ್ವಲ್ಪ ದಿನ ಜೋಪಾನವಾಗಿ ಇಟ್ಟಿರಿ ಅಂತ ಹೇಳಕ್ಕೆ ಬಂದೆ !
ಹೌದ ಯಾಕೆ ಇದನ್ನ  ನೀವೇ ಸುಧಾಗೆ ಈಗಲೇ ಕೊಟ್ಟು ಬಿಡಬಹುದಲ್ಲವ?
ಇಲ್ಲ ಸ್ವಲ್ಪ ಬೇರೆ ಊರಿನಲ್ಲಿ ಕೆಲಸ ಅದಕ್ಕೆ ಮನೇಲಿ ಹಣ ಇಟ್ಟು ಹೋಗಕ್ಕೆ ಆಗಲ್ಲ  ....
ಆ ಕೆಲಸ ಮುಗಿಸಿಕೊಂಡು ,
ಮಗಳ ಜೊತೆಯಲ್ಲೇ ಇದ್ದು ಬಿಡಬೇಕು ಅಂತ ಇದ್ದೀನಿ,
ಇನ್ನೊಂದು ವಿಷಯ 
ನನ್ನ ಮನಸಿನಲ್ಲಿರೋದು ಏನು ಅಂದರೆ ?
ಆಸೆ ಅರವತ್ತು ದಿನ ,
ಮೋಹ ಮೂವತ್ತು ದಿನ ಅಂತಾರೆ..
ನೋಡೋಣ ಆ ಶ್ರೀಧರನ ಪ್ರೀತಿ ಎಷ್ಟು ದಿನ ಅಂತ...
ಒಂದು ವೇಳೆ ನನ್ನ ಮಗಳನ್ನ ಚೆನ್ನಾಗಿ ನೋಡಿಕೊಂಡ್ರೆ 
ನಾನೇ ಈ ಹಣವನ್ನ ಸಂತೋಷವಾಗಿ ಕೊಡ್ತೀನಿ ...
ಇಲ್ಲದಿದ್ದರೆ,
ಹಣ ಎಲ್ಲನ್ನೂ ಕೊಡಲ್ಲ ನನ್ನ ಮಗಳೇ ಒಂದು 
ಅಪ್ಪಟ ಬಂಗಾರ ಕಣೋ ಅಂತ ಹೇಳಿ ಕೊಡ್ತೀನಿ ...
ನನ್ನ ಮಗಳ ಪಾಲಿಗೆ ನಾನು ಸತ್ತಿರಬಹುದು ಆದರೆ
ಅವಳೂ ಎಂದೂ ನನ್ನ ಮಗಳೇ ….
ಒಂದು ಒಳ್ಳೆಯ ವರನ ನೋಡಿ  ಮದುವೆ ಮಾಡ್ತೀವಿ ...
ಈಗ ಅವರೇ ಮದುವೆ ಮಾಡಿಕೊಂಡಿದ್ದಾರೆ 
ಮುಂದೆ ಹೇಗೆ ಬಾಳ್ತಾರೆ ಅಂತ ನಾವು ನೋಡ್ತೀವಿ ....
ನನ್ನ ಇಷ್ಟೆಲ್ಲಾ ಮಾತಿನ ಹಿಂದಿನ ಅರ್ಥ ಏನು ಅಂದ್ರೆ
ಅವನ ಮೇಲೆ ಒಂದು ಸಣ್ಣ ಪರೀಕ್ಷೆ ಅಷ್ಟೇ……
ಹೂಂ ಸರಿ , ಆದರೆ ನನ್ನ ಕೈಯಲ್ಲಿ ಯಾಕೆ ಹಣ,ಒಡವೆ ಕೊಡ್ತಾ ಇದ್ದೀರಾ ?
ನಿಮ್ಮ ಊರಿನಲ್ಲೇ ಯಾರ ಕೈಯಲ್ಲಿಯಾದ್ರೂ  ಕೊಟ್ಟಿಡಿ?
ನಮ್ಮ ಊರಿನಲ್ಲಿ ಎಲ್ಲ ನನ್ನ ಕಂಡರೆ ಆಗದವರೇ ಜಾಸ್ತಿ ರಾಮಣ್ಣ,
ನಾನು ಸದಾ ಕುಡಿದು ಇರ್ತೀನಿ ...
ಆಮೇಲೆ ಮಾಟ ಮಂತ್ರ  ಅಂತ ಮಸಾನದಲ್ಲಿ ಹೆಣಗಳ ಮಧ್ಯೆ ಇರ್ತೀನಿ ..
ಈ ಕಾರಣಗಳಿಗೆ ಯಾರೂ ನನ್ನ ಜೊತೆ ಮಾತಾಡಲ್ಲ,
ಹಾಗಾಗಿ ಯಾರನ್ನ ನಂಬಬೇಕು ? ಅಂತ ನನಗೆ ಗೊತ್ತಿಲ್ಲ ,
ಹೇಗೋ ಒಂದು ವೇಳೆ ಕೊಟ್ಟು ಇಟ್ರೂ ?
ನಾನು ಮತ್ತೆ ಬರದೆ ಸತ್ತು ಹೋದ್ರೆ  ಈ ಹಣ,
ಒಡವೆನ ನನ್ನ ಮಗಳ ಕೈಗೆ ಒಪ್ಪಿಸುತ್ತಾರ?
ಅನ್ನೋ ಅನುಮಾನ ನನಗೆ ಅದಕ್ಕೆ ಶ್ರೀಧರ್
ಬಗ್ಗೆ ವಿಚಾರಿಸುವಾಗ ನಿಮ್ಮ ಬಗ್ಗೆ ಕೂಡ ಜನ 
ಹೇಳಿದ್ರೂ ನೀವು ಒಳ್ಳೆಯವರ ಈ ಊರಿನ ಜಾತಿ ಮುಖಂಡರು ಅಂತೆಲ್ಲ 
ಅದನ್ನ ಕೇಳಿ ನಿಮ್ಮ ಕೈಯಲ್ಲಿ ಕೊಟ್ಟೆ ಒಂದು ವೇಳೆ ನಾನೇನಾದರೂ ಬರದೆ ಹೋದರೆ
ಕೆಲವು ದಿನಗಳು ಬಿಟ್ಟು ಈ ಹಣ,ಒಡವೆಗಳನ್ನ  ನನ್ನ ಮಗಳ ಕೈಗೆ ಒಪ್ಪಿಸಿ ಬಿಡಿ !
ಅಂತ ಹೇಳೋಗೋಣ ಅಂತ ಬಂದೆ …..
ಛೇ..ಸಾಯೋ ಮಾತೆಲ್ಲ ಯಾಕೆ ಮೂರ್ತಿಯವರೇ ...
ನೀವು ಬಂದೆ ಬರುತ್ತಿರ ಅನ್ನೋ ನಂಬಿಕೆ ನನಗೆ ಇದೆ ..
ನಿಮ್ಮ ಮಾತಿನ ಹಿಂದೆ ಇಷ್ಟೆಲ್ಲಾ ಲೆಕ್ಕ ಚಾರ ಇದ್ದೀಯ ?
ಸರಿ ಕೊಡಿ ಭದ್ರವಾಗಿ ..... 
ಇಟ್ಟಿರ್ತೀನಿ ನೀವು ಯಾವಾಗ
ಬೇಕಾದ್ರೂ ಬಂದು ತೆಗೆದುಕೊಂಡು ಹೋಗಿ .
ಸರಿ, ನಾನು ಹೋಗಿ ಬರ್ತೀನಿ.......
ಎಂದು ಹೊರಟರು!
ಕೈಯಲ್ಲಿ  ಹಣ ,ಒಡವೆಯಾ ನೋಡಿ ...
ನನಗೆ ಆ ಸಮಯದಲ್ಲಿ ಹಣದ ಅವಶ್ಯಕತೆ ಇತ್ತು ..
ಎಲೆಕ್ಷನ್ ಗಾಗಿ ಇದ್ದ ಅಷ್ಟು ಹಣ ಸುರಿದಿದ್ದೆ .
ಆ ಹಣ ಹಾಗೂ ಒಡವೆಗಳನ್ನು ನಾನೇ ಬಳಸಿಕೊಂಡು ,
ಅವರು ಬರುವುದು ಹೇಗಿದ್ದರೂ ಮೂರು ತಿಂಗಳಾದರೂ ಆಗುತ್ತೆ ಅಂತ
ಅಷ್ಟರಲ್ಲಿ ಅವರಿಗೆ ಅವರ ಹಣ ,ಒಡವೆ ಹೊಂಚಿಕೊಡೋಣ ಎಂದು ಯೋಚಿಸಿ .
ಮಾರನೆಯ ದಿನ 
ಒಡವೆಗಳನ್ನು ಗಿರವಿ ಅಂಗಡಿಯಲ್ಲಿ ಆಡ ಇಟ್ಟು ಬಂದ ಹಣ
ಹಾಗೂ ಮೊದಲೇ ಇದ್ದ ಹಣವನ್ನು ಗೋಪಾಲನ ಕೈಗೆ ಕೊಟ್ಟೆ..
ಹೆಂಗಣ್ಣ ಹೊಂಚಿದೆ ?
(ಗೋಪಾಲನಿಗೆ ನಿಜ ಹೇಳಿದ್ರೆ 
ಅವನು ಒಪ್ಪಲ್ಲ ನನಗೆ ಈಗ ಬೇರೆ ಕಡೆ ಹಣ ಹೊಂಚಕ್ಕೂ ಆಗಲ್ಲ ಅಂತ 
ಸುಳ್ಳು ಹೇಳಿದೆ )
ನನ್ನ ಹಳೆ ಸ್ನೇಹಿತ ಒಬ್ಬ ಸಿಕ್ಕ ಕನ್ಲ...
ಅವನ್ ಹತ್ರ ಕೇಳ್ದೆ  ನೂರು ರೂಪಾಯಿಗೆ  ಮೂರುಪಾಯಿ ಬಡ್ಡಿ  
ಅಂತ ಕೊಟ್ಟ....
ಹೌದ ಸರಿ ಅಣ್ಣ ಚಿಂತೆ ಬಿಡು ಈ ಚುನಾವಣೇಲಿ ನಾವೇ ಗೆಲ್ಲೋದು
ಗೆದ್ದ ಮೇಲೆ ಎಲ್ಲರಿಗೂ ಬೆಡ್ಡಿ ಸಮೇತ ವಾಪಾಸ್ ಕೊಡೋಣ ....
ನನಗೆ ಒಸಿ ಕೆಲಸ ಇದೆ ನಾನು ಬರ್ತೀನಿ ..
ಹಣ ತಗೊಂಡು ಗೋಪಾಲ ಹೋದ ...

15ದಿನಗಳ ಬಳಿಕ ………
ಎಲ್ಲವೂ ಸಲಿಸಾಗಿ ಹೋಗುತ್ತಿದ್ದಾಗಲೇ ಬಂದದ್ದು 
ನನ್ನ ಬದುಕನ್ನೇ ಒಂದು ಪ್ರಶ್ನೆಯನ್ನಾಗಿ ಮಾಡಿದ ಸನ್ನಿವೇಶ...
ಒಂದು ರಾತ್ರಿ!
ಭಾವನ Roomನಲ್ಲಿ ಮಲಗಿದ್ದಳು ...
ನಾನು ಲಲಿತ hall ನಲ್ಲಿ ಮಾತನಾಡುತ್ತಿದ್ದೋ 
ಆಗ,
ಹಿತ್ತಲಿನಲ್ಲಿ ಕೂಗುವಾ ಸದ್ದಾಗಿ ಲಲಿತ ಹೋಗಿ, ನೋಡಿ  ಬಂದು ..
ರೀ ನಿಮ್ಮನ್ನ ಯಾರೋ ನೋಡಬೇಕು ಅಂತ ಬಂದಿದ್ದಾರೆ ..
ಹೌದ ಸರಿ ನೀನು ಇಲ್ಲೇ ಇರು ಅಂತ
ಹೇಳಿ ನಾನು ಹಿತ್ತಲಿನ ಕಡೆ ಬಂದರೆ ..
ನನಗೆ ಅಚ್ಚರಿ ಕಾದಿತ್ತು ..
ಸ್ವಲ್ಪ ತಿಂಗಳು ಬಿಟ್ಟು ಬರುತ್ತೇನೆಂದು  ಹೇಳಿದ  ಮೂರ್ತಿ ಬಂದಿದ್ದರು ....
ಏನ್ ಮೂರ್ತಿಯವರೇ ಇಷ್ಟು ಬೇಗ ಬಂದಿದ್ದಿರಿ ?
ನಾನು ಹೋಗಿದ್ದ ಕೆಲಸ ತುಂಬಾ ದಿನ ಆಗುತ್ತೆ ಅಂದುಕೊಂಡಿದ್ದೆ ....
ಆದರೆ  ಬೇಗ ಮುಗಿತು.....
ಹಾಗೆ ಬರುವಾಗ ಸುಧಾನ ಕೂಡ ನೋಡಿದೆ...
ಸ್ವಲ್ಪ ಹೊತ್ತು ಮಾತನಾಡಿದ್ಲು
ನನ್ನ ಕ್ಷಮಿಸಿ ಬಿಡಪ್ಪ ಅಂತ ತುಂಬಾ ಅತ್ಳು .....
ನಾನು, ಬಿಡವ್ವ ನೀನು ಖುಷಿಯಾಗಿದ್ದಿಯಲ್ಲ ಅಷ್ಟೇ ಸಾಕು ....
ನಾನು ನಿನ್ನ ನಾಳೆ ಬಂದು ನೋಡ್ತೀನಿ ನಿನಗೆ
ಸೇರಬೇಕಾದ ವಸ್ತುಗಳನ್ನ ನಿನಗೆ ತಂದು ಕೊಡ್ತೀನಿ 
ಅಂದೇ ….
ಅವಳು
ನೀನು ನನಗೆ ಏನು ಕೊಡಲಿಲ್ಲ ಅಂದ್ರು
ನಮ್ಮನ್ನ ಕ್ಷಮಿಸಿದ್ದಿಯಲ್ಲ ಅಷ್ಟೇ ಸಾಕಪ್ಪ ಅಂತ ಕಾಲಿಗೆ ಬಿದ್ಳು... 
ಅದಕ್ಕೆ ನಿಮ್ನ ನೋಡಿ ಕೊಟ್ಟಿದ್ದ ಹಣ ,ಒಡವೆ.
ತಗೊಂಡು ಹೋಗೋಣ ಅಂತ ಬಂದೆ ....
ಓಹ್ ಹೌದ………..!!!!
ಮನೇಲಿ ಈಗ ಸ್ವಲ್ಪ ನೆಂಟರು ಇದ್ದಾರೆ ನಾನು ನಿಮಗೆ ನಾಳೆ ಮಧ್ಯಹ್ನ 
ನನ್ನ ತೋಟದಲ್ಲಿ ಸಿಕ್ತೀನಿ ನಿಮಗೆ ಅಲ್ಲೇ ಕೊಡ್ತೀನಿ ..
ಆಗಲಿ ರಾಮಣ್ಣ ,
ಎಂದು ಹೊರಟು ಹೋದರು 
ಲಲಿತ , ಯಾರು ? ಬಂದಿದ್ದು ಬಂದಿದ್ದು 
ಅಂತ ಕೇಳಿದಕ್ಕೂ ಕೂಡ ಯಾರೋ ಚುನಾವಣೆಯ  ವಿಷಯವಾಗಿ ನೋಡಕ್ಕೆ ಬಂದಿದ್ರು ಅಂದೇ 
ನನಗೆ ರಾತ್ರಿಯೆಲ್ಲ ಇದೆ ಚಿಂತೆಯಾಗಿತ್ತು ... 
ಮಾರೆನೆಯ ದಿನ
ಅವತ್ತೇ ಊರಲ್ಲಿ ಮತದಾನ ಇತ್ತು ...!!
ಮೂರ್ತಿ ಕುಡಿದು ಬಂದಿದ್ದರು 
ನಾನು , ಅವರು  ಇಬ್ಬರೇ ... ತೋಟದಲ್ಲಿ !
ಮೂರ್ತಿ ,ಬೇಜಾರ್ ಮಾಡ್ಕೋ ಬೇಡಿ ನನಗೆ ಸ್ವಲ್ಪ ಹಣದ ಅವಶ್ಯಕತೆ ಇತ್ತು
ಹಾಗಾಗಿ ನಿಮ್ಮ ಹಣ ಹಾಗೂ ಒಡವೆನ ನನ್ನ ಸ್ವಂತ ಕಾರ್ಯಕ್ಕೆ ಬಳಸಿ ಕೊಂಡಿದ್ದಿನಿ
ನನಗೆ ಸ್ವಲ್ಪ ಸಮಯ ಕೊಟ್ರೆ ನಿಮಗೆ ಹಣ, ಒಡವೆ ಬೇಗ ಹಿಂತಿರುಗಿಸ್ತೀನಿ  ! ..
(ನಾನು ಸಮಾದಾನದಿಂದಲೇ ಮಾತನಾಡಿದೆ )
ಏನ್ರೀ ನೀವು ಜೋಪಾನ ಮಾಡಿ ಅಂತ ಕೊಟ್ಟ ಹಣನ ನಿಮ್ಮ ಸ್ವಂತ ಕಾರ್ಯಕ್ಕೆ ಬಳಸಿದ್ದಿರಲ್ಲ ,
ನನ್ನ ಮಗಳಿಗೆ ನಿನಗೆ ಸೇರಬೇಕಾದ ವಸ್ತುಗಳನ್ನ
ತಂದು ಕೊಡ್ತೀನಿ ಅಂತ ಹೇಳಿದ್ದೀನಿ ……….
ಈಗ ಬರೀ ಗೈಯಲ್ಲಿ ಹೋಗಿ ..
ನಾನು ರಾಮಯ್ಯ ಅವರಿಗೆ ಜೋಪಾನ ಮಾಡಿ ಅಂತ ಕೊಟ್ಟಿದ್ದೆ
ಅವರು ಅದನ್ನ ಖರ್ಚು ಮಾಡ್ಕೊಂಡಿದ್ದಾರೆ ಅಂದ್ರೆ..
ಅದನ್ನ 
ಅವಳು ಸುಳ್ಳು ಅನ್ಕೊಳಲ್ವ ?
ನೋಡಿ ನಿಮ್ಮ ಹಣ ಎಲ್ಲೂ ಹೋಗಕಿಲ್ಲ ನಾನು ಕೊಟ್ಟೆ ಕೊಡ್ತೀನಿ!! 
ನನಗೆ ಸ್ವಲ್ಪ ಟೈಮ್ ಕೊಡಿ ಸಾಕು..
ಚುನಾವಣೆಗೆ ಅಂತ ಇರೋ ಹಣನೆಲ್ಲ ಹಾಕಿದ್ದೀನಿ ....

ನನಗೆ ಆ ಮಾತೆಲ್ಲ ಬೇಡ ಅದೆಲ್ಲ ನಿಮ್ ತೀಟೆ …..
ಈಗ ನನ್ನ ಹಣ ಇಟ್ಟು ಮಾತಾಡು ಅಷ್ಟೇ !
ಏನೋ  ದೊಡ್ಡ ಮನಷ್ಯ ಅಂತ ನಂಬಿ ಹಣ ಕೊಟ್ರೆ  ಏನಯ್ಯ ನೀನು ..
ಹೀಗ ಮಾಡೋದು …………..
(ರಾಮಣ್ಣ ಎಂದು ಹೇಳುತ್ತಿದ್ದವನು ನನ್ನ ಏಕವಚನದಲ್ಲಿ
ಮಾತನಾಡಿಸಿದ್ದು ನನಗೆ ಸಿಟ್ಟು ತರಿಸಿತು)
ಬೇಡ ಮೂರ್ತಿ ಸ್ವಲ್ಪ ನಾಲಿಗೆ ಬಿಗಿ ಹಿಡಿದು ಮಾತಾಡಿ...
ನಿನಗೆನ್ ಮರ್ಯಾದೆ ನನ್ನ ಹಣ ಇಟ್ಟು ಮಾತಾಡು ಅಷ್ಟೇ ಈಗ..
ಹೇಯ್ ಕೊಡಕ್ಕೆ ಆಗಕಿಲ್ಲ ಏನ್  ಮಾಡ್ಕೊಳ್ತೀಯ ? ಏನೋ  ಮಾಡ್ಕೊಳ್ತೀಯ ?
ಏನೂ ಮಾಡಕ್ಕೆ ಆಗಲ್ಲ ಇದು ನನ್ ಊರು ಹುಷಾರ್!!
ಏನೋ ಹೆದರಿಸ್ತ ಇದ್ದೀಯ ?
ನಿಮ್ಮ ಊರಲ್ಲಿ ನಾಲಕ್ಕು ಜನ ದೊಡ್ಡ ಮನುಷ್ಯರು ಇದ್ದಾರೆ ಅಲ್ವ ?
ಅವರನ್ನ ನ್ಯಾಯ ಕೇಳ್ತೀನಿ ನೋಡಿ ಸ್ವಾಮಿ,
ನನ್ನ ಮಗಳಿಗೆ ಕದ್ದು ಮದುವೆ ಮಾಡಿಸಿದ್ದು ಅಲ್ದೆ
ಈಗ ನನ್ನ ಹಣನಾ ಕೂಡ ಮೋಸ ಮಾಡಿ ಕಿತ್ಕೊಂಡಿದ್ದಾನೆ ಅಂತ ….
ನಿಂಗೆ ಇನ್ನೂ ಈ ಮೂರ್ತಿ ಯಾರು ಅಂತ ಗೊತ್ತಿಲ್ಲ ಕಣೋ .......
ನಿನ್ನ ಮುಖಕ್ಕೆ ನಿನ್ನ ಊರಿನ ಜನಾನೇ  ಉಗಿ ಬೇಕು ಆಗ್ ಮಾಡ್ತೀನಿ ...
(ಆ ಸುಡು ಬಿಸಿಲಿನಲ್ಲಿ, ಅಲ್ಲಿಯವರೆಗೂ
ಆಡಗಿಸಿದ್ದ ನನ್ನ ಕೋಪದ ಮೃಗ, ಒಮ್ಮೆಲೇ ಹೊರಗೆ ಬಂತು )
ಹೇಯ್ ನಿನ್ .....*********
ಯಾರ್ಗೆ ಹೇಳ್ತಾ ಇದ್ದೀಯ
ಅಂತ ಅವನ ಎದೆಗೆ ಬಲವಾಗಿ ಎಗ್ಗರಿಸಿ ಹೊದ್ದೆ ಬಿಟ್ಟೆ ....
ಅವನು ಕೆಳಗೆ ಬಿದ್ದು ಒದ್ದಾಡುತ್ತಾ ಇದ್ದ ಆಗ..

ನನ್ನ ಮುಂದೆ ಕೂತ್ಕೊಳಕ್ಕೂ ಯೋಗ್ಯತೆ ಇಲ್ಲದ ತಿರುಬೋಕಿ ನನ್ನ ಮಗ ನೀನು ,
ಮಗಳನ್ನ ಮನೆಲಿಟ್ಟು ಸಾಕಕ್ಕೆ ಆಗ್ದೆ ಊರ್ ಅಳಿಯಕ್ಕೆ ಬಿಡೋ ನಿನ್  ಎಲ್ಲ  ......
ನನ್ನ ಮುಂದೇನೆ ನಿಂತು, ನನ್ನೇ ಏಕವಚನದಲ್ಲಿ  ಮಾತಾಡಿಸ್ತೀಯ...
ನಿನ್ನ  ನಾನು ಬಂದು ಹಣ ಕೇಳಿದ್ನ ,ಇಲ್ಲ ತಾನೇ ನೀನೆ ನಮ್ ಮನೆ ಹುಡುಕೊಂಡು ಬಂದು ಕೊಟ್ಟಿದ್ದು .......ನಾನೇ ವಾಪಾಸ್ ಕೊಡೋವರೆಗೂ ಬಾಯಿ ಮುಚ್ಚಿಕೊಂಡಿರಬೇಕು ಆಯ್ತಾ ,
ಇದು ರಾಮಯ್ಯನ ಕೋಟೆ ಇಲ್ಲಿ ಎಲ್ಲ ನಿನ್ನ ಆಟ ನಡಿಯಲ್ಲ ...
ಎದ್ದೊಲೋ ಮೇಲೆ ಎದ್ದೊಲೋ ........
ಅವನು ಮೇಲಕ್ಕೆ  ಏಳದಿದ್ದಾಗ 
ಅವನನ್ನ ಕೈ ಹಿಡಿದು ಮೇಲಕ್ಕೆ ಎತ್ತಿದೆ...
ಆಗಲೇ ಅವನ ತಲೆಯ ಹಿಂಭಾಗಕ್ಕೆ
ಅಲ್ಲಿಂದ ಕಲ್ಲು ತಾಗಿ ರಕ್ತ ಬರುತ್ತಿದ್ದದನ್ನು ನೋಡಿ ,
ಏನು ಮಾಡಬೇಕು ಅಂತ ತೋಚದೆ  
ನನ್ನ ತಮ್ಮನಿಗೆ ಫೋನ್ ಮಾಡಿ ಬರಕ್ಕೆ ಹೇಳಿದೆ ..
ಗೋಪಾಲ ಬಂದ ಕೂಡಲೇ 
ಅಣ್ಣ ಏನ್ ಆಯ್ತು  ಯಾಕೆ ಫೋನ್ ನಲ್ಲಿ ಒಂತರ ಮಾತಾಡಿದ್ದು ?
ಮೂರ್ತಿನ  ನೋಡಿ ಯಾರು ಇದು ಏನ್ ಆಗಿದೆ ಇವರಿಗೆ ?
ಗೋಪಾಲ ಅವತ್ತು ನಿನ್ನ ಕೈಗೆ ಕೊಟ್ಟ ಹಣ ,ಇವಂದೆ!
ಮೂರ್ತಿ ಅಂತ ಕನ ಸುಧಾ ತಂದೆ,
ಛೇ ಎಂತ ಕೆಲಸ ಮಾಡ್ದೆ ಅಣ್ಣ ಇವನ ಹತ್ರ ಯಾಕೆ ಹಣ ತಗೊಂಡೆ.
ಹೇಯ್ ನಾನು ತಗೊಂಡಿಲ್ಲ ಗೋಪಾಲ ಅವನೇ ನಿಮ್ಮ ಹತ್ರ ಜೋಪಾನವಾಗಿ 
ಇಟ್ಟಿರಿ ಅಂತ ಕೊಟ್ಟು ,ನಾನು ಬರಕ್ಕೆ ಸ್ವಲ್ಪ ತಿಂಗಳು ಆಗುತ್ತೆ ಅಂದ
ನಾನು ಸರಿ ಹೇಗಿದ್ರೂ ನಮಗೂ ಹಣದ ಅವಶ್ಯಕತೆ ಇದೆ 
ಇವನು ಬರೋಷ್ಟರಲ್ಲಿ ಸರಿ ಮಾಡಿ ಕೊಡೋಣ ಅನ್ಕೊಂಡೆ ಕನ....
ನಿನಗೆ ಹೇಳಿದ್ರೆ ಬ್ಯಾಡ ಅಂತೀಯ ಅಂತ ನಿನಗೂ ಹೇಳಿಲ್ಲ …
ಈಗ ಸ್ವಲ್ಪ ಟೈಮ್ ಕೊಡಿ ಹಣ ಕೊಡ್ತೀನಿ ಅಂದ್ರೆ 
ನನಗೆ ಏಕವಚನದಲ್ಲಿ  ಈ ಊರಿನ ಜನ ನಿನ್ನ ಮುಖಕ್ಕೆ ಉಗಿ ಬೇಕು ಹಾಗೆ ಮಾಡ್ತೀನಿ
ಅಂದ ಅದಕ್ಕ ಕೋಪ ದಿಂದ ಅವನ ಎದೆಗೆ ಹೊದ್ದೆ ...
ಓಹ್ ಇಷ್ಟೆಲ್ಲಾ ಆಯ್ತಾ .... 
ಅದಕ್ಕೆ ಅಣ್ಣ ಹೇಳೋದು ಇವೆಲ್ಲ ಹಣ ಕಂಡಿಲ್ಲದವು ..
ಏನ್ ಇವನ ಪುಟ್ಗೋಸಿ ದುಡ್ಡ್ ನ ತಗೊಂಡು ನಾವು ಊರು ಬಿಟ್ಟು ಹೋಗ್ತೀವಂತ ..
ಇನ್ನೂ ನಾಲಕ್ಕು ಇಕ್ ಬೇಕಿತ್ತು ,
ಇರು ಅವನಿಗೆ ಇದೆ ಅಂತ ಗೋಪಾಲ ಹತ್ತಿರ ಹೋಗಿ ...
ಮೂರ್ತಿ ಮುಟ್ಟಿ.....!
ಅಣ್ಣ ...................!
ಸತ್ತೊಗಿದ್ದಾನೆ!!
ಅಯ್ಯೋ!! ಗೋಪಾಲ ಏನ್ಲ ಮಾಡೋದು ...
ಅಣ್ಣ ಇರು ಯೋಚನೆ ಮಾಡೋಣ ಇದು ಚುನಾವಣೆಯ ಸಮಯ ಬೇರೆ .......
ಅಣ್ಣ ಇವನ್ನ ನಾವೇ ಮಣ್ಣು ಮಾಡೋಣ 
ಎಲ್ಲಿ ? ಹೂತಾಕೊದು ಗೋಪಾಲ ?
ಹೂಂ ಅಣ್ಣ ಊರಲ್ಲೇ ಎಲ್ಲ ಹೂತಿದ್ರೂ ನಮಗೆ ತೊಂದರೆ ,
(ಎರಡು ನಿಮಿಷ ಯೋಚಿಸಿದ ನಂತರ )
ನಮ್ಮ ಮನೆಯ ಹಿತ್ತಲಿನಲ್ಲೇ ಹೂತಾಕೋಣ 
ಆಗ ನಮ್ಮ ಕಣ್ಣ ಮುಂದೇನೆ ಇರುತ್ತೆ ಭಯನು ಇರಲ್ಲ ,
ನಮ್ಮ ಅಪ್ಪಣೆ ಇಲ್ಲದೆ ಯಾರೂ  ಆ ಜಾಗನ ತೊಡಕ್ಕೂ ಆಗಲ್ಲ..
ಅದೇ ಬೇರೆ ಕಡೆ ಅಂದ್ರೆ ಎಲ್ಲಿ ಅದಕ್ಕೆ ಇಡಕ್ಕೆ ಅಂತ ಆಗಿತ ಇರ್ತಾರೆ !
ಸರಿ ಕನ ....
ಮನೇಲಿ ಭಾವನ,ಲಲಿತ ಇದ್ದಾರೆ ಅವರನ್ನ ಅತ್ತೆ ಮನೆಗೆ ಕಳಿಸಿ ಬರ್ತೀನಿ .
ಅಂತ ಮನೆಗೆ ಬಂದೆ ....
ಲಲಿತ. ನೀನು, ಭಾವನ ಅತ್ತೆಯ ಮನೇಲಿ ಇರಿ ನಾನು ಆಮೇಲೆ ಬರ್ತೀನಿ
ಯಾಕ್ರೀ? ಅವಸರವಾಗಿ ಹೋಗು ಅಂತ ಇದ್ದೀರಾ ಅದು ಈಗಲೇ ?
ಇಲ್ಲ ಪಕ್ಕದ ಊರಿನಲ್ಲಿ ಏನೋ ಜಾತಿ ಗಲಾಟೆ ಆಗಿದೆ ಅದಕ್ಕೆ
ನಾನು ಇರಲ್ಲ ಒಂದು ತಿಂಗಳು ನೀನು ಅಲ್ಲೇ ಇರು ನಾನು ಅಲ್ಲಿಗೆ ಬರ್ತೀನಿ !
ಏನ್ರೀ ಹೇಳ್ತಾ ಇದ್ದೀರಾ ನೀವು ಹೋಗಬೇಡಿ ನಮ್ಮ ಜೊತೆ ಬಂದು ಬಿಡಿ ,
ಬರ್ತೀನಿ ಕಣೆ ರಾತ್ರಿನೇ ಬರ್ತೀನಿ ...
ನಿನ್ ಹೊರಡು ಅಂತ ಒಂದು ಕಾರು ಮಾಡಿ ಕಳಿಸಿ ……..
ತೋಟಕ್ಕೆ ಬಂದೆ..
ಸಂಜೆ 6 ಆಗುವುದನ್ನೇ ಕಾದು 
ಗೋಣಿಚೀಲದಲ್ಲಿ ಹಾಕಿ ತಂದು ....
ನಮ್ಮ ಮನೆಯ ಬಾವಿಯ ಮೋಟರ್ ರೂಂ ನಲ್ಲಿ 
ಆ ದೇಹವನ್ನು ಇಟ್ಟು ......
ನಮ್ಮ ಮನೆಯ ಹಿತ್ತಲಿಗೆ ಮೂರು ಅಡಿಯ ಕಾಂಪೌಂಡ್ ಇದೆ ....
ನಾನು ಸುತ್ತಲ್ಲೂ ನೋಡುತ್ತಾ ನಿಂತಿದ್ದೆ ...
ಗೋಪಾಲ ಹಳ್ಳ ತೋಡಿದ ನಂತರ ....
ಆ ದೇಹವನ್ನು ನಮ್ಮ ಹಿತ್ತಲಿನಲ್ಲೇ ಹೂತಿದೋ ... 
ಇದಾದ ಹತ್ತು ದಿನಗಳ ಬಳಿಕ..
ಗೋಪಾಲ ನನ್ನ ನೋಡಿ ...
ಅಣ್ಣ ನೀನು ತುಂಬಾ ಹೆದರಿದ್ದಿಯ ಅದಕ್ಕೆ ನಾನು ನಿನ್ನ ಜೊತೆಯಲ್ಲೇ ಸ್ವಲ್ಪ 
ದಿನ ಇದ್ದು ಬಿಡೋಣ ಅಂತ ಇದ್ದೀನಿ !
ಒಳ್ಳೇದು ಕನ್ಲ ಗೋಪಾಲ ಯಾಕೋ ಇನ್ನೂ ಆ ಭಯ ನನ್ನ ಬುಟ್ಟು ಹೋಗಿಲ್ಲ!
ಅದಕ್ಕೆ ಪ್ಯಾಟೆಲಿ ನಾನಿದ್ದ ರೂಂ ನಾ ಖಾಲಿ ಮಾಡೋಣ ಅಂತ ಇದ್ದೀನಿ
ಈಗ ನನ್ನ ಫ್ರೆಂಡ್ ಜೊತೆ ಮಾತಾಡಿದೆ ಅವನು ನನ್ನ ರೂಂ ನಲ್ಲಿ ವಸ್ತುಗಳನ್ನ ಅವನೇ ತಗೊಳ್ತೀನಿ ಅಂದ
ರೂಂ ಗೆ 50ಸಾವಿರ ಅಡ್ವಾನ್ಸ್ ಕೊಟ್ಟಿದ್ದೆ ಅದನ್ನ ತರಬೇಕು ಹೋಗಿ 
ಆದರೆ ಇಲ್ಲಿ ನನಗೆ ತುಂಬಾ ಕೆಲಸ ಇದೆ ಮತ ಎಣಿಕೆಯ ದಿನ ಬೇರೆ ತುಂಬಾ ಹತ್ರ ಇದೆ ಅದಕ್ಕೆ ಈ ಟೈಮ್ ನಲ್ಲಿ
ನಾನು ಹೋಗಕ್ಕೆ ಆಗಲ್ಲ ಏನ್ ಮಾಡ್ಲಿ ಅಂತ ಯೋಚನೆ ಮಾಡ್ತಾ ಇದ್ದೀನಿ ?
ಹೇಯ್ ನಮ್ಮ ಶ್ರೀಧರನ್ನ ಕಳಿಸೋಣ ಬುಡ್ಲ!
ಸರಿ ಅಣ್ಣ ನೀನೆ ಅವನಿಗೆ ಹೇಳು! ನಾನು ಅವನ್ನ ಕರ್ಕೊಂಡು ಬರ್ತೀನಿ ..
ಅಂತ ಹೋಗಿ ಶ್ರೀಧರನ್ನ ಕರ್ಕೊಂಡು ಬಂದ!
ಶ್ರೀಧರ ಒಸಿ ಪ್ಯಾಟೆಲಿ ಕೆಲಸ ಆಯ್ತೆ ಕನ..
ನಮ್ಮ ಗೋಪಾಲ ಇದ್ದ ರೂಂ  ಅಡ್ವಾನ್ಸ್ ಹಣ ತಗೊಂಡು ಬರಬೇಕು ಅವನು 
ರೂಂ ಖಾಲಿ ಮಾಡಿದ್ದಾನೆ...
ಅಣ್ಣ ...............
ಸುಧಾ ಬೇರೆ ಒಬ್ಬಳೇ ಇದ್ದಾಳೆ ಮನೇಲಿ ..
ಹೇಗೆ ಅಣ್ಣ ಬಿಟ್ಟು ಹೋಗ್ಲಿ ?
ಅದಕ್ಕೆ ಗೋಪಾಲ..
ಹೇಯ್ ಶ್ರೀಧರ ನಾನು ಎಲ್ಲ ಮಾತಾಡಿದ್ದೀನಿ ಕಣೋ 
ನೀನು ಹೋಗಿ ತಗೊಂಡು ಬರ್ತಾ ಇರೋದು ಅಷ್ಟೇ ಕೆಲಸ 
ಏನು ಆಗಲ್ಲ ನಾವೆಲ್ಲಾ ಇದ್ದಿವಿ ತಾನೇ ಹೋಗು ಬೇಗ ಬಂದು ಬಿಡು ಅಷ್ಟೇ ....
(ಶ್ರೀಧರ ಒಲ್ಲದ ಮನಸಿನಲ್ಲೇ ಒಪ್ಪಿಕೊಂಡ)
ಆಯ್ತು ಗೋಪಾಲಣ್ಣ...
ಎಂದು ಅವನು ಅಲ್ಲಿಂದ ಹೊರಟ....

ಗೋಪಾಲ,ಉಳಿದ್ದಿದ್ದ ತೋಟದ ಮನೆಗೆ ಸ್ವಲ್ಪ ಗಾರೆ ಕೆಲಸ ಮಾಡಿಸುತ್ತಿದ್ದೋ ...
ಕೆಲಸ ಎಲ್ಲ ಮುಗಿದೇ ಮೇಲೆ ಮನೆ ಕಟ್ಟೋ ಮೇಸ್ತ್ರಿ ನ ಬಿಟ್ಟು ಬರ್ತೀನಿ ಅಂತ
ಗೋಪಾಲ ಅವರನ್ನ ಬೈಕ್ ನಲ್ಲಿ  ಕೂರಿಸಿಕೊಂಡು ಹೋದ ...
ಆಗ ಸಮಯ ಸಂಜೆ 5!
ಅಲ್ಲಿಗೆ ಸುಧಾ ಬಂದಳು!
ನಾವು ಮನೆಯ ಒಳಗೆ ಮಾತನಾಡುತ್ತ ಇದ್ದೋ ..
ಅದೊಂದು ಉದ್ದನೆಯ ಮನೆ .....
ಏನಮ್ಮ ಇಲ್ಲಿವರೆಗೂ ಬಂದಿದ್ದಿಯ ?
ಶ್ರೀಧರ್ ಇನ್ನೂ ಬಂದಿಲ್ಲ ಅಣ್ಣ ಅದಕ್ಕೆ
ನಿಮ್ನ ಯಾವಾಗ ಬರ್ತಾರೆ ಅಂತ ಕೇಳಿ ಹೋಗೋಣ ಅಂತ ಬಂದೆ.
ಇವತ್ತೇ ಬಂದು ಬಿಡ್ತಾನೆ ಸ್ವಲ್ಪ ಕೆಲಸ ಅಷ್ಟೇ ಪ್ಯಾಟೆ ಲಿ ..
ಹೌದ ಸರಿ ಅಣ್ಣ ಅಂತ ಅವಳು ಹೊರಟಳು ...
ಬಾಗಿಲವರೆಗೂ ಹೋಗಿ ಮತ್ತೆ ನನ್ನ ಹತ್ರ ಬಂದು ....
ಅಣ್ಣ  ನಿಮ್ಮನ್ನ  ನೋಡಕ್ಕೆ ನಮ್ಮಪ್ಪ ಬಂದಿದ್ರ ?
(
ಸುಧಾ ಆ ಪ್ರಶ್ನೆಯನ್ನು ಕೇಳುತ್ತಿರುವಾಗಲೇ ಅವಳ ಹಿಂದೆ ಮೆಲ್ಲನೆ ಬಂದು ನಿಂತ ಗೋಪಾಲ ,
ಅವಳಿಂದ ಸ್ವಲ್ಪ ದೂರವೇ ನಿಂತಿದ್ದ ಕಾರಣಕ್ಕೆ
ಅದು ಅವಳ ಗಮನಕ್ಕೆ ಬರಲಿಲ್ಲ)
ಹೌದಮ್ಮ ಬಂದಿದ್ರು !
ಅಪ್ಪ  ಹೇಳಿದ್ರು ನಿಮ್ಮ ಹತ್ರ ಏನೋ ಹಣ  
ಕೊಟ್ಟಿದ್ರಂತೆ ನಿಮಗೆ ಜೋಪಾನ ಮಾಡಿ ಸುಧಾ ಕೊಟ್ಟು ಬಿಡಿ ಅಂತ ನಿಜನ ಅಣ್ಣ ?
(ನಾನು ಮೌನವಾಗಿದ್ದೆ)
ನಮ್ಮ ತಂದೆನ ನಂಬಕ್ಕೆ ಆಗಲ್ಲ ಅಣ್ಣ ತುಂಬಾ ಸುಳ್ಳು ಹೇಳ್ತಾರೆ ಅದಕ್ಕೆ
ನಾನು ನಿಮ್ಮ ಹತ್ರ ನಮ್ಮ ತಂದೆ ಹಣ ಕೊಟ್ಟ 
ವಿಷಯ ನನ್ನ ತಂದೆ ನನಗೆ ಹೇಳಿದಾಗಲೂ
ನಾನು ಅದನ್ನ ಇನ್ನೂ ಶ್ರೀಧರ್ ಗೆ ಹೇಳಿಲ್ಲ!
(ಸುಧಾ, ಶ್ರೀಧರ್ ಗೆ ಹೇಳಿಲ್ಲ ಅಂದ ಕೂಡಲೇ ಗೋಪಾಲ ಮೆಲ್ಲನೆ ಅವಳ ಹತ್ತಿರ ಬರುತ್ತಿದ್ದ , ಹತ್ತಿರ ಹತ್ತಿರ ಬರುತ್ತಲೇ  ಅವನ ಬಲಗಡೆಯಾ ಗೋಡೆಗೆ ಒರಗಿಸಿದ್ದೆ ಕಬ್ಬಿಣದ ಆರೆಯನ್ನ ಎತ್ತಿದವನೇ ಒಂದೇ ಏಟು ಅವಳ ತಲೆಗೆ ಹಿಂದೆ ಇಂದ !!!!,
ಹಾಗೆ  ಅವಳ ಹಣೆಯಿಂದ ರಕ್ತದ ಹನಿ ನೆಲಕ್ಕೆ ಬೀಳುವ ಮುನ್ನವೇ ಸುಧಾ ಕೆಳಗೆ ಬಿದ್ದಳು)
ಒಂದು ಕ್ಷಣ ಅದನ್ನು ನೋಡಿದ ಗಾಭರಿಗೆ...ಮಾತೇ ಹೊರಡದೆ ಹಾಗೆ ನಿಂತಿದ್ದೆ !!
ಅಯ್ಯೋ...ಗೋಪಾಲ ಯಾಕೋ ಹೀಗೆ ಮಾಡಿ ಬಿಟ್ಟೆ ...
ಅಣ್ಣ, ನಿನ್ನ ಆ ಮೂರ್ತಿ ನೋಡಿದ್ದು, ಇವಳಿಗೆ ಮಾತ್ರ ಗೊತ್ತು 
ಇದನ್ನೇ ಹೀಗೆ ಬಿಟ್ರೆ ನಾಳೆ ಶ್ರೀಧರ್ ಬಂದ ಮೇಲೆ ಇವಳು ಅವನಿಗೂ ಹೇಳ್ತಾಳೆ
ಅವನು ಮೂರ್ತಿನ ಹುಡುಕಕ್ಕೆ ಶುರು ಮಾಡ್ತಾನೆ ...ಯಾಕೆ ನಮಗೆ ಇದೆಲ್ಲ
ಯಾವತ್ತೂ ತಪ್ಪು ಮಾಡಬಾರ್ದು ಮಾಡಿದ್ರೆ
ಅದನ್ನ ಹೊರಗೆ ಬರದೆ ಇರೋತರ ನೋಡ್ಕೋ ಬೇಕು ...
(ಗೋಪಾಲ ಸುಧಾನ  ನೋಡಿ!)
ಇವಳಪ್ಪನ್ನ  ಹೂತಿದೆ ಅದೇ ಜಾಗದಲ್ಲಿ ಇವಳನ್ನೂ ಮಣ್ಣು ಮಾಡೋಣ ....
ಆಯ್ತು ಕನ ,
ಆದರೆ, ಪ್ಯಾಟೆಗೆ ಹೋಗಿರೋ ಶ್ರೀಧರ ಬಂದು ಸುಧಾ ಎಲ್ಲಿ ಅಂದ್ರೆ ಏನ್ ಮಾಡೋದು ?
ಅಣ್ಣ ಅದೆಲ್ಲ ಇಲ್ಲಿ ಈಗ ಮಾತಾಡಕ್ಕೆ ಆಗಲ್ಲ ,
ನಿನ್ ಏನ್ ಅಂದ್ರೂ ಅವನು ನಂಬುತ್ತಾನೆ ..
ಈಗ ಸಮಯ ಆಗಲೇ 7ಆಗಿದೆ 
ಶ್ರೀಧರ್ ಬರಕ್ಕೂ ಮೊದಲೇ ಈ ದೇಹನ ಮಣ್ಣು ಮಾಡೋಣ ಬಾ !

ಆ ದೇಹವನ್ನೂ ಗೋಣಿಚೀಲದಲ್ಲಿ  ಹಾಕಿ ತಂದು ...
ಹಳ್ಳ ತೋಡುವುದಕ್ಕೆಪ್ರಾರಂಭಿಸಿದೋ....
ಸ್ವಲ್ಪ ತೋಡಿದ ನಂತರ ನಾನು ಮೇಲೆ ಬಂದು ಸುತ್ತಲೂ ನೋಡುತ್ತಾ ನಿಂತೇ ..
ಹಳ್ಳ ತೋಡಿದ ಮೇಲೆ ಗೋಪಾಲ ಮೇಲೆ ಬಂದು 
ನಾನು ಅವನು ಸೇರಿ ಗೊನಿಚಿಲದಲ್ಲಿದ್ದ ದೇಹವನ್ನು ತೆಗೆದು 
ಹಳ್ಳದಲ್ಲಿ ಇಳಿಸಿ ಮೇಲೆ ಬಂದು ಇನ್ನೇನು ಮಣ್ಣು ಹಾಕಬೇಕು ಅನ್ನುವಾಗ 
ಗೋಪಾಲ ನನ್ನ ನೋಡಿ!
ಅಣ್ಣ ಅಲ್ಲಿ ನೋಡು ಅವಳ ಕತ್ತಿನಲ್ಲಿ ಚಿನ್ನದ ಸರ ಇದೆ ಇರು ಅದನ್ನ ತರ್ತೀನಿ,
ಅಂತ ಹಳ್ಳಕ್ಕೆ ಇಳಿದ ..
ಆ ಸರವನ್ನು ಬಿಚ್ಚುತ್ತಿರುವಾಗ !
ಗೋಪಾಲ ಮೆಲ್ಲಗೆ .....
ಅಣ್ಣ ಇವಳು ಇನ್ನೂ ಉಸಿರಾಡುತ್ತಿದ್ದಾಳೆ!
ಅಣ್ಣ ಏನ್ ಮಾಡೋಣ ???
ಏನು ಇನ್ನೂ ಜೀವಂತ ಇದ್ದಾಳ ?
ಈಗ ಇವಳನ್ನ ಬಿಡೋದು ದೊಡ್ಡ ತಪ್ಪಾಗುತ್ತೆ !!!....
ಅದಕ್ಕೆ ಇವಳು ಸತ್ತಿದ್ದು ಸತ್ತದ್ದೇ ...
ಬಾ ಮೇಲೆ ……..
ಸರಿ ಅಂತ ಗೋಪಾಲ ಮೇಲೆ ಬಂದು ಆ ಸರವನ್ನು ಕೊಟ್ಟ
ನಾನು ಅದನ್ನು ತೆಗೆದು ಕೊಂಡು ಜೇಬಿನಲ್ಲಿ ಇಟ್ಟು ಕೊಂಡೆ ,
ಇಬ್ಬರೂ ಸೇರಿ ಸುಧಾಳನ್ನು ಜೀವಂತವಾಗಿ  ಮಣ್ಣು ಮಾಡಿ ಬಿಟ್ಟೋ!
ಗೋಪಾಲ ಸರಿ  ಅಣ್ಣ ನಾನು ತೋಟದ
ಮನೇಲಿ ಇರ್ತೀನಿ ಬೀಗ ಕೂಡ ಹಾಕಿಲ್ಲ.
ಅಂತ ಹೇಳಿ ಹೊರಟು ಹೋದ..
ನಾನು ಮನೇಲಿ ಒಬ್ಬನೇ ಇದ್ದೆ ….
ಶ್ರೀಧರ್ ಪ್ಯಾಟೆ ಇಂದ ಬಂದ ಆಗ ಸಮಯ ರಾತ್ರಿ10!
ಅಣ್ಣ ತಗೋಳಿ ಇದರಲ್ಲಿ ಅಡ್ವಾನ್ಸ್ ಹಣ ಇದೆ ಸರಿ ಇದೆಯಾ ನೋಡಿ ಕೊಳ್ಳಿ ...
ಬುಡ್ಲ ಶ್ರೀಧರ ನಿನ್ ಮೇಲೆ ನನಗೆ ಸಾನೆ ನಂಬಿಕೆ ಇದೆ ..
ಸರಿ ಅಣ್ಣ ನಾನು ಬರ್ತೀನಿ ..
ಇರ್ಲ ಶ್ರೀಧರ ಒಸಿ ಊಟ ಮಾಡಿ ಹೋಗ್ಲ...
ಬ್ಯಾಡ ಅಣ್ಣ ನನಗಾಗಿ ಆಡಿಗೆ ಮಾಡಿ ಸುಧಾ ಒಬ್ಬಳೇ ಊಟ ಮಾಡ್ದೆ ಕಾಯ್ತಾ ಇರ್ತಾಳೆ ...
ಪ್ಯಾಟೆಗೆ ಹೋಗಿದ್ದೆ ಅಲ್ವ ಅಲ್ಲೇ ಒಂದು ಅಂಗಡಿಯಲ್ಲಿ ಅವಳಿಗೆ ಒಪ್ಪುತ್ತೆ ಅಂತ 
ಹಸಿರು ಬಣ್ಣದ 
ಇನ್ನೂರು ರುಪಾಯಿಗೆ ಒಂದು ಸೀರೆ ತಗೊಂಡೆ..
ಇದನ್ನ ನೋಡಿದ್ರೆ ಸಾನೆ ಕುಶಿ ಆಗ್ತಾಳೆ 
ಇದೆ ಮೊದಲ ಸಲ ನಾನು ಅವಳಿಗಾಗಿ ಸೀರೆ ಕೊಡಿಸ್ತಾ ಇರೋದು ..
(ಅವನ ಮಾತುಗಳನ್ನು ಕೇಳಿ ಕಣ್ಣಂಚಿನಲ್ಲಿ ಸಣ್ಣ ಕಣ್ಣೀರಿನ ಹನಿ ,ಅದನ್ನು ತೋರಿಸಿಕೊಳ್ಳದೆ  !)
ಸರಿ ಕನ ಹೊರಡು..
ಅಂತ ಹೇಳಿ ಬಂದು ಮಲಗಿದೆ 
ಮಧ್ಯರಾತ್ರಿ 12!
ಯಾರೋ ಬಾಗಿಲು ಬಡಿಯುವ ಸದ್ದು....
ಏನೋ ಮನಸಿನಲ್ಲಿ ಭಯಾ!
ಭಯದಿಂದಲೇ ಬಾಗಿಲು ತೆಗೆದೆ!
ಶ್ರೀಧರ ತುಂಬಾ ಬೆವತು ನಿಂತಿದ್ದೆ!
ಯಾಕ್ಲ ಶ್ರೀಧರ ಏನ್ ಆಯ್ತು ?
ಅಣ್ಣ ಸುಧಾ ಮನೇಲಿ ಕಾಣುತ್ತಿಲ್ಲಣ್ಣ ..
ಹೇಯ್ ಇಲ್ಲೇ ಎಲ್ಲೋ ಹೋಗಿರಬೇಕು ಸುತ್ತಲೂ ನೋಡ್ದ?
ನೋಡ್ದೆ ಕಣಣ್ಣ ಎಲ್ಲ ಕಡೆ ನೋಡ್ದೆ ಎಲ್ಲೂ ಇಲ್ಲ 
ನನಗೆ ಸಾನೆ ಭಯ ಆಗ್ತಾ ಇದೆ ...
ಹೇಯ್ ಭಯ ಬ್ಯಾಡ ಕನ ..
ನೀನು ಮನೇಲಿ ಇರ್ಲಿಲ್ಲ ಅಲ್ವ 
ಎಲ್ಲೋ ಅವರ ನೆಂಟರ ಮನೆಗೆ ಹೋಗಿರಬೇಕು 
ನೀನು ಹೋಗಿ ಮಲ್ಕೋ ಅವಳು ಬೆಳಗ್ಗೆನೆ ಬರ್ತಾಳೆ , ಇಲ್ಲಾಂದ್ರೆ ನಾವು ಹುಡುಕೋಣ ..
ಸರಿ ಅಣ್ಣ ...ಅಂತ ಹೊರಟ ..
ಹೇಯ್ ಶ್ರೀಧರ ನೀನು ಊಟ ಮಾಡ್ದ ?
ಇಲ್ಲಣ್ಣ ನನಗೆ ಹಸಿವಿಲ್ಲ ಬ್ಯಾಡ ...
ಅವನು ಹಸಿವಿನಲ್ಲೇ ಅಲ್ಲಿಂದ ಹೊರಟು ಹೋದ ...

ಮಾರನೆಯ ದಿನ!
ಶ್ರೀಧರ್ ಎಲ್ಲ ಕಡೆ ಹುಡುಕಿದ
ನಾನೂ ಹಾಗೂ ಗೋಪಾಲನು ಕೂಡ ಹುಡುಕುವ ಹಾಗೆ ನಾಟಕ ಮಾಡಿದೋ !
ಶ್ರೀಧರ್ ಎಲ್ಲ ಕಡೆ ಹುಡುಕಿ ಎಲ್ಲೂ ಸಿಗಲಿಲ್ಲ ಅಂತ ಬಂದು 
ನನ್ನ ಮನೆಯಲ್ಲಿ ಅಳುತ್ತ ಕುಳಿತ್ತಿದ್ದ ...
ಆಳ ಬ್ಯಾಡ ಕಣೋ ಶ್ರೀಧರ  ಒಸಿ ಸಮಾಧಾನ ಮಾಡ್ಕೋ 
ಅಣ್ಣ ನಾನ್ ಏನ್ ಮಾಡ್ಲಿ ಅವಳ ಮೇಲೆ ಜೀವನೆ ಇಟ್ಟಿವಿನಿ
ಹೀಗೆ ಹೇಳದೆ ಕೇಳದೆ ಎಲ್ಲೋ ನನ್ನ ಬಿಟ್ಟು ಹೋದ್ಳು.....
ನೀನು ಬೇಜಾರ್ ಮಾಡ್ಕೊಳಲ್ಲ ಅಂದ್ರೆ ನಿನಗೆ ಒಂದು ಮಾತು ಹೇಳ್ತೀನಿ, 
ಇಲ್ಲಣ್ಣ ಹೇಳಿ ಬೇಜಾರ್ ಮಾಡ್ಕೊಳಲ್ಲ ಹೇಳಿ ಅಣ್ಣ ಏನ್ ಅದು ??
ನಿನಗೆ ಯಾವತ್ತೂ ಹೇಳಬಾರ್ದು ಇದೆ ಕನ!
ನನ್ನ ಕೆಲವು ದಿನಗಳ ಹಿಂದೆ ಸುಧಾಳ ತಂದೆ ಮೂರ್ತಿ ನೋಡಕ್ಕೆ ಬಂದಿದ್ರು ಆಗ! 
ಅವಳು ಆಯ್ಕೆ ಮಾಡಿರೋ ಆ ಶ್ರೀಧರ ಯಾರೂ ಇಲ್ಲದ ಅನಾಥ.
ಹೇಳಿಕೊಳ್ಳಕ್ಕೆ ನನಗೆ ಸುಧಾ, ಅವಳಿಗೆ ನಾನು ಅಷ್ಟೇ
ಅದಕ್ಕೆ ಒಂದು ತುಂಬು ಕುಟುಂಬದಲ್ಲಿ ಕೊಟ್ಟು ಮದುವೆ ಮಾಡ್ಬೇಕು ಅಂತ ಇದ್ದೆ.
ನನ್ನ ಮೇಲೆ ನನ್ನ ಮಗಳಿಗೆ ನಂಬಿಕೆ ಇಲ್ಲ ಸ್ವಾಮಿ
ನಾನ್ ಏನ್ ಮಾಡ್ಲಿ ! ! ! ನಾನ್ ಏನ್ ಮಾಡ್ಲಿ...!!
ಅಂತ  ಅವರು ಅಳ್ತಾ ಇದ್ರು ...........
ಬ್ಯಾಡ ಮೂರ್ತಿ ನೋಡಿ ಮಗಳು ಏನೋ ಪಿರುತಿ 
ಮಾಡಿ , ಆಸೆಯಿಂದ ಅವರು ಮದುವೆ ಆಗಿದ್ದಾರೆ ಹೇಗೋ ಚೆನ್ನಾಗಿ ಇರಲಿ 
ಅಂತ ಆಶಿರ್ವಾದ ಮಾಡಿ, ಎಷ್ಟು ದಿನ ಅಂತ ಹೀಗೆ ಇರ್ತೀರಾ ಎಲ್ಲ ಮುಗಿಸಿ ,
ಕೊನೆಗಾಲದಲ್ಲಿ  ನೀವು ಅವರೊಂದಿಗೆ  ಇದ್ದು ಬಿಡಿ...
ಇಲ್ಲ ರಾಮಣ್ಣ ಇಲ್ಲ ,
ನನಗೆ ಇನ್ನೂ ಸ್ವಲ್ಪ ಕೆಲಸ ಭಾಕಿ ಇದೆ
ಅದನ್ನೇ ಮುಗಿಸಿಯೇ ನಾನು ನಿಲ್ಲಿಸೋದು ......
ನಾನು ಕೈಯಲ್ಲಿ ಆಗದವನು ಅಂತ ಅಂದು ಕೊಂಡಿರೋ ನನ್ನ ಮಗಳಿಗೆ,
ನನ್ನ ಊರಿಗೆ ನಾನು ಯಾರು ಅಂತ ತೋರಿಸಬೇಕು! 
ಅದಕ್ಕೆ ನಾನು ನಿಮ್ಮನ್ನ ನೋಡಕ್ಕೆ ಬಂದಿದ್ದು!! 
ಹೀಗೆ ಮಾತನಾಡುವಾಗಲೇ!
ನನ್ನ ಕೈಗೆ ಹಣದ ಕಂತೆಯನ್ನು  ಇಟ್ಟು................!!
ಇದನ್ನ ಶ್ರೀಧರನಿಗೆ ಕೊಟ್ಟು ಬಿಡಿ ನನ್ನ ಮಗಳನ್ನ ಬಿಟ್ಟು ಹೋಗಕ್ಕೆ ಹೇಳಿ ಅಂದ್ರು 
(ನಾನು)
ಏನ್ ಹೇಳ್ತಾ ಇದ್ದೀರಾ ಮೂರ್ತಿಯವರೇ ನಮ್ಮ
ಶ್ರೀಧರ ಆಗೆಲ್ಲ ಹಣಕ್ಕೆ ಆಸೆ ಪಡೋನು ಅಲ್ಲ ...
ಅದನ್ನ ತಿಳ್ಕೊಳಿ ....ಮೊದಲು ನೀವು ಇಲ್ಲಿಂದ ಹೊರಡಿ ...
(ಅಂದೇ ಅದಕ್ಕೆ ಮೂರ್ತಿ)
ಈ ಮಾಂತ್ರಿಕ ಮೂರ್ತಿ ಅಂದ್ರೆ ಏನು ಅಂತ ಎಲ್ಲರಿಗೂ ಗೊತ್ತು
ಅದು ಹೇಗೆ ಆ ಶ್ರೀಧರನ ಜೊತೆ ನನ್ನ ಮಗಳು ಇರುತ್ತಾಳೆ ನಾನು ನೋಡ್ತೀನಿ
ಇನ್ನೂ ಕೆಲವೇ ದಿನ ನನ್ನ ಮಗಳು ನನ್ನ ಮನೆ ಹುಡುಕಿ ಬರಬೇಕು ಹಾಗೆ ಮಾಡ್ತೀನಿ 
ಇದು ನನ್ನ ಸವಾಲ್ !
ಅಂತ ಹೇಳಿ ಹೋದ್ರು...
ನನಗೆ ಅವರ ಮೇಲೆ ಅನುಮಾನ ಎಲ್ಲೋ ಮಗಳಿಗೆ ಮಂಕು ಬೂದಿ 
ಎರಚಿ ಕರ್ಕೊಂಡು ಹೋಗಿದ್ದಾರೆ ಕಣೋ ...
ಮೊದಲೇ ಅವಪ್ಪ ಮಾಟ ಮಂತ್ರ ಮಾಡೋದರಲ್ಲಿ ಎತ್ತಿದ ಕೈ ..
(ನನ್ನ ಮಾತಿನ ಮೇಲೆ ಶ್ರೀಧರನಿಗೆ ನಂಬಿಕೆ ಬಂತು )
ಎಲ್ಲ ಕಡೆ ಹುಡುಕಿದ ಮೇಲೂ ಸಿಗದೇ ಇರುವುದನ್ನು ನೋಡಿದರೆ
ನೀವು ಹೇಳಿದ್ದು ದಿಟ ಇರಬಹುದು ಅನ್ನಿಸುತ್ತೆ ಅಣ್ಣ!
ಹೂಂ ನೀನು ಇದಕೆಲ್ಲ ತಲೆ ಕೆಡಿಸಿಕೊಳ್ಳಬೇಡ 
ನಿಮ್ಮ ಪ್ರೀತಿ ನಿಜ ಕಣೋ ಅದಕ್ಕೆ ಅವಳು ಎಲ್ಲೇ ಇದ್ದರೂ 
ನಿನ್ನ ಹುಡುಕಿ ಬರ್ತಾಳೆ ನೋಡು ....
ಅಣ್ಣ ನೀವು ಹೇಳಿದ್ದು ನಿಜ ಆಗುತ್ತಾ ?
ಸುಧಾ ನನ್ನ ಹುಡುಕಿ ಬರ್ತಾಳ ?
ಖಂಡಿತ ಬರ್ತಾಳೆ ಕಣೋ 
ಸರಿ ಅಣ್ಣ ಅಂತ ಹೇಳಿ ಹೋದ ....
ಹೀಗೆ ಹೀಗೆ ಕೆಲವೇ ದಿನಗಳು ಕಳೆದ ಮೇಲೆ  !
ನಾನು ಗೋಪಾಲ ಶ್ರೀಧರ್ ಮನೆಗೆ ಹೋಗಿ!
ಶ್ರೀಧರ ಹುಚ್ಚನ ರೀತಿ ಕುಳಿತ್ತಿದ್ದ ಅವನ ಬಟ್ಟೆಯೆಲ್ಲ ಗಲೀಚು ...
ಊಟ ಕೂಡ ಸರಿಗೆ ಮಾಡದೆ  ಸಣ್ಣಗೆ ಆಗಿದ್ದ
ಯಾಕೋ ಶ್ರೀಧರ ಹಿಂಗೆ ಕುಳಿತ್ತಿದ್ದಿಯ ?
ಏನ್ಲ ಆಗಿದೆ ನಿಂಗೆ ಹ ?
ಏನ್ ಮಾಡ್ಲಿ ಅಣ್ಣ ನನ್ನ ಜೀವನೆ ನನ್ನ ಬುಟ್ಟು ಹೋದ ಮೇಲೆ
ನಾನ್ ಇನ್ನೂ ಯಾಕೆ ಈ ಭೂಮಿ ಮೇಲೆ ಇರಬೇಕು ಹೇಳಿ ..
ಹೇಯ್ ಅಂಗೆಲ್ಲ ಮಾತಾಡಬೇಡ ಕನ್ಲ...
ನಾನ್ ಇದ್ದೀನಿ ನಿನ್ನ ಅಂಗೆಲ್ಲ ಬುಡಕಿಲ್ಲ ..
ನಿನಗೆ ಬೇರೆ ಒಳ್ಳೆಯ ಹುಡುಗಿನ ನೋಡಿ ನಾನು ಲಗ್ನ ಮಾಡಿಸ್ತೀನಿ ..
ಬ್ಯಾಡ ಅಣ್ಣ ಬ್ಯಾಡ ಸುಧಾ ನನ್ನ ಮರೆತು ಇರಬಹುದು 
ಆದರೆ ಅವಳೇ ನನ್ನ ಹೆಂಡತಿ ನಾನು ಸಾಯೋತನಕ ಅವಳ ನೆನಪಲ್ಲೇ ಇರ್ತೀನಿ
ನಾನು ಯಾರ ಕೂಡ ಲಗ್ನ ಆಗಕಿಲ್ಲ...
ಹೂಂ ...........ಸರಿ ಬುಡ್ಲ...
(ಗೋಪಾಲ ಏನೂ ಮಾತಾಡದೆ ನಿಂತಿದ್ದ!)
ನೀನು ಇಲ್ಲೇ  ಹೀಗೆ ಒಬ್ಬನೇ ಕೂತಿರಬೇಡ ,
ಬಾ ಸ್ವಲ್ಪ ಕೆಲಸ ಇದೆ ಗೋಪಾಲ ಇರೋ ಮನೇಲಿ
ನಾನು ನೀನು ಗೋಪಾಲ ಅಷ್ಟೇ ಸಾಕು ಮಾಡಿ ಮುಗಿಸೋಣ ...
ಅಂತ ಅವನ್ನ ಅಲ್ಲಿಂದ ಕರ್ಕೊಂಡು ಬಂದೆ ...
ಗೋಪಾಲನ 
ಉಳಿದು ಕೊಂಡಿದ್ದ ತೋಟದ  ಮನೆ ಅದು ..
ಒಂದೇ ಮೊಲ್ಡ್ ಹಾಕಿತ್ತು ಮೆಣಸಿನಕಾಯಿಗಳನ್ನ ಒಣಗಿಸಕ್ಕೆ ..
ಗೋಪಾಲ ಮಹಡಿಯ ಮೇಲೆ ಹೋದ,
ಅಲ್ಲಿ clean ಮಾಡುತ್ತಿದ್ದ ...
ನಾನು ಒಳಗೆ ಮಂಚ, ಕುರ್ಚಿ ,ಎಲ್ಲವನ್ನು ಸರಿ ಮಾಡುತ್ತಿದ್ದ ...
ಶ್ರೀಧರ ಮನೆಯ ಸುತ್ತಲು ಕಸ ಕಡ್ಡಿಗಳನ್ನ ತೆಗೆದು ಗುಡಿಸುತ್ತಿದ್ದ..
ಆಗ....ಶ್ರೀಧರ ಒಳಗೆ ಓಡಿ ಬಂದವನೇ ..
ಅಣ್ಣ ಇಲ್ಲಿ ನೋಡಿ ಇಲ್ಲಿ ನೋಡಿ ಅಂತ 
ಹೇಳಿ ಹತ್ತಿರ ಬಂದು .....
ರಾಮಣ್ಣ  ನಾನು ಅವಳನ್ನ ಕೊನೆಯ ಬಾರಿಗೆ ನೋಡಿದಾಗ ಇದೆ ಗೆಜ್ಜೆ ಹಾಕಿದ್ದಳು!
ಅವಳು ಈ ತೋಟದ ತನಕ ಬಂದಿದ್ದಾಳೆ ಅಂದರೆ ಏನೋ ಆಗಿದೆ ಅಣ್ಣ ...
ನನ್ನ ಸುಧಾಗೆ ಏನೋ ಆಗಿದೆ ಅಣ್ಣ ನಾನು ಪೋಲಿಸ್ ನಲ್ಲಿ complaint ಕೊಡ್ತೀನಿ ...
ಅವರು ಎಲ್ಲಿದ್ದಾರೆ ಅಂತ ಸುಧಾ ಹಾಗೂ ಅವರ ತಂದೇನೆ ಪತ್ತೆ ಮಾಡ್ತಾರೆ ಅಲ್ವ ?
ಎಲ್ಲೇ ಇದ್ದರೂ ಅವಳು ಚೆನ್ನಾಗಿದ್ದರೆ ಸಾಕು ...
ನನ್ನ ಮನಸು ಯಾಕೋ ಸಾನೆ ಹೊಡ್ಕೊಳ್ತಾ ಇದೆ ಅವಳಿಗೆ ಏನೋ ಆಗಿದೆ ಅಂತ ...
ನಾನು ಬರ್ತೀನಿ ಅಣ್ಣ 
ಅವನ ಮಾತು ಕೇಳಿ ನನಗೆ ಆತಂಕ ಶುರುವಾಯಿತು ...
ಹೇಯ್ ಶ್ರೀಧರ ನಾನು ಬರ್ತೀನಿ ಬಾರ್ಲ ಅಂದೇ..
ಅವನು ಹೊಸ್ತಿಲವರೆಗೂ ಹೋಗಿದ್ದ, ಮತ್ತೆ ಒಳಗೆ ಬಂದು!
ಹೌದಣ್ಣ  ನೀವು ಬಂದರೆ ಬೇಗ ಹುಡುಕ್ತಾರೆ ...
ಅಂತ ನನ್ನ ಹತ್ತಿರ ಬಂದ ಕೂಡಲೇ ನಾನು
ಅಲ್ಲಿದ ಹಗ್ಗ ಕತ್ತರಿಸುವ ಒಂದು ಸಣ್ಣ ಚಾಕುವಿನಿಂದ 
ಅವನಿಗೆ ಇರಿದು ಬಿಟ್ಟೆ ..ಅವನ ಕಿರಿಚಾಟ 
ಕೇಳಿ ಮೇಲಿನಿಂದ ಗೋಪಾಲ ಓಡಿ ಬಂದ ..
ಶ್ರೀಧರ ನಮ್ಮಿಂದ ತಪ್ಪಿಸಿಕೊಳ್ಳಕ್ಕೆ ಪ್ರಯತ್ನ ಪಡುವಾಗಲೇ 
ಗೋಪಾಲ ಅಲ್ಲಿಂದ ಒಂದು ದೊಣ್ಣೆಯನ್ನು ತೆಗೆದು 
ಶ್ರೀಧರ ಎಡಗಾಲಿಗೆ ಮೂಳೆ ಮುರಿದು ಹೋಗೋವಷ್ಟು  ರಭಸವಾಗಿ ಹೊಡೆದ!
ಅವನು ಅಲ್ಲೇ ಕುಸಿದು ಬಿದ್ದ ಕೂಡಲೇ 
ಗೋಪಾಲ ಅವನ ಕಾಲುಗಳನ್ನು ಹಿಡಿದು ಕೊಂಡ 
ನಾನು ಶ್ರೀಧರನ ಮೇಲೆ ಕುಳಿತು ಅವನ ಕತ್ತು ಇಸಿಕಿ ಕೊಂದೆ!

...ಆಗ ಸಮಯ ರಾತ್ರಿ7
ನಾವು ಆ ದೇಹವನ್ನು ಸಾಗಿಸುವಾಗಲೇ ಮಳೆಹನಿಗಳು ಬೀಳಲಾರಂಭಿಸಿತು 
 ದೇಹವನ್ನೂ ಸಹ ನಮ್ಮ ಹಿತ್ತಲಿನಲ್ಲೇ ಹೂತಿದ್ದು!
ಎಲ್ಲ ಆದ ಮೇಲೆ ಗೋಪಾಲ ಶ್ರೀಧರನ ಹೊತ್ತಿದ್ದ ಜಾಗದ ಮೇಲೆ ಕಾಲಿಟ್ಟು 
ಅಣ್ಣ ಇನ್ನೂ ನಮಗೆ ಯಾವುದೇ ಭಯ ಇಲ್ಲ ನಾನು,ನೀನು ಹೇಳಿದರೆ 
ಮಾತ್ರ ಈ ಸತ್ಯ ಹೊರ ಜಗತ್ತಿಗೆ ಗೊತ್ತಾಗೋದು ..
ಇಲ್ಲಿ ಮಣ್ಣಾಗಿರೋ ಸತ್ಯ ಹೊರ ಬರಕ್ಕೆ ಸಾಧ್ಯನೇ ಇಲ್ಲ!
ಎನ್ನುವಾಗಲೇ ಬಲವಾದ ಶಬ್ದದೊಂದಿಗೆ ಆಕಾಶದಲ್ಲಿ ಗುಡುಗು-ಮಿಂಚಿನ ಅರ್ಭಟ !
ಆ ಮಿಂಚಿನ ಬೆಳಕಿನಲ್ಲಿ ಗೋಪಾಲನ ನಗು ಮುಖ ನನಗೆ ಬಿಟ್ಟು ಬಿಟ್ಟು ಕಾಣುತ್ತಿತ್ತು 
ನನಗೆ ಮಾತ್ರ ಒಳಗೆ ಇನ್ನೂ ಭಯ ಹಾಗೆ ಇತ್ತು!
ಮಳೆ ಜೋರಾದ ಕೂಡಲೇ ನಾವು ಒಳಗೆ ಬಂದೋ 
ಆ ಸಮಯದಲ್ಲಿ ಪವರ್ ಕಟ್ ಆಗಿ ಮನೆಯಲ್ಲಿ ಕತ್ತಲು ಆವರಿಸಿತ್ತು !
ಸಣ್ಣದೊಂದು ದೀಪ ಗಾಳಿಯಲ್ಲಿ ನರ್ತಿಸುತ್ತಿತ್ತು ನಮ್ಮನ್ನು ನೋಡಿ ಅನಗಿಸುವ ಹಾಗೆ!...
ನಾನು ಮನೆಯ ಹಾಲ್ ನಲ್ಲಿ ಇರುವ ಉಯ್ಯಾಲೆ ಮೇಲೆ ಮೌನವಾಗಿ ಕುಳಿತು ಆಡುತ್ತಿದ್ದೆ!
ಗೋಪಾಲ ಹೊರಗೆ ಮಳೆಯ ನೋಡುತ್ತಾ ಕಿಟಕಿಯ ಪಕ್ಕ ನಿಂತಿದ್ದ!
ಮನೆಯೊಳಗೇ ನೀರವ ಮೌನ!
ಉಯ್ಯಾಲೆಯ ಸದ್ದು ಮಧ್ಯೆ ಮಧ್ಯೆ ಆ ಮೌನವನ್ನು ಕೊಲುತ್ತಿತ್ತು!
ಮಳೆಯ ಜೊತೆ ಬೀಸುತ್ತಿದ್ದ ಗಾಳಿಗೆ ಕಿಟಕಿಗಳು 
ಹೊಡೆದು ಕೊಳ್ಳುತ್ತಿದದ್ದು ...
ಸತ್ತವರ ಮುಂದೆ ಬಾಯಿ ಬಡಿದುಕೊಳ್ಳುವ ಜನರ ನೆನಪಿಸುತ್ತಿತ್ತು!
ಏನೋ ಗೋಪಾಲ ಅನ್ನ ಹಾಕಿದ ಇದೇ ಕೈಯಲ್ಲೇ ಅವನ್ನ ಕೊಂದು ಬಿಟ್ನಲ್ಲೋ ..
ಅಯ್ಯೋ ನಾನು ಮಾಡಿದ್ದು ದೊಡ್ಡ ತಪ್ಪು ಅಲ್ವನೋ ...
ಅಣ್ಣ ಏನು ಮಾಡಕ್ಕೆ ಆಗಲ್ಲ ನಾವು
ಬದುಕ ಬೇಕು ಅಂದ್ರೆ ಎಷ್ಟು ಜನರನ್ನ ಕೊಳ್ಳೋದು ತಪ್ಪಲ್ಲ!
ಈ ದಿಕ್ಕು ದೆಸೆ ಇಲ್ಲದ ಅನಾಥರಿಗಾಗಿ ನಮ್ಮ ಮಾನ ಮರ್ಯಾದೆನ ಬುಡಕ್ಕೆ ಆಯ್ತದ!
ಆಗಿದ್ದು ಆಯ್ತು ಇದೆಲ್ಲ ಯೋಚನೆ ಮಾಡಬೇಡ ..
ನೀನು ಮಾಡಿದ್ದೆ ಒಳ್ಳೇದೆ, ಹೇಳಿಲ್ವ ಅಣ್ಣ..
ಮೂರು ಮುಕ್ತಾಯ ! ಅಂತ 
ಇಲ್ಲಿಗೆ ಎಲ್ಲವೂ ಮುಗಿತು!
ಆದರೆ 
ಮೂರು ಮುಕ್ತಾಯವಲ್ಲ,ಆರಂಭ!
ಅಂತ ಆಮೇಲೆ ಗೊತ್ತಾಗಿದ್ದು..
ಅದು ಮೂರನೆಯ ದಿನ! ಮತ ಎಣಿಕೆಯ ದಿನ!
ಗೋಪಾಲ ಎಣಿಕೆಯ ಕೇಂದ್ರದಲ್ಲಿದ್ದು
ಆಗಾಗ ಕರೆ ಮಾಡಿ ಮತ ಎಣಿಕೆಯ ವಿವರವನ್ನು ಹೇಳುತ್ತಿದ್ದ!
ಮಧ್ಯಹ್ನ 12:00pm
ಅಣ್ಣ.....
ನಮಗಿಂತ ನಮ್ಮ ವಿರುದ್ಧವಾಗಿ  ನಿಂತಿರೋ 
ಭದ್ರಯ್ಯ ಇಪ್ಪತ್ತು ಮತಗಳ ಮುಂದೆ ಇದ್ದಾನೆ!
12:20pm
ಎರಡನೆಯ ಸುತ್ತಿನ ಮತ ಎಣಿಕೆ ವಿವರ!
ಭದ್ರಯ್ಯ ಮೂವತ್ತೈದು ಮತಗಳ ಮುಂದೆ ಇದ್ದಾನೆ!
12:30pm
ಅಣ್ಣ ಮೂರನೆಯ ಸುತ್ತಿನ ಮತದ ಎಣಿಕೆ ಆಗಿದೆ
ನಾವು ಪಟ್ಟ ಅಷ್ಟೂ ಕಷ್ಟ.........
ಯಾಕೋ ಗೋಪಾಲ ಏನ್ ಆಯ್ತೋ ಯಾಕ್ಲಾ ಅಳ್ತಾ ಇದ್ದಿ............

ಮುಂದಿನ  ಪುಟಗಳಿಗಾಗಿ (CLICK HERE)
TIP:easy2comment
Anonymous ಅಂತ select ಮಾಡಿ ನಿಮ್ಮ ಹೆಸರು ಕೊಟ್ಟು  ಕಾಮೆಂಟ್  ಮಾಡಿ!
217 comments: